ವಿಷಯಕ್ಕೆ ಹೋಗು

ಪಿಂಗಾಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಿಂಗಾಣಿಯ ಚೀನೀ ಚಂದ್ರಬುಡ್ಡಿ

ಪಿಂಗಾಣಿಯು ಸಾಮಾನ್ಯವಾಗಿ ಚೀನೀ ಮಣ್ಣು ಸೇರಿದಂತೆ ವಿವಿಧ ವಸ್ತುಗಳನ್ನು ಆವಿಗೆಯಲ್ಲಿ ೧೨೦೦ ಮತ್ತು ೧೪೦೦ ಡಿಗ್ರಿ ನಡುವಿನ ಉಷ್ಣಾಂಶದಲ್ಲಿ ಸುಟ್ಟು ತಯಾರಿಸಲಾದ ಒಂದು ಸೆರಾಮಿಕ್ ವಸ್ತುವಾಗಿದೆ. ಇತರ ಬಗೆಯ ಮಣ್ಣಿನ ವಸ್ತುಗಳಿಗೆ ಹೋಲಿಸಿದರೆ, ಪಿಂಗಾಣಿಯ ಕಾಠಿಣ್ಯ, ಬಲ, ಮತ್ತು ಅರೆಪಾರದರ್ಶಕತೆಯು ಮುಖ್ಯವಾಗಿ ಈ ಹೆಚ್ಚಿನ ಉಷ್ಣಾಂಶದಲ್ಲಿ ಕಾಚೀಕರಣ ಮತ್ತು ಕಾಯದೊಳಗೆ ಮಲೈಟ್ ಖನಿಜದ ರಚನೆಯಿಂದ ಉಂಟಾಗುತ್ತದೆ. ವ್ಯಾಖ್ಯಾನಗಳು ಬದಲಾಗುತ್ತಾವಾದರೂ, ಪಿಂಗಾಣಿಯನ್ನು ಮೂರು ಮುಖ್ಯ ವರ್ಗಗಳಾಗಿ ವಿಭಜಿಸಬಹುದು: ಗಟ್ಟಿ ಪೇಸ್ಟ್, ಮೃದು ಪೇಸ್ಟ್ ಮತ್ತು ಮೂಳೆ ಪಿಂಗಾಣಿ. ಒಂದು ವಸ್ತುವು ಯಾವ ವರ್ಗಕ್ಕೆ ಸೇರುತ್ತದೆ ಎಂಬುದು ಪಿಂಗಾಣಿ ವಸ್ತುವಿನ ಕಾಯವನ್ನು ತಯಾರಿಸಲು ಬಳಸಲಾದ ಪೇಸ್ಟ್‌ನ ರಚನಾಂಶಗಳು ಮತ್ತು ದಹನದ ಸನ್ನಿವೇಶಗಳನ್ನು ಅವಲಂಬಿಸಿರುತ್ತದೆ.

ಪಿಂಗಾಣಿಯು ಚೀನಾದಲ್ಲಿ ನಿಧಾನವಾಗಿ ವಿಕಸನವಾಯಿತು ಮತ್ತು ಅಂತಿಮವಾಗಿ ಸುಮಾರು ೨೦೦೦ ದಿಂದ ೧೨೦೦ ವರ್ಷಗಳ ಹಿಂದಿನ ಯಾವುದೋ ಬಿಂದುವಿನಲ್ಲಿ ಸಾಧಿಸಲ್ಪಟ್ಟಿತು, ನಂತರ ನಿಧಾನವಾಗಿ ಇತರ ಪೂರ್ವ ಏಷ್ಯಾದ ದೇಶಗಳು ಮತ್ತು ಅಂತಿಮವಾಗಿ ಯೂರೋಪ್ ಹಾಗೂ ಜಗತ್ತಿನ ಉಳಿದ ಭಾಗಗಳಿಗೆ ಹರಡಿತು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
"https://kn.wikipedia.org/w/index.php?title=ಪಿಂಗಾಣಿ&oldid=910660" ಇಂದ ಪಡೆಯಲ್ಪಟ್ಟಿದೆ