ಮೋರ್ಯ ಗೋಸಾವಿ
ಮೋರ್ಯ ಗೋಸಾವಿ | |
---|---|
ಜನನ | 1375 CE ಬೀದರ್, ಕರ್ನಾಟಕ or ಮೋರ್ಗಾಂವ್, ಮಹಾರಾಷ್ಟ್ರ, ಭಾರತ |
ಮರಣ | 1561 CE ಚಿಂಚ್ವಾಡ್, ಮಹಾರಾಷ್ಟ್ರ |
ಗೌರವಗಳು | ಗಣ್ಪತೀಯ ಪಂಥದ ಮೂಲ ಪ್ರತಿಪಾದಕರೆಂದು ಪ್ರಸಿದ್ಧರಾಗಿದ್ದಾರೆ. |
ತತ್ವಶಾಸ್ತ್ರ | ಗಣ್ಪತೀಯ |
ಮೋರ್ಯ ಗೋಸಾವಿ, ಮೊರಿಯಾ ಗೋಸಾವಿ,'ಅಥವಾ, ಮೊರೋಬ, ಎಂಬ ಹೆಸರಿನಲ್ಲಿ ಕರೆಯಲ್ಪಡುತ್ತಿರುವ ಹಿಂದೂ ಧರ್ಮದ ಗಣಪತೀಯ ಪಂಥದ ಪ್ರಮುಖ ಸಂತರನ್ನು ಭಕ್ತಾದಿಗಳು ಪ್ರವಾದಿ ಎಂದೂ,ಗಣೇಶನ ಪರಮ ಭಕ್ತನೆಂದೂ ಪರಿಗಣಿಸಿ ಆರಾಧಿಸುತ್ತಾರೆ.'ಮೋರ್ಯ ಗೋಸವಿ'ಯವರ ಬಾಲ್ಯದ ಹೆಸರು ಮೋರ್ಯ ಭಟ್ಟನೆಂದು. ಬಾಲ್ಯದಲ್ಲಿ ಅನಾರೋಗ್ಯ ಪೀಡಿತರಾಗಿದ್ದ ಬಾಲಕನನ್ನು ಅವರ ಮನೆತನದ ಗುರುಗಳೂ ಆಯುರ್ವೇದ ಪಂಡಿತರೂ ಆಗಿದ್ದ 'ನಾರಾಯಣ್ ಭಾರತಿ ಗೋಸಾವಿ'ಯವರು ಆಯುರ್ವೇದ ಅಷಧಿಗಳನ್ನು ಕೊಟ್ಟು ಉಪಚರಿಸಿದರು. ಅವರ ಸಲಹೆಯಂತೆ ಬಾಲಕನ ಹೆಸರನ್ನು 'ಗೋಸಾವಿ' ಎಂದು ನಾಮಕರಣ ಮಾಡಿದಮೇಲೆ ಕ್ರಮೇಣ ಅವನ ಆರೋಗ್ಯದಲ್ಲಿ ವೃದ್ಧಿಯಾಯಿತು. 'ಸಂತ ತುಕಾರಾಂ ಮಹಾರಾಜ'ರೂ ಮೋರ್ಯ ಗೋಸಾವಿಯವರಿಗೆ ತಮ್ಮ ವಂದನೆಯನ್ನು ಸಲ್ಲಿಸಿದ್ದಾರೆ. ಚಿಕ್ಕವಯಸ್ಸಿನಿಂದಲೂ ಮೋರ್ಯರು ಅಂತರ್ಮುಖಿಯಾಗಿರುತ್ತಿದ್ದರು. ಯಾವ ಕೆಲಸಗಳಲ್ಲೂ ಆಸಕ್ತಿ ವಹಿಸುತ್ತಿರಲಿಲ್ಲ. ಇದನ್ನು ಗಮನಿಸಿದ ತಂದೆ-ತಾಯಿಗಳು ಅವರನ್ನು ಮನೆಯಿಂದ ಹೊರಗೆ ಕಳಿಸಿದರು. ಮನೆಯಿಂದ ಹೊರಗಿನ ಪ್ರಪಂಚಕ್ಕೆ ಕಾಲಿಟ್ಟ ಮೋರ್ಯರು, ತಮ್ಮ ಗೆಳೆಯರ ಜೊತೆ ಮೊರ್ಗಾವ್ ನ ಹೆಸರಾಂತ ಗಣಪತಿ ದೇವಸ್ಥಾನಕ್ಕೆ ಹೋಗಿ, ಅಲ್ಲಿ ಭಕ್ತಿಯಿಂದ ಪ್ರಾರ್ಥಿಸುತ್ತಾ ದೈವಸಾನ್ನಿದ್ಧ್ಯದಲ್ಲಿ ತಲ್ಲೀನರಾಗಿರುತ್ತಿದ್ದರು. ಒಮ್ಮೆ ಗಣೇಶ ಮೂರ್ತಿಯ ಅರ್ಚನೆ ಮಾಡಲು ಹೋದಾಗ, ಅವರನ್ನು ಮಂದಿರದೊಳಗೆ ಬಿಡಲಿಲ್ಲ. ಮೋರ್ಯರು ಇದರಿಂದ ಖಿನ್ನರಾದರು. ಆಗ ಅವರ ಆರಾಧ್ಯದೇವತೆಯಾದ ಗಣೇಶನು ಸ್ವಪ್ನದಲ್ಲಿ ಪ್ರತ್ಯಕ್ಷನಾಗಿ, ಹತ್ತಿರದ 'ಚಿಂಚ್ ವಾಡ್' ಗ್ರಾಮಕ್ಕೆ ಹೋಗಲು ಅಪ್ಪಣೆಕೊಟ್ಟರು. ಅಲ್ಲಿ ಗಣೇಶ ಮಂದಿರವನ್ನು ನಿರ್ಮಿಸಿ ಅಲ್ಲೇ "ಸಂಜೀವನ್ ಸಜೀವ ಸಮಾಧಸ್ತ"ರಾದರು. ಭಕ್ತಾದಿಗಳಿಗೆ ಅವರ ಮಗ ಚಿಂತಾಮಣಿಯೂ ಗಣೇಶನ ಪ್ರತ್ಯವತಾರವೆಂದು ಪ್ರತೀತಿ ಇದೆ. ಅವರನ್ನು ಶ್ರದ್ಧಾಳುಗಳು ಪ್ರಿಯಿಯಿಂದ 'ದೇವ್' ಎಂದು ಕರೆಯುತ್ತಿದ್ದರು. ಈ ಪದ್ಧತಿ ೫ ತಲೆಮಾರಿನವರೆಗೂ ಇದ್ದು, ಇಂದಿಗೂ ಅದೇ ಹೆಸರು ಭಕ್ತಾದಿಗಳ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ. ಗಣಪತಿ ದೇವಸ್ಥಾನಕ್ಕೆ ಹೋದವರು, ಮೋರ್ಯ ಗೋಸಾವಿಯವರ [೧] ಸಮಾಧಿಯನ್ನೂ ನೋಡದೆ ಬರುವುದಿಲ್ಲ.
ಇತಿಹಾಸಕಾರರ ಬರಹಗಳು
[ಬದಲಾಯಿಸಿ]- ಯುವರಾಜ್ ಕೃಷ್ಣನ್ ಎಂಬುವರು ಮೋರ್ಯ ಗೋಸಾವಿಯವರು ೧೩-೧೪ ಶತಮಾನದಲ್ಲಿ ಇದ್ದಿರಬಹುದೆಂದು ಅನುಮಾನಿಸಿದ್ದಾರೆ.
- ಆರ್.ಸಿ.ಧೇರೆ ೧೬ ನೆಯ ಶತಮಾನದಲ್ಲಿರಲು ಸಾಧ್ಯವಿದೆ ಎನ್ನುತ್ತಾರೆ.
- ಪಾಲ್ ಬಿ.ಕೋರ್ಟ್ ರೈಟ್, ಮತ್ತು ಅನೆ ಫೆಲ್ಧುಸ್ ಎನ್ನುವವರು ೧೬೧೦-೫೯ ರ ಆಸುಪಾಸಿನಲ್ಲಿರಬಹುದೆಂದು ಅನುಮಾನಿಸಿದ್ದಾರೆ.
- ಪಿಂಪ್ರಿ ಚಿಂಚ್ವಾದ್ ಮ್ಯೂನಿಸಿಪಲ್ ಕಾರ್ಪೊರೇಷನ್ (c. ೧೩೩೦-೧೫೫೬)
- ಮೋರ್ಯ ಗೋಸಾವಿಯವರ ವಿವಾಹ ೧೪೭೦ ರಲ್ಲಿ ಜರುಗಿತು. ಮಗ, ಚಿಂತಾಮಣ್ ಹುಟ್ಟಿದ್ದು ೧೪೮೧ ರಲ್ಲಿ.
- The Encyclopedia of Religion dates his death to 1651 ಮರಣ [೨]
ಹಲವು ಕತೆಗಳು
[ಬದಲಾಯಿಸಿ]- ಹುಮಾಯುನ್ (1508–1556), Shahaji (1594–1665)] great-grandson Shivaji (1627–1680)
- His memorial temple has an inscription records that it was started in 1658-9.ಹಲವಾರು ಕತೆಗಳು ಪ್ರಚಲಿತದಲ್ಲಿವೆ.
- ಒಂದು ಕತೆಯ ಪ್ರಕಾರ, ಮೋರ್ಯ ಗೋಸಾವಿ ಬೀದರ್ (ಕರ್ನಾಟಕ) ದಲ್ಲಿ ಜನಿಸಿದರು. ತಂದೆ, ತಮ್ಮ ಮಗ ಮೋರ್ಯ ಕೆಲಸಕ್ಕೆ ಬಾರದ ಸೋಮಾರಿಯೆಂದು ಮನೆಯಿಂದ ಹೊರಗೆಹಾಕಿದಾಗ ಅವನು ಮೊರ್ಗಾವ್ ಎಂಬ ಗ್ರಾಮಕ್ಕೆ ಹೋಗುತ್ತಾನೆ. ಪಕ್ಕದ ಮಹಾರಾಷ್ಟ್ರದಲ್ಲಿದ್ದ ಗಣೇಶದೇವಾಲಯ ಚಿಂಚ್ವಾಡ್ ನೆಲೆಸಿದ 50 ಮೈಲಿಗಳ (80 km) ಮೊರ್ಗಾವ್.
- ಮತ್ತೊಂದು ಕತೆಯ ಪ್ರಕಾರ, ಒಬ್ಬ ಬಡವ ಸಭ್ಯ ಪರಿವಾರ ಪುಣೆಯವರು. ಅವರಿಗೆ ಗಣಪತಿಯ ಅನುಗ್ರಹದಿಂದ ಮಗ ಹುಟ್ಟಿದಮೇಲೆ ಅವರು ಪಿಂಪಲ್ ಗೆ ಹೋದರು 40 ಮೈಲಿಗಳು (64 ಮೀ) ಚಿಂಚ್ವಾಡದಿಂದ.
- ತಂದೆತಾಯಿ ಸತ್ತಮೇಲೆ ತಥವಾಡೆಗೆ ಹೋದರು. ಚಿಂಚ್ ವಾಡದಿಂದ ೨ ಮೈಲಿ(3.2 km) ಎಲ್ಲಾ ಕತೆಗಳಲ್ಲೂ ಅವರು ಮೊರ್ಗಾವ್ ದೇವಾಲಯಕ್ಕೆ ಆಗಾಗ ಹೋಗುತ್ತಿದ್ದರೆಂದು ತಿಳಿಯುತ್ತದೆ.
- ಮತ್ತೊಂದು ಕತೆಯ ಪ್ರಕಾರ ಪೋಷಕರು ಭಟ್ ಶಾಲಿಗ್ರಾಮ್ ಮತ್ತು ಪತ್ನಿ ಬೀದರ್ ನಿಂದ ಮೊರ್ಗಾವ್ ಗೆ ಹೋದರು ಗಣೇಶನಿಗೆ ಹರಕೆ ಸಲ್ಲಿಸಿ ಪ್ರಾರ್ಥಿಸಿದ ಬಳಿಕ ಮೋರ್ಯ ಜನಿಸಿದರು ಮಗುವಿಗೆ ಆರೋಗ್ಯ ಸರಿಯಿಯಿಲ್ಲದೆ, ಗಣೇಶನಿಗೆ ಹರಕೆ ಮಾಡಿಕೊಂಡರು. ಮೋರ್ಯರ ಅಪಾರ ಭಕ್ತಿಪರವಶತೆಗಳನ್ನು ಕಂಡು ಅವರಿಗೆ ತಮ್ಮ'ಭಟ್' ಎನ್ನುವ ಹೆಸರನ್ನು ಬದಲಾಯಿಸಿ ಗೋಸಾವಿ (ಭಗವಂತನ ಶರಣಾರ್ಥಿ ಸದಾ ಗಣೇಶನ ಜಪ ಮಾಡುವ ಶ್ರದ್ಧಾಳು ಎಂದು) ಎಂದು ಕರೆದರು.
ಗಣೇಶ್ ಚತುರ್ಥಿಯದಿನ
[ಬದಲಾಯಿಸಿ]ಸಾಮಾನ್ಯವಾಗಿ ವರ್ಷದ ಆಗಸ್ಟ್-ಸೆಪ್ಟೆಂಬರ್ ತಿಂಗಳಿನಲ್ಲಿ ಬರುವ "ಗಣೇಶ ಚತುರ್ಥಿ"ಯ ತಿಥಿಯಂದು ವಿಜೃಂಭಣೆಯಿಂದ ಗಣಪತಿ ಹಬ್ಬವನ್ನು ಆಚರಿಸಲಾಗುತ್ತದೆ. ದೇವಾಲಯಕ್ಕೆ ಹೋದಾಗ ಭಜನೆಮಾಡಲು ಮೋರ್ಯರಿಗೆ ಜಾಗ ಸಿಗಲಿಲ್ಲ. ಎಲ್ಲ ಸಿರಿವಂತ ಭಕ್ತಗಣ ಪ್ರಾಂಗಣದಲ್ಲಿ ತುಂಬಿತ್ತು. ಭಕ್ತರೆಲ್ಲರೂ ತಮ್ಮ ಹಣ್ಣು-ಕಾಯಿಯ ತಟ್ಟೆಯನ್ನು ಒಂದು ಮರದ ಕೆಳಗೆ ನಿಯಮಿತವಾಗಿ ಇಟ್ಟಿದ್ದರು. ಮೋರ್ಯರೂ ಸಹಿತ ತಾವು ತಂದಿದ್ದ ಹಣ್ಣು-ಕಾಯಿಯ ತಟ್ಟೆಯನ್ನು ಮರದ ಕೆಳಗಿಟ್ಟು ದೇವಾಲಯದ ಹತ್ತಿರ ಹೋದರು. ಬರುವಷ್ಟರಲ್ಲಿ ತಟ್ಟೆಗಳು ಬದಲಾಯಿಸಿದ್ದವು. ಸಾಹುಕಾರರಾದ ಪಿಂಗಳೆ ಪರಿವಾರ, ಇದರಿಂದ ಕುಪಿತರಾಗಿ ಮೋರ್ಯರನ್ನು ಮನಸ್ಸಿಗೆ ಬಂದಂತೆ ಬೈದು, ಮೊರ್ಗಾವ್ ದೇವಾಲಯದ ಒಳಗೆ ಹೋಗಲು ತಡೆದರು. ಮೋರ್ಯರಿಗೆ ಬಹಳ ಯಾತನೆಯಾಯಿತು ಪಿಂಗಳೆಗೆ ಸ್ವಪ್ನದಲ್ಲಿ ಗಣೇಶನು ಕಾಣಿಸಿಕೊಂಡು ಮೋರ್ಯರಿಗೆ ಅವಮಾನಮಾಡಿದ್ದು ಸರಿಯಲ್ಲವೆಂದು ಹೇಳಿದಂತೆ ಕನಸಾಯಿತು. ಪಿಂಗಳೆ ನಿದ್ದೆಯಿಂದ ಎಚ್ಚೆತ್ತಮೇಲೆ, ಮೊರ್ಯರನ್ನು ಕ್ಷಮಾಪಣೆ ಕೇಳಿ ವಾಪಸ್ ಬರಲು ಕೇಳಿಕೊಂಡರು. ಆದರೆ ಅವರು ಬರಲಿಲ್ಲ. ಮೋರ್ಯ ಗೋಸಾವಿಗೆ ಚಿಂಚ್ವಾಡಕ್ಕೆ [೩] ಹೋದರೆ, ಅಲ್ಲಿ ಗಣಪತಿಯು ಬಂದು ಸದಾ ಅವರ ಜೊತೆಗಿರುವುದಾಗಲಿ ಅಶರೀರವಾಣಿ ಆಶ್ವಾಸನೆ ಕೊಟ್ಟಿತು. [೪]
ಗೃಹಸ್ಥಾಶ್ರಮ
[ಬದಲಾಯಿಸಿ]ಭಗವದಾಜ್ಞೆಯಂತೆ ಮೋರ್ಯರು ಮದುವೆಮಾಡಿಕೊಳ್ಳುತ್ತಾರೆ. ಚಿಂಚ್ವಾಡ ಹತ್ತಿರದ ತಾತಾವಢೆ ಗ್ರಾಮದ ನಿವಾಸಿ,ಗೋವಿಂದ್ ರಾವ್ ಕುಲಕರ್ಣಿಯವರ ಮಗಳ ಜೊತೆ ವಿವಾಹವಾಯಿತು. ಗುರುಗಳ ಆಣತಿಯಂತೆ ಠೇವುರಿನಲ್ಲಿ ೪೨ ದಿನ ಉಪವಾಸ ವ್ರತವನ್ನು ಭಕ್ತಿ ಶ್ರಾಧ್ದಹೆಗಳಿಂದ ಆಚರಿಸಿದರು. ಆಗ ಅವರಿಗೆ 'ಗಣಪತಿಜ್ಞಾನ' ಪ್ರಾಪ್ತಿಯಾಯಿತು. ಗೋಸಾಯಿ. ಥೇವುರ್, ರಂಜನ್ ಗಾವ್ (ಮತ್ತೊಂದು ಗಣೇಶ ದೇಗುಲ) ಮತ್ತು ಚಿಂಚ್ವಾದ್ ಗೆ ಹೋಗಿಬರುತ್ತಿದರು. ಅವರ ಮಗ ಚಿಂತಾಮಣಿ (ಚಿಂತಾಮಣ್) ಗಣೇಶನ ಪ್ರತ್ಯಕ್ಷ ಅವತಾರವೆಂದು ಭಕ್ತರು ಭಾವಿಸಿದ್ದರು. ಈ ಪ್ರಸಂಗದ ಮೊದಲು ಮುಘಲ್ ಬಾದಶಹ ಹುಮಾಯುನ್ ಗೆ (೧೫೦೮-೧೫೫೬) ಕಾಬೂಲಿಗೆ ಹೋಗಿ ಮತ್ತೆ ದೆಹಲಿಗೆ ವಾಪಾಸ್ ಬಂದಮೇಲೆ ಗದ್ದುಗೆ ಸಿಕ್ಕಿತು. ಧೇರಿಯವರ ಪ್ರಕಾರ ಶಿವಾಜಿಯ ತಂದೆ ಶಹಜಿ (೧೫೯೪-೧೬೬೫) ಗೋಸಾವಿಗೆ ಧನ ಸಹಾಯ ಮಾಡಿದ ಬಗ್ಗೆ ಲಿಖಿತ ದಾಖಲೆಗಳಿವೆ.
ಮರಣ
[ಬದಲಾಯಿಸಿ]ಮೋರ್ಯರು, ಥೇವೂರ್,ರಂಜನ್ ಗಾವ್(ಅಲ್ಲೊಂದು ಗಣಪತಿ ದೇವಸ್ಥಾನವಿದೆ), ಚಿಂಚ್ವಾಡ್ ನ ಗಣಪತಿಗಳನ್ನು ನೋಡಲು ಹೋಗುತ್ತಿದ್ದರು. ಮಗ ಚಿಂತಾಮಣಿಯನ್ನು (ಚಿಂತಾಮಣ್) ಜೀವಂತ ದೇವರೆಂದು ಪೂಜಿಸುತ್ತಿದ್ದರು. ಮೊದಲು ಮೊಘಲ್ ಚಕ್ರವರ್ತಿ ಹುಮಾಯೂನ್ (1508–1556) ಕಾಬೂಲಿಗೆ ತಪ್ಪಿಸಿಕೊಂಡು ಹೋದಮೇಲೆ ದೆಹಲಿಗೆ ವಾಪಸ್ ಬಂದಾಗ ಅವನಿಗೆ ಮತ್ತೆ ಗದ್ದುಗೆ ಪ್ರಾಪ್ತವಾಯಿತು ಧೇರೆ ಹೇಳುವಂತೆ ಈ ಉಪಕಾರ ಸ್ಮರಣೆಯ ಬಳಿಕ ಹುಮಾಯುನ್ ಮೋರ್ಯ ರ ದೇವಾಲಯಕ್ಕೆ ಹಣ ಸಹಾಯ ಮಾಡಿದ. ಶಿವಾಜಿಯ ತಂದೆ ಶಹಜಿ (1594–1665) ಮೌರ್ಯ ರ ಬಗ್ಗೆ ಉಲ್ಲೇಖಿಸಿದ್ದಾರೆ. ಮೋರ್ಯ ಗೋಸಾವಿಯವರ ಹೆಂಡತಿ ತೀರಿಕೊಂಡಮೇಲೆ, ಗುರು, ನಯನ್ ಭಾರತಿ ಸಂಜೀವನ್ ಸಮಾಧಿಯ ಬಳಿಕ, ಮೋರ್ಯರೂ ಜೀವಂತವಾಗಿ ಸಂಜೀವನ್ ಸಮಾಧಿಯಲ್ಲಿ ಲೀನರಾದರು. ಆ ಸಮಾಧಿಯ ಒಳಗೆ ಪವಿತ್ರ ಪುಸ್ತಕವೊಂದನ್ನು ಪಠಣಮಾಡುತ್ತಿದ್ದುದಾಗಿ ಭಕ್ತಾದಿಗಳು ವಿವರಿಸುತ್ತಾರೆ. ನಾರಾಯಣ ಚಿಂತಾಮಣಿ ೨, ಧರ್ಮಾಧರ್ ಚಿಂತಾಮಣಿ ೩ ನಾರಾಯಣ್ ೨ ಧರ್ಮಾಧರ್ ೨ ಮುಘಲಕ್ ಚಕ್ರವರ್ತಿ ಔರಂಗಝೇಬ್ (೧೬೫೮–೧೭೦೭) ಮೊದಲಾದವರು ಬಹುದೊಡ್ಡ ಮಾತ್ರದಲ್ಲಿ ೮ ಗ್ರಾಮಗಳನ್ನು ಬಳುವಳಿಯಾಗಿ ಕೊಟ್ಟ ದಾಖಲೆಗಳಿವೆ. ಮೊಗಲ್ ಚಕ್ರವರ್ತಿಗಳು ಮೋರ್ಯ ಗೋಸಾವಿಯವರನ್ನು ಪರೀಕ್ಷಿಸಲು ಕೊಟ್ಟ ಹಸುವಿನ ಮಾಂಸವನ್ನು ಮಲ್ಲಿಗೆ ಹೂವನ್ನಾಗಿ ಮಾಡಿದ ಚಮತ್ಕಾರಕ್ಕಾಗಿ, ಗಣೇಶನ ಭಕ್ತಾದಿಗಳು ಬಹಳ ಶ್ರದ್ಧಾ-ಭಕ್ತಿಗಳಿಂದ ನಡೆದುಕೊಳ್ಳುತ್ತಿದ್ದರು.
ಅತಿಕುತೂಹಲ ಪ್ರದರ್ಶನ
[ಬದಲಾಯಿಸಿ]೨ ನೇ ನಾರಾಯಣ, ಮೂಲ ಮೋರ್ಯರ ಅಪ್ಪಣೆಯನ್ನು ಅಲಕ್ಷಿಸಿ ಅವರ ಸಮಾಧಿಯನ್ನು ತೆಗೆದು ನೋಡಿದಾಗ ಒಳಗೆ ಗೋಸವಿಯವರು ತದೇಕಚಿತ್ತದಿಂದ ಜಪಮಾಡುತ್ತಾ ಕುಳಿತಿದ್ದರು. ಇದರಿಂದ ಅವರ ಧ್ಯಾನಕ್ಕೆ ಭಂಗವಾಗಿ ಅವರ ಮಗನೇ ಕೊನೆಯ ದೇವಾ ಪಟ್ಟದ ಅಧಿಕಾರಿಯಾಗುವನು. ಧರ್ಮಾಧರ್ ೭ನೆಯ ತಲೆಮಾರಿನ ದೇವನೆಂದು ಶಾಪ ಕೊಟ್ಟರು. ಅದರಂತೆ ೧೮೧೦ ರಲ್ಲಿ ಆತ ಮಕ್ಕಳಿಲ್ಲದೆ ಮರಣಿಸಿದ. ಆದರೆ ಧರ್ಮಧರ್ 'ದೇವ್' ನ ಜಾಗದಲ್ಲಿ ದೇವಾಲಯದ ನೈಮಿತ್ತಿಕ ಕಾರ್ಯಗಳನ್ನು ನೆರವೇರಿಸಲು ಒಬ್ಬನನ್ನು ನೇಮಿಸಿದರು. ಗತಿಸಿಹೋದ ೭ ಜನ ದೇವ್ ರ ಸಮಯದಲ್ಲಿ ರಚಿಸಿದ 'ಭಜನಾ ಗೀತೆಗಳು' ಇಂದಿಗೂ ಲಭ್ಯವಿವೆ. ಗೋಸಾವಿ ಗಾಣಪತ್ಯ ಪಂಥದ ಪ್ರಮುಖ ಸಂತನೆಂದು ಪರಿಗಣಿಸಲ್ಪಟ್ಟಿದೆ. ಗಣೇಶನ ಪೂಜೆಯಲ್ಲಿ ನಿರತರಾದ ನಿಷ್ಠಾವಂತ ಭಕ್ತಾದಿಗಳು ಮೋರ್ಯ ಗೋಸಾವಿಯವರನ್ನು ಗಣಪತಿಯ ದಿವ್ಯ ಭಕ್ತನೆಂದು,ಗುರುತಿಸಿ ಅವರನ್ನು ಪೂಜಿಸುವುದು, ಅತಿಮುಖ್ಯವೆಂದು ಹೇಳಲಾಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ "Chinchwad Deosthan Trust, Shri. Morya Gosavi". Archived from the original on 12 ಅಕ್ಟೋಬರ್ 2020. Retrieved 25 ಸೆಪ್ಟೆಂಬರ್ 2020.
- ↑ The Encyclopedia of Religion dates his death to 1651 ಮರಣ
- ↑ Photo walk through the forgotten Lanes of Chinchwad, India Heritage Walks[ಶಾಶ್ವತವಾಗಿ ಮಡಿದ ಕೊಂಡಿ]
- ↑ ಗಣ್ಪತಿ ಬಪ್ಪ ಮೋರ್ಯ