ಬೇಲೂರು ದೇವಸ್ಥಾನದ ಕಂಬಗಳ ಮೇಲೆ ಕಾಣಬರುವ ಮದನಿಕೆಗಳು
ಟೆಂಪ್ಲೇಟು:Cleanup- ವಿಕೀಕರಣ ಮಾಡಬೇಕು
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
- ಪರಿಚಯ:ಹಾಸನದಿಂದ 38 ಕಿ.ಮೀ ದೂರದಲ್ಲಿರುವ ಯಗಚಿ ನದಿಯ ದಡದಲ್ಲಿರುವ ಬೇಲೂರು ವಿಶ್ವ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಬೇಲೂರು ಹೊಯ್ಸಳರ ಹಿಂದಿನ ರಾಜಧಾನಿಯಾಗಿತ್ತು. ಮತ್ತು ಇತಿಹಾಸದಲ್ಲಿ ವಿವಿಧ ಹಂತಗಳಲ್ಲಿ ವೇಲಾಪುರ, ವಲೂರ್ ಮತ್ತು ಬೆಲಾಹೂರ್ ಎಂದು ಉಲ್ಲೇಖಿಸಿದ್ದಾರೆ. ಈ ಪಟ್ಟಣವು ಅಲ್ಲಿರುವ ಚೆನ್ನಕೇಶವ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಹೊಯ್ಸಳರ ಕಾಲದ ಶಿಲ್ಪಕಲೆಯ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದಾಗಿದೆ. ಚೋಳರ ವಿರುದ್ಧ 1116 ರಲ್ಲಿ ತನ್ನ ವಿಜಯವನ್ನು ಗುರುತಿಸಲು, ವಿಜಯ ನಾರಾಯಣ (ಈಗ ಚೆನ್ನಕೇಶವ) ಎಂದು ಕರೆಯಲ್ಪಡುವ ಪ್ರಸಿದ್ಧ ದೇವಾಲಯವನ್ನು ನಿರ್ಮಿಸಿದನು. ಹೊಯ್ಸಳ ರಾಜ ವಿಷ್ಣುವರ್ಧನ ಕಟ್ಟಿದ ಈ ದೇವಾಲಯವು ಪೂಜ್ಯವೂ ಪ್ರಸಿದ್ಧವೂ ಆಯಿತು. ವಾಸ್ತುಶಿಲ್ಪಿ ಜಕಣಾಚಾರಿ ಇದನ್ನು ನಿರ್ಮಿಸಿದನೆಂದು ಪ್ರಸಿದ್ಧಿಯಾಗಿದೆ.
- ಚೆನ್ನಕೇಶವ ದೇವಾಲಯವು ಕಲ್ಲಿನ ಕಲೆಯ ಉನ್ನತ ಗುಣಮಟ್ಟದ ಶಿಲ್ಪಕಲೆಯ ಕೆಲಸಕ್ಕೆ ಉತ್ತಮ ಉದಾಹರಣೆಯಾಗಿದೆ. ನೃತ್ಯ, ಬೇಟೆಯಾಡುವುದು, ಮರಗಳ ದೇವಾಲಯ ಅಲಂಕೃತ ಕಂಭಗಳ ಮೇಲಂಚಿನ ಆಧಾರಗಳ(ಕ್ಯಾನೊಪಿಸ್) ಅಡಿಯಲ್ಲಿ 80 ಕ್ಕಿಂತಲೂ ಹೆಚ್ಚು ಮದನಿಕಾ ವಿವಿಧ ಭಂಗಿಗಲಲ್ಲಿ ನಿಂತಿರುವ ಶಿಲ್ಪಗಳು ಇವೆ. ನವರಂಗದ ಅತ್ಯದ್ಭುತವಾದ ಕೆತ್ತಿದ ಸಾಲು ಸಾಲು ಕೆತ್ತನೆಗಳ (ಕಾಲಮ್ಗಳ) ಮೇಲೆ 4 ಮದನಿಕಾ ವಿಗ್ರಹಗಳು (ಸೊಗಸಾದ ನೃತ್ಯಶೈಲಿಯ ಪ್ರದರ್ಶನದ) ಹೊಯ್ಸಳ ಕೆಲಸದ ಅನನ್ಯ ಸೃಷ್ಟಿಗಳಾಗಿವೆ[೧]
ಮದನಿಕೆಗಳು ಅಥವಾ ಶಿಲಾಬಾಲಿಕೆಯರು
[ಬದಲಾಯಿಸಿ]- ೧) 'ದರ್ಪಣ ಸುಂದರಿ'
ಎಡಗೈಯಲ್ಲಿ ಕನ್ನಡಿ ಹಿಡಿದು ಬಲಗೈಯಲ್ಲಿ ಕುಂಕುಮವನ್ನು ಹಿಡಿದುಕೊಂಡು ಹಣೆಗೆ ಕುಂಕುಮವನ್ನಿಟ್ಟುಕೊಳ್ಳಲು ಕನ್ನಡಿಯಲ್ಲಿ ಮುಖವನ್ನು ನೋಡಿಕೊಳ್ಳುತ್ತಿದ್ದಾಳೆ. ಕಣ್ಣಿನ ದೃಷ್ಠಿಯು ಕನ್ನಡಿಯಲ್ಲಿ ನಾಟಿಹೋದಂತಿದೆ. ಕನ್ನಡಿಯು ನವೀನ ಮಾದರಿಯಾಗಿದ್ದು ಹಿಂಭಾಗದಲ್ಲಿ ಹಿಡಿಯೂ ಸುತ್ತಲೂ ಕಟ್ಟು (ಫ್ರೇಂ)ವುಳ್ಳದ್ದಾಗಿದೆ. ಮದನಿಕೆಯ ಆಭರಣಗಳು ಇವು ; ಓಲೆ, ತುರುಬು, ಕಾಲುಂಗುರ, ಕೈಯಲ್ಲಿ ಬಳೆ, ಕಾಲು ಬಳೆ, ಕಂಠೀಹಾರ, ಸೊಂಟದಪಟ್ಟಿ,, ತಲೆ, ಹಿಂಬದಿಯಲ್ಲಿ ಸಿಂಬಿ. ಮುಂತಾದವು ಇವುಗಳು ಈಗಿನ ಆಧುನಿಕ ಆಭರಣಗಳನ್ನು ನಾಚಿಸುವಂತಿವೆ. ಮದನಿಕೆಯ ಹಿಂಭಾಗದಲ್ಲಿ ಪುಷ್ಪಲತೆಯಿಂದ ಕೂಡಿದ ಪ್ರಭಾವಳಿಯು ಕಾಣಿಸುವುದು. ಈಕೆಯ ಬಲಭಾಗದಲ್ಲಿ ನಿಂತಿರುವ ಸಖಿಯು ಬಂದು ಕೋತಿಮರಿಯನ್ನು ಎತ್ತಿಕೊಂಡು ಅದಕ್ಕೆ ತಿನ್ನುವುದಕ್ಕೆ ದ್ರಾಕ್ಷಿ ಹಣ್ಣಿನ ಗೊಂಚಲನ್ನು ಕೊಡುತ್ತಿದ್ದಾಳೆ.
೨')ಶುಕಭಾಷಿಣಿ' ಎಡಗೈನ ಮೇಲೆ ಒಂದು ಗಿಳಿಯನ್ನು ಕೂರಿಸಿಕೊಂಡು ಅದಕ್ಕೆ ಏನೋ ಸಂದೇಶವನ್ನು ತಿಳಿಸುತ್ತಿದ್ದಾಳೆ. ಈಕೆಯ ಮುಖಭಾವನೆಯು ತನ್ನ ಚಲುವ ಚನ್ನಿಗನಿಗೆ ಪ್ರೀತಿಯ ಸಂದೇಶವನ್ನು ತಿಳಿಸಲು ಆ ಗಿಳಿಯೊಡನೆ ಸಂಭಾಷಿಸುತ್ತಿರುವಳೋ ಎನ್ನುವಂತೆ ತೋರುತ್ತದೆ. ಹಿಂದಿನ ಕಾಲದಲ್ಲಿ ತಂತಿ ಹಾಗೂ ಅಂಚೆ ಸೌಕರ್ಯವಾಗಲೀ ಇರಲಿಲ್ಲವೆಂದು ವ್ಯಕ್ತವಾಗುತ್ತದೆ.
ವಿಷ್ಣುವರ್ಧನ ಮಹಾರಾಜನ ಚಿತ್ರವನ್ನು ಈ ಎರಡು ಮದನಿಕೆಗಳ ಕೆಳಗೆ ಗೋಡೆಯ ಮೇಲೆ ಇದೆ. ಇವರ ಕಾಲದಲ್ಲಿಯೇ ಈ ದೇವಾಲಯದ ನಿರ್ಮಾಣ ಕಾರ್ಯವು ಪ್ರಾರಂಭವಾಯಿತು. ಎಡಭಾಗದಲ್ಲಿ ಶಾಂತಲಾದೇವಿ ಕುಳಿತಿರುವಳು. ಈಕೆಯು ಶಿಲ್ಪಕಲೆಗೆ ನೀಡಿದ ಆದರ, ಪ್ರೋತ್ಸಾಹಗಳು ಸಾಮಾನ್ಯವಾದವುಗಳಲ್ಲ. ಬಲಭಾಗದಲ್ಲಿ ರಾಮಾನುಜಾಚಾರ್ಯರು ಕುಳಿತಿರುವರು. ರಾಮಾನುಜಾಚಾರ್ಯರು ಆಸ್ಥಾನದ ಗುರುವರ್ಯರಾಗಿದ್ದರು.
೩) 'ವಸಂತನ ನೃತ್ಯ' ಈ ಮದನಿಕೆಯು ಓಕುಳಿಯಾಟಕ್ಕೆ ಪಿಚಕಾರಿ ಎಡಗೈಯಲ್ಲಿ ಹಿಡಿದು ಸಿದ್ಧವಾಗಿದ್ದಾಳೆ ಎಂದು ಕಾಣಿಸುತ್ತಾಳೆ.ಮದನಿಕೆಯ ಸೌಂದರ್ಯ ಭಾವವು ಪ್ರೇಕ್ಷಕರ ಮನದಲ್ಲಿ ಹೊಸ ಭಾವನೆಯನ್ನೇ ಮೂಡಿಸುತ್ತದೆ. ಗಾಳಿಗೆ ಹಾರಾಡುವ ಮುಂಗುರುಳುಗಳು. ಈ ವಿಗ್ರಹ ರಚನೆಕಾರನ ಹೆಸರು ಚಿಕ್ಕೆ ಹಂಪ. ೪) ಮುರೊಜಮೊದೋ : ಈ ಮದನಿಕೆಯ ಎಡಬಲ ಭಾಗದಲ್ಲಿ ಸಖಿಯರು ಫಲವನ್ನು ಆಭರಣಗಳನ್ನು ಹಿಡಿದು ಸರ್ವಾಲಂಕಾರಕ್ಕೆಂದು ಕಾದಿರುವಂತೆ ಇದೆ. ಎಡಗೈನ ಮೇಲೆ ಒಂದು ಗಿಳಿಯು ಕುಳಿತಿದೆ. ಎಡಗೈಯಲ್ಲಿ ವೀಳೆದೆಲೆಯ ಪಟ್ಟಿಯನ್ನು ಹಿಡಿದಿದ್ದಾಳೆ. ೫) ಕೋತಿಯ ಕುಪಿತೆ :
ಈ ಚೆಲುವೆ ಕಪಿಯ ಕಾಟದಿಂದ ಬಹಳ ಕುಪಿತಳಾದಂತಿದೆ. ಈ ಮರಿ ಕಪಿ ಮಾಡುತ್ತಿರುವ ಚೇಷ್ಟೆಯನ್ನು ನೋಡಿ ಅರ್ಧ ಮುಖದಲ್ಲಿ ನಗುವೂ ; ತನ್ನನ್ನೂ ಈ ಕೋತಿಯ ಅಪಮಾನ ಮಾಡುತ್ತಿದೆ ಎಂದು ಅರ್ಧ ಮುಖದಲ್ಲಿ ಕೋಪವು ಮಾಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ಇದರಿಂದ ಶಿಲ್ಪಿಯ ಕೈಚಳಕದ ಚತುರತೆ ಎಷ್ಟೆಂಬುದು ತಿಳಿಯುತ್ತದೆ. ಈ ವಿಗ್ರಹವನ್ನು ಕಡೆದವರ ಹೆಸರು ದಾಸೋಜ. ಬಲಭಾಗದಲ್ಲಿರುವ ಕಪಿಯು ಏನೋ ಹಠ ಹಿಡಿದು ಹಲ್ಲುಕಿರಿಯುತ್ತಾ ಅವಳು ಉಟ್ಟ ಸೀರೆಯನ್ನು ಎಳೆಯುತ್ತಿದೆ. ಕುಪಿತಳಾದ ಬಾಲಕಿಯು ಕೋತಿಯನ್ನು ಒಡೆಯಲು ಬಲಗೈಯಲ್ಲಿ ಒಂದು ಬಳ್ಳಿಯನ್ನು ಎತ್ತಿದ್ದಾಳೆ.
೬) ವೀರಾಯೋಚಿತೆ:
ಈ ವಿಗ್ರಹವನ್ನು ನೋಡಿದರೆ ಕನ್ನಡದ ವೀರರಾಣಿಯರ ನೆನಪಾಗುತ್ತದೆ. ಕನ್ನಡದ ಕೆಚ್ಚೆದೆಯ ಕುವರಿಯರಾದ ಕಿತ್ತೂರು ಚೆನ್ನಮ್ಮ, ಝಾನ್ಸಿ ರಾಣಿ ಮೊದಲಾದ ರಾಣಿಯರ ನೆನಪಾಗುತ್ತದೆ. ಈಕೆಯ ಸಮೀಪದ ಬಳ್ಳಿಯ ಮೇಲೆ ಕುಳಿತಿರುವ ಪಕ್ಷಿಗಳನ್ನು ಶಿಕಾರಿ ಮಾಡಲು ಬಿಲ್ಲು ಬಾಣಗಳಿಂದ ಒಡಗೂಡಿ ಸಖಿಯರೊಡನೆ ನಿಂತಿದ್ದಾಳೆ. ನಿಂತಿರುವ ಠೀವಿ, ಬಿಲ್ಲಿಗೆದೆ ಏರಿಸಿರುವ ರಭಸ ಇವು ಆಕರ್ಷಣೀಯವಾಗಿವೆ. ಸುರಳಿ ಕೂದಲಿನ ಈ ಮೋಹನಾಂಗಿಯ ಎಡಭಾಗದ ಸಖಿಯೂ ಒಂದು ಬೇಟೆಯ ನಾಯಿಯನ್ನು ಹಿಡಿದುಕೊಂಡಿದ್ದಾಳೆ. ಬೇಟೆಗಾತಿಗೆ ಬಾಣಗಳನ್ನೂ ಕೊಡುತ್ತಿದ್ದಾಳೆ. ಶಿಲ್ಪಿಯ ಹೆಸರು ಚಾವಣ.
೭) ತ್ರಿಭಂಗಿ ನೃತ್ಯ :
ದೇಹವನ್ನು ತ್ರಿಕೋಣವಾಗಿ ಜಗ್ಗಿಸಿ ನರ್ತಿಸುತ್ತಿದ್ದಾಳೆ ಈ ಬಾಲಿಕೆ. ನೃತ್ಯ ಶಾಸ್ತ್ರದಲ್ಲಿಯೇ ಅಸಾಧ್ಯವಾದ ಈ ನರ್ತನವನ್ನು ತ್ರಿಭಂಗಿ ನರ್ತನವೆಂಬುದಾಗಿ ಕರೆಯುತ್ತಾರೆ. ಎಡಗೈಯಲ್ಲಿ ಡಮರುಗಳನ್ನು ಹಿಡಿದುಕೊಂಡು ಒಂದೇ ಕಾಲಿನಲ್ಲಿ ನಾಟ್ಯವಾಡುತ್ತಿರುವಳು.
೮) ಕಪಾಲ ಭೈರವಿ : ಇದನ್ನು ಕೆತ್ತಿದ ಶಿಲ್ಪಿ ದಾಸೋಜ. ಇದು ಪಾರ್ವತಿಯ ಅವತಾರವೆಂದು ಹೇಳುತ್ತಾರೆ. ಎಡಗೈಯಲ್ಲಿ ರುಂಡದಂಡವನ್ನು, ಬಲಗೈಯಲ್ಲಿ ಕಪಾಲ ಪಾತ್ರೆಯನ್ನು ಕಾಣಬಹುದು. ೯) ತಾಂಡವೇಶ್ವರಿ : ಇದನ್ನು ಕೆತ್ತಿದ ಶಿಲ್ಪಿ ಮಹಿಣ. ಈ ಶಿಲ್ಪವು ಡೋಲು ಬಾರಿಸುತ್ತಾ ನಿಂತಿದ್ದಾಳೆ. ಡೋಲಿಗೆ ಬಿಗಿದಿರುವ ದಾರವು ಹೊಸ ಹಗ್ಗವನ್ನೇ ಕಟ್ಟಿರುವಂತಿದೆ. ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾಳೆ. ಕೈಬೆರಳುಗಳು ಹಗ್ಗದ ಒಳಭಾಗದಲ್ಲಿ ಸೇರಿದ್ದು ಉಗುರುಗಳನ್ನೂ ಸಹ ಸ್ಪಷ್ಟವಾಗಿ ಬಿಡಿಸಲಾಗಿದೆ. ೧೦) ಮುರಳೀಧರ :
ವೇಣುಗೋಪಾಲನೇ ಈ ರೂಪದಲ್ಲಿ ಬಂದು ನಿಂತಂತೆ ಕಾಣುತ್ತದೆ. ತನ್ನ ವೇಣುಗಾನದಿಂದ ತನ್ನ ಪ್ರೇಕ್ಷಕರ ತನುಮನಗಳನ್ನು ತಣಿಸುವನೋ ಎಂಬಂತೆ ಭಾಸವಾಗುತ್ತದೆ. ಕೊಳಲು ಹಿಡಿಸಿರುವ ಭಂಗಿ, ಕೊಳಲಿನ ಮೇಲಾಡುತ್ತಿರುವ ಬೆರಳುಗಳೂ ಈಕೆಯ ಅಂಗಸೌಷ್ಟವವೂ ಬಹಳ ನೈಜವಾಗಿದೆ. ಬಾಲಕಿಯ ಕಿವಿಯಲ್ಲಿರುವ ಓಲೆಗಳು ಕಿವಿಯಿಂದ ಬೇರ್ಪಟ್ಟಂತೆ ಕಂಡರೂ, ಸ್ವಲ್ಪಭಾಗವು ಮಾತ್ರ ಸೂಕ್ಷ್ಮವಾಗಿ ಅಂಟಿಕೊಂಡಿದೆ. ಸಖಿಯರು ವಾದ್ಯನಾದ ಮಾಡುತ್ತಿದ್ದಾರೆ.
೧೧) ಗಾನಮಂಜರಿ :
ದೇವರನ್ನು ತನ್ನ ಮಧುರಗಾನದಿಂದ ಸ್ತುತಿಸುತ್ತಿರುವಂತೆ ಕಾಣುತ್ತದೆ. ತುಂಬಾ ಗಲ್ಲಗಳಿಂದ ಸೊಗಸಾಗಿ ಕಾಣುವ ಮುಖ. ಬಳ್ಳಿಯಂತೆ ಬಳುಕುವ ಸೊಂಟ ಕಣ್ಸೆಳಿಯುತ್ತಿರುವ ಮೈಮಾಟಗಳಿಂದ ಮದನಿಕೆಗೆ ಸೌಂದರ್ಯದ ಮೆರಗು ಕೊಟ್ಟಿರುತ್ತಾನೆ ಶಿಲ್ಪಿ ವಜ್ರದಂಡ.
೧೨)ನಾಟ್ಯಮೋಹಿನಿ :
ಕಾಗದದಲ್ಲಿ ಚಿತ್ರವನ್ನು ಬಿಡಿಸಿದಂತೆ ಕಲ್ಲಿನ ಪದರದಲ್ಲಿ ಪುಷ್ಪಲತೆಯನ್ನು ಕೆತ್ತಿರುವ ಪ್ರಭಾವಳಿಯ ಮುಂಭಾಗದಲ್ಲಿ ಕೆಂದುಟಿಯ ಅಂಚಿನಲ್ಲಿ ಕಿರುನಗೆಯನ್ನು ಬೀರುತ್ತಾ ಚಂದ್ರಮುಖಿಯೂ, ಮದನಮೋಹನಾಂಗಿಯೂ ಆದ ಈಕೆ ಕಂಗೊಳಿಸುತ್ತಿದ್ದಾಳೆ. ಸರ್ವಾಭರಣ ಅಲಂಕೃತಳಾದ ಈಕೆಯ ಎಡಭಾಗದಲ್ಲಿ ಪ್ರಭಾವಳಿಯಲ್ಲಿ ಶಿಲ್ಪಿಯು ತನ್ನ ಕೈ ಚಾಣ ಕೌಶಲ್ಯವನ್ನು ಬಹಳ ಅಂದವಾಗಿ ಬಿಡಿಸಿದ್ದಾನೆ. ಬಳ್ಳಿಯ ಮೇಲೆ ಒಂದು ಹಲಸಿನ ಹಣ್ಣಿದೆ. ಅದರ ಮೇಲೆ ಒಂದು ನೊಣವೂ ಇದೆ. ಅದಕ್ಕೆ ಮೀಸೆ ರೆಕ್ಕೆಗಳನ್ನೂ ಸಹ ಕಾಣಬಹುದು. ನೊಣವನ್ನು ತಿನ್ನಲು ಒಂದು ಹುಲಿಯನ್ನು ಬಿಡಿಸಿರುವನು
.೧೩) ವಿಕಟನರ್ತಿನಿ : ಡವಣೆಯನ್ನು ನುಡಿಸುತ್ತಿರುವ ಈ ಪುರುಷ ವಿಗ್ರಹ ಹಗ್ಗದ ಬಲಭಾಗದಲ್ಲಿ ಸೇರಿರುವ ಕೈ ಬೆರಳುಜಗಳು ಚೆನ್ನಾಗಿ ಕಾನುತ್ತವೆ. ಸೊಗಸಾದ ಗಡ್ಡ ಮೀಸೆಗಳಿವೆ. ತಲೆಗೂದಲು ತುರುಬು ಕಟ್ಟಿದಂತಿದೆ. ವಿಗ್ರಹವು ತೊಟ್ಟಿರುವ ನಿಕ್ಕರ್ ಸಹ ಹೊಸ ಮಾದರಿಯಾಗಿದ್ದು ಸ್ಪಷ್ಟವಾಗಿ ಕಾಣುವುದು. ಈ ವಿಗ್ರಹವನ್ನು ಚಿಕ್ಕ ಹಂಪನೆಂಬ ಶಿಲ್ಪಿಯು ಕೆತ್ತಿರುವರು.
೧೩)ರುದ್ರವೀಣೆ: ವೀಣೆಯ ತಂತಿಯನ್ನು ಸಹ ಬಹು ಸೂಕ್ಷ್ಮವಾಗಿ ಬಿಡಿಸಲಾಇದೆ. ಈ ವೀಣೆಯನ್ನು ರುದ್ರವೀಣೆಯೆಂದು ಕರೆಯುತ್ತಾರೆ. ಈ ಮದನಿಕೆಯ ಎಡಗೈಯಲ್ಲಿ ವೀಣೆಯನ್ನು ಹಿಡಿದು ಬಲಗೈಯಲ್ಲಿ ತಂತಿಯನ್ನು ಮೀಟುತ್ತಿದ್ದಾಳೆ. ಇದು ದೇವವಾದ್ಯಗಳಲ್ಲೊಂದಾದ ಸರ್ವಶ್ರೇಷ್ಠವಾದ ವಾದ್ಯ.
೧೪)ರಸಿಕ ಶಬರಿ : ಬಲಗೈಯಲ್ಲಿ ಒಂದು ಹೂವಿನ ಮೊಗ್ಗನ್ನು ಹಿಡಿದು ಕೀಳುತ್ತಿದ್ದಾಳೆ. ಎಡಗೈಯಲ್ಲಿ ಬಟ್ಟೆಯು ಇತ್ತೀಚೆಗೆ ಮುಂದುಹೋಗಿದೆ. ಈಕೆಯ ದೇವರ ಪೂಜೆಗೆ ಪುಷ್ಪಗಳನ್ನು ಸಂಗ್ರಹಿಸುತ್ತಿರುವಂತೆ ತೋರುವುದು.
೧೫)ಕುಟಿಲ ಕುಂತಳ : ಈಕೆಯು ಕನ್ನಡಿಯಲ್ಲಿ ನೋಡಿಕೊಳ್ಳುತ್ತಾ ಈಗಹಿನ ಕಾಲದ ಹೆಣ್ಣುಮಕ್ಕಳು ತೆಗೆಯುವ ಮುಂಗುರುಳಿನ ಗುಂಗುರು ತೆಗೆಯುತ್ತಿದ್ದಾಳೆ. ಇಂತಹ ಫ್ಯಾಶನ್ ಈಗ್ಗೆ ೯೦೦ ವರ್ಷಗಳ ಹಿಂದೆಯೂ ಇದ್ದಿತೆಂದು ತಿಳಿಯಬಹುದು.
೧೬)ವೀರಯೋಷಿತೆ : ಕರ್ಣಕುಂಡಲಗಳಿಂದ ಕಿವಿಯು ಅಲಂಕರಿಸಲ್ಪಟ್ಟಿದೆ. ಬಿಲ್ಲು ಹಿಡಿದು ಬಾಣ ಪ್ರಯೋಗವನ್ನು ಮಾಡಿಯೇ ಬಿಟ್ಟಿದ್ದಾಳೆ. ತಾವರೆಯ ಮೊಗ್ಗಿನಂತೆ ಕಾಣುವ ಸ್ತನಗಳು ಚಾಚುವ ಎದೆಯಲ್ಲಿ ಎದ್ದುಕಾಣುತ್ತಿವೆ. ಸಖಿಯು ಆಕೆಯನ್ನು ಶಿಕಾರಿ ಕಾರ್ಯದಲ್ಲಿ ನೆರವಾಗಿದ್ದಾಳೆ.
೧೭)ನಾಟ್ಯ ನಿಪುಣೆ: ಎಡಗೈ ತಲೆಯ ಮೇಲ್ಕೆಕ ಇರುವುದು. ಎಡಗಾಲನ್ನು ಸ್ವಲ್ಪ ಎತ್ತಿದ್ದಾಳೆ. ಕೈಯಲ್ಲಿ ತಾಳವನ್ನು ಹಿಡಿದು ಕುಣಿಯುತ್ತಿದ್ದಾಳೆ. ಸಖಿಯರು ವಾದ್ಯಗಾನ ಮಾಡುತ್ತಿದ್ದಾರೆ.
೧೮)ರಾಗಯೋಗಿನಿ : ತಲೆಯ ಕೂದಲನ್ನೂ ಋಷಿಯ ಪತ್ನಿಯರಂತೆ ಗಂಟು ಕಟಿಕೊಂಡು ರಾಗಯೋಗಿನಿಯ ದೇಹವು ನೃತ್ಯ ಭಂಗಿಯನ್ನು ರೂಪಿಸುತ್ತದೆ. ಈ ನೃತ್ಯಕ್ಕೆ ರೇಣುಕಾ ನೃತ್ಯವೆಂದು ಕರೆಯುತ್ತಾರೆ. ಹಿಂಭಾಗದಲ್ಲಿ ಪ್ರಭಾವಳಿಯಿದೆ.
೧೯)ಪುಂವಿಡಂಬನಿ : ಈ ವಿಗ್ರಹ ಪುರುಷವೇಶವನ್ನು ಹೊಂದಿದೆ. ಗಡ್ಡ ಮೀಸೆಗಳು ಜೋತುಬಿದ್ದಿವೆ. ಜೊತೆಗಾರರು ಡೋಲು ಬಾರಿಸುತ್ತಿದ್ದಾರೆ. ಲತೆಗಳಿಂದ ಕೂಡಿದ ಪ್ರಭಾವಳಿಯು ಹಿಂಭಾಗದಲ್ಲಿ ಎದೆ.
೨೦)ಸ್ವರ್ಗಹಸ್ತೆ : ಈ ವಿಗ್ರಹದಲ್ಲಿ ತ್ರಿಭಂಗಿ ನರ್ತನದಲ್ಲಿ ತೊಡಗಿದ್ದಾಳೆ. ಈ ನೃತ್ಯಕ್ಕೆ ಚಂದ್ರಿಕಾ ನೃತ್ಯವೆಂದು ಹೆಸರು ಕೆತ್ತಿರುವ ಶಿಲ್ಪಿಯ ಹೆಸರು "ಮಲ್ಲೋಜ" ಸಖಿಯರು ವಾದ್ಯವನ್ನು ನುಡಿಸುತ್ತಿದ್ದಾರೆ.
೨೧)ಜಯನಿಷೇಧಿ : ಕೈಗಳಲ್ಲಿ ಬಿಲ್ಲು ಬಾಣಗಳನ್ನು ಹಿಡಿದುಕೊಂಡಿದ್ದಾಳೆ. ಎಡಭಾಗದ ಸಖಿಯು ಬೇಟೆಯಾಡಿದ ಜಿಂಕೆಗಳನ್ನು ಹೆಗಲ ಮೇಲೆ ಹೊತ್ತುಕೊಂಡು ತರುತ್ತಿದ್ದಾಳೆ. ಬಲಪಾರ್ಶ್ವದಲ್ಲಿ ಒಬ್ಬ ಸಖಿಯು ಇನ್ನೊಬ್ಬ ಸಖಿಯಿಂದ ಕಾಲಿಗೆ ಚುಚ್ಚಿದ ಮುಳ್ಳನ್ನು ತೆಗೆಸಿಕೊಳ್ಳುತ್ತಿದ್ದಾಳೆ. ಪ್ರಧಾನ ಮದನಿಕೆಯ ಗೆಜ್ಜೆ ಚೈನನ್ನೂ ಹಾಕಿಕೊಂಡಿದ್ದಾಳೆ. ಈಕೆಯು ಬೇಟೆಯನ್ನು ಮುಗಿಸಿಕೊಂಡು ಹಿಂತಿರುತ್ತಿದ್ದಾಳೆ. ಸೊಂಟಕ್ಕೆ ಪತ್ರಲೆಸುತ್ತಿದೆ ಕಾಲುಗಾತಿಯಿಂದ ಕೊರಳಿನಲ್ಲಿದ್ದ ಹಾವು ಮುರಿದುಹೋಗಿದೆ.
೨೨)ಕೃತಕ ಶೂಲೆ : ಧರಿಸಿರುವ ಕಿರೀಟಕ್ಕೆ ಸುತ್ತ ರುಂಡಗಳಿದ್ದು ದೇವತೆಗಳ ಕಿರೀಟದಂತಿದೆ. ಎಡಗೈಯಲ್ಲಿ ರುಂಡ ಮುಂಡವಿದೆ. ರುಂಡದ ಕಣ್ಣು ಕಿವಿ ಮೂರನ್ನು ಸಹ ಬಿಡಿಸಿದ್ದಾಳೆ.
೨೩)'ನಾಟ್ಯಸುಂದರಿ' : ವಿಗ್ರಹದ ಪಕ್ಕದಲ್ಲಿರುವ ಬಾಗಿಲಿಗೆ ಸ್ವರ್ಗದ ಬಾಗಿಲೆಂದು ಹೆಸರು. ಈ ಬಾಗಿಲು ಬಳಿ ನಿಂತು ಉತ್ತರ ದಿಕ್ಕಿಗೆ ನೋಡಿದರೆ ಬೆಂಡಗದಮ್ಯನ ಬೆಟ್ಟವು ಕಾಣುವುದು. ಬುಡಬುಡಿಕೆ ಬಾರಿಸುತ್ತ ಬರುತ್ತಿದ್ದಾಳೆ. ಇಲ್ಲಿ ಜಾತ್ರೆ ವರ್ಷಕ್ಕೊಮ್ಮೆ ನಡೆಯುವುದು. ಇಲ್ಲಿ ಜಾತ್ರೆಯಲ್ಲಿ ಹಚ್ಚಿದ ದೀಪವು ಮೈಸೂರಿನವರೆಗೂ ಕಾಣಿಸುವುದೆಂದು ಪ್ರತೀತಿ ಇದೆ.
೨೪)ಹಾವಸುಂದರಿ: ಕೆತ್ತಿದ ಶಿಲ್ಪಿ "ಚಾವಣ'. ಶಿಷ್ಯೆಗೆ ನೃತ್ಯ ಪಾಠವನ್ನು ಹೇಳಿ ಕೊಡುತ್ತಿದ್ದಾಳೆ. ಗುರುವಿಲ್ಲದೆ ವಿದ್ಯೆ ಕಲಿಯಲು ಸಾಧ್ಯವಿಲ್ಲವೆಂಬುದು ಇದರ ನೀತಿ.
೨೫)ಭಸ್ಮಾಸುರ ಮೋಹಿನಿ : ವಿಷ್ಣುವು ಭಸ್ಮಾಸುರನನ್ನು ಸಂಹರಿಸುವಾಗ ಈ ನೃತ್ಯವನ್ನು ಮಾಡಿರುತ್ತಾರೆ. ಆದುದರಿಂದ ಇದನ್ನು ಭಸ್ಮಮೋಹಿನಿ ಎಂದು ಕರೆಯುತ್ತಾರೆ. ಬಲಗೈ ತಲೆಯ ಮೇಲಿದೆ ಎಡಗೈ ಸೊಂಟಕ್ಕೆ ಸಮೀಪದಲ್ಲಿದೆ. ಬಲಗೈ ಮೇಲೆ ಸ್ವಲ್ಪ ನೀರು ಹಾ ಕಿದರೆ ಅದು ಎಡಸ್ತನ. ಎಡಗೈ ತುದಿ, ಅಲ್ಲಿಂದ ಎಡಗಾಲಿನ ಉಂಗುಷ್ಟದವರೆಗೂ ಬರುತ್ತದೆ. ಈ ವಿಗ್ರಹದ ಕೆಳಭಾಗದಲ್ಲಿ ಗೋಡೆಯ ಮೇಲೆ ಗರುಡಾಂಜನೇಯರು ಒಂದು ಹಣ್ಣಿ ಗೋಸ್ಕರ ಜಗಳವಾಡುತ್ತಿರಲು ವಿಷ್ಣುವು ತನ್ನ ಚಕ್ರ ಪ್ರಯೋಗದಿಂದ ಆ ಹಣ್ಣನ್ನು ಸಮಭಾಗ ಮಾಡಿರುವುದು ಕಂಡುಬರುತ್ತದೆ. ವಿಗ್ರಹವು ಮುಂದಕ್ಕೆ ಬಾಗಿದ್ದರೂ ನೇರವು ಒಂದೇ ಅಳತೆಯಿಂದ ಇರುವುದು.
೨೬)ವಿಷಕನ್ಯೆ : ಈ ಮದನಿಕೆಯು ಸ್ನಾನ ಮಾಡಿ ಉಡುವುದಕ್ಕೆ ಸೀರೆಯನ್ನು ತೆಗೆದುಕೊಳ್ಳುತ್ತಿದ್ದಾಳೆ. ಸೀರೆಯಲ್ಲಿದ್ದ ಚೇಳನ್ನು ಕಂಡು ಕೊಡವಿ ದೂರಕ್ಕೆ ಹಿಡಿದಿದ್ದಾಳೆ. ಚೇಳು ಎಡಗಾಲಿನ ಪೀಠದ ಮೇಲೆ ಬಿದ್ದಿದೆ. ಮುಖವು ಭಯಭೀತವಾಗಿದೆ. ಚೇಳಿನ ಕೊಂಡಿಯ ಮಣಿಗಳು, ಕಾಲುಗಳೆಲ್ಲವನ್ನೂ ಬಿಡಿಸಲಾಗಿದೆ.
೨೭)ಶಕುನಶಾರದೆ : ಈಕೆಯು ಎಡಗೈಯಲ್ಲಿ ಓಲೆ ಗರಿಯ ಪುಸ್ತಕವನ್ನು ಕೈಯಲ್ಲಿ ಹಿಡಿದು ಬಲಗೈಯಲ್ಲಿ ಅಭಯ ಹಸ್ತವನ್ನು ತೋರಿಸುತ್ತಿದ್ದಾಳೆ. ಹಸ್ತಗೆರೆಗಳೆಲ್ಲವನ್ನು ಕೆತ್ತಿದ್ದಾರೆ. ಅಕ್ಕಪಕ್ಕದಲ್ಲಿ ಚಾಮರಧಾರಿಗಳಾದ ಸಖಿಯರು ನಿಂತಿದ್ದಾರೆ.
೨೮)ನಾಗವೀಣಾ : ಕೈನಲ್ಲಿರುವ ವೀಣೆಯ ಒಂದು ತುದಿಯು ಹಾವಿನ ಹೆಡೆಯಂತಿದೆ. ಈ ಮದನಿಕೆಯು ವೀಣೆಯನ್ನು ನುಡಿಸುತ್ತ ಗಾನಮಗ್ನಳಾಗಿದ್ದಾಳೆ.
೨೯)ಪಂಕನೃತ್ಯ : ಈ ಮದನಿಕೆಯು ಎಡಗೈನಲ್ಲಿ ತಾಂಬೂಲವಿದೆ. ಬಲಗೈಯಲ್ಲಿ ಬೀಸಣಿಗೆ ಹಿಡಿದುಕೊಂಡಿದ್ದಾಳೆ. ಈ ಮದನಿಕೆಯ ಸಖಿಯರು ಕೊಳಲು ಹಾಗೂ ತಾಳ ವಾದ್ಯ ನುಡಿಸುತ್ತಿದ್ದಾರೆ.
೩೦)ಕೊರವಂಜಿ ನೃತ್ಯ : ಪ್ರಾಚೀನ ಆಭರಣಗಳದಂತ ಮುಕುರ, ಬುಲಾಕು, ಅಡ್ಡಿಕೆ ಮುಂತಾದ ಆಭರಣಗಳನ್ನು ಧರಿಸಿ ಕೈನಲ್ಲಿ ಚಿಟಿಕಿ ಹಾಗೂ ಬುಡಬುಡುಕೆಗಳನ್ನು ಬಾರಿಸುತ್ತಾ ನಿಂತಿದ್ದಾಳೆ. ಮಲ್ಲಣ್ಣ ಎಂಬ ಶಿಲ್ಪಿಯು ಇದನ್ನು ಕೆತ್ತಿರುವರು.
೩೧)ಮದೂರಶಿಖೆ : ಈ ಮದನಿಕೆಯನ್ನು ಮಲಿಯಣ್ಣನೆಂಬ ಶಿಲ್ಪಿಯು ಕಿತ್ತಿದ್ದಾರೆ. ನವಿಲಿನ ಗರಿಯಂತಿರುವ ತಲೆಗೂದಲು ಹಾಗೂ ನಕ್ಷತ್ರಾಕಾರವಾಗಿರುವ ಕಿವಿಯು ಓಲೆಗಳು ಹಾರಾಡುತ್ತಿರುವ ಗಾಳಿಪಟದ ದಾರವನ್ನು ಎಳೆಯುತ್ತಿರುವುದೋ ಎನ್ನುವಂತಹ ಕೈಗಳು ಹಾಗೂ ಬಳಕುವ ಸೊಂಟ.
೩೨)ಭೂಷಣಪ್ರಿಯೇ : ಬಲಭಾಗದಲ್ಲಿ ನಿಂತಿರುವ ಸಖಿಯು ಒಂದು ಕನ್ನಡಿಯನ್ನು ಹಿಡಿದುಕೊಂಡು ಇಲ್ಲಿ ನೋಡು ನಿನಗಿಂತ ಸುಂದರಿಯಾಗಿರುವವಳು ಇಲ್ಲಿದ್ದಾಳೆಂಬುದಾಗಿ ಅವಳ ಪ್ರತಿಬಿಂಬವನ್ನು ತೋರಿಸುತ್ತಿದ್ದಾಳೆ. ಈ ಬಾಲಿಕೆಯು ನೀಳವಾಗಿ ತಲೆಗೂದಲನ್ನು ಬಾಚಿಕೊಂಡು ಸರ್ವಾಲಂಕಾರಭೂಷಿತಳಾಗಿ ನನ್ನಂಥ ಚೆಲುವೆಯರು ಯಾರೂ ಇಲ್ಲವೆಂಬಂತೆ ಜಂಬದಿಂದ ನಿಂತಿದ್ದಾಳೆ. ಈ ವಿಗ್ರಹವನ್ನು ಕೆತ್ತಿರುವ ಶಿಲ್ಪಿಯ ಹೆಸರು ಮಹಿಣ. ಈ ಶೃಂಗಾರ ಧಾರೆಯನ್ನು ಬಹು ಮುದ್ದಾಗಿ ಕಡೆದು ನಿಲ್ಲಿಸಿದ್ದಾರೆ.
೩೩)ಕೇಶವೃಷ್ಠೆ : ಕೋತಿಯನ್ನು ಹೊಡೆಯುತ್ತಿದ್ದಾಳೆ. ತಲೆ ಕೂದಲು ಈಗಿನ ಕಾಲದ ಪೋನಿಟೈಲ್ನಂತೆ ಕಟ್ಟಲಾಗಿದೆ. ಹಿಂದೆಯೇ ಇದ್ದ ಈ ಫ್ಯಾಷನ್ ಗಳನ್ನು ತಿಳಿಸಲೆಂದೋ ಅಥವಾ ಮುಂದೆ ಬರುವ ಇಂತಹ ನವೀನತೆಯನ್ನು ರೂಪಿಸಲೋಸಗುವೋ ಶಿಲ್ಪಿಯು ಆಗಲೇ ಇಂತಹ ಅನೇಕ ರೀತಿಯ ಫ್ಯಾಷನ್ ಅನ್ನು ಕೆತ್ತಿದ್ದಾರೆ.
೩೪)ಪಾದಾಂಗುಳಿಯೇ : ಈ ಮದನಿಕೆಗೆ ಸಖಿಯ ಕಾಲಿಗೆ ಕಾಲುಂಗಹುರವನ್ನು ತೊಡಿಸುತ್ತಿದ್ದಾಳೆ. ಈಕೆಯು ಗಿಡದ ಬಳ್ಳಿಯೊಂದನ್ನು ಹಿಡಿದುಕೊಂಡು ನಿಂತಿದ್ದಾಳೆ.
೩೫)ಸಂಗೀತಲೋಲೆ : ಕೈಯಲ್ಲಿ ತಾಳಹಿಡಿದು ಹಾಡುತ್ತಿದ್ದಾಳೆ. ಬಾಯಿಯಲ್ಲಿನ ಮೇಲಿನ ಸಾಲಿನ ಹಲ್ಲೂ ಸಹ ಕಾಣುತ್ತದೆ.
೩೬)ಲಾಸ್ಯಭಾವ : ಈಕೆಯು ನಾಟ್ಯವಾಡುವುದಕ್ಕೆ ಮುಂಚೆ ತನ್ನ ಎಡಗಾಲಿನ ಹೆಬ್ಬೆರಳಿನಲ್ಲಿ ತಾಳ ಹಾಕುತ್ತಿದ್ದಾಳೆ. ಹಿಂಬದಿಯ ಪ್ರಭಾವಳಿಯ ಮೇಲೆ ಒಂದು ಜೇನುನೊಣವು ಕುಳಿತುಕೊಂಡು ಹೂವಿನ ಮಧುರವನ್ನು ಹೀರಿಕೊಳ್ಳುತ್ತಿದೆ.
೩೭)ನಾಟ್ಯ ಸರಸ್ವತಿ ಶಾಂತಳಾ : ವಿಷ್ಣುವರ್ಧನನ ಧರ್ಮಪತ್ನಿ ಶಾಂತಳಾದೇವಿಯವರ ಜ್ಞಾಪಕಾರ್ಥವಾಗಿ ಮಾಡಿದ್ದು, ಈ ವಿಗ್ರಹದ ತಲೆಯ ಮೇಲಿರುವ ಬೈತಲೇ ಬೊಟ್ಟು ಅಲುಗಾಡುವಂತೆ ಒಂದು ಕಲ್ಲಿನಲ್ಲಿ ಕೊರೆಯಲಾಗಿದೆ. ಇಲ್ಲಿರುವ ವಿಗ್ರಹಗಳು ಹೊಳಪಾಗಿಯೂ ಚೊಕ್ಕಟವಾಗಿಯೂ ಇರಲು ಮಳೆ, ಗಾಳಿ, ಬಿಸಿಲಿಗೆ ತಾಕದಂತಿರುವಿದೇ ಕಾರಣ. ಈಕೆ ನಾಟ್ಯದಲ್ಲಿ ಪ್ರವೀಣೆ. ಆದ್ದರಿಂದ ಈಕೆಗೆ ಎರಡು ಹೆಸರು (೧) ನಾಟ್ಯ ಸರಸ್ವತಿ (೨) ನಾಟ್ಯ ಪ್ರವೀಣೆ.[೨]