ವಿಷಯಕ್ಕೆ ಹೋಗು

ಬೂದು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೂದು ಬಣ್ಣವು ಕಪ್ಪು ಮತ್ತು ಬಿಳಿ ಬಣ್ಣಗಳ ನಡುವಿನ ಮಧ್ಯಂತರ ಬಣ್ಣ. ಇದು ಒಂದು ತಟಸ್ಥ ಅಥವಾ ವರ್ಣರಹಿತ ಬಣ್ಣ, ಅಕ್ಷರಶಃ ಇದರ ಅರ್ಥ ಇದು "ಬಣ್ಣವಿಲ್ಲದ" ಬಣ್ಣವಾಗಿದೆ. ಇದು ಮೋಡದಿಂದ ಆವೃತವಾದ ಆಕಾಶ, ಬೂದಿ ಮತ್ತು ಸೀಸದ ಬಣ್ಣವಾಗಿದೆ. ಯೂರೋಪ್ ಮತ್ತು ಅಮೇರಿಕದಲ್ಲಿ, ಬೂದು ಬಣ್ಣವು ಅತ್ಯಂತ ಸಾಮಾನ್ಯವಾಗಿ ತಟಸ್ಥತೆ, ಅನುವರ್ತನೆ, ಬೇಸರ, ಅನಿಶ್ಚಿತತೆ, ವೃದ್ಧಾಪ್ಯ, ಉದಾಸೀನತೆ ಮತ್ತು ನಮ್ರತೆಯೊಂದಿಗೆ ಸಂಬಂಧಿಸಲಾದ ಬಣ್ಣವೆಂದು ಸಮೀಕ್ಷೆಗಳು ತೋರಿಸುತ್ತವೆ. ಕೇವಲ ಶೇಕಡ ಒಂದರಷ್ಟು ಪ್ರತಿಕ್ರಿಯೆಗಾರರು ಇದನ್ನು ತಮ್ಮ ನೆಚ್ಚಿನ ಬಣ್ಣವೆಂದು ಆಯ್ಕೆ ಮಾಡಿದರು.[]

ಮೋಡಗಳ ಶ್ವೇತತ್ವ ಅಥವಾ ಗಾಢತೆಯು ಅವುಗಳ ಆಳದ ಫಲನವಾಗಿದೆ. ಚಿಕ್ಕ, ತುಪ್ಪಳಂತಿರುವ ಬಿಳಿ ಮೋಡಗಳು ಬೇಸಿಗೆಯಲ್ಲಿ ಬಿಳಿ ಕಾಣುತ್ತವೆ ಏಕೆಂದರೆ ಅವುಗಳು ಹೊಂದಿರುವ ಅತಿ ಚಿಕ್ಕ ನೀರಿನ ಹನಿಗಳಿಂದ ಸೂರ್ಯನ ಬೆಳಕು ಚೆದುರಲ್ಪಡುತ್ತಿರುತ್ತದೆ, ಮತ್ತು ಆ ಬಿಳಿ ಬೆಳಕು ನೋಡುಗನ ಕಣ್ಣಿಗೆ ಬರುತ್ತದೆ. ಆದರೆ, ಮೋಡಗಳು ಹೆಚ್ಚು ದೊಡ್ಡ ಮತ್ತು ಹೆಚ್ಚು ದಪ್ಪವಾದಂತೆ, ಬಿಳಿ ಬೆಳಕು ಮೋಡದ ಮೂಲಕ ಭೇದಿಸಲಾರದು, ಮತ್ತು ಹಾಗಾಗಿ ಮೇಲಿನಿಂದ ಪ್ರತಿಫಲಿತವಾಗುತ್ತದೆ. ಚಂಡಮಾರುತದ ಅವಧಿಯಲ್ಲಿ ಮೋಡಗಳು ಅತ್ಯಂತ ಗಾಢ ಬೂದು ಬಣ್ಣದ್ದಾಗಿ ಕಾಣುತ್ತವೆ, ಆಗ ಅವು ೨೦,೦೦೦ ದಿಂದ ೩೦,೦೦೦ ಅಡಿಯಷ್ಟು ಎತ್ತರವಿರಬಹುದು.

ಒಬ್ಬ ವ್ಯಕ್ತಿಯ ಕೂದಲಿನ ಬಣ್ಣವು ಮೆಲನಿನ್ ವರ್ಣದ್ರವ್ಯದಿಂದ ಸೃಷ್ಟಿಯಾಗುತ್ತದೆ. ಮೆಲನಿನ್ ಸ್ವತಃ ಮೆಲನೋಸೈಟ್ ಎಂಬ ಒಂದು ವಿಶೇಷ ಜೀವಕೋಶದ ಉತ್ಪನ್ನವಾಗಿದೆ. ಇದು ಪ್ರತಿ ಕೂದಲು ಕೋಶಕದಲ್ಲಿ ಕಂಡುಬರುತ್ತದೆ. ಇದರಿಂದಲೇ ಕೂದಲುಗಳು ಬೆಳೆಯುತ್ತವೆ. ಕೂದಲು ಬೆಳೆದಂತೆ, ಮೆಲನೋಸೈಟ್ ಕೂದಲು ಕೋಶಗಳೊಳಗೆ ಮೆಲನಿನ್ ಅನ್ನು ಚುಚ್ಚುತ್ತದೆ. ಕೂದಲು ಕೋಶಗಳು ಕೆರಟಿನ್ ಪ್ರೋಟೀನ್ ಅನ್ನು ಹೊಂದಿರುತ್ತದೆ ಮತ್ತು ನಮ್ಮ ಕೂದಲು, ಚರ್ಮ ಮತ್ತು ಉಗುರುಗಳನ್ನು ರಚಿಸುತ್ತದೆ. ಮೆಲನೋಸೈಟ್‍ಗಳು ಕೂದಲು ಕೋಶಕಗಳೊಳಗೆ ಮೆಲನಿನ್ ಅನ್ನು ಚುಚ್ಚುವದನ್ನು ಮುಂದುವರಿಸಿದ ತನಕ, ಕೂದಲು ತನ್ನ ಮೂಲ ಬಣ್ಣವನ್ನು ಉಳಿಸಿಕೊಳ್ಳುತ್ತದೆ. ಆದರೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುವ ಒಂದು ನಿರ್ದಿಷ್ಟ ವಯಸ್ಸಿನಲ್ಲಿ, ಒಳಚುಚ್ಚಲ್ಪಡುವ ಮೆಲನಿನ್‍ನ ಪ್ರಮಾಣವು ಕಡಿಮೆಯಾಗುತ್ತದೆ ಮತ್ತು ಅಂತಿಮವಾಗಿ ನಿಂತುಹೋಗುತ್ತದೆ. ವರ್ಣದ್ರವ್ಯವಿರದ ಕೂದಲು ಬೂದು ಬಣ್ಣ ಮತ್ತು ಅಂತಿಮವಾಗಿ ಬಿಳಿ ಬಣ್ಣಕ್ಕೆ ತಿರುಗುತ್ತದೆ.

ಶತಮಾನಗಳಿಂದ, ಕಲಾವಿದರು ಸಾಂಪ್ರದಾಯಿಕವಾಗಿ ಕಪ್ಪು ಮತ್ತು ಬಿಳಿ ಬಣ್ಣಗಳನ್ನು ವಿವಿಧ ಅನುಪಾತಗಳಲ್ಲಿ ಮಿಶ್ರಣಮಾಡಿ ಬೂದು ಬಣ್ಣವನ್ನು ಸೃಷ್ಟಿಸಿದ್ದಾರೆ. ಹೆಚ್ಚು ಬೆಚ್ಚಗಿನ ಬೂದು ಬಣ್ಣವನ್ನು ರೂಪಿಸಲು ಅವರು ಸ್ವಲ್ಪ ಕೆಂಪು ಬಣ್ಣವನ್ನು ಸೇರಿಸಿದರು, ಅಥವಾ ಹೆಚ್ಚು ಶಾಂತವಾದ ಬೂದು ಬಣ್ಣವನ್ನು ರೂಪಿಸಲು ಸ್ವಲ್ಪ ನೀಲಿ ಬಣ್ಣವನ್ನು ಸೇರಿಸಿದರು. ಕಲಾವಿದರು ಎರಡು ಪೂರಕ ಬಣ್ಣಗಳನ್ನು ಮಿಶ್ರಣಮಾಡಿಯೂ ಬೂದು ಬಣ್ಣವನ್ನು ಸೃಷ್ಟಿಸಬಲ್ಲವರಾಗಿದ್ದರು, ಉದಾಹರಣೆಗೆ ಕಿತ್ತಳೆ ಮತ್ತು ನೀಲಿ.

ಉಲ್ಲೇಖಗಳು

[ಬದಲಾಯಿಸಿ]
  1. Heller, Eva, Psychologie de la Couleur, p. 224-242
"https://kn.wikipedia.org/w/index.php?title=ಬೂದು&oldid=873187" ಇಂದ ಪಡೆಯಲ್ಪಟ್ಟಿದೆ