ಪರ್ಪ್ಯುರಾದ ಸೋಂಕುಗಳು
ಪರ್ಪ್ಯುರಾದ ಸೋಂಕುಗಳು | |
---|---|
Classification and external resources | |
ICD-10 | O85 |
ICD-9 | 672 |
eMedicine | ಲೇಖನ/796892 |
MeSH | D011645 |
'ಪರ್ಪ್ಯುರಾದ ಸೋಂಕುಗಳು, ಇದನ್ನು ಪ್ರಸವಾನಂತರದ ಸೋಂಕುಗಳು ಎಂದೂ ಕರೆಯಲಾಗುತ್ತದೆ, ಪರ್ಪ್ಯುರಾದ ಜ್ವರ 'ಅಥವಾ ಚೈಲ್ಡ್ ಬೆಡ್ ಜ್ವರ, ಶಿಶುಜನನ ಅಥವಾ ಗರ್ಭಪಾತದ ನಂತರ ಸ್ತ್ರೀ ಸಂತಾನೋತ್ವತ್ತಿ ನಾಳದ ಯಾವುದೇ ಬ್ಯಾಕ್ಟೀರಿಯಾದ ಸೋಂಕಾಗಿದೆ. ಚಿಹ್ನೆಗಳು ಮತ್ತು ರೋಗಲಕ್ಷಣಗಳು ಸಾಮಾನ್ಯವಾಗಿ ಇದಕ್ಕೂ ಹೆಚ್ಚಿನ ಜ್ವರ,ನಡುಕಗಳು, 38.0 °C (100.4 °F)ಕೆಳಹೊಟ್ಟೆಯ ನೋವು, ಮತ್ತು ಸಂಭಾವ್ಯವಾಗಿ ಕೆಟ್ಟ ವಾಸನೆಯ ಯೋನಿ ಸ್ರಾವವನ್ನು ಒಳಗೊಳ್ಳುವುದು.[೧] ಇದು ಪ್ರಸವದ ನಂತರ ಮೊದಲ 24 ಗಂಟೆಗಳಲ್ಲಿ ಹಾಗೂ ಪ್ರಸವದ ನಂತರ ಮೊದಲ ಹತ್ತು ದಿನಗಳಲ್ಲಿ ಸಂಭವಿಸುವುದು.[೨]
ಗರ್ಭಾಶಯದ ಅತ್ಯಂತ ಸಾಮಾನ್ಯವಾದ ಸೋಂಕು ಎಂದರೆ ಗರ್ಭಾಶಯ ಮತ್ತು ಹೊರ ಅಂಗಾಂಶಗಳ ಸೋಂಕಾಗಿದ್ದು ಇದನ್ನು ಪರ್ಪ್ಯುರಲ್ ಸೆಪ್ಸಿಸ್ ಅಥವಾ ಪ್ರಸವೋತ್ತರ ಮೆಟ್ರಿಟಿಸ್ ಎಂದು ಕರೆಯುತ್ತಾರೆ. ಆಪತ್ತಿನ ಅಂಶಗಳಲ್ಲಿ ಸಿಸೇರಿಯನ್ ಸೆಕ್ಷನ್, ಯೋನಿಯಲ್ಲಿ B ಗುಂಪಿನ ಸ್ಟ್ರೆಪ್ಟೊಕಾಕ್ಕಸ್ಸಿನಂಥ ನಿರ್ದಿಷ್ಟ ಬ್ಯಾಕ್ಟೀರಿಯದ ಉಪಸ್ಥಿತಿ, ಆವರಣಗಳ ಅವಧಿಪೂರ್ವ ಒಡೆಯುವಿಕೆ, ಹಾಗೂ ದೀರ್ಘಕಾಲಿಕ ಪ್ರಸವ ಇತರ ಕಾರಣಗಳಲ್ಲಿ ಸೇರಿವೆ. ಹೆಚ್ಚಿನ ಸೋಂಕುಗಳು ವಿಭಿನ್ನ ವಿಧಗಳ ಹಲವು ಬ್ಯಾಕ್ಟೀರಿಯಾಗಳನ್ನು ಒಳಗೊಂಡಿದ್ದವು. ವಿರಳವಾಗಿ ಯೋನಿ ಅಥವಾ ಕಲ್ಚರಿಂಗ್ನಿಂದ ರೋಗಪತ್ತೆಯು ಸಾಧ್ಯವಾಗುತ್ತದೆ. ಸುಧಾರಣೆಗೊಳ್ಳದಿರುವವರಲ್ಲಿ ವೈದ್ಯಕೀಯ ನಿರ್ವಹಣೆ ಅಗತ್ಯವಾಗಬಹುದು. ಶಿಶುಜನನದ ನಂತರ ಉಂಟಾಗಬಹುದಾದ ಜ್ವರಕ್ಕೆ ಕಾರಣಗಳಲ್ಲಿ ಇವು ಸೇರಬಹುದು: ಸ್ತನದ ಹಿರಿದಾಗುವಿಕೆ, ಮೂತ್ರನಾಳದ ಸೋಂಕುಗಳು, ಕೆಳಹೊಟ್ಟೆಯ ಕೊಯ್ತದಲ್ಲಿ ಸೋಂಕು ಅಥವಾ ಎಪಿಸಿಯೊಟಮಿ, ಮತ್ತು ಅಟೆಲೆಕ್ಟಾಸಿಸ್.[೧]
ಸಿ-ಸೆಕ್ಷನ್ ನಂತರ ಉಂಟಾಗುವ ಅಪಾಯಗಳಿಂದಾಗಿ ಎಲ್ಲ ಮಹಿಳೆಯರೂ ಆ್ಯಂಪಿಸಿಲಿನ್ ಎಂಬ ಜೀವಿನಿರೋಧಕದ ಪ್ರತಿಬಂಧಕ ಡೋಸ್ ಅನ್ನು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಪಡೆಯಬೇಕೆಂದು ಶಿಫಾರಸು ಮಾಡಲಾಗಿದೆ. ಸ್ಥಾಪಿತ ಸೋಂಕುಗಳಿಗೆ ಚಿಕಿತ್ಸೆಯನ್ನು ಜೀವಿನಿರೋಧಕಗಳೊಂದಿಗೆ ಕೈಗೊಳ್ಳಬಹುದಾಗಿದ್ದು ಹೆಚ್ಚಿನ ರೋಗಿಗಳು ಎರಡು ಅಥವಾ ಮೂರು ದಿನಗಳಲ್ಲಿ ಸುಧಾರಣೆ ಕಾಣಬಹುದು. ಲಘುವಾದ ರೋಗವನ್ನು ಹೊಂದಿರುವವರಲ್ಲಿ ಮೌಖಿಕ ಜೀವಿನಿರೋಧಕವನ್ನು ಬಳಕೆ ಮಾಡಬಹುದು ಇಲ್ಲವೇ ನಾಡಿಯೊಳಗಿನ ಜೀವಿನಿರೋಧಕಗಳನ್ನು ಶಿಫಾರಸು ಮಾಡಲಾಗುವುದು. ಒಳಗೊಳ್ಳುವ ಸಾಮಾನ್ಯ ಜೀವಿನಿರೋಧಕಗಳು ಎಂದರೆ ಯೋನಿಪ್ರಸವದ ಬಳಿಕ ಆ್ಯಂಪಿಸಿಲಿನ್ ಹಾಗೂ ಜೆಂಟಾಮೈಸಿನ್ ಅಥವಾ ಕ್ಲಿಂಡಾಮೈಸಿನ್ ಹಾಗೂ ಸಿ-ಸೆಕ್ಷನ್ ಮಾಡಿಸಿಕೊಂಡವರಲ್ಲಿ ಜೆಂಟಾಮೈಸಿನ್. ಸೂಕ್ತ ಚಿಕಿತ್ಸೆಯೊಂದಿಗೆ ಸುಧಾರಣೆ ಕಾಣದೇ ಇರುವವರಲ್ಲಿ ವ್ರಣಗಳಂಥ ಬೇರೆ ವಿಷಮತೆಗಳನ್ನು ಕೂಡ ಪರಿಗಣಿಸಬೇಕು.[೧]
ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಒಂದರಿಂದ ಎರಡು ಶೇಕಡಾ ಮಹಿಳೆಯರು ಯೋನಿ ಪ್ರಸವದ ನಂತರ ಗರ್ಭಾಶಯದ ಸೋಂಕಿಗೆ ಒಳಗಾಗುತ್ತಾರೆ. ಪ್ರತಿಬಂಧಕ ಜೀವಿನಿರೋಧಕಗಳನ್ನು ಬಳಸದಿರುವ, ಅತ್ಯಂತ ಕಷ್ಟಕರ ಪ್ರಸವಗಳನ್ನು ಹೊಂದಿರುವವರಲ್ಲಿ ಈ ಐದರಿಂದ ಹದಿಮೂರು ಶೇಕಡಾ ಹೆಚ್ಚಳಗಳು ಹಾಗೂ ಸಿ-ಸೆಕ್ಷನ್ ಹೊಂದಿರುವವರಲ್ಲಿ ಐವತ್ತು ಶೇಕಡಾ ಹೆಚ್ಚಳವು ಕಂಡುಬಂದಿದೆ.[೧] 2013 ರಲ್ಲಿ ಈ ಸೋಂಕುಗಳು 24,000 ಸಾವುಗಳಲ್ಲಿ ಪರಿಣಮಿಸಿದ್ದು 1990ರಲ್ಲಿ ಸಂಭವಿಸಿದ 34,000 ಸಾವುಗಳಿಗಿಂತ ಸಂಖ್ಯೆ ಕಡಿಮೆಯಿದೆ.[೩] ಕಾಯಿಲೆಯ ಐತಿಹಾಸಿಕ ವಿವರಣೆಗಳು ಕ್ರಿಸ್ತಪೂರ್ವ ಕನಿಷ್ಠ 5ನೇ ಶತಮಾನಕ್ಕಿಂತ ಹಳತಾಗಿದ್ದು ಹಿಪೊಕ್ರೆಟಸ್ನ ಬರಹಗಳಲ್ಲಿ ಕಂಡುಬಂದಿವೆ.[೪] ಈ ಸೋಂಕುಗಳು, ಕನಿಷ್ಠ 18 ನೇ ಶತಮಾನದಿಂದ ಆರಂಭಿಸಿ ಜೀವಿನಿರೋಧಕಗಳನ್ನು ಪರಿಚಯಿಸಲಾದ 1930ರ ವರೆಗೂ ಶಿಶುಜನನ ಸಮಯದಲ್ಲಿ ಸಾವಿನ ಸಾಮಾನ್ಯ ಕಾರಣವೆನಿಸಿವೆ.[೫] 1847 ರಲ್ಲಿ ಆಸ್ಟ್ರಿಯಾದಲ್ಲಿ, ಇಗ್ನಾಝ್ ಸೆಮ್ಮೆಲ್ವೈಸ್ ಕ್ಲೋರಿನ್ ಬಳಸಿ ಕೈತೊಳೆಯುವಿಕೆ ಬಳಕೆಯ ಮೂಲಕ ರೋಗದಿಂದ ಸಾವಿನ ಪ್ರಮಾಣವನ್ನು ಶೇಕಡಾ ಇಪ್ಪತ್ತರಿಂದ ಶೇಕಡಾ ಎರಡಕ್ಕೆ ಕಡಿಮೆ ಮಾಡಿದ.[೬][೭]
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ೧.೨ ೧.೩ "37". Williams obstetrics (24th ed.). McGraw-Hill Professional. 2014. pp. Chapter 37. ISBN 9780071798938.
- ↑ Hiralal Konar (2014). DC Dutta's Textbook of Obstetrics. JP Medical Ltd. p. 432. ISBN 9789351520672.
- ↑ GBD 2013 Mortality and Causes of Death, Collaborators (17 December 2014). "Global, regional, and national age-sex specific all-cause and cause-specific mortality for 240 causes of death, 1990-2013: a systematic analysis for the Global Burden of Disease Study 2013". Lancet. doi:10.1016/S0140-6736(14)61682-2. PMID 25530442.
{{cite journal}}
:|first1=
has generic name (help)CS1 maint: numeric names: authors list (link) - ↑ Walvekar, Vandana (2005). Manual of perinatal infections. New Delhi: Jaypee Bros. p. 153. ISBN 9788180614729.
- ↑ Magner, Lois N. (1992). A history of medicine. New York: Dekker. pp. 257–258. ISBN 9780824786731.
- ↑ Anderson, BL (April 2014). "Puerperal group A streptococcal infection: beyond Semmelweis". Obstetrics and gynecology. 123 (4): 874–82. PMID 24785617.
- ↑ Ataman, AD; Vatanoglu-Lutz, EE; Yildirim, G (2013). "Medicine in stamps-Ignaz Semmelweis and Puerperal Fever". Journal of the Turkish German Gynecological Association. 14 (1): 35–9. PMID 24592068.