ಬದುಕುಳಿಯುವ ನೈಪುಣ್ಯತೆಗಳು
This article has multiple issues. Please help improve it or discuss these issues on the talk page. (Learn how and when to remove these template messages)
No issues specified. Please specify issues, or remove this template. |
ಬದುಕುಳಿಯುವ ನೈಪುಣ್ಯತೆಗಳು ಅಪಾಯಕಾರಿ ಸನ್ನಿವೇಶಗಳಲ್ಲಿ ವ್ಯಕ್ತಿಯು ಬಳಸಬಹುದಾದ ಕಲಾಕೌಶಲಗಳಾಗಿವೆ (ಉದಾ. ಸ್ವತಃ ಅಥವಾ ಇತರರನ್ನು ರಕ್ಷಿಸಲು ಸ್ವಾಭಾವಿಕ ವಿಪತ್ತುಗಳು)(ಪೊದೆಗಳಲ್ಲಿ ಬದುಕುವ ಕಲೆ ಸಹ ನೋಡಿ). ಸಾಮಾನ್ಯವಾಗಿ ಹೇಳುವುದಾದರೆ, ಈ ಕಲಾಕೌಶಲಗಳು ಮಾನವನ ಜೀವನಕ್ಕೆ ಮೂಲಭೂತ ಅಗತ್ಯತೆಗಳನ್ನು ಒದಗಿಸುವುದಾಗಿದೆ: ನೀರು, ಆಹಾರ, ವಸತಿ, ಆವಾಸಸ್ಥಾನ, ಮತ್ತು ನೇರವಾಗಿ ಯೋಚಿಸುವ ಅಗತ್ಯತೆ, ಸಹಾಯಕ್ಕಾಗಿ ಸೂಚನೆ ನೀಡುವುದು, ಸುರಕ್ಷಿತವಾಗಿ ಸಂಚರಿಸುವುದು, ಪ್ರಾಣಿಗಳು ಮತ್ತು ಸಸ್ಯಗಳೊಂದಿಗೆ ಅಹಿತಕರ ಪ್ರಭಾವಗಳು ಮತ್ತು ಪ್ರಥಮ ಚಿಕಿತ್ಸೆಗಾಗಿ ಒದಗಿಸುವುದಾಗಿದೆ. ಬದುಕುಳಿಯುವ ನೈಪುಣ್ಯತೆಗಳು ಪ್ರಾಚೀನ ಜನರು ಸಾವಿರಾರು ವರ್ಷಗಳವರೆಗೆ ಬಳಸುತ್ತಿದ್ದ ಮೂಲಭೂತ ಯೋಚನೆಗಳು ಮತ್ತು ಸಾಮರ್ಥ್ಯಗಳಾಗಿತ್ತು, ಆದ್ದರಿಂದ ಈ ನೈಪುಣ್ಯತೆಗಳು ಭಾಗಶಃ ಇತಿಹಾಸದ ಪುನರಾವರ್ತನೆಯಾಗಿದೆ. ಈ ಹಲವು ನೈಪುಣ್ಯತೆಗಳು ದೂರದ ಪ್ರದೇಶಗಳಲ್ಲಿ ಅಧಿಕ ಸಮಯವನ್ನು ಆನಂದಿಸುವ ಅಥವಾ ಪರಿಸರದಲ್ಲಿ ಅಭಿವೃದ್ಧಿಹೊಂದುವ ಮಾರ್ಗವಾಗಿವೆ. ಕೆಲವು ಜನರು ಈ ನೈಪುಣ್ಯತೆಗಳನ್ನು ಪರಿಸರವನ್ನು ಇನ್ನಷ್ಟು ಉತ್ತಮವಾಗಿ ಅರಿತುಕೊಳ್ಳಲು ಬಳಸುತ್ತಾರೆಯೇ ಹೊರತು ಕೇವಲ ಬದುಕುಳಿಯಲು ಬಳಸುವುದಿಲ್ಲ.
ಆಶ್ರಯಸ್ಥಾನ
[ಬದಲಾಯಿಸಿ]ಕಟ್ಟಡವೊಂದನ್ನು ನಿರ್ಮಾಣ ಮಾಡುವ ಮೊದಲು ಪರಿಸ್ಥಿತಿಯನ್ನು ನೀವು ಮೊದಲು ಪರಿಗಣಿಸಬೇಕು. ನಿಮ್ಮ ಆಶ್ರಯ ಸ್ಥಾನವು ನಿಮ್ಮನ್ನು ಉಷ್ಣತೆ, ಗಾಳಿ, ಮಳೆ, ಸೂರ್ಯನ ಶಾಖ, ಮಂಜು ಮತ್ತು ನಿಮ್ಮ ಸುತ್ತಲಿನ ಇತರ ಯಾವುದೇ ವಾತಾವರಣದಿಂದ ನಿಮ್ಮನ್ನು ರಕ್ಷಿಸುವ ಸಾರ್ಮಥ್ಯವನ್ನು ಹೊಂದಿರಬೇಕು. ಆಶ್ರಯ ಸ್ಥಾನವು ಮುಖ್ಯವಾಗಿ ರಕ್ಷಣೆ ಮತ್ತು ಸುಖಕ್ಕಾಗಿ, ವಾತಾವರಣ ಮತ್ತು ಪ್ರಾಣಿ ಹಾಗೂ ಕ್ರಿಮಿಕೀಟಗಳಿಂದ ರಕ್ಷಣೆಯನ್ನು ನೀಡಲು ಆಗಿದೆ. ಮಾನವನ ಮೂಲಭೂತ ಅಗತ್ಯತೆಯಾದ ನಿದ್ರೆಯನ್ನು ಮಾಡಲು ಸಾಧ್ಯವಾಗುವಂತೆ ನೀವು ತುಲನಾತ್ಮಕವಾಗಿ ತೃಪ್ತಿದಾಯಕರಾಗಿರಬೇಕು.
ಆಶ್ರಯ ಸ್ಥಾನವು "ಸ್ವಾಭಾವಿಕ ಆಶ್ರಯ ಸ್ಥಾನ" ಗಳಾದ ಗುಹೆ ಅಥವಾ ಕೆಳಗೆ ಬಿದ್ದಿರುವ (ಸೀಳು ಬಿಟ್ಟಿರುವ ಆದರೆ ಮುರಿದಿರದ) ದಟ್ಟವಾಗಿ ರೆಂಬೆಗಳಿಂದ ಕೂಡಿದ ಮರ, ಭಗ್ನಾವಶೇಷಗಳ ಆಶ್ರಯ ಸ್ಥಾನವಾದಮಾನವ ರಚಿತ ಆಶ್ರಯ ಸ್ಥಾನ , ಮರದ ದಿಮ್ಮಿಯ ಮುಂದಿರುವ ಮತ್ತು ರೆಂಬೆಗಳಿಂದ ಆವೃತವಾದ ಕಂದಕದ ದೊಡ್ಡಿ, ಅಥವಾ ಮಂಜಿನ ಗುಹೆಯಿಂದ ಹಿಡಿದು ಮಾನವ ರಚಿತ ತಾಡಪಾಲು ಹಾಳೆಗಳು, ಡೇರೆ, ಅಥವಾ ಮನೆಯನ್ನು ಒಳಗೊಂಡಿರುತ್ತದೆ.
ಬೆಂಕಿ
[ಬದಲಾಯಿಸಿ]ಬೆಂಕಿಯನ್ನು ಹಚ್ಚುವುದು ಪ್ರಮುಖವಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಬದುಕುಳಿಯುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂಬುದಾಗಿ ಮೂಲಗಳು ಗುರುತಿಸಿವೆ. ಲೈಟರ್ ಅಥವಾ ಬೆಂಕಿಪೆಟ್ಟಿಗೆಯಿಲ್ಲದೆ ನೈಸರ್ಗಿಕ ಚಕಮಕಿ ಕಲ್ಲು ಮತ್ತು ದೂದಿಯನ್ನು ಉಕ್ಕಿನೊಂದಿಗೆ ಬೆಂಕಿಯನ್ನು ಹೊತ್ತಿಸುವುದು ಬದುಕುಳಿಯುವ ಕುರಿತಾಗಿನ ಪುಸ್ತಕಗಳು ಮತ್ತು ಬದುಕುಳಿಯುವ ವ್ಯಾಸಂಗ ಸರಣಿಗಳ ನಿಯಮಿತ ವಿಷಯವಾಗಿದೆ. ಕಾಡಿನೊಳಗೆ ಪ್ರವೇಶಿಸುವ ಮೊದಲು ಬೆಂಕಿಯನ್ನು ಹೊತ್ತಿಸುವ ನೈಪುಣ್ಯತೆಯನ್ನು ಅಭ್ಯಾಸ ಮಾಡುವ ಕುರಿತಂತೆ ಪ್ರಾಮುಖ್ಯತೆಯನ್ನು ನೀಡಲಾಗಿದೆ.
ಹಲವು ಬದುಕುಳಿಯುವ ಅಗತ್ಯತೆಗಳನ್ನು ಪೂರೈಸುವ ಸಾಧನವಾಗಿ ಬೆಂಕಿಯನ್ನು ಪ್ರಸ್ತುತಪಡಿಸಲಾಗಿದೆ. ಬೆಂಕಿಯು ನೀಡುವ ಉಷ್ಣತೆಯು ದೇಹವನ್ನು ಬೆಚ್ಚಗಿಡುತ್ತದೆ, ಒದ್ದೆಯಾದ ಬಟ್ಟೆಗಳನ್ನು ಒಣಗಿಸುತ್ತದೆ, ನೀರನ್ನು ಸೋಂಕು ನಿವಾರಕವಾಗಿ ಮಾಡುತ್ತದೆ ಮತ್ತು ಆಹಾರವನ್ನು ಬೇಯಿಸಲು ನೆರವಾಗುತ್ತದೆ. ಬೆಂಕಿಯು ನೀಡುವ ಮಾನಸಿಕ ಬಲ ಮತ್ತು ಸುರಕ್ಷತೆ ಮತ್ತು ರಕ್ಷಣೆಯ ಮನೋಭಾವವನ್ನು ಕಡೆಗಣಿಸಲಾಗುವುದಿಲ್ಲ. ಕಾಡಿನಲ್ಲಿ, ಬೆಂಕಿಯು ಕೇವಲ ಅಗತ್ಯವಾಗಿರುವ ಶಕ್ತಿಯ ಮೂಲದ ಜೊತೆಗೆ ಅದು ಕೇಂದ್ರೀಕೃತ ವಾಸಸ್ಥಾನದ ಸಂವೇದನೆಯನ್ನೂ ಒದಗಿಸಬಹುದು. ಬೆಂಕಿಯು ಕಾಡು ಪ್ರಾಣಿಗಳು ಮಾನವರಿರುವ ಕಡೆಗೆ ಮಧ್ಯಪ್ರವೇಶಿಸುವುದನ್ನು ತಡೆಗಟ್ಟಬಹುದು, ಆದರೆ ಕಾಡು ಪ್ರಾಣಿಗಳು ಬೆಂಕಿಯ ಬೆಳಕು ಮತ್ತು ಉಷ್ಣತೆಯತ್ತ ಆಕರ್ಷಿತಗೊಳ್ಳಲೂಬಹುದು. ಬೆಂಕಿಯು ಉತ್ಪನ್ನ ಮಾಡುವ ಬೆಳಕು ಮತ್ತು ಹೊಗೆಯನ್ನು ರಾತ್ರಿಯ ವೇಳೆ ಕಾರ್ಯನಿರ್ವಹಿಸಲು ಬಳಸಬಹುದು ಮತ್ತು ಅದು ರಕ್ಷಣಾ ಘಟಕಗಳ ಸಂಕೇತವಾಗಿರಬಹುದು.
ನೀರು ಮತ್ತು ಆಹಾರ
[ಬದಲಾಯಿಸಿ]ಸಮುದ್ರ ಮಟ್ಟದ ಎತ್ತರ, ಕೊಠಡಿಯ ಉಷ್ಣತೆ ಮತ್ತು ಅನುಕೂಲಕರ ತೇವಾಂಶವನ್ನು ಪರಿಗಣಿಸಿದಾಗ ಮಾನವನು ನೀರನ್ನು ಸೇವಿಸದೆಯೇ ಸರಾಸರಿಯಾಗಿ ಮೂರರಿಂದ ಐದು ದಿನಗಳ ಕಾಲ ಬದುಕುಳಿಯಬಹುದು.[೧] ತಂಪಾದ ಮತ್ತು ಬೆಚ್ಚಗಿನ ಉಷ್ಣತೆಗಳಲ್ಲಿ, ನೀರಿನ ಅಗತ್ಯತೆಯು ಪ್ರಧಾನವಾಗಿರುತ್ತದೆ. ದೈಹಿಕ ಕಾರ್ಯದೊಂದಿಗೆ ನೀರಿನ ಅಗತ್ಯತೆಯೂ ಸಹ ಅಧಿಕಗೊಳ್ಳುತ್ತದೆ.
ಸಾಮಾನ್ಯ ಪರಿಸ್ಥಿತಿಗಳಲ್ಲಿ ವ್ಯಕ್ತಿಯೊಬ್ಬನು ಪ್ರತಿ ದಿನ ಕನಿಷ್ಠ ಎರಡರಿಂದ ಗರಿಷ್ಠ ನಾಲ್ಕು ಲೀಟರ್‌ಗಳಷ್ಟು ನೀರನ್ನು ಕಳೆದುಕೊಳ್ಳುತ್ತಾನೆ ಮತ್ತು ಇದು ಉಷ್ಣ, ಒಣ ಮತ್ತು ತಂಪಾದ ವಾತಾವರಣದಲ್ಲಿ ಹೆಚ್ಚಾಗಿರುತ್ತದೆ. ದೇಹದಲ್ಲಿ ಜಲಾಂಶವು ನಷ್ಟವಾಗುವುದನ್ನು ತಪ್ಪಿಸಲು ಮತ್ತು ದೇಹವು ಸರಿಯಾಗಿ ಕಾರ್ಯನಿರ್ವಹಿಸುವಂತೆ ಕಾಪಾಡಲು ಕಾಡು ಪ್ರದೇಶಗಳಲ್ಲಿ ಪ್ರತಿದಿನ ಸಾಮಾನ್ಯವಾಗಿ ನಾಲ್ಕರಿಂದ ಆರು ಲೀಟರ್‌ಗಳಷ್ಟು ನೀರು ಅಥವಾ ಇತರ ದ್ರವ ಪದಾರ್ಥಗಳು ಅಗತ್ಯವಾಗಿರುತ್ತದೆ.[೨] ಅಮೇರಿಕ ಸೈನ್ಯ ಬದುಕುಳಿಯುವ ಕೈಪಿಡಿಯು ನಿಮಗೆ ಬಾಯಾರಿಕೆ ಎಂದೆನಿಸಿದಾಗಲೆಲ್ಲಾ ನೀರನ್ನು ಕುಡಿಯಲು ಶಿಫಾರಸು ಮಾಡುತ್ತದೆ.[೩][೪] ಇತರ ಸಮೂಹಗಳು "ನೀರಿನ ಕಾರ್ಯವಿಧಾನ"ದ ಮೂಲಕ ನೀರನ್ನು ನಿಗದಿತ ಪ್ರಮಾಣದಲ್ಲಿ ನೀಡುವುದನ್ನು ಶಿಫಾರಸು ಮಾಡುತ್ತವೆ.[೫]
ನೀರಿನ ಕೊರತೆಯು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ, ಮತ್ತು ಇದು ಅತಿನಿದ್ರೆ, ತಲೆನೋವುಗಳು, ತಲೆತಿರುಗುವಿಕೆ, ಗೊಂದಲದ ಜೊತೆಗೆ ಅಂತಿಮವಾಗಿ ಸಾವಿಗೆ ಕಾರಣವಾಗಬಹುದು. ಸಣ್ಣ ಪ್ರಮಾಣದ ನಿರ್ಜಲೀಕರಣವೂ ಸಹ ತಾಳ್ಮೆಯನ್ನು ಕಡಿಮೆ ಮಾಡುತ್ತದೆ ಮತ್ತು ಸಂಯಮವನ್ನು ಕುಗ್ಗಿಸುತ್ತದೆ, ಇದು ಸ್ಪಷ್ಟ ಯೋಚನೆಯು ಅಗತ್ಯವಾದ ಬದುಕುಳಿಯುವ ಸನ್ನಿವೇಶದಲ್ಲಿ ಅಪಾಯಕಾರಿಯಾಗುತ್ತದೆ. ಗಾಢ ಹಳದಿ ಅಥವಾ ಕಂದು ಮೂತ್ರವು ನಿರ್ಜಲೀಕರಣದ ರೋಗಲಕ್ಷಮದ ಸಂಕೇತವಾಗಿದೆ. ನಿರ್ಜಲೀಕರಣವನ್ನು ತಪ್ಪಿಸಲು, ಕುಡಿಯುವ ನೀರಿನ ಪೂರೈಕೆಯನ್ನು ಗುರುತಿಸುವುದಕ್ಕೆ ಮತ್ತು ಅದನ್ನು ಎಷ್ಟು ಸಾಧ್ಯವೋ ಅಷ್ಟು ಸುರಕ್ಷಿತವಾಗಿ ನೀಡುವುದಕ್ಕೆ ಹೆಚ್ಚಿನ ಆದ್ಯತೆಯನ್ನು ಸಾಮಾನ್ಯವಾಗಿ ನೀಡಲಾಗುತ್ತದೆ.
ಬದುಕುಳಿಯುವ ಕುರಿತಾದ ಕೃತಿಯ ಹಲವು ಮೂಲಗಳು ಜೊತೆಗೆ ಚರ್ಚಾ ವೇದಿಕೆಗಳು ಮತ್ತು ಆನ್‌ಲೈನ್ ಉಲ್ಲೇಖಗಳು ಬದುಕುಳಿಯುವ ಸನ್ನಿವೇಶದಲ್ಲಿ ನೀರನ್ನು ಪಡೆಯುವ ಮತ್ತು ಅದನ್ನು ಸೇವಿಸಲು ಸುರಕ್ಷಿತವಾಗಿ ನೀಡುವುದಕ್ಕೆ ಸಂಬಂಧಿಸಿದಂತಿನ ವಿಧಾನಗಳನ್ನು ಪಟ್ಟಿ ಮಾಡುತ್ತವೆ, ಅವುಗಳಲ್ಲಿ ಕುದಿಸುವಿಕೆ, ಶುದ್ಧೀಕರಿಸುವಿಕೆ, ರಾಸಾಯನಿಕಗಳು, ಸೌರ ವಿಕಿರಣ/ ಕಾಯಿಸುವಿಕೆಯು (SODIS), ಮತ್ತು ಸಾಂದ್ರೀಕರಣ (ನಿಯಮಿತ ಅಥವಾ ಸೌರ ಸಾಂದ್ರೀಕರಣದ ಮೂಲಕ) ಒಳಗೊಂಡಿದೆ. ಇಂತಹ ಮೂಲಗಳು ಆಗಾಗ್ಗೆ ಮಲೀನಕಾರಿಗಳು, ಸೂಕ್ಷ್ಮಾಣುಜೀವಿಗಳು ಅಥವಾ ರೋಗಕರಾಣಗಳಂತಹ ಒಳನಾಡು ನೀರಿನ ಸುರಕ್ಷತೆಗೆ ಪರಿಣಾಮ ಬೀರುವ ಅಪಾಯಗಳನ್ನೂ ಸಹ ಆಗಾಗ್ಗೆ ಒಳಗೊಂಡಿರುತ್ತದೆ.
ಕ್ಲೋರಿನ್ ಡಯಾಕ್ಸೈಡ್ ಅನ್ನು ಹೊರತುಪಡಿಸಿ ರಾಸಾಯನಿಕಗಳ ಬಳಕೆಗಿಂತ ಕುದಿಸುವಿಕೆ ಅಥವಾ ವಾಣಿಜ್ಯಿಕ ಶುದ್ಧೀಕಾರಕಗಳು ಗಣನೀಯವಾಗಿ ಸುರಕ್ಷಿತವಾಗಿವೆ ಎಂದು ಇತ್ತೀಚಿನ ಸಂಶೋಧನೆಗಳು ತಿಳಿಸುತ್ತವೆ.[೬][೭][೮]
ನೀರಿನ ಅಗತ್ಯತೆಯ ಕುರಿತಾಗಿ ಪ್ರಸ್ತುತ ಪಡಿಸಿದ ಸಂಚಿಕೆಗಳು ತಿಳಿಸುವ ಪ್ರಕಾರ ಬೆವರಿನ ಮೂಲಕ ಆಗುವ ಅನಗತ್ಯ ನೀರಿನ ಹಾನಿಯನ್ನು ಬದುಕುಳಿಯುವ ಸನ್ನಿವೇಶಗಳಲ್ಲಿ ತಪ್ಪಿಸಬಹುದಾಗಿದೆ.
ಆದ್ದರಿಂದ ಈ ತೊಂದರೆಗಳನ್ನು ತಪ್ಪಿಸಲು, ಅಡುಗೆಗೆ ಯೋಗ್ಯವಾದ ಗೆಡ್ಡ ಪದಾರ್ಥಗಳು, ಹಣ್ಣು, ಖಾದ್ಯ ಯೋಗ್ಯ ಅಣಬೆಗಳು, ಖಾದ್ಯ ಬೀಜಗಳು, ದ್ವಿದಳ ಧಾನ್ಯಗಳು, ಏಕದಳ ಧಾನ್ಯಗಳು ಅಥವಾ ಸೊಪ್ಪುಗಳು, ಖಾದ್ಯಯೋಗ್ಯ ಪಾಚಿಗಳು, ಖಾದ್ಯಯೋಗ್ಯ ಕ್ಯಾಕ್ಟಿ ಮತ್ತು ಆಲ್ಗೇಗಳನ್ನು ಹುಡುಕಬಹುದು ಮತ್ತು ಅಗತ್ಯವಾದರೆ ತಯಾರಿಸಬಹುದು (ಹೆಚ್ಚಾಗಿ ಕುದಿಸುವ ಮೂಲಕ). ಸೊಪ್ಪುಗಳನ್ನು ಹೊರತುಪಡಿಸಿ, ಈ ಆಹಾರ ಪದಾರ್ಥಗಳು ಹೆಚ್ಚಿನ ಪ್ರಮಾಣದ ಕ್ಯಾಲೋರಿಗಳನ್ನು ಒಳಗೊಂಡಿದ್ದು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಸಸ್ಯಗಳು ಅರಣ್ಯ ಅಥವಾ ಮರುಭೂಮಿಯಲ್ಲಿ ಸುಲಭವಾಗಿ ಲಭ್ಯವಿರುವ ಆಹಾರ ಮೂಲಗಳಾಗಿವೆ, ಏಕೆಂದರೆ ಅವುಗಳು ನಿಶ್ಚಲವಾಗಿದ್ದು, ಆದ್ದರಿಂದ ಹೆಚ್ಚಿನ ಶ್ರಮವಿಲ್ಲದೇ ಅವುಗಳನ್ನು ಪಡೆದು ಸೇವಿಸಬಹುದಾಗಿದೆ.[೯]
ಹಾಗೆಯೇ, ಹಲವು ವ್ಯಾಖ್ಯಾನಕಾರರು ಪ್ರಾಣಿಗಳನ್ನು ಬಲೆಗೆ ಬೀಳಿಸುವುದು, ಬೇಟೆಯಾಡುವುದು, ಮೀನುಗಾರಿಕೆಯ ಮೂಲಕ ಕಾಡಿನಲ್ಲಿ ಪ್ರಾಣಿ ಆಹಾರವನ್ನು ಸಂಗ್ರಹಿಸುವ ಜ್ಞಾನ, ನೈಪುಣ್ಯತೆಗಳು ಮತ್ತು ಸಾಧನಗಳ (ಬಿಲ್ಲು, ಉರುಲು ಮತ್ತು ಬಲೆಗಳಂತಹವುಗಳು) ಬಗ್ಗೆ ಚರ್ಚಿಸುತ್ತಾರೆ.
ಕೆಲವು ಬದುಕುಳಿಯುವ ಕುರಿತಾದ ಪುಸ್ತಕಗಳು "ಜಾಗತಿಕ ಖಾದ್ಯತೆ ಪರೀಕ್ಷೆ" ಗೆ ಪ್ರೋತ್ಸಾಹ ನೀಡುತ್ತವೆ.[೧೦] ಹೇಳಲಾಗಿರುವಂತೆ, ವ್ಯಕ್ತಿಯೋರ್ವನು ಸೇವಿಸಬಹುದಾದ ಆಹಾರ ಪದಾರ್ಥಗಳನ್ನು ವಿಷಪೂರಿತ ಆಹಾರ ಪದಾರ್ಥಗಳಿಂದ ಪ್ರತ್ಯೇಕಿಸಲು ಅದನ್ನು ಸೇವಿಸುವ ಮುನ್ನ ಕೆಲ ಹೊತ್ತು ಚರ್ಮ ಮತ್ತು ಬಾಯಿಗೆ ತಾಕಿಸುವ ಮೂಲಕ ರೋಗಲಕ್ಷಣಗಳ ಪರೀಕ್ಷೆ ಮಾಡುವ ಮೂಲಕ ವ್ಯತ್ಯಾಸ ತಿಳಿಯಬಹುದು. ಆದರೆ, ರೇ ಮಿಯರ್ಸ್ ಮತ್ತು ಜಾನ್ ಕಲ್ಲಾಸ್[೧೧] ಒಳಗೊಂಡು ಹಲವು ಇತರ ತಜ್ಞರು ಈ ವಿಧಾನವನ್ನು ತಿರಸ್ಕರಿಸುತ್ತಾ, ಕೆಲವು "ಸಂಭಾವ್ಯ ಆಹಾರ ಪದಾರ್ಥಗಳ" ಸಣ್ಣ ಪ್ರಮಾಣವೂ ಕೂಡ ದೈಹಿಕ ಅಸ್ವಸ್ಥತೆ, ಅನಾರೋಗ್ಯ ಅಥವಾ ಸಾವನ್ನುಂಟುಮಾಡಬಹುದು ಎಂದು ಹೇಳುತ್ತಾರೆ. ಸಂಭಾವ್ಯ ಆಹಾರ ಪದಾರ್ಥಗಳ ಸೇವನೆಯ ಯೋಗ್ಯತೆಯನ್ನು ಅರಿಯಲು ಕೆಲವೊಮ್ಮೆ ಗೀಚು ಪರೀಕ್ಷೆ ಎನ್ನುವ ಹೆಚ್ಚುವರಿ ಹಂತವನ್ನು ಸೇರಿಸಿಕೊಳ್ಳಲಾಗುತ್ತದೆ.
ಸಾಹಸಿ ಶೋಧಗಾರರು ರಕ್ಷಿಸುವವರೆಗೆ ಬದುಕುಳಿಯುವ ಬಗ್ಗೆ ಗಮನ ಹರಿಸಿದಾಗ, ಅಮೇರಿಕದ ಬಾಯ್ ಸ್ಕೌಟ್ಸ್ ಅವರು ಪ್ರಮುಖವಾಗಿ ಭೂಮಿಯಲ್ಲಿ ಕಾಡಿನ ಆಹಾರ ಪದಾರ್ಥಗಳಿಗೆ ಹುಡುಕಾಡುವುದನ್ನು ಅನುಮೋದಿಸುವುದಿಲ್ಲ, ಏಕೆಂದರೆ ಅವರ ಪ್ರಕಾರ ಅರಣ್ಯದ ಮಧ್ಯೆ ಬದುಕುಳಿಯುವ ಸನ್ನಿವೇಶದಲ್ಲಿ ಸಿಲುಕಿರುವ ಜನರು ಅಂತಹ ಜ್ಞಾನವನ್ನು ಹೊಂದಿರುವ ಸಾಧ್ಯತೆ ಕಡಿಮೆ ಇರುತ್ತದೆ ಮತ್ತು ಅದು ಲಾಭಕ್ಕಿಂತ ಅಪಾಯಗಳನ್ನು (ಶಕ್ತಿಯ ಬಳಕೆಯನ್ನು ಒಳಗೊಂಡು) ಹೆಚ್ಚುಗೊಳಿಸುತ್ತದೆ.[೧೨] ಹಲವು ದಿನಗಳವರೆಗೆ ಹೆಚ್ಚಿನ ಜನರು ಸಾಕಷ್ಟು ದೇಹದ ಕೊಬ್ಬನ್ನು ಹೊಂದಿರುತ್ತಾರೆ ಎಂಬ ಅಂಶವನ್ನು ಪರಿಗಣಿಸಿದಾಗ, ನೀರು, ಬೆಂಕಿ ಮತ್ತು ಆಸರೆಯನ್ನು ಪಡೆಯಲು ಶಕ್ತಿಯನ್ನು ಬಳಕೆ ಮಾಡುವುದು ಲಭ್ಯವಿರುವ ಸಮಯ ಮತ್ತು ಶಕ್ತಿಯ ಅತ್ಯುತ್ತಮ ಬಳಕೆಯಾಗಿರುತ್ತದೆ.
ಪ್ರಥಮ ಚಿಕಿತ್ಸೆ
[ಬದಲಾಯಿಸಿ]ಪ್ರಥಮ ಚಿಕಿತ್ಸೆ (ನಿರ್ದಿಷ್ಟವಾಗಿ ಕಾಡಿನ ಪ್ರಥಮ ಚಿಕಿತ್ಸೆ) ಯು ವ್ಯಕ್ತಿಯನ್ನು ಸಾಯುವಂತೆ ಮಾಡುವ ಅಥವಾ ಅಶಕ್ತನನ್ನಾಗಿ ಮಾಡುವ ಬದಲು ಕೇವಲ ಗಾಯಗಳು ಅಥವಾ ಅನಾರೋಗ್ಯದೊಂದಿಗೆ ವ್ಯಕ್ತಿಯು ಬದುಕುಳಿಯಲು ಸಹಾಯ ಮಾಡಬಹುದು. ಸಾಮಾನ್ಯವಾದ ಮತ್ತು ಅಪಾಯಕಾರಿಗ ಹಾನಿಗಳಲ್ಲಿ ಇವುಗಳು ಸೇರಿರುತ್ತದೆ:
- ಸೀಳು ಗಾಯಗಳು, ಇದು ಸೋಂಕಾಗಬಹುದು
- ವಿಷಪೂರಿತಿಪ್ರಾಣಿಗಳಿಂದ ಕಡಿತ ಅಥವಾ ಚುಚ್ಚುವಿಕೆ , ಅವುಗಳಲ್ಲಿ: ಹಾವುಗಳು, ಚೇಳುಗಳು, ಜೇಡಗಳು, ಜೇನುನೊಣಗಳು, ಸ್ಟಿನ್‌ಗ್ರೇಗಳು, ಜೆಲ್ಲಿಫಿಶ್, ಕ್ಯಾಟ್‌ಫಿಶ್, ಸ್ಟಾರ್ಗೇಜರ್‌ಗಳು ಹಾಗೂ ಇತರವುಗಳು.
- ಕಡಿತವು ಕಾಯಿಲೆ/ಸೆಪ್ಟಿಸೇಮಿಯಾಗೆ ಕಾರಣವಾಗುವಂತಹವು , ಅವುಗಳಲ್ಲಿ: ಸೊಳ್ಳೆಗಳು, ಚಿಗಟಗಳು, ಉಣ್ಣಿ ಹುಳುಗಳು, ರೇಬಿಸ್ ಸೋಂಕು ತಗುಲಿದ ಪ್ರಾಣಿಗಳು, ಸ್ಯಾಂಡ್ ಫ್ಲೈಸ್, ಕೊಮೊಡೋ ಡ್ರಾಗನ್‌ಗಳು, ಮೊಸಳೆಗಳು ಹಾಗೂ ಇತರವುಗಳು.
- ಆಹಾರ ಮತ್ತು ಪ್ರಾಣಿಗಳ ಸಂಪರ್ಕ ಅಥವಾ ಕುಡಿಯಲು ಯೋಗ್ಯವಲ್ಲದ ನೀರಿನ ಸೇವೆಯ ಮೂಲಕ ಹರಡುವ ಸೋಂಕು
- ಮೂಳೆ ಮುರಿತಗಳು
- ಉಳುಕು, ನಿರ್ದಿಷ್ಟವಾಗಿ ಹಿಮ್ಮಡಿಯ ಗಂಟಿನಲ್ಲಿ
- ಸುಟ್ಟಗಾಯಗಳು
- ವಿಷಪೂರಿತ ಸಸ್ಯಗಳು ಅಥವಾ ವಿಷಪೂರಿತ ಫಂಗೈಗಳ ಸೇವನೆ ಅಥವಾ ಸಂಪರ್ಕದಿಂದ ವಿಷವಾಗುವಿಕೆ.
- ಹೈಪೋಥರ್ಮಿಯಾ (ಅತೀ ತಂಪು) ಮತ್ತು ಹೈಪರ್‌ಥರ್ಮಿಯಾ (ಅತೀ ಶಾಖ)
- ಹೃದಯಾಘಾತ
- ಹೆಮರೇಜ್
ಬದುಕುಳಿಯುವವರು ಪ್ರಥಮ ಚಿಕಿತ್ಸೆ ಕಿಟ್‌ನ ವಿಷಯಗಳನ್ನು ಪ್ರಯೋಗಿಸಬೇಕಾಗುತ್ತದೆ ಅಥವಾ ಅಗತ್ಯ ಜ್ಞಾನವಿದ್ದರೆ, ನೈಸರ್ಗಿಕ ಔಷಧೀಯ ಸಸ್ಯಗಳ ಪಡೆಯುವಿಕೆ, ಗಾಯಗೊಂಡ ಅವಯವಗಳನ್ನು ನಿಶ್ಚಲಗೊಳಿಸುವುದು ಅಥವಾ ಅಶಕ್ತಗೊಂಡ ಜೊತೆಗಾರರನ್ನು ಸಾಗಿಸಬೇಕಾಗುತ್ತದೆ.
ಸಮುದ್ರಯಾನ
[ಬದಲಾಯಿಸಿ]ಬದುಕುಳಿಯುವ ಸನ್ನಿವೇಶಗಳನ್ನು ಕೆಲವೊಮ್ಮೆ ಸುರಕ್ಷತೆಯ ಮಾರ್ಗವೊಂದನ್ನು ಹುಡುಕುವ ಮೂಲಕ ಅಥವಾ ರಕ್ಷಣೆಗಾಗಿ ಕಾಯಲು ಹೆಚ್ಚು ಸೂಕ್ತವಾದ ಸ್ಥಾನಕ್ಕೆ ಚಲಿಸುವ ಮೂಲಕ ಪರಿಹರಿಸಲಾಗುತ್ತದೆ. ಈ ಯಾವುದೇ ಸುರಕ್ಷಿತ ಅಗತ್ಯತೆಗಳನ್ನು ಪಾಲಿಸಲು ಕೆಲವೊಂದು ಸಮುದ್ರಯಾನದ ಸಾಧನಗಳು ಮತ್ತು ನೈಪುಣ್ಯತೆಗಳ ಅಗತ್ಯವಿರುತ್ತದೆ ಎಂದು ಮೂಲಗಳು ಗಮನಿಸಿವೆ. ಸಮುದ್ರಯಾನದ ಪ್ರಕಾರಗಳಲ್ಲಿ ಇವುಗಳು ಒಳಗೊಂಡಿವೆ:
- ಪ್ರಧಾನ ದಿಕ್ಕುಗಳನ್ನು ಗುರುತಿಸಲು ಮತ್ತು ಪ್ರಯಾಣದ ಹಾದಿಯನ್ನು ನಿರ್ವಹಿಸಲು ಸೂರ್ಯನ ಮತ್ತು ರಾತ್ರಿಯ ಆಕಾಶವನ್ನು ಬಳಸುವ ಖಗೋಳ ಸಮುದ್ರಯಾನ
- ನಕ್ಷೆ ಅಥವಾ ದಿಕ್ಸೂಚಿ ಯನ್ನು ಒಟ್ಟಿಗೆ ಬಳಸುವುದು, ನಿರ್ದಿಷ್ಟವಾಗಿ ಸ್ಥಳಕ್ಕೆ ಸಂಬಂಧಿಸಿದ ನಕ್ಷೆ ಅಥವಾ ಪ್ರಾಯೋಗಿಕ ನಕ್ಷೆ.
- ನಕ್ಷೆಯಲ್ಲಿ ಭೌಗೋಳಿಕ ಲಕ್ಷಣಗಳ "ವೀಕ್ಷಣೆಯ ಮೂಲಕ ಸಮುದ್ರಯಾನ " ಅಥವಾ ತಿಳಿದಂತೆ ಸಮುದ್ರಯಾನ ಮಾಡುವುದು
- ಲಭ್ಯವಿದ್ದರೆ ಜಿಪಿಎಸ್ ರಿಸೀವರ್ ಅನ್ನು ಬಳಸುವುದು
- ಸ್ಥಾನಗಣನೆ
ದಿನದ ಮಧ್ಯಭಾಗದಲ್ಲಿ ಉತ್ತರ ಗೋಳಾರ್ಧದಲ್ಲಿ, ಸೂರ್ಯನು ನೇರವಾಗಿ ಯಾವುದೇ ವೀಕ್ಷಕನ ದಕ್ಷಿಣಕ್ಕಿರುತ್ತಾನೆ. ದಿನದ ಮಧ್ಯಭಾಗದಲ್ಲಿ ದಕ್ಷಿಣ ಗೋಳಾರ್ಧದಲ್ಲಿ, ಸೂರ್ಯನು ನೇರವಾಗಿ ಯಾವುದೇ ವೀಕ್ಷಕನ ಉತ್ತರಕ್ಕಿರುತ್ತಾನೆ. ದಿನದ ಮಧ್ಯಭಾಗವನ್ನು ಕೋಲು ಅಥವಾ ಇತರ ಯಾವುದೇ ಮೇಲ್ಮುಖ ರಚನೆಯನ್ನು ಭೂಮಿಯಲ್ಲಿ ಸಾಧ್ಯವಾದಷ್ಟೂ ೯೦ ಕೋನಕ್ಕೆ ಹತ್ತಿರವಾಗಿ ಇರಿಸುವ ಮೂಲಕ ಮತ್ತು ಏಕ ಸೂರ್ಯಪ್ರಕಾಶ ಅವಧಿಯಲ್ಲಿ ನೆರಳಿನ ಉದ್ದವನ್ನು ಎಷ್ಟು ಆಗಾಗ್ಗೆ ಸಾಧ್ಯವೋ ಅಷ್ಟು ಬಾರಿ ಕೋಲು ಅಥವಾ ಕಲ್ಲುಗಳು ಅಥವಾ ಇತರ ಯಾವುದೇ ರಚನೆಯಿಂದ ಗುರುತು ಮಾಡುವ ಮೂಲಕ ಲೆಕ್ಕಾಚಾರ ಮಾಡಲಾಗುತ್ತದೆ. ಸೂರ್ಯಪ್ರಕಾಶದ ಅವಧಿಯಲ್ಲಿ ನೆರಳು ಅತೀ ಚಿಕ್ಕದಾಗಿದ್ದಾಗ, ನೀವು ಉತ್ತರ ಗೋಳಾರ್ಧದಲ್ಲಿದ್ದರೆ ಆ ದಿಕ್ಕು ದಕ್ಷಿಣವಾಗಿರುತ್ತದೆ ಅಥವಾ ನೀವು ದಕ್ಷಿಣ ಗೋಳಾರ್ಧದಲ್ಲಿದ್ದರೆ ಅದು ಉತ್ತರವಾಗಿರುತ್ತದೆ. ಸಮುದ್ರಯಾನದಲ್ಲಿ ಸಹಾಯ ಮಾಡಲು ದಿಕ್ಸೂಚಿ ಅಥವಾ ನೈಸರ್ಗಿಕ ರಚನೆಗಳ ಜೊತೆಗೆ, ಈ ವಿಧಾನವು ಬದುಕುಳಿಯುವವರಿಗೆ ಸಾಮಾನ್ಯವಾಗಿ ದಿಕ್ಕಿನ ಸರಿಯಾದ ಮಾರ್ಗದರ್ಶನವನ್ನು ನೀಡುತ್ತದೆ. ಒಂದು ವೇಳೆ ಬದುಕುಳಿಯುವವರು ಸ್ಥಳೀಯ ಪರಿಸರದ ಪೂರ್ವ ಅಸ್ತಿತ್ವದ ಸಾಮಾನ್ಯ ಅನಿಸಿಕೆಯನ್ನು ಹೊಂದಿರದಿದ್ದರೆ ಓರಿಯಂಟರಿಂಗ್ನ ಈ ವಿಧಾನವು ಸಹಾಯಕಾರಿಯಾಗುವುದಿಲ್ಲ (ನಿಮಗೆ ಯಾವುದು ದಕ್ಷಿಣವಾಗಬೇಕೆಂಬುದನ್ನು ನೀವು ತಿಳಿದಿರದಿದ್ದರೆ ಯಾವ ಮಾರ್ಗವು ದಕ್ಷಿಣವೆಂದು ತಿಳಿಯುವುದು ನಿಮಗೆ ಸಹಾಯ ಮಾಡಲಾರದು).
ತರಬೇತಿ
[ಬದಲಾಯಿಸಿ]ಬದುಕುಳಿಯುವ ತರಬೇತಿಯು ಹಲವು ಘಟಕಗಳನ್ನು, ಮಾನಸಿಕ ಸಾಮರ್ಥ್ಯವನ್ನು ಒಳಗೊಂಡಿರುತ್ತದೆ ಮತ್ತು ಇಲ್ಲಿ ದೈಹಿಕ ಸಾಮರ್ಥ್ಯವು ಎರಡನೆಯದಾಗಿರುತ್ತದೆ. ಮಾನಸಿಕ ಸಾಮರ್ಥ್ಯವು ಈ ಲೇಖನದಲ್ಲಿ ಪಟ್ಟಿ ಮಾಡಿದ ನೈಪುಣ್ಯತೆಗಳ ಜೊತೆಗೆ ಸಮಸ್ಯೆಗಳ ಇರುವಿಕೆಯನ್ನು ಒಪ್ಪಿಕೊಳ್ಳುವ ಸಾಮರ್ಥ್ಯ, ಹೆದರಿಕೆಯಿಂದ ಹೊರಬರುವಿಕೆ ಮತ್ತು ಸ್ಪಷ್ಟವಾಗಿ ಯೋಚಿಸುವುದನ್ನು ಸಹ ಒಳಗೊಂಡಿರುತ್ತದೆ. ದೈಹಿಕ ಸಾಮರ್ಥ್ಯಗಳಲ್ಲಿ ಇತರ ಅರ್ಹತೆಗಳ ಜೊತೆಗೆ ಹಳ್ಳತಿಟ್ಟಾದ ಪ್ರದೇಶದಲ್ಲಿ ದೂರದವರೆಗೆ ಭಾರವನ್ನು ಹೊತ್ತೊಯ್ಯುವುದನ್ನು ಒಳಗೊಂಡಿರುತ್ತದೆ. ಕಾಡಿನಲ್ಲಿ ಪರಿಣಾಮಕಾರಿಯಾಗಿ ಪ್ರಯೋಗಿಸಿದಾಗ ಮಾತ್ರ ಬದುಕುಳಿಯುವ ನೈಪುಣ್ಯತೆಗಳ ಸೈದ್ಧಾಂತಿಕ ಜ್ಞಾನವು ಸಹಾಯಕ್ಕೆ ಬರುತ್ತದೆ. ಬಹುಪಾಲು ಎಲ್ಲಾ ಬದುಕುಳಿಯುವ ನೈಪುಣ್ಯತೆಗಳು ಪರಿಸರ ನಿರ್ದಿಷ್ಟವಾಗಿರುತ್ತದೆ ಮತ್ತು ಇದಕ್ಕೆ ನಿರ್ದಿಷ್ಟ ಪರಿಸರದಲ್ಲಿ ತರಬೇತಿಯು ಅಗತ್ಯವಾಗಿರುತ್ತದೆ.
ಬದುಕುಳಿಯುವ ತರಬೇತಿಯನ್ನು ಮೂರು ಪ್ರಕಾರಗಳು ಅಥವಾ ಶಾಲೆಗಳಾಗಿ ವಿಭಾಗಿಸಬಹುದು; ಅವುಗಳೆಂದರೆ ಆಧುನಿಕ ಕಾಡುಮೇಡಿನ ಬದುಕುಳಿಯುವಿಕೆ, ಪೊದೆಗಳಲ್ಲಿ ಬದುಕುವ ಕಲೆ, ಮತ್ತು ಪುರಾತನ ಬದುಕುಳಿಯುವ ಕೌಶಲ್ಯಗಳು.
ಆಧುನಿಕ ಕಾಡುಮೇಡಿನ ಬದುಕುಳಿಯುವಿಕೆಯ ಅಲ್ಪಕಾಲದ (೧ ರಿಂದ ೪ ದಿನಗಳು) ಮತ್ತು ಮಧ್ಯಮ ಕಾಲಾವಧಿಯ (೪ ರಿಂದ ೪೦ ದಿನಗಳು) ಬದುಕುಳಿಯುವ ಪರಿಸ್ಥಿತಿಗಳಲ್ಲಿ ಬದುಕಲು ಅಗತ್ಯವಾದ ಕೌಶಲ್ಯಗಳನ್ನು ಕಲಿಸುತ್ತದೆ.[೧೩]
"ಪೊದೆಗಳಲ್ಲಿ ಬದುಕುವ ಕಲೆಯು " ಆಧುನಿಕ ಕಾಡುಮೇಡಿನ ಬದುಕುಳಿಯುವಿಕೆ ಮತ್ತು ಉಪಯುಕ್ತ ಪುರಾತನ ಬದುಕುಳಿಯುವ ಕೌಶಲ್ಯಗಳ ಸಂಯೋಜನೆಯಾಗಿದೆ. ಇದು ಸಾಮಾನ್ಯವಾಗಿ ಅದರ ಕೌಶಲ್ಯ ಪಡೆದುಕೊಳ್ಳುವಿಕೆಯನ್ನು ಮಧ್ಯ-ಕಾಲಾವಧಿಯ ಬದುಕುಳಿಯುವ ಕೌಶಲ್ಯಗಳು (೪ ರಿಂದ ೪೦ ದಿನಗಳು) ಮತ್ತು ದೀರ್ಘಾವಧಿಯ ಬದುಕುಳಿಯುವ ಕೌಶಲ್ಯಗಳ (೪೦ ದಿನಗಳು ಮತ್ತು ಹೆಚ್ಚಿಗೆ) ನಡುವೆ ವಿಭಜಿಸುತ್ತದೆ.[೧೪]
ಪುರಾತನ ಬದುಕುಳಿಯುವ ಕೌಶಲ್ಯಗಳು ಅಥವಾ "ಪುರಾತನ ಜೀವನ" ವು ದೀರ್ಘಾವಧಿಯಲ್ಲಿ (೪೦ ದಿನಗಳು ಮತ್ತು ಹೆಚ್ಚಿಗೆ) ಬದುಕುಳಿಯಲು ಅಗತ್ಯವಾದ ನೈಪುಣ್ಯತೆಗಳನ್ನು ಕಲಿಸುತ್ತದೆ. ಹಲವು ಪುರಾತನ ತಂತ್ರಜ್ಞಾನದ ಕೌಶಲ್ಯಗಳಿಗೆ ಹೆಚ್ಚಿನ ಅಭ್ಯಾಸಗಳ ಅಗತ್ಯವಿರುತ್ತದೆ ಮತ್ತು ಅದು ಹೆಚ್ಚು ಪರಿಸದ ನಿರ್ದಿಷ್ಟವಾಗಿರಬಹುದು.[೧೫]
ಹಲವು ಸಂಸ್ಥೆಗಳು ಕಾಡುಮೇಡಿನಲ್ಲಿ ಬದುಕುಳಿಯುವ ತರಬೇತಿಯನ್ನು ನೀಡುತ್ತದೆ. ವ್ಯಾಸಂಗ ಕ್ರಮಗಳು ಒಂದು ದಿನದಿಂದ ಹಿಡಿದು ಒಂದು ತಿಂಗಳವರೆಗೆ ನಡೆಯುವ ಪ್ರಾಯೋಗಿಕ ಕ್ಷೇತ್ರ ತರಬೇತಿಯನ್ನು ಒಳಗೊಂಡಿರುತ್ತದೆ. ಸೀಮಿತ ಆಹಾರ, ನೀರು ಮತ್ತು ಆವಾಸ ಸ್ಥಾನದ ಪರಿಸ್ಥಿತಿಗಳಲ್ಲಿ ಬದುಕುಳಿಯುವ ಕೌಶಲ್ಯಗಳನ್ನು ಕಲಿಸುವುದನ್ನು ಹೊರತುಪಡಿಸಿ, ಪೊದೆಗಳಲ್ಲಿ ಬದುಕುವ ಕಲೆ ಮತ್ತು ಪುರಾತನ ಬದುಕುಳಿಯುವಿಕೆಯನ್ನು ಕಲಿಸುವ ಹಲವು ಸಂಸ್ಥೆಗಳು ಪೂರ್ವ ಔದ್ಯೋಗಿಕರಣದ ಸಂಸ್ಕೃತಿಯ ಜೀವನಶೈಲಿಯ ಅರ್ಥಮಾಡಿಕೊಳ್ಳುವಿಕೆಯನ್ನು ಉಂಟು ಮಾಡಲು ಯತ್ನಿಸುತ್ತವೆ.
ಅಪಾಯಕಾರಿ ಸನ್ನಿವೇಶಗಳಲ್ಲಿ ಹೇಗೆ ಬದುಕುಳಿಯುವುದು ಎಂಬುದನ್ನು ಕಲಿಯುವ ಹಲವಾರು ಪುಸ್ತಕಗಳಿವೆ ಮತ್ತು ಭೂಕಂಪ ಅಥವಾ ಅಗ್ನಿ ಅನಾಹುತದ ಸಂದರ್ಭದಲ್ಲಿ ಏನನ್ನು ಮಾಡಬೇಕೆಂಬ ಬಗ್ಗೆ ಮಕ್ಕಳಿಗೆ ಶಾಲೆಗಳು ತರಬೇತಿಯನ್ನು ನೀಡುತ್ತವೆ. ಚಂಡಮಾರುತ ಮತ್ತು ಬಿರುಗಾಳಿ ಮಳೆಯಂತಹ ಪ್ರಮುಖ ವಿಪತ್ತುಗಳ ಸಂದರ್ಭದಲ್ಲಿ ತುರ್ತು ಯೋಜನೆಗಳನ್ನೂ ಸಹ ಕೆಲವು ನಗರಗಳು ಹೊಂದಿವೆ.
ವಿಭಿನ್ನ ಹವಾಗುಣಗಳಲ್ಲಿ ಬದುಕುಳಿಯುವ ವಿಭಿನ್ನ ತರಬೇತಿಗಳ ಅವಶ್ಯಕತೆಯಿರುತ್ತದೆ. ಒಂದು ಕೌಶಲ್ಯವು ಒಣ-ಸಹಾರಾ ಪ್ರದೇಶದಲ್ಲಿ ಕಾರ್ಯನಿರ್ವಹಿಸಿದರೆ, ಅದೇ ವಿಧಾನವು ಆರ್ಕಟಿಕ್ ಹವಾಗುಣದಲ್ಲಿ ಆರೋಗ್ಯಕ್ಕೆ ಅಪಾಯವನ್ನು ಉಂಟು ಮಾಡಬಹುದು.
ಮಾನಸಿಕ ಸನ್ನದ್ಧತೆ
[ಬದಲಾಯಿಸಿ]ಮನಸ್ಸು ಮತ್ತು ಅದರ ಪ್ರಕ್ರಿಯೆಗಳು ಬದುಕುಳಿಯುವಲ್ಲಿ ಪ್ರಮುಖವಾಗಿವೆ ಎಂದು ವ್ಯಾಖ್ಯಾನಕಾರರು ಟಿಪ್ಪಣಿ ಮಾಡುತ್ತಾರೆ. ಜೀವ ಮತ್ತು ಸಾವಿನ ಸನ್ನಿವೇಶದಲ್ಲಿ ಬದುಕುವ ಸ್ಥೈರ್ಯವು ಆಗಾಗ್ಗೆ ಬದುಕುವ ಮತ್ತು ಬದುಕದೇ ಇರುವುದನ್ನು ಪ್ರತ್ಯೇಕಿಸುತ್ತದೆ. ಸಾಮಾನ್ಯ ಜನರು ಯಾವುದೇ ಅಥವಾ ಕಡಿಮೆ ತರಬೇತಿಯಿಲ್ಲದೇ ಆದರೆ ಬಲಶಾಲಿಯಾದ ಆತ್ಮಸ್ಥೈರ್ಯದೊಂದಿಗೆ ಬದುಕಿರುವ ಹಲವಾರು ಸಾಹಸಪೂರ್ಣ ಕಥೆಗಳನ್ನು ಕೇಳಬಹುದು. ಲಾರೆನ್ಸ್ ಗೋಂಜಾಲೆಸ್ ಅವರು ತಮ್ಮ ಡೀಪ್ ಸರ್ವೈವಲ್: ಹೂ ಲೀವ್ಸ್, ಹೂ ಡೈಸ್ ಎಂಡ್ ವೈ ಪುಸ್ತಕದಲ್ಲಿ, ಅಮೇಜಾನ್ ಅರಣ್ಯದಲ್ಲಿ ಅಪಘಾತಕ್ಕೀಡಾಗ ವಿಮಾನ ದುರಂತದಲ್ಲಿ ತುತ್ತಾದ ಯುವ ಬಾಲಕಿ ಜೂಲಿಯನ್ ಕೋಪ್ಕೆ ಅವರ ಕಥೆಯನ್ನು ವಿವರಿಸುತ್ತಾರೆ. ಯಾವುದೇ ಸಾಂಪ್ರದಾಯಿಕ ತರಬೇತಿಯಿಲ್ಲದೇ ಮತ್ತು ಕೇವಲ ಅವಳು ಧರಿಸಿದ್ದ ಸಾಮಾನ್ಯ ವಸ್ತ್ರದೊಂದಿಗೆ ಅವಳು ಅರಣ್ಯದೊಳಗೆ ಹಲವಾರು ದಿನಗಳ ಕಾಲ ನಡೆಯುತ್ತಾಳೆ, ಅಲ್ಲಿ ಅವಳ ಚರ್ಮದ ಕೆಳಗೆ ಪರಾವಲಂಬಿ ಕೀಟಗಳು ಕೊರೆಯುತ್ತಿರುತ್ತವೆ. ಹನ್ನೊಂದು ದಿನಗಳ ಬಳಿಕ, ಕೇವಲ ಸ್ವಲ್ಪವೇ ಆಹಾರದೊಂದಿಗೆ ಅವಳು ಗುಡಿಸಲೊಂದನ್ನು ತಲುಪುತ್ತಾಳೆ ಮತ್ತು ಅದರೊಳಗಡೆ ಬಿದ್ದು ಬಿಡುತ್ತಾಳೆ. ಮರುದಿನ ಮೂರು ಬೇಟೆಗಾರರು ಅವಳನ್ನು ನೋಡುತ್ತಾರೆ ಮತ್ತು ಸ್ಥಳೀಯ ವೈದ್ಯರಲ್ಲಿಗೆ ಕರೆದೊಯ್ಯುತ್ತಾರೆ. ಆ ದುರ್ಘಟನೆಯಲ್ಲಿ ಬದುಕುಳಿದವರಲ್ಲಿ, ಇವಳು ಮಾತ್ರ ಜೀವಂತವಾಗಿ ಬದುಕುಳಿದವಳರಾಗಿರುತ್ತಾಳೆ. ಅವಳ ಸರಳ ಮತ್ತು ಜೀವಿಸಬೇಕೆನ್ನುವ ನಾಶ ಮಾಡಲಾಗದ ಆತ್ಮ ಸ್ಥೈರ್ಯವು ಬದಲಾವಣೆಯನ್ನು ಮಾಡಿತು ಎಂದು ಗೊನಾಂಜೇಲ್ಸ್ ನಂಬುತ್ತಾರೆ.[೧೬]
ಬದುಕುಳಿಯುವ ಸಂದರ್ಭವು ಎಷ್ಟು ಒತ್ತಡಕಾರಿಯೆಂದರೆ, ಒತ್ತಡಗಳ ಕುರಿತಾದ ಸ್ಪಷ್ಟವಾದ ಮಾಹಿತಿಯಿರುವ ತರಬೇತಿಯನ್ನು ಪಡೆದ ತಜ್ಞರೂ ಕೂಡ ಅಪಾಯಕಾರಿ ಸನ್ನಿವೇಶದಲ್ಲಿ ಮಾನಸಿಕವಾಗಿ ಪರಿಣಾಮಕ್ಕೊಳಗಾಗುತ್ತಾರೆ.
ಕೆಲವು ಮಿತಿಯವರೆಗೆ ಮಾನವನ ಮಿತಿಗಳನ್ನು ಪರೀಕ್ಷೆ ಮಾಡುವದರಿಂದ ಒತ್ತಡಗಳು ಉಂಟಾಗುತ್ತದೆ ಮತ್ತು ಒತ್ತಡದ ಸಂದರ್ಭದಲ್ಲಿ ಕಾರ್ಯನಿರ್ವಹಿಸುವುದನ್ನು ಕಲಿಯುವ ಲಾಭವು ಮತ್ತು ಆ ಮಿತಿಗಳನ್ನು ನಿರ್ಧರಿಸುವುದು ಒತ್ತಡದ ಇಳಿಕೆಗಿಂತ ಹೆಚ್ಚು ಪ್ರಭಾವನ್ನು ಬೀರಬಹುದು. ಹೇಗಿದ್ದರೂ, ಒತ್ತಡ ಎನ್ನುವುದು ಪ್ರತಿಕೂಲ ಸಂದರ್ಭಗಳಿಗೆ ನೈಸರ್ಗಿಕ ಪ್ರತಿಕ್ರಿಯೆಯಾಗಿದ್ದು, ಇದನ್ನು ಬದುಕುಳಿದಾಗ ಸಹಾಯ ಮಾಡಲು ಕನಿಷ್ಠ ಅಲ್ಪಾವಧಿಯ ಅಪಾಯಕಾರಿ ಸನ್ನಿವೇಶಗಳ ಸಂದರ್ಭದಲ್ಲಿ ಅಭಿವೃದ್ಧಿ ಪಡಿಸಲಾಗಿದೆ (ನೈಸರ್ಗಿಕ ವಿಪತ್ತುಗಳ ಮಧ್ಯದಲ್ಲಿ ಸಿಕ್ಕಿಹಾಕಿಕೊಂಡಾಗ, ಅಥವಾ ಕಾಡು ಪ್ರಾಣಿಯಿಂದ ಆಕ್ರಮಣ ಮಾಡಿದಾಗ) ಒಂದು ವೇಳೆ ಒತ್ತಡವು ದೀರ್ಘಾವಧಿಯವರೆಗೆ ಇದ್ದರೆ, ಅದು ಓರ್ವನ ಬದುಕುಳಿಯುವ ಸಾಮರ್ಥ್ಯವನ್ನು ತಡೆಯೊಡ್ಡುವ ಮೂಲಕ ವಿರುದ್ಧ ಪರಿಣಾಮವನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ. ನಿರ್ದಿಷ್ಟವಾಗಿ, ವ್ಯಾಖ್ಯಾನಕಾರರು ಮುಂದಿನ ಪ್ರತಿಕೂಲ ಪರಿಣಾಮಗಳನ್ನು ಗಮನಿಸುತ್ತಾರೆ: ಮರೆವು, ನಿದ್ರೆ ಮಾಡಲಾಗದಿರುವುದು, ತಪ್ಪು ಮಾಡುವ ಹೆಚ್ಚಿನ ಪ್ರಮಾಣದ ಒಲವು, ಕಡಿಮೆ ಸಾಮರ್ಥ್ಯ, ಕ್ರೋಧದ ಸ್ಫೋಟ, ಮತ್ತು ಅಸಡ್ಡೆ.[೧೭] ಈ ಯಾವುದೇ ರೋಗಲಕ್ಷಣಗಳು ಬದುಕುಳಿಯುವುದನ್ನು ಸುಲಭಗೊಳಿಸುವುದಿಲ್ಲ ಮತ್ತು ಅಂತಹ ಹೆಚ್ಚಿನ ಸಾಧ್ಯತೆಯೂ ಇಲ್ಲ.
ಬದುಕುಳಿಯುವ ಸನ್ನಿವೇಶದಲ್ಲಿ ಜನರು ಇನ್ನಷ್ಟು ಸಮರ್ಥವಾಗಿ ನಿಭಾಯಿಸುವಂತೆ ಕೆಲವು ಕಾರ್ಯವಿಧಾನಗಳು ಮತ್ತು ಮಾನಸಿಕ ಸಾಧನಗಳಿವೆ ಮತ್ತು ಅವುಗಳಲ್ಲಿ ನಿರ್ವಹಣೆ ಮಾಡಬಹುದಾದ ಕಾರ್ಯಗಳ ಮೇಲೆ ಕೇಂದ್ರೀಕರಿಸುವುದು, ಯೋಜನೆ ಬಿ ಅನ್ನು ಹೊಂದಿರುವುದು ಮತ್ತು ನಿರಾಕರಿಸುವಿಕೆಯನ್ನು ಗುರುತಿಸುವುದು ಸೇರಿದೆ.[೧೮]
ಬದುಕುಳಿಯುವ ಕೈಪಿಡಿಗಳು
[ಬದಲಾಯಿಸಿ]ಮಾನವನ ಬದುಕುಳಿಯುವಿಕೆಯು ನಿರೀಕ್ಷಿತವಾಗಿ ಅಥವಾ ಅನಿರೀಕ್ಷಿತವಾಗಿ ಅಪಾಯಕಾರಿಯಾದಾಗ ಉಲ್ಲೇಖವಾಗಿ ಬಳಸುವ ಪುಸ್ತಕವೇ ಬದುಕುಳಿಯುವ ಕೈಪಿಡಿಯಾಗಿದೆ. ಸಾಮಾನ್ಯವಾಗಿ ಅದು ಸಂಭವನೀಯ ಘಟನೆಗಳನ್ನು ಎದುರಿಸಲು ಸಿದ್ಧತೆ ಮತ್ತು ಮಾರ್ಗದರ್ಶನ ಎರಡನ್ನೂ ಒಳಗೊಂಡಿರುತ್ತದೆ.
ಬೇರೆ ಬೇರೆ ಪ್ರಕಾರದ ಬದುಕುಳಿಯುವ ಕೈಪಿಡಿಗಳಿವೆ, ಆದರೆ ಹೆಚ್ಚಿನವುಗಳು ಪ್ರಮಾಣಿತ ಸಲಹೆಯ ವಿಭಾಗವನ್ನು ಹೊಂದಿವೆ. ಇವುಗಳನ್ನು ಕೆಲವೊಮ್ಮೆ ಸಾರ್ವಜನಿಕರಿಗೆ ವಿತರಿಸಲು ಮರು ಪ್ರಕಟಿಸಲಾಗುತ್ತದೆ: ಉದಾಹರಣೆಗಾಗಿ ೦}SAS ಬದುಕುಳಿಯುವ ಕೈಪಿಡಿ, ಯುನೈಟೆಡ್ ಸ್ಟೇಟ್ಸ್ ಆರ್ಮಿ ಸರ್ವೈವಲ್ ಕೈಪಿಡಿ (FM ೩-೦೫.೭೦) ಮತ್ತು ಯುನೈಟೆಡ್ ಸ್ಟೇಟ್ಸ್ ಏರ್‌ಫೋರ್ಸ್ ಸರ್ವೈವಲ್ ಕೈಪಿಡಿ (AF ೬೪-೪) . ಕೆಲವೊಂದನ್ನು ಸಾರ್ವಜನಿಕರಿಗಾಗಿ ಮೂಲತಃ ಬರೆಯಲಾಗಿದೆ ಮತ್ತು ಅದು ಕಾಡಿನ, ಚಳಿಗಾಲದ ಮತ್ತು ಸಮುದ್ರದಲ್ಲಿ ಬದುಕುಳಿಯುವಿಕೆ, ನೈಸರ್ಗಿಕ ಮತ್ತು ಮಾನವ-ನಿರ್ಮಿತ ವಿಪತ್ತುಗಳು, ಮನೆಯ ಸನ್ನದ್ಧತೆ ಮತ್ತು ಆರ್ಥಿಕ ಬದುಕುಳಿಯುವಿಕೆಯನ್ನು ಒಂದೇ ಕೈಪಿಡಿಯಲ್ಲಿ ಒಳಗೊಂಡಿದೆ.[೧೯]
ಇತರ ಕೈಪಿಡಿಗಳನ್ನು ಹೆಚ್ಚು ನಿರ್ದಿಷ್ಟ ಬಳಕೆಗಾಗಿ, ಅಂದರೆ ಕಾಡಿನ ಅಥವಾ ಸಮುದ್ರದ ಬದುಕುಳಿಯುವಿಕೆಯಂತಹವುಗಳಿಗಾಗಿ ಬರೆಯಲಾಗಿದೆ.
ಬದುಕುಳಿಯುವಿಕೆಯ ಬಗ್ಗೆ ಇಂದಿನ ಬಹುತೇಕ ಶಿಕ್ಷಣ ತತ್ವಗಳನ್ನು ಎಸ್ಎಎಸ್ ಸರ್ವೈವಲ್ ಅಧ್ಯಾಪಕರದಾ ಲೋಫ್ಟಿ ವೈಸ್‌ಮ್ಯಾನ್ ಅವರ ಕಾರ್ಯಗಳಿಂದ ಪಡೆದುಕೊಳ್ಳಲಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ ಹೌಸ್ಟಫ್‌ವರ್ಕ್ಸ್ ಚಾರ್ಲ್ಸ್ ಡಬ್ಲ್ಯೂ. ಬ್ರಯಾಂಟ್ ಅವರಿಂದ
- ↑ ವಾಟರ್ ಬ್ಯಾಲನ್ಸ್; ಎ ಕೀ ಟು ಕೋಲ್ಡ್ ವೆದರ್ ಸರ್ವೈವಲ್ ಬ್ರೂಸ್ ಜವಾಸ್ಕೀ, ಮುಖ್ಯ ಅಧ್ಯಾಪಕ, ಬಿಡ್ಬ್ಲೂಐ
- ↑ ಆರ್ಮಿ ಸರ್ವೈವಲ್ ಮ್ಯಾನುವಲ್; ಅಧ್ಯಾಯ 13 - ಪುಟ 2
- ↑ ಯು.ಎಸ್. ಆರ್ಮಿ ಸರ್ವೈವಲ್ ಮ್ಯಾನುವಲ್ FM 21-76, FM 3-05.೭೦ ಎಂದೂ ಹೆಸರಾಗಿದ, ಮೇ 2002 ಸಂಚಿಕೆ; ಡ್ರಿಂಕಿಂಗ್ ವಾಟರ್
- ↑ "ನೀರಿನ ಕಟ್ಟುಪಾಡು" ಬದುಕುಳಿಯುವ ವಿಷಯಗಳಲ್ಲಿ
- ↑ USEPA
- ↑ ವಿಲ್ಡರ್‌ನೆಸ್ ಮೆಡಿಕಲ್ ಸೊಸೈಟಿ[permanent dead link]
- ↑ "ವಿಲ್ಕನ್‌ಸಿನ್ ಡಿಪಾರ್ಟ್‌ಮೆಂಟ್ ಆಫ್ ನ್ಯಾಚುರಲ್ ರಿಸೋರ್ಸಸ್". Archived from the original on 2012-03-08. Retrieved 2011-04-06.
- ↑ [೧]
- ↑ ಯುಎಸ್ ಆರ್ಮಿ ಸರ್ವೈವಲ್ ಮ್ಯಾನುವಲ್ FM೨೧-೭೬ ೧೯೯೮ ಡೋರ್ಸೆಟ್ ಪ್ರೆಸ್ ೯ನೇ ಮುದ್ರಣ ISBN ೧೫೬೬೧೯೦೨೨೩
- ↑ ಜಾನ್ ಕಲ್ಲಾಸ್, ಪಿಹೆಚ್‌ಡಿ., ನಿರ್ದೇಶಕ, ಇನ್‌ಸ್ಟಿಟ್ಯೂಟ್ ಫಾರ್ ದಿ ಸ್ಟಡಿ ಆಫ್ ಎಡಿಬಲ್ ವೈಲ್ಡ್ ಪ್ಲಾಂಟ್ಸ್ ಎಂಡ್ ಅದರ್ ವೆಜಿಟೇಬಲ್ಸ್. ಜೀವನ ವೃತ್ತಾಂತ Archived 2014-02-13 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ವಿಲ್ಡರ್‌ನೆಸ್ ಸರ್ವೈವಲ್ ಮೆರಿಟ್ ಬ್ಯಾಡ್ಜ್ ಭಿತ್ತಿಪತ್ರ , ಜನವರಿ, ೨೦೦೮, ೩೮ ರಲ್ಲಿ,
- ↑ ಬ್ರೂಸ್ ಜಾವಸ್ಕಿ, ಮುಖ್ಯ ಅಧ್ಯಾಪಕ, ಬಿಡಬ್ಲೂಐ, ವೆಬ್ ಲೇಖನ: ವಾಟ್ ಈಸ್ ಮಾಡರ್ನ್ ವಿಲ್ಡರ್‌ನೆಸ್ ಸರ್ವೈವಲ್? [೨]
- ↑ ಬ್ರೂಸ್ ಜಾವಸ್ಕಿ, ಮುಖ್ಯ ಅಧ್ಯಾಪಕ, ಬಿಡಬ್ಲೂಐ, ವೆಬ್ ಲೇಖನ: ವಾಟ್ ಈಸ್ ಬುಷ್ ಕ್ರಾಫ್ಟ್?
- ↑ ಬ್ರೂಸ್ ಜಾವಸ್ಕಿ, ಮುಖ್ಯ ಅಧ್ಯಾಪಕ, ಬಿಡಬ್ಲೂಐ, ವೆಬ್ ಲೇಖನ: ವಾಟ್ ಆರ್ ಪ್ರೈಮಿಟಿವ್ ಸರ್ವೈವಲ್ ಟೆಕ್ನಿಕ್ಸ್? [೩]
- ↑ ಲಾರೆನ್ಸ್ ಗೊನಾಜಲೇಸ್ ಡೀಪ್ ಸರ್ವೈವಲ್: ಹೂ ಲೀವ್ಸ್, ಹೂ ಡೈಸ್ ಎಂಡ್ ವೈ .
- ↑ ಮೇಯೋ ಕ್ಲಿನಿಕ್
- ↑ ಲೀಚ್, ಜಾನ್. "ಸರ್ವೈವಲ್ ಸೈಕಾಲಜಿ". NYU ಪ್ರೆಸ್ ೧೯೯೪ ಮತ್ತು ಸರ್ವೈವಲ್ ಸೈಕಾಲಜಿ Archived 2011-07-15 ವೇಬ್ಯಾಕ್ ಮೆಷಿನ್ ನಲ್ಲಿ..
- ↑ ದಿ ಒನ್ ಸ್ಟಾಪ್ ಸರ್ವೈವಲ್ ಪ್ರಿಪೇರ್ಡ್‌ನೆಸ್ ಗೈಡ್ www.one-stop-survival-guide.com Archived 2011-07-15 ವೇಬ್ಯಾಕ್ ಮೆಷಿನ್ ನಲ್ಲಿ. ನಲ್ಲಿ.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Survival ಓಪನ್ ಡೈರೆಕ್ಟರಿ ಪ್ರಾಜೆಕ್ಟ್
- Pages using the JsonConfig extension
- All articles with dead external links
- Articles with dead external links from ಆಗಸ್ಟ್ 2021
- Articles with invalid date parameter in template
- Articles with permanently dead external links
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles with hatnote templates targeting a nonexistent page
- Articles with multiple maintenance issues
- Pages using multiple issues with unknown parameters
- Articles with Open Directory Project links
- ಬದುಕುಳಿಯುವ ನೈಪುಣ್ಯತೆಗಳು