ವಿಷಯಕ್ಕೆ ಹೋಗು

ಪೇಜಾವರ ಸದಾಶಿವರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೇಜಾವರ ಸದಾಶಿವರಾಯ

[ಬದಲಾಯಿಸಿ]

ಕನ್ನಡ ಸಾಹಿತ್ಯದ ಪ್ರಮುಖ ಕವಿ. 'ವಿನಾಯಕ ಕೃಷ್ಣ ಗೋಕಾಕರು', 'ಪೇಜಾವರ ಸದಾಶಿವರಾವ್' ರವರ ಬಗ್ಗೆ ಹೇಳುವಾಗ ಅವರನ್ನು 'ಕನ್ನಡ ಕಾವ್ಯದ ಅಭಿಮನ್ಯು'ಎಂದು ಹೇಳುತ್ತಾರೆ. ಈ ಪ್ರತಿಮೆ ಅವರ ಬದುಕಿಗೆ ಅನ್ವರ್ಥನಾಮವಾಗಿದೆ.

ಬಾಲ್ಯಜೀವನ

[ಬದಲಾಯಿಸಿ]

ದಕ್ಷಿಣ ಕನ್ನಡದ 'ಕಟೀಲ್'ನಲ್ಲಿ ಸು. ೧೯೧೩ ರ, ಫೆಬ್ರವರಿ ತಿಂಗಳ,೧೫ ರಂದು ಸದಾಶಿವರಾಯ, ಜನಿಸಿದರು. ತಂದೆ 'ಪೇಜಾವರ ರಾಮರಾಯರು', ತಾಯಿ, 'ಸೀತಮ್ಮ'ನವರು. ತಮ್ಮಂದಿರು, ಪಿ.ವಾಸುದೇವರಾವ್ ಮತ್ತು ಪಿ.ವೆಂಕಟರಾವ್. 'ಎಕ್ಕಾರಿನ ಪ್ರಾಥಮಿಕ ಶಾಲೆ'ಯಲ್ಲಿ ಕಲಿತು, ಮುಂದೆ ಅವರು ವಿದ್ಯಾಭ್ಯಾಸಮಾಡಿದ್ದು ಮುಲ್ಕಿ, 'ಮಂಗಳೂರಿನ ಸಂತ ಎಲೋಸಿಯಸ್ ಹೈಸ್ಕೂಲ್' ಹಾಗೂ ಅದೇ ಹೆಸರಿನ ಕಾಲೇಜಿನಲ್ಲಿ. ಆಸಮಯದಲ್ಲಿ ಅವರು ಮಿತ್ರಮಂಡಳಿ’ ಎಂಬ ಮಂಗಳೂರಿನ ಪ್ರಸಿದ್ಧ ಸಾಹಿತ್ಯದ ಸಂಘಟನೆಯಲ್ಲಿ ಸಕ್ರಿಯ ಸದಸ್ಯರಾಗಿದ್ದರು. 'ಜೋಡುಮಠ ವಾಮನ ಭಟ್ಟರ ಮುತಾಲಿಕೆಯಲ್ಲಿ'. 'ಮುಳಿಯ ತಿಮ್ಮಪ್ಪಯ್ಯ', 'ಸೇಡಿಯಾಪು ಕೃಷ್ಣ ಭಟ್ಟ' 'ಕಡೆಂಗೋಡ್ಳು ಶಂಕರಭಟ್ಟ' 'ಕಯ್ಯಾರ ಕಿಮ್ ರೈ', 'ಕಣ್ಣಂದೂರು ರಾಘವಾಚಾರ್ಯ,' ಕುಡ್ಪಿವಾಸುದೇವ ಶೆಣೈ, ಎಸ್.ಪಿ.ಭಟ್ಟ, ಜಿ.ಟಿ.ಆಚಾರ್‌, ಮುಂತಾದವರು ಕಟ್ಟಿ ಬೆಳೆಸಿದ 'ಮಿತ್ರ ಮಂಡಳಿ' ಮಂಗಳೂರು, ಅದರ ಪ್ರಕಟನ ವಿಭಾಗ ’ಅಳಿಲು ಸೇವಾ ಗ್ರಂಥಮಾಲೆ', ಮುನ್ನಡೆಸಲು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಬಹುವಾಗಿ ಶ್ರಮಿಸಿದರು.

  • ಅಲರು -(ಕವಿತಾ ಸಂಕಲನ), ಸನ್. ೧೯೩೧ ರಲ್ಲಿ ೧೭ ವರ್ಷ ಪ್ರಾಯದ ಪೇಜಾವರ ಸದಾಶಿವರಾಯರವರು ಸಂಪಾದಿಸಿ ಪ್ರಕಟಿಸಿದ ಕವಿತಾ ಸಂಕಲನ. 'ಅಲರು' ಎಂಬ ಅಚ್ಚಕನ್ನಡ ಶಬ್ದಕ್ಕೆ 'ಅರಳು' ಮತ್ತು 'ಹೂವು' ಎಂಬ ಅರ್ಥಗಳಿವೆ.`ಅಲರು~ ಸಂಕಲನದ ಪ್ರಸ್ತುತ ಪ್ರತಿ `ಶ್ರೀಮಾನ್ ವಿ.ಸೀ.ರವರಿಗೆ,ಮನಃ ಪೂರ್ವಕ ಒಡಲ ಕಾಣಿಕೆ-ಪೇಜಾವರ ಸದಾಶಿವರಾಯ~ ಎಂಬ ಸದಾಶಿವರಾವ್ ಅವರ ಒಕ್ಕಣೆಯನ್ನೊಳಗೊಂಡಿದೆ. ಅಷ್ಟ ಕಿರೀಟಾಕಾರದ ೪೨ ಪುಟಗಳ ಈ ಪುಟ್ಟ ಕೃತಿಯಲ್ಲಿ ೧೬ ಕವಿಗಳ ೨೬ ಕವಿತೆಗಳಿವೆ. ಪೇಜಾವರರ ೩ ಕವಿತೆಗಳಿವೆ. ಆರಂಭದಲ್ಲಿ `ಅಲರು~ ಶಬ್ದಾರ್ಥಕ್ಕೆ ಹೊಂದುವ ಬೇಂದ್ರೆಯವರ ಒಂದು ಕವಿತೆಯ ಎಸಳನ್ನು ನೀಡಲಾಗಿದೆ. ಅದು ಹೀಗಿದೆ :

ಕಂಪಿನಲರ ತಂದೆನಿಂದು

ನಿನ್ನ ಅಡಿಯೊಳಿಡಲು ಎಂದು

ಮೂಸಿನೋಡಬೇಕು ಎಂಬ ಭಾವ ಹುಟ್ಟಿತು.

ಭಾವ ಹುಟ್ಟಿ ಮೂಸಿಬಿಟ್ಟೆ

ಹಿಗ್ಗಿ ನಿನ್ನ ಅಡಿಯೊಳಿಟ್ಟೆ

ಗಮಗಮಗಮ ಒಳಗು ಹೊರಗು ಕಂಪು ಇಡುಗಿತು! -ಅಂಬಿಕಾತನಯದತ್ತ

  • ವರುಣ (ಕವನ ಸಂಕಲನ).
  • ಅಳುವುದು (ಪ್ರಬಂಧ ಸಂಕಲನ).
  • ತರಂಗ (ಕಥಾ ಸಂಗ್ರಹ).

ಇವು ಪೇಜಾವರ ಸದಾಶಿವರಾಯರು ಹೊರತಂದ ತಮ್ಮ ಪ್ರಕಟನೆಗಳು. ಈ ಹೊತ್ತಿಗೆ ಅವರು ಕವಿಯಾಗಿ, ಕತೆಗಾರನೆಂದು ಸಾಹಿತ್ಯ ಪ್ರೇಮಿಗಳಿಗೆ ಪರಿಚಿತರಾಗಿದ್ದರು.'ತ್ರಿವೇಣಿ' ಎಂಬ ಪತ್ರಿಕೆಯಲ್ಲಿ ಅವರ ಬರಹಗಳು ಅಚ್ಚಾಗುತ್ತಿದ್ದವು. ಅದರ ಸಂಪಾದಕರು, 'ಮಂಗಳೂರಿನ ಎಂ.ಬಾಬುರಾವ್', ನಾಟ್ಯೋತ್ಸವ ಎಂಬ ಕವನದಲ್ಲಿ ಬೇರೆ ಬೇರೆ ದೇಶಗಳಿಂದ ಇಟಲಿಗೆ ಬರುವ ಸುಂದರಿಯರ ನರ್ತನವನ್ನು ಚಿತ್ರಿಸಿದ್ದಾರೆ. ಹೀಗೆ ಬರೆದ ೪೮ ಕವನಗಳು. ‘ವರುಣ’ ಎಂಬ ಸಂಕಲನದಲ್ಲಿ ಸೇರಿವೆ. ಇಟಲಿಯಲ್ಲಿದ್ದರೂ ಕನ್ನಡದ ಬಗ್ಗೆ ಆಸ್ಥೆ ವಹಿಸಿದ ಸದಾಶಿವರಾಯರಿಗೆ ವಾಮನ ಭಟ್ಟರು ತಮ್ಮ, ಕೋದಂಡನ ಉಪನ್ಯಾಸಗಳು’ ಎಂಬ ಕೃತಿಯನ್ನು ಅರ್ಪಣೆ ಮಾಡಿದ್ದಾರೆ (೧೯೩೭).

ವಿದ್ಯಾಭ್ಯಾಸ,ಸಾಹಿತ್ಯ ಕೃಷಿ

[ಬದಲಾಯಿಸಿ]

ಮಂಗಳೂರಿನಲ್ಲಿ ಇಂಟರ್ಮೀಡಿಯೆಟ್ ಮುಗಿಸಿದ ರಾಯರು, ೧೯೨೭ ರಿಂದ ೧೯೩೫ ರವರೆಗೆ 'ಕಾಶಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯ' ದಲ್ಲಿ 'ಮೆಕ್ಯಾನಿಕಲ್ ಇಂಜಿನಿಯರಿಂಗ್' ನಲ್ಲಿ 'ಬಿ.ಇ.ಪದವಿ'ಗಳಿಸಿ ತಮ್ಮ ಊರಿಗೆ ಮರಳಿದರು.(೧೯೩೫) ವಾರಣಾಸಿಯ ವಾಸ್ತವ್ಯದಲ್ಲಿದ್ದಾಗ ಆ ವಿಶ್ವವಿದ್ಯಾಲಯದ ಭೌತಶಾಸ್ತ್ರ ಪ್ರಾಧ್ಯಾಪಕ, 'ಬಳೇಬೈಲು ದಾಸಣ್ಣಾಚಾರ್ಯ'ರ ನೇತೃತ್ವದಲ್ಲಿ 'ಕನ್ನಡಸಂಘ'ವನ್ನು ಕಟ್ಟಿದರು. ಸಿತಾರ್ ವಾದ್ಯ ನುಡಿಸಲು ಕಲಿತರು. 'ಟೆನ್ನಿಸ್ ಆಟ' ಕಲಿತು ಆಡುತ್ತಿದ್ದರು. ಸೈಕಲ್ ಚಾರಣದಲ್ಲಿ ಅತೀವ ಆಸಕ್ತಿಯಿತ್ತು. ಪಕ್ಕದ ಒರಿಸ್ಸ,ಬಿಹಾರ ರಾಜ್ಯಗಳಿಗೆ ರಜಾದಿನಗಳಲ್ಲಿ 'ಸೈಕಲ್ ಚಾರಣ' ಮಾಡುತ್ತಿದ್ದರಂತೆ. ವಿಶ್ವವಿದ್ಯಾಲಯದ ವಾರ್ಷಿಕ ಸ್ನೇಹಸಮ್ಮೇಳನಗಳಲ್ಲಿ ಬಾಲ್ಯದಲ್ಲಿ ನೋಡಿ ಕಲಿತಿದ್ದ, ಯಕ್ಷಗಾನದ ಆಟಗಳನ್ನು ಜ್ಞಾಪಿಸಿಕೊಂಡು ಹಾಸ್ಯಗಾರನ ವೇಷ ಧರಿಸಿ, ಪ್ರದರ್ಶನ ಕೊಟ್ಟಿದ್ದರಂತೆ. ವಾರಣಾಸಿಯಿಂದ ಮರಳಿದ ಬಳಿಕ, ಸಂತ ಎಲೋಸಿಯಸ್ ಕಾಲೇಜಿನಲ್ಲಿ ಸೇವೆಸಲ್ಲಿಸುತ್ತಿದ ಇಟಲಿಯವರಾದ ಪ್ರಾಧ್ಯಾಪಕ ರೆವರೆಂಡ್ ಪಿಜ್ಜಿಯವರ ಪ್ರೋತ್ಸಾಹ ದೊರೆಯಿತು. ಅವರ ಮೂಲಕ ಆಗ ವಿಶ್ವವಿಖ್ಯಾತ ವಾಗಿದ್ದ 'ಫಿಯೆಟ್ ಕಂಪೆನಿ'ಯ ಪ್ರಾಯೋಜಕತ್ವ ಪಡೆದು ಆಟೋಮೊಬೈಲ್ ಎಂಜನಿಯರಿಂಗ್‌ನಲ್ಲಿ ಉನ್ನತ ಶಿಕ್ಷಣ ಪಡೆಯಲು ನಿರ್ಧರಿಸಿದರು. ಇಟಲಿಗೆ ಶಿಕ್ಷಣಾರ್ಥಿಯಾಗಿ ಹೋಗುವವರು ಮದುವೆಯಾಗಿರಲೇಬೇಕೆಂಬ ನಿಬಂಧನೆಯಿದ್ದುದರಿಂದ ಮದುವೆಯಾದ ಎರಡನೆಯ ವರ್ಷ, ೧೯೩೬ ರಲ್ಲಿ ಇಟಲಿಯ ಮಿಲಾನ್‌ ಗೆ ತೆರಳಿದರು.

ವಿದೇಶದಲ್ಲಿ

[ಬದಲಾಯಿಸಿ]

ಮಿಲಾನ್‌ನಲ್ಲಿದ್ದರೂ ಕನ್ನಡ ಪತ್ರಿಕೆಗಳಾದ ತ್ರಿವೇಣಿ, ಪ್ರಭಾತ, ಜಯಕರ್ನಾಟಕ ಮುಂತಾದ ಪತ್ರಿಕೆಗಳನ್ನು ತರಿಸಿಕೊಂಡು ಓದಿ, ಆಗಾಗ್ಗೆ ಬರಹಗಳನ್ನು ಬರೆಯತೊಡಗಿದ್ದರು.ಕನ್ನಡವನ್ನು ವಿಶ್ವದ ಮಟ್ಟದಲ್ಲಿ ಕೊಂಡೊಯ್ಯುವ ಆಶೆ ಪ್ರಬಲವಾಗಿತ್ತು. ಸನ್. ೧೯೩೮ ರಲ್ಲಿ ಜನವರಿ ತಿಂಗಳ ದಿನವೊಂದರಲ್ಲಿ ಸದಾಶಿವರಾಯರು, ಗೋಕಾಕ್ ರನ್ನು 'ಲಂಡನ್ ನ ಆಕ್ಸ್ ಫರ್ಡ್ ವಿಶ್ವ ವಿದ್ಯಾಲಯದ ಹಾಸ್ಟೆಲ್' ನಲ್ಲಿ ಭೇಟಿಯಾಗಿದ್ದರು. ಗೋಕಾಕ್ ಇದರ ಬಗ್ಗೆ ಒಂದು ಸುದೀರ್ಘ ಲೇಖನ ಬರೆದರು. ಅವರಿಬ್ಬರ ಬಗ್ಗೆ ವಾಗ್ವಾದಗಳು ಹುಟ್ಟಿಕೊಂಡವು. ತಮ್ಮ ತಮ್ಮ ಹೊಸಕವನಗಳನ್ನು ಪರಸ್ಪರ ವಿನಿಮಯಿಸಿಕೊಂಡು ವಾಗ್ವಾದ ಮಾಡಿದ ಬಗ್ಗೆ ದಾಖ್ಲಲೆಗಳಿವೆ. ಸದಾಶಿವರಾಯರು ತೀರಿಕೊಂಡಮೇಲೆ ಗೋಕಾಕರು ಬರೆದ ಕೊನೆಯ ಪತ್ರ, ಇಟಲಿಗೆ ತಲುಪಿತಂತೆ. ಅದನ್ನು ಸ್ವೀಕರಿಸಲು ಸದಾಶಿವರಾಯರು ಇರಲಿಲ್ಲ. ಇಟಲಿಯಲ್ಲಿದ್ದಾಗಲೇ ಅವರು ಬರೆದ ಕವಿತೆಗಳು ನಾಟ್ಯೋತ್ಸವ, ವರುಣ, ಕನ್ನಡದ ಖ್ಯಾತ ವಿಮರ್ಶಕ, ಕೀರ್ತಿನಾಥ ಕುರ್ತುಕೋಟಿವರು ಬರೆಯುತ್ತಾ, 'ನಾಟ್ಯೋತ್ಸ'ವದ ಮೂಲಕವೇ ಇಟಲಿಯ ನಾಟ್ಯ ಮಂದಿರದಿಂದಲೇ 'ಕನ್ನಡದ ನವ್ಯಕವಿತೆ' ರೂಪುಗೊಂಡಿತು. 'ವರುಣ ಕವಿತಾ ಸಂಕಲನ' ಅವರಿಗೆ ಖ್ಯಾತಿಯನ್ನು ತಂದುಕೊಟ್ಟಿತು. ಸನ್. ೧೯೫೨ ರಲ್ಲಿ ರಂಶ್ರೀಮುಗಳಿಯವರು ಸಾಂಗಲಿಯಿಂದ ಪ್ರಕಟಿಸಿದರು.(೧೯೩೬) ಆಸಮಯದಲ್ಲಿ ಕನ್ನಡಿಗ ವಿ.ಕೆ.ಗೋಕಾಕ್ ಇಂಗ್ಲೆಂಡ್ ನ ಖ್ಯಾತ ಆಕ್ಸ್ಫರ್ಡ್ ವಿಶ್ವವಿದ್ಯಾಲಯ್ದದಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಸಂಶೋಧನೆ ನಡೆಸುತ್ತಿದ್ದರು. ಪತ್ರಮುಖೇನ ನಿಕಟ ಸಂಪರ್ಕಗೊಂಡುಕನ್ನಡದಲ್ಲಿ ನವ್ಯತೆಯ ಅವತರಣದಲ್ಲಿ ಪ್ರಮುಖ ಪಾತ್ರ ಪತ್ರಸಂವಾದ ಆಧುನಿಕ ಸಾಹಿತ್ಯದಲ್ಲಿ 'ಹೊಸಮೀಮಾಂಸೆ'ಗಳನ್ನು ಹುಟ್ಟುಹಾಕಿತು. ಕನ್ನಡದಲ್ಲಿ ಸಣ್ಣಕತೆಗಳುನಾಟಕ, ಪ್ರಬಂಧ ಬರೆದರು. ನಾಟಕಗಳು :(ತ್ರಿವೇಣಿ ಪತ್ರಿಕೆಯಲ್ಲಿ ಪ್ರಕಟಿತ)

  • ಬೀದಿಗಿಳಿದ ನಾರಿ,
  • ಸರಪಣಿ
  • ಜೀವನ ಸಂಗೀತ ನಾಟಕಗಳು
  • ಬಿರುಸು

ಸಣ್ಣ ಕತೆಗಳು

  • ಅಂಧ ಶಿಲ್ಪಿ
  • ಶ್ರೀಗಂಧ,
  • ಸೂಜಿಗಲ್ಲು
  • ಜೀವನ ನಿರ್ಮಾಲ್ಯ,ಸಣ್ಣ ಕಥೆಗಳು
  • ಬಾಡೂರಿನ ಸೊಗಸು,
  • ಲಲಿತ ಲಹರಿಯ ಪ್ರಬಂಧ,
  • ಕ್ಷತ್ರಿಯ ರಮಣಿ (ಐತಿಹಾಸಿಕ),
  • ಚಂಡಮಾರುತ,ಮುಂತಾದ ಸ್ವತಂತ್ರ ಕತೆಗಳು.

ಪೇಜಾವರ ಸದಾಶಿವರಾವ್, ತಮ್ಮ ಕವಿತೆಗಳಲ್ಲಿ ಸಾವಿಗೆ ಅತಿ ಮಹತ್ವ ಕೊಡುತ್ತಿದ್ದರು.

  • ಸಾವು,
  • ಮಾಯಕದ ಮಸಣ,
  • ಜವರಾಯ,
  • ಬೇಡ,
  • ಮುರಿದ ಮುರಲಿ,

ನವೋದಯ ಆರಂಭದ ಈ ಕವಿತೆಗಳನ್ನು ಕುರಿತು ಮುನ್ನುಡಿಯಲ್ಲಿ ಸದಾಶಿವರಾವ್ ಹೀಗೆ ಬರೆದಿದ್ದಾರೆ: “ಜೀವನಕ್ಕೂ ಕಾವ್ಯಕ್ಕೂ ಅನ್ಯಾದೃಶ್ಯವಾದ ಸಂಬಂಧವಿದೆ. ಜೀವನದ ಭವ್ಯತೆ ದಿವ್ಯತೆಗಳನ್ನು ಜನತೆಗೆ ತೋರಿಸಿಕೊಡಲು ಕಾವ್ಯವೇ ಕೈಗನ್ನಡಿ. ಕನ್ನಡದಲ್ಲಿ ನವ್ಯ ಪರಂಪರೆಯನ್ನು 'ಗೋಪಾಲಕೃಷ್ಣ ಅಡಿಗ ಹಾಗು ವಿ.ಕೃ.ಗೋಕಾಕರಿಗೆ ಮೊದಲು ೨೬ ವರ್ಷದ ಪೇಜಾವರ್ ಸದಾಶಿವರಾವ್ ರವರು ತಮ್ಮ ನಾಟ್ಯೋತ್ಸವ ಕವಿತೆಯ ಮೂಲಕ ಆರಂಭಿಸಿದ್ದರು. ಸನ್.೧೯೫೨ ರಲ್ಲಿ ಅವರ ಪೂರ್ಣಪ್ರಮಾಣದ `ವರುಣ~ ಕವಿತಾ ಸಂಕಲನವನ್ನು ರಂ.ಶ್ರೀ.ಮುಗಳಿ ಅವರು ಪ್ರಕಟಿಸಿದರು. ಪ್ರೊ.ರಂ.ಶ್ರಿ.ಮುಗಳಿ ಹೇಳುವಂತೆ, ಪರಿಪಕ್ವ ಗೊಳ್ಳುತ್ತಿರುವ ಮೇಧಾಶಕ್ತಿ ಕವಿತಾಶಕ್ತಿ ಗಳುಳ್ಳ ಯುವ-ಕನ್ನಡಿಗನನ್ನು ಸಾವಿನ ಹದ್ದು ಕಚ್ಚಿಕೊಂಡು ಹೋಯಿತು. (ವರುಣ-೧೯೫೨ ಮುನ್ನುಡಿ-ಮುಗಳಿ)

ಸಾವು ಸ್ಥಾಯಿಯಾಗಿರುವ ಕವನಗಳು, ಸಾವಿನ ಬಗ್ಗೆ ಆತಂಕ, ಭಯ ಕಾಣಿಸುತ್ತಿರಲಿಲ್ಲ. ಸಾವನ್ನು ಮೆಟ್ಟಿನಿಲ್ಲುವ ಆತ್ಮ ವಿಶ್ವಾಸವನ್ನು ಪ್ರತಿನಿಧಿಸುವ ಮಾತುಗಳು ಅವರ ಅಸಾಮಾನ್ಯ ಮನೋಧರ್ಮವನ್ನು ಹೇಳುತ್ತವೆ. ತಮ್ಮ ಪಿ.ಎಚ್.ಡಿ ಪ್ರಬಂಧವನ್ನು ಮುಗಿಸಿ ತಮ್ಮಕಾಲೇಜಿಗೆ ಒಪ್ಪಿಸುವ ಹಂತದಲ್ಲಿದ್ದಾಗ(ಪೆರಿಟೊನೈಟಿಸ್ ಖಾಯಿಲೆ)'ಕರುಳುಬೇನೆ'ಯಿಂದ ನರಳುತ್ತಿದ್ದರು. ಯೂರೋಪಿನಲ್ಲೂ ಈ ಕಾಯಿಲೆಗೆ ಪರಿಣಾಮಕಾರಿ ಚಿಕಿತ್ಸೆ ಲಭ್ಯವಿರಲಿಲ್ಲ. ಅದರಲ್ಲೇ ನಾಟಕಗಳನ್ನು ನೋಡುತ್ತಿದ್ದರು. ಕೊನೆಗೆ ರೋಗ ಉಲ್ಬಣಿಸಿ, ಜಿನೀವಾ ನಗರದ 'ವಿಶ್ರಾಂತಿ ಧಾಮ'ದಲ್ಲಿ ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ಕೊಟ್ಟರು. ಹೆಂಡತಿ, ಮಗು ಹತ್ತಿರ ಇಲ್ಲದೆ ಇದ್ದದ್ದು ಅವರಿಗೆ ಬೇಸರತಂದಿತ್ತು. ಸನ್.೧೯೩೯ ರ,ಅಕ್ಟೋಬರ್, ೧೮ ರಂದು ಇಟಲಿಯಲ್ಲಿ ನಿಧನರಾದರು.

-ಪ್ರೊ.ಎ.ವಿ.ನಾವಡ, ಮಯೂರ, ಜೂನ್ ೧೩, ಪು.೬