ಭಾರತದಲ್ಲಿ ತಂತಿ ಸಂದೇಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈಸ್ಟ ಇಂಡಿಯಾ ಕಂಪನಿಗೆ ಬಂದ ವ್ಶೆದ್ಯ ವಿಲಿಯಂ ಬ್ರೂಕ್ ಎಲೆಕ್ಟ್ರಿಕ್ ನಲ್ಲಿ ಆಸಕ್ತಿ ಹೊಂದಿದ್ದು ೧೮೯೯ರಲ್ಲಿ ಕಲ್ಕತ್ತಾದಲ್ಲಿ ಸುಮಾರು ೧೪ ಕಿ.ಮೀ.ನ ತಂತಿಸಂದೇಶ ರವಾನೆ ವ್ಯವಸ್ಥೆ ರೂಪಿಸಿದ. ಲಾರ್ಡ ಡಾಲ್ ಹೌಸಿಯು ವಿಲಿಯಂ ಬ್ರೂಕ್ ಓ ಶೋಹನ್ನೆಯನ್ನು ಭಾರತದಲ್ಲಿ ಟೆಲಿಗ್ರಾಫ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ನೇಮಿಸಿದ. ಆರಂಭದಲ್ಲಿ, ೧೮೫೦ರಲ್ಲಿ ಪ್ರಾಯೋಗಿಕವಾಗಿ ಕಲ್ಕತ್ತಾ ಮತ್ತು ಡೈಮಂಡ್ ಹಾರ್ಬರ್ ನಡುವೆ ತಂತಿ ಸಂದೇಶ ರವಾನೆ ವ್ಯವಸ್ಥೆ ಮಾಡಲಾಯಿತು. ನಂತರ ಈ ತಂತಿವ್ಯವಸ್ಥೆ ೧೮೫೫ರಲ್ಲಿ ಕಾರ್ಯಾರಂಭ ಮಾಡಿತು. ವಿಳಾಸದ ಪದಗಳೂ ಸೇರಿ ಒಂದು ಪದಕ್ಕೆ ಒಂದು ರೂಪಾಯಿನಂತೆ ದರ ವಿಧಿಸಲಾಯಿತು ೪೦೦ ಮೈಲಿಗೂ ಹೆಚ್ಚು - ಎರಡರಷ್ಟುದರ ಇತ್ತು. ಅಲ್ಲಿಂದ ಟೆಲಿಗ್ರಾಫ್ ವ್ಯವಸ್ಥೆ ಭಾರತದಲ್ಲಿ, ಜಗತ್ತಿನಲ್ಲಿಯೇ ೬ನೆಯ ಅತಿದೊಡ್ಡ ತಂತಿ ಸಂದೇಶದ ವ್ಯವಸ್ಥೆಯಾಗಿ ಬೆಳೆಯಿತು. ೧೯೩೯ರಲ್ಲಿಯೇ ಭಾರತದಲ್ಲಿ ೧೦೦೦೦೦ ಮೈಲು ಉದ್ದದ ತಂತಿ ಮಾರ್ಗ ಇತ್ತು. ಉತ್ತಮ ಟೆಲಿಫೋನ ವ್ಯವಸ್ಥೆ ಬರುವವರೆಗೂ ಶೀಘ್ರ ಸಂದೇಶ ಕಳಿಸಲು ಟೆಲಿಗ್ರಾಂ ಉತ್ತಮ ವ್ಯವಸ್ಥೆಯಾಗಿತ್ತು. ಇದು ಪತ್ರಿಕೆಯವರು, ಅಧಿಕಾರಿಗಳು , ಸೈನಿಕರು, ರೋಗಿಗಳು, ಇವರು ಸತತವಾಗಿ ಬಳಸುವ ಸಾಧನವಾಗಿತ್ತು. ದೂರದ ಸಂಬಂಧಿಕರಿಗೆ ಮೃತರ ಸುದ್ದಿ ಕಳಿಸಲು ಟೆಲಿಗಾಂ ಹೆಚ್ಚು ಬಳಕೆಯಾಗುತ್ತಿತ್ತು. ಮದುವೆಯ ಸಂದೇಶ ಕಳುಹಿಸಲು ಕೂಡ ಇದನ್ನು ಬಳಸುತ್ತಿದ್ದರು.