ಅಸಾರಾಮ್ ತ್ಯಾಗಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Major Asharam Tyagi, MVC
ಜನನ(೧೯೩೯-೦೧-೦೨)೨ ಜನವರಿ ೧೯೩೯
ಫತೇಪುರ್, ಮುರಾದ್ನಗರ, ಘಜಿಯಾಬಾದ್, ಉತ್ತರ ಪ್ರದೇಶ, ಭಾರತ
ಮರಣ25 September 1965(1965-09-25) (aged 26)
ಡೋಗ್ರೈ, ಭಾರತ-ಪಾಕಿಸ್ತಾನ ಗಡಿ
ಶಾಖೆ೩ ಜಾಟ್, ಭಾರತೀಯ ಸೇನೆ
ಸೇವಾವಧಿ೧೯೩೯–೧೯೬೫
ಭಾಗವಹಿಸಿದ ಯುದ್ಧ(ಗಳು)೧೯೬೫ ರ ಭಾರತ-ಪಾಕಿಸ್ತಾನ ಯುದ್ಧ
ಪ್ರಶಸ್ತಿ(ಗಳು)ಮಹಾ ವೀರ ಚಕ್ರ (ಮರಣೋತ್ತರ)

ಮೇಜರ್ ಅಸಾರಾಮ್ ತ್ಯಾಗಿ ಅವರು ೧೯೬೫ ರ ಭಾರತ-ಪಾಕಿಸ್ತಾನ ಯುದ್ಧವಾದ ಡೋಗ್ರೈ ಕದನದ ನಾಯಕರಾಗಿದ್ದರು.[೧][೨][೩][೪]

೧೯೬೫ ಸೆಪ್ಟೆಂಬರ್ ೨೧ ರ ರಾತ್ರಿ, ಮೇಜರ್ ಆಸಾರಾಮ್ ತ್ಯಾಗಿ ಅವರು ಭಾರತೀಯ ಸೇನೆಯ ೩ನೇ ಜಾಟ್ ಬೆಟಾಲಿಯನ್ನಿನ ಪ್ರಮುಖ ತುಕಡಿಯನ್ನು ಮುನ್ನಡೆಸಿ ಪಾಕಿಸ್ತಾನದ ಡೋಗ್ರೈ ಗ್ರಾಮದಲ್ಲಿ, ಪಾಕಿಸ್ತಾನದ ಸ್ಥಾನವನ್ನು ವಶಪಡಿಸಿಕೊಂಡರು. ಮೇಜರ್ ತ್ಯಾಗಿ ಅವರು ದಾಳಿ ಮಾಡುವಾಗ, ಅವರ ಬಲ ಭುಜಕ್ಕೆ ಎರಡು ಗುಂಡುಗಳು ತಗುಲಿದ್ದವು. ತಮ್ಮ ಗಾಯದ ಹೊರತಾಗಿಯೂ, ಅವರು ಟ್ಯಾಂಕುಗಳ ವಿರುದ್ಧ ನೆಡೆದು, ಗ್ರೆನೇಡ್‌ಗಳಿಂದ ಆ ಬದಿಯ ಸಿಬ್ಬಂದಿಯನ್ನು ಕೊಂದರು ಮತ್ತು ಎರಡು ಟ್ಯಾಂಕುಗಳನ್ನು ವಶಪಡಿಸಿಕೊಂಡರು. ಈ ಪ್ರಕ್ರಿಯೆಯಲ್ಲಿ ಅವರಿಗೆ ಮತ್ತೆ ಮೂರು ಗುಂಡುಗಳು ತಗುಲಿದ್ದವು. ಅದರೂ ಸಹ ಪ್ರಜ್ಞೆ ತಪ್ಪುವವರೆಗೂ ಅವರು ತಮ್ಮ ಪ್ರಯತ್ನವನ್ನು ಮುಂದುವೆರೆಸಿದ್ದರು.

ನಂತರ ಅವರನ್ನು ಮಿಲಿಟರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ನಿಧನರಾದರು. ಅವರು ಶೌರ್ಯವು ಇತರ ಸೈನಿಕರಿಗೆ ಸ್ಪೂರ್ಥಿಯಾಯಿತು.[೫]

ಸ್ಮರಣಾರ್ಥ ಗೀತೆಗಳು[ಬದಲಾಯಿಸಿ]

ಡೋಗ್ರೈ ಕದನದ ನೆನಪಿಗಾಗಿ ಅನೇಕ ಹಾಡುಗಳು ಹರಿಯಾಣದಲ್ಲಿ ಜನಪ್ರಿಯವಾಗಿವೆ. ಅವುಗಳಲ್ಲಿ ಒಂದು ಈ ಪದಗಳಲ್ಲಿ ಯುದ್ಧವನ್ನು ವಿವರಿಸುತ್ತದೆ:

ಕಹೇ ಸುನೇ ಕೀ ಬಾತ್ ನಾ ಬೋಲು ಆಂಕೋಂ ದೇಕೀ ಭಾಯ್
ತೀನ್ ಜಾಟ್ ಕೀ ಕಥಾ ಸುನಾವೋ ಸುನ್ ಲೇ ಮೇರೇ ಭಾಯ್
ಪಾಂಚ್ ಸಿತಂಬರ್ ರಾತ್ ಘನೇರಿ ಹಮ್ಲಾ ಜತೋನ್ ನೇ ಮಾರಿ
ದುಶ್ಮನ್ ಮೇ ಮಚ್ ಗಯೀ ಖಲ್‌ಬಲೀ ಕಾನ್ಪ್ ಉಥೀ ಡೋಗ್ರೈ[೬]

ಮಿಲಿಟರಿ ಮಾನ್ಯತೆ[ಬದಲಾಯಿಸಿ]

ರಾಷ್ಟ್ರಕ್ಕಾಗಿ ಅಸಾಧಾರಣ ಶೌರ್ಯವನ್ನು ಪ್ರದರ್ಶಿಸಿದ್ದಕ್ಕಾಗಿ ಮೇಜರ್ ಅಸಾರಾಮ್ ತ್ಯಾಗಿ ಅವರಿಗೆ ಮರಣೋತ್ತರವಾಗಿ ಮಹಾವೀರ ಚಕ್ರವನ್ನು ನೀಡಿ ಗೌರವಿಸಲಾಯಿತು.[೭]

ಉಲ್ಲೇಖಗಳು[ಬದಲಾಯಿಸಿ]

  1. "1965: 'जिंदा या मुर्दा डोगरई में मिलना है' BBC Hindi". 20 September 2015.
  2. "जयंती पर मेजर आशाराम त्यागी को किया याद Dainik Jagran".
  3. "शहीद मेजर आशाराम त्यागी का 72 वीं जयंती मनाई Nawbharat Times".
  4. "1965: 'जिंदा या मुर्दा डोगरई में मिलना है'". BBC Hindi. 20 September 2015. Retrieved 13 October 2022.
  5. Sharma, Gautam (1990). Valour and Sacrifice: Famous Regiments of the Indian Army by Gautam Sharma. ISBN 9788170231400.
  6. "1965:'जिंदा या मुर्दा डोगरई में मिलना है'-BBC Hindi". 20 September 2015.
  7. "Indian Army, AWARDEES OF MAHA VIR CHAKRA".