ಬೆಲ್ಲಂ ಗುಹೆಗಳು
Lua error in ಮಾಡ್ಯೂಲ್:Location_map at line 526: Unable to find the specified location map definition: "Module:Location map/data/India Andhra Pradesh" does not exist.
ಬೆಲ್ಲಂ ಗುಹೆ
[ಬದಲಾಯಿಸಿ]- ಬೆಲ್ಲಂ ಗುಹೆಗಳು ಭಾರತದಲ್ಲಿಯೇ ಎರಡನೇ ಅತೀ ಉದ್ದವಾದ ಗುಹೆಯಾಗಿದೆ. ಈ ಗುಹೆಯು ವ್ಯವಸಾಯ ಮಾಡುವ ಭೂಮಿಯ ಕೆಳಭಾಗದಲ್ಲಿದ್ದು, ಅಂತರ್ಜಲದ ಹರಿವಿಕೆಯಿಂದ ಮಾರ್ಪಟ್ಟಿದೆ. ಈ ಗುಹೆಗಳಲ್ಲಿ, ಅಂತರ್ಜಲದ ಆಕರಗಳು, ಉದ್ದನೆಯ ದಾರಿಗಳು ಕಾಣಸಿಗುತ್ತವೆ. ಈ ಗುಹೆಯ ಅತೀ ಆಳದ ಜಾಗ ಪಾತಾಳಗಂಗಾ ಪ್ರವೇಶ ದ್ವಾರದಿಂದ ಸುಮಾರು ೧೫೦ ಅಡಿ ಆಳದಲ್ಲಿದೆ. 'ಬೆಲ್ಲಂ' ಎಂಬ ಪದ ಸಂಸ್ಕೃತದ “ಬಿಲಂ" ಅಂದರೆ ಗುಹೆಗಳೌ ಎಂದರ್ಥ.
- ತೆಲಗು ಭಾಷೆಯಲ್ಲಿ ಬೆಲ್ಲಂ ಗುಹಾಲು ಎಂದು ಕರೆಯುತ್ತಾರೆ. ಈ ಗುಹೆ ಸುಮಾರು ೩೨೨೯ ಮೀಟರ್ ಉದ್ದವಿರುವುದರಿಂದ ಭಾರತದ ಏರಡನೇ ಅತೀ ಉದ್ದದ ಗುಹೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಗುಹೆಯು ಮೊದಲು ೧೮೮೪ ರಲ್ಲಿ ಬ್ರೀಟೀಷ್ ಗೇಣಿದಾರರಾದ ರಾಬರ್ಟ್ ಬ್ರೂಸ್ ಫೂಟೆ ಎಂಬುವರು ಕಂಡು ಹಿಡಿದರು.
- ನಂತರ ೧೯೮೨-೮೪ ರಲ್ಲಿ ಜರ್ಮನ್ ನ ಹೆಚ್ ಡೇನಿಯಲ್ ಗೆಬೂರ್ ರವರ ತಂಡ ಈ ಗುಹೆಯ ಬಗ್ಗೆ ಸಂಪೂರ್ಣ ಅಧ್ಯಯನವನ್ನ ಮಾಡಿದರು.
- ಅದಾದ ನಂತರ ೧೯೮೮ರಲ್ಲಿ ಆಂಧ್ರ ಪ್ರದೇಶದ ಸರ್ಕಾರವು ಸಂರಕ್ಷಿತ ಪ್ರದೇಶ ಎಂದು ಘೋಷಿಸಿತು. ಆಂಧ್ರಪ್ರದೇಶ ಪ್ರವಾಸೋದ್ಯಮ ಇಲಾಖೆಯು ಈ ಗುಹೆಯನ್ನ ಅಭಿವೃಧ್ಧಿ ಗೊಳಿಸಿ ೨೦೦೨ರಲ್ಲಿ ಪ್ರವಾಸಿಗರಿಗೆ ಮುಕ್ತಗೊಳಿಸಿದರು.[೧] ೩.೫ ಕಿ ಮೀ ಇರುವ ಈಗುಹೆಯು ೧೬ ವಿವಿಧ ದಾರಿಗಳಿದ ಕೂಡಿದ್ದು ಕೇವಲ ೧.೫ ಕಿ ಮೀ ಮಾತ್ರ ಪ್ರವಾಸಿಗರಿಗೆ ಪ್ರವೇಶವಿದೆ.
- ಗುಹೆಯ ಒಳಭಾಗವನ್ನು ಮೆದು ದೀಪಗಳಿಂದ ಅಲಂಕರಿಸಲಾಗಿದೆ. ಈ ಗುಹೆಯು ಕಪ್ಪು ಸುಣ್ಣದ ಕಲ್ಲುಗಳಿಂದ ಮಾಡಲ್ಪಟ್ಟಿದೆ ಮತ್ತು ಪ್ರವೇಶ ದ್ವಾರದಲ್ಲಿ ಬೆಣಚುಕಲ್ಲುಗಳನ್ನು ಕಾಣಬಹುದು.
ವಿಳಾಸ
[ಬದಲಾಯಿಸಿ]ಬೆಲ್ಲಂ ಗುಹೆಗಳು ಬೆಲ್ಲಂ ಗ್ರಾಮ ಕೊಲಿಮಿಗುಂಡ್ಲ ಕರ್ನೂಲ್ ಜಿಲ್ಲೆ ಆಂಧ್ರ ಪ್ರದೇಶ. ಭಾರತ. 15°06′08″N 78°06′42″E / 15.102346°N 78.111541°E
ಅನ್ವೇಷಣೆ
[ಬದಲಾಯಿಸಿ]ಈ ಬೆಲ್ಲಂ ಗುಹೆಗಳು ಅಲ್ಲಿನ ಸ್ಥಳೀಯರಿಗೆ ಗೊತ್ತಿದ್ದು. ಇದನ್ನು ಮೊದಲು ೧೮೮೪ರಲ್ಲಿ ರಾಬರ್ಟ್ ಬ್ರೂಸ್ ಫೂಟೆ ದಾಖಲಿಸಿದರು. ಆದಾದ ನಂತರವೂ ಸಹಾ ಸುಮಾರು ೧೦೦ ವರ್ಷಗಳ ಬಳಿಕ ಜರ್ಮನಿಯ ಹೆಚ್ ಡೇನಿಯಲ್ ಗೆಬೂರ್ ರವರ ತಂಡ ೧೯೮೨ ಮತ್ತು ೮೩ ರಲ್ಲಿ ಸಂಪೂರ್ಣ ಅದ್ಯಯನವನ್ನು ಮಾಡಿದ್ದಾರೆ. ಆಗ ಈ ತಂಡದ ಜೊತೆಗೆ ಅವರಿಗೆ ಸಹಕರಿಸಿದ ಸ್ಥಳಿಯರಾದ ಬಿ.ಚಲಪತಿರೆಡ್ಡಿ, ರಾಮಸ್ವಾಮಿ ರೆಡ್ಡಿ, ಭೋವಿ ಮಾಡುಲೆಟ್ಟಿ, ಕೆ. ಪದ್ಮನಾಭಯ್ಯ , ಕೆ. ಚಿನ್ನಯ್ಯ ಮತ್ತು ಎ.ಸಂಕರನ್.[೨]
- 4500 BC ಈ ಶತಮಾನದ ಕೆಲವು ಮಡಿಕೆಗಳು ಈ ಗುಹೆಯಲ್ಲಿ ಸಿಕ್ಕಿವೆ.
- ???? ಜೈನ್ ಮತ್ತು ಬೌದ್ಧರು ನೆಲೆಸಿದ್ದರು.
- 1884 ಗುಹೆಯನ್ನ ರಾಬರ್ಟ್ ಬ್ರೂಸ್ ಫೂಟೆ ಮೊದಲು ಗುರ್ತಿಸಿದರು .
- 1982 ಜರ್ಮನಿಯ ಹೆಚ್. ಡೇನಿಯಲ್ ಗೆಬೂರ್ ರವರ ತಂಡ ಅಧ್ಯಯನ ಮಾಡಿದ್ದರು.
- 1983 ಜರ್ಮನಿಯ ಹೆಚ್. ಡೇನಿಯಲ್ ಗೆಬೂರ್ ರವರ ತಂಡ ಅಧ್ಯಯನ ಮಾಡಿದ್ದು.
- 1988 ಸಂರಕ್ಷಿತ ಪ್ರದೇಶ ಎಂದು ಆಂಧ್ರಪ್ರದೇಶ ಸರ್ಕಾರ ಘೋಷಿಸಿತು.
- 1999 ಗುಹೆಯ ಅಭಿವೃದ್ಧಿಯನ್ನ ಆಂಧ್ರ ಪ್ರದೇಶದ ಪ್ರವಾಸೋದ್ಯಮ ಇಲಾಖೆ ಪ್ರಾರಂಭಿಸಿದ್ದು.
- FEB-2002 ಸಾರ್ವಜನಿಕರಿಗೆ ಗುಹೆ ಮುಕ್ತವಾಗಿದ್ದು.
- JUL-2002 ಸಂಗೀತ ಕೋಣೆಯನ್ನು ಕಂಡು ಹಿಡಿದದ್ದು.
ಚಾರಿತ್ರಿಕ ಮುಖ್ಯಾಂಶಗಳು
[ಬದಲಾಯಿಸಿ]- ಬೆಲ್ಲಂ ಗುಹೆಗಳು ಭೂಗರ್ಭಶಾಸ್ತ್ರದೊಂದಿಗೆ ಐತಿಹಾಸಿಕವಾಗಿಯೂ ಪ್ರಾಮುಖ್ಯತೆಯನ್ನು ಪಡೆದಿದೆ. ಈ ಗುಹೆಗಳನ್ನು ಹಲವು ಶತಮಾನಗಳ ಹಿಂದೆ ಜೈನ ಮತ್ತು ಬೌದ್ಧ ಸನ್ಯಾಸಿಗಳು ಇದ್ದುದಕ್ಕೆ ಪುರಾವೆಗಳಿವೆ.
- ಹಲವಾರು ಬೌದ್ಧಸ್ಥೂಪಗಳು ಈ ಗುಹೆಯಲ್ಲಿ ದೊರೆತಿವೆ. ಈ ಸ್ಥೂಪಗಳು ಅನಂತಪುರದ ಸಂಗ್ರಹಾಲಯದಲ್ಲಿವೆ.
- ಭಾರತೀಯ ಪುರಾತತ್ವ ಹಾಗೂ ವಾಸ್ತುಶಾಸ್ತ್ರ ಇಲಾಖೆಗೂ ಸಹ ಕೆಲವು ಮಡಿಕೆಯ ಚೂರುಗಳು ದೊರೆತಿವೆ. ಈ ವಸ್ತುಗಳು ಬೌದ್ಧನಿರಿಗಿಂತಲೂ ಮೊದಲಿನವು ಎಂದು ಪರಿಗಣಿಸಿದ್ದು, ಸುಮಾರು ಕ್ರಿ ಪೂ ೪೨೦೦ ರಲ್ಲಿನವೂ ಎಂದು ಹೇಳಲಾಗಿದೆ.
ಗುಹೆಗಳ ಅಭಿವೃದ್ಧಿ
[ಬದಲಾಯಿಸಿ]- ೧೯೮೮ರಲ್ಲಿ ಈ ಗುಹೆಯನ್ನು ಸುತ್ತಮುತ್ತಲಿನ ಗ್ರಾಮಸ್ಥರು ಕಸದ ಗುಂಡಿಯಾಗಿ ಉಪಯೋಗಿಸುತ್ತಿದ್ದರು. ಇದನ್ನು ಗಮನಿಸಿದ ಅದೇ ಗ್ರಾಮದ ನಿವೃತ್ತ ಪೊಲೀಸ್ ಅಧಿಕಾರಿಯಾದ ಎಂ. ನಾರಾಯಣ ರೆಡ್ಡಿ ಮತ್ತು ಬಿ. ಚಲಪತಿ ರೆಡ್ಡಿ ಈ ಗುಹೆಯನ್ನ ಸರ್ಕಾರದ ಗಮನಕ್ಕೆ ತಂದರು. ಇವರ ಕೆಲವು ದಶಕಗಳ ಪರಿಶ್ರಮಕ್ಕೆ ಪ್ರತಿಫಲವಾಗಿ ಸರ್ಕಾರವು ಈ ಗುಹೆಯನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಿತು.
- ಕೊನೆಗೆ ೧೯೯೯ ರಲ್ಲಿ ಆಂಧ್ರ ಪ್ರದೇಶ ಪ್ರವಾಸೋದ್ಯಮ ಇಲಾಖೆಯು ಸುಮಾರು ೭೫,೦೦,೦೦೦ ರೂಪಾಯಿ ಹಣದಿಂದ ಈ ಗುಹೆಯನ್ನ ಸುಂದರ ಪ್ರವಾಸಿ ತಾಣವಾಗಿ ಮಾರ್ಪಡಿಸಿತು[೩]
- ಈ ಗುಹೆಗಳು ಈಗ ಆಂಧ್ರಪ್ರದೇಶ ಪ್ರವಾಸೋದ್ಯಮ ಇಲಾಖೆಯೇ ನಿರ್ವಹಿಸುತ್ತಿದ್ದು, ಗುಹೆಯ ಒಳಭಾಗದಲ್ಲಿ ಸುಮಾರು ೨ ಕಿಲೋಮೀಟರ್ ನಡೆದಾಡಲು ದಾರಿಯನ್ನು ಮಾಡಿದ್ದು ಮತ್ತು ಗುಹೆಗೆ ಗಾಳಿಗುಂಡಿಗಳನ್ನು ನಿರ್ಮಿಸಿದ್ದು ಹಾಗೂ ಮೆದು ದೀಪಗಳನ್ನೂ ಅಳವಡಿಸಿದೆ.
- ಬೆಲ್ಲಂ ಗುಹೆಯ ಹತ್ತಿರದಲ್ಲೇ ಒಂದು ಬೃಹತ್ ಆಕಾರದ ಬುದ್ಧನ ವಿಗ್ರಹವಿದೆ. ಅಲ್ಲಿ ಧ್ಯಾನ ಮಂದಿರವಿದ್ದು ಭೌದ್ಧ ಬಿಕ್ಷುಗಳು ಇದನ್ನು ಉಪಯೋಗಿಸುತ್ತಾರೆ.
ಬೆಲ್ಲಂ ಗುಹೆಯ ಪ್ರಮುಖ ವಿಭಾಗಗಳು
[ಬದಲಾಯಿಸಿ]- ಪಿಲಿದ್ವಾರಂ- ಪಿಲಿದ್ವಾರಂ ಎಂದರೆ 'ಬೆಕ್ಕಿನ ಕಿಂಡಿ' ಎಂದರ್ಥ. ಗುಹೆಯ ಮೇಲ್ಭಾಗ ಸಿಂಹದ ತಲೆಯಂತಿದ್ದು ಇದನ್ನು ಪಿಲಿದ್ವಾರಂ ಎನ್ನುತ್ತಾರೆ.
- ಕೊಟಿಲಿಂಗುಲ ಕೋಣೆ - ಇಲ್ಲಿ ಶಿವಲಿಂಗದಂತಹ ಆಕಾರವಿದ್ದು ಇಲ್ಲೆ ಇದೇ ರೀತಿಯ ಹಲವಾರು ರೂಪಗಳನ್ನು ಕಾಣಬಹುದು.
- ಪಾತಾಳ ಗಂಗೆ - ಇದು ಒಂದು ಸಣ್ಣ ಅಂತರ್ಜಲ. ಇದೇ ತೊರೆ ಬೆಲ್ಲಂ ಗ್ರಾಮದಲ್ಲಿನ ಬಾವಿಗೆ ಹರಿಯುತ್ತದೆಂಬ ನಂಬಿಕೆ ಇದೆ.
- ಸಪ್ತ ಸ್ವರಾಲ ಗುಹಾ- ಏಳು ಸ್ವರಗಳ ಗುಹೆ ಎಂದರ್ಥ. ನೈಸರ್ಗಿಕವಾಗಿ ಮಾರ್ಪಟ್ಟಿರುವ ಈ ಗುಹೆಯಲ್ಲಿ ಮರದ ತುಂಡಿನಿಂದ ಹೊಡೆದರೆ ಸಂಗೀತದ ಏಳು ಸ್ವರಗಳು ಕೇಳುತ್ತವೆ. ೨೦೦೬ ರ ತನಕ ಈ ವಿಭಾಗವು ಸಾರ್ವಜನಿಕರಿಕೆ ಮುಕ್ತವಾಗಿತ್ತು. ಆದರೆ ಈಗ ಈ ಭಾಗಕ್ಕೆ ಪ್ರವೇಶವನ್ನು ನಿರ್ಭಂದಿಸಲಾಗಿದೆ.[೪]
- ಧ್ಯಾನ ಮಂದಿರ - ಪ್ರವೇಶ ದ್ವಾರದ ಬಳಿಯೇ ಇರುವ ಈ ಭಾಗವು, ನೋಡಲು ಹಾಸಿಗೆ ಹಾಗು ದಿಂಬಿನ ಆಕಾರವನ್ನು ಹೋಲುತ್ತದೆ. ಇಲ್ಲಿನ ಸ್ಥಳೀಯರ ಪ್ರಕಾರ ಇದೇ ಧ್ಯಾನ ಮಂದಿರದಲ್ಲಿ ಹಲವಾರು ಸಾಧುಗಳು ವಾಸವಾಗಿದ್ದರೆಂದು ಹೇಳುತ್ತಾರೆ. ಹಲವಾರು ಬೌದ್ಧ ಸ್ಥೂಪಗಳೂ ಇಲ್ಲಿ ದೊರೆತಿವೆ.
- ಸಾವಿರ ಹೆಡೆ - ಈ ವಿಭಾಗವು ಅವಿಸ್ಮರಣೀಯ. ಇಲ್ಲಿ ನಾಗರ ಹಾವಿನ ಎಡೆಯಾಕಾರವನ್ನು ಕಾಣಬಹುದು.
- ಆಲದ ಮರದ ಕೋ – ಈ ವಿಭಾಗದಲ್ಲಿ ದೊಡ್ಡ ಕಂಬಗಳಂತೆ ಛಾವಣಿಯಿಂದ ನೇತಾಡುವ ಹಾಗೆ ಇರುವ ಆಲದ ಮರದ ಹಾಗಿನ ರಚನೆಗಳನ್ನು ನಾವು ಕಾಣಬಹುದು.
- ಮಂಟಪಂ- ಈ ವಿಭಾಗವು ಒಂದು ದೊಡ್ಡ ಕೋಣೆಯ ಹಾಗಿದ್ದು ಸುತ್ತಲು ಕಂಬಳದ ಹಾಗಿನ ರಚನೆಯನ್ನು ಕಾಣಬಹುದು.
<ಚಿತ್ರಗಳು> Image:Belum Caves.jpg|Interiors Image:Belum1000hoods.jpg|Ceiling of Hall of Thousand Hoods Image:Belumsaptasuraguha.jpg|Man striking stalactite formation to produce musical notes. Image:Belumpassage.jpg|Passage inside the Caves Image:Belum-visitors.jpg|Visitors inside the Caves </gallery>
ಗುಹೆಯ ಪ್ರವೇಶದ್ವಾರ
[ಬದಲಾಯಿಸಿ]- ಪ್ರವಾಸಿಗರಿಗೆ ಪ್ರವೇಶ ದರ ೫೦.೦೦ ರುಪಾಯಿಗಳು. ವಿದೇಶಿಯರಿಗೆ ೩೦೦.೦೦ ರೂಗಳು. ಏ ಪಿ ಟಿ ಡಿ ಸಿ ಪ್ರವೇSಅ ದ್ವಾರದಲ್ಲಿ ಸ್ವಯಂ ಚಾಲಿತ ಗೇಟ್ ಗಳನ್ನು ಅಳವಡಿಸಿದೆ.
- ಮೂಲ ಪ್ರವೇಶದ್ವಾರ ತೀರಾ ಚಿಕ್ಕದ್ದಾಗಿದ್ದರಿಂದ ಅಭಿವೃದ್ದಿಯ ದೃಷ್ಟಿಯಿಂದ ಪ್ರವೇಶ ದ್ವಾರದ ಗುಂಡಿಯನ್ನು ಅಗಲಗೊಳಿಸಲಾಗಿದೆ.
- ಹೊರಗಿನಿಂದ ಬಾವಿಯಂತೆ ಕಾಣುವ ಈ ಗುಹೆ ಒಳಗಿನಿಂದ ಎರಡೂ ಬಾವಿಗಳನ್ನು ಕಾಣಬಹುದು. ಗುಹೆ ಪ್ರವೇಶಿಸಿದ ಮೊದಲ ಭಾಗವನ್ನು 'ಗೆಬೌರ್ ಹಾಲ್' ಎಂದು ಕರೆಯಲಾಗಿದೆ.
.[೫]
ಪ್ರಮುಖ ನಗರಗಳ ದೂರ
[ಬದಲಾಯಿಸಿ]- 320 km from ಬೆಂಗಳೂರು
- 320 km from ಹೈದ್ರಾಬಾದ್
- 420 km from ಚೆನೈ
- 106 km from ಕರ್ನೂ
- 85 km from ಅನಂತಪುರಂ
- 165 km from ಪುಟ್ಟಪ
- 68 km from ಪ್ರೊಡಟೂ
- 30 km from ತಡಪಟ್ಟೀ
- 60 km from ನಂದ್ಯಾ
- 25 km from ಬಂಗಾನಪಲ್ಲಿ
ಇವನ್ನು ನೋಡಿ
[ಬದಲಾಯಿಸಿ]ಆಕರ
[ಬದಲಾಯಿಸಿ]- ↑ ೧.೦ ೧.೧ "Underground adventure in Belum caves". Deccan Herald. January 27, 2008. Archived from the original on June 2, 2008.
- ↑ [೧] The Hindu Business Line : Belum caves on the tourist map
- ↑ ೩.೦ ೩.೧ [೨] Show Caves of India: Belum Caves
- ↑ art&issueid =48 Educationworldonline.net
- ↑ "Belum caves bag prestigious award". The Times Of India. January 18, 2003.
- ↑ APTDC :: Punnami Belum Caves
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Deccan Herald - Underground adventure in Belum caves
- The Telegraph - Calcutta : Weekend Archived 2015-04-24 ವೇಬ್ಯಾಕ್ ಮೆಷಿನ್ ನಲ್ಲಿ.
- cave-biology.org Cave biology (biospeleology) in India.
- Belum Caves collection Flickr
- Pages with script errors
- Pages using the JsonConfig extension
- Pages using gadget WikiMiniAtlas
- Commons category link is on Wikidata
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Caves of Andhra Pradesh
- Limestone caves
- Show caves
- Kurnool district
- Buildings and structures in Andhra Pradesh
- Archaeological sites in Andhra Pradesh
- Stupas in India
- Buddhist holy sites
- Buddhist Caves
- Buddhist monasteries in India
- Indian rock-cut architecture
- Former populated places in India
- Buddhist pilgrimages
- Buddhist monasticism
- Buddhist architecture
- Indian architecture
- Architectural styles
- Caves containing pictograms in India