ವಿಶ್ಲೇಷಕ ರಸಾಯನಶಾಸ್ತ್ರ
ಗೋಚರ
ಯಾವುದೇ ವಸ್ತುವಿನ ರಾಸಾಯನಿಕ ಗುಣಲಕ್ಷಣಗಳ ಅಧ್ಯಯನ ಹಾಗೂ ಇದಕ್ಕೆ ಉಪಯೋಗಿಸುವ ವಿಧಾನಗಳ ತಂತ್ರಜ್ಞಾನಕ್ಕೆ 'ವಿಶ್ಲೇಷಕ ರಸಾಯನಶಾಸ್ತ್ರ' ಎನ್ನುತ್ತಾರೆ.ವಿಜ್ಞಾನ ಹಾಗೂ ಕೈಗಾರಿಕೆಗಳ ಬೆಳವಣಿಗೆಗೆ ಇದು ಅತ್ಯಂತ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ.ಉದಾಹರಣೆಗೆ ರಾಸಾಯನಿಕ ವಿಶ್ಲೇಷಣೆ ಮಾಲಿನ್ಯಗಳ ತೀವ್ರತೆಯ ಅಳತೆಗೆ,ವೈದ್ಯಕೀಯ ಕ್ಷೇತ್ರದಲ್ಲಿ ರೋಗಗಳ ಪತ್ತೆಗೆ,ಆಹಾರೋದ್ಯಮಗಳಲ್ಲಿ,ಔಷಧಗಳ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ.