ಪಟಸ್ತಂಭ
ಹಾಯಿ ಹಡಗಿನ ಪಟಸ್ತಂಭ ಎಂದರೆ ಒಂದು ಹಡಗು ಅಥವಾ ದೋಣಿಯ ಕೇಂದ್ರರೇಖೆಯ ಮೇಲೆ ಹೆಚ್ಚುಕಡಿಮೆ ಲಂಬವಾಗಿ ನೆಡಲಾದ ಎತ್ತರವಾದ ಕಂಬ ಅಥವಾ ಕಂಬಗಳ ವ್ಯವಸ್ಥೆಯಾಗಿರುತ್ತದೆ. ಹಾಯಿಗಳು, ಕಂಬಗಳು ಹಾಗೂ ಎತ್ತುಗಗಳನ್ನು ಹೊರುವುದು ಮತ್ತು ಜಲಸಂಚಾರ ದೀಪ, ನಿಗಾವಣೆ ಸ್ಥಾನ, ಸಂಜ್ಞಾ ಕಂಬ, ನಿಯಂತ್ರಣ ಸ್ಥಾನ, ರೇಡಿಯೊ ಗ್ರಾಹಕ ಅಥವಾ ಸಂಜ್ಞಾ ಕಂಬಕ್ಕೆ ಅಗತ್ಯವಾದ ಎತ್ತರವನ್ನು ನೀಡುವುದು ಇದರ ಉದ್ದೇಶಗಳಲ್ಲಿ ಸೇರಿವೆ. ದೊಡ್ಡ ಹಡಗುಗಳು ಹಲವಾರು ಪಟಸ್ತಂಭಗಳನ್ನು ಹೊಂದಿರುತ್ತವೆ, ಮತ್ತು ಇವುಗಳ ಆಕಾರ ಹಾಗೂ ಸಂರಚನೆಯು ಹಡಗಿನ ಶೈಲಿಯ ಮೇಲೆ ಅವಲಂಬಿಸಿರುತ್ತದೆ. ಬಹುತೇಕ ಎಲ್ಲ ಪಟಸ್ತಂಭಗಳು ಬಿಗಿದು ಕಟ್ಟಲ್ಪಟ್ಟಿರುತ್ತವೆ.
೧೯ನೇ ಶತಮಾನದ ಮಧ್ಯಭಾಗದವರೆಗೆ, ಎಲ್ಲ ನೌಕೆಗಳ ಪಟಸ್ತಂಭಗಳನ್ನು ಚೌಬೀನೆಯ ಒಂದು ಅಥವಾ ಹಲವು ತುಂಡುಗಳಿಂದ ರಚಿಸಿದ ಕಟ್ಟಿಗೆಯಿಂದ ತಯಾರಿಸಲಾಗಿತ್ತು. ಇವು ಸಾಮಾನ್ಯವಾಗಿ ಶಂಕುಮರದ ಕಾಂಡವನ್ನು ಹೊಂದಿರುತ್ತಿದ್ದವು. ೧೬ನೇ ಶತಮಾನದಿಂದ, ಒಂದೇ ಮರದ ಕಾಂಡದಿಂದ ತಯಾರಿಸಬಹುದಾದ್ದಕ್ಕಿಂತ ಹೆಚ್ಚು ಎತ್ತರವಾದ ಮತ್ತು ದಪ್ಪವಾದ ಪಟಸ್ತಂಭಗಳು ಬೇಕಿರುವಷ್ಟು ಗಾತ್ರದಲ್ಲಿ ನೌಕೆಗಳನ್ನು ನಿರ್ಮಿಸಲಾಗುತ್ತಿತ್ತು.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Rigging
- Boatdesign
- In-Arch.net: The Development of the Square-Rigged Ship from the Carrack to the Full-Rigger Archived 2012-01-17 ವೇಬ್ಯಾಕ್ ಮೆಷಿನ್ ನಲ್ಲಿ.