ಮೈಕೆಲ್ ಪೋಲನ್
ಮೈಕೆಲ್ ಕೆವಿನ್ ಪೊಲನ್ ಜನನ ಫೆಬ್ರವರಿ 6, 1955) [೧] ಒಬ್ಬ ಅಮೇರಿಕಾದ ಲೇಖಕರು ಹಾಗೂ ಪತ್ರಕರ್ತರು. ಇವರು ಪ್ರಸ್ತುತ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುತ್ತಾರೆ [೨]. ಏಕಕಾಲದಲ್ಲಿ, ಯುಸಿ ಬರ್ಕ್ಲಿ ಪದವಿ ಪತ್ರಿಕೋದ್ಯಮ ಶಾಲೆಯ ವಿಜ್ಞಾನ ಹಾಗು ಪರಿಸರ ಪತ್ರಿಕೋದ್ಯಮದ ಪ್ರಾಧ್ಯಾಪಕ, ಮತ್ತು ನಿರ್ದೇಶಕರಾಗಿದ್ದಾರೆ. ಅಲ್ಲಿ ಅವರು 2020 ರಲ್ಲಿ ಯುಸಿ ಬರ್ಕ್ಲಿ ಸೈಡಲ್ಲಿ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಿದರು. ಈ ವಿಭಾಗದಲ್ಲಿ ಅವರು ಸಾರ್ವಜನಿಕ ಶಿಕ್ಷಣ ಕಾರ್ಯಕ್ರಮವನ್ನು ಮುನ್ನಡೆಸುತ್ತಿದ್ದಾರೆ. [೩] [೪] [೫] ಪೋಲನ್ ಅವರು ಆಹಾರದ ಸಾಮಾಜಿಕ-ಸಾಂಸ್ಕೃತಿಕ ಪರಿಣಾಮಗಳನ್ನು ಅನ್ವೇಷಿಸುವ ಪುಸ್ತಕಗಳಿಗೆ ಹೆಸರುವಾಸಿಯಾಗಿದ್ದಾರೆ, ಉದಾಹರಣೆಗೆ ದಿ ಬಾಟನಿ ಆಫ್ ಡಿಸೈರ್ ಮತ್ತು ದಿ ಓಮ್ನಿವೋರ್ಸ್ ಡೈಲೆಮಾ .
ಜೀವನ
[ಬದಲಾಯಿಸಿ]ಪೋಲನ್ ಅವರು ನ್ಯೂಯಾರ್ಕ್ನ ಲಾಂಗ್ ಐಲ್ಯಾಂಡ್ನಲ್ಲಿ ಒಂದು ಯಹೂದಿ ಕುಟುಂಬದಲ್ಲಿ ಜನಿಸಿದರು. [೬][೭] ಅವರು ಲೇಖಕ ಮತ್ತು ಹಣಕಾಸು ಸಲಹೆಗಾರರಾದ ಸ್ಟೀಫನ್ ಪೊಲನ್ ಮತ್ತು ಅಂಕಣಕಾರ ಕಾರ್ಕಿ ಪೋಲನ್ ಅವರ ಮಗ
ಆಕ್ಸ್‌ಫರ್ಡ್‌ನ ಮ್ಯಾನ್ಸ್‌ಫೀಲ್ಡ್ ಕಾಲೇಜ್‌ನಲ್ಲಿ 1975 ರ ವರೆಗೆ ಅಧ್ಯಯನ ಮಾಡಿದ ನಂತರ, ಪೊಲನ್ 1977 ರಲ್ಲಿ ಬೆನ್ನಿಂಗ್ಟನ್ ಕಾಲೇಜಿನಿಂದ ಇಂಗ್ಲಿಷ್‌ನಲ್ಲಿ ಬಿಎ ಪದವಿ ಮತ್ತು 1981 ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಎಂಎ ಸ್ನಾತಕೋತ್ತರ ಪದವಿ ಪಡೆದರು.
ಉಲ್ಲೇಖಗಳು
[ಬದಲಾಯಿಸಿ]- ↑ "About Michael Pollan" michaelpollan.com. May 11, 2010. Retrieved April 10, 2020.
- ↑ "Michael-pollan" Harvard University, Faculty of Arts & Sciences. Retrieved December 24, 2022.
- ↑ Graduate School of Journalism (2008) "Faculty: Michael Pollan". UC Berkeley. Retrieved September 21, 2008.
- ↑ Pollan, Michael. "About Michael Pollan". MichaelPollan.com. Retrieved December 24, 2022.
- ↑ "Leadership-Staff"". University of California Berkeley, UC Berkeley Center for the Science of Psychedelics. Retrieved December 24, 2022.
- ↑ STEVE LINDE; A. SPIRO; G. HOFFMAN (May 25, 2012). "50 most influential Jews: Places 31-40". Retrieved May 26, 2013.
Michael Pollan, 57
- ↑ Bloom, Nate (May 21, 2010). "Jewish Stars 5/21". Cleveland Jewish News.