ಪುಸ್ತಕ ಸಂಸ್ಕೃತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

thumb|Book Culture


ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಸರಸ್ವತಿಯನ್ನು ಪುಸ್ತಕ ವಾಣಿ ಎಂದು ಕವಿಗಳು ವರ್ಣಿಸಿದ್ದಾರೆ .' ಪುಸ್ತಕಂ ಹಸ್ತ ಭೂಷಣಂ ' ಎಂದರೆ ಪುಸ್ತಕ ವಿದ್ಯಾರ್ಥಿಗಳ ಹಸ್ತ ಭೂಷಣ ಎಂದರು ಸುಭಾಷಿತಕಾರರು. ಒಂದು ಒಳ್ಳೆಯ ಪುಸ್ತಕವೆಂದರೆ ಜನಾಂಗದಿಂದ ಜನಾಂಗಕ್ಕೆ ಸಾಗಿಸಲ್ಪಟ್ಟ ಮಹಾ ಮೇಧಾವಿಯ ಜೀವನ ಸರ್ವಸ್ವ ಎಂದ ಮಿಲ್ಟನ್ -ಇಂಗ್ಲಿಷ್ನ ಒಂದು ಸೂಕ್ತಿಯಲ್ಲಿ. ಅಂದರೆ , 'ಉಡುಗೆ ತೊಡುಗೆಗಳಿಗೆ ಅಷ್ಟಾಗಿ ಗಮನ ಕೊಡದಿದ್ದರೂ ಚಿಂತೆಯಿಲ್ಲ . ಪುಸ್ತಕಗಳನ್ನು ಕೊಳ್ಳಬೇಕು , ಓದಬೇಕು , ಜ್ಞಾನದ ದಿಗಂತವನ್ನು ವಿಸ್ಥತಿಸಿಕೊಲ್ಲಬೇಕು 'ಎಂದು ಈ ಸೂಕ್ತಿ ಹೇಳುತ್ತದೆ . ಹಿಂದೆ ಸಂಸ್ಕ್ರತಿವಂತರ ಮನೆಯಲ್ಲಿ ಚಿಕ್ಕದೊಂದು ಗ್ರಂಥಭಂದಾರವೇ ಇರುತಿತ್ತು . ಗ್ರಂಥದಾನ ಮಹಾ ಪುಣ್ಯಕರವಾದ ಕೆಲಸವೆಂದು ಭಾವಿಸಿದ್ದಾರೆ . ಕನ್ನಡನಾಡಿನ ಸ್ತ್ರೀ ರತ್ಹ್ನವಾದ ದಾನ ಚಿಂತಾಮಣಿ ಅತ್ತಿಮಬ್ಬೆ ಪೊನ್ನ ಮಹಾಕವಿಯ ಶಾಂತಿ ಪುರಾಣವನ್ನು ಒಂದು ಪ್ರತಿ ಮಾಡಿಸಿ , ಗ್ರಂಥದಾನ ಮಾಡಿ ಖ್ಯಾತಳಾದ ವಿಷಯ ಕನ್ನಡನಾಡಿನ ಹೆಮ್ಮೆಯ ಸಂಗತಿ. ಪುಸ್ತಕಗಳ ಬಗೆಗೆ ನಮ್ಮ ತಾತ್ಸಾರ , ನಮ್ಮ ರಾಷ್ಟ್ರೀಯ ದೌರ್ಬಲ್ಯ .ಶ್ರೀಮಂತರು ಹೃದಯ ಶ್ರೀಮಂತರೆಂದು ತೋರಿಸಲು ನಾಗರಿಕರು ಸಂಸ್ಕ್ರತಿಹೀನರಲ್ಲ ಎಂದು ಸಮರ್ಥಿಸಲು ವಿದ್ಯಾವಂತರು ಕೇವಲ ಅಕ್ಷರಸ್ಥರಲ್ಲ ಎಂಬುದನ್ನು ರುಜುವಾತು ಪಡಿಸಲು ಒಳ್ಳೆಯ ಪುಸ್ತಕಗಳು ತಮ್ಮ ಮನೆಯ ಸಂಪತ್ತು ಎಂಬ ಭಾವನೆ ಬೆಳೆದು ನಾಡಿನಾದ್ಯಂತ ಪುಸ್ತಕ ಸಂಸ್ಕ್ರತಿ ವ್ಯಾಪಿಸಬೇಕು.