ಮಲ್ಲಿನಾಥ ಸ್ವಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜನನ[ಬದಲಾಯಿಸಿ]

ಇಪ್ಪತ್ತೈದು ಬಿಲ್ಲುಗಳಷ್ಟು ಎತ್ತರವುಳ್ಳವನೂ, ಐವತ್ತೈದು ಸಹಸ್ರ ವರ್ಷಗಳ ಆಯುಷ್ಯವುಳ್ಳವನೂ, ಹೇಮವರ್ಣನೂ ಆದ ಮಲ್ಲಿನಾಥನು ಅರ ತೀರ್ಥಂಕರನಾದ ಮೇಲೆ ಸಹಸ್ರ ಕೋಟಿ ವರ್ಷಗಳ ನಂತರ ಜನಿಸಿದನು. ಮಲ್ಲಿನಾಥನು ಮಿಥಾಲಿಯಲ್ಲಿ ಇಕ್ವಾಷು ವಂಶಸ್ಥನಾಗಿ ಜನಿಸಿದನು. ಐವತ್ತಾರು ಸಾವಿರ ವರುಷಗಳ ಕಾಲ ಬದುಕಿದನೆಂದು ನಂಬಲಾಗಿದೆ.

ಇತಿಹಾಸ[ಬದಲಾಯಿಸಿ]

ಕಾಲಲಬ್ಧಿ ದೊರ ಕೊಂಡ ಮೇಲೆ ಮೂರು ಜನ್ಮಗಳನ್ನು ಎತ್ತಿದ ಈತನ ಚೇತನ ಮೊದಲ ಜನ್ಮದಲ್ಲಿ ಕಚ್ಛಕಾ ದೇಶದ ವೀತಶೋಕಪುರದಲ್ಲಿ ಮಹಾವಂಶಜನಾದ ವೈಶ್ರವಣ ರಾಜನಾಗಿದ್ದನು. ಆತನು ಆಲದ ಮರವೊಂದು ಸಿಡಿಲಿನಿಂದ ಭಸ್ಮವಾದುದನ್ನು ಕಂಡು ವೈರಾಗ್ಯದಿಂದ ದೀಕ್ಷೆ ವಹಿಸಿದನು.

ದೀಕ್ಷೆ[ಬದಲಾಯಿಸಿ]

ಬೆಳೆದು ದೊಡ್ಡವನಾಗಿ ರಾಜ್ಯಭಾರ ಮಾಡುತ್ತಾ ವಿವಾಹ ಕಾಲದಲ್ಲಿ ಪೂರ್ವಜನ್ಮ ಸ್ಮರಣೆಯಿಂದ ನಿರ್ವೇಗಗೊಂಡ ಪರಿನಿಷ್ಕಮಣಕ್ಕೆ ಸಿದ್ಧನಾದನು. ಜಯಂತವೆಂಬ ಪಲ್ಲಕ್ಕಿಯಲ್ಲಿ ಶ್ವೇತವನಕ್ಕೆ ಹೋಗಿ, ದೀಕ್ಷೆವಹಿಸಿ, ಮನಃಪರ್ಯಯ ಜ್ಞಾನವನ್ನು ಪಡೆದ ಮೇಲೆ ಮಿಥಿಲಾ ನಗರದ ನಂದಿಷೇಣ ರಾಜನಿಂದ ಅನ್ನದಾನವನ್ನು ಪಡೆದು, ಆರು ದಿನಗಳ ಛದ್ಮಾವಸ್ಥೆಯಾದ ಮೇಲೆ ಶ್ವೇತವನದ ಅಶೋಕ ವೃಕ್ಷದ ಕೆಳಗೆ ಕೇವಲ ಜ್ಞಾನವನ್ನು ಪಡೆದನು.

ಮೋಕ್ಷ[ಬದಲಾಯಿಸಿ]

ದ್ವಾದಶ ಗಣಧರರೊಡನೆ ತನ್ನ ಧರ್ಮ ವಿಹಾರವನ್ನು ಮುಗಿಸಿ ಸಮ್ಮೇದ ಪರ್ವತದ ಶಿಖರದ ಮೇಲೆ ಫಾಲ್ಗುಣ ಶುಕ್ಲ ಪಂಚಮೀ ತಿಥಿಯ ಭರಣೀ ನಕ್ಷತ್ರದಲ್ಲಿ ಮೋಕ್ಷವನ್ನು ಪಡೆದನು. [೧]

ರಾಜ್ಯ ಲಾಂಛನ[ಬದಲಾಯಿಸಿ]

ಈತನ ಲಾಂಛನ ಕುಂಭ ; ಯಕ್ಷ - ಯಕ್ಷಿಯರು ಕುಬೇರ - ಅಪರಾಜಿತಾ.

ಉಲ್ಲೇಖಗಳು[ಬದಲಾಯಿಸಿ]

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಮಂಜೂಶ್ರೀ ಪ್ರಿಂಟರ್ಸ್. p. ೪೩೮-೪೩೯.