ವಿಷಯಕ್ಕೆ ಹೋಗು

ಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಂದು ಪುಸ್ತಕದಲ್ಲಿನ ಪುಟಗಳು

ಒಂದು ಪುಸ್ತಕ, ಮ್ಯಾಗಜ಼ೀನ್, ಸುದ್ದಿಪತ್ರಿಕೆ, ಅಥವಾ ಹಾಳೆಗಳ ಇತರ ಸಂಗ್ರಹದಲ್ಲಿ, ಪುಟವು ಕಾಗದ, ಚರ್ಮದ ಕಾಗದ ಅಥವಾ ಇತರ ವಸ್ತುವಿನ (ಅಥವಾ ವಿದ್ಯುನ್ಮಾನ ಮಾಧ್ಯಮ) ಹಾಳೆಯ ಒಂದು ಬದಿಯಾಗಿರುತ್ತದೆ. ದಸ್ತಾವೇಜನ್ನು ಸೃಷ್ಟಿಸಲು ಇದರ ಮೇಲೆ ಪಠ್ಯ ಅಥವಾ ಚಿತ್ರಗಳನ್ನು ಮುದ್ರಿಸಬಹುದು, ಬರೆಯಬಹುದು ಅಥವಾ ಬಿಡಿಸಬಹುದು. ಇದನ್ನು ಮಾಹಿತಿಯ ಸಾಮಾನ್ಯ ಪ್ರಮಾಣವನ್ನು ("ಆ ವಿಷಯವು ಹನ್ನೆರಡು ಪುಟಗಳನ್ನು ಒಳಗೊಳ್ಳುತ್ತದೆ") ಅಥವಾ ಹೆಚ್ಚು ನಿರ್ದಿಷ್ಟ ಪ್ರಮಾಣವನ್ನು (ಒಂದು ಸಾಮಾನ್ಯ ಪುಟದಲ್ಲಿ ಹನ್ನೆರಡು ಬಿಂದು ಫ಼ಾಂಟ್ ಪ್ರಕಾರದಲ್ಲಿ ೫೩೫ ಶಬ್ದಗಳಿವೆ) ತಿಳಿಸುವ ಅಳತೆಯಾಗಿ ಬಳಸಬಹುದು.[]

ಮುದ್ರಣಕಲೆಯಲ್ಲಿ ಪುಟ

[ಬದಲಾಯಿಸಿ]

ಇಂಗ್ಲಿಷ್ ಮತ್ತು ಕನ್ನಡ ಭಾಷೆಯ ಪುಸ್ತಕಗಳನ್ನು ಎಡದಿಂದ ಬಲಕ್ಕೆ ಓದಲಾಗುತ್ತದೆ, ಮತ್ತು ಓದುಗನು ಪುಟಗಳನ್ನು ಬಲದಿಂದ ಎಡಕ್ಕೆ ಮಗುಚುತ್ತಾನೆ. ಅರಬ್ಬೀ, ಇವ್ರಿತ್, ಮತ್ತು ಪಾರ್ಸಿಯಂತಹ ಬಲದಿಂದ ಎಡಕ್ಕೆ ಓದಲಾದ ಭಾಷೆಗಳಲ್ಲಿ, ಸಾಮಾನ್ಯವಾಗಿ ಮೊದಲ ಪುಟವು ಎಡಕ್ಕಿರುವ ಮೇಲ್ಪಾರ್ಶ್ವವಾಗಿರುತ್ತದೆ. ಹಾಗಾಗಿ, ಓದುಗನು ಪುಟಗಳನ್ನು ಎಡದಿಂದ ಬಲಕ್ಕೆ ಮಗುಚಬೇಕಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
"https://kn.wikipedia.org/w/index.php?title=ಪುಟ&oldid=915262" ಇಂದ ಪಡೆಯಲ್ಪಟ್ಟಿದೆ