ಲಾ ವೊಲ್ಯೂಸ್ (ಚಲನಚಿತ್ರ)
ಲಾ ವೊಲ್ಯೂಸ್, ಅಂದರೆ 'ಕಳ್ಳ', 1966 ರ ಫ್ರಾಂಕೋ-ಜರ್ಮನ್ ಚಲನಚಿತ್ರವಾಗಿದ್ದು , ಜೀನ್ ಚಾಪೋಟ್ ನಿರ್ದೇಶಿಸಿದ್ದು, ಮಾರ್ಗರಿಟ್ ಡುರಾಸ್ ಅವರ ಚಿತ್ರಕಥೆ ಹೊಂದಿದೆ. ಜರ್ಮನ್ ಭಾಷೆಯಲ್ಲಿ ಈ ಚಿತ್ರಕ್ಕೆ ಶಾರ್ನ್ ಸ್ಟೀನ್ ಎನ್ಆರ್ 4 ("ಚಿಮಣಿ ಸಂಖ್ಯೆ 4") ಎಂದು ಹೆಸರಿಡಲಾಗಿದೆ..
ಇದು ಜರ್ಮನಿಯಲ್ಲಿ ನಡೆದ, ಮಕ್ಕಳಿಲ್ಲದ ದಂಪತಿಗಳ ಕಥೆಯನ್ನು ಹೇಳುತ್ತದೆ, ಅಲ್ಲಿ ಪತ್ನಿಯಾದ ಜೂಲಿಯಾ ತನ್ನ ಹದಿಹರೆಯದಲ್ಲಿ ನೀಡಿದ ಪುಟ್ಟ ಹುಡುಗನನ್ನು ಮರಳಿ ಕದಿಯುತ್ತಾಳೆ ಮತ್ತು ಅವಳ ಗಂಡ ವರ್ನರ್ ಆ ಮಗುವನ್ನು ಪ್ರೀತಿಯಿಂದ ಬೆಳೆಸಿದ ಮಕ್ಕಳಿಲ್ಲದ ದಂಪತಿಗಳಿಗೆ ಉತ್ತಮ ಹಕ್ಕು ಇದೆ ಎಂದು ಕ್ರಮೇಣ ಆಕೆಯ ಮನವೊಲಿಸುತ್ತಾನೆ .
ಚಿತ್ರದ ಕತೆ
[ಬದಲಾಯಿಸಿ]ಬರ್ಲಿನ್ ನಲ್ಲಿ ಮಕ್ಕಳಿಲ್ಲದ ಮಧ್ಯಮ ವರ್ಗದ ದಂಪತಿಗಳಾದ ವರ್ನರ್ ಮತ್ತು ಜೂಲಿಯಾ ಒಂದು ಬಿಕ್ಕಟ್ಟನ್ನು ಎದುರಿಸುತ್ತಾರೆ. ಗರ್ಭಿಣಿಯಾಗಲು ಸಾಧ್ಯವಾಗದ ಜೂಲಿಯಾ ತನ್ನ ಹದಿಹರೆಯದಲ್ಲಿ ಒಂಟಿಯಾಗಿದ್ದಾಗ ಜನ್ಮ ನೀಡಿದ ಮಗುವನ್ನು ಮರಳಿ ಪಡೆಯಲು ಬಯಸುತ್ತಾಳೆ. ಚಿಕ್ಕ ಹುಡುಗನಿಗೆ ಈಗ ಆರು ವರ್ಷ ಮತ್ತು ಮಕ್ಕಳಿಲ್ಲದ ಕಾರ್ಮಿಕ ವರ್ಗದ ದಂಪತಿ, ರಾಡೆಕ್ ಮತ್ತು ಅವನ ಹೆಂಡತಿ ಎಂಬ ಪೋಲಿಷ್ ವಲಸಿಗನೊಂದಿಗೆ ಎಸೆನ್‌ನಲ್ಲಿ ಸಂತೋಷದಿಂದ ವಾಸಿಸುತ್ತಿದ್ದಾನೆ. ಅವಳನ್ನು ತಡೆಯಲು ವರ್ನರ್ ಪ್ರಯತ್ನಿಸಿದರೂ, ಅವಳು ಮಗುವನ್ನು ಹಿಂಬಾಲಿಸಲು ಪ್ರಾರಂಭಿಸಿದಳು. ಯಾವುದೇ ಔಪಚಾರಿಕ ದತ್ತು ಇಲ್ಲದಿರುವುದರಿಂದ, ಅವಳು ಹುಡುಗನ ಮೇಲೆ ಕಾನೂನಿನ ಹಕ್ಕು ಹಾಗೂ ನೈತಿಕ ಹಕ್ಕನ್ನು ಹೊಂದಿದ್ದು ಒಂದು ದಿನ ಈಜುಕೊಳದಲ್ಲಿ ಅವಳು ಅವನನ್ನು ಅಪಹರಿಸುತ್ತಾಳೆ.
ತನ್ನ ಪ್ರೀತಿಯ ಪುಟ್ಟ ಹುಡುಗನನ್ನು ಬರ್ಲಿನ್‌ಗೆ ಪತ್ತೆಹಚ್ಚಿ, ರಾಡೆಕ್ ಫ್ಲಾಟ್‌ಗೆ ನುಗ್ಗಿ ಅವನನ್ನು ಮರಳಿ ವಶಪಡಿಸಿಕೊಳ್ಳುತ್ತಾನೆ. ವೆರ್ನರ್ ರೈಲ್ವೆ ನಿಲ್ದಾಣದಲ್ಲಿ ರಾಡೆಕ್ ನನ್ನು ಬಂಧಿಸಿ ಹುಡುಗನನ್ನು ವಶಪಡಿಸಿಕೊಳ್ಳುತ್ತಾನೆ.. ಜೂಲಿಯಾಳ ಮಾನಸಿಕ ಸಮತೋಲನ ಅನಿಶ್ಚಿತವಾಗಿರುವುದು ಮಾತ್ರವಲ್ಲದೆ ಆಕೆಗೆ ಪೋಷಕರ ಕೌಶಲ್ಯದ ಕೊರತೆಯಿದೆ ಎಂಬುದು ಶೀಘ್ರವಾಗಿ ಸ್ಪಷ್ಟವಾಗುತ್ತದೆ. ತನಗಾದ ನಷ್ಟವನ್ನು ಸಹಿಸದ ರಾಡೆಕ್, ಕಾರ್ಖಾನೆಯ ಚಿಮಣಿ ಹತ್ತಿ ಮಗುವನ್ನು ಹಿಂತಿರುಗಿಸದಿದ್ದರೆ ತಾನು ಅಲ್ಲಿಂದ ಜಿಗಿಯುವುದಾಗಿ ಹೇಳುತ್ತಾನೆ. ಸುದ್ದಿ ಮಾಧ್ಯಮಗಳು ಪ್ರಕರಣವನ್ನು ಕೈಗೆತ್ತಿಕೊಳ್ಳುತ್ತವೆ, ಜನತೆಯ ಹೆಚ್ಚಿನ ಭಾಗವು ಹುಡುಗನನ್ನು ಬೆಳೆಸಿದ ಪ್ರಾಮಾಣಿಕ ದಂಪತಿಗಳ ಪರವಾಗಿದ್ದು ಸ್ವಾರ್ಥಿ ತಾಯಿಯ ವಿರುದ್ಧವಾಗಿರುತ್ತದೆ . ರಾಡೆಕ್ ಗಡುವುಗಿಂತ ಸ್ವಲ್ಪ ಮುಂಚೆ, ವರ್ನರ್ ಹುಡುಗನನ್ನು ಮರಳಿ ನೀಡುವಂತೆ ಜೂಲಿಯಾಳನ್ನು ಮನವೊಲಿಸುತ್ತಾನೆ, ಆದರೆ ಈ ಜೋಡಿಗೆ ಯಾವ ರೀತಿಯ ದಾಂಪತ್ಯ ಜೀವನವು ಉಳಿದಿದೆ ಎಂಬ ಬಗ್ಗೆ ಅನುಮಾನ ಉಂಟಾಗುತ್ತದೆ.
ಪಾತ್ರವರ್ಗ
[ಬದಲಾಯಿಸಿ]- ರೋಮಿ ಸ್ಕೀಡರ್ - ಜೂಲಿಯಾ
- ಮೈಕೆಲ್ ಪಿಕ್ಕೋಲಿ - ವರ್ನರ್
- ಹ್ಯಾನ್ಸ್-ಕ್ರಿಶ್ಚಿಯನ್ ಬ್ಲೆಚ್-ರಾಡೆಕ್
- ಸೊಂಜಾ ಶ್ವಾರ್ಜ್ - ರಾಡೆಕ್ ಪತ್ನಿ
- ಮಾರಿಯೋ ಹತ್ - ಪುಟ್ಟ ಹುಡುಗ
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಲಾ ವೊಲ್ಯೂಸ್ at IMDb