ವಿಷಯಕ್ಕೆ ಹೋಗು

ಠರಾವು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾನೂನಿನಲ್ಲಿ, ಠರಾವು ಎಂದರೆ ಒಂದು ಪರ್ಯಾಲೋಚಕ ನಿಕಾಯವು ಅಂಗೀಕರಿಸುವ ಲಿಖಿತ ಗೊತ್ತುವಳಿ. ಸಾಮಾನ್ಯವಾಗಿ ಸೂಚನೆಯಾಗಿ ಪ್ರಸ್ತಾಪಿಸಬಹುದಾದ ಏನಾದರೂ ಠರಾವಿನ ವಸ್ತುವಾಗಿರಬಹುದು. ಆದರೆ, ದೀರ್ಘ ಅಥವಾ ಮುಖ್ಯ ಸೂಚನೆಗಳಿಗಾಗಿ, ಹಲವುವೇಳೆ ಅವುಗಳನ್ನು ಬರೆಯುವುದು ಉತ್ತಮವಾಗಿರುತ್ತದೆ. ಇದರಿಂದ ಅದರ ಮೇಲಿನ ಚರ್ಚೆ ಹೆಚ್ಚು ಸುಲಭವಾಗುತ್ತದೆ ಅಥವಾ ಅದರ ಅಂಗೀಕಾರದ ನಂತರ ನಿಕಾಯದ ಹೊರಗೆ ಅದನ್ನು ವಿತರಣೆ ಮಾಡಬಹುದು.

ನಿಗಮಗಳಲ್ಲಿ

[ಬದಲಾಯಿಸಿ]

ನಿಗಮಗಳಲ್ಲಿ, ಲಿಖಿತ ಠರಾವು ನಿಗಮದ ನಿರ್ದೇಶಕರ ಮಂಡಳಿಯ ವಿಷಯದಲ್ಲಿ ವಿಶೇಷವಾಗಿ ಉಪಯುಕ್ತವಾಗಿರುತ್ತದೆ, ಏಕೆಂದರೆ ಈ ಮಂಡಳಿಯು ಸಾಮಾನ್ಯವಾಗಿ ನಿಗಮದ ಸ್ಥಿರಾಸ್ತಿ ಖರೀದಿಗಳು ಅಥವಾ ಮಾರಾಟಗಳಿಗೆ ಒಪ್ಪಿಗೆ ನೀಡಬೇಕಾಗಿರುತ್ತದೆ. ಅಂತಹ ಠರಾವನ್ನು ನಿಗಮದ ಕಾರ್ಯದರ್ಶಿಯು ದೃಢೀಕರಿಸಿದಾಗ, ಆ ಮಾರಾಟವನ್ನು ಸರಿಯಾಗಿ ಪ್ರಮಾಣೀಕರಿಸಲಾಗಿದೆ ಎಂದು ವಹಿವಾಟಿನ ಇತರ ಪಕ್ಷಕ್ಕೆ ಭರವಸೆ ಸಿಕ್ಕಿದಂತಾಗುತ್ತದೆ.

ಠರಾವುಗಳ ಐತಿಹಾಸಿಕ ಉದಾಹರಣೆಗಳು

[ಬದಲಾಯಿಸಿ]
  • Gulf of Tonkin Resolution
  • Kentucky and Virginia Resolutions
  • United Nations General Assembly resolutions
  • United Nations Security Council resolutions
  • War Powers Resolution
"https://kn.wikipedia.org/w/index.php?title=ಠರಾವು&oldid=914524" ಇಂದ ಪಡೆಯಲ್ಪಟ್ಟಿದೆ