ವಿಷಯಕ್ಕೆ ಹೋಗು

ಸಂತಾನ ನಿಯಂತ್ರಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂತಾನ ನಿಯಂತ್ರಣ[][]ಮಕ್ಕಳು ಬೇಡ ಎಂಬುದನ್ನು ದೃಢಪಡಿಸುವ ವಿಜ್ಞಾನ ವ್ಯವಸ್ಥೆಯಾಗಿದೆ. ಹಿಂದಿನ ಕಾಲದಲ್ಲಿ ಮಕ್ಕಳಿರಲವ್ವ ಮನೆತುಂಬಾ ಎನ್ನುತ್ತಾ ಹತ್ತುಕ್ಕೂ ಹೆಚ್ಚು ಮಕ್ಕಳನ್ನು ಹೆತ್ತು ಸಾಕಲಾರದೆ ಪರಿತಪಿಸುತ್ತಿದ್ದರು. ಈ ಕಾರಣಕ್ಕಾಗಿ ಮನೆಯೊಂದು ಮಕ್ಕಳೆರಡು ಎಂಬ ವ್ಯವಸ್ಥೆ ಜಾರಿಗೆ ಬಂತು.

ಇತಿವೃತ್ತ

[ಬದಲಾಯಿಸಿ]
  • ಸರಿಯಾದ ಜನನ ನಿಯಂತ್ರಣ[] (ಗರ್ಭನಿರೋಧಕ ವಿಧಾನ)[] ಆಯ್ಕೆ ಮಾಡಿಕೊಳ್ಳುವುದು ಒಂದು ರೀತಿಯಲ್ಲಿ ಗೊಂದಲವನ್ನುಂಟು ಮಾಡುವ ಕ್ರಿಯೆಯಾಗಿರುತ್ತದೆ. ಜೊತೆಗೆ ಅನೇಕ ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಏಳುತ್ತವೆ. ಜನನ ನಿಯಂತ್ರಣ ವಿಧಾನವನ್ನು ಆಯ್ಕೆ ಮಾಡಿಕೊಳ್ಳಬೇಕು.
  • ಎಂದರೆ ಅದನ್ನು ನಿರ್ಧರಿಸುವ ಮೊದಲು ನಾವು ಸಾಕಷ್ಟು ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ನಿಮ್ಮ ಜೀವನಶೈಲಿ, ಆರೋಗ್ಯ, ವ್ಯಕ್ತಿತ್ವದ ವಿಧ, ಸಂಬಂಧದ ಸ್ಥಾನ ಮಾನ, ಅನುಕೂಲ (ನಿಮ್ಮ ಮತ್ತು ನಿಮ್ಮ ಸಂಗಾತಿಯ), ಲೈಂಗಿಕವಾಗಿ ಹರಡುವ ರೋಗಗಳ ಅಪಾಯ (ಎಸ್‌ಟಿಡಿ), ಜನನ ನಿಯಂತ್ರಣ ವಿಧಾನದ ವೆಚ್ಚ ಇತ್ಯಾದಿ ಅಂಶಗಳನ್ನು ಪರಿಗಣಿಸಿ ಆಮೇಲೆ ಜನನ ನಿಯಂತ್ರಣವ ವಿಧಾನವನ್ನು ಆರಿಸಿಕೊಳ್ಳಬೇಕಾಗುತ್ತದೆ.

ಸಂತಾನ ಅಥವಾ ಜನನ ನಿಯಂತ್ರಣ ವಿಧಾನಗಳು

[ಬದಲಾಯಿಸಿ]

ಜನನ ನಿಯಂತ್ರಣ ವಿಧಾನಗಳು ಹಲವಾರು ಇವೆ. ಅವುಗಳೆಂದರೆ..

  1. ಹಿಂತೆಗೆದುಕೊಳ್ಳುವಿಕೆ ವಿಧಾನ
  2. ಫಲವಂತಿಕೆ ಜಾಗೃತಿ ವಿಧಾನ (ನೈಸರ್ಗಿಕ ಕುಟುಂಬ ಯೋಜನೆ)
  3. ಪುರುಷರ ಕಾಂಡೊಮ್
  4. ಸ್ತ್ರೀಯರ ಕಾಂಡೊಮ್
  5. ಸ್ಪರ್ಮಿಸೈಡ್‌ಗಳು
  6. ಸ್ಪಾಂಜ್
  7. ಗರ್ಭನಿರೋಧಕ ಮಾತ್ರೆ
  8. ಗರ್ಭನಿರೋಧಕ ಇಂಜೆಕ್ಷನ್
  9. ಗರ್ಭನಿರೋಧಕ ಪ್ಯಾಚ್
  10. ಗರ್ಭನಿರೋಧಕ ರಿಂಗ್
  11. ಗರ್ಭಾಶಯದ ಒಳಗಿನ ಸಾಧನಗಳು
  12. ಗರ್ಭಾಶಯದ ಒಳಗಿನ ವ್ಯವಸ್ಥೆಗಳು
  13. ಸ್ತ್ರೀ ಸಂತಾನ ಶಕ್ತಿಹರಣ[]
  14. ಪುರುಷ ಸಂತಾನ ಶಕ್ತಿಹರಣ[]
  15. ತುರ್ತು ಗರ್ಭನಿರೋಧಕಗಳು
  16. ಡಯಾಫ್ರಮ್ (ವಪೆ)
  17. ಗರ್ಭಕಂಠದ ಕ್ಯಾಪ್

ಪುರುಷರಿಗೂ ಸಂತಾನ ನಿಯಂತ್ರಣ ಮಾತ್ರೆ

[ಬದಲಾಯಿಸಿ]
  • ಅನೈಚ್ಛಿಕ ಗರ್ಭ ಧರಿಸುವುದನ್ನು ತಪ್ಪಿಸಲು ದಶಕಗಳಿಂದಲೇ ಮಹಿಳೆಯರೇ ಸೇವಿಸುವ ಗುಳಿಗೆಗಳನ್ನು ಒದಗಿಸಲಾಗುತ್ತಿತ್ತು. ಈಗ, ಮಾರುಕಟ್ಟೆಯಲ್ಲಿ ಪುರುಷರು ಸೇವಿಸಬಹುದಾದ ಮಾತ್ರೆಯೊಂದು ಪ್ರವೇಶ ಪಡೆದಿದೆ ಎಂದು ಚಿಕಾಗೋ ನಗರದಲ್ಲಿ ನಡೆಸಿದ ಸಂಶೋಧನೆಯ ವಿವರಗಳಲ್ಲಿ ಪ್ರಕಟಿಸಲಾಗಿದೆ.
  • ಈ ಮಾತ್ರೆ ಅತ್ಯಂತ ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದೆ ಎಂದು ಕಂಡುಕೊಳ್ಳಲಾಗಿದೆ. ಸಂಶೋಧನೆಯಲ್ಲಿ ವಿವರಿಸಿದ ಪ್ರಕಾರ, ದಿನಕ್ಕೊಂದು ಈ ಮಾತ್ರೆಯನ್ನು ಸೇವಿಸಿದ ಪುರುಷರಲ್ಲಿ ಕೆಲವು ರಸದೂತಗಳ ಮಟ್ಟಗಳನ್ನು ಇತರ ದೀರ್ಘಾವಧಿಯ ಪರಿಣಾಮ ಬೀರುವ ಮಾತ್ರೆಗಳಂತೆಯೇ ಕಡಿಮೆ ಮಾಡುತ್ತದೆ.
  • ಈ ಮಾತ್ರೆ ಸೇವಿಸಿದವರಲ್ಲಿ ಟೆಸ್ಟಾಸ್ಟೆರೋನ್ ರಸದೂತದ ಪ್ರಮಾಣದಲ್ಲಿ ಕೊರತೆಯಾಗದಿರುವುದನ್ನು ಅಥವಾ ಹೆಚ್ಚಾಗದಿರುವುದನ್ನೂ ಖಚಿತಪಡಿಸಿದೆ. ಸಧ್ಯಕ್ಕಿನ್ನೂ ಈ ಮಾತ್ರೆ ಪ್ರಾಯೋಗಿಕ ಹಂತದಲ್ಲಿದ್ದು ಪುರುಷರಲ್ಲಿ ಲೈಂಗಿಕ ಆಸಕ್ತಿಯನ್ನು ಕಡಿಮೆ ಮಾಡದೇ ಕೇವಲ ಸಂತಾನಫಲದ ಸಾಧ್ಯತೆಯನ್ನು ಮಾತ್ರವೇ ಕಡಿಮೆ ಮಾಡುತ್ತದೆ ಎಂದು ತಿಳಿಸಲಾಗಿದೆ.
  • ಸಂಶೋಧನೆಯಲ್ಲಿ ಕಂಡುಕೊಂಡಂತೆ ದಿನವೂ ಸೇವಿಸಬಹುದಾದ ಈ ಮಾತ್ರೆಯನ್ನು ಪುರುಷರು ಆಯ್ಕೆ ಮಾಡಿಕೊಳ್ಳಲು ಕಾರಣ ಇದರ ಪರಿಣಾಮ ತಾತ್ಕಾಲಿಕವಾಗಿದ್ದು ಮುಂದೆ ಸಂತಾನದ ಅಪೇಕ್ಷೆಯಿದ್ದಲ್ಲಿ ಮಾತ್ರೆಯ ಸೇವನೆ ನಿಲ್ಲಿಸಿದರೆ ಸಾಕು, ಈ ಪರಿಣಾಮ ಹಿಂದೆ ಸರಿಯುತ್ತದೆ.

ವಿಶ್ವ ಸಂತಾನ ನಿಯಂತ್ರಣ ದಿನ

[ಬದಲಾಯಿಸಿ]

ಸೆ.26 ರಂದು ವಿಶ್ವ ಸಂತಾನ ನಿಯಂತ್ರಣ ದಿನವನ್ನು ಆಚರಿಸಲಾಗುತ್ತದೆ. ವಿಜ್ಞಾನ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಹೊಸ ಪ್ರಯೋಗಗಳು ಜನಸಂಖ್ಯೆ ನಿಯಂತ್ರಣಕ್ಕೆ ಹೊಸ ಮಾರ್ಗಗಳನ್ನು ಕಂಡು ಕೊಳ್ಳಲು ಸಹಾಯಕಾರಿಯಾಗಿದ್ದು, ಈ ವರೆಗೂ ಜನಸಂಖ್ಯೆ ನಿಯಂತ್ರಕ್ಕೆ ಬಳಕೆ ಮಾಡಲಾಗುತ್ತಿದ್ದ ಕಾಂಡೋಮ್, ಮಾತ್ರೆಗಳಿಗಿಂತಲೂ ಸುಧಾರಿತ ವಿಧಾನಗಳನ್ನು ಕಂಡುಹಿಡಿಯಲಾಗಿದೆ.

ಸಂತಾನ ನಿಯಂತ್ರಣದ ಹೊಸ ವಿಧಾನಗಳು

[ಬದಲಾಯಿಸಿ]
  • ಹೊಸ ವಿಧಾನದಲ್ಲಿ ಜನಸಂಖ್ಯೆ ನಿಯಂತ್ರಣಕ್ಕಾಗಿ ಕಾಂಡೋಮ್ ಹಾಗೂ ಮಾತ್ರೆಗಳ ಅಗತ್ಯವಿರುವುದಿಲ್ಲ. ಬದಲಾಗಿ ವಜಿನಲ್‌ ರಿಂಗ್ ನ್ನು ಬಳಕೆ ಮಾಡಲಾಗುತ್ತದೆ. ಸಣ್ಣ ಪ್ರಮಾಣದಲ್ಲಿ ಹಾರ್ಮೋನುಗಳನ್ನು ಬಿಡುಗಡೆ ಮಾಡುವ ಪ್ಲಾಸ್ಟಿಕ್ ರಿಂಗ್ ಮಾದರಿಯಲ್ಲಿರಲಿರುವ ವಜಿನಲ್ ರಿಂಗ್‍ನ್ನು ಗರ್ಭ ನಿರೋಧಕವಾಗಿ ಬಳಕೆ ಮಾಡಲಾಗುತ್ತಿದೆ.
  • ವಜಿನಲ್ ರಿಂಗ್ ಬಳಕೆಯಿಂದ ಬಂಜೆತನ ಉಂಟಾಗುವ ಆತಂಕವೂ ಇರುವುದಿಲ್ಲ ಎನ್ನುತ್ತಾರೆ ವೈದ್ಯರು. ವಜಿನಲ್ ರಿಂಗ್ ನ್ನು ಮಹಿಳೆಯರೇ ಅಳವಡಿಸಿಕೊಳ್ಳಬಹುದಾಗಿದ್ದು, ದೀರ್ಘಾವಧಿಯಲ್ಲಿ ಅಗತ್ಯವಿದ್ದರೆ ವೈದ್ಯರು ಹಾಗೂ ನರ್ಸ್ ಗಾಲ ಸಹಾಯದಿಂದ ಅಳವಡಿಸಿಕೊಳ್ಳಬಹುದಾಗಿದೆ.
  • ನಗರ ಪ್ರದೇಶಗಳ ಮಹಿಳೆಯರು ವಜಿನಲ್ ರಿಂಗ್ ಬಳಕೆ ಮಾಡುವ ಹೊಸ ವಿಧಾನವನ್ನು ಹೆಚ್ಚು ಬಳಸುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಈ ಹೊಸ ವಿಧಾನ ಇನ್ನು ಜನಪ್ರಿಯವಾಗಿಲ್ಲ ಎನ್ನುತ್ತಾರೆ ಪಬ್ಲಿಕ್ ಹೆಲ್ತ್ ಕ್ಷೇತ್ರಕ್ಕೆ ಸಂಬಂಧಿಸಿದ ಎನ್ ಜಿ ಒ ದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಿತಾ ವಿಕ್ಟರ್.

ಸಂತಾನ ನಿಯಂತ್ರಣದಿಂದಾಗುವ ಅಪಾಯಗಳು

[ಬದಲಾಯಿಸಿ]
  1. ಮಹಿಳೆಯರು ಅಥವಾ ಪುರುಷರು ಧೂಮಪಾನ ಮಾಡಿ ಮತ್ತು ಸಂತಾನ ನಿಯಂತ್ರಣ ಮಾತ್ರೆ ತೆಗೆದುಕೊಂಡರೆ ಲಕ್ವ ಹೊಡೆಯುವ ಗಂಡಾಂತರ ಹೆಚ್ಚು.
  2. ಗರ್ಭಧಾರಣೆಯ ಮುಕ್ತಾಯ
  3. ಕಾನೂನು ಗರ್ಭಪಾತ
  4. ಋತುಚಕ್ರ ಇಂಡಕ್ಷನ್
  5. ಎಕ್ಸ್ಟ್ರಾ ಗರ್ಭಕೋಶದ ಗರ್ಭಧಾರಣೆಯ ರಕ್ತಸ್ರಾವ
  6. ಮರುಕಳಿಸುವ ಬಹುಮತದೊಂದಿಗೆ ಗರ್ಭನಿರೋಧಕ
  7. ಗ್ಯಾಸ್ಟ್ರಿಕ್ ಹುಣ್ಣು
  8. ಹೆಂಗಸರಿಗೆ ಸ್ತನ ಕ್ಯಾನ್ಸರ್
  9. ರಕ್ತದ ನಿರ್ವಿಶೀಕರಣ
  10. ಎನ್ಎಸ್ಐಡಿ ಜಠರಗರುಳಿನ ಗಾಯ
  11. ಡ್ಯುವೋಡೆನಮ್ನ ಹುಣ್ಣು

ಉಲ್ಲೇಖ

[ಬದಲಾಯಿಸಿ]
  1. https://postcardkannada.com/the-dark-history-of-sterilisation-8-3-million-indians-were-forcefully-sterilised-in-just-a-year-by-sanjay-gandhi-this-was-15-times-the-number-of-people-sterilised-by-the-nazis/[ಶಾಶ್ವತವಾಗಿ ಮಡಿದ ಕೊಂಡಿ]
  2. "ಆರ್ಕೈವ್ ನಕಲು". Archived from the original on 2016-10-01. Retrieved 2018-05-29.
  3. https://www.healerpro.com/glossary/sexual-health?lang=kn[ಶಾಶ್ವತವಾಗಿ ಮಡಿದ ಕೊಂಡಿ]
  4. "ಆರ್ಕೈವ್ ನಕಲು". Archived from the original on 2012-08-29. Retrieved 2018-05-29.
  5. "ಆರ್ಕೈವ್ ನಕಲು". Archived from the original on 2009-11-21. Retrieved 2018-05-29.
  6. http://www.varthabharati.in/article/vishesha-varadigalu/69381