ವಿಷಯಕ್ಕೆ ಹೋಗು

ಲೂಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲೂಟಿ ಎಂದರೆ (ಕೊಳ್ಳೆ ಹೊಡೆಯುವುದು, ಸುಲಿಗೆ ಎಂದು ಕೂಡ ಸೂಚಿಸಲಾಗುತ್ತದೆ) ಸೇನಾ ಅಥವಾ ರಾಜಕೀಯ ವಿಜಯದ ಭಾಗವಾಗಿ, ಅಥವಾ ಯುದ್ಧ[], ನೈಸರ್ಗಿಕ ವಿಕೋಪದಂತಹ ಮಹಾದುರಂತದ ಕಾಲದಲ್ಲಿ (ಎಲ್ಲಿ ಕಾನೂನು ಮತ್ತು ನಾಗರಿಕ ಜಾರಿಯು ತಾತ್ಕಾಲಿಕವಾಗಿ ನಿಷ್ಪ್ರಭಾವಿಯಾಗಿರುತ್ತದೊ ಅಲ್ಲಿ), ಅಥವಾ ದೊಂಬಿಯ ಕಾಲದಲ್ಲಿ ಸರಕುಗಳನ್ನು ಬಲವಂತದಿಂದ ವಿವೇಚನಾರಹಿತವಾಗಿ ತೆಗೆದುಕೊಳ್ಳುವುದು. ಈ ಪದವನ್ನು ವಿಶಾಲ ಅರ್ಥದಲ್ಲಿ ಕಳ್ಳತನ ಮತ್ತು ಹಣ ನುಂಗಿಹಾಕುವಿಕೆಯ ಘೋರ ನಿದರ್ಶನಗಳನ್ನು ವರ್ಣಿಸಲು ಕೂಡ ಬಳಸಲಾಗುತ್ತದೆ, ಉದಾಹರಣೆಗೆ ಸರ್ಕಾರಗಳಿಂದ ಖಾಸಗಿ ಅಥವಾ ಸಾರ್ವಜನಿಕ ಸ್ವತ್ತುಗಳ ವಶಪಡಿಸಿಕೊಳ್ಳುವಿಕೆ. ಸಶಸ್ತ್ರ ಸಂಘರ್ಷದಲ್ಲಿ, ಅಂತಾರಾಷ್ಟ್ರೀಯ ಕಾನೂನು ಲೂಟಿಯನ್ನು ನಿಷೇಧಿಸುತ್ತದೆ, ಮತ್ತು ಯುದ್ಧಾಪರಾಧವೆಂದು ಅನಿಸಿಕೊಳ್ಳುತ್ತದೆ.

ಯುದ್ಧದ ಕಾಲದಲ್ಲಿ ವಿಜಯಿಯಾದ ಸೈನ್ಯದಿಂದ ಲೂಟಿಯು ದಾಖಲಿತ ಇತಿಹಾಸದಾದ್ಯಂತ ಸಾಮಾನ್ಯ ಅಭ್ಯಾಸವಾಗಿದೆ. ಪದಾತಿಗಳಿಗೆ, ಇದು ಹಲವುವೇಳೆ ಅವರ ಅಲ್ಪ ಆದಾಯವನ್ನು ನೀಗಿಸುವ ರೀತಿ ಎಂದು ಕಾಣಲಾಗುತ್ತಿತ್ತು ಮತ್ತು ವಿಜಯದ ಆಚರಣೆಯ ಭಾಗವಾಗಿತ್ತು. ಹೆಚ್ಚು ಉನ್ನತ ಮಟ್ಟಗಳಲ್ಲಿ, ಲೂಟಿಯ ಹೆಮ್ಮೆಯ ಪ್ರದರ್ಶನವು ಸಾಮಾನ್ಯ ರೋಮನ್ ವಿಜಯದ ಅವಿಭಾಜ್ಯ ಅಂಗವಾಗಿತ್ತು, "ನಿಮ್ಮ ಶತ್ರುಗಳನ್ನು ಸೋಲಿಸುವುದು ... ಅವರಿಂದ ಅವರ ಸಂಪತ್ತನ್ನು ಕಿತ್ತುಕೊಳ್ಳುವುದು" ಅತ್ಯಂತ ದೊಡ್ಡ ಸುಖವಾಗಿದೆ ಎಂದು ಗೆಂಘಿಸ್ ಖಾನ್ ಘೋಷಿಸುವುದು ಅಸಾಮಾನ್ಯವಾಗಿರಲಿಲ್ಲ. ಪ್ರಾಚೀನ ಕಾಲದಲ್ಲಿ, ಯುದ್ಧದಲ್ಲಿ ಕೊಳ್ಳೆಹೊಡೆದ ವಸ್ತುಗಳಲ್ಲಿ ಪರಾಜಿತಗೊಂಡ ಜನರು ಸೇರಿದ್ದವು, ಮತ್ತು ಹಲವುವೇಳೆ ಇವರನ್ನು ಗುಲಾಮರನ್ನಾಗಿ ಮಾಡಲಾಗುತ್ತಿತ್ತು. ಹಲವುವೇಳೆ ಹೆಂಗಸರು ಮತ್ತು ಮಕ್ಕಳನ್ನು ವಿಜಯಿಯಾದ ದೇಶದ ಜನರೊಳಗೆ ಸೇರಿಸಿಕೊಳ್ಳಲಾಗುತ್ತಿತ್ತು. ಇತರ ಆಧುನಿಕ ಸಮಾಜಗಳ ಪೂರ್ವದಲ್ಲಿ, ಅಮೂಲ್ಯ ಲೋಹಗಳಿಂದ ಮಾಡಿದ ವಸ್ತುಗಳು ಯುದ್ಧ ಲೂಟಿಯ ಆದ್ಯತೆಯ ಗುರಿಯಾಗಿದ್ದವು, ಹೆಚ್ಚಾಗಿ ಅವುಗಳ ಸುಲಭ ಸಾಗಿಸಲಾಗುವಿಕೆಯ ಕಾರಣದಿಂದ. ಅನೇಕ ಸಂದರ್ಭಗಳಲ್ಲಿ ಲೂಟಿಯು ಸಾಮಾನ್ಯವಾಗಿ ಪಡೆಯಲಾಗಲು ಸಾಧ್ಯವಿಲ್ಲದ ನಿಧಿಯನ್ನು ಪಡೆಯುವ ಅವಕಾಶವಾಗಿತ್ತು.

ಕೆಲವೊಮ್ಮೆ "ಲೂಟಿ" ಪದವನ್ನು ದೇಶಗಳಿಂದ ಅನಧಿಕೃತ ಜನರಿಂದ ಪ್ರಾಚೀನಾವಶೇಷಗಳ ತೆಗೆಯುವಿಕೆಯನ್ನು ಸೂಚಿಸಲು ಬಳಸಲಾಗುತ್ತದೆ, ಈ ಜನರು ಕಾನೂನನ್ನು ಮುರಿದು ಆರ್ಥಿಕ ಲಾಭವನ್ನು ಅರಸುವ ದೇಶೀಯ ಜನರಾಗಿರಬಹುದು, ಅಥವಾ ಸಾಮಾನ್ಯವಾಗಿ ಪ್ರತಿಷ್ಠೆ, ಅಥವಾ ಪೂರ್ವದಲ್ಲಿ "ವೈಜ್ಞಾನಿಕ ಶೋಧನೆಯಲ್ಲಿ" ಹೆಚ್ಚು ಆಸಕ್ತಿಹೊಂದಿರುವ ವಿದೇಶಿ ರಾಷ್ಟ್ರಗಳಾಗಿರಬಹುದು. ಇದರ ಒಂದು ಉದಾಹರಣೆಯೆಂದರೆ ಐಗುಪ್ತದ ಗೋರಿಗಳ ಒಳವಸ್ತುಗಳನ್ನು ತೆಗೆದು ಯೂರೋಪ್‍ನಲ್ಲಿನ ಸಂಗ್ರಹಾಲಯಗಳಿಗೆ ಸಾಗಿಸಲಾಗಿದ್ದು.

ಉಲ್ಲೇಖಗಳು

[ಬದಲಾಯಿಸಿ]
  1. "Baghdad protests over looting". BBC News. BBC. 2003-04-12. Retrieved 2010-10-22.


"https://kn.wikipedia.org/w/index.php?title=ಲೂಟಿ&oldid=882650" ಇಂದ ಪಡೆಯಲ್ಪಟ್ಟಿದೆ