ಬಹುಕೃತ ವೇಷಂ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಹುಕೃತ ವೇಷಂ - ಇದು ಇದು ೧೮- ಫೆಬ್ರುವರಿ -೨೦೨೨ ರಂದು ಬಿಡುಗಡೆಯಾದ ಕನ್ನಡ ಚಲನಚಿತ್ರವಾಗಿದ್ದು ಸೈಕಾಲಾಜಿಕಲ್ ಮತ್ತು ರಿವೇಂಜ್ ಥ್ರಿಲ್ಲರ್ ಆಗಿದೆ , ಮುಖ್ಯ ಪಾತ್ರಗಳಲ್ಲಿ ಬಿಗ್ ಬಾಸ್ ರಿಯಾಲಿಟಿ ಷೋ ಖ್ಯಾತಿಯ ವೈಷ್ಣವಿ ಗೌಡ ಹಾಗೂ ಶಶಿಕಾಂತ್ ಇದ್ದಾರೆ. ಪ್ರಶಾಂತ್ ಕೆ ಎರಂಪಳ್ಳಿ ಈ ಚಿತ್ರದ ನಿರ್ದೇಶಕರು. ಎಚ್.ನಂದ ಹಾಗೂ ಡಿ.ಕೆ. ರವಿ ಈ ಚಿತ್ರದ ನಿರ್ಮಾಪಕರು. ಕಿರಣ ಕೃಷ್ಣಮೂರ್ತಿಯವರು ಚಿತ್ರಕ್ಕೆ ಹಿನ್ನೆಲೆ ಸಂಗೀತವನ್ನು, ವೈಶಾಖ್ ವಿ ಭಾರ್ಗವ್ ಅವರು ಚಿತ್ರದಲ್ಲಿರುವ ನಾಲ್ಕು ಹಾಡುಗಳಿಗೆ ಸಂಗೀತವನ್ನು ಸಂಯೋಜಿಸಿದ್ದಾರೆ. ಹರ್ಷಕುಮಾರ್ ಗೌಡ ಛಾಯಾಗ್ರಹಣವನ್ನು , ಜ್ಞಾನೇಶ್ ಬಿ ಮಾತಾಡ್ ಸಂಕಲನವನ್ನು ಮಾಡಿದ್ದಾರೆ. [೧]

ಕಥಾವಸ್ತು[ಬದಲಾಯಿಸಿ]

ಚಿತ್ರದ ಹೆಸರನ್ನು ಉದರನಿಮಿತ್ತಂ ಬಹುಕೃತ ವೇಶಂ ಎಂಬ ಉಕ್ತಿಯಿಂದ ತೆಗೆದುಕೊಳ್ಳಲಾಗಿದೆ.ಮನುಷ್ಯ ಹೊಟ್ಟೆಪಾಡಿಗಾಗಿ ಬೇರೆ ಬೇರೆ ವೇಷ ಹಾಕುತ್ತಾನೆ. ಇದೇ ಕಥೆಯ ಸಾರಾಂಶ.[೨]

ಈ ಚಿತ್ರವು ಡಿಲೇರಿಯಂ ಫೋಬಿಯಾ ಎಂಬ ರೋಗದ ಕುರಿತಾಗಿದ್ದು [೩] ತಮ್ಮ ತಮ್ಮ ಸಮಸ್ಯೆಗಳಿಂದ ಬಳಲುವ ನಾಯಕ ಮತ್ತು ನಾಯಕಿ ಒಬ್ಬರಿಗೊಬ್ಬರು ಹೇಗೆ ಸಹಾಯ ಮಾಡುತ್ತಾರೆ ಎಂಬುದು ಚಿತ್ರದ ಕಥೆ.

ಹಾಡುಗಳ ಪಟ್ಟಿ[ಬದಲಾಯಿಸಿ]

  1. ಮಾತುಕತೆ ನಿಂತ ಕಥೆ - ಗಾಯಕರು ವಿಜಯಪ್ರಕಾಶ್
  2. ಅರೆರೆ ಅರೆರೆ ಕನಸಿದೆ ಎದುರೆ - ಗಾಯಕರು ಕಾರ್ತಿಕ್, ಐಶ್ವರ್ಯ ರಂಗರಾಜನ್
  3. ಮಾಮಾ ಹುಷಾರು - ಗಾಯಕರು ರಾಹುಲ್ ನಂಬಿಯಾರ್, ಪ್ರಿಯಾ ಹಿಮೇಶ್
  4. ಆ ಆ ಅಲೆಯೋ - ಗಾಯಕರು ಚಿನ್ಮಯಿ

ಉಲ್ಲೇಖಗಳು[ಬದಲಾಯಿಸಿ]

  1. https://www.prajavani.net/entertainment/cinema/bahukrutha-vesham-release-on-18th-911496.html
  2. "ಆರ್ಕೈವ್ ನಕಲು". Archived from the original on 2022-02-18. Retrieved 2022-02-18.
  3. https://www.prajavani.net/entertainment/cinema/bahukrutha-vesham-release-on-18th-911496.html