ಭಾರತದಲ್ಲಿ ಪೌರಾಡಳಿತ
ಗೋಚರ
ಭಾರತದಲ್ಲಿ ಪೌರಾಡಳಿತವು ವರ್ಷ ೧೬೮೭ರಿಂದ ಅಸ್ತಿತ್ವದಲ್ಲಿದೆ. ಆ ವರ್ಷದಲ್ಲಿ ಮದರಾಸು ಮಹಾನಗರ ಪಾಲಿಕೆಯ ರಚನೆಯಾಯಿತು, ಮತ್ತು ನಂತರ ಕಲ್ಕತ್ತ ಹಾಗೂ ಬಾಂಬೆ ಮಹಾನಗರ ಪಾಲಿಕೆಗಳು ೧೭೨೬ರಲ್ಲಿ ರಚನೆಗೊಂಡವು. ಹತ್ತೊಂಭತ್ತನೇ ಶತಮಾನದ ಮುಂಚಿನ ಭಾಗದಲ್ಲಿ ಭಾರತದಲ್ಲಿನ ಬಹುತೇಕ ಎಲ್ಲ ಪಟ್ಟಣಗಳು ಯಾವುದೋ ರೂಪದ ಪೌರಾಡಳಿತವನ್ನು ಅನುಭವಿಸಿದ್ದವು. ೧೮೮೨ರಲ್ಲಿ ಭಾರತದ ವೈಸರಾಯ್ ಆಗಿದ್ದ, ಸ್ಥಳೀಯ ಸ್ವರಾಜ್ಯದ ಪಿತಾಮಹನೆಂದು ಕರೆಯಲ್ಪಡುವ ಲಾರ್ಡ್ ರಿಪನ್ ನೇತೃತ್ವದಲ್ಲಿ ಸ್ಥಳೀಯ ಸ್ವರಾಜ್ಯದ ನಿರ್ಣಯವನ್ನು ಅಂಗೀಕರಿಸಲಾಯಿತು. ಇದು ಭಾರತದಲ್ಲಿ ಪೌರಾಡಳಿತದ ಪ್ರಜಾಪ್ರಭುತ್ವದ ರೂಪಗಳನ್ನು ಸ್ಥಾಪಿಸಿತು.[೧]
೧೯೯೨ರಲ್ಲಿ ಭಾರತದ ಸಂವಿಧಾನದ ೭೪ನೇ ತಿದ್ದುಪಡಿಯು ಜಾರಿಗೊಂಡ ನಂತರ, ನಗರ ಸ್ಥಳೀಯ ಸಂಸ್ಥೆಗಳ ಮೂರು ವರ್ಗಗಳಿವೆ:
- ಮಹಾನಗರ ನಿಗಮ (ಮಹಾನಗರ ಪಾಲಿಕೆ/ನಗರಸಭೆ)
- ನಗರ ಪಾಲಿಕೆ
- ನಗರ ಪಂಚಾಯಿತಿ (ಪಟ್ಟಣ ಪಂಚಾಯಿತಿ)
ಉಲ್ಲೇಖಗಳು
[ಬದಲಾಯಿಸಿ]- ↑ "Good municipal governance key to improve quality of life | Pune News - Times of India". The Times of India (in ಇಂಗ್ಲಿಷ್). Retrieved 19 December 2019.