ಸಾವ್ಲಾರಾಮ್ ಲಕ್ಷ್ಮಣ್ ಹಳ್ದಂಕರ್
ಸಾವ್ಲಾರಾಮ್ ಲಕ್ಷ್ಮಣ್ ಹಳ್ದಂಕರ್ (೧೮೮೨-೧೯೬೮) ಒಬ್ಬ ಭಾರತೀಯ ಚಿತ್ರ ಕಲಾವಿದರು. [೧]ಜಲವರ್ಣ ಹಾಗೂ ತೈಲವರ್ಣದ ಚಿತ್ರರಚನೆಗೆ ಭಾರತವಲ್ಲದೆ ವಿಶ್ವದಲ್ಲಿ ಪ್ರಸಿದ್ದರು.
ಪ್ರಾರಂಭಿಕ ಜೀವನ
[ಬದಲಾಯಿಸಿ]ಹಳ್ದಂಕರ್,ಮಹಾರಾಷ್ಟ್ರದ 'ಸಾವಂತವಾಡಿ' ಗ್ರಾಮದ ಒಂದು ಪರಿವಾರದಲ್ಲಿ ಜನಿಸಿದನು. ಆಗ ಅದು ಸಂಸ್ಥಾನದ ರಾಜನ ಅಧೀನದಲ್ಲಿತ್ತು. ಎಳವೆಯಲ್ಲೇ ಚಿತ್ರಕಲೆಯಲ್ಲಿ ಆಸಕ್ತಿಯಿತ್ತು. ತಮ್ಮ ಶಾಲಾದಿನಗಳಲ್ಲೇ ಅವರ ಕಲಾಕೃತಿಗಳು ಅವರ ಶಾಲೆಯ ಹೆಡ್ ಮಾಸ್ತರನ್ನು ಆಕರ್ಷಿಸಿದವು. ಅವರು ಸಂಸ್ಥಾನದ ರಾಜನಿಗೆ ಶಿಫಾರಿಸ್ ಮಾಡಿದರು. ಸಾವಂತ್ ವಾಡಿ ರಾಜರು ಹಳ್ದಂಕರ್ ರಿಗೆ, ವಿಶೇಷ ಸ್ಕಾಲರ್ ಶಿಪ್ ನೀಡಿ ಹೆಚ್ಚಿನ ವ್ಯಾಸಂಗಕ್ಕಾಗಿ ಮುಂಬಯಿನ ಜೆ.ಜೆ.ಸ್ಕೂಲ್ ಆಫ್ ಆರ್ಟ್ ಗೆ ಕಳಿಸಿದರು.
ರಾಜರ ಪ್ರೋತ್ಸಾಹ
[ಬದಲಾಯಿಸಿ]ಹೀಗೆ ಬೊಂಬಾಯಿ ಮಹಾನಗರಕ್ಕೆ ಹೋದ ಹಳ್ದಂಕರರು, ಜೆ.ಜೆ.ಸ್ಕೂಲ್ ಆಫ್ ಆರ್ಟ್ಸ್ ನಲ್ಲಿ ಆಗಿನ ಕಾಲದ ಶ್ರೇಷ್ಟ ಕಲಾವಿದರಲ್ಲೊಬ್ಬರಾಗಿದ್ದ 'ಮಹದೇವ್ ವಿಶ್ವನಾಥ್ ಧುರಂಧರ್', ಮತ್ತು 'ಸೆಸಿಲ್ ಲಿಯೊನಾರ್ಡ್ ಬರ್ನ್ಸ್' ರವರನ್ನು ಸಂದರ್ಶಿಸಿ, ಅವರ ಬಳಿ ಶಿಷ್ಯತ್ವದಲ್ಲಿ ಅಭ್ಯಾಸಮಾಡಿದರು. ಹಲವಾರು ಬಹುಮಾನಗಳನ್ನು ಗಳಿಸಿದರು. ರಾಷ್ಟ್ರದ ಹಲವಾರು ಕಡೆ ತಮ್ಮಚಿತ್ರಕಲೆಯನ್ನು ಪ್ರದರ್ಶಿಸಿದರು. ವಾಟರ್ ಕಲರ್ ಮತ್ತು ಆಯಿಲ್ ಪೇಂಟಿಂಗ್ ನಲ್ಲಿ ನಿಷ್ಣಾತರಾದರು. 'ಪೋರ್ಟೈರ್ಟ್ ಗಳನ್ನು ರಚಿಸುವುದು ಅವರ ವಿಶಿಶ್ಠತೆಗಳಲ್ಲೊಂದಾಗಿತ್ತು. ಜೆ.ಜೆ.ಕಾಲೇಜನ್ನು ಬಿಟ್ಟು ಅವರು ೧೯೦೮ ರಲ್ಲಿ, ಬೊಂಬಾಯಿನಲ್ಲಿ 'ಹಳ್ದಂಕರ್ ಫೈನ್ ಆರ್ಟ್ಸ್ ಇನ್ಸ್ಟಿ ಟ್ಯೂಟ್' ಸ್ಥಾಪನೆ ಮಾಡಿದರು. ಮುಂದೆ, ಗೆಳೆಯರ ಸಹಾಯದಿಂದ ೧೯೧೮ ರಲ್ಲಿ 'ಆರ್ಟ್ ಸೊಸೈಟಿ ಆಫ್ ಇಂಡಿಯಾ' ಸ್ಥಾಪಿಸಿ ಅದರ ಅಧ್ಯಕ್ಷರಾದರು. ಹಲವಾರು ಶ್ರೇಷ್ಠ ವಿದ್ಯಾರ್ಥಿಗಳು ಅವರ ಶಿಷ್ಯರಾದರು.
ಚಿತ್ರ ಪ್ರದರ್ಶನಗಳು
[ಬದಲಾಯಿಸಿ]ಅವರ ಸ್ವಂತ ಇನ್ಸ್ಟಿಟ್ಯೂಟ್ ನಲ್ಲಿ ಮತ್ತು ಸರ್ ಜೆ.ಜೆ.ಸ್ಕೂಲ್ ಆಫ್ ಆರ್ಟ್ಸ್ ಸಂಸ್ಥೆಗಳಲ್ಲಿ ಅವರ ಕೃತಿಗಳು ಪ್ರದರ್ಶಗೊಂಡಿದ್ದಲ್ಲದೆ, ಮುಂಬಯಿ, ಮದ್ರಾಸ್ ಶಿಮ್ಲಾ, ಲಂಡನ್ ನ ರಾಯಲ್ ಸೊಸೈಟಿ ಆಫ್ ಬ್ರಿಟಿಷ್ ಆರ್ಟ್ಸ್ ಗ್ಯಾಲರಿಗಳಲ್ಲಿ ಪ್ರದರ್ಶನಗೊಂಡವು.
- ಪ್ರಿನ್ಸ್ ಆಫ್ ವೇಲ್ಸ ವಸ್ತುಸಂಗ್ರಹಾಲಯ ಮುಂಬಯಿ,
- ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ಸ್ ನವದೆಹಲಿ,
- ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ಸ್, ಮುಂಬಯಿ,
- ಜಗನ್ಮೋಹನ್ ಪ್ಯಾಲೇಸ್ ಮ್ಯೂಸಿಯಂ ಮೈಸೂರ್,
- ಮಾಸ್ಕೊ ಅಕ್ಯಾಡೆಮಿ ಆಫ್ ಆರ್ಟ್ಸ್ ರಷ್ಯಾ,
- ನಾಗ್ಪುರ್ ಮ್ಯೂಸಿಯಂ ನಾಗ್ಪುರ್,
- ದೆಹಲಿ ಆರ್ಟ್ ಗ್ಯಾಲರಿ,
ಪ್ರಶಸ್ತಿಗಳು
[ಬದಲಾಯಿಸಿ]- ೨ ಪ್ರಶಸ್ತಿಗಳು ಬ್ರಿಟಿಷ್ ಸರ್ಕಾರದ ಬಾಂಬೆ ಪ್ರೆಸಿಡೆನ್ಸಿಯಲ್ಲಿ, ಗವರ್ನರ್ ಪ್ರಶಸ್ತಿಗಳು, ೧೯೧೦, ೧೯೨೭ ಮತ್ತು ೧೯೩೨ ದೊರೆತವು.
- ಭಾರತ ಸ್ವಾತಂತ್ರ್ಯಗಳಿಸಿದ ಬಳಿಕ ಆಗಿನ ಪ್ರಥಮ ರಾಷ್ಟ್ರಪತಿಗಳಾಗಿದ್ದ ಡಾ ರಾಜೇಂದ್ರ ಪ್ರಸಾದ್ ಹಳ್ದಂಕರ್ ರವರನ್ನು ಗೌರವಿಸಿದರು.
- 'ನವದೆಹಲಿಯ ಲಲಿತ ಕಾಲ ಅಕಾಡೆಮಿಯ ಫೆಲೋ' ಆಗಿ ಆರಿಸಲ್ಪಟ್ಟರು.
- ಇಟ್ಯಾಲಿಯನ್ ವಿಶ್ವಕೋಶ ದಾಖಲಿಸಿದಂತೆ,ವಿಶ್ವದ ಹೆಸರಾಂತ ೩ ವಾಟರ್ ಕಲರ್ ಚಿತ್ರಕಾರರಲ್ಲಿ ಇವರೂ ಒಬ್ಬರು (ಸತಾರ ಜಿಲ್ಲೆಯ 'ವಾಯ್' ನಲ್ಲಿ ಲಭ್ಯವಿರುವ ಪುಸ್ತಕಾಲಯದಲ್ಲಿ ಇದರ ದಾಖಲಾತಿ ಕಾಣಬಹುದು)
'ಗ್ಲೋ ಆಫ್ ಲ್ಯಾಂಪ್'
[ಬದಲಾಯಿಸಿ]ಹಳ್ದಂಕರರಿಗೆ [೨]ಹೆಸರುತಂದ ಅತ್ಯಂತ ಹೆಸರುವಾಸಿಯಾದ 'ವುಮನ್ ವಿಥ್ ದ ಲ್ಯಾಂಪ್' ಎಂಬ ಹೆಸರಿನ ಸುಂದರ ಚಿತ್ರಕೃತಿ, [೩] ಈಗ ಇದು 'ಮೈಸೂರಿನ ಜಗನ್ ಮೋಹನ್ ಪ್ಯಾಲೇಸ್' ನಲ್ಲಿ ಪ್ರದರ್ಶನದಲ್ಲಿದೆ. ರವಿವರ್ಮರ ಕಲಾಕೃತಿಗಳ ಜೊತೆಯಲ್ಲೇ ಅದೇ ಪ್ಯಾಲೇಸಿನ ಮೇಲಿನ ಅಂತಸ್ತಿನಲ್ಲಿ ಪ್ರದರ್ಶನದಲ್ಲಿರುವ 'ದೀಪದ ಹುಡುಗಿಯ ಚಿತ್ರಕಲಾಕೃತಿ' ಬಹಳ ಪ್ರಸಿದ್ಧವಾದದ್ದು. ಈ ಚಿತ್ರಕ್ಕೆ ರೂಪದರ್ಶಿಯಾದವರು, ಕಲಾವಿದ ಹಳ್ದಂಕರ್ ರ ಮಗಳು, ಗೀತ. ಈ ಸುಂದರ ಕಲಾಕೃತಿಯನ್ನು ಸಹಾ ರವಿವರ್ಮರೇ ರಚಿಸಿದ್ದಾರೆ, [೪] ಎಂಬ ಅಭಿಪ್ರಾಯವಿತ್ತು.[೫] ಮೀಡಿಯದವರು ಮಾಡಿದ ವರದಿಯಲ್ಲಿ, ಕೇರಳ ರಾಜಮನೆತನದ ಯುವತಿಯ ಕೇರಳ ರೀತಿಯ ಸೀರೆಧರಿಸಿರುವುದು ಚಿತ್ರದಲ್ಲಿ ಮೂಡಿಸಲಾಗಿದೆಯೆಂಬ ವಿಚಾರ,
ದೀಪಾವಳಿ ಹಬ್ಬದಲ್ಲಿ ಮೂಡಿಬಂದ ಕಾಲಕೃತಿ
[ಬದಲಾಯಿಸಿ]ಚಿತ್ರದಲ್ಲಿ ರೂಪದರ್ಶಿಯಾದ ಯುವತಿ, ಅವರ ಮಗಳು, ಗೀತ. ಹಳ್ದಂಕರ್ ಸ್ವತಃ ಇದನ್ನು ರಚಿಸಿದ್ದರು.೧೯೩೨ ರಲ್ಲಿ ಮೂರನೆಯ ಮಗಳಾದ ಗೀತ, ದೀಪಾವಳಿ ಹಬ್ಬಕ್ಕೆ ಅವರ ತಾಯಿಯವರಿಗೆ ಕೊಂಡು ತಂದ ಸೀರೆಯನ್ನು ತಾನೇ ಉಟ್ಟಿದ್ದಳು. ತನ್ನ ಪ್ರೀತಿಯ ತಂದೆಗೆ ತನ್ನ ಸೀರೆಯನ್ನು ತೋರಿಸಲು ಹೋದಾಗ, ಅವಳ ಕೈನಲ್ಲಿ ಒಂದು ದೀಪವಿತ್ತು. ಕಲಾವಿದ ಹಳ್ದಂಕರ್ ತಕ್ಷಣವೇ ಆಕೆಯನ್ನು ಅಲ್ಲೇ ನಿಲ್ಲಿಸಿ, ಜಲವರ್ಣದ ಚಿತ್ರ ರಚಿಸಲು ಆರಂಭಿಸಿದರು. ಈ ಚಿತ್ರಕೃತಿಗೆ ಸುಮಾರು ೩ ದಿನ ಹಿಡಿಯಿತು. ಗೀತಾ. ಒಬ್ಬ ಉತ್ತಮ ಗಾಯಕಿ. ಆಗ್ರಾ ಘರಾಣೆಯ ಹಿಂದುಸ್ಥಾನದಸಂಗೀತದಲ್ಲಿ ತರಬೇತಿಯಾಯಿತು. ಆಕೆ ಕೋಲ್ಹಪುರದ ಚಿನ್ನದ ವ್ಯಾಪಾರೀ ಕೃಷ್ಣರಾವ್ ಉಪ್ಲೆಕರ್ ರನ್ನು ಮದುವೆಯಾದರು.
ಶತಾಯುಶಿ ಗೀತಾ ಕೆ.ಉಪ್ಲೇಕರ್
[ಬದಲಾಯಿಸಿ]ವರ್ಷ ೨೦೧೭ರ ಫೆಬ್ರವರಿಯಲ್ಲಿ ೨ ರಂದು ಗೀತಾಗೆ ೧೦೦ ವರ್ಷವಾಗಿತ್ತು. ಅದರ ಗೌರವಾರ್ಥವಾಗಿ, ತಂದೆ, ಹಳ್ದಂಕರ್ ಚಿತ್ರ ಸಂಗ್ರಹಾಲಯ,ಒಂದು ಚಿತ್ರಕೃತಿಯ ವಿಶೇಷ ಪುಸ್ತಕವನ್ನು ಬಿಡುಗಡೆ ಮಾಡಿತು. ಆ ಪುಸ್ತಕದ ಮುಖ ಪುಟದಲ್ಲಿ ಗೀತಾರವರ ಚಿತ್ರಕೃತಿ "ವುಮನ್ ವಿಥ್ ದ ಲ್ಯಾಂಪ್" ಪ್ರಕಟವಾಗಿತ್ತು. ಸಾವಂತವಾಡಿ ಅರಮನೆಯ ಗ್ಯಾಲರಿಯಲ್ಲಿ 'ವಿಶೇಷ ಫೋಟೋ ಶಾಟ್' ಕಾರ್ಯಕ್ರಮದ ಏರ್ಪಾಡಾಗಿತ್ತು.
ಜೀವನ
[ಬದಲಾಯಿಸಿ]ಹಳ್ದಂಕರ್ ತಮ್ಮ ಚಿಕ್ಕ ವಯಸ್ಸಿನಲ್ಲೇ ಮದುವೆಯಾದರು. ಈ ತರಹದ ವಿವಾಹ ಪದ್ಧತಿ ಅವರ ವಂಶದ ವಿಶೇಷತೆಯಾಗಿತ್ತು. ಈ ದಂಪತಿಗಳಿಗೆ, ೭ ಮಕ್ಕಳು ೪ ಗಂಡು, ೩ ಹೆಣ್ಣುಮಕ್ಕಳು.
- ಗಜಾನನ್ ಮಧುಕರ್, ಹಿರಿಯ ಮಗ, (ಜಿ.ಎಸ್.ಹಳ್ದಂಕರ್ ತಂದೆಯ ತರಹ ಉತ್ಕೃಷ್ಟ ಚಿತ್ರಕಲಾಕಾರರಾದರು). ವಾಟರ್ ಕಲರ್ ನಲ್ಲಿ ವಿಶೇಷ ಪರಿಣಿತಿಪಡೆದಿದ್ದಾರೆ. ತಂದೆಯವರ ಚಿತ್ರಶಾಲೆಯನ್ನು ನಡೆಸಿಕೊಂಡು ಮುಂದೆ ಸಾಗುತ್ತಿದ್ದಾರೆ.
- ವಿಜಯಾನಂದ್ ಎರಡನೆಯ ಮಗ.
ಶ್ರೀಕೃಷ್ಣ ಬಬನ್ ರಾವ್ : ಮೂರನೆಯ ಮಗ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಪ್ರಸಿದ್ಧಿಗಳಿಸಿದರು.[೬] ಶ್ರೀಕೃಷ್ಣ ಬಬನ್ ರಾವ್ ಹಳ್ದಂಕರ್,ಎಂದು ಹೆಸರುವಾಸಿಯಾಗಿದ್ದ ಅವರು, ಒಬ್ಬ ಕೆಮಿಕಲ್ ಇಂಜಿನಿಯರ್ ಪದವೀಧರರು. ಆದರೆ ಹಿಂದೂಸ್ತಾನಿ ಸಂಗೀತದಲ್ಲಿ ತೀವ್ರವಾದ ಆಸಕ್ತರು. ೧೯೫೯ ರಲ್ಲಿ, ತಮ್ಮ ೩೨ ನೆಯ ವಯಸ್ಸಿನಲ್ಲಿ 'ಉಸ್ತಾದ್ ಖಾದಿಮ್ ಹುಸೇನ್ ಖಾನ್' ರಿಂದ 'ಆಗ್ರ ಘರಾನ ಶೈಲಿ'ಯ ಸಂಗೀತವನ್ನು ಅಭ್ಯಾಸಮಾಡಿದರು. ಮುಂದಿ ವಿದುಷಿ,ಮೋಗುಬಾಯಿ ಖುರ್ಡೀಕರ್ (ಶ್ರೀಮತಿ ಕಿಶೋರಿ ಅಮೋನ್ಕರ್ ರವರ ತಾಯಿ) ರಿಂದ ಜೈಪುರ ಘರಾನ ಶೈಲಿಯಲ್ಲಿ ಕಲಿತು, ಸಿದ್ಧಿಸಾಧಿಸಿದರು. ಮುಂದೆ ಸಾಗುತ್ತಾ, ಪ್ರಶಸ್ತಿಗೆ ಪಾತ್ರವಾದ ತಮ್ಮ, "Aesthetics of Agra & Jaipur Traditions" ಎಂಬ ಪುಸ್ತಕವನ್ನು ಪ್ರಕಟಿಸಿದರು.
- ಸಾವ್ಲಾರಾಮ್ ಎಲ್.ಹಳ್ಡಂಕರ್ ರ, ಮೂರುಜನ ಹೆಣ್ಣು ಮಕ್ಕಳಲ್ಲಿ ಗೀತಾ ಆರ್.ಉಪ್ಲೇಕರ್, ಕೊನೆಯವರು. ಎಲ್ಲ ಹೆಣ್ಣುಮಕ್ಕಳೂ ತಂದೆ-ತಾಯಿಯರು ನೋಡಿ ಸಮಾಧಾನಗೊಂಡ ಪರಿವಾರದ ಹುಡುಗರೊಂದಿಗೆ ಮದುವೆಯಾಗಿ, ಸಮಾಧಾನಕಾರಿಯಾದ ಜೀವನವನ್ನು ನಡೆಸುತ್ತಿದ್ದಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ S. L. Haldankar (1882 -1968)
- ↑ "Masters of Indian Art – Sawlaram Lakshman Haldankar, was a Maharashtrian artist". Archived from the original on 2018-03-07. Retrieved 2018-10-12.
- ↑ Kamat picture Archives, Painting by Haldankar
- ↑ [೧], REAL STORY BEHIND THE ‘GLOW OF HOPE’ – A PAINTING BY S.L. HALDANKAR, November 10, 2014 Archived November 3, 2015[Date mismatch], ವೇಬ್ಯಾಕ್ ಮೆಷಿನ್ ನಲ್ಲಿ.
- ↑ Art circle, Ravi varma[ಶಾಶ್ವತವಾಗಿ ಮಡಿದ ಕೊಂಡಿ]
- ↑ scroll.in/magazinebabanrao-haldankar-the-agra-gharana-loses-one-of-its-most-forceful-voices