ಹೊಲಸು ಮಾತು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೊಲಸು ಮಾತು ಎಂದರೆ ಸಾಮಾಜಿಕವಾಗಿ ಮನನೋಯಿಸುವ ಮಾತು/ನುಡಿ.[೧] ಇದನ್ನು ಕೊಳಕು ಮಾತು, ಬೈಗುಳದ ಮಾತು, ಕೆಟ್ಟ ಮಾತು, ಒರಟು ಮಾತು, ಅಸಂಸ್ಕೃತ ಭಾಷೆ, ಅಶ್ಲೀಲ ಭಾಷೆ, ಅಪಶಬ್ದ, ಅಥವಾ ಪಾಷಂಡ ಮಾತು ಎಂದೂ ಕರೆಯಬಹುದು.

ಹೊಲಸು ಮಾತು ಎಂದರೆ ಸಾಮಾನ್ಯವಾಗಿ ಸಂಸ್ಕೃತಿಯ ಕೆಲವು ಭಾಗಗಳಿಂದ ಬಹಳ ಒರಟು, ಅವಿನೀತ ಅಥವಾ ಮನನೋಯಿಸುವಂಥದ್ದು ಎಂದು ಪರಿಗಣಿತವಾದ ಮಾತು/ನುಡಿ. ಇದು ಒಬ್ಬರ ಅಥವಾ ಒಂದರ ಕೀಳುಗಳೆಯುವಿಕೆಯನ್ನು ತೋರಿಸಬಹುದು, ಅಥವಾ ಯಾವುದರ ಬಗ್ಗೆಯಾದರೂ ಪ್ರಬಲ ಅನಿಸಿಕೆಯ ಅಭಿವ್ಯಕ್ತಿ ಎಂದು ಪರಿಗಣಿತವಾಗಬಹುದು.

ಹೊಲಸು ಮಾತು ವ್ಯಾಪಕ ಆದರೆ ಪ್ರಾಯಶಃ ಅಷ್ಟಾಗಿ ಗಮನಾರ್ಹವಲ್ಲದ ಕೋಪ ನಿರ್ವಹಣಾ ತಂತ್ರವಾಗಿದೆ; "ಸಾಮಾನ್ಯವಾಗಿ ಹೆಂಗಸಿರಿಗಿಂತ ಗಂಡಸರು ಹೆಚ್ಚಾಗಿ ಹೊಲಸುಮಾತನ್ನು ಬಳಸುತ್ತಾರೆ, ಆದರೆ ಸೋದರಿ ಸಂಘದಲ್ಲಿರುವ ಮಹಿಳೆಯರು ಹೊಲಸುಮಾತನ್ನು ಬಳಸುತ್ತಾರೆ, ಮತ್ತು ವಿಶ್ವವಿದ್ಯಾಲಯದ ಮುಖ್ಯಾಧಿಕಾರಿ ಅಧ್ಯಕ್ಷರು ಗ್ರಂಥಪಾಲರು ಅಥವಾ ವಿಶ್ವವಿದ್ಯಾಲಯದ ಹಗಲು ಆರೈಕೆ ಕೇಂದ್ರಗಳ ಸಿಬ್ಬಂದಿ ಸದಸ್ಯರಿಗಿಂತ ಹೆಚ್ಚು ಹೊಲಸುಮಾತುಗಳನ್ನು ಬಳಸುತ್ತಾರೆ" ಎಂದು ಆಂಶಿ ಗಮನಿಸುತ್ತಾರೆ.[೨]

ಉಲ್ಲೇಖಗಳು[ಬದಲಾಯಿಸಿ]

  1. "Definition of Profanity", Merriam-Webster Online Dictionary, retrieved on 2014-08-31.
  2. Angier, Natalie (2005-09-25), "Cursing is a normal function of human language, experts say", New York Times, retrieved 2012-11-19