ವಿಷಯಕ್ಕೆ ಹೋಗು

ಅಮರಾವತಿ (ಆಂಧ್ರ ಪ್ರದೇಶ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈ ಲೇಖನವು ಐತಿಹಾಸಿಕ ಪಟ್ಟಣದ್ದಾಗಿದೆ. ಇದೇ ಹೆಸರಿನ ಬೇರೆ ಲೇಖನಗಳಿಗಾಗಿ ಅಮರಾವತಿ (ದ್ವಂದ್ವ ನಿವಾರಣೆ) ನೋಡಿ.
Amaravati
అమరావతి
ಅಮರಾವತಿ
ಧರಣಿಕೋಟ, ಧನ್ಯಕಟಕ, ಆಂಧ್ರನಗರಿ
ಐತಿಹಾಸಿಕ ಪಟ್ಟಣ
ಅಮರಾವತಿಯ ಮಹಾ ಸ್ತೂಪ
ಅಮರಾವತಿಯ ಮಹಾ ಸ್ತೂಪ
ದೇಶ ಭಾರತ
ರಾಜ್ಯಆಂಧ್ರಪ್ರದೇಶ
ಜಿಲ್ಲೆಗುಂಟೂರು
Elevation
೮ m (೨೬ ft)
Population
 (೨೦೦೯)
 • Total೫೪೯೩೭೦
ಭಾಷೆಗಳು
 • ಅಧಿಕೃತತೆಲುಗು
Time zoneUTC+5:30 (IST)
Telephone code೨೫೪
Vehicle registrationAP 7

ಅಮರಾವತಿ' (ಆಂಧ್ರ ಪ್ರದೇಶ) ಇದು ಆಂಧ್ರ ಪ್ರದೇಶ ರಾಜ್ಯದಲ್ಲಿರುವ ಒಂದು ಐತಿಹಾಸಿಕ ಪಟ್ಟಣ. ಇದು ಕೃಷ್ಣಾನದಿಯ ದಡದಲ್ಲಿ,ಗುಂಟೂರು ಜಿಲ್ಲೆಯಲ್ಲಿದೆ. ಈ ಪಟ್ಟಣದ ಉತ್ತರದಲ್ಲಿರುವ ಧರಣಿಕೋಟ ಎಂಬ ಸ್ಥಳವು ಆಂಧ್ರದಲ್ಲಿ ಬೌದ್ಧರ ರಾಜಧಾನಿಯಾಗಿತ್ತು. ಇಲ್ಲಿ ಮೌರ್ಯರ ಕಾಲಕ್ಕಿಂತಲೂ ಹಿಂದಿನ ಸ್ತೂಪವು ದೊರೆತಿದೆ. ಇಲ್ಲಿರುವ ಅಮೃತೇಶ್ವರ ಗುಡಿಯು ಬಹು ಪ್ರಸಿದ್ಧವಾಗಿದೆ. ಈ ಪಟ್ಟಣವು ಶಾತವಾಹನರ ರಾಜಧಾನಿಯೂ ಆಗಿತ್ತು.

ಆಂಧ್ರಪ್ರದೇಶದ ಪವಿತ್ರ ಸ್ಮಾರಕಗಳ ನಕ್ಷೆ

ಇತಿಹಾಸ

[ಬದಲಾಯಿಸಿ]

ಈ ಸ್ಥಳವು ಸ್ಕಂದ ಪುರಾಣದಲ್ಲಿಯೂ ಉಲ್ಲೇಖವನ್ನು ಹೊಂದಿದೆ. ಬೌದ್ಧರ ವಜ್ರಾಯನ ಶಾಖೆಯ ಪ್ರಕಾರ ಗೌತಮ ಬುದ್ಧ ಇಲ್ಲಿ ಅಂದರೆ ಧರಣಿಕೋಟದಲ್ಲಿ ಉಪದೇಶವನ್ನು ನೀಡಿದ. ಇದರ ಅನ್ವಯ ಇಲ್ಲಿನ ಇತಿಹಾಸವು ಕ್ರಿಸ್ತಪೂರ್ವ ೫೦೦ ರಿಂದಲೇ ಪ್ರಾರಂಭವಾಗುತ್ತದೆ. ಲಿಖಿತ ಉಲ್ಲೇಖಗಳ ಪ್ರಕಾರ ಈ ಪ್ರದೇಶವು ಶಾತವಾಹನರಿಂದ ಆಳಲ್ಪಟ್ಟಿತ್ತು. ಮುಂದೆ ಪಲ್ಲವರು, ಪೂರ್ವ ಚಾಲುಕ್ಯರು, ತೆಲುಗು ಚೋಳರು ಈ ಪ್ರದೇಶದ ಆಧಿಪತ್ಯ ಹೊಂದಿದ್ದರು. ಸುಮಾರು ೧೧ ನೆಯ ಶತಮಾನದಲ್ಲಿ ಈ ಪ್ರದೇಶವು ಕಾಕತೀಯರಿಂದ ಆಳಲ್ಪಟ್ಟು ಮುಂದೆ ವಿಶಾಲ ಆಂಧ್ರದಲ್ಲಿ ವಿಲೀನವಾಯಿತು.

ಕ್ರಿಸ್ತಪೂರ್ವ ೫೦೦ ನೆಯ ಸುಮಾರು ಇಲ್ಲಿ ಬೌದ್ಧಧರ್ಮವು ಪ್ರವರ್ಧಮಾನವಾಗಿತ್ತು. ಇಲ್ಲಿ ದೊರೆತ, ಅಶೋಕ ನಿರ್ಮಿಸಿದ ಸುಂದರ ಸ್ತೂಪವು ಇದಕ್ಕೆ ಸಾಕ್ಷಿಯಾಗಿದೆ. ಇದರ ಫಲಕಗಳಲ್ಲಿ ಗೌತಮಬುದ್ಧನ ಕತೆಯನ್ನು ಕೆತ್ತಲಾಗಿದೆ. ಕ್ರಿಸ್ತಪೂರ್ವ ೨ ನೆಯ ಶತಮಾನದಿಂದ ಕ್ರಿಸ್ತಶಕ ೨ ನೆಯ ಶತಮಾನದವರೆಗೆ ಶಾತವಾಹನರು ಈ ಧರಣಿಕೋಟವನ್ನು ರಾಜಧಾನಿಯನ್ನಾಗಿಸಿಕೊಂಡರು. ಅನಂತರ ಬೌದ್ಧಧರ್ಮವು ಕ್ಷೀಣಗೊಂಡು ಹಿಂದೂಧರ್ಮವು ಪ್ರಬಲವಾದನಂತರ ಈ ಸ್ಥಳವು ಅವಗಣನೆಗೆ ತುತ್ತಾಯಿತು. ಈ ಸ್ಥಳಗಳಲ್ಲಿ ದೊರೆತ ಹಲವಾರು ಚಿತ್ರಿಕೆಗಳು, ವಸ್ತುಗಳು ಚೆನ್ನೈ ಮತ್ತು ಲಂಡನ್ ವಸ್ತುಸಂಗ್ರಹಾಲಯಗಳಲ್ಲಿ ರಕ್ಷಿಸಲ್ಪಟ್ಟಿವೆ.

ಛಾಯಾಂಕಣ

[ಬದಲಾಯಿಸಿ]