ವಿಷಯಕ್ಕೆ ಹೋಗು

ಪರದೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಿಟಕಿಯ ಪರದೆ

ಪರದೆಯು ಬೆಳಕು, ಗಾಳಿ, ಅಥವಾ (ಶಾವರ್ ಪರದೆಯ ವಿಷಯದಲ್ಲಿ) ನೀರನ್ನು ತಡೆಯಲು ಅಥವಾ ಮಂಕುಗೊಳಿಸಲು ಉದ್ದೇಶಿತವಾದ ಬಟ್ಟೆಯ ತುಂಡು. ಪರದೆ ಎಂದರೆ ರಂಗಸ್ಥಳವನ್ನು ಸಭಾಂಗಣದಿಂದ ಪ್ರತ್ಯೇಕಿಸುವ ಅಥವಾ ಹಿಂದೆರೆಯಾಗಿ ಕಾರ್ಯನಿರ್ವಹಿಸುವ ನಾಟಕಶಾಲೆಯಲ್ಲಿನ ಸರಿಸಬಹುದಾದ ತೆರೆ ಅಥವಾ ಜವನಿಕೆ ಕೂಡ ಆಗಿದೆ.

ಪರದೆಗಳನ್ನು ಬೆಳಕು ಬರದಂತೆ/ಹೋಗದಂತೆ ನಿರ್ಬಂಧಿಸಲು ಹಲವುವೇಳೆ ಕಟ್ಟಡದ ಕಿಟಕಿಗಳ ಒಳಭಾಗದಲ್ಲಿ ತೂಗುಬಿಡಲಾಗುತ್ತದೆ, ಉದಾಹರಣೆಗೆ ರಾತ್ರಿಯಲ್ಲಿ ಮಲಗಲು ನೆರವಾಗಲು, ಬೆಳಕು ಕಟ್ಟಡದ ಹೊರಗೆ ಹೋಗದಂತೆ ತಡೆಯಲು (ಹೊರಗಿರುವ ಜನರು ಒಳಗೆ ನೋಡಲು ಸಾಧ್ಯವಾಗದಂತೆ ಮಾಡಲು, ಹಲವುವೇಳೆ ಗೋಪ್ಯತೆಯ ಕಾರಣಗಳಿಗಾಗಿ). ಈ ಅನ್ವಯದಲ್ಲಿ, ಅವನ್ನು "ಡ್ರೇಪರಿಗಳು" ಎಂದು ಕೂಡ ಕರೆಯಲಾಗುತ್ತದೆ. ಬಾಗಿಲುಗಳ ಮುಂದೆ ತೂಗಿಬಿಡಲಾದ ಪರದೆಗಳನ್ನು ಬಾಗಿಲು ಪರದೆಗಳು ಎಂದು ಕರೆಯಲಾಗುತ್ತದೆ. ಪರದೆಗಳು ಬಗೆಬಗೆಯ ಆಕಾರಗಳು, ವಸ್ತುಗಳು, ಗಾತ್ರಗಳು, ಬಣ್ಣಗಳು ಮತ್ತು ಮಾದರಿಗಳಲ್ಲಿ ಬರುತ್ತವೆ. ಸರಕಿನ ಮಳಿಗೆಗಳಲ್ಲಿ ಪರದೆಗಳಿಗಾಗಿ ಹಲವುವೇಳೆ ಅವುಗಳದೇ ಸ್ವಂತದ ವಿಭಾಗಗಳಿರುತ್ತವೆ, ಕೆಲವು ಅಂಗಡಿಗಳು ಸಂಪೂರ್ಣವಾಗಿ ಪರದೆಗಳನ್ನು ಮಾರುವುದಕ್ಕೆ ಸಮರ್ಪಿತವಾಗಿರುತ್ತವೆ.

ಪರದೆಗಳು ಸ್ವಚ್ಛಗೊಳಿಸಬಲ್ಲದ್ದಾಗುವಿಕೆ, ಅತಿನೇರಳೆ ಬೆಳಕಿನಲ್ಲಿ ಕೆಡುವಿಕೆ, ಎಣ್ಣೆ ಮತ್ತು ಧೂಳು ಧಾರಣಶಕ್ತಿ, ಶಬ್ದ ಹೀರಿಕೊಳ್ಳುವಿಕೆ, ಬೆಂಕಿ ಪ್ರತಿರೋಧ, ಮತ್ತು ಆಯಸ್ಸಿನ ಪ್ರಕಾರ ಬದಲಾಗುತ್ತವೆ. ಪರದೆಗಳನ್ನು ಕೈಯಿಂದ, ಹಗ್ಗಗಳಿಂದ, ಒತ್ತುಗುಂಡಿ ಒತ್ತಿಗೆಗಳಿಂದ ಅಥವಾ ದೂರನಿಯಂತ್ರಿತ ಗಣಕಯಂತ್ರಗಳಿಂದ ಸರಿಸಬಹುದು. ಅವುಗಳನ್ನು ಪರದೆ ಹಿಂಕಟ್ಟುಗಳನ್ನು ಬಳಸಿ ಕಿಟಕಿಯ ದಾರಿಯಿಂದ ದೂರ ಹಿಡಿದಿಡಲಾಗುತ್ತದೆ. ಪ್ರತಿ ಕಿಟಕಿಗೆ ಬೇಕಾದ ಪರದೆ ಗಾತ್ರವನ್ನು ಅಳೆಯುವುದು ಬೇಕಾದ ಪರದೆಯ ಬಗೆ, ಕಿಟಕಿಯ ಗಾತ್ರ, ಮತ್ತು ಪರದೆಯ ತೂಕದ ಪ್ರಕಾರ ಬಹಳವಾಗಿ ಬದಲಾಗುತ್ತದೆ.

ಪರದೆಗಳು ಕಿಟಕಿ ಅಲಂಕಾರದ ಒಂದು ರೂಪವಾಗಿವೆ, ಮತ್ತು ಮನೆಯ ಒಟ್ಟಾರೆ ನೊಟವನ್ನು ಪರಿಪೂರ್ಣವಾಗಿಸುತ್ತವೆ. ಕಿಟಕಿ ಅಲಂಕಾರವು ಒಳಗಿನ ಪರಿಸರ ಮತ್ತು ಕೋಣೆಯೊಳಗೆ ನೈಸರ್ಗಿಕ ಬೆಳಕಿನ ಹರಿವನ್ನು ನಿಯಂತ್ರಿಸಲು ನೆರವಾಗುತ್ತದೆ. ಪರದೆಗಳ ಪ್ರಭಾವವನ್ನು ಹಗಲಿನ ಬೆಳಕಿನಲ್ಲಿ ಅತ್ಯುತ್ತಮವಾಗಿ ಕಾಣಬಹುದು, ಮತ್ತು ಸರಿಯಾದ ಒಳಕೋಣೆಯ ಬೆಳಕಿನ ಸ್ಥಾನದಿಂದ, ರಾತ್ರಿ ಕೂಡ ಆಕರ್ಷಕವಾಗಿ ಕಾಣಬಹುದು.[]

ಉಲ್ಲೇಖಗಳು

[ಬದಲಾಯಿಸಿ]
  1. Brian D. Coleman (2006). Window Dressings: Beautiful Draperies & Curtains for the Home. ISBN 1-58685-816-5.
"https://kn.wikipedia.org/w/index.php?title=ಪರದೆ&oldid=886290" ಇಂದ ಪಡೆಯಲ್ಪಟ್ಟಿದೆ