ರೈಫಿಸೆನ್‌ಲ್ಯಾಂಡ್ಸ್‌ಬ್ಯಾಂಕ್ ಒಬೆರೊಸ್ಟೆರಿಚ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರೈಫಿಸೆನ್‌ಲ್ಯಾಂಡ್ಸ್‌ಬ್ಯಾಂಕ್ ಒಬೆರೊಸ್ಟೆರಿಚ್
ಸಂಸ್ಥೆಯ ಪ್ರಕಾರಆಕ್ಟಿಂಗೆಸೆಲ್‌ಶಾಫ್ಟ್
ಸ್ಥಾಪನೆ೧೯೯೦
ಮುಖ್ಯ ಕಾರ್ಯಾಲಯಲಿಂಜ್, ಆಸ್ಟ್ರಿಯಾ[೧]
ಉದ್ಯಮಆಸ್ತಿ ನಿರ್ವಹಣೆ, ಸಹಕಾರಿ ಬ್ಯಾಂಕಿಂಗ್
ಒಟ್ಟು ಆಸ್ತಿ€೩೫.೭ ದಶಲಕ್ಷ[೨]
ಉದ್ಯೋಗಿಗಳು೮೮[೧]
ಪೋಷಕ ಸಂಸ್ಥೆರೈಫಿಸೆನ್ ಜೆಂಟ್ರಾಲ್ಬ್ಯಾಂಕ್ (೨೦೧೭ ರವರೆಗೆ)
ರೈಫಿಸೆನ್ ಬ್ಯಾಂಕೆಂಗ್ರುಪ್ಪೆ
ಜಾಲತಾಣwww.raiffeisen.at/ooe/rlb/de/

ರೈಫಿಸೆನ್‌ಲ್ಯಾಂಡ್ಸ್‌ಬ್ಯಾಂಕ್ ಒಬೆರೊಸ್ಟೆರಿಚ್ ಎ.ಜಿ.( ಆರ್‍ಎಲ್‍ಬಿ ಒಒ ) ೧೯೦೦ ರಲ್ಲಿ ಸ್ಥಾಪಿಸಲಾದ ಆಸ್ಟ್ರಿಯನ್ ಬ್ಯಾಂಕಿಂಗ್ ಗುಂಪಾಗಿದೆ. ಇದು ಆಸ್ಟ್ರಿಯಾದ ಲಿಂಜ್ ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಇದು ಅಪ್ಪರ್ ಆಸ್ಟ್ರಿಯಾದ ರೈಫಿಸೆನ್ ಬ್ಯಾಂಕಿಂಗ್ ಗ್ರೂಪ್‌ನ ಕೇಂದ್ರ ಸಂಸ್ಥೆಯಾಗಿದೆ ಮತ್ತು ಆಸ್ಟ್ರಿಯಾದ ಎಂಟು ಪ್ರಾಂತೀಯ ಕೇಂದ್ರ ಬ್ಯಾಂಕ್‌ಗಳಲ್ಲಿ ದೊಡ್ಡ ಬ್ಯಾಂಕ್‌ ಆಗಿದೆ.

೨೦೧೪ ರ ಕೊನೆಯಲ್ಲಿ ಯುರೋಪಿಯನ್ ಬ್ಯಾಂಕಿಂಗ್ ಮೇಲ್ವಿಚಾರಣೆ ಸಂಸ್ಥೆಯನ್ನು ಜಾರಿಗೆ ತಂದಾಗಿನಿಂದ ಆರ್‍ಎಲ್‍ಬಿ ಒಒ ಅನ್ನು ಮಹತ್ವದ ಸಂಸ್ಥೆಯಾಗಿ ಗೊತ್ತುಪಡಿಸಲಾಗಿದೆ.[೩][೪]

ರಚನೆ[ಬದಲಾಯಿಸಿ]

ರೈಫಿಸೆನ್‌ಲ್ಯಾಂಡ್ಸ್‌ಬ್ಯಾಂಕ್ ಒಬೆರೊಸ್ಟೆರಿಚ್ ಎಜಿಯು ಅಪ್ಪರ್ ಆಸ್ಟ್ರಿಯನ್ ರೈಫಿಸೆನ್ ಬ್ಯಾಂಕ್‌ಗಳ ಒಡೆತನದಲ್ಲಿದೆ.[೫] ಈ ಬ್ಯಾಂಕ್‌ಗಳನ್ನು ಸಹಕಾರಿ ಸಂಸ್ಥೆಗಳಾಗಿ ಆಯೋಜಿಸಲಾಗಿದೆ ಮತ್ತು ಅದೇ ಪ್ರದೇಶದ ಸಹ-ಮಾಲೀಕರ ಒಡೆತನದಲ್ಲಿದೆ.[೬]

ರೈಫಿಸೆನ್‌ಲ್ಯಾಂಡ್ಸ್‌ಬ್ಯಾಂಕ್ ಒಬೆರೊಸ್ಟೆರಿಚ್‌ ವೈಯಕ್ತಿಕ ಗ್ರಾಹಕರಿಗೆ ಸೇವೆ ಸಲ್ಲಿಸುವುದರ ಜೊತೆಗೆ ಖಾಸಗಿ ಮತ್ತು ಕಾರ್ಪೊರೇಟ್ ಬ್ಯಾಂಕಿಂಗ್‌ನಲ್ಲಿಯೂ ಸಹ ಸಹಾಯ ಮಾಡುತ್ತದೆ.

ಇತಿಹಾಸ[ಬದಲಾಯಿಸಿ]

೨೦ ನೇ ಶತಮಾನದಲ್ಲಿ ಬ್ಯಾಂಕ್‌ನ್ನು ಒಂದು ಕಚೇರಿಯಾಗಿ ಸ್ಥಾಪಿಸಲಾಯಿತು. ನಂತರ ರೈಫಿಸೆನ್ ಝೆಂಟ್ರಾಲ್ಕಾಸ್ಸೆ ಎಂಬ ಹೆಸರಿನಿಂದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಗೊಂಡಿತು. ಮುಂದಿನ ವರ್ಷಗಳಲ್ಲಿ ರೈಫಿಸೆನ್ ಜೆಂಟ್ರಾಲ್ಕಾಸ್ಸೆ ಚಟುವಟಿಕೆಯ ಕ್ಷೇತ್ರ ಮತ್ತು ಸ್ಥಳಗಳನ್ನು ವಿಸ್ತರಿಸಲಾಯಿತು. ೧೯೮೮ ರಲ್ಲಿ, ಬ್ಯಾಂಕಿನ ಹೆಸರು "ರೈಫಿಸೆನ್ ಝೆಂಟ್ರಾಲ್ಕಾಸ್ಸೆ ಒಬೆರೊಸ್ಟೆರಿಚ್‌" ನಿಂದ "ರೈಫಿಸೆನ್‌ ಲ್ಯಾಂಡ್ಸ್‌ ಬ್ಯಾಂಕ್ ಒಬೆರೊಸ್ಟೆರಿಚ್‌" ಗೆ ಬದಲಾಯಿತು. ಒಂದು ವರ್ಷದ ನಂತರ, ೧೯೯೦ ರಲ್ಲಿ ಲಿಂಜ್‌ನಲ್ಲಿ ರೈಲ್ವೇ ನಿಲ್ದಾಣ ಪೂರ್ಣಗೊಂಡಿತು. ಅದೇ ವರ್ಷ, ಬಡ್ವೈಸ್‌ನಲ್ಲಿ ಪ್ರತಿನಿಧಿ ಕಚೇರಿಯನ್ನು ತೆರೆಯಲಾಯಿತು.

೧೯೯೧ ರಲ್ಲಿ, ಜರ್ಮನಿಯ ಪಾಸೌ ನಗರದಲ್ಲಿ ಬ್ಯಾಂಕ್ ತೆರೆಯಿತು. ಇದು ಜರ್ಮನಿಯ ಬವೇರಿಯಾದಲ್ಲಿ ಯಶಸ್ವಿ ವ್ಯಾಪಾರ ಅಭಿವೃದ್ಧಿಗೆ ಅಡಿಪಾಯ ಹಾಕಿತು. ರೈಫ್‌ಫೈಸೆನ್‌ ಲ್ಯಾಂಡ್ಸ್‌ ಬ್ಯಾಂಕ್ ಒಬೆರೊಸ್ಟೆರ್ರಿಚ್ ಈಗ ಬವೇರಿಯಾ ಮತ್ತು ಬಾಡೆನ್-ವುರ್ಟೆಂಬರ್ಗ್‌ನಲ್ಲಿ ಎಂಟು ಶಾಖೆಗಳನ್ನು ಹೊಂದಿದೆ: ಆಗ್ಸ್‌ಬರ್ಗ್, ಪಾಸೌ, ನ್ಯೂರೆಂಬರ್ಗ್, ಮ್ಯೂನಿಚ್, ರೆಗೆನ್ಸ್‌ಬರ್ಗ್, ವುರ್ಜ್‌ಬರ್ಗ್, ಉಲ್ಮ್ ಮತ್ತು ಹೀಲ್‌ಬ್ರೋನ್.[೭] ಜರ್ಮನಿಯ "ಗ್ರೋಸರ್ ಪ್ರೀಸ್ ಡೆಸ್ ಮಿಟ್ಟೆಲ್‌ಸ್ಟಾಂಡೆಸ್" ಸ್ಪರ್ಧೆಯಲ್ಲಿ, ಹಲವಾರು ಬಾರಿ "ವರ್ಷದ ಬ್ಯಾಂಕ್" ಪ್ರಶಸ್ತಿಯೊಂದಿಗೆ ಗೌರವಿಸಲ್ಪಟ್ಟಿದೆ.[೮] ರೈಫಿಸೆನ್‌ಬ್ಯಾಂಕ್ ಎ.ಎಸ್., ಇದರಲ್ಲಿ ರೈಫಿಸೆನ್‌ ಲ್ಯಾಂಡ್ಸ್‌ ಬ್ಯಾಂಕ್ ಒಬೆರ್‌ಸ್ಟೆರಿಚ್ ಪಾಲನ್ನು ಹೊಂದಿದೆ, ಇದನ್ನು ೧೯೯೩ ರಲ್ಲಿ ಜೆಕ್ ಗಣರಾಜ್ಯದಲ್ಲಿ ಸ್ಥಾಪಿಸಲಾಯಿತು.[೯] ೧೯೯೫ ರಲ್ಲಿ ಪ್ರೈವೇಟ್ ಬ್ಯಾಂಕ್ ಎಜಿ ಸ್ಥಾಪನೆಯೊಂದಿಗೆ ಮತ್ತೊಂದು ವಿಭಾಗವನ್ನು ಸ್ಥಾಪಿಸಲಾಯಿತು, ಇದು ಗ್ರಾಹಕರಿಗೆ ಅತ್ಯಾಧುನಿಕ ಖಾಸಗಿ ಬ್ಯಾಂಕಿಂಗ್ ಮತ್ತು ಅನೇಕ ವಿಶೇಷ ಸೇವೆಗಳನ್ನು ನೀಡುತ್ತದೆ. ೧೯೯೮ ರಲ್ಲಿ ಕೆಪ್ಲರ್ ಫಾಂಡ್ಸ್ ಕೆಎಜಿಯನ್ನು ಸ್ಥಾಪಿಸಲಾಯಿತು. ೨೦೦೪ ರಲ್ಲಿ ರೈಫಿಸೆನ್‌ ಲ್ಯಾಂಡ್ಸ್‌ ಬ್ಯಾಂಕ್ ಒಬೆರೊಸ್ಟೆರಿಚ್‌‍ನ್ನು ಸಾರ್ವಜನಿಕ ಸೀಮಿತ ಕಂಪನಿಯಾಗಿ ಪರಿವರ್ತಿಸಲಾಯಿತು. ೧೯೮೫ ರಿಂದ ೨೦೧೨ ರವರೆಗೆ, ಲುಡ್ವಿಗ್ ಸ್ಕೇರಿಂಗರ್ ರೈಫಿಸೆನ್‌ ಲ್ಯಾಂಡ್ಸ್‌ ಬ್ಯಾಂಕ್ ಒಬೆರೊಸ್ಟೆರಿಚ್‌ನ ಸಿಇಒ ಮತ್ತು ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷರಾಗಿದ್ದರು.[೧೦] ಮಾರ್ಚ್ ೩೧, ೨೦೧೨ ರಂದು ನಡೆದ ಈ ಕಾರ್ಯದಲ್ಲಿ ಹೆನ್ರಿಕ್ ಸ್ಚಾಲರ್ ಅವರು ಸಂಸ್ಥೆಯ ಉತ್ತರಾಧಿಕಾರಿಯಾದರು.[೧೧]

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ "Privat Bank AG der Raiffeisenlandesbank Oberoesterreich". Bloomberg. Retrieved 10 October 2019.
  2. "Geschäftsbericht 2018". Raiffeisen Landesbank Oberösterreich. Archived from the original on 25 ಅಕ್ಟೋಬರ್ 2021. Retrieved 10 October 2019.
  3. "The list of significant supervised entities and the list of less significant institutions" (PDF). European Central Bank.
  4. "List of supervised entities" (PDF). European Central Bank.
  5. "Raiffeisenlandesbank Oberoesterreich AG - Munich Financial Center Initiative". www.fpmi.de. Retrieved 2021-04-13.
  6. "Raiffeisen Credit Cooperatives in Austria". www.thebanks.eu. Retrieved 16 April 2021.
  7. "Standorte und Ansprechpartner". Raiffeisen Landesbank Oberösterreich. Retrieved 10 October 2019.
  8. "Raiffeisenlandesbank Oberösterreich Aktiengesellschaft". kompetenznetz mittelstand. 10 January 2019. Retrieved 10 October 2019.
  9. "Raiffeisen in Tschechien". Raiffeisen Bank International AG. Archived from the original on 10 ಅಕ್ಟೋಬರ್ 2019. Retrieved 10 October 2019.
  10. "Ex-RLB-Chef Scharinger verstorben". 10 January 2019. Retrieved 10 October 2019.
  11. "Der Vorstand der Raiffeisenlandesbank Oberösterreich". Raiffeisen Landesbank Oberösterreich. Retrieved 10 October 2019.