ಮೂಲವ್ಯಾಧಿ
ಮೂಲವ್ಯಾಧಿ ಎಂದರೆ ಗುದನಾಳದ ಅಭಿಧಮನಿಗಳು ದಪ್ಪವಾಗಿ ಹೊಸೆದ ಹಗ್ಗದಂತೆ ಉಡಿತುಕೊಂಡಿರುವ ಸ್ಥಿತಿ (ಪೈಲ್ಸ್; ಹಿಮೊರಾಯ್ಡ್ಸ್). ಪರ್ಯಾಯ ನಾಮ ಮೊಳೆರೋಗ. ಗುದನಾಳದ ಕೆಳಭಾಗದ ಲೋಳೆಪೊರೆಯ ಅಡಿಯಲ್ಲಿರುವ ಅಭಿಧಮನಿಗಳಿಗೆ ಅನೇಕ ಸಂದರ್ಭಗಳಲ್ಲಿ ಮಲದ್ವಾರದ ಚರ್ಮದ ಅಡಿಯಲ್ಲಿರುವ ಅಭಿಧಮನಿಗಳೊಡನೆ ಸಂಪರ್ಕವಿರುತ್ತದೆ. ಉಡಿತುಕೊಂಡಿರುವ ಈ ಅಭಿಧಮನಿಗಳಿಂದ ಸುಲಭವಾಗಿ ರಕ್ತಸ್ರಾವವಾಗುವುದರಿಂದ ಇಂಗ್ಲಿಷಿನಲ್ಲಿ ಇವಕ್ಕೆ ಹಿಮೊರಾಯ್ಡ್ಸ್ ಎಂದೂ ಉಬ್ಬಿರುವ ಅಭಿಧಮನಿಗೊಂಚಲು ಚೆಂಡಿನಂತಿರುವುದರಿಂದ ಪೈಲ್ಸ್ ಎಂದೂ (ಪೈಲ್ ಎಂದರೆ ಲ್ಯಾಟಿನ್ ಭಾಷೆಯಲ್ಲಿ ಚೆಂಡು) ಹೆಸರುಗಳಿವೆ. ಈ ಸ್ಥಿತಿಯಲ್ಲಿ ಗುದನಾಳದ ಲೋಳೆಪೊರೆಯಲ್ಲಿ ಡೊಂಕುಡೊಂಕಾಗಿ ಬಗ್ಗಿರುವ ಮೊಳೆಗಳೋಪಾದಿಯಲ್ಲಿ ಉಬ್ಬುಗಳನ್ನು ಉಂಟುಮಾಡುವ ವಿಕೃತಿಗೊಂಡ ಅಭಿಧಮನಿಗಳಿರುವುದರಿಂದ ಇದನ್ನು ರೂಢಿಯಲ್ಲಿ ಮೊಳೆರೋಗವೆಂದೂ ಕರೆಯುವುದುಂಟು. ಮೊಳೆರೋಗದಲ್ಲಿ ಬಾಹ್ಯ ಮತ್ತು ಆಂತರಿಕ ಎಂಬ ಎರಡು ಬಗೆಗಳನ್ನು ಗುರುತಿಸಬಹುದು. ಚರ್ಮದ ಅಡಿಯ ಅಭಿಧಮನಿಗಳು ವಿಕೃತವಾಗಿವೆಯೆ ಲೋಳೆ ಪೊರೆ ಅಡಿಯವು ವಿಕೃತವಾಗಿವೆಯೆ ಎಂಬುದನ್ನು ಆಧರಿಸಿ ಈ ಎರಡು ಬಗೆಗಳನ್ನು ಅನುಕ್ರಮವಾಗಿ ವಿಂಗಡಿಸಲಾಗಿದೆ.
- ರೋಗಿಗೆ ಮಲವಿಸರ್ಜನೆಯಾದರೂ ಇನ್ನೂ ಮಲ ತುಂಬಿರುವ ಅನುಭವವಾಗುತ್ತದೆ
- ಮಲದ್ವಾರದ ಸುತ್ತಲೂ ತುರಿಕೆ ಮತ್ತು ಗುದದ್ವಾರ ಕೆಂಪಾಗಬಹುದು
- ಮಲ ವಿಸರ್ಜನೆ ಸಮಯ ನೋವು
- ಗುದದ್ವಾರದ ಸುತ್ತ ಗಟ್ಟಿಯಾದ ನೋವನ್ನುಂಟುಮಾಡುವ ಗಂಟು
- ಮಲದಲ್ಲಿ ರಕ್ತ ಹೋಗುವಿಕೆ
ಮೂಲವ್ಯಾಧಿಗಳ ವರ್ಗೀಕರಣ
[ಬದಲಾಯಿಸಿ]ಮೂಲವ್ಯಾಧಿಗಳನ್ನು ಸಾಮಾನ್ಯವಾಗಿ ಹಿಗ್ಗುವಿಕೆಯ ಸ್ಥಳ ಮತ್ತು ವ್ಯಾಪ್ತಿಯನ್ನು ಆಧರಿಸಿ ವರ್ಗೀಕರಿಸಲಾಗುತ್ತದೆ.
ಆಂತರಿಕ ಮೂಲವ್ಯಾಧಿ ಬಾಚಣಿಗೆ ಹಾದಿಯಲ್ಲಿರುವ ಕೆಳಗಿನ ಹೆಮೊರೊಹಾಯಿಡ್ ಪ್ಲೆಕ್ಸಸ್‌ನಿಂದ ಹುಟ್ಟಿಕೊಳ್ಳುತ್ತದೆ ಮತ್ತು ಇದು ಲೋಳೆಪೊರೆಯಿಂದ ಆವೃತವಾಗಿರುತ್ತದೆ, ಆದರೆ ಬಾಹ್ಯ ಮೂಲವ್ಯಾಧಿ ಹಿಗ್ಗಿದ ಮತ್ತು ಹಿಗ್ಗಿದ ಎಪಿಥೀಲಿಯಂ ಅಡಿಯಲ್ಲಿ ಪ್ಲೆಕ್ಸಸ್‌ನ ರಕ್ತನಾಳಗಳಾಗಿವೆ. ಮಾಪಕಗಳು.
ಮಿಶ್ರ ಹೆಮೊರೊಯಿಡ್ಸ್ (ಆಂತರಿಕ ಮತ್ತು ಬಾಹ್ಯ) ಬಾಚಣಿಗೆ ಮಾರ್ಗದ ಮೇಲೆ ಮತ್ತು ಕೆಳಗೆ ಉದ್ಭವಿಸುತ್ತದೆ. ಪ್ರಾಯೋಗಿಕ ಉದ್ದೇಶಗಳಿಗಾಗಿ, ಗೋಲಿಘರ್‌ನ ವರ್ಗೀಕರಣ ಎಂದು ಕರೆಯಲ್ಪಡುವ ಮೂಲವ್ಯಾಧಿಗಳ ಗೋಚರತೆ ಮತ್ತು ಹಿಗ್ಗುವಿಕೆಯ ಆಧಾರದ ಮೇಲೆ ಆಂತರಿಕ ಮೂಲವ್ಯಾಧಿಗಳನ್ನು ಮತ್ತಷ್ಟು ಶ್ರೇಣೀಕರಿಸಲಾಗುತ್ತದೆ.
ಮೂಲವ್ಯಾಧಿ I: ಗುದದ ಇಟ್ಟ ಮೆತ್ತೆಗಳು ರಕ್ತಸ್ರಾವವಾಗುತ್ತವೆ ಆದರೆ ಯಾವುದೇ ದೀರ್ಘಕಾಲದ ಮೂಲವ್ಯಾಧಿಗಳಿಲ್ಲ.
ಮೂಲವ್ಯಾಧಿ II: ಗುದದ ಇಟ್ಟ ಮೆತ್ತೆಗಳು ಒತ್ತಡದಲ್ಲಿದ್ದಾಗ ಗುದದ ಹಿಗ್ಗುವಿಕೆ ಹೊಂದಿರಬಹುದು ಆದರೆ ಅವುಗಳ ಸಾಮಾನ್ಯ ಸ್ಥಿತಿಗೆ ಮರಳಬಹುದು.
ರಕ್ತಸ್ರಾವ III: ಒತ್ತಡಕ್ಕೊಳಗಾದಾಗ ಅಥವಾ ಒತ್ತಡಕ್ಕೊಳಗಾದಾಗ ಗುದದ್ವಾರದ ಮೂಲಕ ಬೀಳುವ ಗುದದ ಇಟ್ಟ ಮೆತ್ತೆಗಳು ಮತ್ತು ನಿಮ್ಮ ಕೈಯಿಂದ ಗುದ ಕಾಲುವೆಯೊಂದಿಗೆ ತಳ್ಳುವ ಅವಶ್ಯಕತೆಯಿದೆ.
ಮೂಲವ್ಯಾಧಿ IV: ವಿಸ್ತರಿಸಿದ ಮೂಲವ್ಯಾಧಿ ಎಲ್ಲಾ ಸಮಯದಲ್ಲೂ ಹೊರಗುಳಿಯುತ್ತದೆ
ಮತ್ತು ಸಾಮಾನ್ಯ ಸ್ಥಿತಿಗೆ ಮರಳಲು ಸಾಧ್ಯವಿಲ್ಲ. ನಿರ್ಬಂಧಿತ ಆಂತರಿಕ ಮೂಲವ್ಯಾಧಿ, ತೀವ್ರವಾದ ಥ್ರಂಬೋಎಂಬೊಲಿಸಮ್ ಮತ್ತು ಪರಿಧಿಯ ಗುದನಾಳದ ಹಿಗ್ಗುವಿಕೆಗೆ ಸಂಬಂಧಿಸಿದ ನಿರ್ಬಂಧಿತ ಮೂಲವ್ಯಾಧಿ ಸಹ ಗ್ರೇಡ್ IV ಹೆಮೊರೊಯಿಡ್ಗಳಾಗಿವೆ.ಕೆಲವು ಲೇಖಕರು ಮೂಲವ್ಯಾಧಿ ಸೈಟ್‌ನ ಅಂಗರಚನಾ ಫಲಿತಾಂಶಗಳ ಆಧಾರದ ಮೇಲೆ ವರ್ಗೀಕರಣವನ್ನು ಪ್ರಸ್ತಾಪಿಸುತ್ತಾರೆ, ಇದನ್ನು ಪ್ರಾಥಮಿಕ (ಗುದ ಕಾಲುವೆಯ ಮೂರು ವಿಶಿಷ್ಟ ತಾಣಗಳಲ್ಲಿ), ದ್ವಿತೀಯಕ (ಗುದದ ಪ್ಯಾಡ್‌ಗಳ ನಡುವೆ), ಅಥವಾ ಅವಧಿ ಎಂದು ವಿವರಿಸಲಾಗಿದೆ. vi, ಮತ್ತು ಪ್ರೋಲ್ಯಾಪ್ಸ್ ಅಥವಾ ಪ್ರೋಲ್ಯಾಪ್ಸ್ಡ್ ಹೆಮೊರೊಯಿಡ್ಸ್ ಎಂದು ವಿವರಿಸಿದ ರೋಗಲಕ್ಷಣಗಳ ಆಧಾರದ ಮೇಲೆ. ಆದಾಗ್ಯೂ, ಈ ವರ್ಗೀಕರಣಗಳನ್ನು ಕಡಿಮೆ ಸಾಮಾನ್ಯವಾಗಿ ಬಳಸಲಾಗುತ್ತದೆ.[೨]
ಬಾಹ್ಯಮೂಲವ್ಯಾಧಿ
[ಬದಲಾಯಿಸಿ]ಬಾಹ್ಯಮೂಲವ್ಯಾಧಿ ಹಠತ್ತಾಗಿ ಸಂಭವಿಸಬಹುದು : ಇಲ್ಲವೆ ದೀರ್ಘಕಾಲಿಕವಾಗಿದ್ದು ಕ್ರಮೇಣ ವ್ಯಕ್ತವಾಗಿ ಹೆಚ್ಚು ಹದಗೆಡುತ್ತ ಹೋಗಬಹುದು. ಕೆಮ್ಮು ಹತ್ತಿ ಶ್ರಮಪಟ್ಟು ಕೆಮ್ಮುವಾಗ ಇಲ್ಲವೆ ಭಾರ ಎತ್ತುವ ವೇಳೆ ಮುಕ್ಕುವಾಗ ಹಠಾತ್ತನೆ ಬಾಹ್ಯ ಮೂಲವ್ಯಾಧಿ ವ್ಯಕ್ತವಾಗುವುದಿದೆ. ಆ ಸಮಯದಲ್ಲಿ ಆಸನದ ಚರ್ಮದ ಅಡಿಯ ಯಾವುದೋ ಅಭಿಧಮನಿ ಬಿರಿದು ಅಲ್ಲಿ ರಕ್ತಸ್ರಾವವಾಗಿ ರಕ್ತ ಗರಣೆಕಟ್ಟಿ ಅಲ್ಲಿ ಒಂದು ನೋಯುವ ಗಂಟು ಕಾಣಬರುವುದೇ ಈ ಸ್ಥಿತಿ. ಈ ಗಂಟಿನಲ್ಲಿ ಸೋಂಕಿನಿಂದ ಉರಿಯೂತ ಉಂಟಾಗಿ ಗಂಟು ಒಡೆದು ವ್ರಣವಾಗಿ ಹಲವಾರು ದಿವಸಗಳ ಬಳಿಕ ವಾಸಿ ಆಗಬಹುದು. ಶಸ್ತ್ರಕ್ರಿಯೆಯಿಂದ ಗಂಟನ್ನು ಛೇದಿಸಿ ರಕ್ತವನ್ನು ಹೊರ ಹೊರಡಿಸುವುದು ಯುಕ್ತ ಚಿಕಿತ್ಸೆ.
ದೀರ್ಘಕಾಲಿಕ ಬಾಹ್ಯಮೂಲವ್ಯಾಧಿ: ಮಲಬದ್ಧತೆಯ ಕಾರಣದಿಂದ ಗಟ್ಟಿಯಾದ ಮಲವನ್ನು ವಿಸರ್ಜಿಸುವಾಗ ಅದು ಮಲದ್ವಾರದ ಚರ್ಮವನ್ನು ಘರ್ಷಿಸಿ ಉಜ್ಜು ಹುಣ್ಣನ್ನು ಉಂಟುಮಾಡುತ್ತದೆ. ಇದು ವಾಸಿ ಆದಾಗ ತೊಟ್ಟು ಅಥವಾ ಕಾವು ಉಳ್ಳ ಚರ್ಮದ ಮಡಚುಗಳಂತಾಗಿ ಅಡಿಚರ್ಮವನ್ನು ಸಂಪರ್ಕಿಸುತ್ತದೆ. ಇವುಗಳಲ್ಲಿ ಬಲವಾಗಿ ನವೆ ಉಂಟಾಗುವುದಲ್ಲದೆ ಇವು ಮಲವಿಸರ್ಜನೆ ಕಷ್ಟವಾಗುವಂತೆ ಮಾಡುತ್ತವೆ ಕೂಡ. ಈ ಮಡಚುಗಳನ್ನು ಶಸ್ತ್ರಕ್ರಿಯೆಯಿಂದ ತೆಗೆದುಹಾಕುವುದು ಯುಕ್ತ ಚಿಕಿತ್ಸೆ.
ಆಂತರಿಕ ಮೂಲವ್ಯಾಧಿ
[ಬದಲಾಯಿಸಿ]ಲೋಳೆಪೊರೆಯ ಅಡಿಯಲ್ಲಿರುವ ಅಭಿಧಮನಿಗಳು ಮೂರು ಗುಂಪುಗಳಾಗಿ ಹರಡಿಕೊಂಡಿರುವುದರಿಂದ ಯಾವ ಗುಂಪು ವಿಕೃತಿಗೊಂಡಿದೆಯೋ ಆ ಸ್ಥಳದಲ್ಲಿ ಮೊಳೆ ಕಂಡುಬರುತ್ತದೆ. ಗುಂಪುಗಳು ಗಡಿಯಾರದ 3ಗಂಟೆ, 7ಗಂಟೆ ಮತ್ತು 11ಗಂಟೆಗಳಿಗೆ ಹೋಲುವ ಸ್ಥಳಗಳಲ್ಲಿರುವುದರಿಂದ ಪರೀಕ್ಷಿಸಿದಾಗ ಎಡಭಾಗದಲ್ಲಿ ಎರಡು ಕಡೆ, ಬಲಭಾಗದಲ್ಲಿ ಒಂದು ಕಡೆ ಮೊಳೆಗಳು ಕಾಣಿಸಿಕೊಳ್ಳಬಹುದು. ಇವುಗಳಲ್ಲದೆ 7ಕ್ಕೆ ಮೀರದಂತೆ ಇತರ ಸಣ್ಣ ಮೊಳೆಗಳು ಕಂಡುಬರಬಹುದು. ಆಂತರಿಕ ಮೂಲವ್ಯಾಧಿ 20 ವರ್ಷ ವಯಸ್ಸಿನವರಿಗಿಂತ ಚಿಕ್ಕವರಲ್ಲಿ ಕಂಡುಬರುವುದು ವಿರಳ. ಶುಕ್ಲಗ್ರಂಥಿವೃದ್ಧಿ ಇಲ್ಲವೇ ಮೂತ್ರನಾಳ ಕುಂಠಿತವಾಗಿರುವ ಸಂದರ್ಭಗಳಲ್ಲಿ ಮೂತ್ರವಿಸರ್ಜಿಸುವಾಗಲೂ ಪ್ರಸವವಾಗುವಾಗಲೂ ವ್ಯಕ್ತಿ ಅತಿಯಾಗಿ ಮುಕ್ಕಬೇಕಾಗಿದ್ದು ಆ ಕಾರಣದಿಂದ ಅಭಿಧಮನಿಗಳಲ್ಲಿ ರಕ್ತ ಒತ್ತಡ ಹೆಚ್ಚಿ ಆಂತರಿಕ ಮೂಲವ್ಯಾಧಿ ಉದ್ಭವಿಸುವುದುಂಟು. ಮಲಬದ್ಧತೆ ಪ್ರಸಂಗಗಳಲ್ಲಿ ಮಲವಿಸರ್ಜನೆಗಾಗಿ ಮುಕ್ಕಬೇಕಾಗುವುದೊಂದೇ ಅಲ್ಲದೆ ಗುದನಾಳದಲ್ಲಿ ಶೇಖರಿಸಿರುವ ಮಲ ಅಲ್ಲಿಯ ಅಭಿಧಮನಿಗಳ ಮೇಲೆ ಒತ್ತುತ್ತ ರಕ್ತ ಪ್ರವಾಹಕ್ಕೆ ಅಡ್ಡಿ ಮಾಡಿ ಅವು ಉಬ್ಬುವಂತೆ ಮಾಡುವುದರಿಂದ ಮಲಬದ್ಧತೆಯೂ ಆಂತರಿಕ ಮೂಲವ್ಯಾಧಿಗೆ ಕಾರಣವಾಗಿದೆ. ಯಕೃತ್ತುನಾರು ಗಟ್ಟುವಿಕೆ (ಸಿರ್ಹೋಸಿಸ್), ಗುದನಾಳದಲ್ಲಿ ಏಡಿಗಂತಿ, ಉದರದಲ್ಲಿ ಗಂತಿ ಇವೂ ಆಂತರಿಕ ಮೂಲವ್ಯಾಧಿಗೆ ಕಾರಣಗಳಾಗಬಹುದು.
ಮಲವಿಸರ್ಜನೆ ಕಾಲದಲ್ಲಿ ನೋವಿಲ್ಲದೆ ರಕ್ತಸ್ರಾವವಾಗುವುದು ಆಂತರಿಕ ಮೂಲವ್ಯಾದಿಯ ಪ್ರಥಮ ಲಕ್ಷಣ. ಮಲವಿಸರ್ಜನೆಗೆ ಮೊದಲೇ ಇಲ್ಲವೆ ಜೊತೆಯಲ್ಲೆ ರಕ್ತಸ್ರಾವ ಆಗುವುದರಿಂದ ಮಲಕ್ಕೆ ರಕ್ತಹಚ್ಚಿದಂತಿರುತ್ತದೆ. ಮೊಳೆಗಳು ಕೆಳಕ್ಕಿಳಿದು ಹೊರಹೊರಟುಕೊಳ್ಳುವುದು ಮುಂದಿನ ಹಂತ. ಪ್ರಾರಂಭದಲ್ಲಿ ಇವು ಮಲವಿಸರ್ಜನಾನಂತರ ತಾವಾಗಿಯೇ ಒಳಸೇರಿಕೊಳ್ಳುತ್ತವೆ. ಕಾಲಾಂತರದಲ್ಲಿ ಯಾವಾಗ ಮುಕ್ಕಿದರೂ ಇಲ್ಲವೇ ಪ್ರತಿ ಮಲವಿಸರ್ಜನೆ ಕಾಲದಲ್ಲೂ ಹೊರ ಬಂದಮೊಳೆಗಳನ್ನು ಕೈಯಿಂದ ತಳ್ಳಿಯೇ ಒಳಸೇರಿಸಬೇಕಾಗುತ್ತದೆ.
ಮೊಳೆಗಳು ಒಳಗೆ ಇದ್ದಾಗ ಹೊರಪರೀಕ್ಷೆಯಿಂದ ಏನೂ ಪತ್ತೆ ಆಗಿರುವುದಿಲ್ಲ. ಆದರೆ ಗುದನಾಳದರ್ಶಕ (ಪ್ರಾಕ್ಟಾಸ್ಕೋಪ್) ಮೂಲಕ ಪರೀಕ್ಷಿಸಿದಾಗ ಮೊಳೆಗಳು ಕಂಡುಬರುತ್ತವೆ. ಆಂತರಿಕ ಮೊಳೆಗಳಿಂದ ಅಧಿಕರಕ್ತಸ್ರಾವ ಆಗಬಹುದು. ಧಮನಿಗಳಲ್ಲಿ ರಕ್ತ ಗರಣೆಕಟ್ಟಬಹುದು. ಸ್ಥಳೀಯವಾಗಿ ವ್ರಣವಾಗಬಹುದು. ಹೊರಹೊರಟುಕೊಂಡ ಮೊಳೆ ಕ್ಷಯಿಸಿ ಕೊನೆಯಾಗಬಹುದು. ನೆರೆಯ ಮೂತ್ರಪಿಂಡ ಧಮನಿಯ ಉರಿಯೂತವು ಉಂಟಾಗಬಹುದು.
ಆಂತರಿಕ ಮೂಲವ್ಯಾಧಿ ಕಾಣಿಸಿಕೊಂಡ ತರುಣದಲ್ಲೆ ಮೊಳೆ ಕಂಡುಬಂದ ಸ್ಥಳಗಳಲ್ಲಿ ಬಾದಾಮಿಎಣ್ಣೆಯಲ್ಲಿ ವಿಲೀನಿಸಿದ 5% ಫೀನಾಲ್ ದ್ರಾವಣವನ್ನು (2 ಮಿಲಿಗಳಷ್ಟು) ಚುಚ್ಚುಮದ್ದಾಗಿ ಕೊಡುವುದು ಯುಕ್ತಚಿಕಿತ್ಸೆ. ಎರಡು ವಾರಗಳಿಗೊಮ್ಮೆಯಂತೆ ಮೂರು ಬಾರಿ ಚಿಕಿತ್ಸಿಸಬೇಕು. ರೋಗ ದೀರ್ಘಕಾಲದ್ದಾಗಿದ್ದು ಮೊಳೆಗಳು ಹೊರಬರುವ ಸಂದರ್ಭಗಳಲ್ಲಿ ಶಸ್ತ್ರಕ್ರಿಯೆ ಅಗತ್ಯ. ಮೊಳೆಗಳನ್ನು ಶಸ್ತ್ರಕ್ರಿಯೆಯಿಂದ ಬಿಡಿಸಿ ಧಮನಿ ಗೊಂಚಲಿನ ಬುಡವನ್ನು ದಾರದಿಂದ ಕಟ್ಟಿ ಮೊಳೆಗೊಂಚಲುಗಳನ್ನು ತೆಗೆದುಹಾಕಬೇಕಾಗುತ್ತದೆ. ಆಂತರಿಕ ಮೂಲವ್ಯಾಧಿಯನ್ನು ಶೀತಲ ಶಸ್ತ್ರಚಿಕಿತ್ಸೆ (ಕ್ರಯೋಸರ್ಜರಿ)ಯ ಮೂಲಕವೂ ಗುಣಪಡಿಸಬಹುದು.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- ಮೂಲವ್ಯಾಧಿ ಓಪನ್ ಡೈರೆಕ್ಟರಿ ಪ್ರಾಜೆಕ್ಟ್
- Davis, BR; Lee-Kong, SA; Migaly, J; Feingold, DL; Steele, SR (March 2018). "The American Society of Colon and Rectal Surgeons Clinical Practice Guidelines for the Management of Hemorrhoids". Diseases of the Colon and Rectum. 61 (3): 284–292. doi:10.1097/DCR.0000000000001030. PMID 29420423.
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2022-07-03. Retrieved 2022-07-03.
- ↑ https://awdnews.com/benh-tri/[ಶಾಶ್ವತವಾಗಿ ಮಡಿದ ಕೊಂಡಿ]