ರಾಯಲ್ ಚಾಲೆಂಜರ್ಸ್ ಬೆಂಗಳೂರು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ರಾಯಲ್ ಚಾಲೆಂಜರ್ಸ್ ಬೆಂಗಳೂರು
RoyalChallengersBangalore.png
ಕೋಚ್: Flag of South Africa.svg ರೇ ಜೆನ್ನಿಂಗ್ಸ್[೧]
ನಾಯಕ: Flag of New Zealand.svg ಡೇನಿಯಲ್ ವೆಟ್ಟೊರಿ
ಬಣ್ಣಗಳು: ಕೆಂಪು ಮತ್ತು ಚಿನ್ನದ ಹಳದಿ[೨]
ಸ್ಥಾಪನೆ: 2008
ತವರಿನ ಕ್ರೀಡಾಂಗಣ: ಚಿನ್ನಸ್ವಾಮಿ ಕ್ರೀಡಾಂಗಣ
ಸ್ಥಳಾವಕಾಶ: 40,000
ಮಾಲೀಕ: ವಿಜಯ್ ಮಲ್ಯರವರ ಯುಬಿ ಗ್ರೂಪ್
ಅಧಿಕೃತ ತಾಣ: ರಾಯಲ್ ಚಾಲೆಂಜರ್ಸ್ ಬೆಂಗಳೂರು

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಅಥವಾ ಆರ್‍‍ಸಿಬಿ) ಬೆಂಗಳೂರಿನಲ್ಲಿ ನೆಲೆಯಿರುವ ಭಾರತೀಯ ಪ್ರೀಮಿಯರ್ ಲೀಗ್‍ನ ತಂಡ. ಈ ತಂಡದ ಮಾಲೀಕ ಮದ್ಯದ ದೊರೆ ವಿಜಯ್ ಮಲ್ಯರವರ ಯು.ಬಿ ಗ್ರೂಪ್.[೩] ಬ್ರಿಜೇಶ್ ಪಟೇಲ್ ಈ ತಂಡದ ಸಿಈಒ ಮತ್ತು ಡೇನಿಯಲ್ ವೆಟ್ಟೊರಿ ನಾಯಕರಾಗಿದ್ದಾರೆ. ಕ್ರಿಸ್ ಗೇಲ್ ತಂಡದ ಪ್ರಮುಖ ಆಟಗಾರರಾಗಿದ್ದು, ದಕ್ಷಿಣ ಆಫ್ರಿಕದ ಮಾಜಿ ತರಬೇತುದಾರ ರೇ ಜೆನ್ನಿಂಗ್ಸ್ ತರಬೇತುದಾರರಾಗಿದ್ದಾರೆ[೪].

ಪರಿವಿಡಿ

[ಬದಲಾಯಿಸಿ] ಆಡಳಿತ

[ಬದಲಾಯಿಸಿ] ಪ್ರಸ್ತಕ ತಂಡ

[ಬದಲಾಯಿಸಿ] ಬ್ಯಾಟ್ಸ್‌ಮನ್

[ಬದಲಾಯಿಸಿ] ವಿಕೆಟ್ ಕೀಪರ್‌ಗಳು

[ಬದಲಾಯಿಸಿ] ಆಲ್ ರೌಂಡರ್‌ಗಳು

[ಬದಲಾಯಿಸಿ] ಬೌಲರ್ಗಳು

[ಬದಲಾಯಿಸಿ] ತರಬೇತುದಾರರು

[ಬದಲಾಯಿಸಿ] ೨೦೦೮ನೇ ಐಪಿಎಲ್ ಆವೃತ್ತಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ೨೦೦೮ನೇ ಐಪಿಎಲ್ ಆವೃತ್ತಿಯಲ್ಲಿ ೧೪ ಪಂದ್ಯಗಳಲ್ಲಿ ಕೇವಲ ೪ ಪಂದ್ಯಗಳನ್ನು ಗೆದ್ದು ೭ನೇ ಸ್ಥಾನವನ್ನು ಪಡೆದುಕೊಂಡಿತು. ರಾಹುಲ್ ದ್ರಾವಿಡ್ ತಂಡದ ನಾಯಕರಾಗಿದ್ದರು.

[ಬದಲಾಯಿಸಿ] ೨೦೦೯ನೇ ಐಪಿಎಲ್ ಆವೃತ್ತಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ೨೦೦೯ನೇ ಐಪಿಎಲ್ ಆವೃತ್ತಿಯಲ್ಲಿ ನಾಯಕನನ್ನು ಬದಲಾಯಿಸಿತು. ಕೆವಿನ್ ಪೀಟರ್ಸನ್ ತಂಡದ ನಾಯಕತ್ವವನ್ನು ವಹಿಸಿಕೊಂಡರು. ಆದರೆ ಪೀಟರ್ಸನ್ ಕೇವಲ ೬ ಪಂದ್ಯಗಳನ್ನು ಆಡಿ ಇಂಗ್ಲೆಂಡ್‍ಗೆ ಮರಳಿದರು. ಆಗ ಅನಿಲ್ ಕುಂಬ್ಳೆ ತಂಡದ ನಾಯಕರಾದರು. ತಂಡವು ಉತ್ತಮ ಪ್ರದರ್ಶನ ತೋರಿ ಸೆಮಿಫೈನಲ್ ಪ್ರವೇಶಿಸಿತು. ಸೆಮಿಫೈನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು. ಡೆಕ್ಕನ್ ಚಾರ್ಜರ್ಸ್ ವಿರುದ್ಧ ಫೈನಲ್‍ನಲ್ಲಿ ೬ ರನ್‍ಗಳಿಂದ ಸೋಲನುಭವಿಸಬೇಕಾಯಿತು.೩

[ಬದಲಾಯಿಸಿ] ೨೦೧೦ನೇ ಐಪಿಎಲ್ ಆವೃತ್ತಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ೨೦೧೦ನೇ ಐಪಿಎಲ್ ಆವೃತ್ತಿಯ ಲೀಗ್ ಹಂತದಲ್ಲಿ ೪ನೇ ಸ್ಥಾನವನ್ನು ಪಡೆದು ಸೆಮಿಫೈನಲ್ ಪ್ರವೇಶಿಸಿತು. ಸೆಮಿಫೈನಲ್‍ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ೩೫ ರನ್‍ಗಳಿಂದ ಸೋತಿತು. ಚಾಂಪಿಯನ್ಸ್ ಲೀಗ್ ಪ್ರವೇಶಕ್ಕಾಗಿ ನಡೆದ ಪಂದ್ಯದಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡವನ್ನು ೯ ವಿಕೆಟ್‍ಗಳಿಂದ ಸೋಲಿಸಿ ಚಾಂಪಿಯನ್ಸ್ ಲೀಗ್ ಪ್ರವೇಶಿಸಿತು.

[ಬದಲಾಯಿಸಿ] ೨೦೧೧ನೇ ಐಪಿಎಲ್ ಆವೃತ್ತಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ೨೦೧೧ನೇ ಐಪಿಎಲ್ ಆವೃತ್ತಿಯಲ್ಲಿ ಉತ್ತಮ ಆರಂಭ ಪಡೆಯದಿದ್ದರೂ ನಂತರ ಉತ್ತಮ ಪ್ರದರ್ಶನ ತೋರಿ ಲೀಗ್ ಹಂತದಲ್ಲಿ ಮೊದಲ ಸ್ಥಾನ ಪಡೆದುಕೊಂಡಿತು. ಕ್ರಿಸ್ ಗೇಲ್ ತಂಡಕ್ಕೆ ಪ್ರವೇಶಿಸಿದ ನಂತರ ತಂಡದ ಅದೃಷ್ಟ ಬದಲಾಯಿತು. ಸೆಮಿಫೈನಲ್‍ನಲ್ಲಿ ಮೊದಲ ಕ್ವಾಲಿಫೈರ್‌ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ವಿರುದ್ಧ ಸೋತರೂ ನಂತರ ಮುಂಬೈ ಇಂಡಿಯನ್ಸ್ ವಿರುದ್ಧ ೪೩ ರನ್‍ಗಳಿಂದ ಗೆದ್ದು ಫೈನಲ್ ಪ್ರವೇಶಿಸಿತು. ಫೈನಲ್‍ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ವಿರುದ್ಧ ೫೮ ರನ್‍ಗಳಿಂದ ಸೋತು ೨ನೇ ಬಾರಿಗೆ ೨ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

[ಬದಲಾಯಿಸಿ] ಐಪಿಎಲ್ಲ್‍ನ ಫಲಿತಾಂಶ

ಪಂದ್ಯಗಳು ಗೆಲುವು ಸೋಲು ಫಲಿತಾಂಶ ರಹಿತ  % ಗೆಲುವು ಸ್ಥಾನ
೨೦೦೮ ೧೪ ೧೦ ೨೮.೫೭%
೨೦೦೯ ೧೬ ೫೬.೨೫%
೨೦೧೦ ೧೬ ೫೦.೦೦%
2011 ೧೬ ೧೦ ೬೪.೨೮%
Total ೬೨ ೩೧ ೩೦ ೫೦.೦೦%

[ಬದಲಾಯಿಸಿ] ಉಲ್ಲೇಖಗಳು

[ಬದಲಾಯಿಸಿ] ಬಾಹ್ಯ ಸಂಪರ್ಕಗಳು



ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು