ದೂಲ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ದೂಲ (ಜಂತೆ) ಎಂದರೆ ಹಲವುವೇಳೆ ತೊಲೆಗಳ ನಡುವೆ, ತೆರೆದ ಪ್ರದೇಶಕ್ಕೆ ಸೇತುವೆ ಹಾಕಲು ಕಟ್ಟು ಹಾಕುವಿಕೆಯಲ್ಲಿ ಬಳಸಲಾಗುವ ಅಡ್ಡಡ್ಡಲಾದ ರಾಚನಿಕ ಭಾಗವಾಗಿದೆ.[೧] ಇದು ನಂತರ ಭಾರವನ್ನು ಲಂಬ ಘಟಕಗಳಿಗೆ ವರ್ಗಾಯಿಸುತ್ತದೆ. ನೆಲಗಟ್ಟು ಚೌಕಟ್ಟು ವ್ಯವಸ್ಥೆಯೊಳಗೆ ಒಳಗೊಂಡಾಗ, ದೂಲಗಳು ನೆಲಗಟ್ಟಿನ ಕೆಳಗಿನ ಹೊದಿಕೆಗೆ ಪೆಡಸುತನವನ್ನು ಒದಗಿಸುವ ಕಾರ್ಯನಿರ್ವಹಿಸುತ್ತವೆ. ಇದರಿಂದ ಇದು ಅಡ್ಡಡ್ಡಲಾದ ವಿಭಜಕ ಪೊರೆಯಾಗಿ ಕಾರ್ಯನಿರ್ವಹಿಸಲು ಅವಕಾಶವಾಗುತ್ತದೆ. ಪರಿಸ್ಥಿತಿಗಳು ಅಪೇಕ್ಷಿಸಿದಾಗ, ದೂಲಗಳನ್ನು ಹಲವುವೇಳೆ ಇಮ್ಮಡಿ ಅಥವಾ ಮುಮ್ಮಡಿಗೊಳಿಸಲಾಗುತ್ತದೆ, ಮತ್ತು ಪಕ್ಕಪಕ್ಕದಲ್ಲಿ ಇರಿಸಲಾಗುತ್ತದೆ, ಉದಾಹರಣೆಗೆ ಗೋಡೆ ವಿಭಜನೆಗಳಿಗೆ ಆಧಾರ ಬೇಕಾದ ಕಡೆ.
ದೂಲಗಳನ್ನು ಕಟ್ಟಿಗೆ, ಸಂಘಟಿತ ಕಟ್ಟಿಗೆ, ಅಥವಾ ಉಕ್ಕಿನಿಂದ ತಯಾರಿಸಲಾಗುತ್ತದೆ. ಇವುಗಳಲ್ಲಿ ಪ್ರತಿಯೊಂದು ಅನನ್ಯ ಗುಣಲಕ್ಷಣಗಳನ್ನು ಹೊಂದಿರುತ್ತವೆ. ಸಾಮಾನ್ಯವಾಗಿ, ಕಟ್ಟಿಗೆಯ ದೂಲಗಳು ಹಲಗೆಯ ಸೀಳುನೋಟವನ್ನು ಹೊಂದಿರುತ್ತವೆ ಮತ್ತು ಉದ್ದನೆಯ ಮೇಲ್ಮೈಗಳನ್ನು ಲಂಬವಾಗಿ ಇಡಲಾಗಿರುತ್ತದೆ. ಆದರೆ, ಸಂಘಟಿತ ಕಟ್ಟಿಗೆಯ ದೂಲಗಳು ರೋಮನ್ ದೊಡ್ಡಕ್ಷರ "I" ಗೆ ಹೋಲುವ ಸೀಳುನೋಟವನ್ನು ಹೊಂದಿರಬಹುದು.