ಸೀಮೆಬದನೆ
ಪೋಷಕಾಂಶಗಳು
[ಬದಲಾಯಿಸಿ]೧೦೦ ಗ್ರಾಂ ಸೀಮೆಬದನೆಯಲ್ಲಿ ದೊರೆಯುವ ಪೋಷಕಾಂಶಗಳು
ತೇವಾಂಶ | ೯೨.೫ | ಗ್ರಾಂ |
ಸಸಾರಜನಕ | ೦.೭ | ಗ್ರಾಂ |
ಪಿಷ್ಟ | ೩.೦ | ಗ್ರಾಂ |
ಕೊಬ್ಬು | ೦.೪ | ಗ್ರಾಂ |
ಖನಿಜಾಂಶ | ೦.೪ | ಗ್ರಾಂ |
ನಾರಿನಾಂಶ | ೦.೬ | ಗ್ರಾಂ |
ಕ್ಯಾಲ್ಸಿಯಂ | ೦.೧೪೦ | ಮಿಲಿಗ್ರಾಂ |
ಫಾಸ್ಫರಸ್ | ೦.೭ | ಮಿಲಿಗ್ರಾಂ |
ಕಬ್ಬಿಣ | ೧೪.೦ | ಮಿಲಿಗ್ರಾಂ |
ರೈಬೋಫ್ಲೆವಿನ್ | ೦.೦೪ | ಮಿಲಿಗ್ರಾಂ |
ನಿಯಾಸಿನ್ | ೦.೪ | ಮಿಲಿಗ್ರಾಂ |
ಪೊಟ್ಯಾಶಿಯಂ | ೨೨೦.೦ | ಮಿಲಿಗ್ರಾಂ |
ಸೋಡಿಯಂ | ೫.೦ | ಮಿಲಿಗ್ರಾಂ |
ಎ-ಜೀವಸತ್ವ | ೫.೦ | ಮಿಲಿಗ್ರಾಂ |
ಸಿ-ಜೀವಸತ್ವ | ೫.೦ | ಮಿಲಿಗ್ರಾಂ |
ಸೀಮೆ ಬದನೆ ಇದು ಅತ್ಯಂತ ಕಡಿಮೆ ಕ್ಯಾಲೋರಿ ಇರುವ ತರಕಾರಿ. ದಕ್ಷಿಣ ಮೆಕ್ಸಿಕೊ ಮೂಲದ ಸೀಮೆಬದನೆ ಕುಕುರ್ಬುಟೇಸಿಯೆ ಕುಟುಂಬದ ಪ್ರದೇಶದಲ್ಲಿ ಬೆಳೆಯುವ ತರಕಾರಿ. ಇದರಿಂದ ಈ ತರಕಾರಿಯ ಪರಿಚಯ ಕರಾವಳಿ ಜನರಿಗೆ ಇಲ್ಲ. ಕರಾವಳಿಯ ಹವಾಮಾನದಲ್ಲಿ ಬೆಳೆಯುವುದು ಕಡಿಮೆ. ಸೀಮೆಬದನೆಯನ್ನು ಕೆಲವೆಡೆ, ಚೌ ಚೌ ಎನ್ನುತ್ತಾರೆ. ಇದು ಬಹಳ ರುಚಿಯಾದ ತರಕಾರಿ. ಹೆಚ್ಚು ಬೇಯಿಸಬೇಕಾಗಿಲ್ಲ. ಇದನ್ನ ಬೆಂಗಳೂರಿನ ಸುತ್ತಮುತ್ತಲು ಬೆಳೆಯುತ್ತಾರೆ. ಹೆಚ್ಚು ಇಳುವರಿಕೊಡುವ ಈ ತರಕಾರಿಯನ್ನು ಬೇರೆ ಬೇರೆ ಊರುಗಳಲ್ಲೂ ಬೆಳೆಸಲು ಪ್ರಯತ್ನಿಸುವುದು ಒಳ್ಳೆಯದು. ಸೀಮೆಬದ್ನೆಕಾಯಿ, ಅಪ್ಪಟ ವಿದೇಶಿ ತರಕಾರಿ ; ಸಿಲೋಂ ನಿಂದ ತಂದು ಬೆಂಗಳೂರಿನಲ್ಲಿ ಬೆಳಸಿ, ಪ್ರಸಿದ್ಧಿಪಡಿಸಿದ್ದು.
ನಾಟಿ ಕ್ರಮ
[ಬದಲಾಯಿಸಿ]ಕಾಯಿಯ ತುದಿದಲ್ಲಿ ಸೀಳು ಬಿಟ್ಟಂತೆ ಇದ್ದು ಅದರಲ್ಲಿ ನಾಲಗೆ ಆಕಾರದ ಬೀಜ ಇರುತ್ತದೆ. ಚೆನ್ನಾಗಿ ಬೆಳೆದ ಕಾಯಿಯನ್ನು ೧೫ ದಿನ ತಂಪಾದ ಜಾಗದಲ್ಲಿಟ್ಟರೆ ಮೊಳಕೆ ಒಡ್ದೆಯುತ್ತದೆ. ಈ ಮೊಳಕೆ ಕಾಯಿಯನ್ನು ೫೦ ಸೆ.ವೀ ಉದ್ದ ಹಾಗೂ ಅಗೆದು ದನದ ಗೊಬ್ಬರ ಹಾಕಿ ಮೊಳಕೆ ಮೇಲೆ ಬರುವಂತೆ ನಾಟಿ ಮಾಡುಬೇಕು. ಗಿಡಗಳು ಚಿಗುರು ಬಳ್ಳಿಯಾಗಿ ಹಬ್ಬುತ್ತದೆ. ಬಳ್ಳಿ ಹಬ್ಬಲು ಬಳ್ಳಿಯಾಗಿ ಹಬ್ಬುತ್ತದೆ. ಬಳ್ಳಿ ಹಬ್ಬಲು ಇದಕ್ಕೆ ಶಾಶ್ವತವಾದ ಚಪ್ಪರ ನಿರ್ಮಿಸಬೇಕು. ಗಿಡವನ್ನು ಮರದ ಬುಡದಲ್ಲಿ ನೆಟ್ಟು ಮರಕ್ಕೆ ಹಬ್ಬಿಸಬೇಕು. ೬ತಿಂಗಳ ನಂತರ ಫಲ ಕೊಡುತ್ತದೆ. ಸೆಪ್ಟೆ೦ಬರ್ ನಿಂದ ಮೇ ತನಕ ತುಂಬಾ ಇಳುವರಿ ಸಿಗುತ್ತದೆ.
ಉಪಯೋಗ
[ಬದಲಾಯಿಸಿ]ಸೀಮೆ ಬದನೆಯ ನಿಪ್ಪೆಯ ಮೇಲೆ ಮುಳ್ಳಿನ ಆಕೃತಿ ರಚನೆ ಇರುತ್ತದೆ. ಈ ಮುಳ್ಳನ್ನು ತೆಗೆದರೆ ಚಟ್ನಿ[೧] ಹಾಗೂ ತಂಬುಳಿಗಳನ್ನು ತಯಾರಿಸಬಹುದು. ಕಾಯಿಯಿಂದ ಗೊಜ್ಜು ತಯಾರಿಸಬಹುದು. ಸೀಮೆ ಬದನೆಯ ಗಿಡದ ಪ್ರತಿಯೊಂದು ಭಾಗದಲ್ಲಿ ಔಷದಿಯ ಗುಣಗಳಿವೆ.
ಔಷಧಿಯ ಗುಣಗಳು
[ಬದಲಾಯಿಸಿ]ಇದರಲ್ಲಿ ಪ್ರಮುಖವಾಗಿ ನೋವು ನಿವಾರಕ ಗುಣಗಳಿವೆ. ಇದರ ಸೇವನೆಯಿಂದ ಮೂತ್ರ ಪಿಂಡದ ಕಲ್ಲು ನಿವಾರಣೆಯಾಗುತ್ತದೆ. ಬದನೆಯಲ್ಲಿ ಕಡಿಮೆ ಕ್ಯಾಲರಿ ಇರುವುದರಿಂದ ತೂಕ ಇಲಿಸುವಲ್ಲಿ ಕ್ಯಾನ್ಸರ್ರನ್ನು ಗುಣಪಡಿಸಬಹುದು ಹಾಗೂ ರಕ್ತದ ಒತ್ತಡವನ್ನು ಕಡಿಮೆ ಮಾಡಬಹುದು. ಬದನೆಯ ಉಪಯೋಗದಿಂದ ಮೆದುಳಿನ ನೆನಪಿನ ಶಕ್ತಿ ಚುರುಕಾಗುತ್ತದೆ.
ಉಲ್ಲೇಖ
[ಬದಲಾಯಿಸಿ]
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |