ವಿಷಯಕ್ಕೆ ಹೋಗು

ಕಾವೇರಿ ನದಿ ನೀರಿನ ವಿವಾದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿವಾದದ ಇತಿಹಾಸ

[ಬದಲಾಯಿಸಿ]
  • ಬ್ರಿಟಿಷ್ ರಾಜ್ ಅಡಿಯಲ್ಲಿದ್ದ ಮದ್ರಾಸ್ ಪ್ರಾಂತ್ಯ ಮತ್ತು ಮೈಸೂರು ರಾಜ್ಯದ ನಡುವೆ ನೀರಿನ ಹಂಚಿಕೆ ಬಗೆಗೆ ಈ ಎರಡು ರಾಜ್ಯಗಳ ನಡುವೆ ನದಿ ನೀರು ಹಂಚುವ ಕಾವೇರಿ ವಿವಾದ 1892 ರಲ್ಲಿ ಆರಂಭವಾಯಿತು. ವರ್ಷ 1910 ರಲ್ಲಿ, ಎರಡೂ ಪ್ರಭುತ್ವಗಳು ಕಾವೇರಿ ನದಿಯ ಅಣೆಕಟ್ಟಿನ ನಿರ್ಮಾಣ ಯೋಜನೆಯನ್ನು ಆರಂಭಿಸಿದರು. ಪ್ರತಿ ರಾಜ್ಯಗಳು ನೀರಿನ ಎಷ್ಟು ಪಾಲು ಪಡೆಯುತ್ತಾರೆ ಎಂದು ನಿರ್ಧರಿಸಲು ಬ್ರಿಟಿಷ್ ಸವರು ಅಧ್ಯಕ್ಷತೆ ವಹಿಸಿದ್ದರು. 1924 ರಲ್ಲಿ, ಕೃಷ್ಣರಾಜಸಾಗರ (ಕನ್ನಂಬಾಡಿ) ಅಣೆಕಟ್ಟಿ ಕಟ್ಟಲು ಒಂದು ಒಪ್ಪಂದಕ್ಕೆ ಬರಲು ನಿಯಂತ್ರಣ ನಿಯಮಗಳನ್ನು ಸೂಚಿಸಿದರು. ಇದಕ್ಕೆ ಎರಡು ರಾಜ್ಯಗಳ ನಡುವೆ ಒಪ್ಪಿಗೆಯಾಗಿ ಸಹಿಮಾಡಿದರು.
  • ಟೈಮ್ಸ್ ಆಫ್ ಇಂಡಿಯಾ ಪ್ರಕಟವಾದ ವರದಿಯಲ್ಲಿ, ಹಿರಿಯ ವಕೀಲ ಎ.ಕೆ. ಗಂಗೂಲಿ "ಒಪ್ಪಂದದ 11 ನೇ ಷರತ್ತು ಪ್ರಕಾರ ಪರಸ್ಪರ ಅಂಗೀಕಾರವಾದಂತೆ ಐದು ದಶಕಗಳ ನಂತರ ಪರಸ್ಪರ ಒಪ್ಪಿಕೊಂಡು ಪುನಃ ಪರಿಶೀಲನೆ ಮಾಡಬಹುದು,' ಎಂದು ತಿಳಿಸಿದರು. ಈ ಪರಿಷ್ಕರಣೆ ಷರತ್ತು ಕೃಷ್ಣರಾಜಸಾಗರ (ಕೆಆರ್ಎಸ್) ಹೊರತು ಪಡಿಸಿ ಬೇರೆ ಯೋಜನೆಗಳಿಗೆ ಮಾತ್ರ ಅನ್ವಯವಾಗುತ್ತಿತ್ತು.
  • ಒಪ್ಪಂದದ ಪ್ರಮುಖ ಅಂಶ (ಕೋರ್) ಕೆಆರ್ಎಸ್ ನಿರ್ಮಾಣ ಮತ್ತು ಅದರ ಕಾರ್ಯಾಚರಣೆ ಮತ್ತು ಆಡಳಿತ ಪರಿಸ್ಥಿತಿಗಳು ಯಾವುದೇ ಷರುತ್ತಗಳ ವ್ಯಾಪ್ತಿಗೆ ಒಳಪಡುವುದಿಲ್ಲ.
  • ಆದರಂತೆ 1924 ಒಪ್ಪಂದದ ಪ್ರಕಾರ ಮದ್ರಾಸ್ ಮತ್ತು ಮೈಸೂರು ಎರಡೂ ರಾಜ್ಯಗಳು ಕಾವೇರಿ ನದಿಯ ಹೆಚ್ಚುವರಿ ನೀರಿನ್ನು ಬಳಸಲು ಹಕ್ಕುಗಳನ್ನು ಪಡೆದವು. ಮದ್ರಾಸ್ ಸರ್ಕಾರ ಕೃಷ್ಣರಾಜಸಾಗರ ಅಣೆಕಟ್ಟಿನ ನಿರ್ಮಾಣಕ್ಕೆ ವಿರೋಧ ಮಾಡಿದ್ದರಿಂದ, ಅದಕ್ಕೆ ಒಪ್ಪಂದದಲ್ಲಿ ಮೆಟ್ಟೂರ್ ಅಣೆಕಟ್ಟು ನಿರ್ಮಿಸುವ ಸ್ವಾತಂತ್ರ್ಯವನ್ನು ನೀಡಿತ್ತು. ಆದಾಗ್ಯೂ ಒಪ್ಪಂದವು, ನದಿ ನೀರು ಬಳಸಿಕೊಂಡು ಮದ್ರಾಸ್ ಮತ್ತು ಮೈಸೂರು ರಾಜ್ಯಗಳು ಕಾವೇರಿ ನೀರು ಬಳಸುವ ನೀರಾವರಿ ಪ್ರದೇಶದ ವ್ಯಾಪ್ತಿಯನ್ನು ಹೆಚ್ಚಿಸದಂತೆ ನಿರ್ಬಂಧಗಳನ್ನು ಹಾಕಿತ್ತು.

ಭೌಗೋಳಿಕ

[ಬದಲಾಯಿಸಿ]
  • ಕಾವೇರಿ ನದಿಯು ಕರ್ನಾಟಕ ಮತ್ತು ತಮಿಳುನಾಡಿನಾದ್ಯಂತ 765 ಕಿಮೀನಷ್ಟು ಉದ್ದದ ಹರಿವು ಹೊಂದಿದೆ. ಇದು ಕರ್ನಾಟಕದಲ್ಲಿ ಕೊಡಗು ಜಿಲ್ಲೆಯ ತಲಕಾವೇರಿ ಯಲ್ಲಿ ಹುಟ್ಟಿ. ಇದು ಪ್ರಮುಖವಾಗಿ ಕರ್ನಾಟಕ ಮತ್ತು ತಮಿಳುನಾಡು ಮೂಲಕ ಹರಿಯುತ್ತದೆ, ಅದರ ಜಲಾನಯನ ಬಹಳಷ್ಟು ಪ್ರದೇಶ ಕೇರಳ ಮತ್ತು ಪುದುಚೆರಿ ಕಾರೈಕಾಲ್ ಪ್ರದೇಶವನ್ನು ಆವರಿಸಿಕೊಂಡಿದೆ.
  • 1892 ಮತ್ತು 1924 ರ ಒಪ್ಪಂದಗಳ ಪ್ರಕಾರ ಕೆಳಗಿನಂತೆ ನದಿ ನೀರು ವಿತರಿಸಲಾಗುತ್ತದೆ:(ಒಟ್ಟು¸ಸುಮಾರು 868 ಟಿ.ಎಮ್.ಸಿಅಡಿ ಲಭ್ಯವೆಂದು ತೀರ್ಮಾನಿಸಿದ್ದರು)
  • ತಮಿಳುನಾಡು ಮತ್ತು ಪುದುಚೇರಿಗಳಿಗೆ 75 ಶೇ.(ಪ್ರತಿಶತ) ರಷ್ಟು:651 ಟಿ.ಎಮ್.ಸಿ ಅಡಿ
  • ಕರ್ನಾಟಕಕ್ಕೆ 23 ಪ್ರತಿಶತ:200 ಟಿ.ಎಮ್.ಸಿ ಅಡಿ
  • ಉಳಿದ ಭಾಗ ಕೇರಳಕ್ಕೆ (2%):17.36 ಟಿ.ಎಮ್.ಸಿ ಅಡಿ

ಭಾಷಾವಾರು ಪ್ರಾಂತ ರಚನೆ ನಂತರ

[ಬದಲಾಯಿಸಿ]
  • ಭಾರತದ ಸ್ವಾತಂತ್ರ್ಯದ ನಂತರ ರಾಜ್ಯಗಳ ಪುನಃ ಸಂಘಟನೆಯಾದಾಗ ನಿಜವಾದ ಸಮಸ್ಯೆ ಪ್ರಾರಂಭವಾಯಿತು. ಇದಕ್ಕೂ ಮುನ್ನ, ಹೆಚ್ಚಿನ ವಿಷಯಗಳನ್ನು ಪಂಚಾಯ್ತಿ ಮತ್ತು ಒಪ್ಪಂದಗಳು ಮೂಲಕ ಇತ್ಯರ್ಥಗೊಳಿಸಲಾಯಿತು. 20 ನೇ ಶತಮಾನದಲ್ಲಿ, ತಮಿಳುನಾಡು ಸರ್ಕಾರ ಕರ್ನಾಟಕದಲ್ಲಿ ನದಿಯ ಅಣೆಕಟ್ಟಿನ ನಿರ್ಮಾಣಗಳನ್ನು ವಿರೋಧಿಸಿತು, ಪ್ರತಿಯಾಗಿ ಕರ್ನಾಟಕ ರಾಜ್ಯ ತಮಿಳುನಾಡಿಗೆ ನೀರು ಸರಬರಾಜು ನಿಲ್ಲಿಸಲು (ಕಡಿಮೆ ಮಾಡಲು) ಬಯಸಿದ್ದರು. ಕರ್ನಾಟಕ ಹಿಂದಿನ 50 ವರ್ಷಗಳ ಅವಧಿ 1974 ರಲ್ಲಿ ಮುಗಿದಿದೆ ಮತ್ತು ನದಿಯು ಕರ್ನಾಟಕದಲ್ಲಿ ಹುಟ್ಟುವುದರಿಂದ ಅದನ್ನು ಪರಿಗಣಿಸಿ, ತಮಗೆ ನದಿಯ ಮೇಲೆ ಹೆಚ್ಚಿನ ಹಕ್ಕು ಇದೆ ಬಂದಾಗ 1924 ರ ಬ್ರಿಟಿಷ್ ಸಾಮ್ರಾಜ್ಯ ಮತ್ತು ಮೈಸೂರು ಮಹಾರಾಜರ ನಡುವಿನ ಒಪ್ಪಂದಕ್ಕೆ ತಾವು ಬದ್ಧರಲ್ಲ ಎಂದು ವಾದಿಸಿದರು. . ಅವರು ಹಿಂದಿನ ಒಪ್ಪಂದದ ಮಿತಿಯಲ್ಲೇ 1974ರ ನಂತರವೂ ಇರಬೇಕೆಂದೇನೂ ಇಲ್ಲ ಎಂದು ವಾದಿಸಿದರು.
  • 1924 ರ ನಂತರ ತಮಿಳುನಾಡು ನದಿಯ ಸುತ್ತ ಮುತ್ತ ಲಕ್ಷಾಂತರ ಎಕರೆ ಕೃಷಿ ಭೂಮಿ ಅಭಿವೃದ್ಧಿ ಪಡಿಸಿದ್ದು, ನದಿಯ ನೀರಿನ ಮೇಲೆ ತುಂಬಾ ಅವಲಂಬಿಸಿದ್ದರು. ಅವರು ನೀರಿನ ವಿತರಣೆ ಬದಲಾವಣೆ ಆದರೆ ರೈತರ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ವಾಗುವುದು ಎಂದು ವಾದಿಸಿದರು. 1972 ರಲ್ಲಿ, ಕೇಂದ್ರಸರ್ಕಾರ ಕೇರಳ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ - ನದಿ ಜಲಾನಯನ ಪ್ರದೇಶದ ಅಂಕಿಅಂಶಗಳನ್ನು ಸಂಗ್ರಹಿಸಲು ಒಂದು ಸಮಿತಿಯನ್ನು ನೇಮಿಸುವುದಕ್ಕೆ ಒಪ್ಪಿಕೊಂಡಿತು.
  • ನ್ಯಾಯಮೂರ್ತಿ ಗ್ರಿಫ್ಫಿನ್ ಅವರು ನೀಡಿದ್ದ ಆದೇಶ ಕರ್ನಾಟಕಕ್ಕೆ ಅನುಕೂಲ ಆಗಿತ್ತು. ಆದರೆ, ಮದ್ರಾಸ್ ಸರ್ಕಾರದ ಒತ್ತಾಯದಿಂದಾಗಿ, ಬ್ರಿಟಿಷ್ ಸರ್ಕಾರ ಅದನ್ನು ಅಸಿಂಧುಗೊಳಿಸಿತು. ಆ ಸಂದರ್ಭದಲ್ಲಿ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ಕಾವೇರಿ ನೀರಿನ ಮೇಲೆ ತಮಿಳುನಾಡಿಗೆ ಪರಂಪರಾನುಗತ ಹಕ್ಕು ಇರಲಿಲ್ಲ. ಪರಂಪರಾನುಗತ ಹಕ್ಕು ಇಲ್ಲದಿರುವಾಗ ತಮಿಳುನಾಡು ರಾಜ್ಯವು, ತನ್ನಲ್ಲಿ ಕೃಷಿ ಚಟುವಟಿಕೆಗಳು ಹೆಚ್ಚಲು ಬಿಡಬಾರದಿತ್ತು. ತಮಿಳುನಾಡು ಒಪ್ಪಂದ ಮೀರಿ, ಕೃಷಿ ಜಮೀನು ವಿಸ್ತರಿಸಿದೆ ಎಂದು ಕಾವೇರಿ ನದಿ ನ್ಯಾಯಮಂಡಳಿ ಕೂಡ ಹೇಳಿದೆ.
  • ಸತ್ಯಶೋಧನೆಯ ಸಮಿತಿಯು ತಮಿಳುನಾಡು 566 ಟಿ.ಎಮ್.ಸಿಅಡಿ (ಸಾವಿರ ಮಿಲಿ ಘನ ಅಡಿಗಳು) ಮತ್ತು ಕರ್ನಾಟಕ 177 ಟಿ.ಎಮ್.ಸಿಅಡಿ ಬಳಸುತ್ತದೆ ಬಳಸುತ್ತಿದೆ ಎಂಬುದನ್ನು ಕಂಡುಕೊಂಡರು. 125 ಟಿ.ಎಮ್.ಸಿಅಡಿ ಹೆಚ್ಚು ಉಳಿಯುತ್ತದೆ ಎಂದು ಲೆಕ್ಕ ಹಾಕಿದರು. ಎಂದರೆ ಒಟ್ಟು 868 ಟಿ.ಎಮ್.ಸಿಅಡಿ ಲಭ್ಯವೆಂದು ತೀರ್ಮಾನಿಸಿದ್ದರು (ಇದೂ ತಪ್ಪು ಲೆಕ್ಕ)
  • 1976 ರಲ್ಲಿ, ಪ್ರತಿಯೊಂದು ರಾಜ್ಯವೂ ತಮ್ಮ ಹಿಂದಿನ ಬಳಕೆಯ ಪ್ರಕಾರ ನೀರನ್ನು ಬಳಸಿಕೊಂಡು ಮುಂದುವರಿಯತಕ್ಕದ್ದೆಂಬ ತೀಮಾನಕ್ಕೆ ಬಂದವು. ಈಗ ಹೆಚ್ಚುವರಿ 125 ಟಿ.ಎಮ್.ಸಿ.ಅಡಿ ನೀರು ಉಳಿದಿದ್ದು ಅದನ್ನು ಮತ್ತೆ ಹಂಚಿಕೆ ಮಾಡಬೇಕು ಎಂದು ತೀರ್ಮಾನಿಸಲಾಯಿತು.

ಕರ್ನಾಟಕದ ವಾದ

[ಬದಲಾಯಿಸಿ]
  • ಕರ್ನಾಟಕವು ನದಿ ನೀರು ಹಂಚಿಕೆಯು ಅಂತರರಾಷ್ಟ್ರೀಯ ನಿಯಮಗಳಂತೆ , ಎಂದರೆ ಸಮಾನ ಭಾಗಗಳ ಪ್ರಕಾರ ನೀರು ಹಂಚಬೇಕು ಎಂದು ವಾದಿಸಿದರು. ಅತೀವವಾಗಿ ಕರ್ನಾಟಕವು 94 ಪ್ರತಿಶತದಷ್ಟು ನೀರನ್ನು ರಾಜ್ಯಗಳ ನಡುವೆ ಸಮಾನವಾಗಿ ಹಂಚಬೇಕು ಮತ್ತು ಆ ಉಳಿದ 6% ನಷ್ಟು ನೀರನ್ನು ಕೇರಳ ಮತ್ತು ಪುದುಚೇರಿಗಳಿಗೆ ವಿತರಣೆ ಮಾಡಬೇಕು ಎಂದು ಕರ್ನಾಟಕವು ಸೂಚಿಸಿತು. ಆದಾಗ್ಯೂ ತಮಿಳುನಾಡು 1924 ಮೂಲ ಒಪ್ಪಂದದ ಪ್ರಕಾರ, ವಿತರಣೆ ನಿಯಮಕ್ಕೆ ಅಂಟಿಕೊಳ್ಳ ಬಯಸಿದರು.

ನ್ಯಾಯಾಧಿಕರಣ ನೇಮಕ

[ಬದಲಾಯಿಸಿ]
  • ನದಿ ವಿವಾದ ಅತ್ಯಂತ ತೀವ್ರ ಪ್ರತಿಭಟನೆ ಮತ್ತು ಧರಣಿಗಳುನ್ನು ಕಂಡಿತು. 1986 ರಲ್ಲಿ, ತಮಿಳುನಾಡು ತಂಜಾವೂರು ರೈತರ ಸಂಘ ಸುಪ್ರೀಂ ಕೋರ್ಟ್'ಗೆ (ಎಸ್ಸಿ) ತೆರಳಿದರು ಮತ್ತು ಕಾವೇರಿ ನೀರು ವಿವಾದಕ್ಕೆ ಒಂದು ನ್ಯಾಯಮಂಡಳಿ ನೇಮಿಸಬೇಕೆಂದು ಆಗ್ರಹಿಸಿದರು.
  • 1990 ರಲ್ಲಿ,(ಎಸ್ಸಿ) ಸುಪ್ರೀಂ ಕೋರ್ಟ್ ಎರಡು ರಾಜ್ಯಗಳ ಅರ್ಜಿ/ವಾದಗಳನ್ನು ಕೇಳಿ, ಸಮಾಲೋಚನೆಯ ಪೂರ್ವಕ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಹೇಳಿತು. ಆದರೆ ರಾಜ್ಯಗಳು ತಮ್ಮೊಳಗೆ ಸಂಧಾನಕ್ಕೆ ಬರಲು ಸಾಧ್ಯವಾಗಲಿಲ್ಲ. ಆದ್ದರಿಂದ ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ನೀರು ವಿತರಿಸಲು ನ್ಯಾಯಾಧಿಕರಣ ರಚಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು. ಅದಕ್ಕೆ ಅನುಗಣವಾಗಿ ಕೇಂದ್ರ ಒಂದು ಟ್ರಿಬ್ಯೂನಲ್ ನೇಮಿಸಿತು.

1991 ರಲ್ಲಿ ಮಳೆ ಮತ್ತು ಕಾವೇರಿ ನೀರಾವರಿ ಪ್ರದೇಶ

[ಬದಲಾಯಿಸಿ]
  • ಕಾವೇರಿ ನ್ಯಾಯಮಂಡಳಿಯ ಅಂತಿಮ ಅನುದಾನದಲ್ಲಿ ತಮಿಳುನಾಡಿನ ಕೃಷಿ ಪ್ರದೇಶವನ್ನು ಸುಮಾರು 28 ಲಕ್ಷ ಎಕರೆಯಿಂದ 24 ಲಕ್ಷ ಎಕರೆಗೆ ತಗ್ಗಿಸಲಾಯಿತು. ಅದನ್ನು ಕರ್ನಾಟಕಕ್ಕೆ 1991 ರ ಮಧ್ಯಂತರ ಅನುದಾನಲ್ಲಿ ಸುಮಾರು 11 ಲಕ್ಷ ಎಕರೆಗೆ ನೀರಾವರಿ ಸೌಲಭ್ಯ ಆಗಿತ್ತು. ಅಂತಿಮ ಅನುದಾನಲ್ಲಿ ಸುಮಾರು 21 ಲಕ್ಷ ಎಕರೆಗೆ ನೀರಿನ ಕೊಡಿಗೆ ಸಿಕ್ಕಿದೆ. ಅಲ್ಲಿ ಈಗ ಕಬ್ಬಿನ ಬೆಳೆ ಪ್ರದೇಶ ಕಳೆದ ಐದು ವರ್ಷಗಳಲ್ಲಿ ಪ್ರದೇಶದಲ್ಲಿ ಕರ್ನಾಟಕದಲ್ಲಿ ಐದರಷ್ಟು ಹೆಚ್ಚದೆ. 1ಮೊದಲು 91000 ಹೆಕ್ಟೇರ್ (227500ಎಕರೆ) ಇದ್ದುದು. 1971 ರಲ್ಲಿ ್ಲ 410000 ಹೆಕ್ಟೇರಿಗೆ (1025000ಎಕರೆ) ಮತ್ತು 2015 ರಲ್ಲಿ 620000 ಹೆಕ್ಟೇರಿಗೆ (127100000 ಎಕರೆಗೆ) ಹೆಚ್ಚಾಯಿತು.
  • ಭಾರತ 3.287.263 ಚ.ಕಿ.ಮೀ ವಿಸ್ತೀರ್ಣವನ್ನು ಹೊಂದಿದ್ದು, 1200 ಮಿಮೀ ವಾರ್ಷಿಕ ಮಳೆ ಹೊಂದಿದೆ.
  • ಕರ್ನಾಟಕ ಸುಮಾರು 6.4ಕೋಟಿ ಜನಸಂಖ್ಯೆಹೊಂದಿದ್ದು 1,91,791 ಚ.ಕಿ.ಮೀ. ಪ್ರದೇಶದಲ್ಲಿ 1152 ಮಿಮೀ (ಅಂದಾಜು) ಸರಾಸರಿ ಮಳೆ ಹೊಂದಿದೆ, ಉಡುಪಿ ಜಿಲ್ಲೆಯ 4180 ಮಿಮೀ ಮಳೆ ಗರಿಷ್ಠ ಹೊಂದಿದ್ದರ, ಚಿತ್ರದುರ್ಗ ಜಿಲ್ಲೆಯ 570 ಮಿಮೀ ಕನಿಷ್ಠ ಮಳೆ ಹೊಂದಿದೆ. ಕರಾವಳಿ ಪ್ರದೇಶದಲ್ಲಿ ಅತಿ (ಸಮುದ್ರ ಆದ್ದರಿಂದ ಹೆಚ್ಚು ನೀರು ಅರೇಬಿಯನ್ ಸಮುಗ್ರ ಸೇರುವುದು) ಹೊಂದಿದೆ. ಉತ್ತರ ಕರ್ನಾಟಕದ ಒಳನಾಡಿನಲ್ಲಿ ಅತಿ ಕಡಿಮೆ ಮಳೆ ಹೊಂದಿದೆ.,
  • 7.7 ಕೋಟಿ ಜನರ ಜನಸಂಖ್ಯೆಯನ್ನು ಹೊಂದಿದ, 130060 ಚ.ಕಿಮೀ. ವಿಸ್ತೀರ್ಣವನ್ನು ಹೊಂದಿರುವ ತಮಿಳುನಾಡಿನ ಮೇಲೆ, ವರ್ಷದಲ್ಲಿ ಸುಮಾರು 958 ಮಿಮೀ ಸರಾಸರಿ ಮಳೆ ಸುಮಾರು ನೀಲಗಿರಿ ಜಿಲ್ಲೆಯ 1695 ಮಿಮೀ ಮಳೆ ಪಡೆದರೆ, ತೂತ್ತುಕುಡಿ ಜಿಲ್ಲೆಯು 655,7 ಮಿಮೀ ಗರಿಷ್ಠ ಮಳೆ ಹೊಂದಿದೆ.
  • 1970 ರಲ್ಲಿ ಕಾವೇರಿ ಫ್ಯಾಕ್ಟ್ ಫೈಂಡಿಂಗ್ (ಪರಿಶೀಲನಾ) ಸಮಿತಿಯು ನೀರು ಹಂಚಿಕೆ ಗಾಗಿ ಮೂಲ ಸತ್ಯ ವನ್ನು ಅಗೆದು ತೆಗೆದು ಐತಿಹಾಸಿಕ 1924 ಒಪ್ಪಂದಕ್ಕೆ (ಹಿಂದಿನಿಂದ ನಂತರ 50 ವರ್ಷಗಳ ಅವಧಿ ನಿರ್ಧರಿಸಲಾಗಿದೆ) ಮುಕ್ತಾಯ ಹೇಳಿತು. ಈ ವೇಳೆಗೆ ತಮಿಳುನಾಡಿನ ನೀರಾವರಿ ಭೂಮಿ 1.440.000 ಎಕರೆ ಯಿಂದ 2.580.000 ಎಕರೆ ಪ್ರದೇಶಕ್ಕೆ ವಿಸ್ತರಿಸಿತ್ತು. ಅದೇ ಕರ್ನಾಟಕದ ನೀರಾವರಿ ಪ್ರದೇಶದ 680.000 ಎಕರೆಗೆ ನಿಂತಿತ್ತು (ಏರಿತು).

ನ್ಯಾಯಾಧಿಕರಣದ ತೀರ್ಪು

[ಬದಲಾಯಿಸಿ]
  • ಅವರು, 1980 ರಿಂದ 1990 ರವರೆಗಿನ 10 ವರ್ಷಗಳಲ್ಲಿ ತಮಿಳುನಾಡಿಗೆ ಸರಾಸರಿ ಒಳಹರಿವು ಲೆಕ್ಕಾಚಾರ ನಂತರ ಪ್ರತಿ ವರ್ಷ 205 ಟಿ.ಎಮ್.ಸಿ.ಅಡಿ ನೀರನ್ನು ಖಾತ್ರಿಯಾಗಿ ತಮಿಳುನಾಡು ತಲುಪಲು ಕರ್ನಾಟಕ ಬಿಡಬೇಕೆಂದು ನಿರ್ದೇಶನ - 1991 ರಲ್ಲಿ, ಟ್ರಿಬ್ಯೂನಲ್ ಅದರ ಮಧ್ಯಂತರ(?) ತೀರ್ಮಾನ ನೀಡಿತು. ಈ ನಡುವೆ.. ಅವರು ಅಸ್ತಿತ್ವದಲ್ಲಿರುವ ನೀರಾವರಿ ಭೂಪ್ರದೇಶವನ್ನು ಹೆಚ್ಚಿಸದಿರಲು ಕರ್ನಾಟಕಕ್ಕೆ ನಿರ್ದೇಶಿಸಿದರು.
  • ಆದಾಗ್ಯೂ ಈ ನಿರ್ಧಾರವನ್ನು ಎರಡೂ ರಾಜ್ಯಗಳ ಜನರು ಸ್ವೀಕರಿಸಲಿಲ್ಲ. ಹಾಗೂ ಗಲಭೆಗಳು ಏಕಕಾಲದಲ್ಲಿ ಭುಗಿಲೆದ್ದು ಕರ್ನಾಟಕ ಸರಕಾರ ಟ್ರಿಬ್ಯೂನಲ್ ಕೊಡಿಗೆಯನ್ನು ತಿರಸ್ಕರಿಸಿತು. ಮತ್ತು ಅದು ಅಕ್ರಮವೆಂದು ಸುಗ್ರೀವಾಜ್ಞೆ ಹೊರಡಿಸಿತು. ಆದರೆ ಸುಪ್ರೀಂ ಕೋರ್ಟ್ ಸುಗ್ರೀವಾಜ್ಞೆಗಯನ್ನು ತಳ್ಳಿಹಾಕಿತು, ಮತ್ತು ಟ್ರಿಬ್ಯೂನಲ್ ಕೊಡಿಗೆ ಸಿಂಧುವಾದದ್ದು ಎಂದು ಹೇಳಿತು. ಕರ್ನಾಟಕಕ್ಕೆ ಸಹಾಯ ಮಾಡಲು ನಿರಾಕರಿಸಿತು. ಇದರ ನಂತರ, ಮಧ್ಯಂತರ ಅವಾರ್ಡ/ತೀರ್ಪು ಭಾರತದ ಸರ್ಕಾರದ ಪತ್ರದಲ್ಲಿ ಪ್ರಕಟವಾಯಿತು.
  • ಕಾವೇರಿ ಟ್ರಿಬ್ಯೂನಲ್ (1991 ರಲ್ಲಿ) ಅವಾರ್ಡ್ ಪ್ರಕಾರ ತಮಿಳುನಾಡಿಗೆ 487 ಟಿಎಂಸಿ ಅಡಿಯ ಬದಲಾಗಿ 419 ಟಿಎಂಸಿ ಅಡಿಗೆ ರಾಜ್ಯದ ಅವಶ್ಯಕತೆಗೆ ಬದ್ಧವಅಗಿ ನೀಡಿತು.

ಅಂತಿಮ ತೀರ್ಪು

[ಬದಲಾಯಿಸಿ]
  • ಮುಂದಿನ ಕೆಲವು ವರ್ಷಗಳಲ್ಲಿ ರಾಜ್ಯಗಳು ಸಾಕಷ್ಟು ಮಳೆ ಕಂಡಿತು. ಹಾಗಾಗಿ ನೀರಿಗಾಗಿ ಕೋಲಾಹಲ ಇರಲಿಲ್ಲ.. 1993 ರಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಚೆನೈ ರಲ್ಲಿ ಎಂಜಿಆರ್ ಸ್ಮಾರಕದ ಎದುರಿನಲ್ಲಿ ಇದ್ದಕ್ಕಿದ್ದಂತೆ ಉಪವಾಸ ಕೈಗೊಂಡರು. ಮಧ್ಯಂತರ ಆದೇಶಕ್ಕೆ ಒಳಪಟ್ಟು ತಮಿಳುನಾಡಿನ ಭಾಗದ ನೀರನ್ನು ಬಿಡಬೇಕೆಂದು ಅವರು ಒತ್ತಾಯಿಸಿದರು.
  • 1995 ರಲ್ಲಿ, ಕರ್ನಾಟಕದಲ್ಲಿ ಅತ್ಯಂತ ಕಡಿಮೆ ಮಳೆಯಾಗಿತ್ತು. ಆದ್ದರಿಂದ ಮಧ್ಯಂತರ ಆದೇಶ ಪಾಲಿಸಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ, ತಮಿಳುನಾಡು, 30 ಟಿ.ಎಂ.ಸಿ ಅಡಿ ನೀರಿನ ಬಿಡುಗಡೆಗೆ ಬೇಡಿಕೆಇಟ್ಟು ಸುಪ್ರೀಮ್ ಕೋರ್ಟು ಹತ್ತಿತು. ಸುಪ್ರೀಮ್ ಕೋರ್ಟು ಮತ್ತು ಕರ್ನಾಟಕ ಈ ಬೇಡಿಕೆಗಲಿಗೆ ಮನ್ನಣೆ ನೀಡಲಿಲ್ಲ. ಬಹಳಷ್ಟು ಎಳತಾಟದ ನಂತರ, ಸುಪ್ರೀಮ್ ಕೋರ್ಟು ಈ ವಿಷಯದಲ್ಲಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರಿಗೆ ಮಧ್ಯಸ್ಥಿಕೆ ವಹಿಸಲು ಕೇಳಿತು. ರಾವ್ ಎರಡು ರಾಜ್ಯಗಳ ಮುಖ್ಯಸ್ಥರು ಭೇಟಿಯಾದರು ಮತ್ತು ಎರಡು ರಾಜ್ಯಗಳು ಅವರ ಪರಿಹಾರದ ಶಿಫಾರಸನ್ನು ಅನುಸರಿಸಿದರು.
  • 1998 ರಲ್ಲಿ ಪ್ರಧಾನಿ ಅಧ್ಯಕ್ಷರಾಗಿ ಹಾಗೂ ನಾಲ್ಕು ರಾಜ್ಯಗಳ ಮುಖ್ಯ ಮಂತ್ರಿಗಳ ಸದಸ್ಯರನ್ನುಳ್ಳ ಕಾವೇರಿ ನದಿ ಪ್ರಾಧಿಕಾರವನ್ನು (Cauvery River Authority (CRA))ರಚಿಸಲಾಯಿತು.
  • 2007 ರಲ್ಲಿ, 16 ವರ್ಷಗಳ ನಂತರ, ಕಾವೇರಿ ನ್ಯಾಯಾಧೀಕರಣ (Cauvery Water Disputes Tribunal-CWDT)) ತಮ್ಮ ಅಂತಿಮ ತೀರ್ಪು ನೀಡಿತು. ಟ್ರಿಬ್ಯೂನಲ್, ಮದ್ರಾಸ್ ಮತ್ತು ಮೈಸೂರು ಸರ್ಕಾರದ ನಡುವೆ 1892 ಮತ್ತು 1924 ರ ಒಪ್ಪಂದಗಳನ್ನು ಮಾನ್ಯವೆಂದು ಪರಿಗಣಿಸಿತು. ಕರ್ನಾಟಕ ಟ್ರಿಬ್ಯೂನಲ್ ತೀರ್ಪನ್ನು ಪ್ರತಿಭಟಿಸಿತು. ಮತ್ತು ರಾಜ್ಯಾದ್ಯಂತ ಬಂದ್ ಆಚರಿಸಲಾಯಿತು.
  • ಟ್ರಿಬ್ಯೂನಲ್ ನ ಅಂತಿಮ ತೀರ್ಪು ಕೆಳಗಿನಂತೆ ಇತ್ತು:
  • ತಮಿಳುನಾಡು: 419 ಟಿಎಂಸಿ ( 512 ಟಿಎಂಸಿ ಅಡಿ ಒತ್ತಾಯಿಸಿದ್ದರು),
  • ಕರ್ನಾಟಕ: 270 ಟಿಎಂಸಿ (465 ಟಿಎಂಸಿ ಅಡಿ ಒತ್ತಾಯಿಸಿದ್ದರು),
  • ಕೇರಳ: 30 ಟಿಎಂಸಿ, ಅಡಿ ಮತ್ತು
  • ಪಾಂಡಿಚೇರಿ: 7 ಟಿಎಂಸಿ ಅಡಿ
  • ಒಂದು ಸಾಧಾರಣ ವರ್ಷದಲ್ಲಿ ಕಾವೇರಿ ಜಲಾನಯನದಲ್ಲಿ ಒಟ್ಟು ಇಳುವರಿ 740 ಟಿಎಂಸಿ ಆಗಿದ್ದು, ಅದರಲ್ಲಿ ಕರ್ನಾಟಕದಲ್ಲಿ 192 TMC+270=462 ಟಿಎಂಸಿ ಸಂಗ್ರಹವಾಗುತ್ತಿದ್ದು ಅದರಲ್ಲಿ 192 TMC ಅಡಿ ನೀರನ್ನು ಹಂತ ಹಂತವಾಗಿ ತಮಿಳುನಾಡಿಗೆ ಕರ್ನಾಟಕ ಬಿಡಬೇಕು (ವಿವರ ಕೆಳಗೆ ಇರುವಂತೆ).
  • 2013 ರಲ್ಲಿ, ಕೇಂದ್ರ ನ್ಯಾಯಮಂಡಳಿಯ (CWDT) ಅಂತಿಮ ಕೊಡಿಗೆಯನ್ನು ಗೆಜೆಟ್ ಪ್ರಕಟಣೆಯಲ್ಲಿ ಹಾಕಿತು. ಗಮನಕ್ಕೆ. ಕೇಂದ್ರ ಸರ್ಕಾರವು ಕಾವೇರಿ ಆಡಳಿತ ಮಂಡಳಿಯನ್ನು ( Cauvery Management Board -CMB) ಅಂತಿಮ ತೀರ್ಪಿನ ಜೊತೆ ಗೆಜೆಟ್ ಪ್ರಕಟಣೆಯಲ್ಲಿ ರಚಿಸಿ ಆದೇಶ ಮಾಡಲಾಯಿತು.[]

ನೀರು ಬಿಡಲು ಹಂತ ವಿಂಗಡಣೆ

[ಬದಲಾಯಿಸಿ]
  • ಒಂದು ಸಾಧಾರಣ ವರ್ಷದಲ್ಲಿ ಅಂತರರಾಜ್ಯಹಂಚಿಕೆಯಲ್ಲಿ; ಕರ್ನಾಟಕ ರಾಜ್ಯದ ಮೂಲಕ ಲಭ್ಯವಾಗುವಂತೆ; ಇದಕ್ಕೆ ಸಂಪರ್ಕ ಬಿಂದು ಪ್ರಸ್ತುತ ಬಿಳಿಗುಂಡಲು ಮಾಪನ (ಗೇಜ್ ಮತ್ತು ಡಿಸ್ಚಾರ್ಜ್) ಎಂದು ಗುರುತಿಸಲಾಗಿದೆ; "ಸಾಧಾರಣ ವರ್ಷ"ದ ಅರ್ಥ-ಒಂದು ವರ್ಷದಲ್ಲಿ ಕಾವೇರಿ ಜಲಾನಯನದಲ್ಲಿ ಒಟ್ಟು ಇಳುವರಿ 740 ಟಿಎಂಸಿ ಆಗಿರುವ ವರ್ಷ.
ತಿಂಗಳು ಟಿಎಂಸಿ ತಿಂಗಳು ಟಿಎಂಸಿ
ಜೂನ್ 10 ಡಿಸೆಂಬರ್ 8
ಜುಲೈ 34 ಜನವರಿ 3
ಆಗಸ್ಟ್ 50 ಫೆಬ್ರವರಿ 2.5
ಸೆಪ್ಟೆಂಬರ್ 40 ಮಾರ್ಚ್ 2.5
ಅಕ್ಟೋಬರ್ 22 ಏಪ್ರಿಲ್ 2.5
ನವೆಂಬರ್ 15 ಮೇ 2.5
ಒಟ್ಟು ಟಿಎಂಸಿ ಅಡಿ 192
  • ನೀರಿನ ಕ್ವಾಂಟಮ್‍ಲ್ಲಿ 192 ಟಿಎಂಸಿಯಲ್ಲಿ; ತಮಿಳುನಾಡಿನ ಹಂಚಿಕೆ ಪಾಲು 182 ಟಿಎಂಸಿ ಮತ್ತು ಪರಿಸರ ಉದ್ದೇಶಗಳಿಗಾಗಿ ಹಂಚಿಕೆ 10 ಟಿಎಂಸಿ ಒಳಗೊಂಡಿದೆ.

[]

ಸಾರಾಂಶ ಮತ್ತು ಜಲಾನಯನ ಪ್ರದೇಶದ ಹೋಲಿಕೆ ವಿವರ

[ಬದಲಾಯಿಸಿ]
  • ಬೇಸಿನ್ (ಜಲಾನಯನ) ಪ್ರದೇಶಕ್ಕೆ ನೀರಿನ ಹಂಚಿಕೆ ಹೋಲಿಸಿದರೆ ತಮಿಳುನಾಡು ಸಿಂಹ ಪಾಲು ನೀರು ಪಡೆದಿರುವುದು ಕಾಣುವುದು.
(ವಿವರಗಳು ಇಂಗ್ಲಿಷ್ ವಿಕಿಯಿಂದ) ತಮಿಳುನಾಡು ಕರ್ನಾಟಕ ಕೇರಳ ಪುದುಚೇರಿ ಒಟ್ಟು
ಬೇಸಿನ್ ಪ್ರದೇಶ (km² ರಲ್ಲಿ) 44,016 (54%) 34,273 (42%) 2,866 (3.5%) 148(-) 81,155
ಬರ ಪ್ರದೇಶದಲ್ಲಿ ಬೇಸಿನ್ (ಚದರ km²ರಲ್ಲಿ) 12,790 (36.9%) 21,870 (63.1%) -- -- 34,660
ಬೇಸಿನ್ (TMCft ರಲ್ಲಿ) ಒಳಹರಿವು 252 (31.9%) 425 (53.8%) 113(14.3%) -- --
2007 ಟ್ರಿಬ್ಯೂನಲ್ ತೀರ್ಪು ಪ್ರಕಾರ ಪ್ರತಿ ರಾಜ್ಯದ ಪಾಲು 419 (58%) 270 (37%) 30 (4%) 7 (1%) 726
  • ಕರ್ನಾಟಕದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಅತಿ ಪ್ರಸಿದ್ಧ ಜಲಾಶಯ ಕೃಷ್ಣರಾಜಸಾಗರ.ಅದರ ಗರಿಷ್ಟ ಮಟ್ಟ ೧೨೪.೮ ಅಡಿ.(ಅಲ್ಲಿಯ ನೆಲ ಮಟ್ಟದಿಂದ)ಕಾವೇರಿ ಕಣಿವೆಯ ನೀರಿನಲ್ಲಿ ಅರ್ಧಕ್ಕಿಂತ ಹೆಚ್ಚು ಪಾಲನ್ನು ಈಗಾಗಲೆ ಗಿಟ್ಟಿಸಿದ್ದರೂ ತಮಿಳುನಾಡಿಗೆ ತೃಪ್ತಿ ಇಲ್ಲ. ಕಾವೇರಿ ಕಣಿವೆಯಲ್ಲಿರುವ ಒಟ್ಟು ನೀರು 740 ಟಿಎಂಸಿ ಅಡಿ. ಈ ಪೈಕಿ 419 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ, 270 ಟಿಎಂಸಿ ಅಡಿ ನೀರನ್ನು ಕರ್ನಾಟಕಕ್ಕೂ ನ್ಯಾಯಾಧಿಕರಣ ಈಗಾಗಲೆ ಹಂಚಿಕೆ ಮಾಡಿದೆ.
  • ಒಟ್ಟು ನೀರು 740 ಟಿಎಂಸಿ ಅಡಿ.-ಇದು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಒಟ್ಟು ಲಭ್ಯವಾಗುವ ನೀರಿನ ಪ್ರಮಾಣ ;ಮಳೆ ಸರಾಸರಿ ಉತ್ತಮ ಮಳೆಯಾದಾಗ; ಕರ್ನಾಟಕವು ತನಗೆ ಲಭ್ಯವಾಗುವ ನೀರಿನಲ್ಲಿ 192 ಟಿ.ಎಮ್.ಸಿ.ಅಡಿ ನೀರನ್ನು ತಮಿಳನಾಡಿಗೆ ಬಿಡಬೇಕು. ಹಾಗೆ ಬಿಟ್ಟಾಗ ಕರ್ನಾಟಕಕ್ಕೆ 270 ಟಿಎಂಸಿ ಅಡಿ ನೀರು ಉಳಿಯುವುದೆಂದು ಅಂದಾಜು. ಮಳೆ ಕಡಿಮೆಯಾದಾಗ ಪ್ರಧಾನ ಮಂತ್ರಿಯವರ ಅಧ್ಯಕ್ಷತೆಯ ಕಾವೇರಿ ಆಯೋಗ ನೀರಿನ ಪ್ರಮಾಣವನ್ನು ನಿರ್ಧರಿಸುವುದು.
  • ಹೆಚ್ಚು ಕಡಿಮೆ ಶೇ.80ರಷ್ಟು ಕಾವೇರಿ ನೀರು ತನಗೇ ಸಲ್ಲಬೇಕು ಎಂಬುದು ತಮಿಳುನಾಡಿನ ಆಗ್ರಹ. ಅರ್ಥಾತ್ 740 ಟಿಎಂಸಿಗಳಲ್ಲ್ 566 ಟಿಎಂಸಿ ತನ್ನ ನ್ಯಾಯಯುತ ಪಾಲು ಎನ್ನುತ್ತದೆ.ಹೀಗಾಗಿ 419ಕ್ಕೆ ಸಮಾಧಾನ ಇಲ್ಲ. ಕರ್ನಾಟಕದ ಪಾಲಿನ ನೀರಿಗೆ ಕತ್ತರಿ ಹಾಕಿ ಮತ್ತಷ್ಟು ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರ. ತೀರ್ಪು ಸಂಬಂಧ ಸಲ್ಲಿಸಿರುವ ವಿಶೇಷ ಮೇಲ್ಮನವಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ವಿಚಾರಣೆಗೆ ಅಂಗೀ­ಕರಿಸಿದೆ.
  • ಹೀಗಾಗಿ ನಾವು ಈ ವಿವಾದದ ವಿಚಾರಣೆ ನಡೆಸುವುದು ಸರಿಯಲ್ಲ ಎಂಬ ನಿಲುವನ್ನು ನ್ಯಾಯಮಂಡಳಿ ವ್ಯಕ್ತಪಡಿಸಿತು. ಏಳು ವರ್ಷದ ನಂತರ ಇದೇ ಮೊದಲ ಬಾರಿಗೆ ನ್ಯಾಯ­ಮಂಡಳಿಯು ಸಭೆ ಸೇರಿತ್ತು.ನ್ಯಾ. ಬಿ.ಎಚ್‌. ಚೌಹಾಣ್‌ ಕಾವೇರಿ ನ್ಯಾಯಮಂಡಳಿ ಹೊಸ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಸೇರಿದ ನ್ಯಾಯ­ಮಂಡಳಿ ಕಲಾಪ ಕೇವಲ ಒಂದು ಗಂಟೆಯೊಳಗೆ ಮುಗಿದು ಹೋಯಿತು.(15-7-2014)
ಕಾವೇರಿ ನ್ಯಾಯಮಂಡಳಿ 2007ರ ಫೆಬ್ರುವರಿ ಐದರಂದು ಅಂತಿಮ ತೀರ್ಪು ನೀಡಿದೆ. ಅದರಂತೆ ಕಾವೇರಿ ಒಟ್ಟಾರೆ ನೀರಿನ ಪ್ರಮಾಣವನ್ನು 740 ಟಿಎಂಸಿ ಅಡಿ ಎಂದು ಅಂದಾಜಿಸಿದೆ.
  • ಇದರಲ್ಲಿ ತಮಿಳುನಾಡಿಗೆ 419ಟಿಎಂಸಿ (ಬೇಡಿಕೆ 562ಟಿಎಂಸಿ ಅಡಿ), ಕರ್ನಾಟಕಕ್ಕೆ 270 ಟಿಎಂಸಿ ಅಡಿ (ಬೇಡಿಕೆ 465 ಟಿಎಂಸಿ ಅಡಿ) ಕೇರಳಕ್ಕೆ 30 ಟಿಎಂಸಿ ಅಡಿ, ಪುದುಚೇರಿಗೆ ಏಳು ಟಿಎಂಸಿ ಹಾಗೂ ಪರಿಸರ ಸಂರಕ್ಷಣೆಗೆ 10 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಿದೆ.
  • ನ್ಯಾಯಮಂಡಳಿ ಐತೀರ್ಪು ಪ್ರಶ್ನಿಸಿ ತಮಿಳುನಾಡು ಮತ್ತು ಕರ್ನಾಟಕ ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸಿದ್ದು, ಈ ಅರ್ಜಿಗಳು ವಿಚಾರಣೆಗೆ ಅಂಗೀಕಾರ ಆಗಿವೆ. ನ್ಯಾಯಮಂಡಳಿ ಮುಂದೆಯೂ ಕೆಲವು ಸ್ಪಷ್ಟನೆಗಳನ್ನು ಕೇಳಿ ಸಂಬಂಧಪಟ್ಟ ರಾಜ್ಯಗಳು ಅರ್ಜಿ ಹಾಕಿವೆ.
  • ಕಾವೇರಿ ನ್ಯಾಯಮಂಡಳಿ 2007ರ ಫೆಬ್ರುವರಿ ಐದರಂದು ಅಂತಿಮ ತೀರ್ಪು ನೀಡಿದೆ. ಅದರಂತೆ ಕಾವೇರಿ ಒಟ್ಟಾರೆ ನೀರಿನ ಪ್ರಮಾಣವನ್ನು 740 ಟಿಎಂಸಿ ಅಡಿ ಎಂದು ಅಂದಾಜಿಸಿದೆ. ಇನ್ನೂಉಳಿದ ನೀರು ಇಂಗುವಿಕೆ ಮತ್ತು ಆವಿಯ ಲೆಕ್ಕಕ್ಕೆ?
  • ಕರ್ನಾಟಕದ ನೀರಾವರಿ ಪ್ರದೇಶದ 680,000 ಎಕರೆಯಷ್ಟಿತ್ತು;ನೀರು ಹಂಚಿಕೆ ಮಾಡುವಾಗ ತಮಿಳುನಾಡಿನ 1.440.000 ಎಕರೆ ಪ್ರದೇಶದ ನೀರಾವರಿ ಭೂಮಿಯು 2.580.000 ಎಕರೆಗೆ ಬೆಳೆದಿತ್ತು.
  • ಕರ್ನಾಟಕದಲ್ಲಿ ಅಂದಾಜು ಸಂಗ್ರಹವಾಗುವ ನೀರಿನಲ್ಲಿ (192+270=462) 192 ಟಿ.ಎಮ್.ಸಿ.ಅಡಿ ನೀರನ್ನು ತಮಿಳುನಅಡಿಗೆ ಬಿಡಬೇಕು. ಉಳಿದ 270 ಟಿಎಂಸಿ ಅಡಿ ನೀರು ಕರ್ನಾಟಕಕ್ಕೆ.ತಮಿಳುನಾಡಿಗೆ 192+227 =419 ಅಲ್ಲಿ ಸಂಗ್ರಹವಾಗುವ ನೀರುಸೇರಿ. ಕಡಿಮೆ ಮಳೆ ಬಿದ್ದಾಗ ಕೇಂದ್ರದ ಕಾವೇರಿ ಸಂಕಷ್ಟನಿವಾರಣಾಸಮಿತಿ ಸಮಸ್ಯೆ ಬಗೆಹರಿಸಬೇಕು.
ರಾಜ್ಯ ಜಲಾನಯನ ಪ್ರದೇಶ (ಚ.ಕಿ.ಮೀ):ನದಿಯಲ್ಲಿ ಮಳೆ ನೀರು ಸಂಗ್ರಹ ಶೇ. ಪ್ರಮಾಣ ನೀರಿನ ಕೊಡಿಗೆ (ಟಿಎಂಸಿಅಡಿ ಶೇ.ಪ್ರಮಾಣ ನೀರು ನೀರಾವರಿ ಪ್ರದೇಶ ಮೊದಲಿನ ನೀರಾವರಿ ಪ್ರದೇಶ
ತಮಿಳುನಾಡು 43856 (252 ಟಿಎಂಸಿ ಟಿಎಂಸಿಅಡಿ ಮಳೆ ನೀರು ಸಂಗ್ರಹ 0.540398004 192 ಕ.ದಿಂದ+227ತ.ನಾ.ಸಂಗ್ರಹ =419 419 = 0.5662% 25,80,000 ಎಕರೆ 14,40.000 ಎಕರೆ
ಕರ್ನಾಟಕ 34243(462 ಟಿಎಂಸಿಅಡಿ ಮಳೆ ನೀರು ಸಂಗ್ರಹ 0.422315323 270 (462 ರಲ್ಲಿ ) 270=0.3649% 18 ಲಕ್ಷ ಹೆಕ್ಟೇರ್‌ 6,80,000ಎಕರೆ
ಕೇರಳ 2866 (113 ಟಿಎಂಸಿಅಡಿ ಮಳೆ ನೀರು ಸಂಗ್ರಹ 0.035315138 30 30=0.0405%
ಪಾಂಡಿಚೇರಿ 160 (?) 0.001971536 7 7=0.009459459
ಪರಿಸರ ಒಟ್ಟು ಮಳೆ ನೀರು ಸಂಗ್ರಹ= 790 ಟಿಎಂಸಿ ಅಡಿ. 10

[]

ಸುಪ್ರೀಂ ಕೋರ್ಟ್‌ ತೀರ್ಪು

[ಬದಲಾಯಿಸಿ]

ಕಾವೇರಿ ಜಲ ವಿವಾದ ನ್ಯಾಯಮಂಡಳಿಯ ಐ ತೀರ್ಪನ್ನು ಪ್ರಶ್ನಿಸಿ ಕಣಿವೆ ವ್ಯಾಪ್ತಿಯ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಸರ್ಕಾರಗಳು ಸಲ್ಲಿಸಿದ್ದ ಮೇಲ್ಮನವಿಗಳನ್ನು ಸಲ್ಲಿಸಿದ್ದವು. ಅವುಗಳ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ತಮಿಳುನಾಡಿಗೆ ವಾರ್ಷಿಕ 177.25 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿ 2018ರ ಫೆಬ್ರುವರಿ 16ರಂದು ತೀರ್ಪು ನೀಡಿದೆ.[]

  • ಬೆಂಗಳೂರಿನಿಂದ ೧೦೦ ಕಿ.ಮೀ. ಹಾಗೂ ಅರ್ಕಾವತಿ ಮತ್ತು ಕಾವೇರಿ ನದಿಗಳ ಸಂಗಮ ಸ್ಥಾನದಿಂದ ೪ ಕಿ.ಮೀ. ದೂರದಲ್ಲಿ ಮೇಕೆದಾಟು ಇದೆ. ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿನ ಬಹುತೇಕ ತಾಲ್ಲೂಕುಗಳು ಬರಪೀಡಿತವಾಗಿದ್ದು, ಅಂತರ್ಜಲವನ್ನು ಹೆಚ್ಚಾಗಿ ಅವಲಂಬಿಸಿವೆ. ಕಾವೇರಿ ಜಲ ವಿವಾದ ನ್ಯಾಯಮಂಡಳಿಯ ಅಂತಿಮ ಆದೇಶದಂತೆ ಕರ್ನಾಟಕ ನಿಗದಿತ ಪ್ರಮಾಣದ ನೀರನ್ನು ತಮಿಳು­ನಾಡಿಗೆ ಬಿಟ್ಟಿರುವುದಕ್ಕೆ ಅಂಕಿಅಂಶ, ಸಾಕ್ಷ್ಯಾಧಾರಗಳು ಲಭ್ಯವಿವೆ. ಆದರೂ ಈ ವಿಚಾರದಲ್ಲಿ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸುತ್ತಲೇ ಇರುತ್ತದೆ.
  • ಉತ್ತಮವಾಗಿ ಮಳೆಯಾದಂತಹ ವರ್ಷಗಳಲ್ಲೂ ನೀರಿನ ಪ್ರಮಾಣದ ಬಗ್ಗೆ ತಮಿಳುನಾಡು ಆಕ್ಷೇಪ ಎತ್ತುತ್ತದೆ. ಇದನ್ನು ತಡೆಗಟ್ಟಿ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕೆಂಬುದು ಕರ್ನಾಟಕದ ಬಯಕೆ. ಕೃಷ್ಣರಾಜಸಾಗರ ಜಲಾಶಯದ ಕೆಳಭಾಗದಿಂದ ತಮಿಳುನಾಡಿನ ಗಡಿಯ ವರೆಗೆ ಕಾವೇರಿ ನದಿಯ ಜಲಾನಯನ ಪ್ರದೇಶ ೨೩,೨೩೧ ಚದರ ಕಿ.ಮೀ. ಕೆ.ಆರ್.ಎಸ್. ಜಲಾಶಯದ ಕೆಳಭಾಗದಲ್ಲಿನ ಅಚ್ಚುಕಟ್ಟು ಪ್ರದೇಶದಲ್ಲಿ ಗಣನೀಯ ಪ್ರಮಾಣದ ಬಸಿ ನೀರು ಉತ್ಪತ್ತಿಯಾಗುತ್ತಿದೆ.
  • ಇದು ಸಹ ಕಾವೇರಿ ನದಿಯೊಂದಿಗೆ ತಮಿಳುನಾಡನ್ನು ಸೇರುತ್ತದೆ. ಈ ಹರಿವಿನ ಮೇಲೂ ಕರ್ನಾಟಕಕ್ಕೆ ಯಾವುದೇ ನಿಯಂತ್ರಣ ಇಲ್ಲದಿರುವುದರಿಂದ, ನ್ಯಾಯ ಮಂಡಳಿಯಿಂದ ನಿಗದಿಯಾದ ಪ್ರಮಾಣಕ್ಕಿಂತಲೂ ಹೆಚ್ಚಿನ ನೀರು ತಮಿಳುನಾಡಿಗೆ ಬಿಡುಗಡೆಯಾಗುತ್ತದೆ. ಆದರೂ ತಮಿಳುನಾಡು ಈ ಅಣೆಕಟ್ಟಿನ ವಿರುದ್ಧ ಕೇಂದ್ರ ಸರ್ಕಾರ ಮತ್ತು ನ್ಯಾಯಾಲಯಕ್ಕೆ ದೂರು ತೆಗೆದುಕೊಂಡುಹೋಗಿದೆ.

ಕರ್ನಾಟಕದಲ್ಲಿ ಅಣೆಕಟ್ಟೆಗಳು ಮತ್ತು ನೀರು ಲಭ್ಯತೆ

[ಬದಲಾಯಿಸಿ]
  • ಗುಲಾಬಿ ಬಣ್ಣದ ಲ್ಲಿರುವುದು ಕೇವಲ ವಿದ್ಯತ್ ಉತ್ಪಾದನೆಗೆ ಮಾತ್ರಾ ಉಪಯೋಗ:
ಕರ್ನಾಟಕದ ವಿಸ್ತೀರ್ಣ:191791 ಚ.ಕಿ.ಮೀ
ಕರ್ನಾಟಕದ ಜನಸಂಖ್ಯೆ:6.1 ಕೋಟಿ
ಕ್ರ.ಸಂ ಅಣೆಕಟ್ಟೆ ಹೆಸರು ನದಿ ಹೆಸರು. ನದಿ ವ್ಯವಸ್ಥೆ ಜಲ ಸಂಗ್ರಹ; (ಟಿಎಂಸಿ.ಅಡಿ)
1 ಲಿಂಗನ ಮಕ್ಕಿ ಶರಾವತಿ ಪಶ್ಚಿಮಕ್ಕೆ ಹರಿವು 156.62
2 ಸೂಪ ಅಣೆಕಟ್ಟು ಕಾಳಿ ಪಶ್ಚಿಮಕ್ಕೆ ಹರಿವು 149
3 ಆಲಮಟ್ಟಿ ಕೃಷ್ಣಾ ಕೃಷ್ಣಾ ಪೂರ್ವಕ್ಕೆ 123.25
4 ಹೊಸಪೇಟೆ ತುಂಗಭದ್ರಾ ಕೃಷ್ಣಾ 100
5 ಭದ್ರಾ ಅಣೆಕಟ್ಟೆ ಭದ್ರಾ ಕೃಷ್ಣಾ 71.5
6 ಘಟಪ್ರಭಾ ಘಟಪ್ರಭಾ ಕೃಷ್ಣಾ 51
7 ಕೆ.ಆರ್.ಎಸ್. ಕಾವೇರಿ ಕಾವೇರಿ 49.45
8 ಬಸವಸಾಗರ ಕೃಷ್ಣಾ ಕೃಷ್ಣಾ 37.96
9 ಮಲಪ್ರಭಾ ಮಲಪ್ರಭಾ ಕೃಷ್ಣಾ 37.73
10 ಹೇಮಾವತಿಡ್ಯಾಮು ಹೇಮಾವತಿ ಕಾವೇರಿ 37
11 ಮಾಣಿ ವರಾಹಿ ಪಶ್ಚಿಮಕ್ಕೆ ಹರಿವು 31
12 ಕಬಿನಿ ಕಬಿನಿ ಕಾವೇರಿ 17
ಒಟ್ಟು 704.89
ವಿದ್ಯುತ್ ಯೋಜನೆ ನೀರು 336.62-ಟಿಎಂಸಿ.ಅಡಿ ಉಳಿದ ನೀರು 368.27
  • ಒಂಭತ್ತು ಅಣೆಕಟ್ಟೆಯ 368.27 ಟಿಎಂಸಿ ಅಡಿ ನೀರಿನಲ್ಲೂ ಕೆಲವು ಭಾಗ ವಿದ್ಯುತ್‍ಉತ್ಪಾದನೆಗೆ ಉಪಯೋಗವಾಗುವುದು.
  • []

ತಮಿಳುನಾಡಿನ ಅಣೆಕಟ್ಟೆಗಳು ಮತ್ತು ನೀರು ಲಭ್ಯತೆ

[ಬದಲಾಯಿಸಿ]
  • ತಮಿಳನಾಡಿನಲ್ಲಿ ನೀರಿನ ಲಭ್ಯತೆಯ ಅಂಕಿಅಂಶಗಳು ; ಕರ್ನಾಟಕದ ನೀರು ಲಭ್ಯತೆಯ ಜೊತೆ ಹೋಲಿಕೆಗಾಗಿ:
ತಮಿಳು ನಾಡಿನ ವಿಸ್ತೀರ್ಣ:130060 ಚ.ಕಿ.ಮೀ
ತಮಿಳು ನಾಡಿನ ಜನಸಂಖ್ಯೆ:7.71 ಕೋಟಿ
ಕ್ರ.ಸಂ ಅಣೆಕಟ್ಟೆ ಹೆಸರು ನದಿ ಹೆಸರು. ನದಿ ವ್ಯವಸ್ಥೆ ಜಲ ಸಂಗ್ರಹ; (ಟಿಎಂಸಿ.ಅಡಿ)
1 ಮೆಟ್ಟೂರು ಕಾವೇರಿ ಕಾವೇರಿ 94.5
2 ಭವಾನಿ ಸಾಗರ್ ಭವಾನಿ ಕಾವೇರಿ 149
3 ಪರಾಂಬಿಕುಲಮ್ ಪರಾಂಬಿಕುಲಮ್ ಚಲಕುಡ್ಡಿ ನದಿ 13.5
4 ಪೆರಿಯಾರ್ ಮುಲ್ಲ ಪೆರಿಯಾರ್ ಪೆರಿಯಾರ್ 10.67
5 ಸಾತನೂರು ತೆನ್ ಪೆನ್ನಾರ್ ತೆನ್ ಪೆನ್ನಾರ್ 7.4
6 ವಾಯಿಗಾಯಿ ವಾಯಿಗಾಯಿ ಪೆರಿಯಾರ್ ವಾಯಿಗಾಯಿ 6.14
7 ಮಣಿಮುತ್ತರ್ ಮಣಿಮುತ್ತರ್ ತಾಂಬರಪರಣಿ 5.53
8 ಪಾಪನಾಸಮ್ ತಾಂಬರಪರಣಿ ತಾಂಬರಪರಣಿ 5.5
9 ಶೋಲಿಯಾರ್ ಶೋಲಿಯಾರ್ ಪಿ.ಎ.ಪಿ ಪಿ.ಎ.ಪಿ ಪ್ರಾಜೆಕ್ಟ್ 5.1
10 ಪೆಚ್ಚಿಪರಯ್ ಕೊಡೆಯಾರ್ ಕೊಡೆಯಾರ್ 4.5
11 ಅಮರಾವತಿ ಅಮರಾವತಿ ಕಾವೇರಿ 4.1
ಒಟ್ಟು 11 ಅಣೆಕಟ್ಟು 190.11
  • ನೀರಿನ ಲಭ್ಯತೆಯನ್ನು ನೋಡಿದಲ್ಲಿ ತಮಿಳು ನಾಡು ಕಾವೇರಿಯನ್ನು ಬಹಳಷ್ಟು ಅವಲಂಬಿಸಿದೆ. ಬೆಳೆಗೆ ಹಿಂಗಾರು ಮತ್ತು ಮುಂಗಾರು ಎರಡೂ ಮಳೆಯ ಲಾಬ ಪಡೆಯುವುದು.

[]

ಟಿ.ಎಂ.ಸಿ.

[ಬದಲಾಯಿಸಿ]
Tmcft, (Tmc ft), (TMC), (tmc), is the abbreviation for one thousand million cubic feet (1,000,000,000 = 109 = 1 billion), commonly used in reference to volume of water in a reservoir or river flow.
  • ಒಂದು ಬಿಲಿಯನ್ =ಹತ್ತು ಕೋಟಿ;ಟಿ.ಎಂ.ಸಿ. ಘನ ಅಡಿ ನೀರು; ಅಡಿ ಅಥವಾ ಮೀಟರ್ ಎಂದು ಮುಂದೆ ಸೇರಿಸಬೇಕು.
  • 1 tmcft. is equivalent to:(ಒಂದು ಟಿ.ಎಂ.ಸಿ. =
1,000,000,000 cubic feet (28,000,000 m3)(ಕ್ಯುಬಿಕ್ ಮೀಟರ್)
28,316,846,592 liters (ಲೀಟರ್)
2.83168466×107 cubic metres(ಕ್ಯುಬಿಕ್ ಮೀಟರ್)
22,956.841139 acre feet
7.48051945×109 U.S. gallons (ಗ್ಯಾಲನ್)

2016 ಸೆಪ್ಟೆಂಬರ್,05

[ಬದಲಾಯಿಸಿ]
  • ಈ ಬಾರಿ ಮಳೆ ಕಡಿಮೆಯಾಗಿ ಕಾವೇರಿನದಿಯಲ್ಲಿ ಸಾಕಷ್ಟು ನೀರು ಸಂಗ್ರಹವಾಗದೆ ನಿಯಮದಣತೆ ಪೂರ್ತಿ ನೀರನ್ನು ಹರಿಸಿರಲಿಲ್ಲ. ತಮಿಳು ನಾಡು ಸುಪ್ರೀಮ್ ಕೋರ್ಟಿಗೆ ತಕರಾರು ಅರ್ಜಿಹಾಕಿತ್ತು.
  • 2016 ಸೆಪ್ಟೆಂಬರ್,05: ಮುಂದಿನ 10 ದಿನಗಳ ಕಾಲದಲ್ಲಿ 13.5 ಟಿಎಂಸಿ ನೀರನ್ನು ಕರ್ನಾಟಕ ತಮಿಳುನಾಡಿಗೆ ಬಿಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಸೋಮವಾರ ನೀಡಿದೆ. ಅಂದರೆ ಪ್ರತಿದಿನ 15 ಸಾವಿರ ಕ್ಯೂಸೆಕ್ [ಟಿಎಂಸಿ= 11 574 ಕ್ಯೂಸೆಕ್ಸ್] ನೀರನ್ನು ಕರ್ನಾಟಕ ಹರಿಸಬೇಕಾಗುತ್ತದೆ. ಕಾವೇರಿ ಪಾತ್ರದಿಂದ 50.52 ಟಿಎಂಸಿ ನೀರು ನೀಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ತಮಿಳುನಾಡು ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಆದೇಶ ನೀಡಿದೆ:[]
  • ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಕಳೆದ ವರ್ಷ ಈ ವೇಳೆಗೆ 25.68 ಟಿಎಂಸಿ ಅಡಿಯಷ್ಟು ನೀರಿತ್ತು. ಈಗ ಡೆಡ್‌ ಸ್ಟೋರೇಜ್‌ ಹಾಗೂ ಕುಡಿಯುವ ನೀರಿಗೆಂದು 10 ಟಿಎಂಸಿ ಅಡಿಯಷ್ಟು ಹೊರತುಪಡಿಸಿದರೆ ಅಣೆಕಟ್ಟೆಯಲ್ಲಿ 8.27 ಟಿಎಂಸಿ ಅಡಿಯಷ್ಟು ಮಾತ್ರ ನೀರಿದೆ. ಹಾಸನ ಜಿಲ್ಲೆಯಲ್ಲೂ ಹೇಮಾವತಿ, ವಾಟೆ ಹೊಳೆ, ಯಗಚಿ ಜಲಾಶಯ ಭರ್ತಿಯಾಗದ ಕಾರಣ ಬೆಳೆಗಳು ಬಾಡುತ್ತಿವೆ. ಹೇಮಾವತಿ ಜಲಾಶಯದಲ್ಲಿ ಕಳೆದ ವರ್ಷ ಇದೇ ಅವಧಿಗೆ 18 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಸದ್ಯ ಜಲಾಶಯದ ನೀರನ್ನು ಕುಡಿಯಲು ಮಾತ್ರ ಬಳಸಿಕೊಳ್ಳಲಾಗುತ್ತಿದೆ.
  • ತಮಿಳುನಾಡು ವಾದ: ಕಾವೇರಿ ನ್ಯಾಯಮಂಡಳಿ ಸೂಚನೆ ಮೇರೆಗೆ ಕರ್ನಾಟಕ ನೀರು ಹರಿಸಿಲ್ಲ. ಈ ಸಾಲಿನಲ್ಲಿ ಅಂದಾಜು 50 ಟಿಎಂಸಿ ಅಡಿ ನೀರನ್ನು ಬಿಡಬೇಕಿತ್ತು, (ಇಲ್ಲಿಯ ವರೆಗೆ 44 ಟಿ.ಎಂಸಿ ನೀರನ್ನು ತಮಿಳುನಾಡಿಗೆ ಬಿಟ್ಟಿದೆ ಎಂದಾಯಿತು).. ತಕ್ಷಣವೇ 25 ಟಿಎಂಸಿ ಅಡಿ ನೀರು ಹರಿಸಲು ಸೂಚಿಸಬೇಕು ಎಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‍ಗೆ ಮಧ್ಯಂತರ ಅರ್ಜಿ ಸಲ್ಲಿಸಿತ್ತು.
  • ಕರ್ನಾಟಕದ ವಾದ: ಈಗಾಗಲೇ ಕಾವೇರಿ ಕಣಿವೆಯಲ್ಲಿ ಬರುವ ಮೂರು ಜಲಾಶಯಗಳು ಅರ್ಧದಷ್ಟು ತುಂಬಿಲ್ಲ. ತೀವ್ರ ಮಳೆ ಕೊರತೆ ಎದುರುಸುತ್ತಿರುವ ಕರ್ನಾಟಕ, ಮುಂದಿನ ದಿನಗಳಲ್ಲಿ ಕುಡಿಯಲಿಕ್ಕೆ ನೀರಿಲ್ಲದ ಪರಿಸ್ಥಿತಿ ಎದುರಿಸಬೇಕಾಗಿದೆ. ಕಾವೇರಿ ನದಿ ಕಣಿವೆಯ, ಕೆ.ಆರ್.ಎಸ್, ಕಬಿನಿ ಹಾಗೂ ಹೇಮಾವತಿ ಮೂರು ಡ್ಯಾಮ್‍ಗಳಲ್ಲಿ ಒಟ್ಟು ಸೇರಿಸಿದ್ರೂ ಇರೋದು ಬರೀ 51 ಟಿಎಂಸಿ ನೀರು. ಇದ್ರಲ್ಲಿ 40 ಟಿಎಂಸಿ ನೀರು ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಿಗೆ ಕುಡಿಯಲಿಕ್ಕೆ ಬೇಕು ಎಂದು ಕರ್ನಾಟಕ ವಾದ ಮಂಡಿಸಿತ್ತು.
  • ಕ್ಯೂಸೆಕ್‌ ಮತ್ತು ಟಿಎಂಸಿ: ಕ್ಯೂಸೆಕ್ ಎಂಬುದು Cubic feet per Secondನ ಹ್ರಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ.
  • 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.[೧] Archived 2016-09-08 ವೇಬ್ಯಾಕ್ ಮೆಷಿನ್ ನಲ್ಲಿ.

ತಮಿಳು ನಾಡಿಗೆ ಲಾಭ

[ಬದಲಾಯಿಸಿ]
  • 2012ರ ಸೆಪ್ಟಂಬರ್ ತಿಂಗಳಿನಲ್ಲೂ ಇಂತಹುದೇ ಬಿಕ್ಕಟ್ಟು ಎದುರಾಗಿತ್ತು. ಸೆಪ್ಟಂಬರ್ 12ರಿಂದ 19ರ ತನಕ ಏಳು ದಿನಗಳ ಕಾಲ ನಿತ್ಯ ಹತ್ತು ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಬೇಕೆಂಬ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಬೇಕಾಗಿ ಬಂದಿತ್ತು.
  • ಇದೀಗ 50 ಟಿ.ಎಂ.ಸಿ. ಅಡಿಗಳಿಗೆ ಬೇಡಿಕೆ ಇಟ್ಟಿದ್ದ ತಮಿಳುನಾಡು ಕಡೆಗೆ ಮಳೆಯ ಅಭಾವದ ಸ್ಥಿತಿಯನ್ನು ಮನ್ನಿಸಿ ತನ್ನ ಬೇಡಿಕೆಯನ್ನು 26 ಟಿ.ಎಂ.ಸಿ. ಅಡಿಗಳಿಗೆ ಇಳಿಸಿತ್ತು. ಈ ಬೇಡಿಕೆಯ ಅರ್ಧದಷ್ಟನ್ನು (ಸುಮಾರು 13 ಟಿ.ಎಂ.ಸಿ.ಅಡಿಗಳು) ಸುಪ್ರೀಂ ಕೋರ್ಟ್ ಒಪ್ಪಿ ಆದೇಶ ನೀಡಿದೆ. 2012ರ ಆದೇಶಕ್ಕೆ ಹೋಲಿಸಿದರೆ ಈ ಆದೇಶ ರಾಜ್ಯದ ಪಾಲಿಗೆ ತುಸು ಹೆಚ್ಚು ಕಠಿಣವಾಗಿರುವುದು ನಿಜ.ಆದರೆ ರಾಜ್ಯದ ಪಾಲಿಗೆ ಈ ಸಾಲಿನ ನೈಋತ್ಯ ಮಾರುತದ ಮಳೆಗಾಲ ಇಲ್ಲಿಗೇ ಮುಗಿದು ಹೋಗಿಲ್ಲ. ಸೆಪ್ಟಂಬರ್ ಮತ್ತು ಅಕ್ಟೋಬರ್ 15ರ ಅವಧಿಯಲ್ಲಿ 80 ಟಿ.ಎಂ.ಸಿ. ಅಡಿಗಳಷ್ಟು ನೀರು ಕರ್ನಾಟಕದ ಜಲಾಶಯಗಳಿಗೆ ಹರಿದು ಬಂದಿರುವ ನಿದರ್ಶನಗಳಿವೆ.
  • ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸದೆ ಗತ್ಯಂತರ ಇರುವುದಿಲ್ಲ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರು ನ್ಯಾಯಾಲಯ ನಿಂದನೆ ಎದುರಿಸಬೇಕಾಯಿತು. ಇದೀಗ ಐದು ದಿನಗಳ ಕಾಲ ನ್ಯಾಯಾಲಯದ ಆದೇಶವನ್ನು ಪಾಲಿಸಿ ಆನಂತರ ಇನ್ನು ಬಿಡುಗಡೆ ಸಾಧ್ಯವಿಲ್ಲ ಎಂಬುದಾಗಿ ಪುನರ್ ಪರಿಶೀಲನೆಯ ಅರ್ಜಿ ಹಾಕುವ ಆಯ್ಕೆ ರಾಜ್ಯದ ಮುಂದೆ ಇದ್ದೇ ಇದೆ ಎನ್ನುತ್ತಾರೆ ಕಾನೂನು ತಜ್ಞರು.
  • ಜಲ ಮಾಪನ ಕೇಂದ್ರ: ಕೃಷ್ಣರಾಜಸಾಗರ ಮತ್ತು ಕಬಿನಿ ಜಲಾಶಯಗಳ ಕೆಳಗೆ ಉಭಯ ರಾಜ್ಯಗಳ ಗಡಿ ಭಾಗದ ಕೇಂದ್ರೀಯ ಜಲಮಾಪನ ಕೇಂದ್ರ ಬಿಳಿಗುಂಡ್ಲು. ಬಿಳಿಗುಂಡ್ಲುವಿನಿಂದ ತಮಿಳುನಾಡಿನ ಮೆಟ್ಟೂರು ಅಣೆಕಟ್ಚೆಯ ನಡುವಣ ದೂರ 45 ಕಿ.ಮೀ.ಗಳು. ಈ ಮಧ್ಯಂತರ ಜಲಾನಯನ ಪ್ರದೇಶದಲ್ಲಿ ಉತ್ಪತ್ತಿ ಯಾಗುವ ನೀರು ತಮಿಳುನಾಡಿನ ಮೆಟ್ಟೂರಿಗೆ ಹರಿಯುತ್ತದೆ.
  • ಸುಪ್ರೀಂ ಹೀಗೆ ಹೇಳಿತ್ತು: 08.10.12ರ ಕಾವೇರಿ ತಗಾದೆಯ ವಿಚಾರಣೆಯ ಸಂದರ್ಭದಲ್ಲಿ ರಾಜ್ಯದ ಕಾವೇರಿ ಕಣಿವೆಯಲ್ಲಿ ನಡೆದಿದ್ದ ಚಳವಳಿಗಳ ಕುರಿತು ಸುಪ್ರೀಂ ಕೋರ್ಟ್ ಹೇಳಿದ್ದ ಮಾತುಗಳು- ಚಳಿವಳಿಗಳಿಂದ ಯಾವ ಉದ್ದೇಶವೂ ನೆರವೇರುವುದಿಲ್ಲ. ಕೆಲವೊಮ್ಮೆ ಅವುಗಳಿಂದ ಉತ್ತಮ ಕೇಸೊಂದು ಕೆಟ್ಟು ಹೋಗಲೂಬಹುದು. ಈ ಇಡೀ ವಿದ್ಯಮಾನದಲ್ಲಿ ಸೂಕ್ಷ್ಮ ವಿಚಾರವೆಂಬುದು ಏನಾದರೂ ಇದ್ದರೆ ಅದು ರೈತರ ಬವಣೆ ವಿನಾ ಇನ್ನೇನೂ ಅಲ್ಲ.

ವಿವಾದದ ಹಿನ್ನೋಟ

[ಬದಲಾಯಿಸಿ]
  • 1990ರ ಜೂನ್ ಎರಡರಂದು ರಚಿಸಲಾಗಿದ್ದ ಕಾವೇರಿ ಜಲವಿವಾದ ನ್ಯಾಯಮಂಡಳಿ ಸುಮಾರು 16 ವರ್ಷಗಳ ಕಾಲ ಕಲಾಪ ನಡೆಸಿ 2007ರ ಫೆಬ್ರವರಿ ಐದರಂದು ತನ್ನ ಅಂತಿಮ ವರದಿ ಸಲ್ಲಿಸಿತ್ತು. ಕಾವೇರಿ ಕಣಿವೆಯಲ್ಲಿ ಲಭ್ಯವಿರುವ ನೀರನ್ನು 740 ಟಿ.ಎಂ.ಸಿ. ಎಂದು ಅಂದಾಜು ಮಾಡಿದ ನ್ಯಾಯಮಂಡಳಿ ತಮಿಳುನಾಡಿಗೆ 419 ಟಿ.ಎಂ.ಸಿ.ಗಳು, ಕರ್ನಾಟಕಕ್ಕೆ 270 ಟಿ.ಎಂ.ಸಿ.ಗಳು, ಕೇರಳಕ್ಕೆ 30 ಮತ್ತು ಪುದುಚೆರಿಗೆ ಏಳು ಟಿ.ಎಂ.ಸಿ.ಗಳನ್ನು ಹಂಚಿಕೆ ಮಾಡಿತ್ತು. ಪರಿಸರ ಸಂರಕ್ಷಣೆಗೆಂದು ಕಾವೇರಿ ಕೊಳ್ಳದಲ್ಲಿ 10 ಟಿ.ಎಂ.ಸಿ. ನೀರನ್ನು ಉಳಿಸಬೇಕೆಂದು ಸೂಚಿಸಿತ್ತು.
  • ಕಾವೇರಿ ಕಣಿವೆಯ ನೀರಿನ ಇಳುವರಿಗೆ ಕರ್ನಾಟಕದ ಕೊಡುಗೆ ಶೇ53 ಆದರೆ ಹಂಚಿಕೆಯಾಗಿರುವ ಪಾಲು ಶೇ36 ಮಾತ್ರ. ಕಾವೇರಿ ಕಣಿವೆಗೆ ಕೇವಲ ಶೇ 30ರಷ್ಟು ಕೊಡುಗೆ ನೀಡಿರುವ ತಮಿಳುನಾಡು ಇಳುವರಿಯ ಶೇ57ರಷ್ಟು ನೀರನ್ನು ಗಿಟ್ಟಿಸಿದೆ. ಅಂದಿನ ಮಹಾರಾಜರ ಮೈಸೂರು ಬ್ರಿಟಿಷರ ಆಳ್ವಿಕೆಯ ಅಧೀನದಲ್ಲಿದ್ದ ಸಾಮಂತ ಸಂಸ್ಥಾನವಾಗಿತ್ತು. ಹೀಗಾಗಿ 1892 ಮತ್ತು 1924ರ ಒಪ್ಪಂದಗಳನ್ನು ಮೈಸೂರಿನ ಮೇಲೆ ಹೇರಲಾಗಿತ್ತು. ಈಗ ಸುಪ್ರೀಂಕೋರ್ಟ್ ಆದೇಶದಂತೆ ನೀರು ಬಿಟ್ಟರೆ ಶೇ 10ರಷ್ಟು ನೀರಾವರಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಜಲ ವಿವಾದ ತಜ್ಞರು ಅಭಿಪ್ರಾಯ ಪಡುತ್ತಾರೆ.[]

ಕರ್ನಾಟಕದಲ್ಲಿ ಹಾಲಿ ಪರಿಸ್ಥಿತಿ

[ಬದಲಾಯಿಸಿ]
  • 7-9-2016;ಕಳೆದ 10ವರ್ಷಗಳಲ್ಲಿ
ಕಾವೇರಿ ಜಲಾನಯನ ಪ್ರದೇಶದಲ್ಲಿ ಬಿದ್ದ ಮಳೆ ಪ್ರಮಾಣ.ಮಿ.ಮೀಟರುಗಳಲ್ಲಿ
ವರ್ಷ ಕೊಡಗು ಹಾಸನ ಮೈಸೂರು ಮಂಡ್ಯ
2006 334.8 83.6 63.6 33.1
2007 550.4 104.9 133.2 112.0
2008 252.5 152.8 15.6 51.2
2009 455.8 205.8 151.1 1195
2010 330.4 270.7 97.6 84.6
2011 250.3 50.1 60.1 16.2
2012 355.3 28.0 53.9 87.0
2013 353.5 148.9 71.5 220.2
2014 527.4 263.0 208.6 135.9
2015 325.8 117.4 129.4 103.6
ದಾಖಲೆ ಮಳೆ 693.7(1950) 319.5(1931 334.0(1940 299.2(1974
ಆದಾರ ಭಾರತೀಯ ಹವಾಮಾನ ಇಲಾಖೆ
ವರದಿ ಪ್ರಜಾವಾಣಿ 8-9-2016
ಜಿಲ್ಲಾವಾರು ನೀರಾವರಿ ಪ್ರದೇಶ
ಜಿಲ್ಲೆ ಒಟ್ಟು ಭುಮಿ ಬಿತ್ತನೆ ಸಿದ್ಧತೆ
ಮೈಸುರು 1.14ಲಕ್ಷ 65 ಸಾವಿರ 49 ಸಾವಿರ
ಚಾಮರಾಜನಗರ 55ಸಾವಿರ 15 ಸಾವಿರ 40 ಸಾವಿರ
ಹಾಸನ 33 ಸಾವಿರ 7 ಸಾವಿರ 26 ಸಾವಿರ
ಮಂಡ್ಯ 2.05ಲಕ್ಷ 7900 ಸಾವಿರ 1.20 ಲಕ್ಷ
ನೀರು ಸಂಗ್ರಹ ಟಿ.ಎಂ.ಸಿ.ಅಡಿಗಳಲ್ಲಿ
ಜಲಾಶಯ ಗಟಿಷ್ಠ ಸಾಮಥ್ರ್ಯ ಈಗ ಇರುವುದು
ಕೆಆರ್’ಎಸ್ 49.45 18.27
ಹೇಮಾವತಿ 37.10 17
ಕಬಿನಿ 19.5 14.82
ಹಾರಂಗಿ 8.5 6.7
ಒಟ್ಟು 114.55 58.79

[]

ಪರಿಹಾರ

[ಬದಲಾಯಿಸಿ]
  • ಸರ್ವೋಚ್ಚ ನ್ಯಾಯಾಲಯವು ಪ್ರತಿದಿನವೂ 15 ಸಹಸ್ರ ಕ್ಯುಸೆಕ್‌ ನೀರನ್ನು ಬಿಡುವಂತೆ ಆದೇಶಿಸಿರುವುದನ್ನು ನಮ್ಮ ಸಮಸ್ಯೆ ಎಂದು ನಾವು ಭಾವಿಸುತ್ತಿದ್ದೇವೆ. ಆದರೆ ಕಾವೇರಿ ನದಿ ವಿವಾದಕ್ಕೆ ಸಂಬಂಧಿಸಿದಂತೆ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಯಿದು: ಕರ್ನಾಟಕದಲ್ಲಿ ಬೀಳುವ ಮಳೆಯ ಮೂಲಕ ಕಾವೇರಿ ಮತ್ತು ಅದರ ಉಪನದಿಗಳಲ್ಲಿ ಸಂಗ್ರಹವಾಗುವ ನೀರಿನ ಮೇಲೆ ಕನ್ನಡಿಗರಿಗೆ ಮೊದಲ, ಸಮಗ್ರ ಮತ್ತು ನಿರಂಕುಶ ಹಕ್ಕು ಇದೆ ಎನ್ನುವುದನ್ನು ನ್ಯಾಯಾಲಯಗಳಾಗಲಿ, ನ್ಯಾಯಮಂಡಳಿ ಯಾಗಲಿ (ಟ್ರಿಬ್ಯುನಲ್) ಅಥವಾ ಕೇಂದ್ರ ಸರ್ಕಾರವಾಗಲಿ ಒಪ್ಪುವುದಿಲ್ಲ. ಆದರೆ ನಮ್ಮ ವಾದಗಳನ್ನು ಈ ಅರಿವಿನ ಆಧಾರದ ಮೇಲೆಯೇ ಮಾಡುತ್ತಿದ್ದೇವೆ. ಬೇರೆಯವರು ನಮ್ಮ ವಾದವನ್ನು ಒಪ್ಪದಿರುವುದಕ್ಕೆ ಇರುವ ಕಾರಣವು ಸರಳವಾದುದು.
  • ಓದುಗರಲ್ಲಿ ನನ್ನ ಸರಳ ಸಲ್ಲಿಕೆಯೆಂದರೆ, ನೀರು ಹಂಚಿಕೆಗೆ ಸಂಬಂಧಿಸಿದ ನ್ಯಾಯಸಿದ್ಧಾಂತವನ್ನು, ನೀರಿನ ಹಕ್ಕುಗಳಿಗೆ ಸಂಬಂಧಿಸಿದ ನಮ್ಮ ಗ್ರಹಿಕೆಗಳನ್ನು ಮರುಚಿಂತನೆ ಮಾಡಬೇಕಾದ ಸವಾಲನ್ನು ಎದುರಿಸುತ್ತಿದ್ದೇವೆ.[]
  • ಮೋಹನ ಕಾತರಕಿ ಕಾನೂನು ತಜ್ಜ್ಞರ ಅಭಿಪ್ರಾಯ:
  • ಪ್ರ: ಕರ್ನಾಟಕದ ಕಾನೂನು ತಂಡ ರಾಜ್ಯದಲ್ಲಿ ಎದುರಾಗಿರುವ ಮಳೆಯ ಕೊರತೆಯ ಕುರಿತು ಸುಪ್ರೀಂ ಕೋರ್ಟ್‌ಗೆ ಸಮರ್ಥವಾಗಿ ಮನವರಿಕೆ ಮಾಡಲಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆಯಲ್ಲ?
  • ಉ: ಪ್ರಕರಣದ ಕುರಿತು ಎಷ್ಟು ಬೇಕೋ ಅಷ್ಟು ಮಾಹಿತಿಯನ್ನು ಕಾನೂನು ತಂಡ ನ್ಯಾಯಮೂರ್ತಿಗಳ ಎದುರು ಸಲ್ಲಿಸಿದೆ. ಅಗತ್ಯ ವಾದವನ್ನೂ ಮಂಡಿಸಲಾಗಿದೆ. ತಜ್ಞರು ಅಧ್ಯಯನ ನಡೆಸಿ, ನೂರಾರು ಪುಟಗಳ ಮಾಹಿತಿ ಸಿದ್ಧಪಡಿಸಿ ನ್ಯಾಯಾಲಯಕ್ಕೆ ಪ್ರಸ್ತುತಪಡಿಸಿದ್ದಾರೆ. ಇಂಥ ಮಾಹಿತಿಯನ್ನು ನೀಡಿಲ್ಲ ಎಂಬ ಮಾತೇ ಇಲ್ಲ. ಮಾಹಿತಿ ಮತ್ತು ಸಮರ್ಥ ವಾದದ ಕೊರತೆಯಿಂದಾಗಿ ಪ್ರಕರಣದಲ್ಲಿ ಸೋಲಾಗಿಲ್ಲ. ಪ್ರಕರಣದ ವಿಚಾರಣೆ ನಡೆಯುವಾಗ ವಾದ ಮಂಡಿಸಲು ಅತ್ಯಂತ ಕಡಿಮೆ ಕಾಲಾವಕಾಶ ಇರುತ್ತದೆ. ಅಂಥ ಸಂದರ್ಭಗಳಲ್ಲಿ ವಾದ ಮಂಡಿಸುವುದೂ ಒಂದು ಕಲೆ. ಅಂತೆಯೇ ಸೂಚ್ಯವಾಗಿ ಮಾಹಿತಿಯನ್ನು ನೀಡಲಾಗಿದೆ.
  • ನ್ಯಾಯಮೂರ್ತಿಗಳು ಮೇಲುಸ್ತುವಾರಿ ಸಮಿತಿಗೆ ಸೂಚಿಸಬಹುದು ಎಂದು ಭಾವಿಸಿ, ಐದು ದಿನಗಳ ಕಾಲ 10,000 ಕ್ಯೂಸೆಕ್‌ ನೀರು ಬಿಡಲು ಒಪ್ಪಿಕೊಂಡಿದ್ದೆವು. ನ್ಯಾಯಮೂರ್ತಿಗಳು 10 ದಿನಗಳ ಕಾಲ ನಿತ್ಯವೂ 15,000 ಕ್ಯೂಸೆಕ್‌ ನೀರು ಬಿಡಲು ಸೂಚಿಸಿದರು. 2012ರ ಸೆಪ್ಟೆಂಬರ್‌ನಲ್ಲೂ ಇದೇ ಸ್ಥಿತಿ ಎದುರಾಗಿತ್ತು. ಆಗ ನಾವು 8 ದಿನಗಳ ಕಾಲ 10,000 ಕ್ಯೂಸೆಕ್‌ ನೀರು ಬಿಡಲು ಒಪ್ಪಿದ್ದರಿಂದ ನ್ಯಾಯಾಲಯ ಸಮ್ಮತಿ ಸೂಚಿಸಿ, ಕಾವೇರಿ ನದಿ ಪ್ರಾಧಿಕಾರಕ್ಕೆ ಪ್ರಕರಣದ ವಿಚಾರಣೆಯನ್ನು ಒಪ್ಪಿಸಿತ್ತು. ಕಾನೂನು ತಂಡ ಈಗಲೂ ತನ್ನ ಜವಾಬ್ದಾರಿಯನ್ನು ನಿರ್ವಹಿಸಿದೆ. ತಜ್ಞರು ಅಧ್ಯಯನ ನಡೆಸಿ ಕಾನೂನು ತಂಡ ನಿರ್ವಹಿಸಿರುವ ಜವಾಬ್ದಾರಿಯ ಸತ್ಯಾಸತ್ಯತೆ ಅರಿಯಬಹುದು.
  • 1924ರ ಒಪ್ಪಂದದ ಪ್ರಕಾರ ತಮಿಳುನಾಡಿಗೆ ವಾರ್ಷಿಕ 380 ಟಿಎಂಸಿ ಅಡಿ ನೀರನ್ನು ನೀಡುತ್ತಿದ್ದ ಕರ್ನಾಟಕದ ಪರ ನ್ಯಾಯಮಂಡಳಿ ಎದುರು ವಾದ ಮಂಡಿಸಿರುವ ಇದೇ ತಂಡ ಆ ಪ್ರಮಾಣವನ್ನು 192 ಟಿಎಂಸಿ ಅಡಿಗೆ ಇಳಿಸಿದೆ. 1974ರವರೆಗೂ ಈ ಕುರಿತು ಧ್ವನಿಯೇ ಕೇಳಿ ಬಂದಿರಲಿಲ್ಲ. ಆ ಐತಿಹಾಸಿಕ ಒಪ್ಪಂದವನ್ನು ರದ್ದುಪಡಿಸಿದ ಹೆಗ್ಗಳಿಕೆ ಈ ತಂಡದ್ದಾಗಿದೆ. ಅಲ್ಲದೆ, ತಮಿಳುನಾಡಿನ ಪ್ರಮಾಣವನ್ನು ಇನ್ನೂ 40 ಟಿಎಂಸಿ ಅಡಿಗೆ ತಗ್ಗಿಸುವಂತೆ ಮನವಿ ಸಲ್ಲಿಸಿ ಹೋರಾಟ ನಡೆಸಲಾಗುತ್ತಿದೆ. ಅಷ್ಟೇ ಅಲ್ಲದೆ, ಕೃಷ್ಣಾ ಕಣಿವೆಯ ಆಲಮಟ್ಟಿ ಜಲಾಶಯದ ಎತ್ತರವನ್ನು ಮೊದಲು 512 ಅಡಿಯಿಂದ 519.6ಕ್ಕೂ, ನಂತರ 524ಕ್ಕೂ ಹೆಚ್ಚಿಸುವಂತೆ ಸಮರ್ಥ ವಾದ ಮಂಡಿಸಿದ್ದೂ ಈ ತಂಡವೇ ಎಂಬುದು ಉಲ್ಲೇಖನೀಯ ಅಲ್ಲವೇ? ಕೃಷ್ಣಾ ನೀರಿನ ಬಳಕೆಯನ್ನು 734 ಟಿಎಂಸಿ ಅಡಿಗೆ ಹೆಚ್ಚಿಸಲಾಗಿದೆ. ಅದರಲ್ಲಿ 173 ಟಿಎಂಸಿ ಅಡಿ ಹೆಚ್ಚುವರಿ ಬಳಕೆಗೂ ಅನುಮತಿ ಪಡೆಯಲಾಗಿದೆ.
  • ಪ್ರ: ಮಹಾದಾಯಿ ಆಯಿತು ಈಗ ಕಾವೇರಿಯ ಸರದಿ. ಇದೇ ರೀತಿ ಕರ್ನಾಟಕಕ್ಕೆ ಅನ್ಯಾಯ ಆಗುತ್ತಲೇ ಇದೆ. ಇದಕ್ಕೆ ಕೊನೆ ಎಂಬುದೇ ಇಲ್ಲವೇ?
  • ಉ: ಕರ್ನಾಟಕ ಕಾವೇರಿ ಕಣಿವೆಯ ಮೇಲ್ಭಾಗದ ರಾಜ್ಯ. ಅಮೆರಿಕದ ಕೊಲೆರಾಡೋ ರಾಜ್ಯವೂ ಇದೇ ಕಾರಣದಿಂದಾಗಿ ನೀರಿನ ವಿವಾದಗಳ ಅನೇಕ ಪ್ರಕರಣಗಳಲ್ಲಿ ಸೋಲನುಭವಿಸಿದೆ. ಮೇಲ್ಭಾಗದಲ್ಲಿರುವ ರಾಜ್ಯ ಗೆಲ್ಲುವುದು ಅಷ್ಟು ಸರಳವಲ್ಲ. ಕೆಳ ಭಾಗದ ರಾಜ್ಯಗಳ ಬಗ್ಗೆ ನ್ಯಾಯಾಲಯಗಳಿಗೆ ಅನುಕಂಪ ಇರುತ್ತದೆ.
  • ನೀರನ್ನು ಕೊಡುವುದೇ ಇಲ್ಲ ಎಂದು ಹೇಳಲೂ ಬರುವುದಿಲ್ಲ. ಕೊಡಲೇಬೇಕು. ಎಷ್ಟು ಎನ್ನುವುದೇ ಮುಖ್ಯ. ನ್ಯಾಯಾಲಯ ನೀರು ಕೊಡಲು ಸೂಚಿಸಿದಾಗ ಅದೊಂದು ಸಂಪೂರ್ಣ ಸೋಲು ಎಂದು ಪರಿಗಣಿಸುವುದು ತಪ್ಪು. ಸೋಲು– ಗೆಲುವು ಎರಡೂ ಇರುತ್ತವೆ. ಈಗ ನಮ್ಮ ಸೋಲಿನ ಪಾಲು ಹೆಚ್ಚಾಗಿದೆ ಅಷ್ಟೆ.
  • ಪ್ರ: ಕರ್ನಾಟಕಕ್ಕೆ ಐತಿಹಾಸಿಕ ಅನ್ಯಾಯ ಆಗಿದೆ. ಕಾನೂನು ಎರಡೂ ಕಡೆ ನ್ಯಾಯ ಸಲ್ಲಿಸಬೇಕಲ್ಲವೇ? ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡುವ ಶಕ್ತಿ ಕಾನೂನಿಗೆ ಇರಬೇಕಲ್ಲವೇ?
  • ಉ: ನೀರನ್ನು ಎಲ್ಲ ರಾಜ್ಯಗಳೂ ಹಂಚಿಕೊಳ್ಳಬೇಕು ಎಂದು ಜಲ ವಿವಾದ ಕಾಯ್ದೆ ಹೇಳುತ್ತದೆ. ಎಷ್ಟು ಪಾಲು ದೊರೆಯಬೇಕು ಎಂಬುದಕ್ಕೆ ಆಯಾ ಜಲಾನಯನ ಪ್ರದೇಶ, ಹಂಚಿಕೆಗೆ ಮೊದಲು ಮಾಡಲಾಗುತ್ತಿದ್ದ ಬಳಕೆಯ ಪ್ರಮಾಣ, ಜನಸಂಖ್ಯೆ, ಮಳೆಯ ಪ್ರಮಾಣವನ್ನೂ ಪರಿಗಣಿಸಲಾಗುತ್ತದೆ. ಇತಿಹಾಸದಲ್ಲಿ ಬಳಕೆ ಮಾಡಿಕೊಳ್ಳಲಾದ ಪ್ರಮಾಣವೂ ನದಿ ಪಾತ್ರದ ಮೇಲ್ಭಾಗದ ರಾಜ್ಯಗಳ ಹಂಚಿಕೆಯನ್ನು ಕಡಿಮೆ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
  • ಪ್ರ: ಜಲವಿವಾದ ಕಾಯ್ದೆಗಳಲ್ಲಿ ದೋಷ ಇದೆಯೇ? ಇದ್ದರೆ ಅವುಗಳಿಗೆ ತಿದ್ದುಪಡಿ ತರಬೇಕೇ?
  • ಉ: ನೀರು ಹಂಚಿಕೆ ಮಾಡುವಾಗ ಹೊಸ ಬಳಕೆದಾರರು ಮತ್ತು ಹಳೆಯ ಬಳಕೆದಾರರನ್ನ ಪರಿಗಣಿಸಲಾಗುತ್ತದೆ. ನದಿಯ ಮೇಲ್ಭಾಗದ ರಾಜ್ಯ ಅಣೆಕಟ್ಟೆ ಕಟ್ಟಿ ನೀರು ಬಳಸಲು ಹೋದಾಗ ಆ ರಾಜ್ಯವನ್ನು ಹೊಸ ಬಳಕೆದಾರ ಎಂದೇ ಪರಿಗಣಿಸಲಾಗುತ್ತದೆ. ಸಂಸತ್‌ನಲ್ಲಿ ಈ ಕುರಿತು ಸೂಕ್ತ ಕಾಯ್ದೆ ರಚಿಸಿದರೆ ಮಾತ್ರ ಹೊಸ ವ್ಯಾಖ್ಯಾನ ದೊರೆಯಲು ಸಾಧ್ಯ. ಅಲ್ಲಿಯವರೆಗೆ ನ್ಯಾಯಾಲಯಗಳು ಸಮರ್ಪಕವಾಗಿ ನೀರನ್ನು ಹಂಚಿಕೆ ಮಾಡುವುದು ಕಷ್ಟಕರ. ರಾಷ್ಟ್ರೀಯ ಜಲ ನೀತಿ ಜಾರಿಯಾದರೆ ಮಾತ್ರ ನ್ಯಾಯ ದೊರೆಯಲು ಸಾಧ್ಯ.[೧೦]

2016 ಸೆಪ್ಟೆಂಬರ್,05 ರ ಆದೇಶ ಮಾರ್ಪಾಡು

[ಬದಲಾಯಿಸಿ]
  • 12 Sep, 2016

ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ೨೦೧೬ ಸೆಪ್ಟಂಬರ್ 5ರಂದು ನೀಡಿರುವ ಆದೇಶವನ್ನು ಮಾರ್ಪಾಡು ಮಾಡುವಂತೆ ಕೋರಿ ಕರ್ನಾಟಕ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ೧೨--೯-೨೦೧೬ ಲ್ಲಿ ನಡೆದಿದ್ದು ತಮಿಳುನಾಡಿಗೆ ಪ್ರತಿ ದಿನ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶ ನೀಡಲಾಯಿತು. ೨೦೧೬ ಸೆ.5 ರಂದು ನೀಡಿದ ತೀರ್ಪಿನಲ್ಲಿ ಕರ್ನಾಟಕ 10 ದಿನಗಳ ಕಾಲ 15 ಸಾವಿರ ಕ್ಯೂಸೆಕ್ ನೀರು ಹರಿ ಬಿಡುವಂತೆ ಹೇಳಲಾಗಿತ್ತು. ಆದರೆ ೧೨-೯-೨೦೧೬ ರಲ್ಲಿ ನೀಡಿದ ತೀರ್ಪಿನ ಪ್ರಕಾರ ತಮಿಳುನಾಡಿಗೆ ಸೆ. 20ರ ವರೆಗೆ ಪ್ರತಿ ದಿನ 12 ಸಾವಿರ ಕ್ಯೂಸೆಕ್ ನೀರು ಬಿಡಬೇಕಾಯಿತು.

  • ಸೆ.5 ರ ಆಜ್ಞೆ ಪ್ರಕಾರ ಬಿಡಬೇಕಾದ ನೀರು:15000ಕ್ಯೂ.X 10 ದಿನ/11524ಕ್ಯೂ.(=೧.ಟಿ.ಎಮ್.ಸಿ.ಅಡಿ)= 13.01179736 ಟಿ.ಎಂ.ಸಿ.ಅಡಿ.
  • ಸೆ.12 ರ ಆಜ್ಞೆ ಪ್ರಕಾರ ಬಿಡಬೇಕಾದ ನೀರು(ಸೆಪ್ಟೆಂಬರ್,05ರಿಂದ 9 ದಿನ:(12000X9/11524)=9.371745922 +(15000X7ದಿನ/11524)=9.111419646 ಟಿ.ಎಂ.ಸಿ.ಅಡಿ.
  • ಒಟ್ಟು ಬಿಡಬೇಕಾದ ನೀರು : 9.371745922 + 9.111419646=18.48316557 ಟಿ.ಎಂ.ಸಿ.ಅಡಿ.
  • ನೀರು ಬಿಡುವುದನ್ನು ಕಡಿಮೆ ಮಾಡಲು ಕೇಳಿದ್ದಕ್ಕೆ ಮೊದಲಿಗಿಂತ 5.47139821ಟಿ.ಎಂ.ಸಿ ಅಡಿ ಹೆಚ್ಚು ಬಿಡಲು ಹೇಳಿದೆ ಸುಪ್ರೀಮ್ ಕೋರ್ಟು ಆದೇಶ!!. [೧೧]

ಅಭಿಪ್ರಾಯ

[ಬದಲಾಯಿಸಿ]
  • 2013 ರಲ್ಲಿ ಕಾವೇರಿ ಮೇಲುಸ್ತುವಾರಿ ಸಮಿತಿ ರಚಿಸಿ ಗೆಜೆಟ್‌ ಅಧಿಸೂಚನೆ ಹೊರಡಿಸಿದ ಬಳಿಕ ನೀರಿನ ಹಂಚಿಕೆ ವಿಷಯದಲ್ಲಿ ಮಧ್ಯಪ್ರವೇಶಿಸುವ ಅಧಿಕಾರ ಸುಪ್ರೀಂಕೋರ್ಟ್‌ಗೆ ಇಲ್ಲ. ವ್ಯಾಪ್ತಿ ಮೀರಿ ಆದೇಶ ಹೊರಡಿಸಿದ ಸುಪ್ರೀಂಕೋರ್ಟ್‌ ಧೋರಣೆ ಸರಿಯಲ್ಲ ಎಂದು ಆಚಾರ್ಯ ಆಕ್ಷೇಪಿಸಿದರು.‘ತಮಿಳುನಾಡಿಗೆ ನೀರು ಬಿಡಬೇಕು ಎಂದು ಸುಪ್ರೀಂಕೋರ್ಟ್‌ ಎರಡು ಬಾರಿ ನೀಡಿರುವ ಆದೇಶವೇ ಕಾನೂನು ಬಾಹಿರ ಎಂದು ಪ್ರತಿಪಾದಿಸಿರುವ ಹಿರಿಯ ವಕೀಲ ಬಿ.ವಿ. ಆಚಾರ್ಯ ಅವರು, ಸರ್ಕಾರಕ್ಕೆ ಧೈರ್ಯ ಇದ್ದರೆ ಆದೇಶ ಪಾಲಿಸುವುದಿಲ್ಲ ಎಂಬ ನಿಲುವು ತೆಗೆದುಕೊಳ್ಳಲಿ’ ಎಂದರು.[೧೨]
  • 13 Sep, 2016:"ಕಾವೇರಿ ವಿಷಯವಾಗಿ ಬೆಂಗಳೂರು ಪ್ರಕ್ಷುಬ್ಧವಾಗಿದ್ದು, ಸಚಿವ ಸಂಪುಟ ಸಭೆಯಲ್ಲಿ ಕಾನೂನು ಚೌಕಟ್ಟಿನಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಜನರು ಶಾಂತಿ ಕಾಪಾಡಬೇಕು", ಎಂದು ಮಂಗಳವಾರ ಮನವಿ ಮಾಡಿದ ಗೃಹ ಸಚಿವ ಜಿ. ಪರಮೇಶ್ವರ ಅವರು, ಸೋಮವಾರ ಗೋಲಿಬಾರ್‌ನಲ್ಲಿ ಬಲಿಯಾದ ಉಮೇಶ್‌ ಗೌಡ ಅವರ ಕುಟುಂಬಕ್ಕೆ ರೂ.10 ಲಕ್ಷ ನೀಡುವುದಾಗಿ ಹೇಳಿದರು.[೧೩]
  • 13 Sep, 2016: "ಹಿಂಸಾಚಾರದಿಂದ ಪರಿಹಾರ ಸಿಗುವುದಿಲ್ಲ. ಶಾಂತಿ ಕಾಪಾಡಿ. ಪ್ರತಿಭಟನೆ ಹೆಸರಲ್ಲಿ ಹಿಂಸಾಚಾರ ಸಹಿಸಲಾಗುವುದಿಲ್ಲ", ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಕರ್ನಾಟಕ ಹಾಗೂ ತಮಿಳುನಾಡು ಜನರಿಗೆ ಮನವಿ ಮಾಡಿದರು.[೧೪]
  • 12 Sep, 2016;‘ಸಂಕಷ್ಟ ಪರಿಹಾರ ಸೂತ್ರ ರಚನೆಯಾಗದಿರುವುದೇ ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಗೊಂದಲಗಳಾಗಲು ಹಾಗೂ ರಾಜ್ಯಕ್ಕೆ ಹಿನ್ನಡೆ ಆಗಲು ಕಾರಣ’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿಕೆ ನೀಡಿದರು.[೧೫]

ತೀರ್ಪಿನ ವಿವರ

[ಬದಲಾಯಿಸಿ]
  • ಒಂದೆಡೆ ಹೆಚ್ಚುವರಿ ನೀರು ಬಿಡುವ ಹೊಸ ಹೊರೆಯಡಿ ಕುಸಿದ ಕರ್ನಾಟಕ, ಇನ್ನೊಂದೆಡೆ ತುರ್ತು ಅರ್ಜಿಯಲ್ಲಿ ಕಾನೂನು ಮತ್ತು ಶಾಂತಿ ಪಾಲನೆ ಕೈ ಮೀರಿ ಹೋದೀತೆಂದು ವ್ಯಕ್ತಪಡಿಸಿದ ಶಂಕೆಗಾಗಿ ನ್ಯಾಯಾಲಯದ ಆಕ್ರೋಶಕ್ಕೆ ಕರ್ನಾಟಕ ಗುರಿಯಾಯಿತು.[೨][೧೬]
  • ಮೇಲುಸ್ತುವಾರಿ ಸಮಿತಿ:13 Sep, 2016;‘ಯಥೇಚ್ಛವಾಗಿ ನೀರಿನ ಸಂಗ್ರಹವಿದ್ದರೂ ತನ್ನ ಜಲಾಶಯಗಳಲ್ಲಿ ನೀರೇ ಇಲ್ಲ ಎಂದು ತೋರಿಸಿಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕವು ಲಭ್ಯ ನೀರನ್ನು ನೀರಾವರಿ ಸೇರಿದಂತೆ ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದೆ’ ಎಂದು ತಮಿಳುನಾಡು ದೂರಿತು. ಕೇಂದ್ರದ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಶಶಿ ಶೇಖರ್‌ ನೇತೃತ್ವದಲ್ಲಿ ಸೋಮವಾರ ನಡೆದ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಪಿ.ರಾಮಮೋಹನ ರಾವ್‌ ಈ ರೀತಿಯ ಆರೋಪ ಮಾಡಿದ್ದರು.ಇದರಿಂದಾಗಿ, ನೀರಿನ ಕುರಿತ ಸಮಗ್ರ ಮಾಹಿತಿ ಇರುವ ದಾಖಲೆಗಳನ್ನು ಸಲ್ಲಿಸುವಂತೆ ಕಾವೇರಿ ಕಣಿವೆ ಪ್ರದೇಶ ವ್ಯಾಪ್ತಿಯ ಎಲ್ಲ ನಾಲ್ಕೂ ರಾಜ್ಯಗಳಿಗೆ ಸೂಚಿಸಿದ ಸಮಿತಿಯು ಸೆ. 19ಕ್ಕೆ ಸಭೆಯನ್ನು ಮುಂದೂಡಿತು[೧೭]

ಕಾವೇರಿ ಮೇಲುಸ್ತುವಾರಿ ಸಮಿತಿ ತೀರ್ಪು

[ಬದಲಾಯಿಸಿ]
  • ನವದೆಹಲಿಯಲ್ಲಿ, 19 Sep, 2016 ರೊಂದು ತಮಿಳುನಾಡಿಗೆ 10 ದಿನಗಳ ಕಾಲ 3 ಸಾವಿರ ಕ್ಯೂಸೆಕ್‌ ನೀರು ಬಿಡಲು ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಆದೇಶ ನೀಡಲಾಯಿತು. ಕೇಂದ್ರ ಜಲಸಂಪನ್ಮೂಲ ಸಚಿವಾಲಯ ಕಾರ್ಯದರ್ಶಿ ಶಶಿಶೇಖರ್‌ ಅಧ್ಯಕ್ಷತೆಯಲ್ಲಿ ಶ್ರಮಶಕ್ತಿ ಭವನದಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು. ಪ್ರತಿ ದಿನ 3 ಸಾವಿರ ಕ್ಯೂಸೆಕ್‌ನಂತೆ ಒಟ್ಟು 30 ಸಾವಿರ ಕ್ಯೂಸೆಕ್‌ ನೀರು ಹರಿಸಲು ಸಮಿತಿ ಆದೇಶಿಸಿತ್ತು. ಸೆಪ್ಟೆಂಬರ್‌ 21ರಿಂದ 30ರವರೆಗೆ ನೀರು ಹರಿಸಲು ಸಮಿತಿ ಆದೇಶ ನೀಡಿತ್ತು.[೧೮]

ಮೇಲುಸ್ತುವಾರಿ ಸಮಿತಿ ಅಧ್ಯಕ್ಷರ ಹೇಳಿಕೆ

[ಬದಲಾಯಿಸಿ]
  • 19 ಸೆಪ್ಟಂಬರ್,2016
  • ಎರಡೂ ರಾಜ್ಯಕ್ಕೆ ಸಲ್ಲಬೇಕಾದ ನೀರಿನ ಪ್ರಮಾಣದ ಕುರಿತು ಸಭೆಯಲ್ಲಿ ಮಾಹಿತಿ ಕಲೆಹಾಕಿ ಚರ್ಚೆ ನಡೆಸಿದ ಬಳಿಕ ತಮಿಳುನಾಡಿಗೆ 10 ದಿನಗಳ ಕಾಲ 3 ಸಾವಿರ ಕ್ಯೂಸೆಕ್‌ ನೀರು ಬಿಡಲು ಆದೇಶ ನೀಡಲಾಗಿದೆ. ಆದೇಶ ಸಮಾಧಾನ ಆಗದಿದ್ದರೆ ಸುಪ್ರೀಂ ಕೋರ್ಟ್‌ ಮೊರೆ ಹೋಗಬಹುದು ಎಂದು ಕಾವೇರಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶಶಿಶೇಖರ್‌ ತಿಳಿಸಿದರು.(The meeting chaired by Union Water Resources Secretary Shashi Shekhar). ಶಶಿಶೇಖರ್ ಅವರು ಕೇಂದ್ರ ನೀರಾವರಿ ಇಲಾಖೆ ಕಾರ್ಯದರ್ಶಿ.
  • ಸಭೆಯಲ್ಲಿ ಎರಡೂ ರಾಜ್ಯಕ್ಕೆ ಸಲ್ಲಬೇಕಾದ ನೀರಿನ ಪ್ರಮಾಣದ ಕುರಿತು ಮಾಹಿತಿ ಕಲೆಹಾಕಲಾಗಿದೆ. ಹಿಂದಿನ 15 ದಿನಗಳಲ್ಲಿ ಜಲಾಶಯಗಳ ಒಳ ಹರಿವು, ಹೊರ ಹರಿವಿನ ಮಾಹಿತಿ ಪಡೆದು ಚರ್ಚಿಸಲಾಗಿದೆ. ಪ್ರತಿ ವರ್ಷ ನೀರಿನ ಕೊರತೆ ಸಮಸ್ಯೆ ಎದುರಾಗುತ್ತದೆ. ಎಲ್ಲ ಅಂಶ ಪರಿಗಣಿಸಿ ನೀರು ಬಿಡಲು ಆದೇಶಿಸಲಾಗಿದೆ ಎಂದು ಅವರು ಹೇಳಿದರು. ಈ ನಿರ್ಧಾರದಿಂದ ಸಮಾಧಾನ ಆಗದಿದ್ದರೆ ಸುಪ್ರೀಂ ಕೋರ್ಟ್‌ಗೆ ಹೋಗಬಹುದು. ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಎರಡೂ ರಾಜ್ಯ ಸರ್ಕಾರಗಳಿಗೆ ಅವಕಾಶವಿದೆ ಎಂದು ಅವರು ತಿಳಿಸಿದರು. ಸಧ್ಯದ ಪರಿಸ್ಥಿತಿಯಲ್ಲಿ ನೀರು ಬೀಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸಭೆಗೆ ತಿಳಿಸಿತು. ಆದರೆ, ಟ್ರ್ಯೂಬಿನಲ್‌ ಆದೇಶದಂತೆ ನೀರುಬಿಡುಗಡೆ ಮಾಡಬೇಕು ಎಂದು ತಮಿಳುನಾಡು ಮನವಿ ಮಾಡಿತು.[೧೯]
  • =58.5 ಟಿಎಂಸಿ ಬಿಟ್ಟಿದೆ 19-9-2016ಕ್ಕೆ.(ಬಿಡಬೇಕಾದ್ದು 134 ಸೆ,ಅಂತ್ಯಕ್ಕೆ);ಹೊಸ ತೀರ್ಪಿನಂತೆ + 2.60ಟಿಎಂಸಿ. ಈ ವರ್ಷ 61 ಟಿಎಂಸಿ ಸೆಪ್ಟಂ.ಅಂತ್ಯಕ್ಕೆ ಬಿಟ್ಟಿದೆ
  • ದಿನಕ್ಕೆ 3,000 ಕ್ಯೂಸೆಕ್ಸ್ X 10 ದಿನ ಬಿಡಬೇಕು; 30,000 ಕ್ಯೂಸೆಕ್ಸ್.= 2.602359473 ಟಿಎಂಸಿ.ಒಟ್ಟು 20tmcft ಬಿಟ್ಟಂತಾಗುವುದು.

(Committee the Cauvery Supervisory Committee ordered Karnataka on Monday to release 3,000 cusecs water per day) [೨೦]

ಸಮರ್ಥನೆ

[ಬದಲಾಯಿಸಿ]
  • ಕಾವೇರಿ ಮೇಲುಸ್ತುವಾರಿ ಸಮಿತಿಯ ತೀರ್ಪು:
  • ಕರ್ನಾಟಕದಲ್ಲಿನ ಕಾವೇರಿ ಜಲಾಶಯಗಳಿಗೆ ಈಗ 9,000 ಕ್ಯುಸೆಕ್‌ ಒಳಹರಿವು ಇದೆ. ಈ ಪ್ರಮಾಣದಲ್ಲಿ ಬದಲಾವಣೆ ಆಗುತ್ತದೆ. ಕಳೆದ 15 ದಿನಗಳ ಒಳಹರಿವನ್ನು ಲೆಕ್ಕ ಹಾಕಿ ಸೆ. 21ರಿಂದ ಸೆ. 30ರವರೆಗೆ ದಿನಂಪ್ರತಿ 3,000 ಕ್ಯುಸೆಕ್‌ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಲಾಗಿದೆ. ಬಿಳಿಗುಂಡ್ಲು ಬಳಿ ಇರುವ ಮಾಪನ ಕೇಂದ್ರದಲ್ಲಿ ತಮಿಳುನಾಡಿಗೆ ಹರಿಸಿದ ನೀರಿನ ಪ್ರಮಾಣವನ್ನು ಅಳೆಯಲಾಗುತ್ತದೆ ಎಂದು ಶಶಿ ಶೇಖರ್‌ ಸಭೆಯ ನಂತರ ತಿಳಿಸಿದರು.
  • ಉಭಯ ರಾಜ್ಯಗಳ ಕಾವೇರಿ ಜಲಾನಯನ ಪ್ರದೇಶದಲ್ಲಿನ ಮಳೆಯ ಪ್ರಮಾಣ, ಜಲಾಶಯಗಳ ಒಳಹರಿವು, ಕಣಿವೆ ವ್ಯಾಪ್ತಿಯಲ್ಲಿನ ಕುಡಿಯುವ ನೀರಿನ ಅಗತ್ಯ, ಬೆಳೆಗಳ ಸ್ಥಿತಿಗತಿ, ಆವಿಯಾಗುವ ನೀರಿನ ಪ್ರಮಾಣವನ್ನೆಲ್ಲ ಪರಿಗಣನೆಗೆ ತೆಗೆದುಕೊಂಡೇ ನೀರು ಹರಿಸಲು ಸೂಚಿಸಲಾಗಿದೆ. ಇತ್ತೀಚಿನ ಸುಪ್ರೀಂ ಕೋರ್ಟ್‌ ಆದೇಶ ಪಾಲಿಸಿ ಕರ್ನಾಟಕ ನೀರು ಹರಿಸಿರುವುದಕ್ಕೆ ತಮಿಳುನಾಡು ತೃಪ್ತಿ ವ್ಯಕ್ತಪಡಿಸಿದೆ ಎಂದು ಅವರು ಹೇಳಿದರು.
  • ಕಾವೇರಿ ಕಣಿವೆಯಲ್ಲಿನ ಜಲಾಶಯಗಳ ಸ್ಥಿತಿಗತಿ ಕುರಿತ ನೈಜ ಮಾಹಿತಿಯನ್ನು ಕೇಂದ್ರ ಜಲ ಆಯೋಗವು ವೈಜ್ಞಾನಿಕ ವಿಧಾನದ ಮೂಲಕ ಪಡೆದು ಅಂದಂದೇ ಸಮಿತಿಗೆ ಸಲ್ಲಿಸಲಿದೆ. ಪಾರದರ್ಶಕತೆ ಕಾಯ್ದುಕೊಂಡು, ನೀರಿನ ಹಂಚಿಕೆಯನ್ನು ಸಮಾನವಾಗಿ ಮಾಡಲು ಈ ವ್ಯವಸ್ಥೆ ಸಹಾಯಕವಾಗಲಿದೆ.
ಕಾವೇರಿ ಮಂಡಳಿಯಿಂದ ಕಷ್ಟ
20-09-2016 ರ ತೀರ್ಪು
  • ಕಳೆದ ಹಲವು ವರ್ಷಗಳಿಂದ ಕರ್ನಾಟಕ ಸತತವಾಗಿ ವಿರೋಧಿಸಿಕೊಂಡು ಬಂದಿದ್ದ ಕಾವೇರಿ ನಿರ್ವಹಣಾ ಮಂಡಳಿಯ ಅಪಾಯ ಕರ್ನಾಟಕಕ್ಕೆ ಎದುರಾಗಿದೆ.
  • ನಾಲ್ಕು ವಾರಗಳಲ್ಲಿ ಈ ಮಂಡಳಿ ರಚನೆಯ ಅಧಿಸೂಚನೆ ಹೊರಡಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ನೀಡಿದ ಆದೇಶ ರಾಜ್ಯದ ಪಾಲಿಗೆ ಕೆಟ್ಟ ಸುದ್ದಿ. ಕಾವೇರಿ ನ್ಯಾಯಮಂಡಳಿಯ ಐತೀರ್ಪಿನ ಪ್ರಕಾರ ತಮಿಳುನಾಡಿಗೆ ನೀರು ಬಿಡದೆ ಹೋದರೆ ಕರ್ನಾಟಕದ ಕಾವೇರಿ ಜಲಾಶಯಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಅಧಿಕಾರವನ್ನು ನಿರ್ವಹಣಾ ಮಂಡಳಿಯು ಹೊಂದಿರುತ್ತದೆ. ಕಾವೇರಿ ಕಣಿವೆಯ ಕೇರಳ, ಕರ್ನಾಟಕ ಹಾಗೂ ತಮಿಳುನಾಡಿನ ಜಲಾಶಯಗಳನ್ನು ಆಯಾ ರಾಜ್ಯಗಳು ಕಾವೇರಿ ನಿರ್ವಹಣಾ ಮಂಡಳಿಯ ಉಸ್ತುವಾರಿ ಮತ್ತು ಮಾರ್ಗದರ್ಶನದಲ್ಲೇ ನಿರ್ವಹಿಸಬೇಕು. ಕಾವೇರಿ ಕಣಿವೆಯ ಮೇಲ್ಭಾಗದಲ್ಲಿರುವ ಕರ್ನಾಟಕ ಎಂದಿನಂತೆ ಮಳೆ ಬಿದ್ದ ವರ್ಷಗಳಲ್ಲಿ ಪ್ರತಿವರ್ಷ 192 ಟಿಎಂಸಿ ಅಡಿಗಳಷ್ಟು ನೀರನ್ನು ತಮಿಳುನಾಡಿಗೆ ತನ್ನ ಜಲಾಶಯಗಳಿಂದ ಹರಿಸಬೇಕಿದೆ. ಹೀಗಾಗಿ ನಾಲ್ಕೂ ಜಲಾಶಯಗಳು ಮಂಡಳಿಯ ಉಸ್ತುವಾರಿ ಇಲ್ಲವೇ ನೇರ ನಿಯಂತ್ರಣಕ್ಕೆ ಒಳಪಡಲಿವೆ. ಕಣಿವೆಯ ಕೆಳಭಾಗದಲ್ಲಿರುವ ತಮಿಳುನಾಡು ತನ್ನೇ ಜಲಾಶಯಗಳಿಂದ ಪುದುಚೆರಿಗೆ ಹರಿಸಬೇಕಿರುವ ನೀರಿನ ಪ್ರಮಾಣ ಕೇವಲ ಏಳು ಟಿಎಂಸಿ ಅಡಿಗಳು. ಹೀಗಾಗಿ ನಿರ್ವಹಣಾ ಮಂಡಳಿಯ ಬಿಸಿ ತಟ್ಟುವುದು ಕರ್ನಾಟಕಕ್ಕೇ ವಿನಾ ತಮಿಳುನಾಡಿಗೆ ಅಲ್ಲ.
  • ನ್ಯಾಯಮಂಡಳಿಯು 2007ರಲ್ಲಿ ಐತೀರ್ಪು ನೀಡಿ ಕೇರಳಕ್ಕೆ 30 ಟಿಎಂಸಿ ಅಡಿಗಳು, ಕರ್ನಾಟಕಕ್ಕೆ 270 ಟಿಎಂಸಿ ಅಡಿಗಳು, ತಮಿಳುನಾಡಿಗೆ 419 ಟಿಎಂಸಿ ಅಡಿಗಳು, ಕೇಂದ್ರಾಡಳಿತ ಪ್ರದೇಶ ಪುದುಚೆರಿಗೆ ಏಳು ಟಿಎಂಸಿ ಅಡಿಗಳಷ್ಟು ನೀರನ್ನು ಹಂಚಿಕೆ ಮಾಡಿತ್ತು. ಈ ಐತೀರ್ಪನ್ನು ಜಾರಿಗೆ ತರುವ ಮೊದಲ ಹೆಜ್ಜೆಯಾಗಿ ಕೇಂದ್ರ ಸರ್ಕಾರ 2013ರಲ್ಲಿ ಅಧಿಸೂಚನೆ ಹೊರಡಿಸಿತು. ಆದರೆ ಮೂರೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೆರಿ ಈ ಐತೀರ್ಪಿನ ವಿರುದ್ಧದ ಮೇಲ್ಮನವಿಗಳು ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಗೆ ಬಾಕಿ ಇವೆ.[೨೧]
.

ತಮಿಳುನಾಡು -ಕರ್ನಾಟಕ ವಾದ

[ಬದಲಾಯಿಸಿ]
  • ‘ಮಳೆಯ ಕೊರತೆ ಇದೆ ಎಂದು ತಿಳಿಸುತ್ತಿರುವ ಕರ್ನಾಟಕ ಇದುವರೆಗೆ ಒಟ್ಟು 27 ಟಿಎಂಸಿ ಅಡಿ ನೀರನ್ನು ಅಕ್ರಮವಾಗಿ ತನ್ನ ರೈತರ ಬೆಳೆಗಳಿಗೆ ಹರಿಸಿದೆ. ನಮ್ಮ ರೈತರ ಸಾಂಬಾ ಬೆಳೆಗೆ ನೀರಿನ ಅಗತ್ಯವಿದೆ. ನ್ಯಾಯಮಂಡಳಿ ಆದೇಶದಂತೆ ನೀರು ಹರಿಸಲು ಸೂಚಿಸಬೇಕು’ ಎಂದು ತಮಿಳುನಾಡಿನ ಮುಖ್ಯಕಾರ್ಯದರ್ಶಿ ಪಿ.ರಾಮಮೋಹನ ಅವರು ರಾವ್‌ ಕೋರಿದರು.
  • ‘ಸತತ ಎರಡು ವರ್ಷಗಳಿಂದ ಕರ್ನಾಟಕದಲ್ಲಿ ಮಳೆಯ ಕೊರತೆ ಉಂಟಾಗಿದೆ. ಈ ವರ್ಷ ಮುಂಗಾರುಪೂರ್ವ ಮಳೆಯ ಪ್ರಮಾಣವೂ ಶೇ 34ರಷ್ಟು ಕಡಿಮೆಯಾಗಿದೆ. ನಮ್ಮ ಜಲಾಶಯಗಳಲ್ಲಿ ನೀರಿಲ್ಲ. ಸಂಬಂಧಿಸಿದ ದಾಖಲೆಗಳನ್ನು ಒದಗಿಸಲಾಗಿದೆ. ಮತ್ತೆ ನೀರು ಹರಿಸಿದರೆ ಬೆಂಗಳೂರು, ಮೈಸೂರು, ಮಂಡ್ಯ ಹಾಗೂ ಕಾವೇರಿ ಕಣಿವೆಯ ಗ್ರಾಮ, ಪಟ್ಟಣಗಳ ಜನರಿಗೆ ಕುಡಿಯುವ ನೀರೇ ಇಲ್ಲದಂತಾಗುತ್ತದೆ’ ಎಂದು ಕರ್ನಾಟಕದ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್‌ ಹೇಳಿದರು.
  • ಕಾವೇರಿ ಕಣಿವೆಯಲ್ಲಿ ಪ್ರತಿ ವರ್ಷ ಲಭ್ಯವಾಗುವ 740 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಿಕೊಳ್ಳಬೇಕು ಎಂದು ನ್ಯಾಯಮಂಡಳಿಯ ಆದೇಶ ಹೇಳಿದೆ. ಡಿಸೆಂಬರ್‌ ಅಂತ್ಯಕ್ಕೆ ಆಯಾ ಸಾಲಿನ ಒಳಹರಿವಿನ ಚಿತ್ರಣ ದೊರೆಯಲಿದೆ. ಆದರೆ, ಈಗ ಮಾಸಿಕ ಹಂಚಿಕೆ ಆಧಾರದಲ್ಲಿ ನೀರು ಹರಿಸಲು ಸೂಚಿಸಿದರೆ ಸಮಾನವಾಗಿ ಹಂಚಿಕೆ ಮಾಡಿಕೊಳ್ಳಬೇಕೆಂಬ ಆದೇಶಕ್ಕೆ ಅರ್ಥವಿರುವುದಿಲ್ಲ ಎಂದು ಮನವರಿಕೆ ಮಾಡಿದರು.
  • ತಮಿಳುನಾಡಿನಲ್ಲಿ ಅಕ್ಟೋಬರ್‌ನಿಂದ ಈಶಾನ್ಯ ಮಳೆಯ ಮಾರುತಗಳು ಮಳೆ ಸುರಿಸಲಿವೆ. ಕರ್ನಾಟಕ ಆ ಆಶಾಭಾವ ಹೊಂದಿಲ್ಲ. ಒಂದೊಮ್ಮೆ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಕಾವೇರಿ ಕಣಿವೆಯಲ್ಲಿ ಮಳೆ ಸುರಿಯದಿದ್ದರೆ ಜನತೆ ಕುಡಿಯುವ ನೀರು ದೊರೆಯದೆ ಪರದಾಡುವಂತಾಗುತ್ತದೆ. ಈ ಅಂಶವನ್ನು ಉಸ್ತುವಾರಿ ಸಮಿತಿಗೆ ತಿಳಿಸಲಾಗಿದೆ. ಯಾವ ಆಧಾರದಲ್ಲಿ ಮತ್ತೆ ನೀರು ಬಿಡಲು ಸೂಚಿಸಲಾಯಿತು ಎಂಬುದು ಅರ್ಥವಾಗುತ್ತಿಲ್ಲ ಎಂದರು ಕರ್ನಾಟಕ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ.[೨೨]

ಕರ್ನಾಟಕದ ಸಂತೃಪ್ತಿ

[ಬದಲಾಯಿಸಿ]
  • ಕಾವೇರಿ ಮೇಲುಸ್ತುವಾರಿ ಸಮಿತಿಯು ಸೋಮವಾರ ಸಭೆ ನಡೆಸಿ ನೀಡಿರುವ ಸೂಚನೆಯು ಕರ್ನಾಟಕಕ್ಕೆ ಸಂತೃಪ್ತಿ ತಂದಿದೆ ಎಂದು ತಿಳಿದುಬಂದಿದೆ. ಜಲಾಶಯಗಳಿಂದ ಬಸಿಯುವ ನೀರಿನ ಪ್ರಮಾಣ ದಿನವೊಂದಕ್ಕೆ ಕನಿಷ್ಠ 3,000 ಕ್ಯುಸೆಕ್‌ ಎಂದು ಅಂದಾಜಿಸಲಾಗಿದೆ. ಅಲ್ಲದೆ, ಮಧ್ಯಂತರ ಜಲಾನಯನ ಪ್ರದೇಶದಲ್ಲಿ ಬೀಳುವ ಮಳೆಯಿಂದಲೂ ತಮಿಳುನಾಡಿಗೆ ನೀರು ಹರಿಯಲಿದೆ. ಹಾಗಾಗಿ ಕರ್ನಾಟಕದ ಜಲಾಶಯಗಳಿಂದ ಕ್ರೆಸ್ಟ್‌ ಗೇಟ್‌ ಎತ್ತಿ ನೀರು ಹರಿಸುವ ಅಗತ್ಯವಿಲ್ಲ ಎಂಬುದೇ ಕರ್ನಾಟಕದ ಸಂತಸಕ್ಕೆ ಕಾರಣ ಎನ್ನಲಾಗಿದೆ. ಸಮಿತಿಯ ಸಭೆಯ ನಂತರ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ, ಅಧಿಕಾರಿಗಳು, ಮುಖ್ಯ ಕಾರ್ಯದರ್ಶಿ ಅವರ ಮುಖದಲ್ಲಿ ಈ ಕಾರಣದಿಂದಲೇ ಆತಂಕ ಕಂಡುಬರಲಿಲ್ಲ.
  • ತಮಿಳುನಾಡಿಗೆ ನೀರು ನಿಲುಗಡೆ
  • ಕೆಆರ್ಎಸ್‌ ಅಣೆಕಟ್ಟೆಯಿಂದ ತಮಿಳುನಾಡಿಗೆ ಬಿಡುತ್ತಿದ್ದ ನೀರನ್ನು ಸೋಮವಾರ ಸಂಜೆ ನಿಲ್ಲಿಸಲಾಗಿದೆ. ಸೆ. 20ರ ವರೆಗೆ ಪ್ರತಿ ದಿನ 12 ಸಾವಿರ ಕ್ಯುಸೆಕ್‌ ನೀರು ಬಿಡುವಂತೆ ಸುಪ್ರೀಂಕೋರ್ಟ್‌ ಸೂಚಿಸಿತ್ತು. ಸೋಮವಾರ ಬೆಳಿಗ್ಗೆ ಹರಿಸಿರುವ ನೀರು ಮಂಗಳವಾರ ಸಂಜೆಯವರೆಗೂ ಹರಿದುಹೋಗಿ ಬಿಳುಗುಂಡ್ಲು ಜಲಾಶಯ ತಲುಪಲಿದೆ. ಬೆಳಿಗ್ಗೆ 9,495 ಕ್ಯುಸೆಕ್‌ ನೀರು ಹೊರ ಬಿಡಲಾಗುತ್ತಿತ್ತು. ಸಂಜೆ ವೇಳೆಗೆ 202 ಕ್ಯುಸೆಕ್‌ಗೆ ಇಳಿದಿದೆ. 6,669 ಕ್ಯುಸೆಕ್‌ ಒಳಹರಿವಿದೆ. ನೀರಿನ ಮಟ್ಟವು 84.25 ಅಡಿ ಇದೆ.[೨೩]

ಸುಪ್ರೀಂ ಆದೇಶ

[ಬದಲಾಯಿಸಿ]
  • 19 Sep, 2016;ಎರಡೂ ರಾಜ್ಯಕ್ಕೆ ಸಲ್ಲಬೇಕಾದ ನೀರಿನ ಪ್ರಮಾಣದ ಕುರಿತು ಸಭೆಯಲ್ಲಿ ಮಾಹಿತಿ ಕಲೆಹಾಕಿ ಚರ್ಚೆ ನಡೆಸಿದ ಬಳಿಕ ತಮಿಳುನಾಡಿಗೆ 10 ದಿನಗಳ ಕಾಲ 3 ಸಾವಿರ ಕ್ಯೂಸೆಕ್‌ ನೀರು ಬಿಡಲು ಆದೇಶ ನೀಡಲಾಗಿದೆ. ಆದೇಶ ಸಮಾಧಾನ ಆಗದಿದ್ದರೆ ಸುಪ್ರೀಂ ಕೋರ್ಟ್‌ ಮೊರೆ ಹೋಗಬಹುದು ಎಂದು ಕಾವೇರಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶಶಿಶೇಖರ್‌ ತಿಳಿಸಿದರು. ಆದರೆ ಸುಪ್ರೀಂ ಕೋರ್ಟ್‌ 20 ಸೆಪ್ಟಂಬರ್, 2016 ರಂದು ಇನ್ನೂ ಹೆಚ್ಚು ನೀರು ಬಿಡಲು ಹೇಳಿದೆ.
  • ಸೆ.೨೦ರ ವರೆಗೆ ಪ್ರತಿ ದಿನ ೧೨ ಸಾವಿರ ಕ್ಯೂಸೆಕ್‌ ನೀರು ಬಿಡಲು ಸೂಚಿಸಲಾಗಿತ್ತು. ಸೋಮವಾರ ಬೆಳಿಗ್ಗೆ ಹರಿಸಿರುವ ನೀರು ಮಂಗಳವಾರ ಸಂಜೆಯವರೆಗೂ ಹರಿದುಹೋಗಿ ಬಿಳುಗುಂಡ್ಲು ತಲುಪಲಿದೆ. 19 Sep, 2016 ಬೆಳಿಗ್ಗೆ 9,495 ಕ್ಯೂಸೆಕ್‌ ನೀರು ಹರಿಸಲಾಗಿದ್ದು, ಈ ಪ್ರಮಾಣವು ಸಂಜೆಯ ವೇಳೆಗೆ 202 ಕ್ಯೂಸೆಕ್‌ಗೆ ಇಳಿದಿದೆ. 6,669 ಕ್ಯೂಸೆಕ್ ನೀರು ಒಳಹರಿವಿದೆ. ನೀರಿನ ಮಟ್ಟವು 84.25 ಅಡಿ ಇದೆ.
  • 20 ಸೆಪ್ಟಂಬರ್, 2016 ರಂದು ಕಾವೇರಿ ನದಿ ನೀರು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ. 21 ರಿಂದ 27ರವರೆಗೆ ತಮಿಳುನಾಡಿಗೆ 6 ಸಾವಿರ ಕ್ಯೂಸೆಕ್‌ ನೀರು ಬಿಡಲು ರಾಜ್ಯ ಸರ್ಕಾರಕ್ಕೆ ಮಂಗಳವಾರ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ತಮಿಳುನಾಡಿಗೆ ನೀರು ಬಿಡಲು ಆದೇಶಿಸಿತು. ನೀರು ಹಂಚಿಕೆ ಸಂಬಂಧ ನಾಲ್ಕು ವಾರಗಳಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತು.6,669 ಕ್ಯೂಸೆಕ್ ನೀರು ಒಳಹರಿವಿದೆ. ನೀರಿನ ಮಟ್ಟವು 84.25 ಅಡಿ ಇದೆ[೨೪]
  • ಒಟ್ಟು ನೀರು ಬಿಡುವ ಲೆಕ್ಕ;(11524 ಕ್ಯೂಸೆಕ್ಸ್=1ಟಿಎಂಸಿ ಅಡಿನೀರು.)
  • 5-9-2016: 15000 for 10days / 7dys=105000 Cu
  • 12–9-2016: 12000 for 9dys/upto 20th / 108000
  • 20-9-2016 : 6000 for 7dys/upto 27th Sep/ 42000
  • Total =213000+42000 = 255000//11524=22.12 ಟಿಎಂಸಿ ಅಡಿ ನೀರು ಬಿಟ್ಟಂತಅಯಿತು.
  • ಒಳಹರಿವು ಇದೇ ರೀತಿ 6,669 ಕ್ಯೂಸೆಕ್ ಇದ್ದಲ್ಲಿ ಈಗ ಬಿಟ್ಟಿರುವ 255000ಕ್ಯೂಸೆಕ್ ನೀರು ಭರ್ತಿಯಾಗಲು ಸುಮಾರು 35 ರಿಂದ 40ದಿನ ಬೇಕು'

[೨೫]

ಸುಪ್ರೀಮ್ ಕೋರ್ಟಿನ ತೀರ್ಪು ವಿವರ

[ಬದಲಾಯಿಸಿ]

ದಿ.20 ಸೆಪ್ಟಂಬರ್ 2016 ರಂದು 'ನೀರು ಬಿಡಲು ಕಷ್ಟ’ ಎಂಬ ಕರ್ನಾಟಕದ ಪ್ರಬಲ ಆಕ್ಷೇಪವನ್ನೂ ಲೆಕ್ಕಿಸದೆ ತಮಿಳುನಾಡಿಗೆ ಏಳು ದಿನ (ಸೆ. 21ರಿಂದ 27) ನಿತ್ಯ 6,000 ಕ್ಯುಸೆಕ್‌ ನೀರು ಹರಿಸುವಂತೆ ಮಂಗಳವಾರ ಸೂಚಿಸಿದ ಸುಪ್ರೀಂ ಕೋರ್ಟ್, ,ಕಾವೇರಿ ನಿರ್ವಹಣಾ ಮಂಡಳಿ' ರಚನೆಗೂ ಸ್ವಯಂ ಪ್ರೇರಣೆಯ ಆದೇಶ ನೀಡಿತು. ಈ ಮೂಲಕ ಕರ್ನಾಟಕಕ್ಕೆ ಎರಡೆರಡು ಪೆಟ್ಟು ಕೊಟ್ಟಿತು.

  • ಕಾವೇರಿ ಮೇಲುಸ್ತುವಾರಿ ಸಮಿತಿಯ ಸೂಚನೆ ಅಮಾನ್ಯ:
  • ‘ಸೆ. 21ರಿಂದ 30ರವರೆಗೆ ನಿತ್ಯ 3 ಸಾವಿರ ಕ್ಯುಸೆಕ್‌ ನೀರು ಹರಿಸಬೇಕು’ ಎಂಬ ಕಾವೇರಿ ಮೇಲುಸ್ತುವಾರಿ ಸಮಿತಿಯ ಸೋಮವಾರದ ಸೂಚನೆಯನ್ನು ಮಾನ್ಯ ಮಾಡದ ಪೀಠ, ಕಾವೇರಿ ಜಲವಿವಾದ ನ್ಯಾಯಮಂಡಳಿಯು ಐತೀರ್ಪಿನಲ್ಲಿ ಶಿಫಾರಸು ಮಾಡಿರುವಂತೆ ಕೂಡಲೇ ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ತಿಳಿಸಿ, ನಾಲ್ಕು ವಾರಗಳ ಗಡುವು ವಿಧಿಸಿತು.
  • ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ‘ನೀರು ಬಿಡುವಂತೆ ಸೂಚಿಸುವ ತೀರ್ಮಾನ ಕೈಗೊಳ್ಳಲು ಕಾವೇರಿ ಮೇಲುಸ್ತುವಾರಿ ಸಮಿತಿಗೆ ಅಧಿಕಾರ ಕೊಟ್ಟವರು ಯಾರು’ ಎಂಬ ಧಾಟಿಯಲ್ಲೇ ವಿಚಾರಣೆ ಆರಂಭಿಸಿದರು. ಆದರೆ, ‘ನೀರು ಹಂಚಿಕೆ ಸಮಸ್ಯೆ ನಿವಾರಣೆಗೆ ಕಾವೇರಿ ನಿರ್ವಹಣಾ ಮಂಡಳಿ ರಚನೆಯೇ ಸೂಕ್ತ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. 'ವ್ಯಾಪ್ತಿಯ ಎಲ್ಲ ರಾಜ್ಯಗಳಿಗೂ ಸಮಾನವಾಗಿ ನೀರನ್ನು ಹಂಚಿಕೆಯಾಗುವಂತೆ ನೋಡಿಕೊಳ್ಳುತ್ತಾರೆ. ಅದಕ್ಕೆಂದೇ ಮಂಡಳಿ ರಚಿಸಿ ಸಮಸ್ಯೆ ನೀಗಿಸಿಕೊಳ್ಳಬಹುದು’ ಎಂದು ವ್ಯಾಖ್ಯಾನಿಸಿದರು.
  • ‘ನಮ್ಮ ಜಲಾಶಯಗಳಲ್ಲಿ ನೀರಿಲ್ಲ’ ಎಂದು ಕರ್ನಾಟಕ ಪರ ವಕೀಲ ಫಾಲಿ ನಾರಿಮನ್‌ ಒಂದೂ ಕಾಲು ಗಂಟೆಗೂ ಅಧಿಕ ಕಾಲ ವಾದ ಮಂಡಿಸಿ, ವಸ್ತುಸ್ಥಿತಿ ವಿವರಿಸಿದರು.
  • ನ್ಯಾಯಮಂಡಳಿಯ ಐತೀರ್ಪಿನ ಬಹುತೇಕ ಸಾರವನ್ನು ಕೋರ್ಟ್‌ಗೆ ಓದಿ ಹೇಳಿದ ಅವರು, ‘ಮಳೆ ಕೊರತೆಯ ವರ್ಷ ಎದುರಾಗುವ ಸಂಕಷ್ಟದ ವೇಳೆ ಕೈಗೊಳ್ಳಬಹುದಾದ ಮಾರ್ಗೋಪಾಯಗಳ ಕುರಿತು ನ್ಯಾಯಮಂಡಳಿಯು ನಿರ್ದಿಷ್ಟ ಸಲಹೆಯನ್ನೇ ನೀಡಿಲ್ಲ’ ಎಂದು ಒತ್ತಿಹೇಳಿದರೂ ಪ್ರಯೋಜನವಾಗಲಿಲ್ಲ.‘ಈ ಬಾರಿ ವರುಣದೇವ ಮುನಿಸಿಕೊಂಡಿದ್ದಾನೆ ನಿಜ. ಆತ ದಯೆ ತೋರಿಲ್ಲ. ಅಂತೆಯೇ ಮಳೆ ಕೊರತೆಯಾಗಿದೆ. ಮೇಲುಸ್ತುವಾರಿ ಸಮಿತಿಯು ಆ ಆಧಾರದ ಮೇಲೆ ನೀರು ಹರಿಸಲು ಸೂಚನೆ ನೀಡಿದೆ. ಆದರೆ ನ್ಯಾಯಮಂಡಳಿ ಸೂಚನೆಯಂತೆ ಆಯಾ ತಿಂಗಳಲ್ಲಿ ನೀರನ್ನು ಹರಿಸಲಾಗಿದೆಯೇ’ ಎಂದು ಪ್ರಶ್ನಿಸಿದ ಮಿಶ್ರಾ, ‘ಸೆಪ್ಟೆಂಬರ್‌ ತಿಂಗಳಲ್ಲಿ 40 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಹರಿಸಬೇಕಿದೆ. ಸಮಾನವಾಗಿ ಹಂಚಿಕೊಳ್ಳುವ ಸೂತ್ರದಡಿ ನೀರನ್ನು ಏಕೆ ಹರಿಸಿಲ್ಲ’ ಎಂದು ಕೇಳಿದರು.

ತಮಿಳುನಾಡು ವಾದ

[ಬದಲಾಯಿಸಿ]
  • ‘ಕರ್ನಾಟಕದಲ್ಲಿ ಶೇ 47ರಷ್ಟು ಕಡಿಮೆ ಮಳೆ ಸುರಿದಿದ್ದನ್ನು ಪರಿಗಣಿಸಿದರೂ ನಮಗೆ ಇದುವರೆಗೆ 75 ಟಿಎಂಸಿ ಅಡಿ ನೀರನ್ನು ಹರಿಸಬೇಕಿತ್ತು. ಆದರೆ, ತನ್ನ ರೈತರ ಬೆಳೆಗೆ 24 ಟಿಎಂಸಿ ಅಡಿ ನೀರನ್ನು ಹರಿಸಿದ್ದಾಗಿ ಕರ್ನಾಟಕವೇ ಮೇಲುಸ್ತುವಾರಿ ಸಮಿತಿಗೆ ದಾಖಲೆ ಸಲ್ಲಿಸಿದೆ. ಪ್ರಸಕ್ತ ಸಾಲಿನಲ್ಲಿ ಈಗಾಗಲೇ ಒಟ್ಟು 80 ಟಿಎಂಸಿ ಅಡಿ ನೀರನ್ನು ಪಡೆದಿದ್ದರೂ ಈಗ ಕುಡಿಯಲು ನೀರಿಲ್ಲ ಎಂಬ ವಾದ ಮಂಡಿಸುತ್ತಿದೆ ಇದು ಎಷ್ಟು ಸರಿ’ ಎಂದು ಪ್ರಶ್ನಿಸಿದ ತಮಿಳುನಾಡು ಪರ ವಕೀಲ ಶೇಖರ್‌ ನಾಫಡೆ, ‘ಮದ್ಯಂತರ ಆದೇಶ ನೀಡುವ ಮೂಲಕ ನಮಗೆ ಮತ್ತಷ್ಟು ನೀರು ಬಿಡಲು ಸೂಚಿಸಿ’ ಎಂದು ಕೋರಿದರು.

ಕರ್ನಾಟಕದ ವಾದ

[ಬದಲಾಯಿಸಿ]
  • ‘ಈಶಾನ್ಯ ಮಳೆಯ ಮಾರುತಗಳು ತಮಿಳುನಾಡಿನಲ್ಲಿ ಮಳೆ ಸುರಿಸುವ ಸಾಧ್ಯತೆ ಇದೆ. ಕರ್ನಾಟಕದಲ್ಲಿನ ಕಾವೇರಿ ಕಣಿವೆ ಪ್ರದೇಶದಲ್ಲಿ ಅಕ್ಟೋಬರ್‌ ನಂತರ ಮಳೆ ಸುರಿಯುವ ಭರವಸೆ ಇಲ್ಲ. ಈಗ ಮತ್ತೆ ನೀರು ಹರಿಸಿದರೆ, ಅದು ವಾಪಸ್‌ ಬರುವುದಿಲ್ಲ’ ಎಂದು ನಾರಿಮನ್‌ ಅವರು ನೀರಿನ ಅಗತ್ಯದ ಕುರಿತು ವಿವರ ನೀಡಿದರು. ‘ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ ಸೆ. 19ರ ಮಾಹಿತಿಯಂತೆ 50 ಟಿಎಂಸಿಗೂ ಅಧಿಕ ನೀರಿನ ಸಂಗ್ರಹವಿದೆ. ನಾವು ಕುಡಿಯುವುದಕ್ಕೆ ನೀರಿಲ್ಲ ಎಂಬ ಚಿಂತೆಯಲ್ಲಿದ್ದೇವೆ. ಆದರೆ, ತಮಿಳುನಾಡು ತನ್ನ ಬೆಳೆಗಳಿಗೆ ನೀರು ಕೇಳುತ್ತಿದೆ. ಅವರ ಬೆಳೆಗಳಿಗಾಗಿ ನಾವು ಕುಡಿಯುವ ನೀರನ್ನು ತ್ಯಾಗ ಮಾಡಬೇಕಾಗಿದೆ’ ಎಂದು ನೊಂದು ನುಡಿದ ಅವರು, ‘ಈಗಿನ ವಿಚಾರಣೆಯ ನಂತರ ನೀವು ಯಾವುದೇ ಆದೇಶ ನೀಡಿದರೂ ಅದನ್ನು ನಾವು ಒಪ್ಪಲಾಗುವುದಿಲ್ಲ. ನಿಮ್ಮ ಆದೇಶವನ್ನು ನಾನು ವಿರೋಧಿಸುವುದಿಲ್ಲ. ಆದರೆ, ನೀವು ನೀಡಲು ಹೊರಟಿರುವ ಆದೇಶ ತಪ್ಪು ಎಂಬುದೇ ನನ್ನ ಭಾವನೆ’ ಎಂದು ಕಠೋರವಾಗಿಯೇ ತಿಳಿಸಿದರು.
  • ನೀರು ಬಿಡಲು ಆದೇಶಿಸಿರುವುದಕ್ಕೆ ಕರ್ನಾಟಕದಲ್ಲಿ ನಡೆದ ಪ್ರತಿಭಟನೆ ಮತ್ತು ಹಿಂಸಾಚಾರ ಘಟನೆಗಳನ್ನು ಮತ್ತೆ ನೆನಪಿಸಿದ ನ್ಯಾಯಮೂರ್ತಿಗಳು, ಎರಡೂ ಮುಕ್ಕಾಲು ಗಂಟೆ ನಡೆದ ವಿಚಾರಣೆಯನ್ನು ಸೆ. 27ಕ್ಕೆ ಮುಂದೂಡಿದರಲ್ಲದೆ, ಅಲ್ಲಿಯತನಕ ನಿತ್ಯ 6,000 ಕ್ಯುಸೆಕ್‌ ನೀರು ಹರಿಸಬೇಕು ಎಂದು ಆದೇಶಿಸಿದರು. ದೇಶದ ನಂತರವೂ ಕರ್ನಾಟಕದ ಪರ ವಕೀಲರು ಎಷ್ಟೇ ಮನವರಿಕೆ ಮಾಡಿದರೂ ಅವರು ಕಿವಿಗೆ ಹಾಕಿಕೊಳ್ಳಲಿಲ್ಲ.
  • ‘ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ ಸೆ. 19ರ ಮಾಹಿತಿಯಂತೆ 50 ಟಿಎಂಸಿಗೂ ಅಧಿಕ ನೀರಿನ ಸಂಗ್ರಹವಿದೆ. ನಾವು ಕುಡಿಯುವುದಕ್ಕೆ ನೀರಿಲ್ಲ ಎಂಬ ಚಿಂತೆಯಲ್ಲಿದ್ದೇವೆ. ಆದರೆ, ತಮಿಳುನಾಡು ತನ್ನ ಬೆಳೆಗಳಿಗೆ ನೀರು ಕೇಳುತ್ತಿದೆ. ಅವರ ಬೆಳೆಗಳಿಗಾಗಿ ನಾವು ಕುಡಿಯುವ ನೀರನ್ನು ತ್ಯಾಗ ಮಾಡಬೇಕಾಗಿದೆ’ ಎಂದು ನೊಂದು ನುಡಿದ ಅವರು, ‘ಈಗಿನ ವಿಚಾರಣೆಯ ನಂತರ ನೀವು ಯಾವುದೇ ಆದೇಶ ನೀಡಿದರೂ ಅದನ್ನು ನಾವು ಒಪ್ಪಲಾಗುವುದಿಲ್ಲ.[೨೬]

ತೀರ್ಪಿನ ಪರಿಣಾಮ

[ಬದಲಾಯಿಸಿ]
  • ಸಮಿತಿಯ ಆದೇಶದಂತೆ 30 ಸಾವಿರ ಕ್ಯುಸೆಕ್‌. ಅಂದರೆ, ಅಂದಾಜು 2.60 ಟಿಎಂಸಿ ಅಡಿ. ಇದೀಗ ಸೆ. 27ರವರೆಗೆ ಹರಿಯುವ ನೀರಿನ ಪ್ರಮಾಣ 42 ಸಾವಿರ ಕ್ಯುಸೆಕ್‌. ಅಂದರೆ ಹೆಚ್ಚುವರಿಯಾಗಿ 12 ಸಾವಿರ ಕ್ಯುಸೆಕ್‌. ಅದು ಹೆಚ್ಚೂ ಕಡಿಮೆ ಒಂದು ಟಿಎಂಸಿ ಆಗಲಿದೆ.ಒಟ್ಟು 3.5 ಟಿಎಂಸಿ ಅಡಿ. ಬಿಡಲು ಸೂಚನೆ.

ಹಿರಿಯ ವಕೀಲ ಅಶೋಕ ಹಾರನಹಳ್ಳಿ ಅಭಿಪ್ರಾಯ

[ಬದಲಾಯಿಸಿ]
  • ‘ಕೋರ್ಟ್‌ ನಡೆ ಒಪ್ಪುವಂಥದ್ದಲ್ಲ’;‘ಕಾವೇರಿ ನ್ಯಾಯಮಂಡಳಿ ನೀರು ಹಂಚಿಕೆ ಮಾಡಿದ ರೀತಿಯೇ ಸರಿ ಇಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ವಿಶೇಷ ಮೇಲ್ಮನವಿಯ ವಿಚಾರಣೆ ಬಾಕಿ ಇರುವಾಗ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಆದೇಶ ನೀಡಿರುವುದು ಸರಿಯಲ್ಲ
  • ‘ನೀರು ಹಂಚಿಕೆ ಸಂಬಂಧ ತಮಿಳುನಾಡು ಸಲ್ಲಿಸಿದ್ದ ಮಧ್ಯಂತರ ಅರ್ಜಿ ಬಗ್ಗೆ ಸುಪ್ರೀಂ ಕೋರ್ಟ್‌ ಮಂಗಳವಾರ ಆದೇಶ ನೀಡಬೇಕಿತ್ತೇ ಹೊರತು, ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಯಾರೂ ಅರ್ಜಿ ಹಾಕಿಲ್ಲ. ಯಾರೂ ಕೇಳದೆ ಇದ್ದರೂ ಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಕೋರ್ಟ್‌ ಸೂಚನೆ ನೀಡಿರುವುದು ಸರಿಯಲ್ಲ’ ಎಂದರು.‘ಸುಪ್ರೀಂ ಕೋರ್ಟ್‌ ನೀಡಿರುವ ಎಲ್ಲ ಆದೇಶಗಳು ರಾಜ್ಯದ ಹಿತಕ್ಕೆ ವಿರುದ್ಧವಾಗಿವೆ. ನಮಗೆ ಅನುಕೂಲಕರವಾಗಿ ಎಂದೂ ಆದೇಶ ಬಂದಿಲ್ಲ. ಅನುಕೂಲವಾಗುವುದು ಹೋಗಲಿ, ಸುಪ್ರೀಂಕೋರ್ಟ್‌ ತಟಸ್ಥ ಧೋರಣೆಯನ್ನೂ ತಳೆದಿದ್ದು ಇಲ್ಲ.
ಕಟ್ಜು ಟ್ವೀಟ್‌
'ಕಾನೂನು ಕತ್ತೆ ಎಂಬ ಮಾತು ನಿಜವಾಗಿಸಿದ ದೀಪಕ್‌ ಮಿಶ್ರಾ'

‘ಕಾವೇರಿ ಜಲ ವಿವಾದ ಸಂಬಂಧ ನೀಡಿರುವ ಆದೇಶದಲ್ಲಿ ‘ಕಾನೂನು ಕತ್ತೆ’ (The law is an ass) ಎಂಬ ಡಿಕೆನ್ಸ್‌ನ ಮಾತನ್ನು ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನಿಜವಾಗಿಸಿದ್ದಾರೆ’ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಟ್ವೀಟ್‌ ಮಾಡಿದ್ದಾರೆ.[೨೭]

.

ಕಾವೇರಿ ನಿರ್ವಹಣಾ ಮಂಡಳಿ ರಚನೆ

[ಬದಲಾಯಿಸಿ]
  • ಹಿರಿಯ ವಕೀಲ ಬಿ.ವಿ. ಆಚಾರ್ಯರ ಅಭಿಪ್ರಾಯ:‘ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಿದರೆ ರಾಜ್ಯದ ಜಲಾಶಯಗಳಿಂದ ನೀರು ಬಿಡುವ ಅಧಿಕಾರ ಆ ಮಂಡಳಿ ಸುಪರ್ದಿಗೆ ಹೋಗುತ್ತದೆ’; ‘ಮಂಡಳಿ ರಚಿಸದಂತೆ ನಾವು ಕೇಂದ್ರಕ್ಕೆ ಮನವಿ ಸಲ್ಲಿಸುತ್ತ ಬಂದಿದ್ದೇವೆ. ಆದರೆ ಸುಪ್ರೀಂ ಕೋರ್ಟ್‌ ಇದ್ದಕ್ಕಿದ್ದಂತೆ ಮಂಡಳಿ ರಚನೆಗೆ ಆದೇಶಿಸಿದೆ. ಮಂಡಳಿಯಲ್ಲಿ ತಮಿಳುನಾಡಿನ ಒಂದಿಬ್ಬರು ಸದಸ್ಯರನ್ನು ತಂದು ಹಾಕಿದರೆ ನಾವು ಎಲ್ಲವನ್ನೂಕಳೆದುಕೊಂಡಂತೆ’; ‘ಕಾವೇರಿ ಮೇಲುಸ್ತುವಾರಿ ಸಮಿತಿ ಪರಿಣತರ ಸಮಿತಿಯಾಗಿದ್ದು ಅದರ ಮುಂದೆ ಹೋಗಿ ಎಂದು ಕರ್ನಾಟಕಕ್ಕೆ ಸ್ವತಃ ಸುಪ್ರೀಂ ಕೋರ್ಟ್‌ ಸೂಚಿಸಿತ್ತು. ಆಗ ಹೀಗೆ ಹೇಳಿದವರೇ ಈಗ ಸಮಿತಿಯ ಆದೇಶವನ್ನು ಯಾವುದೇ ಮಾರ್ಗಸೂಚಿ ಇಲ್ಲದೆ ಬದಲಿಸಿದ್ದು ಶುದ್ಧ ತಪ್ಪು.’[೨೬]

ಕಾವೇರಿ ನಿರ್ವಹಣಾ ಮಂಡಳಿಯು ಅನುಸರಿಸುವ ನಿಯಮ

[ಬದಲಾಯಿಸಿ]
  • ಸುಪ್ರೀಂಕೋರ್ಟ್‌ ಆದೇಶದ ಅನ್ವಯ ನೀರು ನಿರ್ವಹಣಾ ಮಂಡಳಿ ಅಸ್ತಿತ್ವಕ್ಕೆ ಬಂದರೆ ಕಾವೇರಿ ನದಿ ಪಾತ್ರದಲ್ಲಿನ ಕೃಷಿ ವಿಸ್ತರಣಾ ಚಟುವಟಿಕೆಗೆ ಮತ್ತು ಹೆಚ್ಚುವರಿ ನೀರು ಬಳಕೆಗೆ ಕಡಿವಾಣ ಬೀಳುವುದು.ಆಯಾ ಜಲವರ್ಷದಲ್ಲಿ ಮುಂಗಾರು ಹಾಗೂ ಹಿಂಗಾರು ಅವಧಿಯಲ್ಲಿ ಕಾವೇರಿ ಕಣಿವೆಯ ರಾಜ್ಯಗಳು ಇಂತಿಷ್ಟೇ ಬಿತ್ತನೆ ಮಾಡಬೇಕು ಎಂದು ಐತೀರ್ಪು ಹೇಳಿದೆ.
  • ಐತೀರ್ಪಿಗೆ ಮುನ್ನ ನ್ಯಾಯಮಂಡಳಿಗೆ ಸಲ್ಲಿಸಿದ ದಾಖಲೆಗಿಂತ ಎಲ್ಲಾ ರಾಜ್ಯಗಳೂ ವಾಸ್ತವವಾಗಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ, ಕಬ್ಬು, ಅರೆ ನೀರಾವರಿ ಬೆಳೆ ಬೆಳೆಯುತ್ತಿವೆ. ನಿರ್ವಹಣಾ ಮಂಡಳಿ ರಚನೆಯಾದ ಬಳಿಕ ಐತೀರ್ಪಿನಲ್ಲಿ ನಿಗದಿಪಡಿಸಿದ ಬೆಳೆಗಿಂತ ಹೆಚ್ಚಿನ ಬೆಳೆ ತೆಗೆಯಲು ಅವಕಾಶ ಇರುವುದಿಲ್ಲ. ಒಂದು ವೇಳೆ ಐತೀರ್ಪು ಉಲ್ಲಂಘಿಸಿ ಬೆಳೆದರೆ ನೀರು ಪೂರೈಸದೇ ಇರುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸುವ ಅಧಿಕಾರ ಮಂಡಳಿಗೆ ಇರುತ್ತದೆ.
  • ಐತೀರ್ಪಿನ ಅನುಸಾರ ಕರ್ನಾಟಕಕ್ಕೆ 270 ಟಿಎಂಸಿ ಅಡಿ ನೀರು ಬಳಸುವ ಅಧಿಕಾರ ಇದೆ. ಈ ಪೈಕಿ ಪ್ರತಿ ಜಲಾಶಯಕ್ಕೆ ಇಂತಿಷ್ಟು ನೀರು ಎಂದು ಹಂಚಿಕೆ ಮಾಡಲಾಗಿದೆ. ಇದಲ್ಲದೇ ಸಣ್ಣ ನೀರಾವರಿ ಯೋಜನೆಯ ಕೆರೆಗಳಿಗೆ ವಾರ್ಷಿಕ 63.83 ಟಿಎಂಸಿ ಅಡಿ ನೀರು ಮೀಸಲಿಟ್ಟಿದೆ.ನಿರ್ವಹಣಾ ಮಂಡಳಿ ರಚನೆಯಾದ ಬಳಿಕ ಈ ನೀರನ್ನು ಜಲಾಶಯಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳುವ ಅವಕಾಶ ಇರುವುದಿಲ್ಲ. ಸಣ್ಣ ನೀರಾವರಿ ಕೆರೆಗಳು, ಚೆಕ್‌ ಡ್ಯಾಂಗಳಲ್ಲಿ ಸಂಗ್ರಹಿಸಿಕೊಟ್ಟುಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ.
  • ‘ಸಣ್ಣ ನೀರಾವರಿ ಕೆರೆಗಳು, ಕಿರುಜಲಾಶಯಗಳಲ್ಲಿ ಹೂಳು ತುಂಬಿರುವುದರಿಂದಾಗಿ 63.83 ಟಿಎಂಸಿ ಅಡಿ ಸಂಗ್ರಹಿಸುವ ಸಾಮರ್ಥ್ಯವಿಲ್ಲ. ಕಣ್ವ ಅಣೆಕಟ್ಟಿಗೆ 0.42 ಟಿಎಂಸಿ ಅಡಿ, ಮಂಚನ ಬೆಲೆ ಜಲಾಶಯಕ್ಕೆ 0.62 ಟಿಎಂಸಿ ಅಡಿ, ನುಗು ಅಣೆಕಟ್ಟೆಗೆ 3.61 ಟಿಎಂಸಿ ಅಡಿ, ಸುವರ್ಣಾವತಿ ಜಲಾಶಯಕ್ಕೆ 2.39 ಟಿಎಂಸಿ ಅಡಿ, ತಾರಕ ಅಣೆಕಟ್ಟೆಯಲ್ಲಿ 1.13 ಟಿಎಂಸಿ ಅಡಿ ನೀರನ್ನು ಸಣ್ಣ ನೀರಾವರಿ ಯೋಜನೆಗಳಡಿ ಹಂಚಿಕೆ ಮಾಡಲಾಗಿದೆ. ಗುಂಡಾಳ್‌, ವಾಟೆಹೊಳೆ, ಚಿಕ್ಕಹೊಳೆ ಕಿರು ಜಲಾಶಯಗಳಿಗೆ ಹಂಚಿಕೆ ಮಾಡಿರುವ ನೀರು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯವಿಲ್ಲ.
  • ಕೃಷಿ ವಿಸ್ತರಣೆಗೆ ಅಡ್ಡಿ: ಮುಂಗಾರು ಹಂಗಾಮಿನಲ್ಲಿ 7.67 ಲಕ್ಷ ಎಕರೆಯಲ್ಲಿ ಮಾತ್ರ ಭತ್ತ ಬೆಳೆಯಬಹುದು. ಅಲ್ಲದೇ ಸಣ್ಣ ನೀರಾವರಿ ಕೆರೆಗಳ ನೀರನ್ನು ಆಶ್ರಯಿಸಿ 3.4 ಲಕ್ಷ ಎಕರೆ ಭತ್ತ ಬೆಳೆಯಬಹುದು. ಇದಕ್ಕಿಂತ ಹೆಚ್ಚಿಗೆ ಭತ್ತ ಬೆಳೆಯುವಂತಿಲ್ಲ.ಕೆಆರ್‌ಎಸ್‌ ಅಚ್ಚುಕಟ್ಟು ಪ್ರದೇಶದಲ್ಲಿ 40 ಸಾವಿರ ಎಕರೆ ಪ್ರದೇಶದಲ್ಲಿ ಮಾತ್ರ ಕಬ್ಬು ಬೆಳೆಯಬಹುದು. ಉಳಿದ ಅಣೆಕಟ್ಟಿನ ವ್ಯಾಪ್ತಿಯಲ್ಲಿ ಬೆಳೆಯುವಂತಿಲ್ಲ ಎಂಬ ನಿರ್ಬಂಧ ಇರುವುದು ಸಮಸ್ಯೆಯಾಗಿ ಕಾಡಲಿದೆ ಎಂದು ಮೂಲಗಳು ತಿಳಿಸಿವೆ. ಬೇಸಿಗೆಯಲ್ಲಿ ಕಬ್ಬು ಮತ್ತು ಭತ್ತ ಬೆಳೆಯುವಂತಿಲ್ಲ. ಕೇವಲ ಅರೆ ನೀರಾವರಿ ಬೆಳೆಗಳಿಗೆ ಅವಕಾಶ ಇದೆ. ನೀರಿನ ಕೊರತೆ ಇದ್ದಾಗ ಎರಡನೇ ಬೆಳೆ ಬೆಳೆಯುವುದಕ್ಕೆ ಸಂಪೂರ್ಣ ಕಡಿವಾಣ ಬೀಳಲಿದೆ.

ಕಾವೇರಿ ಪಾತ್ರದಲ್ಲಿ ನಿಗದಿಪಡಿಸಲಾದ ಬೆಳೆ ಪ್ರಮಾಣ

[ಬದಲಾಯಿಸಿ]
ಭತ್ತ ಕಬ್ಬು ಅರೆನೀರಾವರಿ ಬೆಳೆ ಬೇಸಿಗೆ ಅರೆನೀರಾವರಿ ಬೆಳೆ ಒಟ್ಟು
7.67 ಲಕ್ಷ ಎಕರೆ 40 ಸಾವಿರ ಎಕರೆ 7.15 ಲಕ್ಷ ಎಕರೆ 3.62 ಲಕ್ಷ ಎಕರೆ 18.85 ಲಕ್ಷ ಎಕರೆ

ಕರ್ನಾಟಕಕ್ಕೆ ನೀರಿನ ಹಂಚಿಕೆ

[ಬದಲಾಯಿಸಿ]
ಟಿಎಂಸಿ ಅಡಿಗಳಲ್ಲಿ
ಕೆ.ಆರ್.ಎಸ್ ಕಬಿನಿ ಹೇಮಾವತಿ ಹಾರಂಗಿ ಅಣೆಕಟ್ಟು ಕಾಲುವೆ ಸಣ್ಣ ನೀರಾವರಿ ಕೆರೆ ಹೆಚ್ಚುವರಿ ಬಳಕೆ ಕೈಗಾರಿಕೆ ಒಟ್ಟು
38.98 11.99 43.67 8.06 38 68.83 17.64 1.85 270

[೨೮]

ನಾರಿಮನ್ ನೀರು ಬಿಡಲು ವಿರೋಧ

[ಬದಲಾಯಿಸಿ]
  • ನ್ಯಾಯಮೂರ್ತಿ ದೀಪಕ್ ಮಿಶ್ರಾ;
  • ಕಾವೇರಿ ಜಲ ವಿವಾದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ ನೀರಿನ ಸಮಸ್ಯೆಯ ಬಗ್ಗೆ ಕರ್ನಾಟಕದ ಪರ 75 ನಿಮಿಷಗಳ ಕಾಲ ವಾದ ಮಂಡಿಸಿದ 87ರ ವಯೋವೃದ್ಧ ನಾರಿಮನ್‌, ನೀರು ಬಿಡಲೇಬೇಕು ಎಂಬ ಆದೇಶ ಹೊರ ಬೀಳಲಿದೆ ಎಂಬುದು ಖಾತರಿಯಾದಾಗ
  • ‘ವಸ್ತು ಸ್ಥಿತಿ ಏನು ಎಂಬುದನ್ನು ಎಲ್ಲರೂ ಅರಿಯಬೇಕು. ನಾನೊಬ್ಬ ವಕೀಲನಾಗಿ ನಿಮಗೆ ಈ ಮಾತು ಹೇಳುತ್ತಿಲ್ಲ. ನನ್ನ ಅನುಭವದ ಆಧಾರದಲ್ಲಿ ಹೇಳುತ್ತಿದ್ದೇನೆ. ಬೆಂಗಳೂರಿಗಾಗಿ ಕರ್ನಾಟಕ ಕಾವೇರಿ ನೀರನ್ನೇ ಅವಲಂಬಿಸಿದೆ. ಇದನ್ನು ಅರ್ಥೈಸಿಕೊಳ್ಳಬೇಕು’ ಎಂದು ಅವರು ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರಿಗೆ ತಿಳಿಸಿದರು.‘ನಮಗೆ ಮತ್ತಷ್ಟು ನೀರು ಬಿಡಲು ಮಧ್ಯಂತರ ಆದೇಶ ನೀಡಿ’ ಎಂದು ತಮಿಳುನಾಡು ಪರ ವಕೀಲರು ಕೋರುತ್ತಿದ್ದಂತೆಯೇ ತೀವ್ರ ವಿರೋಧ ವ್ಯಕ್ತಪಡಿಸಿ ಆಕ್ರೋಶದಿಂದಲೇ ಮಾತಿಗಿಳಿದ ನಾರಿಮನ್‌, ‘ನಾವು ಮದ್ರಾಸ್‌ಗೆ (ಈಗಿನ ಚೆನ್ನೈ) ಕೃಷ್ಣಾ ನದಿಯ 5 ಟಿಎಂಸಿ ಅಡಿ ನೀರನ್ನು ಸ್ವಯಂ ಪ್ರೇರಣೆಯಿಂದಲೇ ನೀಡಿದ್ದೇವೆ. ಅದೂ ಮತ್ತೊಂದು ಕಣಿವೆ ವ್ಯಾಪ್ತಿಯ ನಗರ ಎಂಬುದನ್ನೂ ಮರೆತು ನೀರು ಒದಗಿಸಿದ್ದೇವೆ’ ಎಂದು ನೆನಪಿಸಿದರು.(ಚನ್ನೈಗೆ ತೀವ್ರ ಕುಡಿವ ನೀರಿನ ಕೊರತೆ ಇದ್ದು,ಆಗ ಸದ್ಭಾವನೆಯಿಂದ ಕರ್ನಾಟಕ, ಕೃಷ್ಣಾ ನದಿಯ 5 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಬಿಡುವ ಒಪ್ಪಂದ ಮಾಡಿಕೊಂಡಾಗ ಕಾವೇರಿ ನೀರಿನಲ್ಲಿ 10 ಟಿಎಂಸಿ ನೀರು ಕೇಳಬೇಕಿತ್ತು. ಮಾನವೀಯತೆಯ ಹೆಸರಲ್ಲಿ ವ್ಯವಹಾರ ತಪ್ಪಿದೆ.)[೨೯]

ನೀರಿನ ಲಭ್ಯತೆ ಮತ್ತು ಕುಡಿವ ನೀರಿನ ಅಗತ್ಯ

[ಬದಲಾಯಿಸಿ]
  • ಟಿಎಂಸಿ-ಅಡಿ ಎಂದು ಓದಿಕೊಳ್ಳಿ:
  • ಪ್ರಸ್ತುತ ಕಾವೇರಿ ಕಣಿವೆಯ ನಾಲ್ಕೂ ಜಲಾಶಯಗಳಲ್ಲಿ ಲಭ್ಯವಿರುವ ನೀರಿನ ಪ್ರಮಾಣ ಕೇವಲ 26.17 ಟಿಎಂಸಿ ನೀರಿನ ಸಂಗ್ರಹವಿದೆ. ಇದೀಗ ಕಾವೇರಿ ಮೇಲುಸ್ತುವಾರಿ ಸಮಿತಿ ಮುಂದಿನ 10 ದಿನ ಒಟ್ಟಾರೆ 2.59 ಟಿಎಂಸಿ ತಮಿಳುನಾಡಿಗೆ ಹರಿಸಲು ಆದೇಶ ನೀಡಿದೆ. ಜತೆಗೆ ಬೇಸಿಗೆ ಸೇರಿ ಮುಂದಿನ 10 ತಿಂಗಳಲ್ಲಿ ಅಂದಾಜು 3 ಟಿಎಂಸಿ ನೀರು ಆವಿಯಾಗುತ್ತದೆ. ಹೀಗಾಗಿ ವಾಸ್ತವವಾಗಿ ಲಭ್ಯವಾಗುವುದು 20.58 ಟಿಎಂಸಿ ನೀರು ಮಾತ್ರ. ಈ ನಡುವೆ ಮತ್ತೆ ತಮಿಳುನಾಡಿಗೆ ನೀರು ಪೂರೈಸುವಂತೆ ಮುಂದಿನ 3 ತಿಂಗಳಲ್ಲಿ ಆದೇಶಿಸಿದರೆ, ಲಭ್ಯವಿರುವ ನೀರು ಕೇವಲ ಬೆಂಗಳೂರಿನ ಅಗತ್ಯತೆಯನ್ನೂ ಪೂರೈಸಲಾರದು. ವಾಸ್ತವವಾಗಿ ಕಾವೇರಿ ಜಲ ಮೂಲಗಳಿಂದ ಬೆಂಗಳೂರಿಗೆ ಮಾತ್ರ ನೀರು ಪೂರೈಸಲು ಸಾಧ್ಯವಿಲ್ಲ. ನಗರ ಮಾತ್ರವಲ್ಲದೆ, ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜನತೆಯ ಜೂನ್‌ ವರೆಗೆ ಕುಡಿಯುವ ನೀರು ನೀಡಬೇಕು.ಇದಕ್ಕಾಗಿ ಒಟ್ಟಾರೆ, ಬಳಕೆಗೆ 28 ಟಿಎಂಸಿ ನೀರು ಬೇಕು. ಹೀಗಾಗಿ ಮೇಲುಸ್ತುವಾರಿ ಸಮಿತಿ ಆದೇಶ ಕುಡಿಯುವ ನೀರಿಗಾಗಿ ಕಾವೇರಿ ನಂಬಿಕೊಂಡಿರುವ ಜನತೆ ಪಾಲಿಗೆ ಆಘಾತ:

ದಿನಾಂಕ 19-9-2016 ರಲ್ಲಿದ್ದಂತೆ

[ಬದಲಾಯಿಸಿ]
  • ದಿನಾಂಕ 19-9-2016:
  • 27 ಟಿಎಂಸಿ ಅಡಿ ನೀರು ಕೇವಲ ಕುಡಿಯುವ ಬಳಕೆಗೆ ಬೇಕು.
ಅಣೆಕಟ್ಟು ನೀರಿನ ಲಭ್ಯತೆ(ಟಿಎಂಸಿ ಅಡಿ) ಕಳೆದ ವರ್ಷ(ಟಿಎಂಸಿ ಅಡಿ)
ಕೆ ಆರ್ ಎಸ್ 8.31 23.43
ಹೇಮಾವತಿ 6.32 17.50
ಹಾರಂಗಿ 3.95 5.17
ಕಬಿನಿ 7.59 10.82
ಒಟ್ಟು 26.17 56.92
ಅನುಪಯುಕ್ತ 5.00 ಮೃತಸಂಗ್ರಹ

ಬೆಂಗಳೂರಿನ ಪರಿಸ್ಥಿತಿ

[ಬದಲಾಯಿಸಿ]
  • ಬೆಂಗಳೂರು ಜಲಮಂಡಳಿಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಈಗ ನಾಲ್ಕೂ ಜಲಾಶಯಗಳಲ್ಲೂ ಬಳಕೆಗೆ ಲಭ್ಯವಿರುವ ನೀರು ಬೇಡಿಕೆಗಿಂತ ಕೆಳ ಮಟ್ಟಕ್ಕೆ ಕುಸಿದಿದೆ. ಈ ನಡುವೆ ಆವಿಯಾಗುವುದು ಮತ್ತಿತರ ಕಾರಣಗಳಿಗೆ ನೀರಿನ ಲಭ್ಯತೆಯ ಪ್ರಮಾಣ ಕುಸಿಯಲಿದೆ. ಹೀಗಾಗಿ ಕೇವಲ ಬೆಂಗಳೂರಿನ ಅಗತ್ಯತೆಗೆ ಪೂರೈಸಲಷ್ಟೇ ಹಾಲಿ ಇರುವ ನೀರು ಸಾಕಾಗುತ್ತದೆ. ಬೇರೆ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲೂ ಸಹ ನೀರಿರುವುದಿಲ್ಲ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. 800 ಚ.ಕಿ.ಮೀ. ವಿಶಾಲ ಬೆಂಗಳೂರಿನ ಇತರೆ ಜಲಮೂಲಗಳು ಭಾಗಶಃ ಬತ್ತಿ ಹೋಗಿವೆ. ಶತಮಾನದಿಂದ ಕುಡಿಯುವ ನೀರು ಒದಗಿಸುತ್ತಿದ್ದ ತಿಪ್ಪಗೊಂಡನಹಳ್ಳಿ ಜಲಾಶಯವೂ 2013ರಲ್ಲೇ ನಗರದ ಪಾಲಿಗೆ ಬಾಗಿಲು ಮುಚ್ಚಿದೆ. ಪರಿಣಾಮ ನಿತ್ಯ 600 ಕ್ಯೂಸೆಕ್‌ನಷ್ಟು ಭಾರಿ ಪ್ರಮಾಣದ ನೀರಿಗೆ ಕಾವೇರಿಯನ್ನೇ ಅವಲಂಬಿಸಬೇಕು.
  • ಇದೀಗ ಕಾವೇರಿ ನೀರು ತಮಿಳುನಾಡಿಗೆ ಹರಿಯುವುದರಿಂದ ಉದ್ಯಾನನಗರಿಗೆ ಬರ ಎದುರಾಗಲಿದೆ. ಪ್ರಸ್ತುತ ನಾಲ್ಕೂ ಜಲಾಶಯಗಳ ನೀರಿನ ಮಟ್ಟ ಪಾತಾಳಕ್ಕೆ ಅಂಟಿದೆ. ಕಳೆದ ವರ್ಷ ಸೆ. 19ಕ್ಕೆ ಕೆಆರ್‌ಎಸ್‌ನಲ್ಲಿ ಕಳೆದ ವರ್ಷ 23.43 ಟಿಎಂಸಿ ನೀರಿತ್ತು. ಇದೀಗ ಸೆ.19 ರ ಮಾಹಿತಿ ಪ್ರಕಾರ ಕೇವಲ 8.31 ಟಿಎಂಸಿ ನೀರು ಮಾತ್ರ ನೀರು ಲಭ್ಯವಿದೆ. ಹೇಮಾವತಿ 6.32 ಟಿಎಂಸಿ, ಕಬಿನಿ 7.59 ಟಿಎಂಸಿ, ಹಾರಂಗಿ 3.95 ಟಿಎಂಸಿ ಸೇರಿ ಕೇವಲ 26.17 ಟಿಎಂಸಿ ನೀರು ಮಾತ್ರ ಲಭ್ಯವಿದೆ.
  • ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಜೂನ್‌ವರೆಗೆ 28 ಟಿಎಂಸಿ ನೀರು ಬೇಕು ಎಂದು ಈಗಾಗಲೇ ಸರ್ಕಾರಕ್ಕೆ ಜಲಮಂಡಳಿ ಪ್ರಸ್ತಾವನೆ ಸಲ್ಲಿಸಿದೆ. ದರೆ, ಈ ನೀರು ಪೂರೈಕೆ ಮಾಡುವ ಸ್ಥಿತಿಯಲ್ಲೂ ಸರ್ಕಾರವಿಲ್ಲ. ಹೀಗಾಗಿ ಉಂಟಾಗಬಹುದಾದ ಸಮಸ್ಯೆ ನಿವಾರಣೆಗಾಗಿ ಪ್ರಸ್ತುತ ಎರಡು ದಿನಕ್ಕೊಮ್ಮೆ ಬಿಡುತ್ತಿರುವ ನೀರನ್ನು ಮೂರ್‍ನಾಲ್ಕು ದಿನಗಳಿಗೆ ಒಮ್ಮೆ ನೀಡಬೇಕಾಗುತ್ತದೆ.

ಬೆಂಗಳೂರು ನೀರು ಯೋಜನೆ

[ಬದಲಾಯಿಸಿ]

ದಿನಾಂಕ:24 ಸೆಪ್ಟಂಬರ್,2016

  • ಬೆಂಗಳೂರಿಗೆ ಕಾವೇರಿ ನೀರಿನ ಸರಬರಾಜು ಯೋಜನೆ.
ಯೋಜನೆ ಆರಂಭವಾದ ವರ್ಷ ಸಾಮಥ್ರ್ಯ ಖರ್ಚಾದ ಹಣ
ಮೊದಲ ಹಂತ 1974 13.5 ಕೋಟಿ ಲೀ. 80 ಕೋಟಿ ರೂ.
2 ನೇ ಹಂತ 1983 13.5 ಕೋಟಿ ಲೀ.. 135 ಕೋಟಿ ರೂ.
3ನೇ ಹಂತ 1993 27 ಕೋಟಿ ಲೀ. 360 ಕೋಟಿ ರೂ.
4ನೇ ಹಂತ 1 ನೇ ಘಟ್ಟ 2002 27 ಕೋಟಿ ಲೀ. 1072 ಕೋಟಿ ರೂ
4ನೇ ಹಂತ 2 ನೇ ಘಟ್ಟ 2012 50 ಕೋಟಿ ಲೀ. 1759 ಕೋಟಿ ರೂ
ಒಟ್ಟು +14ಕೋ.ಲೀ? 131 ಕೋಟಿ ಲೀ. 3406 ಕೋಟಿ ರೂ
  • ಕಾವೇರಿ ಐದು ಹಂತದ ಯೋಜನೆಗಳಿಂದ ನಗರಕ್ಕೆ ಪ್ರತಿದಿನ 145 ಕೋಟಿ ಲೀಟರ್‌ ಪೂರೈಕೆ ಮಾಡಲಾಗುತ್ತಿದೆ. ಬೆಂಗಳೂರು ಒಂದಕ್ಕೇ ಈ ಲೆಕ್ಕದಲ್ಲಿ ವರ್ಷಕ್ಕೆ ಸುಮಾರು 19 ಟಿ.ಎಂ.ಸಿ.(18.7) ನೀರು ಬೇಕಾಗುವುದು.

[೩೦]

ನಗರಗಳ ನೀರಿನ ಬೇಡಿಕೆ

[ಬದಲಾಯಿಸಿ]
  • ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ಅವರು ಕೊಟ್ಟಿರುವ ಮಾಹಿತಿ:
  • ಬೆಂಗಳೂರಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡಬೇಕಾದರೆ ನಿತ್ಯ 600 ಕ್ಯೂಸೆಕ್‌ ನೀರು ಬೇಕು. ಮುಂದಿನ 10 ತಿಂಗಳಲ್ಲಿ 15 ಟಿಎಂಸಿ ನೀರು ಕೇವಲ ಬೆಂಗಳೂರಿಗೇ ಬೇಕು. ಇದಲ್ಲದೇ,
  • ನಿತ್ಯ ಮೈಸೂರು ನಗರಕ್ಕೆ 120 ಕ್ಯೂಸೆಕ್‌, ಚಾಮರಾಜನಗರ 160 ಕ್ಯೂಸೆಕ್‌, ರಾಮನಗರ 100 ಕ್ಯೂಸೆಕ್‌, ಮಂಡ್ಯ 200 ಕ್ಯೂಸೆಕ್‌ ನೀರು ಪೂರೈಕೆ ಮಾಡಬೇಕು. ಇದರ ನಡುವೆ ಮಂಡ್ಯ ರೈತರ ಕೃಷಿ ಅಗತ್ಯತೆಗೂ ನೀರು ಮೀಸಲಿಡಬೇಕು. ಹೀಗಾಗಿ ಸಮಸ್ಯೆ ತೀವ್ರಗೊಳ್ಳಲಿದೆ.
  • ಬೆಂಗಳೂರಿಗೆ ಪ್ರತಿ ತಿಂಗಳು 1.5 ಟಿಎಂಸಿಯಂತೆ 15 ಟಿಎಂಸಿ ಹಾಗೂ ಇತರೆ ನಗರಗಳಿಗೆ 12 ಟಿಎಂಸಿ ಸೇರಿ 27 ಟಿಎಂಸಿ ಕೇವಲ ಕುಡಿಯುವ ಬಳಕೆಗೆ ಬೇಕು.
  • ಈ ಬಗ್ಗೆ ಸರ್ಕಾರಕ್ಕೆ ಜಲಮಂಡಳಿ ಅಧ್ಯಕ್ಷರು ಬೇಡಿಕೆ ಇಟ್ಟಿದ್ದಾರೆ.
  • ಇದೀಗ ಮೇಲುಸ್ತುವಾರಿ ಸಮಿತಿ ತೀರ್ಪಿ ನಿಂದ ಸಮಸ್ಯೆ ಉಂಟಾಗಲಿದ್ದು, ಸರ್ಕಾರವು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನೆ ಮಾಡಲಿದೆ. ಸುಪ್ರೀಂ ಆದೇಶದ ಮೇಲೆ ಮುಂದಿನ ನಿರ್ಧಾರ ಮಾಡುತ್ತೇವೆ.[೩೧]
(ಒಳಹರಿವು ಈಗ 6000 ಕ್ಯೂಸೆಕ್ಷ್ ಇದೆ. ಡಿಸೆಂಬರ್‍ ಅಂತ್ಯದ ವರೆಗೆ ಅಂದಾಜು ಸರಾಸರಿ 2500 ಕ್ಯೂಸೆಕ್ಸ್ ಹಿಡಿದರೆ:2500X100 ದಿನ (ಸೆಪ್ಟಂ.21ರಿಂದ)=2,50,000ಕ್ಯೂಸೆಕ್ಸ್ =21.69 ಟಿಎಂಸಿ ಅಡಿ ಬರುವುದು ಅದರಲ್ಲಿ ಶೇ 50 ಆವಿ ಮತ್ತು ಇಂಗುವಿಕೆ ಹೋದರೆ 10.5 ಟಿಎಂಸಿ ಉಳಿಯುವುದು. ಈಗಿರುವ 26 ಟಿಎಂಸಿ ಅಡಿ ಸೇರಿಸಿದರೆ ತಳಮಟ್ಟದ ನೀರು ಬಿಟ್ಟರೆ ಅಲ್ಲಂದ ಅಲ್ಲಿಗೆ ಸರಿಯಾಗಬಹುದು.ಆದರೆ ವಾದ ಮಂಡಿಸಿದಾಗ ನ್ಯಾಯ ನೀಡುವವರು 'You die! Let others live' ಎಂದಿರುವುದು, ನಾರಿಮನ್ ಹೇಳಿದಂತೆ ಒಪ್ಪತಕ್ಕದ್ದಲ್ಲ)

ನೀರಿನ ಹಂಚಿಕೆ- ಬೇಡಿಕೆ

[ಬದಲಾಯಿಸಿ]
  • ಶೇ.23ರಷ್ಟು ಮಳೆ ಕೊರತೆ
  • ಕಾವೇರಿ ಜಲಾನಯನ ಪ್ರದೇಶದಲ್ಲಿ ಜೂನ್‌ 1ರಿಂದ ಸೆಪ್ಟೆಂಬರ್‌ 19ರವರೆಗೆ ವಾಡಿಕೆಗಿಂತ ಶೇ. 15ರಷ್ಟು ಮಳೆ ಕೊರತೆ ಇದೆ. ಅದೇ ರೀತಿ, ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಶೇ. 23ರಷ್ಟು ಮಳೆ ಅಭಾವ ಇದೆ.
  • ಕಾವೇರಿಗೆ ರಾಜ್ಯಗಳಲ್ಲಿ ಮಳೆಯಿಂದ ನೀರಿನ ಕೊಡುಗೆ:
  • ಕರ್ನಾಟಕ- 425 ಟಿಎಂಸಿ
  • ತಮಿಳುನಾಡು- 252 ಟಿಎಂಸಿ
  • ಕೇರಳ- 113 ಟಿಎಂಸಿ
  • ಒಟ್ಟು- 790 ಟಿಎಂಸಿ
  • ಕರ್ನಾಟಕದ ನೀರು ಹಂಚಿಕೆ:
  • ವರ್ಷಕ್ಕೆ ಕರ್ನಾಟಕದಿಂದ ತಮಿಳುನಾಡಿಗೆ ಹರಿಸಬೇಕಾದ ನೀರು- 192 ಟಿಎಂಸಿ
  • ಜೂನ್‌ 1ರಿಂದ ಆಗಸ್ಟ್‌ 31ರವರೆಗೆ ರಾಜ್ಯದಿಂದ ತಮಿಳುನಾಡಿಗೆ ಹರಿದ ನೀರು- 36 ಟಿಎಂಸಿ
  • ಬೆಂಗಳೂರಿಗೆ ಕಾವೇರಿಯಿಂದ ಬರುವ ನೀರು ತಿಂಗಳಿಗೆ- 1.50 ಟಿಎಂಸಿ ಅಡಿ.-ವರ್ಷಕ್ಕೆ 18 ಟಿಎಂಸಿ ಅಡಿ
  • ಕಾವೇರಿ ವ್ಯಾಪ್ತಿಯ ಉಳಿದ ನಗರ-ಪಟ್ಟಣಗಳಿಗೆ ತಿಂಗಳಿಗೆ- 1.50 ಟಿಎಂಸಿ ಅಡಿ.- ವರ್ಷಕ್ಕೆ 18 ಟಿಎಂಸಿ ಅಡಿ
  • ವರ್ಷದಲ್ಲಿ ನಾಲ್ಕೂ ಜಲಾಶಯಗಳಿಂದ ಆವಿಯಾಗಿ ಹೋಗುವ ನೀರು- 3 ಟಿಎಂಸಿಅಡಿ. ವರ್ಷಕ್ಕೆ 3 ಟಿಎಂಸಿ ಅಡಿ
  • ಬಂಡಿಪುರ, ನಾಗರಹೊಳೆ ಮತ್ತಿತರ ಧಾಮಗಳಿಗೆ (ವಾರ್ಷಿಕ)- 3 ಟಿಎಂಸಿಅಡಿ. (ಎಲ್ಲಾ ಒಟ್ಟು 42 ಟಿಎಂಸಿ ಅಡಿ ಕೃಷಿಯೇತರ ಅಗತ್ಯ)

ಜಲಾಶಯಗಳ ನೀರಿನಮಟ್ಟ (Sep 20, 2016)

[ಬದಲಾಯಿಸಿ]
  • ಕರ್ನಾಟಕದಲ್ಲಿ ನಾಲ್ಕೂ ಜಲಾಶಯಗಳು ಸೇರಿ 26 ಟಿಎಂಸಿ ನೀರು ಸಂಗ್ರಹವಾಗಿದೆ. ಆದರೆ, ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ ಸೋಮವಾರಕ್ಕೆ 54 ಟಿಎಂಸಿ ಇದೆ. ಆದಾಗ್ಯೂ ಕರ್ನಾಟಕದಿಂದ ಬರಬೇಕಾದ ನೀರು ಬಂದಿಲ್ಲ ಎಂದು ಆ ರಾಜ್ಯ ಕೋರ್ಟ್‌ ಮೊರೆ ಹೋಗಿದೆ.
ಜಲಾಶಯ ನೀರಿನಮಟ್ಟ (ಟಿಎಂಸಿನಲ್ಲಿ) ಒಳಹರಿವು ಹೊರಹರಿವು (ಕ್ಯೂಸೆಕ್‌ಗಳಲ್ಲಿ)
ಕೆಆರ್‌ಎಸ್‌ 8.31 6,669 252
ಕಬಿನಿ 7.59 2,000 2,500
ಹಾರಂಗಿ 3.95 3008 3,900
ಹೇಮಾವತಿ 6.32 1233 3000

[೩೨]

ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ

[ಬದಲಾಯಿಸಿ]
  • 23 ಸೆಪ್ಟಂಬರ್, 2016
  • ಕಾವೇರಿ ಕೊಳ್ಳದ ಕೆಆರ್‌ಎಸ್‌, ಹೇಮಾವತಿ, ಹಾರಂಗಿ ಮತ್ತು ಕಬಿನಿ ಜಲಾಶಯಗಳ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳಲು ವಿಧಾನ ಪರಿಷತ್‌ನಲ್ಲಿ ನಿರ್ಣಯ ಅಂಗೀಕರಿಸಲಾಯಿತು.[೩೩]
  • ಕಾವೇರಿ ಕೊಳ್ಳದ ಕೆಆರ್‌ಎಸ್‌, ಹೇಮಾವತಿ, ಹಾರಂಗಿ ಮತ್ತು ಕಬಿನಿ ಜಲಾಶಯಗಳ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳಲು ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಲಾಯಿತು.
  • 23 ಸೆಪ್ಟಂಬರ್, 2016, ಮಧ್ಯಾಹ್ನ 12.50ಕ್ಕೆ ವಿಧಾನಮಂಡಲ ಕಲಾಪ ಆರಂಭವಾಯಿತು. ಅಗಲಿದ ರಾಜಕೀಯ ಮುಖಂಡರು ಹಾಗೂ ಹುತಾತ್ಮ ಯೋಧರಿಗೆ ಉಭಯ ಸದನಗಳಲ್ಲಿ ಸಂತಾಪ ಸೂಚಿಸಲಾಯಿತು. ವಿಧಾನ ಪರಿಷತ್‌ನಲ್ಲಿ ಮೊದಲಿಗೆ ನಿರ್ಣಯ ಮಂಡಿಸಲಾಯಿತು. ಪರಿಷತ್‌ನಲ್ಲಿ ಎ. ರವಿ ನಿರ್ಣಯ ಮಂಡಿಸಿದರು. ಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ನಿರ್ಣಯ ಅನುಮೋದಿಸಿದರು. ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಜಗದೀಶ ಶೆಟ್ಟರ್‌ ನಿರ್ಣಯ ಮಂಡಿಸಿದರು. ಜೆಡಿಎಸ್‌ನ ವೈ.ಎಸ್‌.ವಿ. ದತ್ತ ನಿರ್ಣಯ ಅನುಮೋದಿಸಿದರು.[೩೪]
ವಕೀಲರಿಗೆ ಶುಲ್ಕ

ಕಾವೇರಿ ವಿವಾದದಲ್ಲಿ ವಾದ ಮಂಡಿಸಿದ ವಕೀಲರಿಗೆ ರೂ.36.52 ಕೋಟಿ ಮತ್ತು ಕೃಷ್ಣಾ ವಿವಾದದಲ್ಲಿ ವಾದ ಮಂಡಿಸಿದ ವಕೀಲರಿಗೆ ರೂ.39.69 ಕೋಟಿ ಶುಲ್ಕ ಪಾವತಿಸಲಾಗಿದೆ. ಇದಲ್ಲದೇ, ಮಹಾದಾಯಿ ನ್ಯಾಯಮಂಡಳಿಯಲ್ಲಿ ವಾದ ಮಂಡಿಸಲು ಇದೇ ತಂಡಕ್ಕೆ ರೂ.9.80 ಕೋಟಿ ಶುಲ್ಕ ಪಾವತಿಸಲಾಗಿದೆ.ಕಾವೇರಿ ಹಾಗೂ ಕೃಷ್ಣಾ ನದಿ ನೀರು ಹಂಚಿಕೆ ಕುರಿತಂತೆ ನ್ಯಾಯಮಂಡಳಿಯಲ್ಲಿ ರಾಜ್ಯದ ಪರ ವಾದ ಮಂಡಿಸಲು ಹಾಜರಾದ ಹತ್ತು ಜನ ವಕೀಲರಿಗೆ ಇದುವರೆಗೆ ಸರ್ಕಾರ ಒಟ್ಟು ರೂ.76.21 ಕೋಟಿ ಶುಲ್ಕ ಪಾವತಿಸಿದೆ.[೩೫]

.

ನೀರು ಬಿಡಿ-ಸು.ಕೋರ್ಟು

[ಬದಲಾಯಿಸಿ]
  • ಉಭಯ ರಾಜ್ಯಗಳ ವಾದವನ್ನು ಆಲಿಸಿದ ನ್ಯಾಯಾಲಯವು ಕಾವೇರಿ ವಿವಾದ ವಿಚಾರಣೆಯನ್ನು ಸೆಪ್ಟೆಂಬರ್ 30ಕ್ಕೆ ಮುಂದೂಡಿದೆ. ಅದಲ್ಲದೆ ಸೆ.28, 29 ಮತ್ತು ಸೆ. 30ರಂದು ತಮಿಳುನಾಡಿಗೆ ತಲಾ 6 ಸಾವಿರ ಕ್ಯೂಸೆಕ್ (ಒಟ್ಟು 18 ಸಾವಿರ ಕ್ಯೂಸೆಕ್) ನೀರು ಹರಿಯಬಿಡಬೇಕೆಂದು ಎಚ್ಚರಿಕೆ ದನಿಯಲ್ಲಿ ಆದೇಶಿಸಿದ ನ್ಯಾಯಾಲಯವು ಒಕ್ಕೂಟ ವ್ಯವಸ್ಥೆಯನ್ನು ಉಳಿಸಬೇಕಾಗಿದೆ ಎಂದಿದೆ.[೩೬]
  • ಕಾವೇರಿ ಜಲ ವಿವಾದ ಕುರಿತು ಚರ್ಚಿಸಲು ಕೇಂದ್ರ ಸರ್ಕಾರ ಗುರುವಾರ ಕರೆದಿರುವ ಸಭೆಯಲ್ಲಿ ತೀರ್ಮಾನ ಆಗುವವರೆಗೆ ತಮಿಳುನಾಡಿಗೆ ನೀರು ಬಿಡದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ.ಸರ್ವ ಪಕ್ಷ ಸಭೆಯಲ್ಲಿ ‘ಕಾವೇರಿ ನೀರನ್ನು ಕುಡಿಯುವ ಉದ್ದೇಶಕ್ಕೆ ಹೊರತು ಅನ್ಯ ಉದ್ದೇಶಕ್ಕೆ ಒದಗಿಸುವುದಿಲ್ಲ’ ವಿಧಾನಮಂಡಲ ಉಭಯ ಸದನಗಳಲ್ಲಿ ಕೈಗೊಂಡ ಸರ್ವಾನುಮತದ ನಿರ್ಣಯ ಉಲ್ಲಂಘಿಸಿದರೆ ಸದನದ ಹಕ್ಕುಚ್ಯುತಿಯಾಗುತ್ತದೆ ಎಂದು ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು ಸರ್ಕಾರಕ್ಕೆ ಸಲಹೆ ನೀಡಿದ್ದರು.[೩೭]

ಕೇಂದ್ರ ಸರ್ಕಾರದ ಮಧ್ಯಸ್ಥಿಕೆ

[ಬದಲಾಯಿಸಿ]
  • 29 Sep, 2016;ಕರ್ನಾಟಕ ಮತ್ತು ತಮಿಳುನಾಡುಗಳ ನಡುವಿನ ಕಾವೇರಿ ನೀರು ಹಂಚಿಕೆ ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯಲ್ಲಿ ಚರ್ಚಿಸಿ ತೀರ್ಮಾನಿಸಿಕೊಳ್ಳಲೂ ಸೂಚಿಸಿದೆ. ಸಭೆಯು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ನೇತತ್ವದಲ್ಲಿ ನೆಡೆಯುವುದು. ರಾಜ್ಯದ ಪರ ಸಿದ್ದರಾಮಯ್ಯ, ಸಚಿವ ಎಂ.ಬಿ. ಪಾಟೀಲ, ಸರ್ಕಾರದ ಮುಖ್ಯ ಕಾರ್ಯ ದರ್ಶಿ ಅರವಿಂದ ಜಾಧವ್‌, ಜಲಸಂಪ ನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ ಸಿಂಗ್‌ ಭಾಗವಹಿಸಿದ್ದಾರೆ. ತಮಿಳುನಾಡು ಪರವಾಗಿ ಲೋಕೋಪಯೋಗಿ ಸಚಿವ ಈಡಪ್ಪಾಡಿ ಪಳನಿಸ್ವಾಮಿ, ಮುಖ್ಯ ಕಾರ್ಯ ದರ್ಶಿ ರಾಮಮೋಹನ ರಾವ್ ಪಾಲ್ಗೊಂಡಿದ್ದಾರೆ.[೩೮]
  • ಅಧ್ಯಯನ ಸಾಧ್ಯತೆ: ಉಭಯ ರಾಜ್ಯಗ ಳಲ್ಲಿರುವ ಕಾವೇರಿ ಕಣಿವೆ ಪ್ರದೇಶ ದಲ್ಲಿನ ವಸ್ತುಸ್ಥಿತಿ ಅರಿಯುವ ನಿಟ್ಟಿನಲ್ಲಿ ನೀರಾವರಿ ತಜ್ಞರನ್ನು ಕಳುಹಿಸಿಕೊ ಡುವ ಮೂಲಕ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
  • ಮುಖ್ಯಾಂಶಗಳು; ಕೇಂದ್ರ ಸರ್ಕಾರದ ಸಂಧಾನ ಸಭೆ ತೀರ್ಮಾನ ಆಧರಿಸಿ ಮುಂದಿನ ಹೆಜ್ಜೆ ;ಗುರುವಾರ ಮಧ್ಯಾಹ್ನದವರೆಗೆ ನೀರು ಬಿಡದಿರಲು ನಿರ್ಧಾರ; ಸರ್ವಪಕ್ಷ ಸಭೆಯ ಸಲಹೆ ಪಾಲಿಸಿದ ಸರ್ಕಾರ.[೩೯]
  • 29 Sep, 2016;ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ನೀರು ಹಂಚಿಕೆ ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯಲ್ಲಿ ನಡೆದ ಸಭೆ ಯಾವುದೇ ನಿರ್ಣಯಕ್ಕೆ ಬರುವಲ್ಲಿ ವಿಫಲವಾಗಿದೆ.
  • ಮೆಟ್ಟೂರು ಮತ್ತು ಕಾವೇರಿ ಕೊಳ್ಳದಲ್ಲಿ ನೀರಿನ ಲಭ್ಯತೆಯ ಬಗ್ಗೆ ತಜ್ಞರ ಸಮಿತಿಯನ್ನು ನೇಮಕ ಮಾಡಿ ಪರಿಶೀಲಿಸುವಂತೆ ರಾಜ್ಯ ಸರ್ಕಾರ ಮಾಡಿದ ಮನವಿಗೆ ತಮಿಳುನಾಡು ಒಪ್ಪಿಗೆ ಸೂಚಿಸಲಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.[೪೦]
  • ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಟ್ಟೂರು ಜಲಾಶಯದಲ್ಲಿ ಈಗ 43 ಟಿಎಂಸಿ ಅಡಿ ನೀರಿದೆ. ಅಮರಾವತಿ, ಭವಾನಿ ಜಲಾಶಯಗಳಲ್ಲೂ ನೀರಿನ ಸಂಗ್ರಹವಿದೆ. ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ತಮಿಳುನಾಡಿನಲ್ಲಿ ಈಶಾನ್ಯ ಮಳೆಯ ಮಾರುತಗಳು ಮಳೆ ಸುರಿಸಲಿವೆ. ಕಳೆದ ವರ್ಷವೂ ಅಲ್ಲಿ ಉತ್ತಮ ಮಳೆ ಸುರಿದಿದೆ. ಈ ಬಾರಿಯೂ ನಿರೀಕ್ಷಿತ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ ಎಂದು ತಿಳಿಸಿದರು.[೪೧]

ಪುನಹ ನೀರು ಬಿಡಲು ಆದೇಶ

[ಬದಲಾಯಿಸಿ]
  • 30 Sep, 2016
  • ಅಕ್ಟೋಬರ್‌ 1ರಿಂದ 6ರವರೆಗೆ ತಮಿಳುನಾಡಿಗೆ ನಿತ್ಯ 6,000 ಕ್ಯುಸೆಕ್‌ ಕಾವೇರಿ ನೀರು ಹರಿಸುವಂತೆ ಸುಪ್ರೀಂಕೋರ್ಟ್‌ ಕರ್ನಾಟಕಕ್ಕೆ ಸೂಚಿಸಿದೆ.ಕಾವೇರಿ ನೀರು ಹಂಚಿಕೆ ವಿವಾದದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಮತ್ತು ಉದಯ್‌ ಲಲಿತ್‌ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
  • ಅ.4ರೊಳಗೆ ನಿರ್ವಹಣಾ ಮಂಡಳಿ ರಚಿಸಿ’
  • ಅಕ್ಟೋಬರ್‌ 4ರೊಳಗೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ನಿರ್ವಹಣಾ ಮಂಡಳಿಗೆ ತಮ್ಮ ಪ್ರತಿನಿಧಿ ಸದಸ್ಯರ ಹೆಸರನ್ನು ನಾಳೆಯೊಳಗೆ (ಅಕ್ಟೋಬರ್‌ 1) ತಿಳಿಸುವಂತೆ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ನಿರ್ದೇಶಿಸಿದೆ. ಮುಂದಿನ ವಿಚಾರಣೆಯನ್ನು ಅಕ್ಟೋಬರ್‌ 6ಕ್ಕೆ ಮುಂದೂಡಲಾಗಿದೆ.[೪೨]

ತ್ವರಿತ ಕ್ರಮಕ್ಕೆ ಸೂಚನೆ

[ಬದಲಾಯಿಸಿ]
  • ಕಾವೇರಿ ನಿರ್ವಹಣಾ ಮಂಡಳಿಗೆ ಶನಿವಾರ ಮಧ್ಯಾಹ್ನ 4ಗಂಟೆಯೊಳಗೆ ಅಧಿಕಾರಿಗಳನ್ನು ನೇಮಿಸಬೇಕು. ಕಾವೇರಿ ಕಣಿವೆಯ ವಾಸ್ತವ ಸ್ಥಿತಿ ಅರಿಯುವ ಮೂಲಕ ಮಂಡಳಿಯು ಅಕ್ಟೋಬರ್‌ 4ರೊಳಗೆ ವಿವರವಾದ ವರದಿ ಸಲ್ಲಿಸಬೇಕು ಎಂದು ನ್ಯಾಯಮೂರ್ತಿಗಳು ಸೂಚಿಸಿದರು.
  • 1 Oct, 2016;ಶಾಸನಸಭೆ ಸೆಪ್ಟೆಂಬರ್‌ 23ರಂದು ಕೈಗೊಂಡಿರುವ ನಿರ್ಣಯವನ್ನು ಬದಿಗಿರಿಸಿ ನೀರು ಹರಿಸಲೇಬೇಕು ಎಂದು ನ್ಯಾಯಪೀಠ ಸೂಚಿಸಿತು. ಸಂವಿಧಾನದ 144ನೇ ಕಲಮಿನ ಪ್ರಕಾರ ಯಾವುದೇ ಖಾಸಗಿ, ಸರ್ಕಾರಿ ಸಂಸ್ಥೆಯಾಗಲಿ, ನ್ಯಾಯಾಂಗದ ಅಂಗ ಸಂಸ್ಥೆಯೇ ಆಗಲಿ ಸುಪ್ರೀಂ ಕೋರ್ಟ್‌ ಆದೇಶಕ್ಕೆ ಬದ್ಧವಾಗಿರುವುದು ಕಡ್ಡಾಯ. ಆದರೆ, ಕರ್ನಾಟಕವು ಒಂದು ರಾಜ್ಯವಾಗಿ ಆದೇಶವನ್ನು ಉಲ್ಲಂಘಿಸಿ ನ್ಯಾಯಾಂಗ ವ್ಯವಸ್ಥೆಗೆ ಧಕ್ಕೆ ತಂದಿರುವುದು ದುರದೃಷ್ಟಕರ ಎಂದು ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅಭಿಪ್ರಾಯಪಟ್ಟರು.
  • ತಮಿಳುನಾಡಿನಲ್ಲಿ ಮಳೆಯ ಆರ್ಭಟ
  • ಬಂಗಾಳ ಕೊಲ್ಲಿಯಲ್ಲಿ ಸಾಗರ ಮೇಲ್ಮೈ ಗಾಳಿಯು ತೀವ್ರತೆ ಪಡೆದುಕೊಂಡ ಕಾರಣ ಗುರುವಾರ ರಾತ್ರಿಯಿಂದ ತಮಿಳುನಾಡಿನಲ್ಲಿ ಭಾರಿ ಮಳೆ ಸುರಿಯುತ್ತಿದೆ. ಮುಂದಿನ 48 ಗಂಟೆಗಳವರೆಗೂ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
  • ಸಾಗರ ಮೇಲ್ಮಟ್ಟದಿಂದ 5.8 ಕಿ.ಮೀ.ನಿಂದ 9.5 ಕಿ.ಮೀ ಎತ್ತರದಲ್ಲಿ ಗಾಳಿಯ ತೀವ್ರತೆ ಕೇಂದ್ರೀಕೃತವಾಗಿದೆ. ಇದರ ಪ್ರಭಾವದಿಂದಾಗಿ ತಂಜಾವೂರು, ತಿರುವರೂರು ಮೊದಲಾದ ಕಾವೇರಿ ನದಿಪಾತ್ರದ ಜಿಲ್ಲೆಗಳಲ್ಲಿ ಎರಡು ದಿನ ಭಾರಿ ಮಳೆ ಸುರಿಯಲಿದೆ ಎಂದು ಇಲಾಖೆ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.[೪೩]

ಸರ್ವಪಕ್ಷ ಸಭೆ ನಿರ್ಣಯ

[ಬದಲಾಯಿಸಿ]
  • ಅಕ್ಟೋಬರ್ 1, 2016 ರಂದು ಸಭೆಯಲ್ಲಿ ತೆಗೆದುಕೊಳ್ಳಲಾದ ನಿರ್ಣಯಗಳು:
  • ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ವಿರೋಧ, ಮಂಡಳಿಗೆ ಸದಸ್ಯರ ಹೆಸರುಗಳನ್ನು ಸೂಚಿಸದಿರಲು ನಿರ್ಣಯ.
  • ಸುಪ್ರೀಂಕೋರ್ಟ್ ನೀಡಿರುವ ಎರಡು ನಿರ್ಣಯಗಳನ್ನು ಬದಲಾಯಿಸಲು ಕೋರಿ ಮನವಿ
  • ತಮಿಳುನಾಡಿಗೆ ನೀರು ಬಿಡದಂತೆ ಸಿದ್ದರಾಮಯ್ಯ ಅವರಿಗೆ ಸರ್ವಪಕ್ಷಸಭೆಯಲ್ಲಿ ಸಲಹೆ[೪೪]

ಕಾವೇರಿ ನಿರ್ವಹಣಾ ಮಂಡಳಿ

[ಬದಲಾಯಿಸಿ]
  • ೩-೧೦-೨೦೧೬:
  • ಅಕ್ಟೋಬರ್ 4ರೊಳಗೆ ಕಾವೇರಿ ನಿರ್ವಹಣಾ  ಮಂಡಳಿ ರಚಿಸುವಂತೆ ಸುಪ್ರೀಂ ಕೋರ್ಟ್ ಸೆಪ್ಟೆಂಬರ್‌ 30ರಂದು ನೀಡಿದ್ದ ಆದೇಶಕ್ಕೆ ಆಟಾರ್ನಿ ಜನರಲ್‌ ಮುಕುಲ್ ರೋಹ್ಟಗಿ ಒಪ್ಪಿಗೆ ಸೂಚಿಸಿದ್ದರು. ಇದೀಗ ಆದೇಶ ಮರು ಪರಿಶೀಲಿಸುವಂತೆ ಕೋರಿ ಕೇಂದ್ರ ಸರ್ಕಾರದಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.
  • ಅಟಾರ್ನಿ ಜನರಲ್‌ ನೀಡಿರುವ ಅರ್ಜಿ ವಿಚಾರಣೆಯನ್ನು ಮಂಗಳವಾರ ನಡೆಸುವುದಾಗಿ ಸುಪ್ರೀಂ ಕೋರ್ಟ್‌ ನಿಗದಿ ಪಡಿಸಿದೆ. ನಿರ್ವಹಣಾ ಮಂಡಳಿ ರಚನೆ ಸಂಸತ್ತಿನ ಜವಾಬ್ದಾರಿಯಾಗಿದೆ ಎನ್ನುವ ಕಾರಣ ನೀಡಲಾಗಿದೆ.[೪೫]

ಕೇಂದ್ರದಿಂದ ತಕರಾರು

[ಬದಲಾಯಿಸಿ]
  • 4 Oct, 2016 ರಂದು,ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ನಿರ್ದೇಶನ ನೀಡುವ ಅಧಿಕಾರ ಸುಪ್ರೀಂಕೋರ್ಟ್‌ಗೆ ಇಲ್ಲ ಎಂದು ತಿಳಿಸಿರುವ ಕೇಂದ್ರ ಸರ್ಕಾರ, ಸೆ. 20 ಮತ್ತು 30ರಂದು ನೀಡಿರುವ ಆದೇಶವನ್ನು ಮಾರ್ಪಾಡು ಮಾಡುವಂತೆ ಕೋರಿ ಸೋಮವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ನಿರ್ವಹಣಾ ಮಂಡಳಿ ರಚನೆಯನ್ನು ವಿರೋಧಿಸಿ 2013ರಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಬಾಕಿ ಇದೆ.
  • ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್‌. ಝಾ, ಸದಸ್ಯ ಮಸೂದ್‌ ಹುಸೇನ್‌, ಮುಖ್ಯ ಎಂಜಿನಿಯರ್‌ ಆರ್‌.ಕೆ. ಗುಪ್ತಾ ಅವರನ್ನು ಒಳಗೊಂಡ ತಾಂತ್ರಿಕ ಉನ್ನತಾಧಿಕಾರ ತಂಡವನ್ನು ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ಕಾವೇರಿ ಕಣಿವೆಗೆ ಅಧ್ಯಯನಕ್ಕೆ ಕಳುಹಿಸಲಿದ್ದು, ನ್ಯಾಯಾಲಯ ಅನುಮತಿ ನೀಡಬೇಕು ಎಂದು ಈ ಮೂಲಕ ಕೋರಲಾಗಿದೆ. ಕಾವೇರಿ ಕಣಿವೆ ಪ್ರದೇಶವು 81,000 ಚದರ ಕಿಲೋಮೀಟರ್‌ ವ್ಯಾಪ್ತಿ ಹೊಂದಿದ್ದು, ಕೇವಲ ಒಂದು ಅಥವಾ ಎರಡು ದಿನಗಳಲ್ಲಿ ಅಧ್ಯಯನ ಅಸಾಧ್ಯ. ಆ ಪ್ರದೇಶದಲ್ಲಿ ಸಂಚರಿಸಿ ಕ್ಷಿಪ್ರಗತಿಯಲ್ಲಿ ಅಧ್ಯಯನ ನಡೆಸಲು ಕನಿಷ್ಠ 10 ದಿನಗಳ ಕಾಲಾವಕಾಶ ಬೇಕು.[೪೬]

ನೀರು ಬಿಡುವುದು ಒಳ್ಳೆಯದು

[ಬದಲಾಯಿಸಿ]
  • ದಿ.೩೦-೯-೨೦೧೬,ಶುಕ್ರವಾರ ನಡೆದ ಮಂತ್ರಿ ಪರಿಷತ್‌ ಸಭೆಯಲ್ಲಿ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರು, ‘ಸುಪ್ರೀಂ ಕೋರ್ಟ್‌ ಆದೇಶದಂತೆ ತಮಿಳುನಾಡಿಗೆ ನೀರು ಬಿಟ್ಟು ಕಾನೂನು ಹೋರಾಟ ಮುಂದುವರಿಸುವುದು ಒಳ್ಳೆಯದು’ ಎನ್ನುವ ಸಲಹೆಯನ್ನು ನೀಡಿದ್ದಾರೆ.
ರಾಜ್ಯಕ್ಕೆ ಅನ್ಯಾಯ: ಸಿಎಂ ಬೇಸರ
  • ‘ಜಲನೀತಿ ಪ್ರಕಾರ ಕುಡಿಯಲು ಮೊದಲ ಆದ್ಯತೆ ನೀಡಬೇಕು. ಎರಡನೇ ಆದ್ಯತೆ ಕೃಷಿ. ಆದರೆ, ತಮಿಳುನಾಡಿನವರಿಗೆ ಕುಡಿಯಲು ನೀರು ಬೇಕಾಗಿಲ್ಲ, ಸಾಂಬಾ ಬೆಳೆಗೆ ಬೇಕಂತೆ. ನಮಗೆ ಕುಡಿಯಲು ಬೇಕು. ಇದು ಅವರಿಗೂ ನಮಗೂ ಇರುವ ವ್ಯತ್ಯಾಸ. ಡಿಸೆಂಬರ್‌ವರೆಗೂ ಆ ರಾಜ್ಯದಲ್ಲಿ ಮಳೆ ಬರುತ್ತದೆ, ಅಂತರ್ಜಲ ಇದೆ. ನಮ್ಮಲ್ಲಿ ಈಗ ಎರಡೂ ಇಲ್ಲ’ ಎಂದು ಬೇಸರದಿಂದ ನುಡಿದರು.
  • 18 ಲಕ್ಷ ಹೆಕ್ಟೇರ್‌ ಜಮೀನಿನಲ್ಲಿ ಕೇವಲ 4 ಲಕ್ಷ ಹೆಕ್ಟೇರ್‌ನಲ್ಲಿ ನಮ್ಮ ರೈತರು ಬೆಳೆ ಬೆಳೆದಿದ್ದಾರೆ. ಆ ಬೆಳೆಗೂ ನೀರು ಕೊಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಕುಡಿಯಲು ನೀರುಬೇಕು. ಇನ್ನು ಪ್ರಾಣಿ ಪಕ್ಷಿಗಳ ಗತಿಯೇನು ಎಂದು ಪ್ರಶ್ನಿಸಿದರು.
  • ರಾಜ್ಯದ ಜನರು ಕುಡಿಯುವ ನೀರಿಗಾಗಿ ಸಂಕಷ್ಟ ಅನುಭವಿಸುತ್ತಿದ್ದರೂ , ಈ ಬಗ್ಗೆ ಪದೇ ಪದೇ ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಸರ್ಕಾರ ಮಾಡಿದ್ದರೂ ತಮಿಳುನಾಡಿಗೆ ಕೃಷಿ ಉದ್ದೇಶಕ್ಕಾಗಿ ನೀರು ಬಿಡುವಂತೆ ನ್ಯಾಯಾಲಯ ಆದೇಶ ನೀಡುತ್ತಿರುವ ಬಗ್ಗೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದರು.[೩]
.
  • ‘ವಿಧಾನಮಂಡಲ ನಿರ್ಣಯ ಅಂಗೀಕರಿಸಿದ ಸಂದರ್ಭದಲ್ಲಿ ನೀರಿನ ಪ್ರಮಾಣ ಕೇವಲ 27.6 ಟಿಎಂಸಿ ಅಡಿ ಇತ್ತು. ಈಗ ಪರಿಸ್ಥಿತಿ ಸುಧಾರಿಸಿದೆ. ನಮ್ಮ ರೈತರ ಬೆಳೆಗಳಿಗೂ ನೀರಿನ ಅಗತ್ಯವಿದೆ. ಕರ್ನಾಟಕ ಹಾಗೂ ತಮಿಳುನಾಡು ನಡುವಣ ಅಂತರ್‌ ಜಲಾಶಯದ ಪ್ರದೇಶದಿಂದ ಪ್ರತಿನಿತ್ಯ 1500 ಕ್ಯುಸೆಕ್‌ ನೀರು ಮೆಟ್ಟೂರಿಗೆ ಹರಿಯುತ್ತಿದೆ. ನಮ್ಮ ರೈತರಿಗೆ ನೀರು ಕೊಟ್ಟರೆ ಕನಿಷ್ಠ 1500 ಕ್ಯುಸೆಕ್‌ ಸೋರಿಕೆಯಾಗಿ ನೆರೆಯ ರಾಜ್ಯ ಸೇರುತ್ತದೆ. ಅದರ ಜೊತೆಗೆ ಇನ್ನು 3000 ಸಾವಿರ ಕ್ಯುಸೆಕ್‌ ಹರಿಸಿದರೆ ಕೋರ್ಟ್‌ ಆದೇಶ ಗೌರವಿಸಿದಂತಾಗುತ್ತದೆ ಎಂದೂ ಸಭೆಗೆ ವಿವರಿಸಿದ್ದಾರೆ.[೪೭]
‘ಕಳೆದ ವಾರ 86 ಅಡಿ ಇದ್ದ ಜಲಾಶಯದ ನೀರಿನ ಮಟ್ಟವು ಒಳಹರಿವಿನ ಪ್ರಮಾಣದಲ್ಲಿ ಕುಸಿತ  ಹಾಗೂ ಕೃಷಿಗೆ ನೀರು ಹರಿಸಿದ್ದರಿಂದ 75 ಅಡಿಗೆ ತಲುಪಿದೆ. (ಗರಿಷ್ಠ ಮಟ್ಟ 120 ಅಡಿ) ಸದ್ಯ 39.1 ಟಿಎಂಸಿ ಅಡಿ ನೀರು ಜಲಾಶಯದಲ್ಲಿದೆ’ ಎಂದು ಅವರು ತಿಳಿಸಿದ್ದಾರೆ.[೪೮]
  • ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸೋಮವಾರ ನಡೆಸಿದ ಉಭಯ ಸದನಗಳ ವಿಶೇಷ ಅಧಿವೇಶನದಲ್ಲಿ ಸೆ.23ರಂದು ಕೈಗೊಂಡಿದ್ದ ನಿರ್ಣಯ ಬದಲಾಯಿಸಿದ್ದು, *ಕುಡಿಯುವುದರ ಜೊತೆಗೆ ರೈತರ ಬೆಳೆಗಳಿಗೂ ನೀರು ಬಿಡುಗಡೆ ಮಾಡುವ ನಿರ್ಣಯವನ್ನು ಕೈಗೊಳ್ಳಲಾಗಿದೆ. ಅಷ್ಟೇ ಅಲ್ಲ ತಮಿಳುನಾಡಿಗೆ ನೀರು ಬಿಡುವ ಅಧಿಕಾರವನ್ನು ಮುಖ್ಯಮಂತ್ರಿಗೆ ಸದನ ನೀಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಕುಡಿಯುವ ನೀರಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇವೆ. ಈಗಾಗಲೇ ರಾಜ್ಯದ ಹಿತದೃಷ್ಟಿ ಇಟ್ಟುಕೊಂಡು ನೀರು ಬಿಡಲಾಗಿದೆ. ರಾಜ್ಯದ ಬೆಳೆಗಳಿಗೆ ಒಟ್ಟು 43 ಟಿಎಂಸಿ ನೀರು ಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಅಧಿವೇಶನದಲ್ಲಿ ಉತ್ತರ ನೀಡುತ್ತ ಮಾತನಾಡಿದರು.
  • ಈ ವರ್ಷ ನಾವು ತಮಿಳುನಾಡಿಗೆ 53.2 ಟಿಎಂಸಿ ನೀರು ಬಿಟ್ಟಿದ್ದೇವೆ. ಕಾವೇರಿ ಐತೀರ್ಪಿನ ಪ್ರಕಾರ 192 ಟಿಎಂಸಿ ನೀರು ಬಿಡಬೇಕು. 2014 -15ನೇ ಸಾಲಿನಲ್ಲಿ 229 ಟಿಎಂಸಿ ನೀರು ಬಿಟ್ಟಿದ್ದೇವೆ. ಎಲ್ಲಾ ಮುಖ್ಯಮಂತ್ರಿಗಳ ಕಾಲದಲ್ಲೂ ತಮಿಳುನಾಡಿಗೆ ನೀರು ಬಿಡಲಾಗಿದೆ ಎಂದು ಹೇಳಿದರು.[೪೯]

ನೀರು ಬಿಡುಗಡೆ

[ಬದಲಾಯಿಸಿ]
    • ಜಿಲ್ಲೆಯ ಕೆಆರ್‌ಎಸ್‌ ಅಣೆಕಟ್ಟೆಯಿಂದ 6,800 ಕ್ಯುಸೆಕ್‌ ನೀರನ್ನು ಸೋಮವಾರ ರಾತ್ರಿ 9ರಿಂದ ಹೊರ ಬಿಡಲು ಆರಂಭಿಸಲಾಗಿದ್ದು, ಅದರಲ್ಲಿ 3 ಸಾವಿರ ಕ್ಯುಸೆಕ್‌ ನಷ್ಟು ನೀರು ತಮಿಳುನಾಡಿಗೂ ಹರಿದು ಹೋಗಲಿದೆ.[೫೦]

ತಮಿಳುನಾಡಿಗೆ ಹರಿದ ಕಾವೇರಿ ನೀರು

[ಬದಲಾಯಿಸಿ]
  • ಬಿಳಿಗೊಂಡ್ಳಿನಲ್ಲಿ ದಾಖಲೆಯಂತೆ ತಮಿಳುನಾಡಿಗೆ ಹರಿದ ಕಾವೇರಿ ನೀರು ನೀರಿನ ಪ್ರಮಾಣ ಟಿ.ಎಂ.ಸಿ. ಅಡಿಗಳಲ್ಲಿ[೫೧]
  • ಕಾವೇರಿ ನ್ಯಯ ಮಂಡಳಿ ತೀರ್ಪಿನ ಪ್ರಕಾರ ತಮಿಳುನಾಡಿಗೆ ವಾಡಿಕೆ ಮಳೆಯಾದಾಗ ವರ್ಷಕ್ಕೆ 192 ಟಿ,ಎಂ.ಸಿ. ಅಡಿ ನೀರು ಬಿಡಬೇಕು.
ವರ್ಷ-ತಮಿಳನಾಡಿಗೆ ಬಿಟ್ಟ ನೀರಿನ ಪ್ರಮಾಣ ಟಿ.ಎಂ.ಸಿ. ಅಡಿಗಳಲ್ಲಿ
ವರ್ಷ ನೀರಿನ ಪ್ರಮಾಣ ವರ್ಷ ನೀರಿನ ಪ್ರಮಾಣ ವರ್ಷ ನೀರಿನ ಪ್ರಮಾಣ
1991 340.58 1999 273.68 2007-8 353.63
1992 358.61 2000 319.26 2008-9 210.12
1993 230.39 2001 192.26 2009-10 222.66
1994 394.00 2002 109.89 2010-11 211.76
1995 195.51 2003 075.56 2011-12 240.45
1996 245.75 2004 183.91 2012-13 100.44
1997 277.06 2005 383.92 2013-14 260.52
1998 260.40 2006 258.58 2014-15 229.00
2015-16 152.00
ಇದುವರೆಗೆ 30-ಸೆಪ್ಟಂ-2016 ಅಂತ್ಯಕ್ಕೆ 53.00 :(62.483 ಟಿ.ಎಂಸಿ.ಅಡಿ ಹಳೇ ಲೆಕ್ಕ)
  • ೨೦೧೬-೧೭ ಸೆಪ್ಟಂಬರ್ ವರೆಗೆ :53.00 ಟಿ.ಎಂಸಿ.ಅಡಿ +
  • (62.483 ಟಿಎಂಸಿ ಅಡಿ ಬಿಟ್ಟಿದೆ 30-9-2016ಕ್ಕೆ.-ಬಿಡಬೇಕಾದ್ದು 134 ಸೆ,ಅಂತ್ಯಕ್ಕೆ (ಈ ಅಂಕೆಗಳಲ್ಲಿ ಗೊಂದಲ ಇದೆ)
2016 ಜೂನ್ ಜುಲೈ ಆಗ ಸೆಪ್ಟಂ +oct.2016 ; ಒಟ್ಟು
ತಿಂಗಳ ಅಂತ್ಯಕ್ಕೆ ಟಿಎಂಸಿ.ಅಡಿ> 10 34 40 +4+18.483=62.483 + 6000X6 =3.11 ಟಿ.ಎಂ.ಸಿ ಅಡಿ. ಒಟ್ಟು:65.593 ಟಿ.ಎಂಸಿ.ಅಡಿ (ಹಳೇ ಲೆಕ್ಕ)

ಕೆಆರ್‌ಎಸ್‌ ನೀರು</ref>

  • 2016 ಅಕ್ಟೋ.ನಲ್ಲಿ 6000X6 =3.11 ಟಿ.ಎಂ.ಸಿ ಅಡಿ.ಮತ್ತೆ 12 ದಿನ 2000 ಟಿಎಂಸಿ. ಅಡಿಯಂತೆ =53+ 3.5+2.11=ಒಟ್ಟು 58.61 ಟಿಎಂಸಿ. ಅಡಿ[೫೨]

ಸುಪ್ರೀಂ ತೀರ್ಮಾನ

[ಬದಲಾಯಿಸಿ]
  • 4 Oct, 2016:

ಅಕ್ಟೊಬರ್,7ರಿಂದ 18ರವರೆಗೆ ದಿನಂಪ್ರತಿ 2 ಸಾವಿರ ಕ್ಯೂಸೆಕ್‌ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಮಂಗಳವಾರ ಆದೇಶ ನೀಡಿರುವ ಸುಪ್ರೀಂ ಕೋರ್ಟ್‌, ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯನ್ನು ಸಧ್ಯಕ್ಕೆ ತಡೆಹಿಡಿದು ಉನ್ನತಾಧಿಕಾರವುಳ್ಳ ತಾಂತ್ರಿಕ ತಂಡ ರಚನೆಗೆ ಅಸ್ತು ಎಂದಿದೆ. ಕಾವೇರಿ ಮೇಲುಸ್ತುವಾರಿ ಸಮಿತಿಗೆ ಹೊಸ ಅಧ್ಯಕ್ಷರನ್ನು ನೇಮಿಸಿ ವಾಸ್ತವ ಸ್ಥಿತಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸೂಚಿಸಿತು.

  • 2000 ಕ್ಯೂ.ಘಿ12 ದಿನ=24000ಕ್ಯೂ.=2.073613271;ಟಿಎಂಸಿ ಅಡಿ[ಒಂದು ಟಿಎಂಸಿ ಅಡಿ = 11574 ಕ್ಯೂಸೆಕ್ಸ್].
  • 3.11 + 2.07=5.18 ಟಿಎಂಸಿ ಅಡಿ. ಅಕ್ಟೋ.2016 ರಲ್ಲಿ ಬಿಡುವುದು.[೫೩]
  • ಆತಂಕ ದೂರ:ತಮಿಳುನಾಡಿಗೆ 12 ದಿನಗಳ ಕಾಲ ನಿತ್ಯ 2,000 ಕ್ಯುಸೆಕ್‌ ನೀರು ಹರಿಸುವುದು ಕಷ್ಟವೇನಲ್ಲ. ಜಲಾಶಯದಿಂದ ನಿತ್ಯ 1,500 ಕ್ಯುಸೆಕ್‌ನಷ್ಟು ಬಸಿನೀರು ತಾನೇ ಹರಿದುಹೋಗುತ್ತದೆ. ನ್ಯಾಯಾಂಗ ನಿಂದನೆ, ಮಂಡಳಿಯ ಆತಂಕ ದೂರವಾಗಿದೆ.(ಎಂ.ಬಿ. ಪಾಟೀಲ ಜಲಸಂಪನ್ಮೂಲ ಸಚಿವ)

ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ತಡೆ

[ಬದಲಾಯಿಸಿ]
  • 5 Oct, 2016:
  • ಮಂಡಳಿ ರಚಿಸುವಂತೆ ಸೂಚಿಸುವ ಅಧಿಕಾರ ವ್ಯಾಪ್ತಿ ನ್ಯಾಯಾಲಯಕ್ಕೆ ಇಲ್ಲ. ಹೀಗೆ ನಿರ್ದೇಶನ ನೀಡಿದಲ್ಲಿ, ಅಂತರರಾಜ್ಯ ಜಲವಿವಾದ ಕಾಯ್ದೆ– 1956ರ ಸೆಕ್ಷನ್‌ 15ರ ಅಡಿ ಕೇಂದ್ರ ಸರ್ಕಾರಕ್ಕೆ ಇರುವ ಅಧಿಕಾರವನ್ನು ಕಿತ್ತುಕೊಂಡಂತಾಗುತ್ತದೆ. ಸಂಸತ್ತಿನ ಉಭಯ ಸದನಗಳಲ್ಲಿ ಚರ್ಚಿಸುವ ಮೂಲಕ ಮಂಡಳಿ ರಚಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ ಎಂದು ಅಟಾರ್ನಿ ಜನರಲ್‌ ಮುಕುಲ್‌ ರೋಹಟ್ಗಿ ಕೋರ್ಟ್‌ಗೆ ಮನವರಿಕೆ ಮಾಡಿದರು.ಅಂತರರಾಜ್ಯ ಜಲವಿವಾದ ಕಾಯ್ದೆ–1956ರ ಸೆಕ್ಷನ್‌ 6 ಮತ್ತು 6 ‘ಎ’ ಪ್ರಕಾರ ಮಂಡಳಿಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರವು ಯೋಜನೆಯನ್ನು ರೂಪಿಸಬೇಕೆಂಬ ನಿಯಮವಿದೆ.
  • ಕೇಂದ್ರದ ಅಧ್ಯಯನ ತಂಡ:
  • ಕಾವೇರಿ ಕಣಿವೆ ಪ್ರದೇಶದಲ್ಲಿ ಇದೇ 7ರಿಂದ 15ರ ವರೆಗೆ ಪ್ರವಾಸ ನಡೆಸಲಿರುವ ತಜ್ಞರ ತಂಡವು ವಸ್ತುಸ್ಥಿತಿಯ ಅಧ್ಯಯನ ನಡೆಸಲಿದೆ. ಪ್ರವಾಸದ ವಿವರಗಳನ್ನು ಕೇಂದ್ರದ ಜಲಸಂಪನ್ಮೂಲ ಸಚಿವಾಲಯದ ಅಧಿಕಾರಿಗಳು ಸದ್ಯದಲ್ಲೇ ಅಂತಿಮಗೊಳಿಸಲಿದ್ದಾರೆ.ಒಟ್ಟು 81,000 ಚದರ ಕಿ.ಮೀ. ವ್ಯಾಪ್ತಿಯ ಕಾವೇರಿ ಕಣಿವೆ ಪ್ರದೇಶದಲ್ಲಿ ಸಂಚರಿಸಿ ಅಧ್ಯಯನ ನಡೆಸಲಿರುವ ತಂಡವು ಜಲಾನಯನ, ಅಣೆಕಟ್ಟೆಗಳಲ್ಲಿನ ಸಂಗ್ರಹ, ಅಚ್ಚುಕಟ್ಟು ಪ್ರದೇಶ, ಬೆಳೆಯ ಸ್ಥಿತಿಗತಿ, ಕುಡಿಯುವ ನೀರಿನ ಅಗತ್ಯ ಕುರಿತು ಮಾಹಿತಿ ಸಂಗ್ರಹಿಸಿ ನ್ಯಾಯಪೀಠಕ್ಕೆ (ಅದರ ಆದೇಶದಂತೆ) ವರದಿ ಸಲ್ಲಿಸಲಿದೆ. ಸಮಿತಿಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಕೇಂದ್ರದ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ, ಕೇಂದ್ರ ಜಲ ಆಯೋಗದ ಅಧ್ಯಕ್ಷರು ಇರುತ್ತಾರೆ.[೫೪]

ತಮಿಳುನಾಡು ವಿರೋಧ

[ಬದಲಾಯಿಸಿ]
  • ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ತನಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿರುವ ತಮಿಳುನಾಡು ಸರ್ಕಾರ, ಈ ಬಗ್ಗೆ ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ನೀರು ನಿರ್ವಹಣಾ ಮಂಡಳಿ ರಚಿಸಬೇಕು ಎಂದು ಕೇಂದ್ರವನ್ನು ಒತ್ತಾಯಿಸಿದೆ.[೫೫]

"ಭಾರತದ ಅಂಬಿಗ" ರಾಜೇಂದ್ರ ಸಿಂಗ್ ಅಭಿಪ್ರಾಯ

[ಬದಲಾಯಿಸಿ]
  • ಈ ವರ್ಷ ಬರಗಾಲದಲ್ಲಿ ಕರ್ನಾಟಕ ದೇಶದಲ್ಲೆ ಮೊದಲ ಸ್ಥಾನದಲ್ಲಿದೆ. ಸಂಕಷ್ಟ ನುಂಗಿಕೊಂಡು ನೀರು ಬಿಡುಗಡೆ ಮಾಡುವ ಮೂಲಕ ಕನ್ನಡಿಗರು ಉದಾರಿಗಳಾಗಿದ್ದಾರೆ ಎಂದು ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.‘ಕೃಷ್ಣರಾಜ ಸಾಗರ ಜಲಾಶಯದಲ್ಲಿ ಹಾಲಿ ಇರುವ ನೀರಿನ ಪ್ರಮಾಣವನ್ನು ಖುದ್ದು ಭೇಟಿ ನೀಡಿ ಗಮನಿಸಿದ್ದೇನೆ. ಜಲಾಶಯದ ಮುಂಭಾಗ ನೀರು ಹರಿಯುವುದನ್ನು ನೋಡಿದರೆ ಸಂತಸ ಆಗುತ್ತದೆ. ಆದರೆ, ಹಿಂಭಾಗದಲ್ಲಿ ಖಾಲಿ ಆಗುತ್ತಿರುವುದನ್ನು ನೋಡಿದರೆ ದುಃಖವಾಗುತ್ತದೆ’ ಎಂದರು.[೫೬]

ಕೇಂದ್ರದ ಅಧ್ಯಯನ ತಂಡ

[ಬದಲಾಯಿಸಿ]
  • 8 Oct, 2016:ಸುಪ್ರೀಂಕೋರ್ಟ್‌ ಸೂಚನೆ ಮೇರೆಗೆ ಕಾವೇರಿ ಕೊಳ್ಳದ ಜಲಾಶಯಗಳ ಸ್ಥಿತಿ ಅಧ್ಯಯನ ನಡೆಸಲು ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್‌. ಝಾ ನೇತೃತ್ವದ ಸಮಿತಿ ಎರಡು ದಿನ ರಾಜ್ಯ ಪ್ರವಾಸ ಕೈಗೊಂಡಿದೆ. ತೀವ್ರ ಮಳೆ ಕೊರತೆಯಿಂದಾಗಿ ಕಾವೇರಿಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲದೇ  ಇರುವ ಅಸಹಾಯಕ ಪರಿಸ್ಥಿತಿಯನ್ನು ಕೇಂದ್ರದ ಅಧ್ಯಯನ ತಂಡದ ಮುಂದೆ ವಿವರಿಸಿರುವ ರಾಜ್ಯ ಸರ್ಕಾರ, ನಾಡಿನ ಸಂಕಷ್ಟವನ್ನು ಮನವರಿಕೆ ಮಾಡಿಕೊಟ್ಟಿದೆ.
  • ನೈರುತ್ಯ ಮುಂಗಾರು ಅವಧಿಯಲ್ಲಿ ಕೆಆರ್‌ಎಸ್‌ ಅಚ್ಚುಕಟ್ಟು ಪ್ರದೇಶದಲ್ಲಿ ಶೇ 34 ಮತ್ತು ಕಬಿನಿ ಅಚ್ಚುಕಟ್ಟು ಪ್ರದೇಶದಲ್ಲಿ ಶೇ 47ರಷ್ಟು ಮಳೆ ಕೊರತೆಯಾಗಿದೆ. ಕೆಆರ್‌ಎಸ್‌ನಲ್ಲಿ 42 ವರ್ಷಗಳಲ್ಲಿ ಎರಡನೇ ಬಾರಿಗೆ ಅತಿ ಕಡಿಮೆ ನೀರಿನ ಸಂಗ್ರಹವಾಗಿದೆ. 41 ವರ್ಷಗಳ ಸರಾಸರಿ ಗಮನಿಸಿದರೆ ಮುಂಗಾರು ಅವಧಿಯಲ್ಲಿ ಕಾವೇರಿ ಕೊಳ್ಳದ ನಾಲ್ಕೂ ಜಲಾಶಯಗಳಿಗೆ 257 ಟಿಎಂಸಿ ಅಡಿಗಳಷ್ಟು ನೀರು ಹರಿದು ಬರಬೇಕಿತ್ತು. ಆದರೆ, ಈ ಬಾರಿ ಕೇವಲ 131.51 ಟಿಎಂಸಿ ಅಡಿ ಸಂಗ್ರಹವಾಗಿದ್ದು, ಶೇ 51.2 ರಷ್ಟು ನೀರಿನ ಕೊರತೆ ಇದೆ ಎಂದು ಕೇಂದ್ರದ ತಂಡಕ್ಕೆ ವಿವರಿಸಲಾಗಿದೆ.[೫೭]
  • ತಮಿಳುನಾಡಿಗೆ ಕೇಂದ್ರ ತಂಡ ಭೇಟಿ:ಕರ್ನಾಟಕದಲ್ಲಿ ಕಾವೇರಿಕೊಳ್ಳದ ಜಲಾಶಯಗಳ ಪರಿಸ್ಥಿತಿ ಅವಲೋಕನ ನಡೆಸಿದ ಬಳಿಕ ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್‌. ಝಾ ನೇತೃತ್ವದ ತಾಂತ್ರಿಕ ಸಮಿತಿ ಭಾನುವಾರ ತಮಿಳುನಾಡಿಗೆ ಭೇಟಿ ನೀಡಿತು. ಝಾ ನೇತೃತ್ವದ ತಂಡವು ಕಾವೇರಿ ನದಿ ಮುಖಜ ಭೂಮಿಯಲ್ಲಿರುವ ಮೆಟ್ಟೂರು ಮತ್ತು ಭವಾನಿ ಸಾಗರ ಜಲಾಶಯಗಳಿಗೆ ಭೇಟಿ ನೀಡಿ, ಅಲ್ಲಿಯ ಸ್ಥಿತಿಗತಿಯ ಕುರಿತು ಮಾಹಿತಿ ಕಲೆ ಹಾಕಿತು.ಸೇಲಂ ಜಿಲ್ಲೆಯಲ್ಲಿರುವ ಮೆಟ್ಟೂರು ಜಲಾಶಯಕ್ಕೆ ಭೇಟಿ ನೀಡಿದ ತಂಡವು ಬಳಿಕ ಈರೋಡ್‌ ಜಿಲ್ಲೆಯ ಭವಾನಿಸಾಗರ ಜಲಾಶಯಕ್ಕೆ ಭೇಟಿ ನೀಡಿತು. ಎರಡೂ ಜಲಾಶಯಗಳ ನೀರಿನ ಸಂಗ್ರಹ, ಒಳಹರಿವು ಮತ್ತು ಹೊರಹರಿವಿನ ಮಾಹಿತಿ ಪಡೆಯಿತು. ಇದೇ ಸಂದರ್ಭ ಕೇಂದ್ರ ತಂಡವು ರೈತ ಸಂಘಗಳ ಪ್ರತಿನಿಧಿಗಳು ಭೇಟಿ ಮಾಡಿ ಅಹವಾಲು ಸ್ವೀಕರಿಸಿತು ಹಾಗೂ ಸಾಂಬಾ ಬೆಳೆಯ ಕುಂದುಕೊರತೆಗಳ ಬಗ್ಗೆ ರೈತರ ವಿಚಾರಣೆ ನಡೆಸಿತು. ಮೆಟ್ಟೂರು ಜಲಾಶಯದಲ್ಲಿ ಈಗ ಸಂಗ್ರಹವಿರುವ ನೀರಿನ ಪ್ರಮಾಣವು ಸಾಂಬಾ ಬೆಳೆ ಸಾಗುವಳಿಗೆ ಸಾಲುವುದಿಲ್ಲ ಎಂದು ರೈತರು ಕೇಂದ್ರ ತಂಡದ ಗಮನಕ್ಕೆ ತಂದರು. ಕೇಂದ್ರ ತಂಡದ ಭೇಟಿಗೂ ಮುನ್ನ, ಶುಕ್ರವಾರ ರಾಜ್ಯಪಾಲ ಸಿ. ವಿದ್ಯಾಸಾಗರ ರಾವ್‌ ಅವರು ಅಗತ್ಯ ಸಿದ್ಧತೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು. ಕರ್ನಾಟಕ ಕಾವೇರಿ ನೀರು ಬಿಡುಗಡೆ ಮಾಡಿರುವುದರಿಂದ ಮೆಟ್ಟೂರು ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಕಳೆದವಾರ ಒಳಹರಿವಿನ ಪ್ರಮಾಣ 600 ಕ್ಯುಸೆಕ್‌ ಇತ್ತು. ಈಗ 2,800 ಕ್ಯುಸೆಕ್‌ ಇದೆ ಎಂದು ಮೂಲಗಳು ಹೇಳಿವೆ.[೫೮]

ವರದಿ ಸಾರಾಂಶ

[ಬದಲಾಯಿಸಿ]
  • 17 Oct, 2016
  • ಕಾವೇರಿ ನೀರು ಹಂಚಿಕೆ ಕುರಿತು ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ನೇಮಿಸಿದ್ದ ತಜ್ಞರ ತಂಡ ಕಾವೇರಿಕೊಳ್ಳದ ಉಭಯ ರಾಜ್ಯಗಳಲ್ಲಿ ಅಧ್ಯಯನ ನಡೆಸಿ ಸೋಮವಾರ ವರದಿ ಸಲ್ಲಿಸಿದ್ದು, ನೀರು ಬಳಕೆ ತಂತ್ರಜ್ಞಾನ ಹಳೆಯದಾಗಿದ್ದು, ಅವೈಜ್ಞಾನಿಕವಾಗಿದೆ. ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳು ನೀರಿನ ಕೊರತೆ ಎದುರಿಸುತ್ತಿವೆ. ಇದರಿಂದಾಗಿ ಜನ ನಿರುದ್ಯೋಗ ಮತ್ತು ಆರ್ಥಿಕ ಸಮಸ್ಯೆ ಎದುರಿಸುವಂತಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
  • ತಂಡ 40 ಪುಟಗಳ ವರದಿ ಸಲ್ಲಿಸಿದ್ದು, ಎರಡೂ ರಾಜ್ಯಗಳ ರೈತರ ಹೆಚ್ಚಿನಪಾಲು ಬೆಳೆ ಹಾನಿಗೊಳಗಾಗಿದೆ. ಅವರಿಗೆ ಬೆಳೆ ಪರಿಹಾರ ಒದಗಿಸುವ ಅಗತ್ಯವಿದೆ ಎಂದು ಸಲಹೆ ನೀಡಿದೆ.‘ಕರ್ನಾಟಕ ಮಂಡ್ಯ ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಆತ್ಮಹತ್ಯೆ ಪ್ರಕರಣಗಳು ನಡೆದಿವೆ’ ಎಂದು ಕಾವೇರಿ ಜಲಾನಯನ ಪ್ರದೇಶದಲ್ಲಿನ ಸಾಮಾಜಿಕ ಸ್ಥಿತಿಗತಿ ಬಗ್ಗೆ ಉಲ್ಲೇಖಿಸಿದೆ.
  • ಅ. 7ರಿಂದ 14ರವರೆಗೆ ಕಾವೇರಿ ಕಣಿವೆ ಪ್ರದೇಶದಲ್ಲಿರುವ ಜಲಾಶಯಗಳು ಹಾಗೂ ಅಚ್ಚುಕಟ್ಟು ಪ್ರದೇಶಕ್ಕೆ ಭೇಟಿ ನೀಡಿ, ವಸ್ತುಸ್ಥಿತಿ ಕುರಿತು ಅಧ್ಯಯನ ನಡೆಸಿರುವ ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್‌. ಝಾ ನೇತೃತ್ವದ ತಜ್ಞರ ತಂಡವು, ಕರ್ನಾಟಕದ 4.27 ಲಕ್ಷ ಎಕರೆ ಹಾಗೂ ತಮಿಳುನಾಡಿನ 12 ಲಕ್ಷ ಎಕರೆ ವ್ಯಾಪ್ತಿಯಲ್ಲಿನ ಬೆಳೆಗೆ ನೀರಿನ ಅಗತ್ಯವಿದೆ ಎಂದು ಒತ್ತಿ ಹೇಳಿದೆ.

ಕರ್ನಾಟಕ

[ಬದಲಾಯಿಸಿ]
  • ಕರ್ನಾಟಕದಲ್ಲಿ ಸತತ ಎರಡನೇ ವರ್ಷವೂ ಬರಗಾಲ ಸ್ಥಿತಿ ಮುಂದುವರಿದಿದ್ದು, ಕಾವೇರಿ ಕಣಿವೆಯ ಒಟ್ಟು 48 ತಾಲ್ಲೂಕುಗಳ ಪೈಕಿ 42 ತಾಲ್ಲೂಕುಗಳನ್ನು ‘ಬರಪೀಡಿತ’ ಎಂದು ರಾಜ್ಯ ಸರ್ಕಾರ ಘೋಷಿಸಿದೆ ಎಂಬುದನ್ನು ಮುಖ್ಯವಾಗಿ ಪ್ರಸ್ತಾಪಿಸಲಾಗಿದೆ. ಕರ್ನಾಟಕದಲ್ಲಿನ ಕಾವೇರಿ ಕಣಿವೆಯ ಒಟ್ಟು 10.87 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶದ ಪೈಕಿ, ಕೇವಲ 6.15 ಲಕ್ಷ ಎಕರೆಯಲ್ಲಿ ಬಿತ್ತನೆ ಮಾಡಲಾಗಿದೆ. ಅದರಲ್ಲಿ 1.88 ಲಕ್ಷ ಎಕರೆ ಭೂಮಿಯಲ್ಲಿನ ಬೆಳೆಯು ನೀರು ದೊರೆಯದೆಯೇ ಒಣಗಿಹೋಗಿದ್ದು, ಮಿಕ್ಕ 4.27 ಲಕ್ಷ ಎಕರೆಯಲ್ಲಿನ ಬೆಳೆಯ ರಕ್ಷಣೆಗೆ ಇನ್ನೂ ಮೂರು ಅಥವಾ ನಾಲ್ಕು ಬಾರಿ ನೀರು ಹರಿಸುವ ಅಗತ್ಯವಿದೆ ಎಂದು ವರದಿ ಹೇಳಿದೆ.

ತಮಿಳುನಾಡು

[ಬದಲಾಯಿಸಿ]
  • ತಮಿಳುನಾಡಿನಲ್ಲಿಯೂ ಸಾಂಬಾ ಬೆಳೆ ಸಂಕಷ್ಟ ಸ್ಥಿತಿ ಎದುರಿಸುತ್ತಿದೆ. ಅಲ್ಲಿನ ಒಟ್ಟು 12 ಲಕ್ಷ ಎಕರೆ ಭೂಮಿಯಲ್ಲಿ ಬಿತ್ತನೆ ಮಾಡಲಾಗಿದ್ದು, ಇನ್ನೂ 18 ಬಾರಿ ನೀರು ಹರಿಸಿದಲ್ಲಿ ಮಾತ್ರ ಬೆಳೆ ಕೈಗೆಟುಕಲಿದೆ. ಕರ್ನಾಟಕದ ನಾಲ್ಕು ಜಲಾಶಯಗಳಲ್ಲಿ ಅ.13ಕ್ಕೆ ದಾಖಲಾಗಿರುವಂತೆ ಬಳಕೆ ಮಾಡಬಹುದಾದ 22.90 ಟಿಎಂಸಿ ಅಡಿ ನೀರಿನ ಸಂಗ್ರಹವಿದ್ದರೆ, ಅದೇ ವೇಳೆಗೆ ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿನ ಸಂಗ್ರಹ 31.66 ಟಿಎಂಸಿ ಅಡಿ ಇದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ನೀರಿನ ಸ್ಥಿತಿ

[ಬದಲಾಯಿಸಿ]

ನೀರಿನ ಅಗತ್ಯ:ಕರ್ನಾಟಕದ ರೈತರ 4.27 ಲಕ್ಷ ಎಕರೆ ಭೂಮಿಯಲ್ಲಿನ ಬೆಳೆ ಕೈಗೆಟುಕಲು ಮೂರರಿಂದ ನಾಲ್ಕು ಬಾರಿ ನೀರು ಹರಿಸಬೇಕಿದೆ. ಅದಕ್ಕಾಗಿ ಇನ್ನೂ 36.38 ಟಿಎಂಸಿ ಅಡಿ ನೀರು ಬೇಕಿದೆ. 2017ರ ಮೇ ಅಂತ್ಯದವರೆಗೆ ಕುಡಿಯುವುದಕ್ಕೆ ಸೇರಿದಂತೆ 65.48 ಟಿಎಂಸಿ ಅಡಿ ನೀರಿನ ಅಗತ್ಯವಿದೆ. ಮೇ ಅಂತ್ಯದವರೆಗೆ ಕರ್ನಾಟಕದ ಜಲಾಶಯಗಳಿಗೆ ಒಟ್ಟು 89.16 ಟಿಎಂಸಿ ಅಡಿ ನೀರು ಹರಿದುಬರುವ ನಿರೀಕ್ಷೆ ಇದೆ ಎಂದು ವರದಿ ಹೇಳಿದೆ.

  • ತಮಿಳುನಾಡಿನ ರೈತರ ಬೆಳೆಗಳ ರಕ್ಷಣೆಗೆ 133 ಟಿಎಂಸಿ ಅಡಿ, ಕುಡಿಯುವುದಕ್ಕೆ 22 ಟಿಎಂಸಿ ಅಡಿ, ಆವಿಯಾಗುವ 5 ಟಿಎಂಸಿ ಅಡಿ ನೀರನ್ನು ಒಳಗೊಂಡಂತೆ ಮೇ ಅಂತ್ಯದವರೆಗೆ 160 ಟಿಎಂಸಿ ಅಡಿ ನೀರಿನ ಅಗತ್ಯವಿದೆ. ಪುದುಚೇರಿಗೆ ಪ್ರತ್ಯೇಕವಾಗಿ 3 ಟಿಎಂಸಿ ಅಡಿ ನೀರು ಹರಿಸಬೇಕಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
  • ಒಂದೊಮ್ಮೆ ನಿರೀಕ್ಷಿತ ಪ್ರಮಾಣದ ಮಳೆ ಸುರಿದಲ್ಲಿ ತಮಿಳುನಾಡಿಗೆ ಇನ್ನಷ್ಟು ನೀರು ದೊರೆಯಲಿದೆ. ಜತೆಗೆ ಕರ್ನಾಟಕದ ಜಲಾಶಯಗಳಿಗೆ ಇನ್ನೂ 56.39 ಟಿಎಂಸಿ ಅಡಿ ನೀರು ಹರಿದುಬರಲಿದೆ ಎಂದು ತಿಳಿಸಲಾಗಿದೆ.

ಕರ್ನಾಟಕದಲ್ಲಿ ಹೆಚ್ಚು ನೀರು

[ಬದಲಾಯಿಸಿ]
  • ಈಶಾನ್ಯ ಮಾರುತದ ಮಳೆಯು ಈ ಬಾರಿ ಎಂದಿನಂತೆ ಬೀಳಲಿದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆಗಳು ತಿಳಿಸಿವೆ. 2017ರ ಮೇ ತಿಂಗಳ ತನಕ ಕರ್ನಾಟಕದ ಜಲಾಶಯಗಳಿಗೆ ಹರಿದು ಬರಲಿದೆ ಎಂದು ನಿರೀಕ್ಷಿಸಲಾಗಿರುವ ಒಟ್ಟು ನೀರಿನ ಪ್ರಮಾಣ 56.39 ಟಿ.ಎಂ.ಸಿ. ಅಡಿಗಳು. ಇದೇ ಅವಧಿಯಲ್ಲಿ ಮೆಟ್ಟೂರಿಗೆ ಹರಿದು ಬರಲಿದೆ ಎಂದು ಅಂದಾಜು ಮಾಡಲಾಗಿರುವ ನೀರಿನ ಪ್ರಮಾಣ 101.72 ಟಿ.ಎಂ.ಸಿ.ಅಡಿಗಳು.
  • ಕುಡಿಯುವ ನೀರು ಮತ್ತು ನೀರಾವರಿ ಅಗತ್ಯವನ್ನು ಲೆಕ್ಕ ಹಾಕಿದರೆ ಕರ್ನಾಟಕಕ್ಕೆ ಬೇಕಿರುವ ನೀರು 65.48 ಟಿ.ಎಂ.ಸಿ. ಅಡಿಗಳು. ಆದರೆ ಕರ್ನಾಟಕದ ಸಂಗ್ರಹದಲ್ಲಿ 89.16 ಟಿ.ಎಂ.ಸಿ. ಅಡಿಗಳಷ್ಟು ನೀರು ಲಭ್ಯವಿರುವ ನಿರೀಕ್ಷೆ ಇದೆ. ಅಂದರೆ ಅಗತ್ಯಕ್ಕಿಂತ ಸುಮಾರು 24 ಟಿ.ಎಂ.ಸಿ. ಅಡಿಗಳಷ್ಟು ಹೆಚ್ಚುವರಿ ನೀರು ಕರ್ನಾಟಕದ ಸಂಗ್ರಹದಲ್ಲಿ ಇರುವುದೆಂದು ಸಮಿತಿ ಅಂದಾಜು ಮಾಡಿದೆ. ಇದೇ ರೀತಿ ತಮಿಳುನಾಡು ಸುಮಾರು 20 ಟಿ.ಎಂ.ಸಿ. ಅಡಿಗಳಷ್ಟು ಕೊರತೆ ಎದುರಿಸಲಿದೆ ಎಂದೂ ಅಂದಾಜು ಮಾಡಿದೆ.
  • ಹಿಂಗಾರು ಬೆಳೆಯನ್ನು ತ್ಯಾಗ ಮಾಡಿದ ನಂತರವೂ 4.27 ಲಕ್ಷ ಎಕರೆ ಪ್ರದೇಶದಲ್ಲಿನ ತನ್ನ ಬೆಳೆಗಳಿಗಾಗಿ ಕರ್ನಾಟಕಕ್ಕೆ ಅಗತ್ಯವಿರುವ ನೀರು 65.48 ಟಿ.ಎಂ.ಸಿ. ಅಡಿಗಳು. 2017ರ ಮೇ ಹೊತ್ತಿಗೆ ಕರ್ನಾಟಕದ ಜಲಾಶಯದಲ್ಲಿ ಲಭ್ಯವಿರುವುದು ಎಂದು ನಿರೀಕ್ಷಿಸಲಾಗಿರುವ ನೀರು 89.16 ಟಿ.ಎಂ.ಸಿ.ಅಡಿಗಳು. ಇದೇ ರೀತಿ ಪುದುಚೆರಿಗೆ ಬಿಡುಗಡೆ ಮಾಡಬೇಕಿರುವ ಮೂರು ಟಿ.ಎಂ.ಸಿ. ಅಡಿಗಳು ಸೇರಿದಂತೆ ತಮಿಳುನಾಡಿನ ಅಗತ್ಯ 163 ಟಿ.ಎಂ.ಸಿ. ಅಡಿಗಳು. ಆದರೆ ವಾಸ್ತವ ಲಭ್ಯತೆಯ ಅಂದಾಜು 143.18 ಟಿ.ಎಂ.ಸಿ.ಅಡಿಗಳು.[೫೯]

ನೀರಿನ ತಿಳಿವಳಿಕೆ ಅಗತ್ಯ

[ಬದಲಾಯಿಸಿ]
  • ‘ಕಾವೇರಿ ಕಣಿವೆಯಲ್ಲಿನ ರೈತರು ಶತಮಾನದಷ್ಟು ಹಳೆಯದಾದ ನೀರಾವರಿ ಪದ್ಧತಿಯನ್ನೇ ಅನುಸರಿಸುತ್ತಿದ್ದು, ಸೂಕ್ತ, ಕ್ರಿಯಾತ್ಮಕ ಮತ್ತು ನೀರಿನ ಗರಿಷ್ಠ ಸದ್ಬಳಕೆಯ ಪದ್ಧತಿಯನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂಬ ಅಂಶವನ್ನು ತಜ್ಞರ ತಂಡ ಪ್ರಧಾನವಾಗಿ ಪ್ರಸ್ತಾಪಿಸಿದೆ.[೬೦][೬೧]

ಸುಪ್ರೀಂ ಕೋರ್ಟ್ ಆದೇಶ

[ಬದಲಾಯಿಸಿ]
  • ವಾದ-ಪ್ರತಿವಾದ ಆಲಿಸಿದ ಕೋರ್ಟ್ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ಅದೇ ವೇಳೆ ಮುಂದಿನ ಆದೇಶದವರೆಗೆ ತಮಿಳುನಾಡಿಗೆ ನೀರು ಹರಿಸುವಂತೆ ಕೋರ್ಟ್ ಆದೇಶಿಸಿದೆ. ಅ. 7 ರಿಂದ ಅ. 18ರ ವರೆಗೆ ನೀರು ಬಿಡುವ ಆದೇಶವನ್ನು ಕರ್ನಾಟಕ ಪಾಲಿಸಬೇಕು ಎಂದು ಹೇಳಿದ ಕೋರ್ಟ್ ಎರಡೂ ರಾಜ್ಯಗಳು ಶಾಂತಿ, ಸೌಹಾರ್ದತೆ ಕಾಪಾಡಬೇಕು ಎಂದು ಹೇಳಿದೆ. (The Supreme Court on Tuesday asked Karnataka to continue supplying 2,000 cusecs of Cauvery river water to Tamil Nadu everyday till further orders.)[೬೨]

ಸಾರಾಂಶ

[ಬದಲಾಯಿಸಿ]
  • ಕೇಂದ್ರದ ಅಧ್ಯಯನ ತಂಡ ಸುಪ್ರೀಮ್ ಕೋರ್ಟಿಗೆ ಕೊಟ್ಟ ವರದಿಯಲ್ಲಿನ ಅಂಕಿ ಅಂಶ:
  • 2017ರ ಮೇ ಅಂತ್ಯದವರೆಗೆ: (೨೯ ವರ್ಷದ ಸರಾಸರಿಯಂತೆ ಲಭ್ಯತೆ ಅಂದಾಜು)
ರಾಜ್ಯ ಕೃಷಿ ಪ್ರದೇಶ(ಹಾಲಿ) ಅಗತ್ಯ-> ಕೃಷಿಗೆ ಕುಡಿಯಲು+ ಆರಿಕೆ ಒಟ್ಟು ಅಗತ್ಯ ಪ್ರಸುತ ಲಭ್ಯತೆ ಮುಂದಿನ ಲಭ್ಯತೆ- ಆಂದಾಜು
ಕರ್ನಾಟಕ 4.27 ಲಕ್ಷ ಎಕರೆ 36.38 ಟಿಎಂಸಿ ಅಡಿ(4 ಬಾರಿ) 29.10 ಟಿಎಂಸಿ ಅಡಿ 65.48 ಟಿಎಂಸಿ ಅಡಿ 22.90 ಟಿಎಂಸಿ ಅಡಿ 89.16 ಟಿಎಂಸಿ ಅಡಿ(-56.39 ತ.ನಾಡಿಗೆ)=32.77(ಕ.ಕ್ಕೆ)
ತಮಿಳುನಾಡು 12 ಲಕ್ಷ ಎಕರೆ 133 ಟಿಎಂಸಿ ಅಡಿ (18 ಬಾರಿ) 22 ಕುಡಿಯಲು+5ಆವಿ +3 ಟಿಎಂಸಿ ಅಡಿ(ಪಾಂ.ಚೆರಿ) 160 ಟಿಎಂಸಿ ಅಡಿ 31.66 ಟಿಎಂಸಿ ಅಡಿ 56.39 ಟಿಎಂಸಿ ಅಡಿ(ಕರ್ನಾಟಕದಿಂದ

ತೀವ್ರ ಕುಸಿತ ಕಂಡ ಕೆ ಆರ್ ಎಸ್ ನೀರಿನ ಮಟ್ಟ

[ಬದಲಾಯಿಸಿ]
  • October 28, 2016
  • ಅಂಕಿ ಅಂಶಗಳ ಪ್ರಕಾರ 1952 ಅಕ್ಟೋಬರ್ 27ರಂದು 94.40 ಅಡಿ ನೀರಿನ ಸಂಗ್ರಹವಾಗಿತ್ತು. ಇದಾದ ಬಳಿಕ ಇದೇ ಮೊದಲ ಬಾರಿಗೆ ಅಂದರೆ ಈ ವರ್ಷ ಗುರುವಾರಕ್ಕೆ (ಅ.27) 79 ಅಡಿ ನೀರು ಸಂಗ್ರಹವಾಗಿದೆ. (ಗರಿಷ್ಠ ಮಟ್ಟ 124.80)ಪ್ರಸ್ತುತ ಲಭ್ಯವಿರುವ 10.5 ಟಿಎಂಸಿ ನೀರಿನಲ್ಲಿ 2 ಟಿಎಂಸಿ ನೀರು ಮತ್ರ ಬೆಳೆಗೆ ಕೊಡಬಹುದಾಗಿದ್ದು, ಉಳಿದ 8.5ಟಿಎಂಸಿ ನೀರಿನಲ್ಲಿ 4 ಟಿಎಂಸಿ ನೀರನ್ನು ಕುಡಿಯಲು ಬಳಸಬಹುದಾಗಿದೆ. ಉಳಿದ 4.5ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದ್ದು, ಬಳಸಲು ಸಾಧ್ಯವಿಲ್ಲ. ಕಳೆದ ವರ್ಷ ಅಕ್ಟೋಬರ್ ನಲ್ಲಿ ಅ.27ರಂದು 105.29 ಅಡಿ ನೀರು ಸಂಗ್ರಹವಾಗಿತ್ತು. ಅದಕ್ಕೆ ಹೋಲಿಸಿದರೆ ಈ ವರ್ಷ 26 ಅಡಿ ಅಂದರೆ 16ಟಿಎಂಸಿ ನೀರು ಕಡಿಮೆಯಾಗಿದೆ.[೬೩]

ನಿತ್ಯವೂ 2,000 ಕ್ಯುಸೆಕ್‌ ನೀರು ಬಿಡಲು ಆದೇಶ

[ಬದಲಾಯಿಸಿ]
  • 5 Jan, 2017
  • ಜಲಾಶಯಗಳಲ್ಲಿ ಬಳಕೆಗೆ ಲಭ್ಯವಿರುವ ನೀರು 15.58 ಟಿಎಂಸಿ ಅಡಿ.
  • ನವದೆಹಲಿಯಲ್ಲಿ ಕಾವೇರಿ ಜಲವಿವಾದ ನ್ಯಾಯಮಂಡಳಿಯ ಐತೀರ್ಪನ್ನು ಪ್ರಶ್ನಿಸಿ ಕಣಿವೆ ವ್ಯಾಪ್ತಿಯ ರಾಜ್ಯಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಫೆಬ್ರುವರಿ 7ರಿಂದ ಆರಂಭಿಸಲು ಸುಪ್ರೀಂ ಕೋರ್ಟ್‌ ನಿರ್ಧರಿಸಿತು.
  • ಬುಧವಾರ ಮಧ್ಯಾಹ್ನ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಮಿತ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವು, ತಮಿಳುನಾಡಿಗೆ ನಿತ್ಯವೂ 2,000 ಕ್ಯುಸೆಕ್‌ ನೀರು ಬಿಡುವಂತೆ ಕಳೆದ ಅಕ್ಟೋಬರ್‌ 18ರಂದುನೀಡಿದ್ದ ಆದೇಶವನ್ನು ಮುಂದಿನ ಆದೇಶದವರೆಗೆ ಪಾಲಿಸುವಂತೆ ಕರ್ನಾಟಕಕ್ಕೆ ಸೂಚಿಸಿತು.
  • ಮೂರು ರಾಜ್ಯಗಳ ಅರ್ಜಿಗಳ ವಿಚಾರಣೆಯನ್ನು ಫೆ. 7ರಿಂದ ನಿತ್ಯ ಮಧ್ಯಾಹ್ನ 2ರಿಂದ ಕನಿಷ್ಠ ಮೂರು ವಾರಗಳ ಕಾಲ ನಡೆಸಲು ನಿರ್ಧರಿಸಿದ ಪೀಠವು, ನೀರು ಹಂಚಿಕೆ ಕುರಿತು ನ್ಯಾಯಪೀಠ ಆದೇಶಿಸಬಹುದೇ ವಿನಾ ನಿರ್ವಹಣೆ ಕುರಿತು ಸೂಚಿಸಲು ಸಾಧ್ಯವಿಲ್ಲ ಎಂದು ಹೇಳಿತು.[೬೪]

ಕರ್ನಾಟಕದ ಸಂಕಷ್ಟ

[ಬದಲಾಯಿಸಿ]
  • ಕಾವೇರಿ ಕೊಳ್ಳದ ನಾಲ್ಕು (ಕೆಆರ್‌ಎಸ್‌, ಹಾರಂಗಿ, ಕಬಿನಿ, ಹೇಮಾವತಿ) ಜಲಾಶಯಗಳಲ್ಲಿ ನೀರಿನ ಸಂಗ್ರಹ ತಳ ಮುಟ್ಟಿರುವುದರಿಂದ ತಮಿಳುನಾಡಿಗೆ ಪ್ರತಿನಿತ್ಯ 2 ಸಾವಿರ ಕ್ಯುಸೆಕ್ (0.17 ಟಿಎಂಸಿ ಅಡಿ) ನೀರು ಹರಿಸಲು ಸಾಧ್ಯವೇ ಇಲ್ಲದ ಅಸಹಾಯಕ ಪರಿಸ್ಥಿತಿ ಸೃಷ್ಟಿಯಾಗಿದೆ.
  • ಜಲಾಶಯಗಳಲ್ಲಿ ಸದ್ಯ 25.60 ಟಿಎಂಸಿ ಅಡಿ ನೀರಿದೆ. ಆದರೆ, ಅದರಲ್ಲಿ ಬಳಸಲು ಯೋಗ್ಯವಾದ ನೀರಿನ ಪ್ರಮಾಣ 15.58 ಟಿಎಂಸಿ ಅಡಿ ಮಾತ್ರ. ಕಾವೇರಿ ಕಣಿವೆ ಪ್ರದೇಶದ ಜನರು 2017ರ ಮೇ ಅಂತ್ಯದವರೆಗೆ ಇದನ್ನೇ ನಂಬಿದ್ದಾರೆ.
  • ಈ ಹಿಂದೆ ಸುಪ್ರೀಂ ಕೋರ್ಟ್‌ ತಮಿಳುನಾಡಿಗೆ ಅ.7ರಿಂದ ಪ್ರತಿನಿತ್ಯ 2 ಸಾವಿರ ಕ್ಯುಸೆಕ್‌ ನೀರು ಹರಿಸುವಂತೆ ನೀಡಿದ ಆದೇಶದ ಬಳಿಕ ಕೇವಲ 12 ದಿನ ಮಾತ್ರ ಎರಡು ಸಾವಿರ ಕ್ಯುಸೆಕ್‌ ನೀರು ಹರಿದುಹೋಗಿದೆ. ನ್ಯಾಯಾಲಯದ ಆದೇಶದ ಪ್ರಕಾರ ಅಕ್ಟೋಬರ್‌ನಲ್ಲಿ 4.32 ಟಿಎಂಸಿ ಅಡಿ, ನವೆಂಬರ್‌ನಲ್ಲಿ 5.18 ಟಿಎಂಸಿ ಅಡಿ, ಡಿಸೆಂಬರ್‌ನಲ್ಲಿ 5.35 ಟಿಎಂಸಿ ಅಡಿ ನೀರು ತಮಿಳುನಾಡಿಗೆ ಬಿಡಬೇಕಾಗಿತ್ತು.

ಬಿಡಬೇಕಾದ ನೀರು ಪ್ರಮಾಣ

[ಬದಲಾಯಿಸಿ]
  • ‘ಸಾಮಾನ್ಯ ಮಳೆ ವರ್ಷ ಜೂನ್‌ನಿಂದ ಮೇ ವರೆಗೆ ತಮಿಳುನಾಡಿಗೆ 192 ಟಿಎಂಸಿ ಅಡಿ ನೀರು ಬಿಡಬೇಕು. ಆದರೆ, ಈ ವರ್ಷ ಜೂನ್‌ನಿಂದ ಈವರೆಗೆ (ಜ. 4) ಕೇವಲ 66.67 ಟಿಎಂಸಿ ಅಡಿ ನೀರು ಮಾತ್ರ ಹರಿದುಹೋಗಿದೆ. ನ್ಯಾಯಮಂಡಳಿಯ ಐತೀರ್ಪು ಪ್ರಕಾರ ಜೂನ್‌ನಿಂದ ಈವರೆಗೆ (ಜ. 4) 179.39 ಟಿಎಂಸಿ ಅಡಿ ನೀರು ಹರಿದು ಹೋಗಬೇಕಿತ್ತು’ಈ ವರ್ಷ ಈವರೆಗೆ ನಾಲ್ಕೂ ಜಲಾಶಯಗಳಿಗೆ ಹರಿದು ಬಂದ ನೀರು 141.03 ಟಿಎಂಸಿ ಅಡಿ. ಕಳೆದ ವರ್ಷ ಇದೇ ಅವಧಿಯಲ್ಲಿ 210.87 ಟಿಎಂಸಿ ಅಡಿ ನೀರು ಹರಿದು ಬಂದಿತ್ತು. ಈ ವರ್ಷ ಕಾವೇರಿ ಜಲಾಶಯದಿಂದ 76.14 ಟಿಎಂಸಿ ಅಡಿ ನೀರು ಹೊರಬಿಡಲಾಗಿದೆ. ಅದರಲ್ಲಿ ತಮಿಳುನಾಡಿಗೆ 66.67 ಟಿಎಂಸಿ ಅಡಿ ನೀರು ಹರಿದು ಹೋಗಿರುವ ಮಾಹಿತಿ ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ದಾಖಲಾಗಿದೆ.

ಕರ್ನಾಟಕದ ಬಳಕೆ

[ಬದಲಾಯಿಸಿ]
  • 5 Jan, 2017

‘ಕಾವೇರಿ ಕಣಿವೆಯ ಅಚ್ಚುಕಟ್ಟು ಪ್ರದೇಶದಲ್ಲಿ ಕೃಷಿ ಚಟುವಟಿಕೆಗಾಗಿ ನಾಲಾಗಳಿಗೆ 53.93 ಟಿಎಂಸಿ ಅಡಿ ನೀರು ಬಿಡಲಾಗಿದೆ. ನ್ಯಾಯಮಂಡಳಿಯ ಆದೇಶದ ಪ್ರಕಾರ ಈ ನಾಲೆಗಳಿಗೆ 109.14 ಟಿಎಂಸಿ ನೀರು ಬಿಡಬೇಕಿತ್ತು. ಆದರೆ, ಮಳೆ ಕೊರತೆಯಿಂದಾಗಿ ಈ ಪ್ರದೇಶದಲ್ಲಿನ ಕೃಷಿ ಅಗತ್ಯಕ್ಕೆ ನೀರು ಬಿಡಲು ಸಾಧ್ಯವಾಗಿಲ್ಲ. ಪ್ರತಿ ವರ್ಷ 5ರಿಂದ 6 ಟಿಎಂಸಿ ಅಡಿಯಷ್ಟು ನೀರು ಆವಿಯಾಗಿ ಹೋಗುತ್ತದೆ’

ತಮಿಳುನಾಡಿಗೆ

[ಬದಲಾಯಿಸಿ]
  • ಡಿಸೆಂಬರ್‌ ತಿಂಗಳಲ್ಲಿ ತಮಿಳುನಾಡಿಗೆ ಕೆಲವು ದಿನ ಮಾತ್ರ 1000– 1500 ಕ್ಯುಸೆಕ್‌ ಮಧ್ಯೆ ನೀರು ಹರಿದು ಹೋಗಿದೆ. ಸದ್ಯದ ಹರಿಯುವ ನೀರಿನ ಪ್ರಮಾಣ 500 ಕ್ಯುಸೆಕ್‌ಗಿಂತಲೂ ಕಡಿಮೆ. ಜ. 4ರಂದು ಕೇವಲ 338 ಕ್ಯುಸೆಕ್‌ ಹರಿದು ಹೋಗಿದೆ.

ಅಕ್ಟೋಬರ್ ೭ ರಿಂದ ನೀರು ತಮಿಳಿನಾಡಿಗೆ ನೀರು ಹರಿದ ಪ್ರಮಾಣ

[ಬದಲಾಯಿಸಿ]
ದಿನ 2016 ಅಕ್ಟೊ7 11 12 13 14 15 16 17 ನವೆಂ16 17 18 19
ಕ್ಯುಸೆಕ್ಸ್ 2235 10397 7649 5944 5795 7801 4206 2540 2286 2452 2547 2146

[೬೫]

ತಮಿಳುನಾಡಿಗೆ ಈ ವರ್ಷ ಹರಿದ ನೀರು

[ಬದಲಾಯಿಸಿ]
  • ಟಿ.ಎಂ.ಸಿ ಅಡಿಗಳಲ್ಲಿ (ವಿವರ೬೬)
ತಿಂಗಳು ಹರಿಸಬೇಕಿದ್ದ ಪ್ರಮಾಣ ಹರಿಸಿದ ನೀರು ೧೫-೧೬ರಲ್ಲಿ ಹರಿದ ನೀರು
6-2016 10 ಟಿ.ಎಂ.ಸಿ. 2.88 ಟಿ.ಎಂ.ಸಿ. 12.6 ಟಿ.ಎಂ.ಸಿ.
7 34 15.52 27.3
8 50 14.64 26.5
9 40 20.07 22.4
10 22 8.30 19
11 15 3.18 28.4
12 8 1.94 9.2
2017ಜನ 4ರ ವರೆಗೆ 3 0.14 3.8

ಕಾವೇರಿ ಕೊಳ್ಳದಲ್ಲಿ ನೀರಿನ ಸಂಗ್ರಹ

[ಬದಲಾಯಿಸಿ]
  • ಕಾವೇರಿ ಕೊಳ್ಳದ ನಾಲ್ಕು (ಕೆಆರ್‌ಎಸ್‌, ಹಾರಂಗಿ, ಕಬಿನಿ, ಹೇಮಾವತಿ) ಜಲಾಶಯಗಳಲ್ಲಿ ನೀರಿನ ಸಂಗ್ರಹ;
  • ಟಿ.ಎಂ.ಸಿ.ಅಡಿಗಳಲ್ಲಿ:
  • ಈಗ ಬಳಕೆಗೆ ಲಭ್ಯವಿರುವ ನೀರು 15.58 ಟಿ.ಎಂ.ಸಿ.ಅಡಿ.೬೬
ಜಲಾಶಯಗಳು 2016 ಜನ .5ರ ಸಂಗ್ರಹ ಬಳಕೆಗೆ ಲಭ್ಯ 2017ಜನ.5 ರಂದು ಇರುವ ಸಂಗ್ರಹ ಬಳಸಲು ಲಭ್ಯ
ಕೆ.ಆರ.ಎಸ್ 27.68ಟಿ.ಎಂ.ಸಿ.ಅಡಿ 23.27ಟಿ.ಎಂ.ಸಿ.ಅಡಿ 10.54ಟಿ.ಎಂ.ಸಿ.ಅಡಿ 6.14ಟಿ.ಎಂ.ಸಿ.ಅಡಿ
ಹಾರಂಗಿ 0.708 0.281 2.59 2.16
ಹೇಮಾವತಿ 6.22 4.88 5.04 3.70
ಕಬಿನಿ 9.58 2.73 7.43 3.58

ಕರ್ನಾಟಕದಿಂದ ರೂ.2480 ಕೋಟಿ ಪರಿಹಾರಕ್ಕೆ ಆಗ್ರಹಿಸಿದ ತಮಿಳುನಾಡು

[ಬದಲಾಯಿಸಿ]
  • ಸುಪ್ರೀಂಕೋರ್ಟ್‌ ಆದೇಶಕ್ಕೆ ಅನುಗುಣವಾಗಿ ಕಾವೇರಿ ನೀರು ಹರಿಸುವಲ್ಲಿ ವಿಫಲವಾಗಿರುವ ಕರ್ನಾಟಕ ಸರ್ಕಾರ, ತಮಗಾಗಿರುವ ₹2480 ಕೋಟಿ ನಷ್ಟವನ್ನು ಭರಿಸಬೇಕು ಎಂದು ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಆಗ್ರಹಿಸಿದೆ. ಈ ಸಂಬಂಧ ಎರಡೂ ರಾಜ್ಯಗಳು ಸೂಕ್ತ ಸಾಕ್ಷ್ಯಾಧಾರಗಳನ್ನು ಒಂದು ವಾರದೊಳಗೆ ಒದಗಿಸಬೇಕೆಂದು ಸೂಚಿಸಿರುವ ಸುಪ್ರೀಂಕೋರ್ಟ್‌, ನಾಲ್ಕು ವಾರದೊಳಗೆ ಎಲ್ಲಾ ಮಾಹಿತಿಗಳ ವಿವರಗಳನ್ನೊಳಗೊಂಡ ಅಫಿಡೆವಿಟ್‌ನ್ನು ಸಹ ಕಡ್ಡಾಯವಾಗಿ ಸಲ್ಲಿಸಬೇಕೆಂದು ತಿಳಿಸಿದೆ. ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ಅಮಿತವ ರೋಯ್‌ ಹಾಗೂ ಎ.ಎಮ್‌ ಖಾನ್ವಿಲ್ಕರ್‌ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ವಿವಾದ ಸಂಬಂಧದ ಮಧ್ಯಂತರ ಆದೇಶವನ್ನು ಮುಂದೂಡಿದ್ದು, ಮುಂದಿನ ಆದೇಶ ಬರುವ ವರೆಗೂ ಪ್ರತಿನಿತ್ಯ 2000ಕ್ಯುಸೆಕ್‌ ನೀರು ಹರಿಸುವುದನ್ನು ಮುಂದುವರಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಿದೆ. ಎರಡೂ ರಾಜ್ಯಗಳ ವಾದವನ್ನು ಜನವರಿ 4ರಿಂದ ಫೆಬ್ರವರಿ 7ರವರೆಗೆ (ಮೂರು ವಾರಗಳ ಕಾಲ) ಆಲಿಸಲಿರುವ ಸುಪ್ರೀಂ ಕೋರ್ಟ್‌, ಈ ವಿವಾದವನ್ನು ಬಗೆಹರಿಸುವ ವಿಶ್ವಾಸ ವ್ಯಕ್ತ ಪಡಿಸಿದೆ.[೬೬]

ತಜ್ಞರ ಸಮಿತಿಗೆ ರಾಜ್ಯ ಆಕ್ಷೇಪ

[ಬದಲಾಯಿಸಿ]
  • 18 Feb, 2017;
  • ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ತಜ್ಞರ ಸಮಿತಿ ರಚಿಸುವುದಕ್ಕೆ ಕೇಂದ್ರ ಸರ್ಕಾರ ಒಲವು ತೋರಿದೆ. ಆದರೆ, ಮೇಲುಸ್ತುವಾರಿ ಸಮಿತಿ ಅಸ್ತಿತ್ವದಲ್ಲಿ ಇರುವುದರಿಂದ ಮತ್ತೊಂದು ಸಮಿತಿ ಅನಗತ್ಯ ಎಂದು ಕರ್ನಾಟಕ ವಿರೋಧ ವ್ಯಕ್ತಪಡಿಸಿದೆ.ಆ ಸಮಿತಿಯ ಕಣ್ಗಾವಲಿನಲ್ಲೇ ನದಿ ನೀರು ಹಂಚಿಕೆಗೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳುವಂತಾದಲ್ಲಿ ವಿವಾದಕ್ಕೆ ಆಸ್ಪದ ಇಲ್ಲದಂತಾಗುತ್ತದೆ ಎಂಬ ಕೇಂದ್ರದ ಅಭಿಪ್ರಾಯಕ್ಕೆ ಕರ್ನಾಟಕ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
  • ಪುದುಚೇರಿ ಮಾತ್ರ ಈ ಪ್ರಸ್ತಾವನೆಗೆ ತಕ್ಷಣವೇ ತನ್ನ ಒಪ್ಪಿಗೆ ಸೂಚಿಸಿತು. ಅಭಿಪ್ರಾಯ ಸೂಚಿಸುವಂತೆ ಕರ್ನಾಟಕ, ತಮಿಳುನಾಡು ಮತ್ತು ಕೇರಳ ಸರ್ಕಾರಗಳಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ.[೬೭]

೪, ಮಾರ್ಚಿ ೨೦೧೭ ರ ಸ್ಥಿತಿ

[ಬದಲಾಯಿಸಿ]
  • 5 Mar, 2017;
  • ಬೇಸಿಗೆಯಲ್ಲಿ ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ಹಲವು ನಗರ, ನದಿಗೆ ಹೊಂದಿಕೊಂಡಿರುವ ನೂರಾರು ಗ್ರಾಮಗಳ ಕುಡಿಯುವ ನೀರಿನ ದಾಹ ಇಂಗಿಸಲು ಕಾವೇರಿ ನೀರಾವರಿ ನಿಗಮವು ಹಲವು ಮಾರ್ಗಗಳನ್ನು ತಡಕಾಡುತ್ತಿದೆ. ಹೇಮಾವತಿ ಅಣೆಕಟ್ಟೆಯಿಂದ ಕಳೆದ ಒಂದು ವಾರದಲ್ಲಿ 1.5 ಟಿಎಂಸಿ ಅಡಿ ನೀರು ಬಂದಿರುವುದು ಅಧಿಕಾರಿಗಳು ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಆಗಿದೆ. ಆದರೂ, ಜೂನ್‌ವರೆಗೆ ನೀರು ಪೂರೈಸಲು ಬೇಕಾದ ಪರ್ಯಾಯ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗುತ್ತದೆ.
  • ಕೆಆರ್‌ಎಸ್‌ ಅಣೆಕಟ್ಟೆಯ ನೀರಿನ ಮಟ್ಟವು 81.50 ಅಡಿ ಇದೆ. ಅಣೆಕಟ್ಟೆಯಲ್ಲಿ ಒಟ್ಟು 11.46 ಟಿಎಂಸಿ ಅಡಿಯಷ್ಟು ನೀರಿದ್ದು, ಅದರಲ್ಲಿನ 4.40 ಟಿಎಂಸಿ ಅಡಿ ‘ಡೆಡ್‌ ಸ್ಟೋರೇಜ್‌’ ತೆಗೆದರೆ ಬಳಕೆಗೆ ಲಭ್ಯವಾಗುವುದು ಕೇವಲ 7.06 ಟಿಎಂಸಿ ಅಡಿಯಷ್ಟು ಮಾತ್ರ. ಕಳೆದ ವರ್ಷ ಮಾರ್ಚ್‌ 4ರಂದು ಅಣೆಕಟ್ಟೆಯಲ್ಲಿ ಒಟ್ಟು 17.58 ಟಿಎಂಸಿ ಅಡಿಯಷ್ಟು ನೀರಿತ್ತು. ಅದರಲ್ಲಿ 13.18 ಟಿಎಂಸಿ ಅಡಿ ನೀರು ಬಳಕೆ ಲಭ್ಯವಿತ್ತು. ಹಾಗಾಗಿ ಕಳೆದ ಬಾರಿ ಕುಡಿಯುವ ನೀರಿಗೆ ತೊಂದರೆಯಾಗಿರಲಿಲ್ಲ.

ಲೆಕ್ಕಾಚಾರ:

[ಬದಲಾಯಿಸಿ]
  • ಪ್ರತಿ ನಿತ್ಯ 800 ಕ್ಯುಸೆಕ್‌ನಂತೆ ನೀರು ಹರಿಸಬೇಕಾಗಬಹುದು ಎಂದು ಲೆಕ್ಕ ಹಾಕಲಾಗಿದೆ. ಅಣೆಕಟ್ಟೆಯಲ್ಲಿ ಲಭ್ಯ ಇರುವ ನೀರಿನಲ್ಲಿ ಜೂನ್‌ವರೆಗೂ ಕುಡಿಯುವ ನೀರು ಸರಬರಾಜು ಮಾಡುವ ಸವಾಲು ಕರ್ನಾಟಕ ನೀರಾವರಿ ನಿಗಮ ಹಾಗೂ ಬೆಂಗಳೂರಿನ ಜಲ ಮಂಡಳಿಯ ಮುಂದಿದೆ. ಪ್ರತಿ ತಿಂಗಳಿಗೆ 2 ಟಿಎಂಸಿ ಅಡಿಯಷ್ಟು ನೀರು ಬೇಕಾಗುತ್ತದೆ. ಲಭ್ಯ ಇರುವ 7.06 ಟಿಎಂಸಿ ಅಡಿಯ ಜತೆಗೆ ಜೂನ್‌ವರೆಗೆ ಅಣೆಕಟ್ಟೆಗೆ 1.5 ಟಿಎಂಸಿ ಅಡಿಯಷ್ಟು ನೀರು ಹರಿದು ಬರಬಹುದು ಎಂದು ಅಂದಾಜಿಸಲಾಗಿದೆ.

ಪರ್ಯಾಯ ಮಾರ್ಗ:

[ಬದಲಾಯಿಸಿ]
  • ಕುಡಿಯುವ ನೀರು ಸರಬರಾಜಿಗೆ ನೀರಿನ ತೊಂದರೆಯಾದರೆ ಡೆಡ್‌ ಸ್ಟೋರೇಜ್‌ ನೀರು ಬಳಸಿಕೊಳ್ಳಲು ಕಾವೇರಿ ನೀರಾವರಿ ನಿಗಮ ಹಾಗೂ ಬೆಂಗಳೂರು ಜಲ ಮಂಡಳಿ ಯೋಚಿಸಿವೆ. ಮೊದಲು 1,500 ಎಚ್‌ಪಿಯ 17 ಪಂಪ್‌ಸೆಟ್‌ಗಳನ್ನು ಖರೀದಿಸಿ, 45 ದಿನಗಳ ಕಾಲ ನೀರು ಎತ್ತಲು 45 ಕೋಟಿ ವೆಚ್ಚದ ಪ್ರಸ್ತಾವವೊಂದನ್ನು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸಿದ್ಧಪಡಿಸಿದ್ದರು. ಖರೀದಿ ವೆಚ್ಚ ಹೆಚ್ಚಾಗುವುದರಿಂದ ಜಲ ಮಂಡಳಿಯು ಈ ಪ್ರಸ್ತಾವವನ್ನು ಕೈಬಿಟ್ಟಿದೆ. ಈಗ ಪರ್ಯಾಯವಾಗಿ ಬಾಡಿಗೆ ತೆಗೆದುಕೊಂಡು ನೀರು ಎತ್ತುವ ಪ್ರಸ್ತಾವ ಸಿದ್ಧಪಡಿಸಲಾಗುತ್ತಿದೆ.[೬೮]

2,000 ಕ್ಯುಸೆಕ್‌ ನೀರು -ಆದೇಶ ಮುಂದುವರಿಕೆ

[ಬದಲಾಯಿಸಿ]
  • 22 Mar, 2017
  • ಕಾವೇರಿ ಜಲವಿವಾದ ನ್ಯಾಯಮಂಡಳಿ ನೀಡಿರುವ ಐತೀರ್ಪನ್ನು ಪ್ರಶ್ನಿಸಿ ಕಣಿವೆ ವ್ಯಾಪ್ತಿಯ ರಾಜ್ಯಗಳು ಸಲ್ಲಿಸಿರುವ ಸಿವಿಲ್‌ ಅರ್ಜಿಗಳ ಅಂತಿಮ ವಿಚಾರಣೆಯನ್ನು ಜುಲೈ 11ರಿಂದ ಆರಂಭಿಸಲು ಸುಪ್ರೀಂ ಕೋರ್ಟ್‌ ನಿರ್ಧರಿಸಿದೆ. ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ, ಕರ್ನಾಟಕದಿಂದ ತಮಿಳುನಾಡಿಗೆ ನಿತ್ಯ 2,000 ಕ್ಯುಸೆಕ್‌ ನೀರು ಹರಿಸುವಂತೆ ಕಳೆದ ಜ.4ರಂದು ನೀಡಿರುವ ಆದೇಶವನ್ನು ಮುಂದುವರಿಸುವಂತೆ ಸೂಚಿಸಿತು.
  • ಕರ್ನಾಟಕ ಕಾವೇರಿ ಕಣಿವೆ ವ್ಯಾಪ್ತಿಯಲ್ಲಿ ಏತ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ಅವುಗಳಿಗೂ ತಡೆ ನೀಡಬೇಕು ಎಂದು ತಮಿಳುನಾಡು ಪರ ವಕೀಲ ಶೇಖರ್‌ ನಾಫಡೆ ಕೋರಿದರು. ‘ಕರ್ನಾಟಕವು ನಿತ್ಯ 2,000 ಕ್ಯುಸೆಕ್‌ ನೀರು ಬಿಡುವಂತೆ ಕೋರ್ಟ್‌ ನೀಡಿರುವ ಆದೇಶ ಪಾಲಿಸಿಲ್ಲ. ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ಏಪ್ರಿಲ್‌ ಮಧ್ಯಭಾಗದಲ್ಲಿ ನೀರು ಹರಿಸುವಂತೆ ಸೂಚಿಸಬೇಕು’ ಎಂದು ನಾಫಡೆ ಕೋರ್ಟ್‌ಗೆ ಮನವಿ ಮಾಡಿದರು.
  • ‘ಕೋರ್ಟ್‌ ಆದೇಶವನ್ನು ಕರ್ನಾಟಕ ಪಾಲಿಸಿದೆ. ತೀವ್ರ ಬರ ಆವರಿಸಿದೆ. ಕುಡಿಯಲು ನಮಗೇ ನೀರಿಲ್ಲ. ಹೀಗಿರುವಾಗ ತಮಿಳುನಾಡಿಗೆ ನೀರು ಹರಿಸುವುದು ಅಸಾಧ್ಯ’ ಎಂದು ಕರ್ನಾಟಕ ಪರ ವಕೀಲ ಫಾಲಿ ನಾರಿಮನ್‌ ವಿವರಿಸಿದರು. ಜುಲೈ 11ರಿಂದ ವಾರದಲ್ಲಿ ಮೂರು ದಿನಗಳಂತೆ 15 ದಿನಗಳವರೆಗೆ ಪ್ರಕರಣದ ವಿಚಾರಣೆ ನಡೆಸಲು ಪೀಠ ನಿರ್ಧರಿಸಿತು.[೬೯]

ಕುಡಿಯುವ ನೀರಿನ ಸಮಸ್ಯೆ

[ಬದಲಾಯಿಸಿ]
  • 11 Apr, 2017;
  • ಕೆ.ಆರ್.ಎಸ್.ನಲ್ಲಿ ೪.೪೩ ಟಿ.ಎಂ.ಸಿ. ಅಡಿ ನೀರು.
  • ಆಲಮಟ್ಟಿಯಲ್ಲಿ ಡೆಡ್‌ಸ್ಟೋರೇಜ್ ಸೇರಿ 12 ಟಿಎಂಸಿ ಅಡಿ ನೀರಿದ್ದು, ಅದರಲ್ಲಿ 8.28 ಟಿಎಂಸಿ ಅಡಿ ಬಳಕೆಗೆ ಲಭ್ಯ ಇದೆ. ಹೀಗಾಗಿ ಈ ನೀರನ್ನು ಆಶ್ರಯಿಸಿದ ಪ್ರದೇಶಗಳಿಗೆ ಸಮಸ್ಯೆಯಾಗುವುದಿಲ್ಲ ಎಂದರು. ನಾರಾಯಣಪುರ ಜಲಾಶಯದಲ್ಲಿ ಒಟ್ಟು13 ಟಿಎಂಸಿ ಅಡಿ ನೀರಿದ್ದು, 5.9 ಟಿಎಂಸಿ ಅಡಿ ಬಳಕೆಗೆ ದೊರೆಯಲಿದೆ. ಹಿಡಕಲ್‌, ಹಿಪ್ಪರಗಿಯಲ್ಲಿರುವ ನೀರು ಆ ಭಾಗದ ಕುಡಿಯುವ ಉದ್ದೇಶಕ್ಕೆ ಸಾಕಾಗಲಿದೆ ಎಂದು ಸಚಿವರು ವಿವರಿಸಿದರು. ಮಲಪ್ರಭಾ ಜಲಾಶಯದಲ್ಲಿ 1.77 ಟಿಎಂಸಿ ಅಡಿ ನೀರಿದ್ದು. ಬಾದಾಮಿಯವರೆಗೆ ಬೇಸಿಗೆಯಲ್ಲಿ ಕುಡಿಯಲು ನೀರು ಸರಬರಾಜು ಮಾಡಬಹುದು. ಸಿಂಗಟಾಲೂರು ಯೋಜನೆಗೆ ಭದ್ರಾ ಜಲಾಶಯದಿಂದ 0.46 ಟಿಎಂಸಿ ಅಡಿ ನೀರು ಹರಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ .
  • ತುಂಗಭದ್ರಾ ಜಲಾಶಯ ಹೊರತುಪಡಿಸಿದರೆ ಬೇರೆ ಯಾವ ಜಲಾಶಯದಲ್ಲೂ ಡೆಡ್‌ ಸ್ಟೋರೇಜ್‌ ಬಳಸಬೇಕಾದ ಪರಿಸ್ಥಿತಿ ಜೂನ್‌ವರೆಗೆ ಇಲ್ಲ. ಆಲಮಟ್ಟಿಯಲ್ಲಿ ಡೆಡ್‌ಸ್ಟೋರೇಜ್ ಸೇರಿ 12 ಟಿಎಂಸಿ ಅಡಿ ನೀರಿದ್ದು, ಅದರಲ್ಲಿ 8.28 ಟಿಎಂಸಿ ಅಡಿ ಬಳಕೆಗೆ ಲಭ್ಯ ಇದೆ. ಹೀಗಾಗಿ ಈ ನೀರನ್ನು ಆಶ್ರಯಿಸಿದ ಪ್ರದೇಶಗಳಿಗೆ ಸಮಸ್ಯೆಯಾಗುವುದಿಲ್ಲ ಎಂದರು. ನಾರಾಯಣಪುರ ಜಲಾಶಯದಲ್ಲಿ ಒಟ್ಟು13 ಟಿಎಂಸಿ ಅಡಿ ನೀರಿದ್ದು, 5.9 ಟಿಎಂಸಿ ಅಡಿ ಬಳಕೆಗೆ ದೊರೆಯಲಿದೆ. ಹಿಡಕಲ್‌, ಹಿಪ್ಪರಗಿಯಲ್ಲಿರುವ ನೀರು ಆ ಭಾಗದ ಕುಡಿಯುವ ಉದ್ದೇಶಕ್ಕೆ ಸಾಕಾಗಲಿದೆ.[೭೦]

ಸುಪ್ರೀಂ ಕೋರ್ಟ್‌ ತೀರ್ಪು

[ಬದಲಾಯಿಸಿ]
  • ಕಾವೇರಿ ಜಲ ವಿವಾದ ನ್ಯಾಯಮಂಡಳಿಯ ಐ ತೀರ್ಪನ್ನು ಪ್ರಶ್ನಿಸಿ ಕಣಿವೆ ವ್ಯಾಪ್ತಿಯ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಸರ್ಕಾರಗಳು ಸಲ್ಲಿಸಿದ್ದ ಮೇಲ್ಮನವಿಗಳನ್ನು ಸಲ್ಲಿಸಿದ್ದವು. ಅವುಗಳ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ತಮಿಳುನಾಡಿಗೆ ವಾರ್ಷಿಕ 177.25 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿ 2018ರ ಫೆಬ್ರುವರಿ 16ರಂದು ತೀರ್ಪು ನೀಡಿದೆ.[೭೧]

ನೋಡಿ ಹೆಚ್ಚಿನ ಮಾಹಿತಿಗೆ

[ಬದಲಾಯಿಸಿ]

ಅಭಿಪ್ರಾಯಗಳು

[ಬದಲಾಯಿಸಿ]
    • ೩.೧೬-೭-೨೦೧೪ ವಿಜಯ ಕರ್ನಾಟಕ ಮತ್ತು ಪ್ರಜಾವಾಣಿ ವರದಿ.

ಉಲ್ಲೇಖ

[ಬದಲಾಯಿಸಿ]
  1. ೧.೦ ೧.೧ What is the Kaveri river issue all about?
  2. Water Disputes TribunalFinal Order[ಶಾಶ್ವತವಾಗಿ ಮಡಿದ ಕೊಂಡಿ]
  3. "Cauvery_River_System". Archived from the original on 2016-08-28. Retrieved 2016-09-15.
  4. ಸುಪ್ರೀಂ ಕೋರ್ಟ್‌ ತೀರ್ಪು- 2018ರ ಫೆಬ್ರುವರಿ 16
  5. Top 11 Dams in Tamil Nadu (Just want to include Amaravathi)
  6. ತಮಿಳುನಾಡಿಗೆ ನೀರು ಹರಿಸಿ ಎಂದ ಸುಪ್ರೀಂ
  7. ತಜ್ಞರ ಅಭಿಪ್ರಾಯ;ಶೇ 10ರಷ್ಟು ಬೆಳೆಗೆ ಹಾನಿ
  8. ತಮಿಳುನಾಡಿಗೆ ನೀರು: ಸಂಕಷ್ಟದಲ್ಲಿ ಬೆಳೆ, ಬೆಳೆಗಾರ
  9. "ನೀರಿನ ಹಕ್ಕು: ಮರುಚಿಂತನೆಯ ಸವಾಲು 9 Sep, 2016". Archived from the original on 2016-09-13. Retrieved 2016-09-12.
  10. ನಿವಾರಣೆಗೆ ರಾಷ್ಟ್ರೀಯ ಜಲ ನೀತಿ ಅಗತ್ಯ ಸಿದ್ದಯ್ಯ ಹಿರೇಮಠ;8 Sep, 2016[ಶಾಶ್ವತವಾಗಿ ಮಡಿದ ಕೊಂಡಿ]
  11. ಪ್ರಜಾವಾಣಿ ವಾರ್ತೆ
  12. ಅನ್ಯಾಯದ ಪರಮಾವಧಿ’:ಪ್ರಜಾವಾಣಿ ವಾರ್ತೆ:13 Sep, 2016[ಶಾಶ್ವತವಾಗಿ ಮಡಿದ ಕೊಂಡಿ]
  13. ಕಾನೂನು ಚೌಕಟ್ಟಿನಲ್ಲಿ ನಿರ್ಧಾರ
  14. ಹಿಂಸಾಚಾರದಿಂದ ಪರಿಹಾರ ಸಿಗುವುದಿಲ್ಲ.
  15. http://www.prajavani.net/news/article/2016/09/12/437382.html
  16. ರಾಜ್ಯಕ್ಕೆ ಮಾರಕವಾದ ಆದೇಶ
  17. http://www.prajavani.net/news/article/2016/09/13/437613.html
  18. ಮೇಲುಸ್ತುವಾರಿ ಸಮಿತಿ ತೀರ್ಪು
  19. ಆದೇಶದಿಂದ ಸಮಾಧಾನ ಆಗದಿದ್ದರೆ ಸುಪ್ರೀಂ ಕೋರ್ಟ್‌ಗೆ ಹೋಗಬಹುದು: ಶಶಿಶೇಖರ್‌
  20. 10 ದಿನ:ದಿನಕ್ಕೆ 3,000 ಕೂಸೆಕ್ಸ್
  21. "ಕಾವೇರಿ ನಿರ್ವಹಣಾ ಮಂಡಳಿಯ ಅಪಾಯ". Archived from the original on 2016-09-21. Retrieved 2016-09-21.
  22. "ಆರ್ಕೈವ್ ನಕಲು". Archived from the original on 2016-09-21. Retrieved 2016-09-20.
  23. "3 ಸಾವಿರ ಕ್ಯುಸೆಕ್ ನೀರು ಬಿಡಿ;ಪ್ರಜಾವಾಣಿ;20 Sep, 2016". Archived from the original on 2016-09-21. Retrieved 2016-09-20.
  24. http://www.prajavani.net/news/article/2016/09/19/439200.html
  25. ಸುಪ್ರೀಂ ಆದೇಶ; ಪ್ರಜಾವಾಣಿ
  26. ೨೬.೦ ೨೬.೧ "ಆರ್ಕೈವ್ ನಕಲು". Archived from the original on 2016-09-21. Retrieved 2016-09-21.
  27. ಕಟ್ಜು ಟ್ವೀಟ್‌
  28. "ನಿರ್ವಹಣಾ ಮಂಡಳಿಯಿಂದ ಬೆಳೆ ಮೇಲೂ ಕಣ್ಗಾವಲು". Archived from the original on 2016-09-23. Retrieved 2016-09-23.
  29. "ಆರ್ಕೈವ್ ನಕಲು". Archived from the original on 2016-09-21. Retrieved 2016-09-21.
  30. "ಇಂಗುವುದು ಎಂದು? ರಾಜಧಾನಿಯ ದಾಹ". Archived from the original on 2016-09-24. Retrieved 2016-09-28.
  31. "ಕಾವೇರಿ ನೀರು ಈಗ ಬೆಂಗಳೂರಿಗೂ ಸಾಕಾಗಲ್ಲ". Archived from the original on 2016-09-23. Retrieved 2016-09-22.
  32. "ಕುಡಿಯೋಕೂ ಕಾವೇರಿ ಸಾಕಾಗಲ್ಲ!". Archived from the original on 2016-09-21. Retrieved 2016-09-28.
  33. ಕುಡಿಯಲಷ್ಟೇ ಕಾವೇರಿ ಪ್ರಜಾವಾಣಿ
  34. http://www.prajavani.net/news/article/2016/09/23/440078.html
  35. "ರೂ.76 ಕೋಟಿ ಶುಲ್ಕ". Archived from the original on 2016-10-02. Retrieved 2016-10-02.
  36. 3 ದಿನಗಳ ಕಾಲ ತಲಾ 6 ಸಾವಿರ ಕ್ಯೂಸೆಕ್ ನೀರು ಹರಿಸಲು ಸುಪ್ರೀಂ ಆದೇಶ;ಪ್ರಜಾವಾಣಿ;27 Sep, 2016
  37. http://www.prajavani.net/news/article/2016/09/29/441397.html
  38. http://www.prajavani.net/news/article/2016/09/29/441453.html
  39. ನೀರು ಬಿಡದಿರಲು ನಿರ್ಣಯ
  40. ಪ್ರಜಾವಾಣಿ
  41. ಕಾವೇರಿ: ಕಠಿಣ ನಿಲುವು
  42. lಅ. 6ರವರೆಗೆ ನಿತ್ಯ 6 ಸಾವಿರ ಕ್ಯುಸೆಕ್‌ ನೀರು ಹರಿಸಲು ಸುಪ್ರೀಂ ಸೂಚನೆ[ಶಾಶ್ವತವಾಗಿ ಮಡಿದ ಕೊಂಡಿ]
  43. ಬಿಕ್ಕಟ್ಟಿನಿಂದ ಬಿಕ್ಕಟ್ಟಿನೆಡೆಗೆ
  44. ನಿರ್ವಹಣಾ ಮಂಡಳಿಗೆ ಸದಸ್ಯರ ನೇಮಕವಿಲ್ಲ
  45. ಮರು ಪರಿಶೀಲನೆಗೆ ಕೇಂದ್ರದ ಅರ್ಜಿ
  46. ‘ಸುಪ್ರೀಂ’ ಅಧಿಕಾರ ವ್ಯಾಪ್ತಿ ಪ್ರಶ್ನಿಸಿದ ಕೇಂದ್ರ
  47. ನೀರು ಬಿಡಲು ಒಲವು
  48. ಮೆಟ್ಟೂರು: ಒಳಹರಿವು ಇಳಿಕೆ;3 Oct, 2016
  49. ಸೆ.23ರ ನಿರ್ಣಯ ಬದಲು
  50. ನೀರು ತಮಿಳುನಾಡಿಗೂ ಹರಿದು ಹೋಗಲಿದೆ.
  51. ಕಾವೇರಿ ನೀರು ನೀರಿನ ಪ್ರಮಾಣ ಟಿ.ಎಂ.ಸಿ. ಅಡಿಗಳಲ್ಲಿ.(29-11-2014:ಪ್ರಜಾವಾಣಿ)
  52. 1.88 ಲಕ್ಷ ಎಕರೆ ಬೆಳೆ ನಷ್ಟ: ಸಿದ್ದರಾಮಯ್ಯಪ್ರಜಾವಾಣಿ:4 Oct, 2016
  53. 12ದಿನ 2 ಸಾವಿರ ಕ್ಯೂಸೆಕ್‌ ನೀರು ಹರಿಸಿ: ಸುಪ್ರೀಂ
  54. ಕಾವೇರಿ: ರಾಜ್ಯಕ್ಕೆ ನಿರಾಳಭಾವ
  55. "ಆರ್ಕೈವ್ ನಕಲು". Archived from the original on 2016-10-05. Retrieved 2016-10-05.
  56. ಬರದ ನಡುವೆ ಕರ್ನಾಟಕದ ಔದಾರ್ಯ:[ಶಾಶ್ವತವಾಗಿ ಮಡಿದ ಕೊಂಡಿ]
  57. ಕಾವೇರಿ ನೀರು ಬಿಡಲಾಗದು
  58. "ತಮಿಳುನಾಡಿಗೆ ಕೇಂದ್ರ ತಂಡ ಭೇಟಿ". Archived from the original on 2016-10-12. Retrieved 2016-10-12.
  59. "ಕರ್ನಾಟಕಕ್ಕೆ ತಪ್ಪದ ತೂಗುಗತ್ತಿ!". Archived from the original on 2016-10-19. Retrieved 2016-10-18.
  60. ಎರಡೂ ರಾಜ್ಯಗಳಲ್ಲಿ ನೀರಿನ ಕೊರತೆ;ತಜ್ಞರ ತಂಡ ವರದಿ
  61. ಕಾವೇರಿ ಕಣಿವೆಯ ರೈತರ ಸ್ಥಿತಿ ಗಂಭೀರ
  62. ಮುಂದಿನ ಆದೇಶದವರೆಗೂ ತಮಿಳುನಾಡಿಗೆ ಕಾವೇರಿ ನೀರು
  63. ಕೆ ಆರ್ ಎಸ್ ನೀರಿನ ಮಟ್ಟ
  64. ಕಾವೇರಿ ವಿವಾದ: ಫೆ. 7ರಿಂದ ನಿತ್ಯ ವಿಚಾರಣೆ;ಪ್ರಜಾವಾಣಿ ವಾರ್ತೆ;5 Jan, 2017
  65. "ಬರಿದಾಗುತ್ತಿರುವ ಕಾವೇರಿ: ಸರ್ಕಾರಕ್ಕೆ ಸಂಕಷ್ಟ;ರಾಜೇಶ್ ರೈ ಚಟ್ಲ .;6 Jan, 2017". Archived from the original on 2017-01-06. Retrieved 2017-01-06.
  66. ಕಾವೇರಿ ವಿವಾದ: ಕರ್ನಾಟಕದಿಂದ ₹2480 ಕೋಟಿ ಪರಿಹಾರಕ್ಕೆ ಆಗ್ರಹಿಸಿದ ತಮಿಳುನಾಡು;9 Jan, 2017
  67. ತಜ್ಞರ ಸಮಿತಿಗೆ ರಾಜ್ಯ ಆಕ್ಷೇಪ;ಪ್ರಜಾವಾಣಿ ವಾರ್ತೆ;18 Feb, 2017
  68. ಕೆಆರ್‌ಎಸ್‌: ಪರ್ಯಾಯ ಮಾರ್ಗದ ಹುಡುಕಾಟ;ಬಸವರಾಜ ಹವಾಲ್ದಾರ;5 Mar, 2017
  69. "ಕಾವೇರಿ: ನಿತ್ಯ ನೀರು ಬಿಡುವ ಆದೇಶ ಮುಂದುವರಿಕೆ;22 Mar, 2017". Archived from the original on 2017-03-22. Retrieved 2017-03-22.
  70. ಕುಡಿಯುವ ನೀರಿಗೆ ಬರವಿಲ್ಲ;ಪ್ರಜಾವಾಣಿ ವಾರ್ತೆ;11 Apr, 2017
  71. ಸುಪ್ರೀಂ ಕೋರ್ಟ್‌ ತೀರ್ಪು- 2018ರ ಫೆಬ್ರುವರಿ 16