ವಿಕಿಪೀಡಿಯ:ಮಕ್ಕಳ ರಕ್ಷಣೆ
ಈ ತಾಣವನ್ನು ಬಳಸುವ ಮಕ್ಕಳ ಸುರಕ್ಷತೆಯನ್ನು ವಿಕಿಪೀಡಿಯಾವು ಮುಖ್ಯವಾಗಿ ಪರಿಗಣಿಸುತ್ತದೆ. ವಯಸ್ಕ ಮತ್ತು ಮಕ್ಕಳ ನಡುವಿನ ಯಾವುದೇ ರೀತಿಯ ಕಾನೂನು ಬಾಹಿರ, ಅಸಹಜ, ಸೂಕ್ತವಲ್ಲದ ಸಂಬಂಧವು ಸಹಿಸಲ್ಪಡುವುದಿಲ್ಲ. ಈ ತರಹದ ಯಾವುದೇ ಸಂಬಂಧದಲ್ಲಿ ತೊಡಗುವ ಅಥವಾ ಅದಕ್ಕೆ ಸಹಕರಿಸುವ ಅಥವಾ ಅದನ್ನು ಅನುಮೋದಿಸುವ, ಬೆಂಬಲಿಸುವ (ವಿಕಿಯಲ್ಲಿ ಮತ್ತು ವಿಕಿಯ ಹೊರಗೆ) ಅಥವಾ ತಮ್ಮನ್ನು ಶಿಶುಕಾಮಿ(pedophiles)ಗಳೆಂದು ಗುರುತಿಸಿಕೊಳ್ಳುವ ಯಾರನ್ನೇ ಆದರೂ ಅನಿರ್ದಿಷ್ಟವಾಗಿ ನಿರ್ಬಂಧಿಸಲಾಗುತ್ತದೆ.
ವರದಿಗಳ ನಿರ್ವಹಣೆ
[ಬದಲಾಯಿಸಿ]ಮಕ್ಕಳ ಅಪಾಯ, ಮಕ್ಕಳ ರಕ್ಷಣೆ ಮತ್ತು ಮಕ್ಕಳ ಲೈಂಗಿಕ ದೌರ್ಜನ್ಯ
[ಬದಲಾಯಿಸಿ]ಸೂಕ್ತವಲ್ಲದ ವಯಸ್ಕ-ಮಕ್ಕಳ ಸಂಬಂಧಗಳನ್ನು ಮುಂದುವರಿಸಲು ಅಥವಾ ಸುಗಮಗೊಳಿಸಲು ಪ್ರಯತ್ನಿಸುವ ಸಂಪಾದಕರ ಅಥವಾ ನಂಬಿಕೆ ಮತ್ತು ಸುರಕ್ಷತೆಯನ್ನು ಉಲ್ಲಂಘಿಸುವ ವರದಿಗಳನ್ನು ಇಮೇಲ್ ಮೂಲಕ ವಿಕಿಮೀಡಿಯಾ ಫೌಂಡೇಶನ್‌ಗೆ ಸಲ್ಲಿಸಬೇಕು: legal-reports@wikimedia.org. ಮಕ್ಕಳ ಚಿತ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳ ವರದಿಗಳನ್ನು ಅದೇ ಇಮೇಲ್ ವಿಳಾಸಕ್ಕೆ ಕಳುಹಿಸಬೇಕು.
ವಿಕಿಯಲ್ಲಿ ಸ್ಪಷ್ಟವಾದ ಸಮರ್ಥನೆ
[ಬದಲಾಯಿಸಿ]ಈ ತರಹದ ಕೃತ್ಯಗಳಲ್ಲಿ ತೊಡಗುವ ಸಂಪಾದಕರ ಬಗ್ಗೆ ನಿರ್ವಾಹಕರಿಗೆ ವರದಿ ಮಾಡಬಹುದು. ಖಾಸಗಿತನದ ರಕ್ಷಣೆ ಮತ್ತು ಮಾನನಷ್ಟ ಸಾಧ್ಯತೆಯ ಕಾರಣದಿಂದ ಯಾರನ್ನಾದರೂ ಆತ ಒಬ್ಬ ಶಿಶುಕಾಮಿ ಎಂಬ ಸಂಶಯ ವ್ಯಕ್ತಪಡಿಸಿ ಬಹಿರಂಗವಾಗಿ ವಿಕಿಯಲ್ಲಿ ಬರೆಯುವ ಅಭಿಪ್ರಾಯಗಳಿಗೆ ಅವಕಾಶವಿರುವುದಿಲ್ಲ. ಇಮೇಲ್ ಮೂಲಕ ಮಾತ್ರ ವರದಿ ಮಾಡಬೇಕು. ಯಾರ ವಿರುದ್ಧವಾದರೂ ಆ ತರಹದ ಆರೋಪಗಳನ್ನು ಯಾವುದೇ ವಿಕಿಯೋಜನೆಯ ಪುಟಗಳಲ್ಲಿ ಬರೆದಿದ್ದಾರೆ, ಬರೆದವರು ನಿಷೇಧಕ್ಕೊಳಪಡುತ್ತಾರೆ.
ಯುವ ಸಂಪಾದಕರಿಗೆ ಸಲಹೆ
[ಬದಲಾಯಿಸಿ]ವಿಕಿಪೀಡಿಯಾದಲ್ಲಿ ಇನ್ನೊಬ್ಬ ವ್ಯಕ್ತಿ ನಿಮ್ಮ ಸುರಕ್ಷತೆಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ನೀವು ಭಾವಿಸಿದರೆ ಅಥವಾ ಯಾವುದೇ ರೀತಿಯಲ್ಲಿ ನಿಮ್ಮನ್ನು ಪೀಡಿಸುವಂತೆ ಮಾಡುತ್ತಿದ್ದರೆ, ದಯವಿಟ್ಟು ಜವಾಬ್ದಾರಿಯುತ ವಯಸ್ಕರಿಗೆ ತಿಳಿಸಿ ಮತ್ತು ಈ ಪುಟವನ್ನು ನೋಡಲು ಅವರನ್ನು ಕೇಳಿ. ತೊಂದರೆ ಎನಿಸುವ ವ್ಯಕ್ತಿಯೊಂದಿಗೆ ಸಂವಹನವನ್ನು ಮುಂದುವರಿಸಬೇಡಿ, ವ್ಯಕ್ತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ. ಅವರು ನಿಮಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರೂ ಸಹ, ನಿಮ್ಮ ವಿಳಾಸ ಅಥವಾ ಫೋನ್ ಸಂಖ್ಯೆಯಂತಹ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರಿಗೂ ನೀಡಬೇಡಿ. ಸಂಶಯಗಳಿದ್ದಾಗ ನಿಮ್ಮ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ.