ವಿಷಯಕ್ಕೆ ಹೋಗು

ವಜಾಗೊಳಿಸುವಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಜಾಗೊಳಿಸುವಿಕೆ ಎಂದರೆ ಉದ್ಯೋಗದಾತನು ಉದ್ಯೋಗಿಯ ಇಚ್ಛೆಯ ವಿರುದ್ಧ ಅವನ ಉದ್ಯೋಗವನ್ನು ಸಮಾಪ್ತಿಗೊಳಿಸುವುದು. ಅಂತಹ ನಿರ್ಧಾರವನ್ನು ಉದ್ಯೋಗದಾತನು ಆರ್ಥಿಕ ಕುಸಿತದಿಂದ ಹಿಡಿದು ಉದ್ಯೋಗಿಯ ಕಡೆಯಿಂದ ಕಾರ್ಯನಿರ್ವಹಣೆ ಸಂಬಂಧಿತ ಸಮಸ್ಯೆಗಳವರೆಗೆ ವ್ಯಾಪಿಸುವ ವಿವಿಧ ಕಾರಣಗಳಿಂದ ಮಾಡಬಹುದಾದರೂ, ಕೆಲವು ಸಂಸ್ಕೃತಿಗಳಲ್ಲಿ ವಜಾಗೊಳ್ಳುವುದು ಪ್ರಬಲವಾದ ಕಳಂಕವನ್ನು ಹೊಂದಿರುತ್ತದೆ.

ಸ್ವಯಂಪ್ರೇರಿತವಾಗಿ ಕೆಲಸ ಬಿಡುವುದರಿಂದ (ಅಥವಾ ಹಂಗಾಮಿ ವಜಾ) ವಿಭಿನ್ನವಾಗಿ, ವಜಾಗೊಳ್ಳುವುದು ಹಲವುವೇಳೆ ಉದ್ಯೋಗಿಯ ತಪ್ಪಾಗಿರುತ್ತದೆಂದು ತಿಳಿದುಕೊಳ್ಳಲಾಗುತ್ತದೆ.[] ವಜಾಗೊಂಡ ಬಳಿಕ ಹೊಸ ಉದ್ಯೋಗವನ್ನು ದೊರಕಿಸಿಕೊಳ್ಳುವುದು ಹಲವುವೇಳೆ ಕಷ್ಟವಾಗಿರುತ್ತದೆ, ವಿಶೇಷವಾಗಿ ಹಿಂದಿನ ಕೆಲಸದಿಂದ ವಜಾಗೊಳ್ಳುವ ಇತಿಹಾಸವಿದ್ದರೆ, ವಜಾಗೊಂಡ ಕಾರಣವು ಯಾವುದೋ ಗಂಭೀರ ಉಲ್ಲಂಘನೆಯಾಗಿದ್ದರೆ, ಅಥವಾ ಉದ್ಯೋಗಿಯು ಕೆಲಸವನ್ನು ಬಹಳ ದಿನ ಉಳಿಸಿಕೊಳ್ಳದಿದ್ದರೆ. ಕೆಲಸವನ್ನು ಹುಡುಕುವವರು ಹಲವುವೇಳೆ ತಮ್ಮ ಪರಿಚಯ ಪತ್ರಗಳಲ್ಲಿ ತಾವು ವಜಾಗೊಂಡ ಕೆಲಸಗಳನ್ನು ಉಲ್ಲೇಖಿಸುವುದಿಲ್ಲ; ಹಾಗಾಗಿ, ಉದ್ಯೋಗದಲ್ಲಿ ವಿವರಿಸದಿರದ ವಿರಾಮಗಳನ್ನು ಹಲವುವೇಳೆ ಕೆಂಪು ಬಾವುಟವೆಂದು ಪರಿಗಣಿಸಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]