ಆಪ್ತಮಿತ್ರ
ವಿಕಿಪೀಡಿಯ ಇಂದ
| ಆಪ್ತಮಿತ್ರ |
|
| ಬಿಡುಗಡೆ ವರ್ಷ | ೨೦೦೪ |
| ಚಿತ್ರ ನಿರ್ಮಾಣ ಸಂಸ್ಥೆ | ದ್ವಾರಕೀಶ್ ಚಿತ್ರ |
| ನಾಯಕ | ವಿಷ್ಣುವರ್ಧನ್, ರಮೇಶ್ |
| ನಾಯಕಿ | ಸೌಂದರ್ಯಾ, ಪ್ರೇಮಾ |
| ಪೋಷಕ ವರ್ಗ | ಅವಿನಾಶ್, ದ್ವಾರಕೀಶ್, ಶಿವರಾಂ, ಪ್ರಮಿಳಾ ಜೋಷಾಯ್ |
| ಸಂಗೀತ ನಿರ್ದೇಶನ | ಗುರುಕಿರಣ್ |
| ಕಥೆ / ಕಾದಂಬರಿ | |
| ಚಿತ್ರಕಥೆ | |
| ಸಂಭಾಷಣೆ | |
| ಸಾಹಿತ್ಯ | ಚಿ. ಉದಯಶಂಕರ್, ವಿ. ಮನೋಹರ್, ಗೋಟೂರಿ, ಕವಿರಾಜ್, ವಿ. ನಾಗೇಂದ್ರಪ್ರಸಾದ್ |
| ಹಿನ್ನೆಲೆ ಗಾಯನ | ಎಸ್.ಪಿ. ಬಾಲಸುಬ್ರಹ್ಮಣ್ಯಂ, ಹರಿಹರನ್, ಗುರುಕಿರಣ್, ಮಧು ಬಾಲಕೃಷ್ಣ, ರಾಜೇಶ್, ಉದಿತ್ ನಾರಾಯಣ್, ನಂದಿತಾ, ಚಿತ್ರ |
| ಛಾಯಾಗ್ರಹಣ | ಕೃಷ್ಣಕುಮಾರ್ |
| ನೃತ್ಯ | |
| ಸಾಹಸ | |
| ಸಂಕಲನ | |
| ನಿರ್ದೇಶನ | ಪಿ. ವಾಸು |
| ನಿರ್ಮಾಪಕರು | ದ್ವಾರಕೀಶ್ |
| ಪ್ರಶಸ್ತಿಗಳು | 'ಅತ್ಯುತ್ತಮ ಚಿತ್ರ' - ಫಿಲ್ಮ್‍ಫೇರ್ ಪ್ರಶಸ್ತಿ |
| ಇತರೆ ಮಾಹಿತಿ | ಒಂದು ವರ್ಷ ಸತತವಾಗಿ ತೆರೆಕಂಡ ಹೆಗ್ಗಳಿಕೆ |
'ಆಪ್ತಮಿತ್ರ' - ಕನ್ನಡ ಚಿತ್ರರಂಗ ಕಂಡ ಪ್ರಮುಖ ಚಿತ್ರಗಳಲ್ಲೊಂದು. ಸಿನಿಮಾ ವಿಮರ್ಶಕರ ಪ್ರಕಾರ ಇತ್ತೀಚಿನ ಎಲ್ಲಾ ದಾಖಲೆಗಳನ್ನೂ ಮುರಿದು ಒಂದು ವರ್ಷದ ಸತತ ಪ್ರದರ್ಶನ ಪೂರೈಸಿದೆ. ಚಿತ್ರದ ನಿರ್ಮಾಪಕರು 'ಕನ್ನಡ ಚಿತ್ರರಂಗದ ಕುಳ್ಳ' ಎಂದೇ ಪ್ರಖ್ಯಾತರಾಗಿರುವ ದ್ವಾರಕೀಶ್.
ರಾಜ್ಯದ ಹಲವಾರು ಕಡೆ ಶತ ದಿನೊತ್ಸವ, ರಜತೋತ್ಸವ ಆಚರಿಸಿದ ಈ ಚಿತ್ರ ಒಂದು ವರ್ಷ ತೆರೆಕಂಡ ಸಾಧನೆ ಮಾಡಿದೆ. ಈ ಚಿತ್ರದ "ಪಟ ಪಟ", "ರಾ ರಾ", "ಕಣ ಕಣದೀ ಶಾರದೆ", "ಅಂಕು ಡೊಂಕು" ಹಾಡುಗಳು ಭಾರೀ ಜನಪ್ರಿಯತೆ ಗಳಿಸಿವೆ. ವಿಷ್ಣುವರ್ಧನ್ ರವರ ಮನೋವೈದ್ಯನ ಪಾತ್ರ ಅಮೋಘವೆಂದು ವಿಮರ್ಶಕರ ಅಭಿಪ್ರಾಯ. ನಟಿ ಸೌಂದರ್ಯ ಅವರ ನಾಗವಲ್ಲಿ ಪಾತ್ರ ಪ್ರೇಕ್ಷಕರ ಮನದಲ್ಲಿ ಮನೆಮಾಡುವಂತದ್ದೆಂದು ವಿಮರ್ಶಕರು ಬಣ್ಣಿಸುತ್ತಾರೆ. ಅಮೇರಿಕಾದಲ್ಲೂ ಪ್ರದರ್ಶನ ಕಂಡ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಚಿತ್ರ ತಮಿಳಿನಲ್ಲಿ "ಚಂದ್ರಮುಖಿ" ಯಾಗಿ ಬಿದುಗಡೆಯಾಗಿದೆ. ರಜನೀಕಾಂತ್, ಜ್ಯೋತಿಕಾ, ಪ್ರಭು ಚಂದ್ರಮುಖಿ ಚಿತ್ರದ ಪಾತ್ರವರ್ಗದಲ್ಲಿದ್ದಾರೆ.
