ಆರ್ಕಿಮಿಡೀಸ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಆರ್ಕಿಮಿಡೀಸ್


ಅರ್ಕಿಮಿಡೀಸ್ (Archimedes of Syracuse, ಗ್ರೀಕ್: Ἀρχιμήδης) (ಕ್ರಿ.ಪೂ 287 – ಕ್ರಿ.ಪೂ 212) ಎಂಬಾತನು ಗ್ರೀಕ್ ನ ಗಣಿತಜ್ಞ,ಭೌತಶಾಸ್ತ್ರಜ್ಞ, ಯಂತ್ರಶಿಲ್ಪಿ (ಎಂಜಿನಿಯರ್), ಆವಿಷ್ಕರ್ತ ಹಾಗು ಖಗೋಳ ವಿಜ್ಞಾನಿ. ಇವನ ಜೀವನದ ಬಗ್ಗೆ ಅತ್ಯಲ್ಪ ಮಾಹಿತಿಯಿದೆಯಾದರೂ, ಈತನನ್ನು ಪ್ರಾಚೀನ ಕಾಲದ ವಿಜ್ಞಾನಿಗಳಲ್ಲಿ ಪ್ರಮುಖನೆಂದು ಭಾವಿಸಲಾಗಿದೆ. ಭೌತಶಾಸ್ತ್ರದ ಪ್ರಗತಿಯಲ್ಲಿ ಸ್ಥಾಯಿಜಲಶಾಸ್ತ್ರ (hydrostatics), ಸ್ಥಾಯಿಶಾಸ್ತ್ರ (statics) ಮತ್ತು ಸನ್ನೆಕೊಲಿನ ನಿಯಮಗಳನ್ನು ಪ್ರತಿಪಾದಿಸಿದನು. ಇವನನ್ನು ಪ್ರಾಯೋಗಿಕ ವಿಜ್ಞಾನದ ಜನಕನೆಂದು ಕರೆಯುತ್ತಾರೆ.ತನ್ನ ಕಾಲದಲ್ಲೇ ತನ್ನ ಸಂಶೋಧನೆಗಳಿಗೆ ಪ್ರಸಿದ್ಧನಾಗಿದ್ದರೂ ಸಂಶೋಧನೆಗಳ ಬಗ್ಗೆ ಹೆಚ್ಚಿನ ಒತ್ತು ಕೊಡದೆ ಗಣಿತಶಾಸ್ತ್ರ ಬೆಳೆವಣಿಗೆಗೇ ತನ್ನೆಲ್ಲಾ ಪ್ರತಿಭೆ ಧಾರೆ ಎರೆದನು.

ಜೀವನ ಚರಿತ್ರೆ[ಬದಲಾಯಿಸಿ]

ಆರ್ಕಿಮಿಡೀಸ್ ಸುಮಾರು ಕ್ರಿಪೂ. ೨೮೭ ಸಂವತ್ಸರದಲ್ಲಿ ಗ್ರೀಕರ ವಸಾಹತುವಾಗಿದ್ದ ಸಿರಾಕೂಸ್ ಎಂಬ ಸ್ಥಳದಲ್ಲಿ ಜನಿಸಿದನು.ಬಹುಶ: ಈಜಿಪ್ಟ್‌ನ ಅಲೆಕ್ಸಾಂಡ್ರಿಯದಲ್ಲಿ ವಿದ್ಯಾಭ್ಯಾಸ ಮಾಡಿ,ತನ್ನ ಜೀವನವನ್ನು ಸಿಸಿಲಿಯಲ್ಲಿ ಕಳೆದನು.ಕ್ರಿ.ಪೂ.೨೧೨ ರಲ್ಲಿ ರೋಮನ್ ಸೇನಾಧಿಪತಿ ಮಾರ್ಸೆಲೆಸ್‌ನು ಸಿರಾಕೂಸ್‌ನ್ನು ವಶಪಡಿಸಿಕೊಂಡನು. ಮಾರ್ಸೆಲೆಸ್ಸನು ಆರ್ಕಿಮಿಡೀಸ್‌ನನ್ನು ಕೊಲ್ಲದಂತೆ ತನ್ನ ಸೈನಿಕರಿಗೆ ಆಜ್ಞೆ ಮಾಡಿದ್ದರೂ ಸೈನಿಕರು ಗುರುತಿಸಲು ವಿಫಲರಾಗಿ ಆರ್ಕಿಮಿಡೀಸ್ ಮರಳಿನಲ್ಲಿ ರೇಖಾಗಣಿತದ ಚಿತ್ರ ಬಿಡಿಸುತ್ತಿದ್ದಂತೇ ಕೊಂದುಹಾಕಿದರು.

ಸಂಶೋಧನೆಗಳು[ಬದಲಾಯಿಸಿ]