ರಜನೀಕಾಂತ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ರಜನೀಕಾಂತ್

ರಜನೀಕಾಂತ್ (ಜನನ: ಡಿಸೆಂಬರ್ ೧೨ ೧೯೪೯) - ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಸಿನಿಮಾ ತಾರೆಯರಲ್ಲೊಬ್ಬರು. ಕನ್ನಡ ಚಿತ್ರರಂಗವಲ್ಲದೆ, ತೆಲುಗು, ತಮಿಳು, ಹಿಂದಿ ಚಿತ್ರರಂಗದಲ್ಲಿಯೂ ಬಹಳಷ್ಟು ಚಿತ್ರಗಳಲ್ಲಿ ಅಭಿನಯಿಸಿ, ಖ್ಯಾತಿಯನ್ನು ಪಡೆದಿದ್ದಾರೆ.

ಪರಿವಿಡಿ

[ಬದಲಾಯಿಸಿ] ಜೀವನ

ಡಿಸೆಂಬರ್ ೧೨,೧೯೪೯ರಲ್ಲಿ ಬೆಂಗಳೂರಿನಲ್ಲಿ ಮರಾಠಿ ಸಂಸ್ಕಾರದ ಮನೆಯಲ್ಲಿ ಒಂದು ಗಂಡು ಮಗು ಜನಿಸಿತು. ಆ ಮಗುವಿಗೆ ಶಿವಾಜಿ ರಾವ್ ಎಂದು ಹೆಸರಿಡಲಾಯಿತು. ಮಗು ಐದನೆಯ ವಯಸ್ಸಿನಲ್ಲೇ ತಾಯಿಯ ಪ್ರೀತಿಯಿಂದ ವಂಚಿತವಾಯಿತು. ಪ್ರಾಥಮಿಕ ಶಿಕ್ಷಣವನ್ನು ಆಚಾರ್ಯ ಪಾಠಶಾಲೆಯಲ್ಲೂ, ಮುಂದೆ ರಾಮಕೃಷ್ಣ ವಿದ್ಯಾಶಾಲೆಯಲ್ಲೂ ಓದಿ ಹುಡುಗ ಒಂದಷ್ಟು ಕೂಲಿ ಕೆಲಸ ಮಾಡಿ ಬದುಕನ್ನು ಬಂದಷ್ಟೇ ಭಾಗ್ಯ ಎಂದುಕೊಂಡು ನಡೆಸತೊಡಗಿದ.೧೯೬೮ ರಿಂದ ೧೯೭೩ ರ ಅವಧಿಯಲ್ಲಿ ಚೆನ್ನೈ ಮತ್ತು ಬೆಂಗಳೂರಿನಲ್ಲಿ ಎಲ್ಲೋ ಒಂದು ಕಡೆ ನೆಲೆ ಸಿಗಲಿ ಎಂದು ಅತ್ತಿಂದಿತ್ತ ಅಲೆದಾಡುತ್ತಲೇ ಕಾಲ ತಳ್ಳಿದ ಹುಡುಗ. ಕೊನೆಗೆ ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ಒಂದು ನೆಲೆ ಸಿಕ್ಕಿತು ಅಂದುಕೊಂಡರು. ಸಿನಿಮಾ ಹುಚ್ಚು. ಈತನ ವರಸೆಗಳನ್ನು ನೋಡಿದ ರಾಜ್ ಬಹದ್ದೂರ್ ಎಂಬ ಗೆಳೆಯ ನೀನು ಮದ್ರಾಸು ಫಿಲಂ ಇನ್ಸ್ಟಿಟ್ಯೂಟಿನಲ್ಲಿ ತರಬೇತಿ ಪಡಿ ಎಂದು ಹುರುದುಂಬಿಸಿ ಆತನಿಗೆ ಎರಡು ವರ್ಷ ಬೆಂಗಾವಲಾಗಿ ನಿಂತರು."ನಮನ".

ರಜನೀಕಾಂತ್ ತಮ್ಮ ಶಾಲಾಶಿಕ್ಷಣವನ್ನು ನಡೆಸಿದ್ದು ಬೆಂಗಳೂರಿನಲ್ಲಿ. ಇವರ ಮೂಲ ಹೆಸರು ಶಿವಾಜಿ ರಾವ್ ಗಾಯಕ್‍ವಾಡ್. ಕನ್ನಡದ ಕೆಲವು ಚಿತ್ರಗಳಲ್ಲಿ ನಾಯಕರಾಗಿ ಅಭಿನಯಿಸಿದ್ದರೂ, ರಜನಿಕಾಂತ್ ಪ್ರಸಿದ್ಧಿ ಪಡೆದಿದ್ದು ತಮಿಳು ಚಿತ್ರರಂಗದಲ್ಲಿ. ಚಿತ್ರರಂಗ ಪ್ರವೇಶಿಸುವ ಮೊದಲು ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದರು. ಚಿತ್ರರಂಗಕ್ಕೆ ಸೇರಿದ ನಂತರ ಶಿವಾಜಿ ರಾವ್ ಗಾಯಕ್‍ವಾಡ್ ಅವರು ರಜನೀಕಾಂತ್ ಆದರು.

[ಬದಲಾಯಿಸಿ] ರಜನಿಕಾಂತ್ ಅಭಿನಯದ ಕನ್ನಡ ಚಿತ್ರಗಳು

೧. ಕಥಾಸಂಗಮ
೨. ಬಾಳು ಜೇನು
೩. ಒಂದು ಪ್ರೇಮದ ಕಥೆ
೪. ಸಹೋದರರ ಸವಾಲ್
೫. ಕುಂಕುಮ ರಕ್ಷೆ
೬. ಗಲಾಟೆ ಸಂಸಾರ
೭. ಕಿಲಾಡಿ ಕಿಟ್ಟು
೮. ಮಾತು ತಪ್ಪದ ಮಗ
೯. ಸವಾಲಿಗೆ ಸವಾಲ್
೧೦. ತಪ್ಪಿದ ತಾಳ (ಇದರಲ್ಲಿ ಕಮಲಹಾಸನ್ ಕೂಡ ನಟಿಸಿರುವುದು ವಿಶೇಷ, ಕೆ.ಬಾಲಚಂದರ್ ನಿರ್ದೇಶನ)
೧೧. ಪ್ರಿಯ
೧೨. ಘರ್ಜನೆ

[ಬದಲಾಯಿಸಿ] ರಜನೀಕಾಂತ್ ಅಭಿನಯದ ಪ್ರಮುಖ ತಮಿಳು ಚಿತ್ರಗಳು

ಅಣ್ಣಾಮಲೈ

[ಬದಲಾಯಿಸಿ] ರಜನೀಕಾಂತ್ ಅಭಿನಯದ ಪ್ರಮುಖ ಹಿಂದಿ ಚಿತ್ರಗಳು


ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು