ವಿಷಯಕ್ಕೆ ಹೋಗು

ಲುಡ್ವಿಗ್ ಅಖಿಂ ವಾನ್ ಆರ್ನೀಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲುಡ್ವಿಗ್ ಅಖಿಂ ವಾನ್ ಆರ್ನೀಮ್
Portrait by Peter Edward Stroehling, 1803
ಜನನಕಾರ್ಲ್ ಜೋಕಿಮ್ ಫ್ರೆಡ್ರಿಕ್ ಲುಡ್ವಿಗ್ ವಾನ್ ಆರ್ನೀಮ್ Carl Joachim Friedrich Ludwig von Arnim
26 ಜನವರಿ 1781
ಬರ್ಲಿನ್, Brandenburg
ಮರಣ21 ಜನವರಿ 1831
Wiepersdorf, Brandenburg,
Kingdom of Prussia
ರಾಷ್ಟ್ರೀಯತೆಜರ್ಮನ್
ಪ್ರಮುಖ ಕೆಲಸ(ಗಳು)Des Knaben Wunderhorn

ಸಹಿ

ಲುಡ್ವಿಗ್ ಅಖಿಂ ವಾನ್ ಆರ್ನೀಮ್ (26 ಜನವರಿ 1781 – 21 ಜನವರಿ 1831) ಹತ್ತೊಂಬತ್ತನೆಯ ಶತಮಾನದ ರೊಮ್ಯಾಂಟಿಕ್ ಯುಗದ ಜರ್ಮನಿಯ ಕವಿ. ವಿದ್ಯಾರ್ಥಿ ದೆಶೆಯಲ್ಲಿದ್ದಾಗಲೇ ಗಯಟೆ ಹಾಗೂ ಹರ್ಡರ್ ಮುಂತಾದ ಜರ್ಮನ್ ಕವಿಗಳ ಪ್ರಭಾವಕ್ಕೊಳಗಾಗಿ ಜರ್ಮನಿಯ ಜನಪದ ಕಥೆಗಳನ್ನು, ಐತಿಹ್ಯ ಪರಂಪರೆಯನ್ನು ಆಳವಾಗಿ ಅಭ್ಯಸಿಸಿದ. ಯುರೋಪಿನಲ್ಲೆಲ್ಲ ಪ್ರವಾಸ ನಡೆಸಿ ಹೈಡೆಲ್ಬರ್ಗ್ ಪಟ್ಟಣದಲ್ಲಿ ಬ್ರೆಂಟಾನೋ ಎಂಬ ಇನ್ನೊಬ್ಬ ಪ್ರತಿಭಾವಂತ ಕವಿಯೊಡನೆ ಕಲೆತು ಜರ್ಮನ್ ಜನಪದ ಗೀತೆಗಳ, ಐತಿಹ್ಯಗಳ ಅತ್ಯಮೂಲ್ಯ ಸಂಗ್ರಹವೊಂದನ್ನು ಸಂಪಾದಿಸಿದ. ಜರ್ಮನಿಯ ಕವಿಗಳಿಬ್ಬರೂ ಜರ್ಮನಿಯ ಕಿರಿಯ, ಕ್ರಾಂತಿಕಾರಕ ಸಾಹಿತಿಗಳ ನೇತಾರರಾಗಿ, ರೊಮ್ಯಾಂಟಿಕ್ ಚಳವಳಿಯ ಆದ್ಯಪ್ರವರ್ತಕರಾದರು. ಜರ್ಮನಿಯ ಪುರಾತನ ಜಾನಪದ ಪರಂಪರೆಯತ್ತ ಕವಿಗಳ ಕಣ್ಣು ಸೆಳೆದು, ಇವರು ಜರ್ಮನಿಯ ಸಾಹಿತ್ಯದ ಉತ್ಕರ್ಷಕ್ಕೆ ಪರೋಕ್ಷವಾಗಿಯೂ ನೆರವಾದರು. ಇವೆಲ್ಲದರ ಜತೆಗೆ ಆರ್ನೀಮ್ ಬರೆದ ಹಲವು ಕಿರುಕಾದಂಬರಿಗಳೂ ಎರಡು ಸಂಪುಟಗಳುಳ್ಳ ರಮ್ಯಕಥೆಯೂ ಇವನಿಗೆ ಅಪಾರ ಕೀರ್ತಿ ಗಳಿಸಿಕೊಟ್ಟವು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]