ಹಬೀಬ್ ತನ್ವೀರ್
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
'ಹಬೀಬ್ ತನ್ವೀರ್'
(ಸೆಪ್ಟೆಂಬರ್, ೧, ೧೯೨೩-ಜೂನ್, ೮, ೨೦೦೯)
ಹಬೀಬ್, ಜಾನಪದ ಮತ್ತು ಕಾವ್ಯವನ್ನು ವಿಷಿಷ್ಠವಾಗಿ ಬಳಸಿಕೊಳ್ಳುವ ಮೂಲಕ ಭಾರತೀಯ ರಂಗಭೂಮಿಗೆ ಹೊಸ ಆಯಾಮವನ್ನು ನೀಡಿ ಪ್ರೇಕ್ಷಕರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತಾರೆ.
ಜನನ
[ಬದಲಾಯಿಸಿ]೧೯೨೩ ರ ಸೆಪ್ಟೆಂಬರ್, ೧ ರಂದು, ರಾಯಿಪುರದಲ್ಲಿ ಜನಿಸಿದರು. ಎಳೆವಯಸ್ಸಿನಲ್ಲೇ ಕವಿತೆಬರೆಯುವ ಕಲೆ ಅವರಿಗೆ ಮೈಗೂಡಿಬಂದಿತ್ತು. 'ತನ್ವೀರ್' ಎಂಬ ಅಡ್ಡಹೆಸರಿನಿಂದ ಪದ್ಯಗಳನ್ನು ಬರೆದು ಅದೇಹೆಸರಿನಿಂದ ಪ್ರಸಿದ್ಧರಾದರು. ೧೯೪೪ ರಲ್ಲಿ ನಾಗಪುರದ, ' ಮೋರಿಸ್ ಕಾಲೇಜ್ 'ನಿಂದ ಬಿ. ಎ ಪರೀಕ್ಷೆಮುಗಿಸಿದ ಅವರು, ಮುಂದೆ ತಮ್ಮ ಎಂ. ಎ. ಪರೀಕ್ಷೆಯನ್ನು 'ಅಲಿಗಢ್ ಮುಸ್ಲಿಮ್ ಯೂನಿವರ್ಸಿಟಿ,' ಯಲ್ಲಿ ಮುಗಿಸಿ, 'ಮುಂಬಯಿ ನಗರದ ಆಕಾಶವಾಣಿ,' ಯಲ್ಲಿ ನಿರ್ಮಾಪಕರಾಗಿ ಉದ್ಯೋಗಕ್ಕೆ ಸೇರಿದರು. ಮುಂಬಯಿನಲ್ಲಿದ್ದಾಗ ಕೆಲವು ಹಿಂದಿ ಚಲನ-ಚಿತ್ರಗಳಲ್ಲಿ ನಟಿಸಿ, ಕೆಲವು ಚಿತ್ರಗಳಿಗೆ ಗೀತೆಗಳನ್ನೂ ಬರೆದಿದ್ದರು. 'ರಿಚರ್ಡ್ ಅಟೆನ್ಬರೋ,' ನಿರ್ಮಿಸಿದ ಗಾಂಧಿ, ಸುಚಿತ್ರ ಮುಂತಾದ ಒಟ್ಟು ೯ ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಗತಿಗಾರ ಬರಹಗಾರರ ((PWA)) ಸಂಘಕ್ಕೆ ಸೇರಿದ್ದ ಅವರು, ನಂತರ ((IPTA)) 'ಇಂಡಿಯನ್ ಪೀಪಲ್ಸ್ ಥಿಯೇಟರ್,' ನ ಭಾಗವಾದರು.ಬ್ರಿಟಿಷರ ಆಡಳಿತವನ್ನು ವಿರೋಧಿಸಿದ್ದಾಕ್ಕಾಗಿ, ಹೆಚ್ಚಿನ ಇಪ್ತಾ ಸದಸ್ತ್ಯರುಗಳನ್ನು ಜೈಲಿಗೆ ಹಾಕಿದಾಗ, ಅದರ ಸಂಘಟಕರಾಗಿ, ಅವರು ಕಾರ್ಯ ನಿರ್ವಹಿಸಿದ್ದರು. ಸುಪ್ರಸಿದ್ಧ ನಾಟಕಕಾರರೆಂದು ಹೆಸರುಮಾಡಿದ್ದ ತನ್ವೀರ್ ರಿಗೆ, ೧೯೬೮ ರಲ್ಲಿ ಸಂಗೀತನಾಟಕ ಅಕ್ಯಾಡಮಿ ಪ್ರಶಸ್ತಿ, ದೊರೆಯಿತು. ತನ್ವೀರ್ ರು, ನಿರ್ದೇಶಕಿ, ' ಮೋನಿಕಾ ಮಿಶ್ರ ' ರನ್ನು ಮದುವೆಯಾದರು.
ಪ್ರಶಸ್ತಿಗಳು
[ಬದಲಾಯಿಸಿ]- ೧೯೮೩ ರಲ್ಲಿ 'ಪದ್ಮಶ್ರೀ ' ಪ್ರಶಸ್ತಿ,
- ೧೯೯೬ ರಲ್ಲಿ 'ಸಂಗೀತನಾಟಕ ಅಕ್ಯಾಡಮಿಯ ಫೆಲೋಶಿಪ್,'
- ೨೦೦೨ ರಲ್ಲಿ 'ಪದ್ಮಭೂಷಣ '
೧೯೭೨-೧೯೭೮ ರ ವರೆಗೆ ಅವರು ರಾಜ್ಯಸಭೆಯ ನಾಮಕರಣ ಸದಸ್ಯರಾಗಿದ್ದರು. ೧೯೭೫ ರಲ್ಲಿ ಅವರು ಬರೆದ 'ಚರಣ್ ದಾಸ್ ಚೋರ್' ನಾಟಕಕಕ್ಕೆ,೧೯೮೨ ರಲ್ಲಿ ಎಡಿನ್ ಬರ್ಗ್ ಅಂತಾರಾಷ್ಟ್ರೀಯ ನಾಟಕೋತ್ಸವದಲ್ಲಿ, ಪ್ರಥಮ ಬಹುಮಾನ ಬಂದಿತ್ತು. ೧೯೫೯ ರಲ್ಲಿ ಭೂಪಾಲ್ ನಲ್ಲಿ " ನಯಾ ಥಿಯೇಟರ್ " ಸ್ಥಾಪಿಸಿದ್ದರು. ೨೦೦೯ ರಲ್ಲಿ ಅದು ,'ಸುವರ್ಣಮಹೋತ್ಸ ' ವನ್ನು ಆಚರಿಸುತ್ತಿದೆ.
ಹಬೀಬ್ ತನ್ವೀರ್ ನೀಡಿದ ನಾಟಕಗಳು
[ಬದಲಾಯಿಸಿ]- ಆಗ್ರ ಬಜಾರ್
- ಚರಣದಾಸ್ ಚೋರ್
- ಮಿಟ್ಟೀಕ ಘಡಿ
- ಛತ್ತೀಸ್ ಘಡ 'ಗಾಂವ್ ಕಾ ನಾಮ್ ' ಸಸುರಾಲ್,
ಮುಂತಾದ ಹಲವು ಉತ್ಕೃಷ್ಟ ನಾಟಕಗಳು.
ಮರಣ
[ಬದಲಾಯಿಸಿ]ಭಾರತ ನಾಟಕರಂಗದ ೮೬ ರ ಹರೆಯದ ಸುಪ್ರಸಿದ್ಧ ನಾಟಕಕಾರ, ನಿರ್ದೆಶಕ, " ಹಬೀಬ್ ತನ್ವೀರ್ " (ಹಬೀಬ್ ಅಹ್ಮದ್ ಖಾನ್) ೨೦೦೯ ರ, ಜೂನ್ ೮ ರಂದು ಮುಂಬಯಿನಲ್ಲಿ ವಿಧಿವಶರಾದರು.