ಕುತುಬ್ ಮಿನಾರ್
ವಿಕಿಪೀಡಿಯ ಇಂದ
| Qutab Minar and its Monuments, Delhi* | |
|---|---|
| UNESCO ವಿಶ್ವ ಪರಂಪರೆಯ ತಾಣ | |
|
|
|
| ರಾಷ್ಟ್ರ | |
| ತಾಣದ ವರ್ಗ | ಸಾಂಸ್ಕೃತಿಕ |
| ಆಯ್ಕೆಯ ಮಾನದಂಡಗಳು | iv |
| ಆಕರ | 233 |
| ವಲಯ** | ಏಷ್ಯಾ-ಪೆಸಿಫಿಕ್ |
| ವಿಶ್ವ ಪರಂಪರೆಯ ತಾಣವಾಗಿ ಘೋಷಣೆ | |
| ಘೋಷಿತ ವರ್ಷ | 1993 (17ನೆಯ ಅಧಿವೇಶನ) |
| * ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ. ** UNESCO ರಚಿಸಿರುವ ವಲಯಗಳು. |
|
ಕುತುಬ್ ಮಿನಾರ್ ಸಂಕೀರ್ಣವು ಭಾರತದ ದೆಹಲಿಯಲ್ಲಿರುವ ಸ್ಮಾರಕ ಮತ್ತು ಕಟ್ಟಡಗಳ ಸಮೂಹವಾಗಿದೆ. ಈ ಸಂಕೀಋಣದ ಅತಿ ಪ್ರಸಿದ್ಧ ಅಂಗವೆಂದರೆ ಕುತುಬ್ ಮಿನಾರ್ ಗೋಪುರ. ಇವುಗಳ ನಿರ್ಮಾಣ ಕಾರ್ಯವನ್ನು ಗುಲಾಮ ಸಂತತಿಯ ಮೊದಲ ಸುಲ್ತಾನ ಕುತ್ಬುದ್ದೀನ್ ಐಬಕ್ ಮೊದಲಿಟ್ಟನು. ನಂತರ ಅಲ್ತ್‌ಮಷ್ ಮತ್ತು ಅಲ್ಲಾ ಉದ್ದೀನ್ ಖಿಲ್ಜಿ ಇತ್ಯಾದಿ ಸುಲ್ತಾನರು ಬೆಳೆಸಿಕೊಂಡು ಹೋದರು. ಈ ಸಂಕೀರ್ಣದ ಇತರ ಮುಖ್ಯ ಸ್ಮಾರಕಗಳೆಂದರೆ ಕಬ್ಬಿಣದ ಕಂಬ, ಅಲಾಯ್ ದ್ವಾರ ಮತ್ತು ಖುವ್ವತ್-ಅಲ್-ಇಸ್ಲಾಮ್ ಮಸೀದಿ. ೧೯೯೩ರಲ್ಲಿ ಯುನೆಸ್ಕೋ ಕುತುಬ್ ಮಿನಾರ್ ಸಂಕೀರ್ಣವನ್ನು ವಿಶ್ವ ಪರಂಪರೆಯ ತಾಣ ಎಂದು ಮಾನ್ಯತೆ ನೀಡಿತು.