ಹೆದ್ದಾರಿ
ಹೆದ್ದಾರಿ ಪದವು ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಮುಖ್ಯ ರಸ್ತೆಯನ್ನು ಸೂಚಿಸುತ್ತದೆ.
ಉತ್ತರ ಅಮೇರಿಕಾ ಮತ್ತು ಆಸ್ಟ್ರೇಲಿಯಾದಲ್ಲಿ, ನಿಯಂತ್ರಿತ ಪ್ರವೇಶದ ಹೆದ್ದಾರಿಗಳು ಅಥವಾ ಪ್ರಮುಖ ರಸ್ತೆಗಳು ಹಲವುವೇಳೆ ರಾಜ್ಯ ಹೆದ್ದಾರಿಗಳಾಗಿರುತ್ತವೆ. ಅಮೇರಿಕಾ ಮತ್ತು ಒಂಟಾರಿಯೊದಲ್ಲಿ ಇತರ ರಸ್ತೆಗಳನ್ನು "ಕೌಂಟಿ ಹೆದ್ದಾರಿಗಳು" ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಈ ವರ್ಗೀಕರಣಗಳು ರಸ್ತೆಯನ್ನು ನಿರ್ವಹಿಸುವ ಸರ್ಕಾರದ (ರಾಜ್ಯ, ಪ್ರಾಂತೀಯ, ಕೌಂಟಿ) ಸ್ತರವನ್ನು ಸೂಚಿಸುತ್ತವೆ.
ಅವಲೋಕನ
[ಬದಲಾಯಿಸಿ]ಪ್ರಮುಖ ಹೆದ್ದಾರಿಗಳನ್ನು ಸಾಮಾನ್ಯವಾಗಿ ಸರ್ಕಾರಗಳು ಅಭಿವೃದ್ಧಿಪಡಿಸಿ ನಿರ್ವಹಿಸುತ್ತವೆ ಮತ್ತು ಹಲವುವೇಳೆ ಅವುಗಳನ್ನು ಹೆಸರಿಸಿ ಅವುಗಳಿಗೆ ಸಂಖ್ಯೆಯನ್ನು ನೀಡುತ್ತವೆ. ೧೪,೫೦೦ ಕಿ.ಮಿ. ಗಿಂತ ಹೆಚ್ಚು ಉದ್ದದ ಆಸ್ಟ್ರೇಲಿಯಾದ ಹೈವೇ ೧ ವಿಶ್ವದಲ್ಲಿನ ಅತ್ಯಂತ ಉದ್ದದ ರಾಷ್ಟ್ರೀಯ ಹೆದ್ದಾರಿಯಾಗಿದೆ ಮತ್ತು ಖಂಡದ ಸುತ್ತ ಬಹುತೇಕ ಸಂಪೂರ್ಣ ದಾರಿಯನ್ನು ಕ್ರಮಿಸುತ್ತದೆ. ಚೀನಾ ವಿಶ್ವದ ಅತ್ಯಂತ ದೊಡ್ಡ ಹೆದ್ದಾರಿಗಳ ಜಾಲವನ್ನು ಹೊಂದಿದೆ. ಅಮೇರಿಕ ಸಂಯುಕ್ತ ಸಂಸ್ಥಾನ ಎರಡನೇ ಸ್ಥಾನದಲ್ಲಿದೆ. ಪ್ಯಾನ್-ಅಮೇರಿಕನ್ ಹೆದ್ದಾರಿ ಅಥವಾ ಐರೋಪ್ಯ ಮಾರ್ಗಗಳಂತಹ ಕೆಲವು ಹೆದ್ದಾರಿಗಳು ಬಹುದೇಶಗಳನ್ನು ವ್ಯಾಪಿಸುತ್ತವೆ. ಮಿಷಿಗನ್ ಸರೋವರವನ್ನು ದಾಟುವ ಯು.ಎಸ್. ರೂಟ್ ೧೦ ನಂತಹ ಕೆಲವು ಪ್ರಮುಖ ಹೆದ್ದಾರಿ ಮಾರ್ಗಗಳು ಫ಼ೆರಿ ಸೇವೆಗಳನ್ನು ಒಳಗೊಳ್ಳುತ್ತವೆ.