ವೈ-20 ವಿಮಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ಸಿಯಾನ್ ವೈ-20 ವಿಮಾನ[ಬದಲಾಯಿಸಿ]

*Y-20;ವೈ20 ಹೆಸರಿನ ಚೀನಾದ ಅತಿದೊಡ್ಡ ಲಗ್ಗೇಜು ಯುದ್ಧವಿಮಾನ:
ಚಿಯಾನ್‍ ವೈ20 ವಿಮಾನದ ವಿವರ
  • ಒಟ್ಟು ಉದ್ದ: 47 ಮೀಟರ್;
  • ಭಾರ: 100 ಟನ್;
  • ವೇಗ: ಗಂ.ಗೆ 800ಕಿ.ಮೀ.;
  • ರೆಕ್ಕೆಗಳ ಉದ್ದ :45ಮೀ;
  • ಸಾಮರ್ಥ್ಯ: 200 ಟನ್ ಭಾರ;
  • ನಿರ್ಮಾಣ: ಕ್ರಿಯಾಸ್ ಏರ್‍ಕ್ರಾಫ್ಟ್ ಇಂಡಸ್ಟ್ರಿ ಕಾರ್ಪೋರೇಶನ್;
  • ಮೊದಲ ಹಾರಾಟ:26-1-2013;
  • ವಾಯಪಡೆಗೆ ಸೇರ್ಪಡೆ:6-7-2016;
  • ಹಾರಾಟ:13ಕಿಮೀ.ಎತ್ತರದವರೆಗೆ.;
  • ಹಾರಾಟ ದೂರ:4400 ರಿಂದ 4500 ಕಿ.ಮೀ.
  • .[೧]
  • ಕ್ಸಿಯಾನ್ ವೈ-20 (ಚೀನೀ: 运 -20) ಒಂದು ದೊಡ್ಡ ಸೇನಾ ಸಾಗಣೆಯ ವಿಮಾನವಾಗಿದೆ. ಈ ಚೀನಾದ ವಿಮಾನ ಯೋಜನೆಯು ಕ್ಸಿಯಾನ್ ವಿಮಾನ ಇಂಡಸ್ಟ್ರಿಯಲ್ ಕಾರ್ಪೊರೇಷನ್ ಅಭಿವೃದ್ಧಿ ಮಾಡುತ್ತಿದೆ. ಅಧಿಕೃತವಾಗಿ 2006 ರಲ್ಲಿ ಅದು ಆರಂಭವಾಗಿದೆ. ವಿಮಾನದ ಅಧಿಕೃತ ಸಂಕೇತನಾಮ ಕುನ್‍ಪೆಂಗ್ (ಚೀನೀ: 鲲 鹏) ಇದು ಪ್ರಾಚೀನ ಚೀನದ ಸಾವಿರಾರು ಕಿಲೋಮೀಟರ್ ಹಾರಬಲ್ಲ ಪೌರಾಣಿಕ ಪಕ್ಷಿಯ ಹೆಸರು. ಆದರೆ, ಚೀನೀ ವಿಮಾನಯಾನ ಉದ್ಯಮದಲ್ಲಿ ಈ ವಿಮಾನದ ಅಡ್ಡಹೆಸರು ಸಾಮಾನ್ಯವಾಗಿ ಚುಬ್ಬಿ ಗರ್ಲ್ (ಚೀನೀ: 胖妞) ಎಂದು ಕರೆಯಲಾಗುತ್ತದೆ. ಏಕೆಂದರೆ ಹಿಂದಿನ ಚೀನೀ ವಿಮಾನಗಳಿಗೆ ಹೋಲಿಸಿದರೆ ಈ ಚೀನಾ ವಿಮಾನ ಪ್ರಯಾಣಿಕರ/ಸೈನಿಕರನ್ನು ಮತ್ತು ಲಗ್ಗೇಜುಗಳನ್ನು ತುಂಬುವ/ಹೊರುವ ಅದರ ವಿಶಾಲ ಮೈಕಟ್ಟಿನ ಸಾಮರ್ಥ್ಯ ಬಹಳ ದೊಡ್ಡದು.

ವಿನ್ಯಾಸಕಾರರು[ಬದಲಾಯಿಸಿ]

  • ವೈ-20 ವಿಮಾನದ ಸಾಮಾನ್ಯ ಡಿಸೈನರ್ ಟ್ಯಾಂಗ್ ಚಾಂಗ್ ಹೊಂಂಗ್(ಚೀನೀ: 唐 长 红) (ಸಾಮಾನ್ಯ ಕ್ಸಿಯಾನ್ ಜೆಎಚ್ -7 ವಿನ್ಯಾಸಕ), ಮತ್ತು ಉಪ ಪ್ರಧಾನ ಡಿಸೈನರ್ ಗುವೋ ಜವೋಡಿಯನ್. (ಚೀನೀ: 郭兆 电). [7] ಈ ವಿಮಾನವು ಚೀನಾದಲ್ಲಿ ಪ್ರಾಥಮಿಕವಾಗಿ ಕ್ಸಿಯಾನ್ ವಿಮಾನ ಇಂಡಸ್ಟ್ರಿಯಲ್ ಕಾರ್ಪೊರೇಷನ್’ನಿಂದ ಡಿಸೈನ್ ಕಂಪನಿಯಿಂದ ಅಭಿವೃದ್ಧಿಪಡಿಸಲಾಯಿತು.[೨][೩][೪]

ಚಿತ್ರಗಳು:[[೧]]

ವಿವರ[ಬದಲಾಯಿಸಿ]

  • 47 ಮೀಟರೆ ಉದ್ದವಿರುವ ಈವಿಮಾನ ಪ್ರಯಾಣೀಕರೂ/ಸೈನಿಕರೂ ಸೇರಿ 100 ಟನ್ (1,00,000ಕಿ.ಕ್ರಾಮ್) ಭಾರ ಹೊರಬಲ್ಲದು. ಇದೇ ಬಗೆಯ ಲಗ್ಗೇಜ್ ವಿಮಾನವಾದ ಅಮೇರಿಕಾದ ಸಿ 17 ಮತ್ತು ರಷ್ಯಾದ ಐಎಲ್ 76ಕ್ಕಿಂತ ದೊಡ್ಡದು.ಇದು ಚೀನಾದ ಸ್ವದೇಶೀ ನಿರ್ಮಿತ ವಿಮಾನ.

ವೈ-20[ಬದಲಾಯಿಸಿ]

  • ಚೀನಾದ 703 ತಾಂತ್ರಿಕ ಸಂಸ್ಥೆಗಳು ವೈ-20 ವಿಮಾನಕ್ಕೆ ಬೇಕದ ಸಂಯೋಜಿತ ಸಂಯುಕ್ತ ವಸ್ತುಗಳಿಂದ ಮಾಡಿದ ಅಗ್ನಿ ಪ್ರತಿರೋಧಕ ಘಟಕಗಳನ್ನು ಬಳಸುತ್ತದೆ. ಆದರೆ ಹಿಂದೆ ಅವರು ಸಂಯೋಜಿತ ವಸ್ತುಗಳನ್ನು ಆಮದು ಮಾಡಿಕೊಳ್ಳಬೇಕಿತ್ತು, ಈಗ ಚೀನಾದಲ್ಲಿ ಚೀನಾ 703 ಏರೋಸ್ಪೇಸ್ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳಲ್ಲಿ (ಸಿಎಎಸ್’ಸಿ) ಉತ್ಪಾದಿಸಲಾಗುತ್ತದೆ. ಈ 703 ಇನ್ಸ್ಟಿಟ್ಯೂಟ್’ನ್ನು ಮಾರ್ಚ್ 2009 ರಲ್ಲಿ ಸ್ಥಾಪಿಸಲಾಯಿತು. ಆರಂಭಗೊಂಡು ಮೂರು ವರ್ಷಗಳಲ್ಲಿ ಅಭಿವೃದ್ಧಿಪಡಿಸಲಾಯಿತು. ಸಂಯೋಜಿತ ವಸ್ತುಗಳನ್ನು ಎಫ್‍ಎಆರ್ ಭಾಗ 25,835 ವರದಿಯ ವಸ್ತುಗಳಿಗೆ ಹೋಲಿಸಬಹುದು. 703 ಇನ್ಸ್ಟಿಟ್ಯೂಟ್ ಅಂತರರಾಷ್ಟ್ರೀಯ ಗುಣಮಟ್ಟದ ಹೋಲಿಕೆಗೆ ಆಧರಿಸಿದ ವಿಮಾನದ ಸಂಯುಕ್ತ ಸಾಮಗ್ರಿಗಳಿಗಳನ್ನು ಚೀನೀ ಮೌಲ್ಯಮಾಪನ ಮತ್ತು ಸಮಗ್ರ ಪ್ರಮಾಣೀಕರಣ ಸ್ಥಾಪಿಸುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.
  • ವೈ-20 3 ಡಿ ಮುದ್ರಣ ತಂತ್ರಜ್ಞಾನ ಬಳಸುವ ಮೊದಲ ಸರಕು ವಿಮಾನ. ಅದರಿಂದ ಅದು ಅದರ ಅಭಿವೃದ್ಧಿ ವೇಗವನ್ನು ಪಡೆದಿದೆ ಮತ್ತು ಅದರ ಉತ್ಪಾದನಾ ವೆಚ್ಚ ಕಡಿಮೆ ಆಗಿದೆ. ಎಂಬಿಡಿ ಮಾದರಿ ಆಧಾರಿತ ವ್ಯಾಖ್ಯಾನವನ್ನು (ಎಂಬಿಡಿ-ಮೊಡಲ್ ಬೇಸದ್ ಡೆಫೆನಿಶನ್) ಕೂಡ ಬಳಸಲಾಗುತ್ತದೆ, ಮತ್ತು ಇದು ವಿಶ್ವದಲ್ಲಿ. ಬೋಯಿಂಗ್ 787(2005) ಮತ್ತು ಏರ್ಬಸ್ ಂ380 (2007) ರ ನಂತರ ಎಂಬಿಡಿ ತಂತ್ರಜ್ಞಾನ ಬಳಸಿಕೊಳ್ಳುವ 3ನೇ ವಿಮಾನ. ಆರಂಭಿಕ ಯಶಸ್ಸಿನ ನಂತರ ವೈ-20 ಗೆ ಎಂಬಿಡಿ ಪ್ರೋಗ್ರಾಂ ಜಾರಿಯನ್ನು ವಿಧ್ಯುಕ್ತವಾಗಿ ಅಕ್ಟೋಬರ್ 2009 ರಲ್ಲಿ ನಿಯೋಜಿಸಲಾಯಿತು, ನಂತರ ಎಂಬಿಡಿ ಅಪ್ಲಿಕೇಶನ್’ನ್ನು & ಮುಖ್ಯ ಲ್ಯಾಂಡಿಂಗ್ ಅಪ್ಲಿಕೇಶನ್‍ನ್ನು ಎಲ್ಲಾ ವಿಮಾನಗಳಿಗೆ ವಿಸ್ತರಿಸಲಾಯಿತು. ಈ ಅನುಷ್ಠಾನಕ್ಕೆ ಆರಂಭದಲ್ಲಿ ಬಲವಾದ ಪ್ರತಿರೋಧ ಎದುರಾಗಿತ್ತು. ಅನೇಕ ಗುತ್ತಿಗೆದಾರರು ಮತ್ತು ವೈ-20 ಕಾರ್ಯಕ್ರಮದ ಉಪ ಗುತ್ತಿಗೆದಾರರು ವಿರೋಧಿಸಿದವು. ಕೇವಲ ಮೂರನೇ ಒಂದು ಯೋಜನಾ ತಂಡ ಒಪ್ಪಿತ್ತು. ಈ ನಿಯಮ ಅನುಸರಿಸಲು ನಿರಾಕರಿಸುವವರನ್ನು ನಿಷೇಧಿಸಲಾಗುವುದೆಂದು ಜನರಲ್ ಸಂಯೋಜಕರು ಘೋಷಿಸಿದರು. ಆಗ ಎಂಬಿಡಿ ವ್ಯವಸ್ಥೆ ಕಾರ್ಯಗತಗೊಳಿಸಲು ಎಲ್ಲರೂ ಒಪ್ಪಿದರು. ಹೀಗೆ ಸಾಮಾನ್ಯ ಡಿಸೈನರ್, ಒತ್ತಡದಿಂದ ವೈ -20 ಉತ್ಪಾದಕತೆಯಲ್ಲಿ ಎಲ್ಲರೂ ಭಾಗವಹಿಸಿದ್ದರ ಪರಿಣಾಮವಾಗಿ ಕಡಿಮೆ ಸಮಯದಲ್ಲಿ ವೈ -20 ನ ಅಭಿವೃದಿಯನ್ನ್ಧು ಸಾಧಿಸಲಾಯಿತು. ಎಂಬಿಡಿ ಅನುಷ್ಠಾನಕ್ಕೆ ಸಂಕ್ಷಿಪ್ತ ಉದಾಹರಣೆ: ಎಂಬಿಡಿ ಇಲ್ಲದೆ, ರೆಕ್ಕೆಗಳ ಅನುಸ್ಥಾಪನೆಗೆ ಒಂದು ತಿಂಗಳು ಅಗತ್ಯವಿದೆ,ಅಥವಾ ಎರಡು ತಿಂಗಳು ತೆಗೆದುಕೊಳ್ಳುತ್ತದೆ, ಆದರೆ ಎಂಬಿಡಿ ತಂತ್ರಜ್ಞಾನದಿಂದ ತೀವ್ರವಾಗಿ ಕೆಲವೇ ಗಂಟೆಗಳಲ್ಲಿ ಕೆಲಸ ಮುಗಿಯುವುದು. ಸಾಮಾನ್ಯವಾಗಿ ವಿನ್ಯಾಸ ಕೆಲಸ 40% ಕಡಿಮೆಯಾಗುವುದು. ನಿರ್ಮಾಣ ತಯಾರಿಯಲ್ಲಿ 75%, ಕಡಿಮೆ ಮತ್ತು ಉತ್ಪಾದನಾ ಸರಣಿವೇಗದಲ್ಲಿ 30% ರಷ್ಟು ಕಡಿಮೆಯಾಗುವುದು. 3 ಡಿ ಮುದ್ರಣ ಜೊತೆಗೆ, ವೈ-20 ಚೀನಾ ತನ್ನ ಅಭಿವೃದ್ಧಿ ಸಹಾಯಕ ವಿನ್ಯಾಸ ತಂತ್ರಜ್ಞಾನ (associative design technology-ADT) ಅಳವಡಿಸಿಕೊಂಡ ಎರಡನೇ ವಿಮಾನ; ಆದ್ದರಿಂದ ವಿಶ್ವದ ಬೋಯಿಂಗ್ 787 ಮೊದಲ ವಿಮಾನ, ಇದು ನಂತರದ ಮಾಡಲು. [೫]
ಚೀನಾ, ಪ್ಯಾರಾಟ್ರೂಪುಗಳನ್ನೂ ಅವರಿಗೆ ಬೇಕಾದ ಸಾಮಗ್ರಿಗಳನ್ನೂ 10,000 ಕಿಮೀ.ದೂರ ಹೊತ್ತೊಯ್ಯುವ ಒಂದು ಸಾವಿರ ಈ ಬಗೆಯ ಸಾಗಾಣಿಕೆ ಯುದ್ಧ ವಿಮಾನಗಳನ್ನು ತನ್ನ ಸೈನ್ಯಕ್ಕೆ ಒದಗಿಸುವ ಯೋಜನೆ ಹೊಂದಿದೆ.

ಸಾಮಾನ್ಯ ಗುಣಲಕ್ಷಣಗಳು[ಬದಲಾಯಿಸಿ]

ಸಾಮಾನ್ಯ ಗುಣಲಕ್ಷಣಗಳು
  • ವಿಮಾನ ಸಿಬ್ಬಂದಿ: 3: ಪೈಲಟ್, copilot & ಲೋಡ್ ಮಾಸ್ಟರ್
  • ಪೇಲೋಡ್ (ಭಾರ ಅಡಕ): 66 ಟನ್; (145,505 ಪೌಂಡ್)
  • ಉದ್ದ: 47 ಮೀ. (154.2 ಅಡಿ)
  • ರೆಕ್ಕೆಯ ಅಗಲ: 45 ಮೀ. (147 ಅಡಿ ~ 164 ಅಡಿ)
  • ಎತ್ತರ: 15 ಮೀ (49.2 ಅಡಿ)
  • ವಿಂಗ್ ಏರಿಯಾ: 330m² ಗೆ (3337 ft²)
  • ಖಾಲಿ ತೂಕ 100,000 ಕೆಜಿ (220,400 ಪೌಂಡ್)
  • ಉಡ್ಡಯನ ತೂಕ-ಅಂತಿಮ ತೂಕಮಿತಿ: 220,000 ಕೆಜಿ (485,000 ಪೌಂಡ್)
  • ಸ್ಧಾವರ: 4×Soloviev ಡಿ 30KP -2(WS-18 ಭವಿಷ್ಯದ ಯೋಜನೇತರ) ಪಂಖದ ಜೆಟ್ಗಳು
ಕ್ರಿಯಾಶೀಲತೆ
  • ಕ್ರೂಸ್ ವೇಗ: ಮ್ಯಾಕ್ 0.75 (918 ಕಿಮೀ / ಗಂ)
  • ವ್ಯಾಪ್ತಿ: ಗರಿಷ್ಠ ಸರಕಿನ ಭಾಗದೊಂದಿಗೆ 4,500 ಕಿ; 40 ಟನ್ 7800 ಕಿ; 10,000 ಪ್ಯಾರಾಟ್ರೂಪ್ಗಳ ಜೊತೆ ಕಿ.
  • ಸೇವೆಯ ಎತ್ತರಮಿತಿ: 13,000 ಮೀ (42,700 ಅಡಿ)
  • ರೆಕ್ಕೆ ಲೋಡ್ಸ(ಸಂಗ್ರಹ)ಮಿತಿ: 710kg/m²(145 ಪೌಂಡು/ft²)

[೬]

ನೋಡಿ[ಬದಲಾಯಿಸಿ]

ವಿಮಾನಯಾನದ ಇತಿಹಾಸ

ಉಲ್ಲೇಖ[ಬದಲಾಯಿಸಿ]

  1. ಪ್ರಜಾವಾಣಿ,೭-೭-೨೦೧೬[[೨]]
  2. "China's first heavy transporter Y-20 takes off". english.people.com.cn.26 Jan 2013.[[೩]]
  3. ir Transportation: China Hits Another Major Milestone". StrategyPage. 21 February 2013. Retrieved 5 May 2015.
  4. http://www.janes.com/article/62064/chinese-air-force-inducts-y-20-transport-aircraft-into-service
  5. Air Transportation: China Hits Another Major Milestone". StrategyPage. 21 February 2013. Retrieved 5 May 2015.[[೪]]
  6. Chinese air force inducts Y-20 transport aircraft into serviceGabriel Dominguez, London - IHS Jane's Defence Weekly 07 July 2016[[೫]]