ಭಕ್ತಿಯೋಗ
ಭಕ್ತಿಯೋಗ ಹಿಂದೂಧರ್ಮದಲ್ಲಿ ಹೇಳಲ್ಪಟ್ಟ ನಾಲ್ಕು ಯೋಗಗಳಲ್ಲಿ ಒಂದು. ಭಕ್ತಿ ಎಂದರೆ ಪ್ರೀತಿ,ಸೇವೆ ಎಂದು ಅರ್ಥ. ದೇವರನ್ನು ಪ್ರೀತಿಸುತ್ತಾ, ಜೀವನದ ಸಕಲ ಕೆಲಸ ಕಾರ್ಯಗಳನ್ನು ದೇವರ ಸೇವೆ ಎಂದು ನಡೆಸಿ ಕೊನೆಗೆ ಪ್ರೀತಿಯ ಮೂಲಕವೇ ಭಗವಂತನನ್ನು ಸೇರಲು ಇರುವ ಸಾಧನಾ ಮಾರ್ಗವೇ ಭಕ್ತಿಯೋಗ.
ಭಕ್ತಿಯೋಗದ ಸಾಧಕನ ಗುಣಗಳು
[ಬದಲಾಯಿಸಿ]ಭಕ್ತರ ವರ್ಗೀಕರಣ
[ಬದಲಾಯಿಸಿ]ಭಕ್ತರನ್ನು ನಾಲ್ಕು ವಿಧವಾಗಿ ವರ್ಗೀಕರಿಸಬಹುದು.
- ಆರ್ತ ಭಕ್ತರು.
- ಅರ್ಥಾರ್ಥಿ ಭಕ್ತರು
- ಜಿಜ್ಞಾಸು ಭಕ್ತರು
- ಜ್ಞಾನಿ ಭಕ್ತರು.
ಆರ್ತಭಕ್ತರು:
[ಬದಲಾಯಿಸಿ]ನರಳುವಿಕೆ,ಕಷ್ಟ,ನಷ್ಟ ಇತ್ಯಾದಿ ಜೀವನದ ನೋವುಗಳಿಗೆ ತುತ್ತಾದವರು ದೇವರನ್ನು ತನ್ನ ಕಷ್ಟ ನಿವಾರಣೆಗಾಗಿ ಮೊರೆಹೋಗುತ್ತಾರೆ.ಈ ವಿಧದ ಭಕ್ತರನ್ನು ಆರ್ತ ಭಕ್ತರು ಎನ್ನಬಹುದು.
ಅರ್ಥಾರ್ಥಿ ಭಕ್ತರು: ತನ್ನ ಲೌಕಿಕ ಸುಖಕ್ಕಾಗಿ ವಸ್ತು,ಧನ,ಕನಕಾದಿಗಳನ್ನು ಬಯಸಿ ದೇವರ ಮೊರೆಹೋಗುವವರನ್ನು ಅರ್ಥಾರ್ಥಿ ಭಕ್ತರು ಎನ್ನುತ್ತಾರೆ.
- ಜಿಜ್ಞಾಸು ಭಕ್ತರು*
ಇವರು ಜೀವನದ ಗುರಿಯನ್ನು ಅರಸುವವರು.ಜೀವನದ ಪರಮಗುರಿಯೆಂದು ಭಗವಂತನನ್ನು ಇರಿಸಿಕೊಂಡು ಆತನ ಕುರಿತಾದ ಜ್ಞಾನವನ್ನು ಪಡೆಯಲು ಪ್ರಯತ್ನಿಸುವವರನ್ನು ಜಿಜ್ಞಾಸು ಭಕ್ತರು ಎನ್ನಬಹುದು.
*ಜ್ಞಾನಿ ಭಕ್ತರು*:
ಇವರೆಲ್ಲರಿಗಿಂತ ಮೇಲಿನವರು.ಜೀವನ-ಜಗತ್ತು,ಭಗವಂತ ಈ ಸಂಬಂಧದ ಸತ್ಯವಾದ ಪರಿಜ್ಞಾನವನ್ನು ಹೊಂದಿ,ಸರ್ವರಲ್ಲೂ,ಸರ್ವವಸ್ತುಗಳಲ್ಲೂ ಭಗವಂತನನ್ನು ಕಾಣುತ್ತಾ,ಯಾವ ಕಾಮನೆಗಳೂ ಇಲ್ಲದೆ ಭಗವಂತನನ್ನು ಪೂಜಿಸುತ್ತಾ ಇರುವವರನ್ನು ಜ್ಞಾನಿ ಭಕ್ತರು ಎಂದು ಹೇಳುತ್ತಾರೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Bhakti Poets: A History of Bhakti by Doris Jakobsh
- The full text of the Bhagavata Purana (Srimad-Bhagavatam) Archived 2006-02-06 ವೇಬ್ಯಾಕ್ ಮೆಷಿನ್ ನಲ್ಲಿ.
- English Translation of Narada Bhakti Sutra
- about Hinduism
ಆಧಾರ ಗ್ರಂಥಗಳು
[ಬದಲಾಯಿಸಿ]೧.ಹಿಂದೂಧರ್ಮದ ಪರಿಚಯ: ಎದುರ್ಕಳ ಶಂಕರನಾರಾಯಣ ಭಟ್