ಸತ್ಯ ನಾದೆಳ್ಲ
ಸತ್ಯ ನಾರಾಯಣ ನಾದೆಳ್ಲ (సత్య నాదెళ్ల ಚೌಧರಿ) | |
---|---|
సత్య నారాయణ నాదెళ్ల చౌదరి | |
ಜನನ | ಸತ್ಯ ನಾದೆಳ್ಲ 1967 (ವಯಸ್ಸು 56–57)[೧] |
ನಾಗರಿಕತೆ | ಅಮೆರಿಕನ್, [೫] |
ವಿದ್ಯಾಭ್ಯಾಸ | BS, MSCS, MBA; |
ಶಿಕ್ಷಣ ಸಂಸ್ಥೆ | ಮಣಿಪಾಲ್ ಇನ್ಸ್ಟಿ ಟ್ಯೂಟ್ ಆಫ್ ಟೆಕ್ನೊಲೊಜಿ [ಬಿ.ಟೆಕ್.) University of Wisconsin–Milwaukee (M.S.) University of Chicago Booth School of Business (M.B.A.) |
ವೃತ್ತಿ | ಸಿ.ಇ.ಒ ಮೈಕ್ರೊಸಾಫ್ಟ್ |
ಸಕ್ರಿಯ ವರ್ಷಗಳು | ೧೯೯೨ ಯಿಂದ ಇದುವರೆವಿಗೂ |
ಪೂರ್ವವರ್ತಿ | ಸ್ಟೀವ್ ಬಾಮರ್ |
ಸಂಗಾತಿ | ಅನುಪಮ ನಾದೆಳ್ಲ |
ಮಕ್ಕಳು | ೩ |
ಪೋಷಕ(ರು) | ಬಿ.ಎಸ್.ಯುಗಂಧರ್, IAS |
ಜಾಲತಾಣ | Satya Nadella - Microsoft.com |
Notes | |
ಕ್ರಿಕೆಟ್, ಹಾಗೂ ಕವನಗಳು,ಅವರ ಪ್ರೀತಿಯ ವಿಷಯಗಳು. |
(Satya Nadella) 'ಸತ್ಯ ನಾಡೆಲ್ಲಾ', ಎಂದು ಇಂಗ್ಲೀಷ್ ಇಂಟರ್ನೆಟ್ ತಾಣಗಳಲ್ಲಿ ಮತ್ತು ಅವರು ಕೆಲಸಮಾಡುತ್ತಿರುವ, 'ಮೈಕ್ರೋಸಾಫ್ಟ್ ಕಂಪೆನಿ'ಯ ಸಹೋದ್ಯೋಗಿಗಳಿಗೆ, ವಿಶ್ವದಾದ್ಯಂತ ಜನಪ್ರಿಯರಾಗಿರುವ ಸತ್ಯ ನಾಡೆಲ್ಲಾ,ರವರ ಮನೆಯ ಹೆಸರು, ಸತ್ಯನಾರಾಯಣ ನಾದೆಳ್ಲ ಚೌಧರಿ, ಎಂದು.(ಜನನ: ೧೯೬೭) ಅವರೊಬ್ಬ ಭಾರತೀಯ ಅಮೆರಿಕನ್, ಬಿಝಿನೆಸ್ ಎಕ್ಸಿಕ್ಯುಟೀವ್, ಹಾಗೂ ಇಂಜಿನಿಯರ್, ಈಗಿನ ಅಮೆರಿಕದ ಬಹುದೊಡ್ಡ ಸಾಫ್ಟ್ವೇರ್ ಕಂಪೆನಿ, ಮೈಕ್ರೊಸಾಫ್ಟ್ ನ ಪ್ರಮುಖ ಎಕ್ಸಿಕ್ಯುಟೀವ್ ಆಗಿ ನೇಮಿಸಲ್ಪಟ್ಟಿದ್ದಾರೆ. ೨೦೧೪ ರ, ಫೆಬ್ರವರಿ, ೪ ರಂದು, ಅವರನ್ನು ಸಿ.ಇ.ಒ. ಆಗಿ ನೇಮಿಸಲ್ಪಡಲಾಗಿತ್ತು. ಸತ್ಯ ನಾದೆಳ್ಲ, ಅವರ ಹಿರಿಯ ಗೆಳೆಯ'ಸ್ಟೀವ್ ಬಾಲ್ಮರ್' ತೆರವುಮಾಡಿದ ಜಾಗದಲ್ಲಿ ಕೆಲಸಮಾಡುತ್ತಿದ್ದಾರೆ. ಹಿಂದೆ,ನಾದೆಳ್ಲ, ಮೈಕ್ರೊಸಾಫ್ಟ್ ಕಂಪೆನಿಯ 'ಕ್ಲೌಡ್ ಅಂಡ್ ಎಂಟರ್ಪ್ರೈಸ್ ಸಮೂಹ'ದ ಎಕ್ಸಿಕ್ಯ್ಟೀವ್ ವೈಸ್ ಪ್ರೆಸಿಡೆಂಟ್, ಆಗಿ ಕೆಲಸದಲ್ಲಿದ್ದರು. ಇಲ್ಲಿ ಅವರು, 'ಮೈಕ್ರೊಸಾಫ್ಟ್ ಕಂಪೆನಿ'ಯ ಕಂಪ್ಯೂಟಿಂಗ್ ಫ್ಲಾಟ್ಫಾರ್ಮ್ಸ್' ಹಾಗೂ, 'ಡೆವೆಲಪರ್ಸ್ ಟೂಲ್ಸ್ ಮತ್ತು ಕ್ಲೌಡ್ ಸೇವೆ'ಗಳನ್ನು ವ್ಯವಸ್ಥಿತವಾಗಿ ನೋಡಿಕೊಳ್ಳುವ ಕೆಲಸದಲ್ಲಿ ವ್ಯಸ್ತರಾಗಿದ್ದರು.
ಆರಂಭಿಕ ಜೀವನ
[ಬದಲಾಯಿಸಿ]'ನಾದೆಳ್ಲ ಸತ್ಯನಾರಾಯಣ ಚೌಧರಿ', ಭಾರತದ ಹೈದರಾಬಾದ್ ನಲ್ಲಿ ವಾಸಿಸುವ ಒಂದು ತೆಲುಗು ಕಮ್ಮೆ ಪರಿವಾರದಲ್ಲಿ ಜನಿಸಿದರು. ಇವರ ಪರಿವಾರದವರು, ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯವರು. ತಂದೆ,ಬಿ.ಎನ್.ಯುಗಂಧರ್,೧೯೬೨ ರ ಬ್ಯಾಚಿನ 'ಐ.ಎ.ಎಸ್.ಆಫೀಸರ್' ಆಗಿದ್ದರು. ತಾಯಿ, ಪ್ರಭಾವತಿ. ತಂದೆಯವರು, ಪ್ರಧಾನಿಯವರ ಆಪ್ತ ಕಾರ್ಯದರ್ಶಿಯಾಗಿದ್ದರು. ಗ್ರಾಮೀಣ ವಿಕಾಸ ಯೋಜನೆಗೆ ಕಾರ್ಯದರ್ಶಿ, 'ಲಾಲ್ಬಹದ್ದುರ್ ಶಾಸ್ತ್ರಿ ನ್ಯಾಷನಲ್ ಅಕ್ಯಾಡೆಮಿ ಆಫ್ ಅಡ್ಮಿಸ್ಟ್ರೇಶನ್' ಗೆ ನಿರ್ದೇಶಕರು. ಅವರು ಪ್ರಧಾನಿ, ಮನಮೋಹನ್ ಸಿಂಗ್ ರ ಕಾರ್ಯಕಾಲದಲ್ಲಿ (೨೦೦೪-೨೦೦೯) ರ ಸಮಯದಲ್ಲಿ 'ಪ್ಲಾನಿಂಗ್ ಕಮೀಶನ್ ನ ಸದಸ್ಯ'ರಾಗಿದ್ದರು. ನಾದೆಳ್ಗ, ಹೈದರಾಬಾದ್ ನ ಬೇಗಂ ಪೇಟೆಯ ಸಾರ್ವಜನಿಕ ಶಾಲೆಗಳಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಹೈಸ್ಕೂಲ್ ಶಿಕ್ಷಣಗಳಿಸಿ, ೧೯೮೭ ರಲ್ಲಿ ಕರ್ನಾಟಕದ ಮಣಿಪಾಲ್ ನಲ್ಲಿ 'ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ' ಯಲ್ಲಿ 'ಎಲೆಕ್ಟ್ರಾನಿಕ್ಸ್ ಹಾಗೂ ಟೆಲಿಕಮ್ಯೂನಿ ಕೇಶನ್ ವಿಷಯ'ದಲ್ಲಿ ಪದವಿಗಳಿಸಿದರು. ಮುಂದೆ, ಉನ್ನತ ಶಿಕ್ಷಣಕ್ಕಾಗಿ ೧೯೯೦ ರಲ್ಲಿ ಅಮೇರಿಕಾದ 'ಯುನಿವರ್ಸಿಟಿ ಆಫ್ ವಿಸ್ಕಾನ್ಸಿನ್-ಮಿಲ್ವಾಕಿ', ಯಲ್ಲಿ ಶಿಕ್ಷಣ ಮುಂದುವರೆಸಿ, ಚಿಕಾಗೋನ 'ಬೂತ್ ಸ್ಕೂಲ್ ಆಫ್ ಬಿಜಿನೆಸ್', ನಿಂದ 'ಎಮ್.ಬಿ.ಎ. ಪದವಿ' ಗಳಿಸಿದರು. ಬಾಲ್ಯದಿಂದಲೂ ನಾದೆಳ್ಲ,ಏನಾದರು ಹೊಸದನ್ನು ಕಂಡು ಹಿಡಿಯುವ ತವಕವನ್ನು ವ್ಯಕ್ತ ಪಡಿಸುತ್ತಿದ್ದರು. ಅದಕ್ಕಾಗಿ, 'ಕಂಪ್ಯೂಟರ್ ಸೈನ್ಸ್' ನಲ್ಲಿ ಶಿಕ್ಷಣ ಪಡೆಯಲು ಅಪೇಕ್ಷಿಸಿದ್ದರು. ಅವರು, ಮಣಿಪಾಲ್ ವಿಶ್ವವಿದ್ಯಾಲಯದಲ್ಲಿ ಓದುವ ಸಮಯದಲ್ಲಿ ಆ ವಿಶಯಕ್ಕೆ ಒತ್ತು ಕೊಡಲಿಲ್ಲ. ಅದಕ್ಕಾಗಿ ನಾದೆಳ್ಲ,'ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ಕೋರ್ಸ್' ನ್ನು ಆರಿಸಿಕೊಂಡರು.ಇದರ ನಂತರ, ಅವರ ಆಸೆಗಳನ್ನು ಈಡೇರಿಸಿಕೊಳ್ಳಲು ಸಹಾಯವಾಯಿತು.
ವೃತ್ತಿ ಜೀವನ ಆರಂಭವಾದಬಗೆ
[ಬದಲಾಯಿಸಿ]ಮೊದಲು ಪದವಿ ವಿದ್ಯಾಭ್ಯಾಸವನ್ನು ಮುಗಿಸಿದ ಬಳಿಕ, ನಾದೆಳ್ಲರವರು, 'ಸನ್ ಮೈಕ್ರೋ ಸಿಸ್ಟಮ್' ಎಂಬ ಸಂಸ್ಥೆಯಲ್ಲಿ ಸೇರಿಕೊಂಡು, ಟೆಕ್ನೋಲೋಜಿ ಸಿಬ್ಬಂದಿಯ ಒಬ್ಬ ಸದಸ್ಯರಾಗಿ ಕೆಲಸ ಆರಂಭಿಸಿದರು. ಮುಂದೆ, ೧೯೯೨ ರಲ್ಲಿ 'ಮೈಕ್ರೋ ಸಾಫ್ಟ್ ಕಂಪೆನಿ'ಗೆ ಸೇರಿದರು. ಮೈಕ್ರೋಸಾಫ್ಟ್ ಸಂಸ್ಥೆಯಲ್ಲಿ ಅವರು ಮಾಡಿದ ಕೆಲಸಗಳು ಅಪಾರ ಕೀರ್ತಿ ಮತ್ತು ದೊಡ್ಡ ಪದವಿಗಳನ್ನು ತಂದುಕೊಟ್ಟವು. 'ದೊಡ್ಡ ದೊಡ್ಡ ಪ್ರಾಜಕ್ಟ್' ಗಳನ್ನು ತೆಗೆದುಕೊಂಡು ಅವನ್ನು ಬಹಳ ಯಶಸ್ವಿಯಾಗಿ ಮುಂದೆತಂದರು. ಅವುಗಳಲ್ಲಿ ಬಹಳ ಮಹತ್ವದ ಸಾಧನೆಯೆಂದು ಪರಿಗಣಿಸಲ್ಪಟ್ಟ ಮೈಕ್ರೋ ಸಾಫ್ಟ್ ಕಂಪೆನಿಯ ಪ್ರಾಜೆಕ್ಟ್ ಗಳು :
- ಕ್ಲೌಡ್ ಕಂಪ್ಯೂಟಿಂಗ್' ಮತ್ತು ವಿಶ್ವದಲ್ಲೇ ಅತಿ ಹೆಚ್ಚಿನ ಪ್ರಮಾಣದ ಸಂಪನ್ಮೂಲಗಳನ್ನು ವ್ರುದ್ಧಿಗೊಳಿಸಿದ ಸಾಧನೆ, ಅವರಿಗೆ ಪ್ರಚಂಡಯಶಸ್ಸನ್ನು ತಂದು ಕೊಟ್ಟಿತು.[೧೦]
ಮೈಕ್ರೊ ಸಾಫ್ಟ್ ಕಂಪೆನಿಯ ಜೊತೆ
[ಬದಲಾಯಿಸಿ]'ಸತ್ಯ ನಾದೆಳ್ಲರವರು 'ಮೈಕ್ರೋಸಾಫ್ಟ್ ಕಂಪೆನಿಯಲ್ಲಿ ಬಹಳ ಶ್ರಮವಹಿಸಿ, ತಮ್ಮ ಅಪಾರ ಸಾಧನೆಗಳಿಂದ ಉನ್ನತ ಪದವಿಗಳನ್ನು ಏರುತ್ತಾಹೋದರು. ಮೊದಲು ಅವರು 'ಆರ್ ಅಂಡ್ ಡಿ ಫಾರ್ ಆನ್ ಲೈನ್ ಸರ್ವಿಸಸ್' ನ 'ವರಿಷ್ಠ ವೈಸ್ ಪ್ರೆಸಿಡೆಂಟ್' ಆಗಿ ಕೆಲಸನಿರ್ವಹಿಸಿದರು. ಮುಂದೆ 'ಮೈಕ್ರೋ ಸಾಫ್ಟ್ ಬಿಸಿನೆಸ್ ವಿಭಾಗದ ವೈಸ್ ಪ್ರೆಸಿಡೆಂಟ್' ಆದರು. ಅವರ ಕಾರ್ಯಕ್ಷಮತೆಯನ್ನು ಗಮನಿಸಿ, 'ಮೈಕ್ರೋಸಾಫ್ಟ್ ಕಂಪೆನಿಯ ೧೯ ಬಿಲಿಯಂ ಸರ್ವರ್ ಅಂಡ್ ಟೂಲ್ಸ್ ಬಿಸಿನೆಸ್ ನ ಪ್ರೆಸಿಡೆಂಟ್' ಆಗಿ ನೇಮಿಸಲ್ಪಟ್ಟರು. ಇಲ್ಲಿ ಅವರು ಬಹಳ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿ, 'ಕ್ಲೌಡ್ ಸರ್ವೀಸಸ್' ನ ವ್ಯಾಪ್ತಿಯನ್ನು ಬಹಳವಾಗಿ ಹೆಚ್ಚಿಸಿದರು. ಮೈಕ್ರೋ ಸಾಫ್ಟ್ ಬಿಸಿನೆಸ್ ನ್ನು 'ಮೈಕ್ರೋ ಸಾಫ್ಟ್ ಡೇಟಾ ಬೇಸ್', 'ವಿಂಡೋಸ್ ಸರ್ವರ್', ಮತ್ತು 'ಅಜುರ್ ಕ್ಲೌಡ್' ನಿಂದ 'ಡೆವೆಲಪರ್ ಕ್ಲೌಡ್' ಗೆ ಹೊಂದಾಣಿಕೆ ಮಾಡುವಲ್ಲಿ ಬಹಳವಾಗಿ ದುಡಿದರು. ಈ ಮಹತ್ವದ ಕಾರ್ಯದಿಂದ ಕ್ಲೌಡ್ ಕಂಪೆನಿಯ ಸೇವೆಗಳು ೨೦೧೩ ರ ಜೂನ್ ತಿಂಗಳಲ್ಲಿ ೨೦.೩ ಡಾಲರ್ ಗಳಿದ್ದದ್ದು,೨೦೧೧ ರಲ್ಲಿ ಅವರು ಪ್ರಮುಖ ಹುದ್ದೆಯ ರುವಾರಿಯಾಗಿ ಜವಾಬ್ದಾರಿ ವಹಿಸಿಕೊಂಡಾಗ, ೧೬.೦ ಬಿಲಿಯನ್ ಡಾಲರ್ ಮುಟ್ಟಲು ಸಹಕಾರಿಯಾಯಿತು. ೨೦೧೩ ರಲ್ಲಿ ಸತ್ಯ ನಾದೆಳ್ಲರವರ ಮೂಲ ವೇತನ, ೭ ಲಕ್ಷ ಡಾಲರ್ ಗಳು. ಒಟ್ಟು ಸ್ಯಾಲರಿ ಸ್ಟಾಕ್ ಬೋನಸ್ ಸೇರಿ ೭.೬ ಮಿಲಿಯನ್ ಡಾಲರ್ ಗಳು. 'ಕ್ಲೌಡ್ ಕಂಪ್ಯೂಟಿಂಗ್' ದಾರಿಯನ್ನು ಸುಗಮಗೊಳಿಸುವಲ್ಲಿ ಬಹಳ ದೊಡ್ಡ ಪಾತ್ರ ವಹಿಸಿದ್ದರು. ಈ ಜವಾಬ್ದಾರಿಗಳನ್ನು ನಿಭಾಯಿಸುವ ಮುನ್ನ ಅವರು ಹಲವಾರು ಹುದ್ದೆಗಳಲ್ಲಿ ತಮ್ಮ ಯೋಗದಾನಮಾಡುತ್ತಿದ್ದರು.
ಮೈಕ್ರೊಸಾಫ್ಟ್ ಹೊಸ ಸಿ.ಇ.ಒ
[ಬದಲಾಯಿಸಿ]ಮೈಕ್ರೋಸಾಫ್ಟ್ ಕಂಪೆನಿ ಕಳೆದ ಆಗಸ್ಟ್ ನಲ್ಲಿ ತಮ್ಮ ಹೊಸ ಸಿ.ಇ.ಓ ಹುಡುಕುವ ಸನ್ನಿದ್ಧತೆಯಲ್ಲಿದ್ದಾಗ ಸ್ಟೀವ್ ಬಾಮರ್ ತಮ್ಮ ನಿವೃತ್ತಿಯ ಘೋಷಣೆಯನ್ನು ಆಗಸ್ಟ್ ತಿಂಗಳಿನಲ್ಲಿ ಮಾಡಿದರು. ಈ ನಿರ್ಣಯ ಎಲ್ಲರನ್ನು ಚಕಿತಗೊಳಿಸಿತ್ತು. ಹಿಂದೆ ಮೀಡಿಯಕ್ಕೆ ಕೊಟ್ಟ ಸಂದರ್ಶನದಲ್ಲಿ ಅವರು ೨೦೧೭ ರ ವರೆಗೆ, ತಮ್ಮ ಮಕ್ಕಳೆಲ್ಲ ಕಾಲೇಜ್ ಹಂತವನ್ನು ಮುಟ್ಟುವವರೆಗೆ ಅಥವಾ ಅದಕ್ಕೆ ಮೊದಲೇ ನಿವೃತ್ತಿಯ ಬಗ್ಗೆ ನಿರ್ಧರಿಸುವ ಬಗ್ಗೆ ತಮ್ಮ ಹೇಳಿಕೆಯನ್ನು ಕೊಟ್ಟಿದ್ದರು.ಈ ಸಮಯದಲ್ಲಿ ಹಿರಿಯ ಅಧಿಕಾರಿಗಳ ಮನಸ್ಸಿನಲ್ಲಿ ಈಗಾಗಲೇ ಮೈಕ್ರೊಸಾಫ್ಟ್ ಕಂಪೆನಿಯ ಆಗುಹೋಗುಗಳನ್ನು ಅತ್ಯಂಥ ನಿಖರವಾಗಿ ಬಲ್ಲ ಸತ್ಯ ನಾದೆಳ್ಗರ ಬಗ್ಗೆ ಆಗಾಗ ಸುದ್ದಿಗಳು ಮೀಡಿಯಾದಲ್ಲಿ ಬರುತ್ತಲೇ ಇದ್ದವು. ಕೊನೆಗೆ ಬಿಲ್ ಗೇಟ್ ರವರು ಹೊರಗಿನ ವ್ಯಕ್ತಿಗಿಂತ ಕಂಪೆನಿಯಲ್ಲೇ ದುಡಿಯುತ್ತಿರುವ ಅನುಭವಿ ೪೪ ವರ್ಷದ ನಾದೆಳ್ಗರು ಎಲ್ಲಾ ವಿಧದಲ್ಲಿಯೂ ಹೊಸ ಸಿ.ಇ.ಒ. ಆಗಲು ಸಮರ್ಪಕ ವ್ಯಕ್ತಿಯೆಂದು ನಿರ್ಧರಿಸಿ, ಅವರ ಹೆಸರನ್ನು ಕೂಡಲೇ ಘೋಶಿಸಿದರು. [೧೧]
- 'ಸರ್ವರ್ ಅಂಡ್ ಟೂಲ್ಸ್ ಡಿವಿಷನ್ ನ ಅಧ್ಯಕ್ಷರಾಗಿದ್ದರು'. (೨೦೧೧ನ್ ರ, ಫೆಬ್ರವರಿ, ೯ ರಿಂದ- ೨೦೧೪ ರ ಫೆಬ್ರವರಿಯ ವರೆಗೆ)
- 'ರಿಸರ್ಚ್ ಅಂಡ್ ಡೆವೆಲಪ್ಮೆಂಟ್ ಫಾರ್ ದ ಆನ್ ಲೈನ್ ವಿಭಾಗದ ವರಿಷ್ಠ ವೈಸ್ ಪ್ರೆಸಿಡೆಂಟ್' ಆಗಿದ್ದರು.
- 'ಬಿಸಿನೆಸ್ ಡಿವಿಷನ್ ನ ವೈಸ್ ಪ್ರೆಸಿಡೆಂಟ್',
- 'ಬಿಸಿನೆಸ್ ಸಲ್ಯುಶನ್ಸ್ ಮತ್ತು ರಿಸರ್ಚ್ ಮತ್ತು ಅಡ್ವರ್ಟೈಸಿಂಗ್ ಪ್ಲಾಟ್ಫಾರ್ಮ್ ಸಮೂಹ'ದ 'ಕಾರ್ಪೋರೆಟ್ ವೈಸ್ ಪ್ರೆಸಿಡೆಂಟ್',
- 'ಕ್ಲೌಡ್ ಅಂಡ್ ಎಂಟರ್ಪ್ರೈಸಸ್ ಸಮೂಹದ ಎಕ್ಸಿಕ್ಯುಟೀವ್ ವೈಸ್ ಪ್ರೆಸಿಡೆಂಟ್',
- ಸತ್ಯ ನಾದೆಳ್ಲರನ್ನು, 'ಮೈಸ್ರೋ ಸಾಫ್ಟ್ ಕಂಪೆನಿಯ ಹೊಸ ಸಿ.ಇ.ಓ' ಎಂದು ೨೦೧೪ ರ ಫೆಬ್ರವರಿ ೪ ರಂದು ಘೋಶಿಸಲಾಯಿತು. 'ಮೈಕ್ರೊಸಾಫ್ಟ್ ಕಂಪೆನಿಯ ಇತಿಹಾದದಲ್ಲಿ ಮೂರನೆಯ ಚೀಫ್ ಎಕ್ಸಿಕ್ಯುಟೀವ್', ಎಂದು ಪ್ರಸಿದ್ಧಿಯಾದರು. [೧೨]
ವೈಯಕ್ತಿಕ ಜೀವನ
[ಬದಲಾಯಿಸಿ]೧೯೯೨ ರಲ್ಲಿ ಸತ್ಯರವರು, ಬ್ರಾಹ್ಮಣಜಾತಿಯ ತಮ್ಮ ಕಾಲೇಜಿನ ಸಹಪಾಠಿ,'ಅನುಪಮ'ರನ್ನು ವಿವಾಹವಾದರು. ಅನುಪಮರ ತಂದೆ, ಕೆ.ಆರ್.ವೇಣುಗೋಪಾಲ್,(೩೯)ನಾದೆಳ್ಲ ರ ತಂದೆಯವರ ಜೊತೆ ಐ.ಎ.ಎಸ್. ಓದುವ ಸಮಯದಲ್ಲಿ ಸಹಪಾಠಿಯಾಗಿದ್ದರು. ಎನ್.ಟಿ.ಆರ್ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ವೇಣುಗೋಪಾಲರು,'ಬಡವರಿಗೆ ೨ ರೂ/ಕಿಜಿ ಅಕ್ಕಿ ವಿತರಣೆಯ ಅಭಿಯಾನದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ನಾದೆಳ್ಲ-ಅನುಪಮ ದಂಪತಿಗಳಿಗೆ ೩ ಮಕ್ಕಳು. ಒಬ್ಬ ಮಗ, ಮತ್ತು ಇಬ್ಬರು ಹೆಣ್ಣು ಮಕ್ಕಳು. ನಾದೆಲ್ಗ ತಮ್ಮ ಪರಿವಾರದ ಜೊತೆ ವಾಶಿಂಗ್ಟನ್ ರಾಜ್ಯದ, 'ಬೆಲ್ಲೆವ್ಯು' ನಲ್ಲಿ ವಾಸಿಸುತ್ತಿದ್ದಾರೆ. [೧೩] ಅಮೇರಿಕನ್ ಹಾಗು ಇಂಡಿಯನ್ ಕವನಗಳನ್ನು ಓದುವಲ್ಲಿ ತೀವ್ರ ಆಸಕ್ತರು. ಕ್ರಿಕೆಟ್ ಅವರ ಪರಮ ಪ್ರಿಯ ಕ್ರೀಡೆಗಳಲ್ಲೊಂದು. ಅವರ ವಿದ್ಯಾರ್ಥಿಜೀವನದಲ್ಲಿ ಸ್ಕೂಲ್ ನ ಒಂದು ಕ್ರಿಕೆಟ್ ತಂಡದ ಜೊತೆ ನಿಕಟ ಸಂಪರ್ಕ ಹೊಂದಿದ್ದರು. ಕ್ರಿಕೆಟ್ ಆಟ ಅವರಿಗೆ, ಒಂದು ತಂಡದ ನಾಯಕತ್ವವನ್ನು ಹೇಗೆ ನಿಭಾಯಿಸುವುದು ಎನ್ನುವ ಮತ್ತು ಹಲವಾರು ಮಹತ್ವದ ವಿಷಯಗಳನ್ನು ತಿಳಿಸಿಕೊಟ್ಟು ಉಪಕರಿಸಿತು. ಮುಂದೆ ಅವರ ವೃತ್ತಿಜೀವನದಲ್ಲಿ ಬಹುದೊಡ್ಡ ಸಾಧನೆಗಳನ್ನು ಮಾಡಲು ಸ್ಪೂರ್ತಿಯಾಗಿ ಪರಿಣಮಿಸಿತು.
ಎದುರಿಸಲಿರುವ ಹೊಣೆಗಾರಿಕೆಗಳು
[ಬದಲಾಯಿಸಿ]೭೮ ಶತಕೋಟಿ ಡಾಲರ್ ಮೌಲ್ಯದ ಕಂಪೆನಿ 'ಮೈಕ್ರೊಸಾಫ್ಟ್'. ನಾದೆಳ್ಗರ ವಾರ್ಷಿಕ ವೇತನ,೧೧೨ ಕೋಟಿ ಡಾಲರ್ ಗಳು. ಬಿಲ್ ಗೇಟ್ಸ್ ಸ್ಥಾಪಿಸಿದ ಸಾಮ್ರಾಜ್ಯದ ಮುಂದಿನ ಹೆಜ್ಜೆಗಳನ್ನು ನಿರ್ಧರಿಸಿ ಇನ್ನೂ ಎತ್ತರಕ್ಕೆ ಕೊಂಡೊಯ್ಯುವ ಗುರುತರ ಹೊಣೆಗಾರಿಕೆ ಸತ್ಯ ನಾದೆಳ್ಲರ ಹೆಗಲಮೇಲಿದೆ. ೧೯೭೫ ರಲ್ಲಿ ಜನ್ಮತಾಳಿದ 'ಮೈಕ್ರೊಸಾಫ್ಟ್ ಕಂಪೆನಿಗೆ ಸತ್ಯ, ಪಾದಾರ್ಪಣೆಮಾದಿದ್ದು ೧೯೯೨ ರಲ್ಲಿ. ೨೨ ವರ್ಷಗಳ ಕಾರ್ಯಾಚರಣೆಯಲ್ಲಿ ಕಂಪೆನಿಯ ಎಲ್ಲಾ ಸುಳಿವುಗಳನ್ನೂ, ತಾಂತ್ರಿಕ ನೈಪುಣ್ಯತೆಗಳನ್ನೂ ಚೆನ್ನಾಗಿ ತಿಳಿದುಕೊಂಡಿದ್ದಾರೆ.
ಸತ್ಯ ಮೂಲತಃ ತಂತ್ರಜ್ಞ
[ಬದಲಾಯಿಸಿ]ಮೂಲತಃ ತಂತ್ರಜ್ಞನಾಗಿರುವ ಸತ್ಯ, ಕಂಪೆನಿಯ ಮಾರುಕಟ್ಟೆಯ ನೀತಿಯನ್ನು ಅರಿತು ಅದಕ್ಕೆ ಸರಿಯಾಗಿ ಸ್ಪಂದಿಸುವ ದೊಡ್ಡ ಹೊಣೆಯಿದೆ. ವಿಶ್ವದಾದ್ಯಂತ ಹಬ್ಬಿರುವ ಪರ್ಸನಲ್ ಕಂಪ್ಯೂಟರ್ ಗಳಲ್ಲಿ ಶೇ.೯೦ % ರಷ್ಟು ಮೈಕ್ರೊಸಾಫ್ಟ್ ನ ವಿಂಡೋಸ್ ನ್ನೇ ಬಳಸುತ್ತಿವೆ. ಆದರೆ ಹೊಸಗ್ದಾಗಿ ಲಗ್ಗೆ ಹಾಕಿರುವ ಸ್ಮಾರ್ಟ್ ಫೋನ್ ಗಳಲ್ಲಿ ವಿಂಡೋಸ್ ಪಾಲು ೪% ಇದೆ. ಮೈಕ್ರೊಸಾಫ್ಟ್ ಗೆ ಟ್ಯಾಬ್ಲೆಟ್ ಗಳ ಮಾರುಕಟ್ಟೆಯನ್ನು ಹಿಡಿಯಲು ಸಾಧ್ಯವಾಗಿಲ್ಲ. ವಿಶ್ವದ ೪ ನೆಯ ಭಾರಿಕಂಪೆನಿ ಗೂಗಲ್ ಹಾಗೂ ಆಪ್ಯಲ್ ಕಂಪೆನಿಗಳ ಸ್ಪರ್ಧೆ ಇದೆ. ಬಿಲ್ ಗೇಟ್ಸ್ ತಾಂತ್ರಿಕ ಸಲಹೆಗಾರರಾಗಿ ಇನ್ನೂ ಮುಂದುವರೆಯುತ್ತಿದ್ದಾರೆ.
ಭಾರತದ ಪ್ರಧಾನಿಯವರ ಜೊತೆ
[ಬದಲಾಯಿಸಿ]'ಸತ್ಯ ನಾದೆಳ್ಲ', ಭಾರತಕ್ಕೆ ಭೇಟಿಯಿತ್ತು, ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಮೈಕ್ರೋಸಾಫ್ಟ್ ತಂತ್ರಜ್ಞಾನದ ಪರಿಣತಿಯನ್ನು ಭಾರತದ ಉದ್ಯೋಗ ಕ್ಷೇತ್ರದಲ್ಲಿ ಪಸರಿಸುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸಿದರು. [೧೪]
೨೦೧೫ ರಲ್ಲಿ
[ಬದಲಾಯಿಸಿ]'ಮೈಕ್ರೋಸಾಫ್ಟ್ ಕಂಪೆನಿಯ ಉದ್ಯೋಗಿಗಳು','ಬಹಳ ಸಮಯದಿಂದ ಉಪಯೋಗದಲ್ಲಿದ್ದ ವಿಂಡೋ ಕಾರ್ಯಕ್ರಮ' ದ ಪ್ರಭಾವ ಕಡಿಮೆಯಾಗಿದ್ದನ್ನು ಸ್ವಾಗತಿಸಿದರು. [೧೫]
ಉಲ್ಲೇಖಗಳು
[ಬದಲಾಯಿಸಿ]- ↑ "Satya Nadella – Microsoft's CEO". Microsoft. Retrieved 11 February 2014.
- ↑ "IAS officer's son tipped to become Microsoft CEO". The Times of India. 1 February 2014.
- ↑ "Satya Nadella: 8 things you should know". The Times of India. 31 January 2014.
- ↑ Drusch, Andrea (2 April 2014). "10 things to know: Satya Nadella". Politico.com.
- ↑ [Microsoft names India-born Satya Nadella as CEO, Bill Gates steps aside as Chairman. Associated Press via ibnlive.in. 5 February 2014 Archived 2 January 2015[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- ↑ ‘Studious, hardworking boy has achieved his goal,’ says Satya Nadella's dad. Dnaindia.com (5 February 2014). Retrieved on 16 February 2014.
- ↑ Satya, Nadella (5 February 2014). "Well done Satya". Eenadu. Archived from the original on 22 ಫೆಬ್ರವರಿ 2014. Retrieved 5 February 2014.
- ↑ "Microsoft Corporation's new CEO Satya Nadella to get $1.2 mn salary, total package at $18 mn". The Financial Express. 12 June 2012. Archived from the original on 25 ಡಿಸೆಂಬರ್ 2018. Retrieved 6 February 2014.
- ↑ "Satya Nadella Net Worth". Celebrity Net Worth. Retrieved 4 February 2014.
- ↑ "' Events/Speakers/satya-nadella'". Archived from the original on 2014-03-26. Retrieved 2014-03-12.
- ↑ ಮೈಕ್ರೊಸಾಫ್ಟ್ ಕಂ
- ↑ satyanarayana-chowdary-nadella
- ↑ POLITICO,10 things to know : Satya Nadella by : ANDREA DRUSCH/02/04/2014
- ↑ "TOI, 'Microsoft: Satya Nadella's first year as CEO', Feb 9, 2015". Archived from the original on ಫೆಬ್ರವರಿ 12, 2015. Retrieved ಫೆಬ್ರವರಿ 22, 2015.
- ↑ Vodafone India, ltd, Feb, 11, 2015, Here's what Microsoft employees think about their CEO, One year in.[ಶಾಶ್ವತವಾಗಿ ಮಡಿದ ಕೊಂಡಿ]
- Webarchive template warnings
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- Pages using infobox person with multiple parents
- Pages using infobox person with unknown parameters
- Articles with hCards
- Commons link is locally defined
- Commons category without a link on Wikidata
- ಭಾರತೀಯ ಅಮೆರಿಕನ್