ವಿಷಯಕ್ಕೆ ಹೋಗು

ವೇದನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಶಾಲ ಅರ್ಥದಲ್ಲಿ, ವೇದನೆ ಎಂದರೆ ಒಬ್ಬ ವ್ಯಕ್ತಿಯಲ್ಲಿ ಕೇಡು ಅಥವಾ ಕೇಡಿನ ಬೆದರಿಕೆಯ ಗ್ರಹಿಕೆಗೆ ಸಂಬಂಧಿಸಿದ ಅಹಿತಕರವಾಗಿರುವಿಕೆ ಮತ್ತು ಹೇವರಿಕೆಯ ಅನುಭವವಾಗಿರಬಹುದು.[] ವೇದನೆಯು ಭಾವಾತ್ಮಕ ವಿದ್ಯಮಾನಗಳ ನಕಾರಾತ್ಮಕ ಮೌಲ್ಯವನ್ನು ರಚಿಸುವ ಮೂಲವಸ್ತುವಾಗಿದೆ. ಸಂತೋಷ ಅಥವಾ ಸುಖ ವೇದನೆಯ ವಿರುದ್ಧಾರ್ಥಕ ಪದವಾಗಿದೆ.

ವೇದನೆಯನ್ನು ಹಲವುವೇಳೆ ದೈಹಿಕ ಅಥವಾ ಮಾನಸಿಕ ಎಂದು ವರ್ಗೀಕರಿಸಲಾಗುತ್ತದೆ. ಇದು ತೀವ್ರತೆಯ ಎಲ್ಲ ಪ್ರಮಾಣಗಳಲ್ಲಿ ಬರಬಹುದು, ಸೌಮ್ಯದಿಂದ ಅಸಹನೀಯದವರೆಗೆ. ಕಾಲಾವಧಿ ಮತ್ತು ಸಂಭವಿಸುವ ಪುನರಾವರ್ತನೆಯ ಅಂಶಗಳು ಸಾಮಾನ್ಯವಾಗಿ ತೀವ್ರತೆಯ ಅಂಶಗಳನ್ನು ಹೆಚ್ಚಿಸುತ್ತವೆ. ವೇದನೆಯ ಬಗ್ಗೆ ದೃಷ್ಟಿಕೋನಗಳು ವೇದನೆಪಡುವವನು ಅಥವಾ ಇತರರಲ್ಲಿ, ಅದು ಎಷ್ಟು ತಪ್ಪಿಸಬಹುದಾದ್ದು ಅಥವಾ ತಪ್ಪಿಸಲಾರದ್ದು, ಉಪಯುಕ್ತ ಅಥವಾ ನಿರುಪಯೋಗಿ, ಅರ್ಹ ಅಥವಾ ಅರ್ಹವಲ್ಲದ್ದು ಎಂದು ಪರಿಗಣಿಸಲಾದ ಪ್ರಕಾರ ವ್ಯಾಪಕವಾಗಿ ಬದಲಾಗುತ್ತವೆ.

ಸಚೇತನ ಜೀವಿಗಳ ಜೀವನದಲ್ಲಿ ವೇದನೆಯು ಅನೇಕ ರೀತಿಗಳಲ್ಲಿ ಉಂಟಾಗುತ್ತದೆ, ಹಲವುವೇಳೆ ನಾಟಕೀಯವಾಗಿ. ಪರಿಣಾಮವಾಗಿ, ಮಾನವ ಚಟುವಟಿಕೆಯ ಅನೇಕ ಕ್ಷೇತ್ರಗಳು ವೇದನೆಯ ಕೆಲವು ಅಂಶಗಳಿಗೆ ಸಂಬಂಧಿಸಿವೆ. ಈ ಅಂಶಗಳು ವೇದನೆಯ ಸ್ವರೂಪ, ಅದರ ಪ್ರಕ್ರಿಯೆಗಳು, ಅದರ ಮೂಲ ಹಾಗೂ ಕಾರಣಗಳು, ಅದರ ಅರ್ಥ ಹಾಗೂ ಮಹತ್ವ, ಅದರ ಸಂಬಂಧಿತ ವೈಯಕ್ತಿಕ, ಸಾಮಾಜಿಕ, ಹಾಗೂ ಸಾಂಸ್ಕೃತಿಕ ವರ್ತನೆಗಳು, ಅದರ ಪರಿಹಾರಗಳು, ನಿರ್ವಹಣೆ, ಮತ್ತು ಉಪಯೋಗಗಳನ್ನು ಒಳಗೊಂಡಿರಬಹುದು.

ವೇದನೆ ಶಬ್ದವನ್ನು ಕೆಲವೊಮ್ಮೆ ದೈಹಿಕ ನೋವು ಎಂಬ ಸಂಕುಚಿತ ಅರ್ಥದಲ್ಲಿ ಬಳಸಲಾಗುತ್ತದೆ, ಆದರೆ ಹೆಚ್ಚು ವೇಳೆ ಇದು ಮಾನಸಿಕ ನೋವನ್ನು ಸೂಚಿಸುತ್ತದೆ, ಅಥವಾ ಇನ್ನೂ ಹೆಚ್ಚು ವೇಳೆ ವಿಶಾಲ ಅರ್ಥದಲ್ಲಿ ಇದು ನೋವನ್ನು ಸೂಚಿಸುತ್ತದೆ, ಅಂದರೆ ಯಾವುದೇ ಅಹಿತಕರ ಅನಿಸಿಕೆ, ಭಾವನೆ ಅಥವಾ ಸಂವೇದನೆಯನ್ನು. ನೋವು ಶಬ್ದವು ಸಾಮಾನ್ಯವಾಗಿ ದೈಹಿಕ ನೋವನ್ನು ಸೂಚಿಸುತ್ತದೆ, ಆದರೆ ಇದು ವೇದನೆ ಶಬ್ದದ ಸಾಮಾನ್ಯ ಸಮಾನಾರ್ಥಕ ಪದವೂ ಆಗಿದೆ. ಹಲವುವೇಳೆ ನೋವು ಮತ್ತು ವೇದನೆ ಪದಗಳೆರಡನ್ನೂ ಒಟ್ಟಾಗಿ ವಿಭಿನ್ನ ರೀತಿಗಳಲ್ಲಿ ಬಳಸಲಾಗುತ್ತದೆ. ಉದಾಹರಣೆಗೆ, ಅವುಗಳನ್ನು ಪರಸ್ಪರವಾಗಿ ಬದಲಾಯಿಸಬಲ್ಲ ಸಮಾನಾರ್ಥಕ ಪದಗಳಾಗಿ ಬಳಸಬಹುದು.

ದೈಹಿಕ, ಮಾನಸಿಕ, ಭಾವನಾತ್ಮಕ, ಮತ್ತು ಮನೋವೈಜ್ಞಾನಿಕದಂತಹ ವಿಶೇಷಕಗಳನ್ನು ಹಲವುವೇಳೆ ನಿರ್ದಿಷ್ಟ ಪ್ರಕಾರಗಳ ನೋವು ಅಥವಾ ವೇದನೆಯನ್ನು ಸೂಚಿಸಲು ಬಳಸಲಾಗುತ್ತದೆ. ವಿಶೇಷವಾಗಿ, ನೋವಿನ ಎರಡು ವಿಶಾಲ ವರ್ಗಗಳ ನಡುವೆ ವ್ಯತ್ಯಾಸಮಾಡಲು ಮಾನಸಿಕ ನೋವು (ಅಥವಾ ವೇದನೆ) ಪದವನ್ನು ದೈಹಿಕ ನೋವು (ಅಥವಾ ವೇದನೆ) ಪದದ ಸಂಬಂಧದಲ್ಲಿ ಬಳಸಬಹುದು.

ಟಿಪ್ಪಣಿಗಳು ಮತ್ತು ಉಲ್ಲೇಖಗಳು

[ಬದಲಾಯಿಸಿ]
  1. For instance, Wayne Hudson in Historicizing Suffering, Chapter 14 of Perspectives on Human Suffering (Jeff Malpas and Norelle Lickiss, editors, Springer, 2012) : "According to the standard account suffering is a universal human experience described as a negative basic feeling or emotion that involves a subjective character of unpleasantness, aversion, harm or threat of harm to body or mind (Spelman 1997; Cassell 1991)."


"https://kn.wikipedia.org/w/index.php?title=ವೇದನೆ&oldid=830604" ಇಂದ ಪಡೆಯಲ್ಪಟ್ಟಿದೆ