ವಿಷಯಕ್ಕೆ ಹೋಗು

ಸರಪಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಟೋರಸ್ ಆಕಾರದ ಕೊಂಡಿಗಳಿಂದ ತಯಾರಿಸಿದ ಒಂದು ಅಗಲವಾದ ಲೋಹದ ಸರಪಳಿ

ಸರಪಳಿಯು ಸಾಮಾನ್ಯವಾಗಿ ಲೋಹದಿಂದ ತಯಾರಿಸಲಾದ ಸಂಪರ್ಕ ಹೊಂದಿದ ಕೊಂಡಿಗಳ ಒಂದು ಸರಣಿ. ಒಂದು ಸರಪಳಿಯು ಎರಡು ಅಥವಾ ಹೆಚ್ಚು ಕೊಂಡಿಗಳನ್ನು ಹೊಂದಿರಬಹುದು.

  • ಎತ್ತು ಯಂತ್ರದೊಂದಿಗೆ ಬಳಸುವಂತಹ ಎತ್ತಲು; ಎಳೆಯಲು; ಅಥವಾ ಸೈಕಲ್ ಲಾಕ್‍ನಂತಹ ಭದ್ರಪಡಿಸಲು ವಿನ್ಯಾಸಮಾಡಿದವು, ಟೋರಸ್ ಆಕಾರದ ಕೊಂಡಿಗಳನ್ನು ಹೊಂದಿರುತ್ತವೆ, ಮತ್ತು ಇದರಿಂದ ಸರಪಳಿಯು ಎರಡು ಆಯಾಮಗಳಲ್ಲಿ ಬಾಗುತ್ತದೆ (ಸರಪಳಿಯ ಉದ್ದ ಸ್ಥಿರ ತೃತೀಯ ಆಯಾಮವಾಗಿರುತ್ತದೆ).
  • ಯಂತ್ರಗಳಲ್ಲಿ ಶಕ್ತಿಯನ್ನು ವರ್ಗಾಯಿಸಲು ವಿನ್ಯಾಸಮಾಡಿದಂಥವು ಯಂತ್ರದ ಸ್ಪ್ರಾಕೆಟ್‍ಗಳ ಹಲ್ಲುಗಳ ಜೊತೆಗೆ ಒಂದಕ್ಕೊಂದು ಸೇರುವಂತಹ ವಿನ್ಯಾಸದ ಕೊಂಡಿಗಳನ್ನು ಹೊಂದಿರುತ್ತವೆ, ಮತ್ತು ಇವು ಕೇವಲ ಒಂದು ಆಯಾಮದಲ್ಲಿ ಬಾಗುತ್ತವೆ. ಅವನ್ನು ಉರುಳು ಸರಪಳಿಗಳೆಂದು ಕರೆಯಲಾಗುತ್ತದೆ, ಜೊತೆಗೆ ಕಂಬಿ ಕೊಂಡಿ ಸರಪಳಿಯಂತಹ ಉರುಳದ ಸರಪಳಿಗಳೂ ಇವೆ.

ಎರಡು ಪ್ರತ್ಯೇಕ ಸರಪಳಿಗಳನ್ನು ಕ್ಯಾರಬೀನರ್ ಅನ್ನು ಹೋಲುವ, ಆದರೆ ಅಗುಳಿಯ ಬದಲು ತಿರುಪು ಮೊಳೆ ಕೊನೆಯಿರುವ ಒಂದು ಕ್ಷಿಪ್ರ ಕೊಂಡಿಯನ್ನು ಬಳಸಿ ಜೋಡಿಸಬಹುದು.

"https://kn.wikipedia.org/w/index.php?title=ಸರಪಳಿ&oldid=738800" ಇಂದ ಪಡೆಯಲ್ಪಟ್ಟಿದೆ