ವಿಷಯಕ್ಕೆ ಹೋಗು

ವೆಸ್ಟ್‌ಮಿನ್‌ಸ್ಟರ್‌ ಸೇತುವೆ

Coordinates: 51°30′03″N 0°07′19″W / 51.50083°N 0.12194°W / 51.50083; -0.12194
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

51°30′03″N 0°07′19″W / 51.50083°N 0.12194°W / 51.50083; -0.12194

ವೆಸ್ಟ್‌ಮಿನ್‌ಸ್ಟರ್‌ ಸೇತುವೆ
River Thames: the bridge nearest the camera is Westminster Bridge, the next bridge is Lambeth Bridge, and bridge just visible in the distance is Vauxhall Bridge
(as seen from the London Eye observation wheel)
ಸಾಗಾಣೆMotor vehicles
Pedestrians
ದಾಟುRiver Thames
ಪ್ರಾದೇಶಿಕಲಂಡನ್, ಇಂಗ್ಲೆಂಡ್
ವಿನ್ಯಾಸArch Bridge
ತೆರವು೧೮೬೨
ಪಾರಂಪರಿಕ ಸ್ಥಿತಿGrade II* listed structure
ಕ್ಯಾನಲೆಟ್ಟೊ 1746ರಲ್ಲಿ ಚಿತ್ರಿಸಿದ ಮೊದಲ ವೆಸ್ಟ್‌ಮಿನ್‌ಸ್ಟರ್‌ ಸೇತುವೆ.
ಸುಮಾರು 1750ರಲ್ಲಿ ಕಂಡುಬರುತ್ತಿದ್ದ ವೆಸ್ಟ್‌ಮಿನ್‌ಸ್ಟರ್‌ ಸೇತುವೆಸೇತುವೆಯ ಮಾಲೀಕರುಗಳು ಹಿಂದಿನ 'ಹಾರ್ಸ್ ಫೆರಿ' ನಿರ್ವಾಹಕರಿಗೆ, ಹಾಗು ಸ್ಥಳೀಯ ಅಂಬಿಗರಿಗೆ ಪರಿಹಾರ ನೀಡಬೇಕಿತ್ತು.
ಲ್ಯಾಂಬೆತ್ ಅರಮನೆ, ಲ್ಯಾಂಬೆತ್ ಸೇತುವೆ, ಸಂಸತ್ತಿನ ಸದನಗಳು ಹಾಗು ವೆಸ್ಟ್‌ಮಿನ್‌ಸ್ಟರ್‌ ಸೇತುವೆ ತೋರುತ್ತಿರುವ 1897ರ ನಕ್ಷೆ
ವೆಸ್ಟ್‌ಮಿನ್‌ಸ್ಟರ್‌ & ಲ್ಯಾಂಬೆತ್, 1746.ವೆಸ್ಟ್‌ಮಿನ್‌ಸ್ಟರ್‌ ಸೇತುವೆ 1740ರಲ್ಲಿ ಸಂಚಾರಕ್ಕೆ ಮುಕ್ತಗೊಂಡಿತು.ಇದು ವೆಸ್ಟ್‌ಮಿನ್‌ಸ್ಟರ್‌ ನಿಂದ ಲ್ಯಾಂಬೆತ್ ಗೆ ಸಂಪರ್ಕ ಕಲ್ಪಿಸುತ್ತದೆ, ಮುಂದೆ ವೌಕ್ಸ್ ಹಾಲ್ ಸೇತುವೆ ಎಂದು ಕರೆಯಲ್ಪಟ್ಟ ಪ್ರದೇಶದಲ್ಲಿನ ನದಿಯ ಮೇಲೆ ಹಂಟ್ಲೇ ಫೆರಿಯ ಸಂಚಾರ.
ರಾತ್ರಿ ಹೊತ್ತಿನಲ್ಲಿ ಕಂಡುಬರುವ ವೆಸ್ಟ್‌ಮಿನ್‌ಸ್ಟರ್‌ ಸೇತುವೆ ಹಾಗು ಸುತ್ತಮುತ್ತಲಿನ ಪ್ರದೇಶಗಳು.
J. M. W.ಟರ್ನರ್ ರಿಂದ 1835ರಲ್ಲಿ ದಿ ಬರ್ನಿಂಗ್ ಆಫ್ ದಿ ಹೌಸ್ ಆಫ್ ಲಾರ್ಡ್ಸ್ ಹಾಗು ಕಾಮನ್ಸ್, ಜೊತೆಗೆ ಬಲಬದಿಯಲ್ಲಿ ವೆಸ್ಟ್‌ಮಿನ್‌ಸ್ಟರ್ ಸೇತುವೆ ಕಂಡುಬರುತ್ತಿದೆ.

ವೆಸ್ಟ್‌ಮಿನ್‌ಸ್ಟರ್ ಸೇತುವೆ ಯು, ವೆಸ್ಟ್‌ಮಿನ್‌ಸ್ಟರ್, ಮಿಡಲ್ ಸೆಕ್ಸ್ ದಂಡೆ, ಹಾಗು ಲ್ಯಾಂಬೆತ್, ಸರ್ರಿ ದಂಡೆಯ ನಡುವೆ ಥೇಮ್ಸ್ ನದಿಗೆ ಅಡ್ಡಲಾಗಿ ಇರುವ ರಸ್ತೆ ಹಾಗು ಪಾದಚಾರಿ ಸಂಚಾರ ಸೇತುವೆಯಾಗಿದೆ. ಇದೀಗ ಇಲ್ಲಿ ಇಂಗ್ಲೆಂಡ್ ನ ಗ್ರೇಟರ್ ಲಂಡನ್ ಎಂಬ ಪ್ರದೇಶವು ಸ್ಥಿತವಾಗಿದೆ.

ಇತಿಹಾಸ

[ಬದಲಾಯಿಸಿ]

ಈ ಹಿಂದಿನಿಂದಲೂ ೬೦೦ ವರ್ಷಗಳಿಗೂ ಹೆಚ್ಚಿನ ಅವಧಿಗೆ ಲಂಡನ್ ಸೇತುವೆಗೆ ಹತ್ತಿರವಾದ ಒಂದು ಸೇತುವೆಯು ಕಿಂಗ್ಸ್ಟನ್ ನಲ್ಲಿತ್ತು. ವೆಸ್ಟ್‌ಮಿನ್‌ಸ್ಟರ್ ಸೇತುವೆ ನಿರ್ಮಾಣಕ್ಕೆ ೧೬೬೪ರಷ್ಟು ಹಿಂದೆಯೇ ಪ್ರಸ್ತಾಪ ಮಾಡಲಾಗಿತ್ತು. ಈ ಪ್ರಸ್ತಾಪಕ್ಕೆ ಕಾರ್ಪೋರೇಶನ್ ಆಫ್ ಲಂಡನ್ ಹಾಗು ಅಂಬಿಗರು ವಿರೋಧ ವ್ಯಕ್ತಪಡಿಸಿದ್ದರು. ಹೀಗೆ ೧೭೨೨ರಲ್ಲಿ, ಮತ್ತಷ್ಟು ಪ್ರತಿರೋಧಗಳ ನಡುವೆ ಹಾಗು ೧೭೨೯ರಲ್ಲಿ ಪುಟ್ನಿಯಲ್ಲಿ ಮರದ ದಿಮ್ಮಿಗಳಿಂದ ನಿರ್ಮಾಣಗೊಂಡ ಒಂದು ಹೊಸ ಸೇತುವೆಯ ನಂತರ, ಯೋಜನೆಗೆ ೧೭೩೬ರಲ್ಲಿ ಸಂಸದೀಯ ಅಂಗೀಕಾರ ದೊರೆಯಿತು. ಖಾಸಗಿ ಬಂಡವಾಳ, ಲಾಟರಿ ಹಾಗು ಅನುದಾನಗಳ ಧನಸಹಾಯದೊಂದಿಗೆ, ಸ್ವಿಸ್ಸ್ ವಾಸ್ತುಶಿಲ್ಪಿ ಚಾರ್ಲ್ಸ್ ಲಾಬೆಲ್ಯೇ ವಿನ್ಯಾಸಗೊಳಿಸಿದ ವೆಸ್ಟ್‌ಮಿನ್‌ಸ್ಟರ್ ಸೇತುವೆಯು, ೧೭೩೯-೧೭೫೦ರ ಅವಧಿಯಲ್ಲಿ ನಿರ್ಮಾಣಗೊಂಡಿತು.

ಲಂಡನ್ ನಗರವು, ವೆಸ್ಟ್‌ಮಿನ್‌ಸ್ಟರ್ ಸೇತುವೆಯ ನಿರ್ಮಾಣಕ್ಕೆ ಉತ್ತಮವಾಗಿ ಪ್ರತಿಕ್ರಿಯಿಸುವುದರ ಜೊತೆಗೆ ಲಂಡನ್ ಸೇತುವೆಯ ಮೇಲಿದ್ದ ಕಟ್ಟಡಗಳನ್ನು ತೆರವುಗೊಳಿಸಿ, ೧೭೬೦-೬೩ರ ನಡುವೆ ಸೇತುವೆಯನ್ನು ವಿಸ್ತಾರವಾಗಿ ನಿರ್ಮಾಣ ಮಾಡಿತು. ನಗರದಲ್ಲಿ ಬ್ಲ್ಯಾಕ್ ಫ್ರಿಯರ್ಸ್ ಸೇತುವೆಯ ನಿರ್ಮಾಣ ಕಾರ್ಯವೂ ಸಹ ಆರಂಭಗೊಂಡಿತು, ಇದು ೧೭೬೯ರಲ್ಲಿ ಸಂಚಾರಕ್ಕೆ ಮುಕ್ತವಾಯಿತು. ಆ ಅವಧಿಯಲ್ಲಿ ನಿರ್ಮಾಣಗೊಂಡ ಇತರ ಸೇತುವೆಗಳೆಂದರೆ ಕೆವ್ ಸೇತುವೆ (೧೭೫೯), ಬ್ಯಾಟರ್ ಸೀ ಸೇತುವೆ (೧೭೭೩), ಹಾಗು ರಿಚ್ಮಂಡ್ ಸೇತುವೆ (೧೭೭೭).

ಸೇತುವೆಯು, ದಕ್ಷಿಣ ಲಂಡನ್ ನ ಬೆಳವಣಿಗೆಗೆ ಹಾಗು ಈಗಾಗಲೇ ಕಿಕ್ಕಿರಿದ ವಾಹನ ದಟ್ಟಣೆಯಿಂದ ಕೂಡಿದ ಮಾರ್ಗಗಳಾದ ಸ್ಟ್ರ್ಯಾನ್ಡ್ ಹಾಗು ನ್ಯೂ ಆಕ್ಸ್ಫರ್ಡ್ ರಸ್ತೆಗಳ ಮೂಲಕ ಮತ್ತಷ್ಟು ಸಂಚಾರ ದಟ್ಟಣೆಯಾಗದಂತೆ ನಿರ್ಮಿಸಲಾಗಿತ್ತು.ನಂತರ ನಗರ ಹಾಗು ಲಂಡನ್ ಸೇತುವೆಯುದ್ದಕ್ಕೂ 'ಪಶ್ಚಿಮ ತುದಿಯಲ್ಲಿ' ವಿಸ್ತಾರಗೊಂಡ ಉತ್ತರ-ದಂಡೆಗೆ ದಕ್ಷಿಣ-ಕರಾವಳಿ ಬಂದರುಗಳು ನೇರವಾಗಿ ಸಂಪರ್ಕ ಹೊಂದುವಂತೆ ಎರಡೂ ರೀತಿಯಲ್ಲಿ ಸಹಕಾರಿಯಾಗುವ ಅಗತ್ಯವಿತ್ತು. ಇದನ್ನು ಸುಗಮಗೊಳಿಸಲು ಉಪ-ರಸ್ತೆಗಳ ಒಂದು ಸಮೂಹವನ್ನೂ ಸಹ ಅಭಿವೃದ್ಧಿಪಡಿಸಲಾಯಿತು, ಇದು ಸೌತ್ವಾರ್ಕ್ ನ ಎಲಿಫೆಂಟ್ & ಕ್ಯಾಸಲ್ ನಲ್ಲಿ, ನಂತರ ಸರ್ರಿ ಪ್ರದೇಶದಲ್ಲಿ ಸಂಕೀರ್ಣ ಜಂಕ್ಷನ್ ಗಳನ್ನು ಉಂಟುಮಾಡಿತು.

ಆಗ ೧೯ನೇ ಶತಮಾನದ ಮಧ್ಯಭಾಗದಲ್ಲಿ ಇದು ಬಹಳಷ್ಟು ಕೆಳ ಮಟ್ಟಕ್ಕೆ ಇಳಿಯಿತು. ಪ್ರಸಕ್ತದಲ್ಲಿರುವ ಸೇತುವೆಯನ್ನು ಥಾಮಸ್ ಪೇಜ್ ವಿನ್ಯಾಸಗೊಳಿಸಿದರು. ಹೀಗೆ ಇದು ೧೮೬೨ರಲ್ಲಿ ಉದ್ಘಾಟನೆಗೊಂಡಿತು.[] ಒಟ್ಟಾರೆಯಾಗಿ252 metres (826.8 ft)ರಷ್ಟು ಉದ್ದ ಹಾಗು ೨೬ ಮೀಟರ್ ಅಗಲದೊಂದಿಗೆ, ಇದು ಏಳು-ಕಮಾನುಗಳ ಮೆತು ಕಬ್ಬಿಣದ ಸೇತುವೆಯಾಗಿದ್ದು, ಚಾರ್ಲ್ಸ್ ಬ್ಯಾರಿಯವರಿಂದ(ವೆಸ್ಟ್‌ಮಿನ್‌ಸ್ಟರ್ ಅರಮನೆಯ ವಿನ್ಯಾಸಕ) ಗೋಥಿಕ್ ವಾಸ್ತು ಶೈಲಿ ಪಡೆದಿದೆ. ಇದು ಮಧ್ಯ ಲಂಡನ್ ನ ಅತ್ಯಂತ ಹಳೆಯ ಸೇತುವೆಯಾಗಿದೆ.

ಸೇತುವೆಗೆ ಪ್ರಮುಖವಾಗಿ ಹಸಿರು ಬಣ್ಣ ಬಳಿಯಲಾಗಿದೆ, ಹೌಸ್ ಆಫ್ ಕಾಮನ್ಸ್ ನಲ್ಲಿರುವ ಚರ್ಮದ ಆಸನಗಳೂ ಸಹ ಇದೇ ಬಣ್ಣದ್ದಾಗಿವೆ.ಹೌಸ್ ಆಫ್ ಕಾಮನ್ಸ್, ಸೇತುವೆಗೆ ಸಮೀಪದಲ್ಲಿ ವೆಸ್ಟ್‌ಮಿನ್‌ಸ್ಟರ್ ಅರಮನೆಯ ಬದಿಯಲ್ಲಿದೆ. ಇದು ಕೆಂಪು ಬಣ್ಣವನ್ನು ಹೊಂದಿರುವ ಲ್ಯಾಂಬೆತ್ ಸೇತುವೆಗೆ ತದ್ವಿರುದ್ಧವಾಗಿದೆ, ಹೌಸ್ ಆಫ್ ಲಾರ್ಡ್ಸ್ ನ ಆಸನಗಳು ಕೆಂಪು ವರ್ಣ ಹೊಂದಿವೆ, ಹಾಗು ಇದು ಹೌಸಸ್ ಆಫ್ ಪಾರ್ಲಿಮೆಂಟ್ ನ ಎದುರು ಭಾಗದಲ್ಲಿದೆ.

ಇದು ೨೦೦೫ರಲ್ಲಿ,ಸಂಪೂರ್ಣ ನವೀಕರಣಕ್ಕೆ ಒಳಪಟ್ಟಿತು, ನವೀಕರಣ ಕಾರ್ಯವು ೨೦೦೭ರಲ್ಲಿ ಪೂರ್ಣಗೊಂಡಿತು. ಅದರ ಹಿಂದಿನ ವೈಭವವನ್ನು ಮರುಸ್ಥಾಪಿಸುವ ಪ್ರಯತ್ನದಲ್ಲಿ, ಸೇತುವೆಗೆ ಕಬ್ಬಿಣದ ಪಟ್ಟಕಗಳನ್ನು ಹಾಕುವುದರ ಜೊತೆಗೆ ಸಂಪೂರ್ಣ ಸೇತುವೆಗೆ ಮತ್ತೆ ಬಣ್ಣ ಬಳಿಯಲಾಯಿತು. ನವೀಕರಣ ಕಾರ್ಯವನ್ನು ಗುತ್ತಿಗೆ ನೀಡಲಾದ ಇಂಟರ್ಸರ್ವ್ ಸಂಸ್ಥೆ ಹಾಗು ಇಂಜಿನಿಯರುಗಳಾದ ಟೋನಿ ಗೀ ಹಾಗು ಸಹಭಾಗಿಗಳು ಪೂರ್ಣಗೊಳಿಸಿದರು.

ಇದು ವೆಸ್ಟ್‌ಮಿನ್‌ಸ್ಟರ್ ಅರಮನೆಗೆ ಪಶ್ಚಿಮದಲ್ಲಿ ಕೌಂಟಿ ಹಾಲ್ ನೊಂದಿಗೆ ಹಾಗು ಪೂರ್ವದಲ್ಲಿ ಲಂಡನ್ ಐನೊಂದಿಗೆ ಸಂಪರ್ಕ ಕಲ್ಪಿಸುತ್ತದೆ, ಹಾಗು ಲಂಡನ್ ಮ್ಯಾರಥಾನ್ ನ ಆರಂಭಿಕ ವರ್ಷಗಳಲ್ಲಿ ಇದು ಗಮ್ಯ ಸ್ಥಾನವಾಗಿತ್ತು.

ನದಿಯ ಹರಿವಿನ ದಿಕ್ಕಿನಲ್ಲಿರುವ ಮುಂದಿನ ಸೇತುವೆಯೆಂದರೆ ಹಂಗರ್ಫೋರ್ಡ್ ಸೇತುವೆ ಹಾಗು ನದಿಯ ಹರಿವಿಗೆ ವಿರುದ್ಧ ದಿಕ್ಕಿನಲ್ಲಿ ಲ್ಯಾಂಬೆತ್ ಸೇತುವೆಯಿದೆ. ಸೇತುವೆಗೆ ೧೯೮೧ರಲ್ಲಿ ಗ್ರೇಡ್ II* ಪಟ್ಟಿಮಾಡಿದ ರಚನೆಯನ್ನು ನೀಡಲಾಯಿತು.[]

ಜನಪ್ರಿಯ ಸಂಸ್ಕೃತಿಯಲ್ಲಿ

[ಬದಲಾಯಿಸಿ]

ವೈಜ್ಞಾನಿಕ ಕಾದಂಬರಿ ಆಧಾರಿತ ೨೦೦೨ರಲ್ಲಿನ ಚಲನಚಿತ್ರ ೨೮ ಡೇಸ್ ಲೇಟರ್ ನಲ್ಲಿ, ನಾಯಕನು, ನಿರ್ಜನವಾದ ಲಂಡನ್ ನನ್ನು ನೋಡಲು ಕೋಮಾದಿಂದ ಹೊರಬರುತ್ತಾನೆ. ಆತ ಜನರನ್ನು ಅರಸುತ್ತಾ ವೆಸ್ಟ್‌ಮಿನ್‌ಸ್ಟರ್ ಸೇತುವೆಯುದ್ದಕ್ಕೂ ನಡೆದು ಹೋಗುತ್ತಾನೆ.

ಲಂಡನ್ ನ ಸಾಂಪ್ರದಾಯಿಕ ಓಟ ಸ್ಪರ್ಧೆ, ಬ್ರಿಡ್ಜಸ್ ಹ್ಯಾಂಡಿ ಕ್ಯಾಪ್ ರೇಸ್ ಗೆ ವೆಸ್ಟ್‌ಮಿನ್‌ಸ್ಟರ್ ಸೇತುವೆಯು ಆರಂಭಿಕ ಹಾಗು ಕೊನೆಯ ಸ್ಥಳವಾಗಿದೆ.

ವಿಲ್ಲಿಯಮ್ ವರ್ಡ್ಸ್ ವರ್ತ್ ಸೆಪ್ಟೆಂಬರ್ ೩, ೧೮೦೨ರಲ್ಲಿ ಕಂಪೋಸ್ಡ್ ಅಪಾನ್ ವೆಸ್ಟ್‌ಮಿನ್‌ಸ್ಟರ್ ಬ್ರಿಡ್ಜ್ ಎಂಬ ಸಾನೆಟ್ಟನ್ನು(ಚತುರ್ದಶಪದಿ) ಬರೆಯುತ್ತಾರೆ.

ಬ್ರಿಟಿಷ್ ವೈಜ್ಞಾನಿಕ ಕಾದಂಬರಿ ಸರಣಿ ಡಾಕ್ಟರ್ ಹೂ ನಲ್ಲಿ, ವೆಸ್ಟ್‌ಮಿನ್‌ಸ್ಟರ್ ಸೇತುವೆಯನ್ನು ಹಲವಾರು ಸಂದರ್ಭಗಳಲ್ಲಿ ಬಳಸಲಾಗಿದೆ. ಇದನ್ನು ಮೂಲವಾಗಿ ೧೯೬೪ರ ಧಾರಾವಾಹಿ ದಿ ದಲೆಕ್ ಇನ್ವೇಶನ್ ಆಫ್ ಅರ್ಥ್ ನಲ್ಲಿ ಬಳಸಲಾಗಿತ್ತು.ಇದು ಆಗಿನ ರಚನೆಯನ್ನು ಹಾಳು ಸುರಿಯುವ ಹಾಗು ನಿರ್ಜನವಾದುದೆಂದು ಚಿತ್ರಿಸಿದೆ. ಹಲವಾರು ದಲೆಕ್ ಗಳನ್ನು (ವಿಜ್ಞಾನದ ಕಾಲ್ಪನಿಕ ಕಥಾ ಮಾಲಿಕೆಗಳು)ಸೇತುವೆ ಹಾಗು ಅದರ ಪಕ್ಕದಲ್ಲಿರುವ ಆಲ್ಬರ್ಟ್ ಅಣೆಕಟ್ಟಿನ ನ ಮೇಲೆ ಹೆಣೆದಿರುವುದನ್ನು ಕಾಣಬಹುದು. ನಂತರದ ೨೦೦೫ರಲ್ಲಿ ಧಾರಾವಾಹಿ ಸರಣಿಯು ಮತ್ತೊಮ್ಮೆ ಪರಿಷ್ಕರಣದೊಂದಿಗೆ ಚಿತ್ರಿಸಿದಾಗ ಈ ಸ್ಥಳವನ್ನು ನಿರ್ಮಾಣ ತಂಡವು ಮತ್ತೊಮ್ಮೆ ಬಳಸಿಕೊಂಡಿತು. ಇದರಂತೆ ರೋಸ್ ಸಂಚಿಕೆಯಲ್ಲಿ ಬರುವ ಒಂಭತ್ತನೇ ವೈದ್ಯ ಹಾಗು ರೋಸ್ ಟೈಲರ್ ಈ ಸೇತುವೆ ಮೇಲೆ ಹಾದು ಹೋಗುವ ಸಂದರ್ಭಗಳನ್ನು ಚಿತ್ರೀಕರಣ ಮಾಡಲಾಗಿದೆ. ಇದು ಡಾಕ್ಟರ್ ಹೂ ಸೌಂಡ್ ಟ್ರ್ಯಾಕ್ ಆಲ್ಬಮ್ ನಲ್ಲಿ ಒಂದು ಹಾಡಿನ ಹೆಸರೂ ಸಹ ಆಗಿದೆ.

ಸೇತುವೆಯು ಮೊಂಟಿ ಪೈಥಾನ್'ಸ್ ಫ್ಲೈಯಿಂಗ್ ಸರ್ಕಸ್ ನ ರೇಖಾಚಿತ್ರ "ನೇಶನ್ ವೈಡ್" ನಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ.)"ಹ್ಯಾಮ್ಲೆಟ್", ಸಂಚಿಕೆ ೪೩). ದೃಶ್ಯಾವಳಿಯಲ್ಲಿ ಕುರ್ಚಿಯ ಮೇಲೆ ಕುಳಿತು ಯಾವಾಗ ಬೇಕಾದರೂ ಕಾಲುಗಳನ್ನು ಚಾಚಿಕೊಂಡು ವಿರಮಿಸಲು ಸಾಧ್ಯವೇ ಎಂಬುದನ್ನು ತಿಳಿದುಕೊಂಡು ಬರುವಂತೆ ವರದಿಗಾರ ಜಾನ್ ಡಲ್(ಗ್ರಹ್ಯಾಂ ಚಾಪ್ಮನ್)ನನ್ನು ಸೇತುವೆಯ ಬಳಿ ಕಳುಹಿಸಲಾಗುತ್ತದೆ. ಪೋಲಿಸಿನವನು(ಮೈಕೆಲ್ ಪಾಲಿನ್) ಆ ಕುರ್ಚಿಯು ಒಬ್ಬ ಮಹಿಳೆಯದ್ದೆಂದು(ನೀರಸ ಪಾತ್ರದಲ್ಲಿ ಟೆರ್ರಿ ಜೋನ್ಸ್) ಆತನ ಕುರ್ಚಿಯನ್ನು ಕಸಿದುಕೊಳ್ಳುತ್ತಾನೆ, ಪೋಲಿಸಿನವನು ರಸ್ತೆಯ ಆ ಬದಿಯಲ್ಲಿ ನಿಂತಿರುತ್ತಾನೆ. ಕುರ್ಚಿಯನ್ನು ಆ ಮಹಿಳೆಗೆ ಹಿಂದಿರುಗಿಸುವ ಬದಲಾಗಿ, ಪೋಲಿಸಿನವರು ಆಕೆಯನ್ನು ಕೆಳಕ್ಕೆ ತಳ್ಳಿ, ಆಕೆಯಿಂದ ಅದೇ ಮಾದರಿಯ ಇನ್ನೊಂದು ಕುರ್ಚಿಯನ್ನು ಕಸಿದುಕೊಂಡು ವರದಿಗಾರನ ಪಕ್ಕದಲ್ಲಿ ಕುಳಿತುಕೊಳ್ಳುತ್ತಾನೆ. ನಂತರದಲ್ಲಿ ಅವನು ಅಲ್ಲೇ ಸಮೀಪದಲ್ಲಿ ಓಡಾಡುತ್ತಿರುವ ಅಥವಾ ಕುಳಿತಿರುವ ಜನರಿಂದ ವಿವಿಧ ವಸ್ತುಗಳನ್ನು ಕಸಿದುಕೊಂಡು, ಅಂತಿಮವಾಗಿ ಬೀರ್ ಗಾಗಿ ಅಂಗಡಿಗೆ ಕನ್ನ ಹಾಕುತ್ತಾನೆ.(ಮೊದಲಿಗೆ ಗಾಜು ಪುಡಿಪುಡಿಯಾದ ಸದ್ದು ಕೇಳಿ ಬರುತ್ತದೆ, ನಂತರದಲ್ಲಿ ಎಚ್ಚರಿಕೆ ಕರೆಗಂಟೆಯ ಸದ್ದಾಗುತ್ತದೆ).

ಆಗ ೨೦೦೦ದ ಚಿತ್ರ ೧೦೨ ಡಾಲ್ಮೇಷಿಯನ್ಸ್ ನಲ್ಲಿ, ಕ್ರುಯೆಲ್ಲ ಡೆ ವಿಲ್, ಬಿಗ್ ಬೆನ್ ನ ಶಬ್ದ ಕೇಳಿದ ತಕ್ಷಣ ಹುಚ್ಚಳಾಗುತ್ತಾಳೆ, ಹಾಗು ವೆಸ್ಟ್‌ಮಿನ್‌ಸ್ಟರ್ ಸೇತುವೆಯ ಮೇಲೆ ಎಲ್ಲವೂ ಆಕೆಗೆ ಬಿಳಿ ಹಾಗು ಕಪ್ಪು ಮಚ್ಚೆಗಳಾಗಿ ಕಂಡುಬರುತ್ತದೆ.(ಡಾಲ್ಮೇಷಿಯನ್ಸ್ ಗಳ ಒಂದು ಮಾದರಿ).

ಈ ಸೇತುವೆ ಮೇಲೆ ಒಂದು ಕವನ

[ಬದಲಾಯಿಸಿ]
  • ವರ್ಡ್ಸ್ ವರ್ತ್ ನ ಸೊನೆಟ್,'ಅಪಾನ್ ವೆಸ್ಟ್ ಮಿನಿಸ್ಟರ್ ಬ್ರಿಜ್: -upon Westminster Bridge

ಉಲ್ಲೇಖಗಳು‌

[ಬದಲಾಯಿಸಿ]
  1. ವ್ಹೇರ್ ಥೇಮ್ಸ್ ಸ್ಮೂತ್ ವಾಟರ್ಸ್ ಗ್ಲೈಡ್
  2. Historic England. "Details from image database (204781)". Images of England.ನವೆಂಬರ್ ೨೭,೨೦೦೮ರಲ್ಲಿ ಮುಕ್ತಗೊಂಡಿದೆ

ಬಾಹ್ಯ ಕೊಂಡಿಗಳು

[ಬದಲಾಯಿಸಿ]