ಚತುಷ್ಪಾದಿಗಳು
ವರ್ಟಿಬ್ರೇಟ ಉಪವಿಭಾಗದ ಅಧಿವರ್ಗಗಳಲ್ಲೊಂದಾದ ಟೆಟ್ರಾಪೊಡ್‍ಕ್ಕೆ ಸೇರಿದ ಕಶೇರುಕಗಳನ್ನು ಚತುಷ್ಪಾದಿಗಳು ಎನ್ನುತ್ತಾರೆ. ಅವಯವಯಗಳನ್ನು (ಕೈಕಾಲು) ಪಡೆದಿರುವುದು ಇವುಗಳ ವಿಶಿಷ್ಟ ಲಕ್ಷಣವಾಗಿದೆ. ಈ ಲಕ್ಷಣದಲ್ಲಿ ಇವು ಇನ್ನೊಂದು ಅಧಿವರ್ಗವಾದ ಪಿಸೀಸ್‍ನಿಂದ (ಮೀನುಗಳ ಗುಂಪು) ಭಿನ್ನವೆನಿಸಿವೆ. ಮೀನುಗಳಿಗೆ ಕೈಕಾಲುಗಳ ಬದಲಾಗಿ ಈಜುರೆಕ್ಕೆಗಳಿವೆ. ಅಲ್ಲದೆ ಮೀನುಗಳು ಸಂಪೂರ್ಣವಾಗಿ ಜಲವಾಸಿಗಳಾಗಿದ್ದರೆ ಟೆಟ್ರಾಪೊಡ್ ಗುಂಪಿಗೆ ಸೇರಿದ ಪ್ರಾಣಿಗಳು ತಮ್ಮ ಜೀವನವನ್ನು ಸಂಪೂರ್ಣವಾಗಿ ಇಲ್ಲವೆ ಭಾಗಶಃ ಭೂಮಿಯ ಮೇಲೆ ಕಳೆಯುತ್ತವೆ.
ಇವು ಕಶೇರಕುಗಳು ಮತ್ತು ಅವುಗಳ ಪೂರ್ವಜರನ್ನು ಒಳಗೊಂಡಿವೆ ಅಂದರೆ ಇವು ಜೀವಿಸುತ್ತಿರುವ ಮತ್ತು ನಶಿಸಿರುವ ಉಭಯವಾಸಿಗಳನ್ನು ಒಳಗೊಂಡಿದೆ. ಈ ಸಾಲಿನಲ್ಲಿ ಸರಿಸೃಪಗಳು, ಸಸ್ತನಿಗಳು, ಪಕ್ಷಿಗಳು ಮತ್ತು ನಶಿಸಿರುವ ಮೀನುಗಳು ಸೇರಿವೆ.
ವಿಧಗಳು ಹಾಗೂ ಉಪವಿಭಾಗಗಳು
[ಬದಲಾಯಿಸಿ]ಟೆಟ್ರಾಪೊಡ್ ಅಧಿವರ್ಗದಲ್ಲಿ ಉಭಯವಾಸಿ ಆಂಫಿಬಿಯ (ಕಪ್ಪೆ, ಸ್ಯಾಲಮ್ಯಾಂಡರುಗಳು), ರೆಪ್ಟೀಲಿಯ ಸರೀಸೃಪ (ಹಲ್ಲಿ, ಮೊಸಳೆ, ಹಾವು, ಆಮೆ ಇತ್ಯಾದಿ), ಪಕ್ಷಿಗಳು/ಹಕ್ಕಿಗಳು ಏವೀಸ್ (ಹಕ್ಕಿಗಳು) ಮತ್ತು ಮ್ಯಾಮೇಲಿಯ (ಸ್ತನಿಗಳು) ಎಂಬ ನಾಲ್ಕು ವರ್ಗಗಳನ್ನು ಸೇರಿಸಲಾಗಿದೆ. ನಾಲ್ಕು ಕೈಕಾಲುಗಳಿರುವುದೇ ಸಾಮಾನ್ಯವಾದರೂ (ಈ ಪದ ಗ್ರೀಕಿನಿಂದ ಬಂದುದಾಗಿದ್ದು ನಾಲ್ಕು ಪಾದಗಳು ಎಂಬ ಅರ್ಥ ಕೊಡುತ್ತದೆ) ಕೆಲವು ಪ್ರಾಣಿಗಳಲ್ಲಿ ಕೇವಲ ಎರಡೇ ಕಾಲುಗಳಿರಬಹುದು. ಕೆಲವು ಪ್ರಾಣಿಗಳಿಗೆ ಕೈಕಾಲುಗಳೇ ಇರದಿರಬಹುದು (ಹಾವುಗಳು). ಆದರೆ ಇಂಥ ಪ್ರಾಣಿಗಳು ಸಹ ನಾಲ್ಕು ಕಾಲುಗಳುಳ್ಳ ಪೂರ್ವಜಪ್ರಾಣಿಗಳಿಂದ ವಿಕಾಸವಾಗಿವೆ. ಅಲ್ಲದೆ ಕೆಲವು ಪ್ರಾಣಿಗಳಲ್ಲಿ ಕೈಕಾಲುಗಳು ಬೇರೆ ರೀತಿಯ ಅಂಗಗಳಾಗಿ ಮಾರ್ಪಾಡಾಗಿರುವುದಂಟು. ಉದಾಹರಣೆಗೆ, ಹಕ್ಕಿಗಳಲ್ಲಿ ಮುಂದಿನ ಎರಡು ಕಾಲುಗಳು ರೆಕ್ಕೆಗಳಾಗಿ ಮಾರ್ಪಾಡಾಗಿವೆ. ಹಾಗೆಯೇ ತಿಮಿಂಗಿಲಗಳಲ್ಲಿ ಮುಂದಿನ ಕಾಲುಗಳು ಈಜುರೆಕ್ಕೆಗಳಾಗಿ ಬದಲಾಗಿವೆ. ಇದರಿಂದಾಗಿ ವರ್ಟಿಬ್ರೇಟ್ ಉಪ ವಿಭಾಗವನ್ನು ಟೆಟ್ರಾಪೋಡ್ ಮತ್ತು ಪಿಸೀಸ್ ಅನುಕೂಲಕ್ಕಾಗಿಯೇ ಈ ರೀತಿಯಲ್ಲಿ ವಿಂಗಡಣೆ ಮಾಡಿದ್ದಾರೆ.[೧]
ಚತುಷ್ಪಾದಿಗಳಗಳ ಚಿತ್ರ ಸಹಿತ ವಿಂಗಡಣೆ
[ಬದಲಾಯಿಸಿ]w:Rhipidistia |
| ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
ಉಲ್ಲೇಖ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]