ವಿಲ್ಲಿಯಮ್ ಒ'ಬ್ರಿಯೆನ್
ವಿಲ್ಲಿಯಮ್ ಒ'ಬ್ರಿಯೆನ್ | |
---|---|
William O'Brien in 1917 | |
Member of Parliament
| |
ಮತಕ್ಷೇತ್ರ | Mallow (1883–1885) South Tyrone (1885–1886) North East Cork (1887–1892) Cork City (1892–1895) Cork City (1900–1909) North East Cork (1910–1910) Cork City (1910–1918) |
ವೈಯಕ್ತಿಕ ಮಾಹಿತಿ | |
ಜನನ | Mallow, County Cork, Ireland | ೨ ಅಕ್ಟೋಬರ್ ೧೮೫೨
ಮರಣ | 25 February 1928 London, England | (aged 75)
ರಾಜಕೀಯ ಪಕ್ಷ |
ವಿಲ್ಲಿಯಮ್ ಒ'ಬ್ರಿಯೆನ್ (2 ಒಕ್ಟೋಬರ್ 1852 – 25 ಫೆಬ್ರವರಿ 1928) ಐರ್ಲೆಂಡಿನ ಪ್ರಖ್ಯಾತ ಸ್ವಾತಂತ್ರ್ಯ ಹೋರಾಟಗಾರ, ಪತ್ರಿಕೋದ್ಯಮಿ, ಸಂಯುಕ್ತ ಐರಿಷ್ ಲೀಗಿನ ಸ್ಥಾಪಕ.
ಬಾಲ್ಯ ಮತ್ತು ಉದ್ಯೋಗ
[ಬದಲಾಯಿಸಿ]ಕೌರ್ಕ್ ಕೌಂಟಿಯಲ್ಲಿನ ಮಾಲೋ ಎಂಬಲ್ಲಿ ಜನಿಸಿದ. ಕಾರ್ಕಿನಲ್ಲಿ ಉನ್ನತ ಶಿಕ್ಷಣ ಪಡೆದು 1869ರಲ್ಲಿ ಪತ್ರಿಕೋದ್ಯಮವನ್ನವಲಂಬಿಸಿದ. ಯುನೈಟೆಡ್ ಐರ್ಲೆಂಡ್ ಪತ್ರಿಕೆಯ ಸಂಪಾದಕನಾದದ್ದು 1881ರಲ್ಲಿ. ಕೆಲವೇ ತಿಂಗಳುಗಳಲ್ಲಿ ಆ ಪತ್ರಿಕೆಯನ್ನು ಸರ್ಕಾರ ನಿಷೇಧಿಸಿತು. ಒಬ್ರಿಯೆನನಿಗೆ ಜೈಲುವಾಸ ಲಭ್ಯವಾಯಿತು. ಗುತ್ತಿಗೆ ನಿಷೇಧ ಪ್ರಣಾಳಿಕೆಯನ್ನು ಈತ ಹೊರಡಿಸಿದ್ದು ಆಗಲೇ. ಅನಂತರ 1883ರ ಚುನಾವಣೆಯಲ್ಲಿ ಮಾಲೋ ಕ್ಷೇತ್ರದಿಂದ ಪಾರ್ಲಿಮೆಂಟಿಗೆ ಆಯ್ಕೆ ಹೊಂದಿ, 1895ರ ವರೆಗೂ ಅದರ ಸದಸ್ಯನಾಗಿದ್ದ.
ಸಾಧನೆ
[ಬದಲಾಯಿಸಿ]ಬಡರೈತರ ಉಳಿವಿಗಾಗಿ ಜಮೀನುದಾರರ ವಿರುದ್ಧ ಹೋರಾಟ ನಡೆಸಿ, ಸಮನ್ವಯ ಮತ್ತು ಸಹಿಷ್ಣುತೆಯ ತತ್ತ್ವವನ್ನು ಜನತೆಯ ಮುಂದಿಟ್ಟು, ಎಲ್ಲವೂ ಐರ್ಲೆಂಡಿಗಾಗಿ ಎಂಬ ಸಂಘವನ್ನು (ಆಲ್ ಫಾರ್ ಐರ್ಲೆಂಡ್ ಯೂನಿಯನ್) ಸ್ಥಾಪಿಸಿದ. 1910ರಲ್ಲಿ ಕಾರ್ಕ್ ಕೌಂಟಿಯಿಂದ ಪಾರ್ಲಿಮೆಂಟಿಗೆ ಮತ್ತೆ ಚುನಾಯಿತನಾದರೂ ಆ ವೇಳೆಗೆ ಐರ್ಲೆಂಡಿನ ತರುಣ ಪೀಳಿಗೆಗೆ ಸೌಮ್ಯ ಮಾರ್ಗದಲ್ಲಿ ನಂಬಿಕೆ ಕಡಿಮೆಯಾಗಿತ್ತು. ಒಬ್ರಿಯೆನನ ಹಿಂಬಾಲಕರ ಸಂಖ್ಯೆ ಕಡಿಮೆಯಾಯಿತು. ಒಂದನೆಯ ಮಹಾಯುದ್ಧದಲ್ಲಿ ಐರ್ಲೆಂಡೂ ಭಾಗವಹಿಸಬೇಕೆಂದು ವಾದಿಸಿದ ಈತ ಆ ಯುದ್ಧಾನಂತರ ಸಾರ್ವಜನಿಕ ಜೀವನದಿಂದ ನಿವೃತ್ತನಾದ. ಈತ 1928 ಫೆಬ್ರವರಿ 25ರಲ್ಲಿ, ಲಂಡನ್ನಿನಲ್ಲಿ ನಿಧನಹೊಂದಿದನು.
ಮುಖ್ಯ ಬರವಣಿಗೆಗಳು
[ಬದಲಾಯಿಸಿ]- ಕ್ರಿಸ್ಮಸ್ ಆನ್ ದಿ ಗಾಲ್ಟೀಸ್ (1878) ಬ್ಯಾಲಿಬೆಗ್ ವಿಲೇಜ್ ಐರಿಶ್ ಕ್ರಿಸ್ಮಸ್
- ವೆನ್ ವಿ ವೇರ್ ಬಾಯ್ಸ್ (1890)
- ಐರಿಶ್ ಐಡಿಯಾಸ್ (1893) ಐರಿಶ್ ಐಡಿಯಾಸ್ (1893)
- ಎ ಕ್ವೀನ್ ಆಫ್ ಮೆನ್, ಗ್ರೇಸ್ ಒ'ಮ್ಯಾಲಿ (1898)
- ರಿಕಲೆಕ್ಷನ್ಸ್ (1905)
- ಅನ್ ಆಲಿವ್ ಬ್ರಾಂಚ್ ಇನ್ ಐರ್ಲೆಂಡ್ ಅಂದ್ ಇಟ್ಸ್ ಹಿಸ್ಟರಿ. ಲಂಡನ್: ಮ್ಯಾಕ್ಮಿಲನ್. 1910.
- ಐರಿಶ್ ಕಾಸ್ ಮತ್ತು "ದಿ ಐರಿಶ್ ಕನ್ವೆನ್ಷನ್" . ಡಬ್ಲಿನ್: ಮೌನ್ಸೆಲ್ & ಕಂಪನಿ, ಲಿಮಿಟೆಡ್. 1917.
- ಎ ಡೌನ್‍ಫಾಲ್ ಆಫ್ ಪಾರ್ಲಿಮೆಂಟೇರಿನಿಸಂ (1918)
- ಇವನಿಂಗ್ ಮೆಮೊರಿಸ್ (1920)
- ದಿ ರೆಸ್ಪಾನ್ಸಿಬಿಲಿಟಿ ಆಫ್ ಪಾರ್ಟಿಷನ್ (1921)
- ದಿ ಐರಿಶ್ ರೆವೆಲ್ಯೂಷನ್ ಅಂಡ್ ಹೌ ಇಟ್ ಕೇಮ್ ಅಬೌಟ್ . ಲಂಡನ್: ಅಲೆನ್ & ಅನ್ವಿನ್. 1923.
- ಎಡ್ಮಂಡ್ ಬರ್ಕ್ ಅಸ್ ಐರಿಶ್‌ಮ್ಯಾನ್ (1924)