ಕರ್ನಾಟಕ ವಿದ್ಯಾವರ್ಧಕ ಸಂಘ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

೧೯೫೬ ನವೆಂಬರ ೧ರಂದು ಏಕೀಕೃತ ಕರ್ನಾಟಕ ರಾಜ್ಯವು ಉದಯವಾಗುವ ಪೂರ್ವದಲ್ಲಿ ಕನ್ನಡ ನಾಡು ನಾಲ್ಕು ಭಾಗಗಳಲ್ಲಿ ಹರಿದು ಹಂಚಿ ಹೋಗಿದ್ದಿತು:

ಕರ್ನಾಟಕ ವಿದ್ಯಾವರ್ಧಕ ಸಂಘ,ಧಾರವಾಡ

(೧) ಮುಂಬಯಿ ಕರ್ನಾಟಕ (ಬ್ರಿಟಿಷ್ ಆಧಿಪತ್ಯ)

(೨) ಹೈದರಾಬಾದ ಕರ್ನಾಟಕ ( ನಿಜಾಮ ಅಧಿಪತ್ಯ)

(೩) ಮದ್ರಾಸ ಕರ್ನಾಟಕ (ಬ್ರಿಟಿಷ್ ಆಧಿಪತ್ಯ)

(೪) ಮೈಸೂರು ಸಂಸ್ಥಾನ (ಸ್ವಾಯತ್ತ ಕನ್ನಡ ಸಂಸ್ಥಾನ)

(೫) ಕೊಡಗು


ಮೈಸೂರು ಸಂಸ್ಥಾನವನ್ನು ಹೊರತುಪಡಿಸಿ ಉಳಿದ ಭಾಗಗಳಲ್ಲಿ ಕನ್ನಡವು ಕಾಲುಕಸವಾಗಿತ್ತು. ಮುಂಬಯಿ ಕರ್ನಾಟಕದಲ್ಲಿ ಮರಾಠಿ ಸರ್ವಾಧಿಕಾರತ್ವವನ್ನು ಕಿತ್ತೊಗೆದು ಕನ್ನಡದ ಪುನರ್ ಪ್ರತಿಷ್ಠಾನ ಮಾಡುವ ಕನಸು ಕಂಡವರಲ್ಲಿ ರಾ.ಹ.ದೇಶಪಾಂಡೆ ಅಗ್ರಗಣ್ಯರು. ಇವರ ಪ್ರಯತ್ನಗಳಿಂದಾಗಿ ಕರ್ನಾಟಕ ವಿದ್ಯಾವರ್ಧಕ ಸಂಘವು ಅಸ್ತಿತ್ವದಲ್ಲಿ ಬಂದಿತು.

ಸಂಘದ ಜನನ[ಬದಲಾಯಿಸಿ]

೧೮೯೦ ಜುಲೈ ೨೦ರಂದು ಸಂಜೆ ೫ ಗಂಟೆಗೆ ಧಾರವಾಡದ ಹೊಸಯಲ್ಲಾಪುರ ಭಾಗದಲ್ಲಿರುವ ಗದಗಕರ ವಕೀಲರ ಅಟ್ಟದ ಮೇಲೆ (“ಮಂಗ್ಯಾನ ಮಹಲ”) ರಾ.ಹ.ದೇಶಪಾಂಡೆಯವರು ಕರೆದ ಸಭೆಯಲ್ಲಿ ಧಾರವಾಡದ ಗಣ್ಯ ನಾಗರಿಕರೆಲ್ಲರೂ ಉಪಸ್ಥಿತರಿದ್ದರು. ಕನ್ನಡದ ಬೆಳೆವಣಿಗೆಗಾಗಿ ‘ಕರ್ನಾಟಕ ವಿದ್ಯಾವರ್ಧಕ ಸಂಘ’ ಎನ್ನುವ ಸಂಘವನ್ನು ಸ್ಥಾಪಿಸಲು ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ಸಂಘದ ಕಾರ್ಯಕಾರಿಣಿಯ ಮೊದಲ ಅಧ್ಯಕ್ಷರು ಶ್ರೀ ಶ್ಯಾಮರಾವ ವಿಠ್ಠಲ ಕಾಯಿಕಿಣಿ; ಮೊದಲ ಕಾರ್ಯದರ್ಶಿ ರಾ.ಹ.ದೇಶಪಾಂಡೆ.

ಪಾಪು ಸಂಪಾದಕತ್ವದಲ್ಲಿ ನಂತರ ಹುಟ್ಟಿದ ವಾರ ಪತ್ರಿಕೆಯೇ ‘ಪ್ರಪಂಚ’. ಪಾಪು ನೇತೃತ್ವದಲ್ಲಿ ಬೆಳೆದ ಇನ್ನೊಂದು ಸಂಘಟನೆ ಧಾರವಾಡದ ಐತಿಹಾಸಿಕ ವಿದ್ಯಾವರ್ಧಕ ಸಂಘ. ಮೂವತ್ತೆರಡು ವರ್ಷಗಳ ಕಾಲ ಅಧ್ಯಕ್ಷರಾಗಿ ಈ ಸಂಘವನ್ನು ಪಾಪು ಮುನ್ನಡೆಸಿದರು.

ಕಾಕತಾಳೀಯ ಅಂದರೆ ಇದುವೇ ನೋಡಿ; ಪಾಪು ಬೆಳೆಸಿದ ವಿದ್ಯಾವರ್ಧಕ ಸಂಘ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿಯ ಮನ್ನಣೆಗೆ ಪಾತ್ರವಾದ ನೆನಪು ಹಸಿರಾಗಿರುವಾಗಲೇ- ಪಾಪು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವಕ್ಕೆ ಪಾತ್ರರಾಗಿದ್ದಾರೆ.